ವಿಷಯಕ್ಕೆ ಹೋಗು

ಜೇನುಸಾಕಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೇನುಸಾಕಣೆ, tacuinum sanitatis casanatensis (14ನೆಯ ಶತಮಾನ)
ಸ್ಪೇನ್‌ನ[] ವಲೆನ್ಷಿಯಾದ ಹತ್ತಿರ ಇರುವ ೮೦೦೦ ವರ್ಷ ಹಳೆಯ ಗುಹೆ ವರ್ಣಚಿತ್ರ.

ಸ್ಥೂಲವಾಗಿ ಜೇನು ಸಾಕಣೆ ಅಥವಾ ಜೇನುಕೃಷಿ ಎಂದರೆ ಮಾನವನಿರ್ಮಿತ ಜೇನುಗೂಡುಗಳಲ್ಲಿ, ಜೇನುನೊಣಗಳ ಸಮೂಹಗಳನ್ನು ಅಥವ ಜೇನುಹುಳಗಳ ಕುಟುಂಬಗಳನ್ನು ಪೋಷಣೆ ಮಾಡುವುದಾಗಿದೆ. ಇದರ ಜೊತೆಗೆ ಜೇನುನೊಣಗಳು ಉತ್ಪಾದಿಸಿದ ಜೇನುತುಪ್ಪವನ್ನು ಮತ್ತು ಜೇನು ಮೇಣವನ್ನು ಸಂಗ್ರಹಿಸಿ ಮಾರಾಟ ಮಾಡುವುದು, ಜೇನುಗೂಡುಗಳಲ್ಲಿ ಹೊಸದಾಗಿ ಹುಟ್ಟಿದ ಕುಟುಂಬವನ್ನು ಬೇರೆ ಮನೆ(ಪೆಟ್ಟಿಗೆ)ಗೆ ವರ್ಗಾಯಿಸುವುದು, ಆಸಕ್ತಿ ಇರುವ ಇತರರಿಗೆ ಹೊಸ ಜೇನುಕುಟುಂಬಗಳನ್ನು ಮಾರಾಟ ಮಾಡುವುದೂ ಸಹ ಜೇನು ಕೃಷಿಯ ವ್ಯಾಪ್ತಿಯಲ್ಲಿ ಬರುತ್ತದೆ.

ಜೇನುಸಾಕಣೆಯ ಇತಿಹಾಸ

[ಬದಲಾಯಿಸಿ]

ಮೂಲಗಳು

[ಬದಲಾಯಿಸಿ]

20,000ಕ್ಕಿಂತಲೂ ಅಧಿಕ ಕಾಡು ಜೇನುನೊಣಗಳ ತಳಿಗಳಿವೆ []. ಬಹುತೇಕ ತಳಿಗಳು ಏಕಾಂಗಿಗಳು[], ಮತ್ತು ಅನೇಕ ಇತರ ಜೇನುನೊಣಗಳು ತಮ್ಮ ಕಿರಿಯ ಜೇನುನೊಣಗಳನ್ನು ಬಿಲಗಳಲ್ಲಿ ಮತ್ತು ಸಮೂಹಗಳಲ್ಲಿ ಪೋಷಿಸುತ್ತವೆ, ಉ.ದಾ. ಮಾಸೊನ್ ಜೇನುನೊಣಗಳು ಮತ್ತು ಬಂಬಲ್ ಜೇನುನೊಣಗಳು. ಜೇನುಸಾಕಣೆ, ಅಥವಾ ಜೇನುಕೃಷಿಯು, 100,000 ವರೆಗು ಪ್ರತ್ಯೇಕವು ದೊಡ್ಡ ಸಮೂಹಗಳಲ್ಲಿ ಜೀವಿಸುವ, ಸಾಮಾಜಿಕ ತಳಿಗಳ ಸಕ್ರಿಯ ಫೋಷಣೆಯೊಂದಿಗೆ ಸಂಬಂಧಪಟ್ಟಿರುತ್ತದೆ. ಯುರೋಪ್ ಮತ್ತು ಅಮೆರಿಕದಲ್ಲಿ ಸಾರ್ವತ್ರಿಕವಾಗಿ ಜೇನುಕೃಷಿಕರಿಂದ ಪೋಷಿಸುವ ತಳಿ ಎಂದರೆ ಪಾಶ್ಚಾತ್ಯ ಜೇನುನೊಣ (ಅಪಿಸ್ ಮೆಲ್ಲಿಫೆರಾ ). ಈ ತಳಿಯು ಅನೇಕ ಉಪ-ತಳಿಗಳನ್ನು ಅಥವಾ ಮೂಲ ವಿವಿಧತೆಗಳನ್ನು ಹೊಂದಿದೆ, ಅವುಗಳೆಂದರೆ ಇಟಾಲಿಯ ಜೇನುನೊಣ (ಅಪಿಸ್ ಮೆಲ್ಲಿಫೆರಾ ಲಿಂಗುಸ್ಟಿಕ ), ಯುರೋಪಿನ ಡಾರ್ಕ್ ಜೇನುನೊಣ (ಅಪಿಸ್ ಮೆಲ್ಲಿಫೆರಾ ಮೆಲ್ಲಿಫೆರಾ ), ಮತ್ತು ಕಾರ್ನಿಯೊಲನ್ ಜೇನುನೊಣ (ಅಪಿಸ್ ಮೆಲ್ಲಿಫೆರಾ ಕಾರ್ನಿಕ ). ಟ್ರೊಪಿಕ್ಸ್ (ಉಷ್ಣ ಕಟಿಪ್ರದೇಶ)ಗಳಲ್ಲಿ, ಜೇನುತುಪ್ಪದ ಉತ್ಪಾದನೆಗಾಗಿ ಅಪಿಸ್ ಕೆರನ ಗಳನ್ನು ಒಳಗೊಂಡು, ಸಾಮಾಜಿಕ ಜೇನುನೊಣಗಳ ಇತರ ತಳಿಗಳನ್ನು ಸಾಕಲಾಗುತ್ತದೆ.

ಅಪಿಸ್ ಮೆಲ್ಲಿಫೆರಾ ದ ಎಲ್ಲಾ ಉಪ-ತಳಿಗಳು ಒಳ-ಸಂಗೋಪನೆಗೆ ಮತ್ತು ಸಂಕರವನ್ನುಂಟು ಮಾಡುವಿಕೆಗೆ ಸಮರ್ಥ್ಯವಾಗಿರುತ್ತವೆ. ಬಹುತೇಕ ಜೇನುನೊಣಗಳ ಸಂಗೋಪನೆಯ ಸಂಸ್ಥೆಗಳು ಅಪೇಕ್ಷಣೀಯ ಗುಣಮಟ್ಟಗಳನ್ನು ಉತ್ಪಾದಿಸಲು ವೈವಿದ್ಯತೆಗಳನ್ನು ಉತ್ಕೃಷ್ಟವಾಗಿ ಸಂಗೋಪನೆ ಮಾಡುವ ಮತ್ತು ಸಂಕರವನ್ನುಂಟು ಮಾಡುವ ಪ್ರಯತ್ನಗಳನ್ನು ನಡೆಸುತ್ತಿವೆ: ರೋಗ ಮತ್ತು ಪರೋಪಜೀವಿ ನಿರೋಧಶಕ್ತಿ, ಉತ್ತಮ ಗುಣಮಟ್ಟದ ಜೇನುತುಪ್ಪ ಉತ್ಪಾದನೆ, ಗುಂಪು ನಡವಳಿಕೆ ಕಡಿಮೆ ಯಾಗುವಿಕೆ, ಬಹುಫಲಪ್ರದ ಸಂಗೋಪನೆ, ಮತ್ತು ಸೌಮ್ಯ ಸ್ವಭಾವ. ಈ ರೀತಿಯ ಸಂಕರದ ಕೆಲವನ್ನು, ಬಕ್‌ಪಾಸ್ಟ್ ಬೀ ಅಥವಾ ಮಿಡ್‌ನೈಟ್ ಬೀಗಳಂತಹ ವ್ಯಾಪಾರ ಗುರುತಿನ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ರೀತಿಯ ತಳಿಗಳ ಬೆರಕೆಗಳಿಂದ ಉತ್ಪತ್ತಿ ಮಾಡಿದ ಆರಂಭದ F1 ಸಂಕರಗಳ ಪ್ರಯೋಜನಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ: ಸಂಕರ ಶಕ್ತಿ, ಹೆಚ್ಚಿದ ಜೇನು ತುಪ್ಪ ಉತ್ಪಾದನೆ, ಮತ್ತು ಮಹತ್ತರವಾದ ರೋಗ ನಿರೋಧಕ ಶಕ್ತಿ. ಇದರ ಅನಾನುಕೂಲತೆಗಳೆಂದರೆ, ನಂತರದ ಪೀಳಿಗೆಗಳಲ್ಲಿ ಈ ಪ್ರಯೋಜನಗಳು ಕ್ರಮೇಣ ಮಾಯವಾಗಬಹುದು ಮತ್ತು ಸಂಕರಗಳು ಅತ್ಯಂತ ರಕ್ಷಣಾರ್ಥಕವಾಗಿ ಮತ್ತು ಆಕ್ರಮಣಶೀಲವಾಗಿ ಹವಣಿಸುವಂತವು.

ಕಾಡಿನ ಜೇನುತುಪ್ಪ ಸಂಗ್ರಹಣೆ ಮಾಡುವಿಕೆ

[ಬದಲಾಯಿಸಿ]

ಕಾಡು ಜೇನುನೊಣಗಳ ಸಮೂಹದಿಂದ ಜೇನುತುಪ್ಪವನ್ನು ಸಂಗ್ರಹಿಸುವುದು ಅತ್ಯಂತ ಪುರಾತನ ಮಾನವರ ಚಟುವಟಿಕೆಗಳಲ್ಲಿ ಒಂದಾಗಿದೆ ಮತ್ತು ಇದನ್ನು ಈಗಲೂ ಆಫ್ರಿಕಾ, ಏಷಿಯ, ಆಸ್ಟ್ರೇಲಿಯ, ಮತ್ತು ದಕ್ಷಿಣ ಅಮೆರಿಕಾದ ಭಾಗಗಳಲ್ಲಿ ಆದಿವಾಸಿ ಸಮುದಾಯಗಳಿಂದ ಅನುಸರಿಸಲಾಗುತ್ತಿದೆ. ಕಾಡಿನ ವಸಾಹತುಗಳಿಂದ ಜೇನುತುಪ್ಪವನ್ನು ಸಂಗ್ರಹಿಸುವಿಕೆಯ ಮೊದಲ ಪುರಾವೆಗಳೆಂದರೆ ಸುಮಾರು 13,000 BCE ಕಾಲದ ಕಲ್ಲಿನಲ್ಲಿ ಬಿಡಿಸಿದ ಚಿತ್ರಗಳು. ಕಾಡಿನ ವಸಾಹತುಗಳಿಂದ ಜೇನುತುಪ್ಪದ ಸಂಗ್ರಹಣೆಯನ್ನು ಸಾಮಾನ್ಯವಾಗಿ ಹೊಗೆಯಿಂದ ಜೇನುನೊಣಗಳನ್ನು ನಿಗ್ರಹಿಸುವುದರಿಂದ ಮತ್ತು ಜೇನುಗೂಡಿನ ಸ್ಥಳವಾದ ಮರ ಅಥವಾ ಕಲ್ಲನ್ನು ಮುರಿದು ಬಯಲುಗೊಳಿಸುವಿಕೆಯಿಂದ ಮಾಡಲಾಗುತ್ತದೆ, ಆಗಾಗ್ಗೆ ಇದು ಜೇನುಗೂಡಿನ ಸ್ಥಳದ ಭೌತಿಕ ಧ್ವಂಶಕ್ಕೆ ಕಾರಣವಾಗುತ್ತದೆ.

ಕಾಡು ಜೇನುನೊಣಗಳನ್ನು ಪಳಗಿಸುವಿಕೆ

[ಬದಲಾಯಿಸಿ]

ಸ್ವಲ್ಪ ಕಾಲದ ನಂತರ ಮಾನವರು ಪೊಳ್ಳಾದ ಮರದ ದಿಮ್ಮಿಗಳಿಂದ, ಮರದ ಪೆಟ್ಟಿಗೆಗಳಿಂದ, ಮಡಿಕೆ ಪಾತ್ರೆಗಳಿಂದ, ಮತ್ತು ನೇಯ್ದ ಒಣಹುಲ್ಲಿನ ಬುಟ್ಟಿಗಳಿಂದ ಅಥವಾ "ದುಂಡಗಿನ ಮರದ ಬುಟ್ಟಿಗಳಿಂದ" ಮಾಡಿದ ಕೃತಕ ಗೂಡುಗಳಲ್ಲಿ ಕಾಡು ಜೇನುನೊಣಗಳನ್ನು ಪಳಗಿಸಲು ಪ್ರಾರಂಭಿಸಿದರು. ಈಜಿಪ್ಟ್‌ನಲ್ಲಿ ಜೇನುನೊಣಗಳನ್ನು ಪೂರ್ವಕಾಲದಿಂದಲೂ ಇಡಲಾಗಿತ್ತು.[] 2422 ಬಿಸಿಇ ಮೊದಲು, 5ನೆಯ ರಾಜವಂಶದ ಕಾಲದಿಂದ, ನ್ಯುಸೆರೆ ಇನಿಯ ಸೂರ್ಯ ದೇವಸ್ಥಾನದ ಗೋಡೆಗಳ ಮೇಲೆ ಕೆಲಸಗಾರರು ಜೇನುಗೂಡುಗಳೊಳಗೆ ಹೊಗೆಯಾಡಿಸಿ, ಜೇನುಗೂಡುಗಳನ್ನು ಕೀಳುತ್ತಿರುವುದನ್ನು ಚಿತ್ರಿಸಲಾಗಿದೆ .[] ಜೇನುತುಪ್ಪದ ಉತ್ಪಾದನೆಯ ವಿವರಣೆಯ ಸ್ಮಾರಕಲೇಖನಗಳನ್ನು 26ನೆಯ ರಾಜವಂಶದ (ಸಿರ್ಕ 650 ಬಿಸಿಇ) ಪಬಾಸರವರ ಗೋರಿಯ ಮೇಲೆ ಕಾಣಬಹುದಾಗಿದೆ, ಇಲ್ಲಿ ಜೇನು ತುಪ್ಪವನ್ನು ಜಾಡಿಗಳಲ್ಲಿ ಮತ್ತು ಸಿಲಿಂಡರ್ ಆಕಾರದ ಕೊಳವೆಗಳಲ್ಲಿ ತುಂಬಿಸುವುದನ್ನು ವರ್ಣಿಸಲಾಗಿದೆ.[] ಜೇನುತುಪ್ಪದ ಮುಚ್ಚಿ ಭದ್ರಪಡಿಸಿದ ಮಡಿಕೆಗಳು ತುತಂಕಾಮುನ್‌ನಂತಹ ಫರೋಗಳ ಗೋರಿಯ ಸರಕುಗಳಲ್ಲಿ ಪತ್ತೆಯಾದವು.

ಇತಿಹಾಸ ಪೂರ್ವದ ಗ್ರೀಸ್‌ನಲ್ಲಿ (ಕ್ರೆಟ್ ಮತ್ತು ಮೈಸೆನಯ್‌), ಉತ್ತಮ ದರ್ಜೆಯ ಜೇನುಕೃಷಿಯು ಇತ್ತೆಂದು, ನೋಸ್ಸೋಸ್‌ನಲ್ಲಿ ಪತ್ತೆಯಾದ ಜೇನುಗೂಡುಗಳು, ಹೊಗೆಯಾಡಿಸುವ ಮಡಿಕೆಗಳು, ಜೇನುತುಪ್ಪವನ್ನು ಹಿಂಡಿ ತೆಗೆಯುವ ಸಾಧನಗಳು ಮತ್ತು ಇತರ ಜೇನುಸಾಕಣೆಯ ಉಪಕರಣ ಸಾಮಗ್ರಿಗಳಿಂದ ತೀರ್ಮಾನಿಸಬಹುದಾಗಿದೆ. ಜೇನುಸಾಕಣೆಯನ್ನು, ಜೇನುಸಾಕಣೆಯ ಮೇಲ್ವಿಚಾರಕರಿಂದ ನಿಯಂತ್ರಿಸುವ ಉತ್ತಮ ದರ್ಜೆಯ ಉದ್ದಿಮೆ ಎಂದು ಪರಿಗಣಿಸಲಾಗಿದೆ - ಇತ್ತೀಚೆಗೆ ಕಾಂಟ್ರ ಸರ್ ಆರ್ಥರ್ ಎವನ್ಸ್ ಎಂದು, ಮರು ವ್ಯಾಖ್ಯಾನಕ್ಕೊಳಗಾದವರು ಧರ್ಮಶ್ರದ್ಧೆಯುಳ್ಳವರಾಗಿ ತಮ್ಮ ಚಿನ್ನದ ಉಂಗರಗಳಲ್ಲಿ ಜೇನುಕೃಷಿಯ ಸನ್ನಿವೇಶಗಳ ವರ್ಣನೆಯನ್ನು ಹೊಂದುತ್ತಿದ್ದರು.[]

ಪುರಾತನವಸ್ತುಶಾಸ್ತ್ರವು, ಜೇನುಸಾಕಣಿಕೆಯನ್ನು ರೆಹೋವ್‌ನಲ್ಲಿ, ಇಸ್ರಾಯೇಲ್‌ನ, ಜೊರ್ದನ್ ವಾಲೆಯಲ್ಲಿನ ಕಂಚು ಮತ್ತು ಕಬ್ಬಿಣ ಕಾಲದ ಪುರಾತನವಸ್ತುಶಾಸ್ತ್ರದ ಸ್ಥಳದಲ್ಲಿ ಶೋಧಿಸಲಾಗಿದೆ ಎಂಬುದನ್ನು ಪತ್ತೆಹಚ್ಚುತ್ತದೆ.[] ಒಣಹುಲ್ಲು ಮತ್ತು ಸುಡದ ಜೇಡಿಮಣ್ಣಿನಿಂದ ಮಾಡಿದ ಧಕ್ಕೆಯಾಗದ ಮೂವತ್ತು ಜೇನುಗೂಡುಗಳನ್ನು, ಸುಮಾರು 900 BCE ಕಾಲದ, ನಗರದ ಅವನತಿಯ ಸಮಯದಲ್ಲಿ ಜೆರುಸಲೆಮ್‌ನ ಹಬ್‌ರೆವ್ ವಿಶ್ವವಿದ್ಯಾಲಯದ ಪುರಾತನವಸ್ತುಶಾಸ್ತ್ರಜ್ಞರಾದ ಅಮಿಹೈ ಮಜಾರ್‌ರವರಿಂದ ಪತ್ತೆಹಚ್ಚಲಾಯಿತು. ಮಜಾರ್‌ರ ಪ್ರಕಾರ, ಜೇನುಗೂಡುಗಳು ಕ್ರಮಬದ್ದವಾದ ಮೂರು ಸಾಲಿನ ಎತ್ತರದಲ್ಲಿ, 1 ಮಿಲಿಯನ್ ಜೇನುನೊಣಗಳಿಗಿಂತಲೂ ಹೆಚ್ಚಿನವನ್ನು ಒಳಗೊಳ್ಳುವ ಸಾಮರ್ಥ್ಯದ, 100 ಜೇನುಗೂಡುಗಳನ್ನು ಇರಿಸುವ ಕ್ರಮದಲ್ಲಿ ಪತ್ತೆಯಾಗಿವೆ ಮತ್ತು ಇವು ವಾರ್ಷಿಕ 500 ಕಿಲೋಗ್ರಾಮುಗಳ ಜೇನುತುಪ್ಪವನ್ನು ಮತ್ತು 70 ಕಿಲೋಗ್ರಾಮುಗಳ ಜೇನುನೊಣಗಳ ಮೇಣವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಮತ್ತು ಇವು 3,000 ವರ್ಷಗಳಿಗಿಂತಲೂ ಮುಂಚೆ ಪುರಾತನ ಇಸ್ರಾಯೇಲ್‌ನಲ್ಲಿ ಸುಧಾರಿತ ಜೇನುತುಪ್ಪದ ಕೈಗಾರಿಕೆ ಇತ್ತೆಂಬುದಕ್ಕೆ ಪುರಾವೆಗಳಾಗಿವೆ.[] ಹೈಫ ವಿಶ್ವವಿದ್ಯಾಲಯದ ಇಜ್ರಾ ಮರ್ಕಸ್, ಎಂಬ ಒಬ್ಬ ತಜ್ಞರು, ನಿಯರ್ ಈಸ್ಟ್‌ನ ಪುರಾತನ ಕಲೆಯು ಮೂಲ ಗ್ರಂಥಗಳಲ್ಲಿ ನೋಡಿದ ಪುರಾತನ ಜೇನುಸಾಕಣೆಯ ಅಸ್ಪಷ್ಟ ನೋಟದ ಪತ್ತೆಯಾಗಿದೆ ಎಂದು ಹೇಳಿದರು.

ಪುರಾತನ ಗ್ರೀಸ್‌ನಲ್ಲಿ, ಜೇನುನೊಣಗಳ ವಾಸಿಸುವಿಕೆ ಮತ್ತು ಜೇನುಸಾಕಣೆಯ ಅಂಶಗಳನ್ನು ಕುರಿತು ವಿಸ್ತಾರವಾಗಿ ಅರಿಸ್ಟೋಟಲ್‌ರವರಿಂದ ಚರ್ಚಿಸಲಾಯಿತು. ರೋಮನ್ ಲೇಖಕರಾದ ವಿರ್ಗಿಲ್, ಗೈಯಸ್ ಜೂಲಿಯಸ್ ಹೈಜಿನಸ್, ವರ್ರೊ, ಮತ್ತು ಕೊಲೊಮೆಲ್ಲ ಇವರಿಂದ ಜೇನುಸಾಕಣೆಯನ್ನು ದಾಖಲಿಸುವಿಕೆಯನ್ನು ಸಹ ಮಾಡಲಾಯಿತು.

ಜೇನುನೊಣಗಳ ಅಧ್ಯಯನ

[ಬದಲಾಯಿಸಿ]

18ನೆಯ ಶತಮಾನದಲ್ಲಿ ಯುರೋಪಿನ ಸ್ವಾಭಾವಿಕ ತತ್ವಜ್ಞಾನಿಗಳು ಜೇನುನೊಣಗಳ ಸಮೂಹಗಳ ವೈಜ್ಞಾನಿಕ ಅಧ್ಯಯನವನ್ನು ಕೈಗೆತ್ತಿಕೊಂಡು, ಜೇನುನೊಣದ ಜೀವಶಾಸ್ತ್ರದ ಸಂಕೀರ್ಣತೆ ಮತ್ತು ಆಂತರಿಕ ಶಬ್ದವನ್ನು ಅರ್ಥಮಾಡಿಕೊಳ್ಳಲು ಆರಂಭಿಸುವ ವರೆಗೂ ಇದರ ಅಧ್ಯಯನವನ್ನು ಯಾರು ಮಾಡಿರಲಿಲ್ಲ. ಈ ವೈಜ್ಞಾನಿಕ ಆದಿ ಪರಿಶೋಧಕರಲ್ಲಿ ಸರ್ವಶ್ರೇಷ್ಟರೆಂದರೆ ಸ್ವಮೆರ್‌ದಮ್, ರೆಹ್‌ನೈ ಆಂಟ್‌ವಾನ್ ಪರ್ಚಾಲ್ಟ್ ದೆ ರಿಯಾಮರ್, ಚಾರ್ಲೆಸ್ ಬೊನೆತ್, ಮತ್ತು ಬ್ಲೈಂಡ್ ಸ್ವಿಸ್ ವಿಜ್ಞಾನಿ ಪ್ರಾನ್ಸ್‌ವಾ ಹ್ಯುಬರ್. ಜೇನುನೊಣಗಳ ಆಂತರಿಕ ಜೀವಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಸೂಕ್ಷ್ಮದರ್ಶಕಗಳನ್ನು ಮತ್ತು ಅಂಗವಿಚ್ಚೇದಿಸುವಿಕೆಯನ್ನು ಮೊದಲು ಉಪಯೋಗಿಸಿದವರಲ್ಲಿ ಸ್ವಮೆರ್‌ದಮ್ ಮತ್ತು ರಿಯಾಮರ್ ಸೇರಿದ್ದಾರೆ. ಗೂಡಿನ ಒಳಗಡೆ ಜೇನುನೊಣಗಳ ಚಟುವಟಿಕೆಗಳನ್ನು ಉನ್ನತ ಮಟ್ಟದಲ್ಲಿ ಗಮನಿಸಲು ಗಾಜಿನ ಗೋಡೆಯ ಅವಲೋಕನ ಗೂಡುಗಳನ್ನು ಮೊದಲ ಬಾರಿಗೆ ನಿರ್ಮಿಸಿದವರಲ್ಲಿ ರಿಯಾಮರ್ ಒಬ್ಬರಾಗಿದ್ದರು. ಅವರು ತೆರೆದ ಕೋಶಗಳಲ್ಲಿ ರಾಣಿ ನೊಣಗಳು ಮೊಟ್ಟೆಗಳನ್ನು ಇಡುವುದನ್ನು ಗಮನಿಸಿದರು, ಆದರೆ ಅವು ಹೇಗೆ ಗರ್ಭಧರಿಸುತ್ತವೆ ಎಂಬುದರ ಬಗ್ಗೆ ಅವರಿಗೆ ಇನ್ನೂ ಯಾವುದೇ ಅವಗಾಹನ ಇರಲಿಲ್ಲ; ರಾಣಿ ಜೇನುನೊಣ ಮತ್ತು ಗಂಡು ಜೇನುನೊಣಗಳ ಕೂಡುವ ಕ್ರಿಯೆಗೆ ಇಲ್ಲಿಯವರಿಗೂ ಯಾರೂ ಸಾಕ್ಷಿಯಾಗಿರಲಿಲ್ಲ ಮತ್ತು ಬಹುತೇಕ ಸಿದ್ಧಾಂತಗಳು ರಾಣಿ ಜೇನುನೊಣಗಳು "ತಾವಾಗಿಯೇ ಗರ್ಭಧರಿಸುತ್ತವೆ" ಎಂಬುದನ್ನು ಸೂಚಿಸುತ್ತವೆ, ಇದೇ ಸಮಯದಲ್ಲಿ ಇತರರು ಯಾವುದೇ ರೀತಿಯ ನೇರ ಶಾರೀರಕ ಸಂಬಂಧ ಇಲ್ಲದೆ, ಗಂಡು ಜೇನುನೊಣದಿಂದ ಹೊರಬೀಳುವ "ಆವಿಯು" ರಾಣಿ ಜೇನುನೊಣಗಳನ್ನು ಗರ್ಭಧರಿಸುವಂತೆ ಮಾಡುತ್ತದೆ ಎಂದು ನಂಬಿದ್ದಾರೆ. ರಾಣಿ ಜೇನುನೊಣಗಳು ಗೂಡಿನ ಪರಿಮಿತಿಯಿಂದ ಹೊರಗೆ ಗಂಡು ಜೇನುನೊಣಗಳಿಂದ ಶಾರೀರಕ ಸಂಬಂಧಹೊಂದಿ ಗರ್ಭಧರಿಸುತ್ತವೆ, ಸಾಮಾನ್ಯವಾಗಿ ಇದು ಜೇನುಗೂಡಿನ ಪರಿಮಿತಿಯಿಂದ ಬಹಳ ದೂರದಲ್ಲಿ ನಡೆಯುತ್ತದೆ ಎಂದು ತಮ್ಮ ಅವಲೋಕನದಿಂದ ಮತ್ತು ಪ್ರಯೋಗಗಳಿಂದ ಸಾಬೀತು ಪಡಿಸಿದ ಮೊದಲ ವ್ಯಕ್ತಿ ಹರ್ಬರ್.

ರಿಯಾಮರ್'ರ ವಿನ್ಯಾಸವನ್ನು ಅನುಸರಿಸಿ, ಹರ್ಬರ್ ಪ್ರತ್ಯೇಕ ಮೇಣದ ಜೇನುಹುಟ್ಟುಗಳನ್ನು ಪರೀಕ್ಷಿಸಲು, ಸುಧಾರಿತ ಗಾಜಿನ-ಗೋಡೆಯ ಅವಲೋಕನ ಗೂಡುಗಳನ್ನು, ಮತ್ತು ಪುಸ್ತಕದ ಹಾಳೆಗಳ ಮಾದರಿಯಲ್ಲಿ, ತೆರೆಯಬಹುದಾತಂಹ ವಿಭಾಗೀಯ ಜೇನುಗೂಡುಗಳನ್ನು ರಚಿಸಿದರು; ಇದು ಗೂಡಿನ ಒಳಗಿನ ಚಟುವಟಿಕೆಗಳ ನೇರ ಅವಲೋಕನದಲ್ಲಿ ಮಹತ್ತರವಾದ ಸುಧಾರಣೆಯನ್ನು ತರಲು ನೆರವಾಯಿತು. ಅವರ ಇಪ್ಪತ್ತರ ವಯಸ್ಸಿಗಿಂತಲೂ ಮೊದಲೇ ಅವರು ಕುರಡರಾದರೂ, ಹರ್ಬರ್‌ ಪ್ರತಿದಿನ ಪರಿಶೀಲನೆಯನ್ನು ಮಾಡಲು, ಜಾಗರೂಕ ಪ್ರಯೋಗಗಳನ್ನು ನಡೆಸಲು, ಮತ್ತು ನಿಖರವಾಗಿ ನಮೂದಿಸಲು, ಸುಮಾರು ಇಪ್ಪತ್ತು ವರ್ಷಗಳಿಗಿಂತಲೂ ಅಧಿಕ ಕಾಲದವರೆಗೂ, ಫ್ರಾನ್ಕೊಯಿಸ್ ಬರ್ನೆನ್ಸ್‌ನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಜೇನುಗೂಡು ಸಮೂಹದಲ್ಲಿನ ಎಲ್ಲಾ ಹೆಣ್ಣು ಕೆಲಸದ ಜೇನುನೊಣಗಳಿಗೆ ಮತ್ತು ಗಂಡು ಜೇನುನೊಣಗಳಿಗೆ ತಾಯಿಯಾಗಿರುವ ಒಂದು ರಾಣಿ ಜೇನುನೊಣವನ್ನು ಒಳಗೊಂಡಿರುತ್ತದೆ ಎಂಬುದನ್ನು ಹರ್ಬರ್ ಖಚಿತಪಡಿಸಿದರು. ಗಂಡುಜೇನುನೊಣಗಳ ಜೊತೆಗಿನ ಕೂಡುವ ಕ್ರಿಯೆಯು ಜೇನು ಗೂಡುಗಳ ಹೊರಗೆ ನಡೆಯುತ್ತದೆ ಮತ್ತು ಅವುಗಳ ಜೇನುಗೂಡುಗಳಿಂದ ಅತೀ ದೂರದಲ್ಲಿ ಭೂಮಿಯಿಂದ ಬಹಳಷ್ಟು ಎತ್ತರದಲ್ಲಿ ಗಾಳಿಯಲ್ಲಿ ನಡೆಯುವ, ಗಂಡು ಜೇನುನೊಣಗಳೊಂದಿಗಿನ ಅನೇಕ ಸಫಲ ಕೂಡುವಿಕೆಗಳಿಂದ ರಾಣಿ ಜೇನುನೊಣಗಳು ಗರ್ಭಧರಿಸುತ್ತವೆ ಎಂಬುದನ್ನು ಸಹ ಅವರೇ ಮೊದಲು ಖಚಿತ ಪಡಿಸಿದ್ದು. ಅವರು ಮತ್ತು ಬರ್ನೆನ್ಸ್ ಜೊತೆಯಲ್ಲಿ, ಜೇನುನೊಣಗಳನ್ನು ಪರೀಕ್ಷೆಗಾಗಿ ಸೂಕ್ಷ್ಮದರ್ಶಕದ ಅಡಿಯಲ್ಲಿ ಅಂಗವಿಚ್ಛೇಧಿಸಿದರು, ಮತ್ತು ರಾಣಿಜೇನುನೊಣಗಳ ಅಂಡಾಶಯಗಳ ಮತ್ತು ವೀರ್ಯಾಣುಗಳನ್ನುಳ್ಳ ದ್ರವ ಅಥವಾ ವೀರ್ಯದ ಶೇಖರಣೆಯಬಗ್ಗೆ ಹಾಗು ಗಂಡು ಡ್ರೋನ್ ಜೇನುನೊಣಗಳ ಪುರುಷಜನನಾಂಗದ ಬಗ್ಗೆ ವಿವರಿಸಿದವರಲ್ಲಿ ಮೊದಲಿಗರು. ಹರ್ಬರ್ ಸಾರ್ವತ್ರಿಕವಾಗಿ "ಆಧುನಿಕ ಜೇನುನೊಣಗಳ-ವಿಜ್ಞಾನದ ಪಿತೃ" ಎಂಬ ಮನ್ನಣೆಗೆ ಒಳಗಾಗಿದ್ದರು ಮತ್ತು ಅವರ "ನವೆಲ್ಸ್ ಅಬ್ಸೆರ್ವೆಷನ್ಸ್ ಸರ್ ಲೆಸ್ ಎಬಿಲೆಸ್ (ಅಥವಾ "ನ್ಯೂ ಅಬ್ಸೆರ್ವೇಷನ್ಸ್ ಆನ್ ಬೀಸ್") [೨]) ಜೇನುನೊಣಗಳ ಜೀವಶಾಸ್ತ್ರ ಮತ್ತು ಜೀವಿ ಪರಿಸರ ವಿಜ್ಞಾನಕ್ಕಾಗಿ ಎಲ್ಲಾ ಮೂಲ ವೈಜ್ಞಾನಿಕ ಸತ್ಯಸಂಗತಿಗಳನ್ನು ಪ್ರಕಾಶಪಡಿಸಿದೆ.

ಚಲಿಸಲಾಗುವ ಜೇನು ಹುಟ್ಟಿನ ಗೂಡುಗಳ ಆವಿಷ್ಕರಣ

[ಬದಲಾಯಿಸಿ]

ಜೇನುತುಪ್ಪವನ್ನು ಸಂಗ್ರಹಿಸುವ ಮುಂಚಿನ ಪದ್ದತಿಯು, ಜೇನು ತುಪ್ಪವನ್ನು ಸಂಗ್ರಹಿಸಿದ ನಂತರ ಪೂರ್ಣ ಸಮೂಹದ ಸಂಪೂರ್ಣ ನಾಶಕ್ಕೆ ಕಾರಣವಾಗುತ್ತಿತ್ತು. ಕಾಡು ಜೇನುಗೂಡುಗಳನ್ನು ಕಠೋರವಾಗಿ ಮುರಿದು ನಾಶಮಾಡಲಾಗುತ್ತಿತ್ತು, ಜೇನುನೊಣಗಳನ್ನು ನಿಗ್ರಹಿಸಲು ಹೊಗೆಯನ್ನು ಉಪಯೋಗಿಸಿ, ಜೇನುಗೂಡಿನೊಳಗೆ ಇದ್ದ ಮೊಟ್ಟೆಗಳನ್ನು, ಮೊಟ್ಟೆಯಿಂದ ಹೊರಬಂದ ಸಣ್ಣ ಕೀಟಗಳು ಮತ್ತು ಜೇನುತುಪ್ಪವನ್ನು ಸೇರಿಸಿ, ಸಂಪೂರ್ಣ ಜೇನು ಹುಟ್ಟುಗಳನ್ನು ಹರಿದು ಹಾಕಿ ನಾಶಮಾಡಲಾಗುತ್ತಿತ್ತು. ನಾಶಹೊಂದಿದ ಪೂರ್ಣ ಸಂಸಾರದ ಗೂಡಿನಿಂದ ಜೇನುತುಪ್ಪವನ್ನು ಜರಡಿ ಅಥವಾ ಮಕರಿಯ ಮೂಲಕ ಕಠೋರವಾಗಿ ಹಿಂಡಿ ಸೋಸಲಾಗುತ್ತಿತ್ತು. ಇದು ಹಾನಿಕಾರಕ ಮತ್ತು ಅಶುಭ್ರವಾಗಿರುತ್ತಿತ್ತು, ಆದರೆ ಸಾಮಾನ್ಯವಾಗಿ ಜೇನುತುಪ್ಪ ಕೂಡಲೇ ಬಳಕೆಯಾಗುವುದರಿಂದ ಮತ್ತು ಶೋಷಿಸಿ ತಗೆದುಕೊಂಡು ಹೋಗಲು ಯಾವಾಗಲೂ ಕಾಡು ಜೇನುನೊಣಗಳ ವಸಾಹತುಗಳು ಹೆಚ್ಚಾಗಿ ಲಭ್ಯವಿರುವುದರಿಂದ ಬೇಟೆಯ-ಸಂಗ್ರಹಗಾರರ ಸಮುದಾಯಕ್ಕೆ ಇದು ಒಂದು ದೊಡ್ಡ ವಿಷಯವಲ್ಲ. ಆದರೆ ನೆಲೆಗೊಳಿಸಿದ ಸಮುದಾಯಗಳಲ್ಲಿ ಜೇನುನೊಣಗಳ ವಸಾಹತುಗಳನ್ನು ನಾಶಮಾಡುವಿಕೆಯು ಬೆಲೆಬಾಳುವ ಸಂಪನ್ಮೂಲಗಳ ನಾಶಕ್ಕೆ ಕಾರಣವಾಗುತ್ತದೆ; ಈ ನ್ಯೂನತೆಯು ಜೇನುಸಾಕಣೆಯನ್ನು ಅಸಮರ್ಥವಾಗಿ ಮತ್ತು ಒಂದು ರೀತಿಯ "ನಿಲ್ಲಿಸುವಿಕೆ ಮತ್ತು ಪುನಃ ಪ್ರಾರಂಭಿಸುವಿಕೆಯ" ಚಟುವಟಿಕೆಯನ್ನಾಗಿ ಮಾಡಿದೆ. ಜೇನುತುಪ್ಪವನ್ನು ಸೇಕರಿಸುವ ಸಮಯದಲ್ಲಿ ಪ್ರತಿಯೊಂದು ಜೇನುನೊಣಗಳ ವಸಾಹತುಗಳನ್ನು, ಅದರ ಅತೀ ಮುಖ್ಯ ರಾಣಿ ಜೇನುನೊಣದ ಜೊತೆಯಲ್ಲಿ ನಾಶಗೊಳಿಸಬೇಕಾಗುವುದರಿಂದ, ಅಲ್ಲಿ ಸತತವಾದ ಉತ್ಪವನ್ನು ಪಡೆಯಲು ಸಾಧ್ಯವಿಲ್ಲ ಮತ್ತು ಇದರಿಂದ ವಿಶೇಷತಳಿಗಳ ಪೋಷಣೆಯು ಸಾಧ್ಯವಾಗುವುದಿಲ್ಲ. ಮಧ್ಯಯುಗದ ಸಮಯದಲ್ಲಿ ಅಬೆಯ್ಸ್ ಮತ್ತು ಮೊನಾಸ್ಟೆರೀಸ್ ಜೇನುಸಾಕಣೆಯ ಕೇಂದ್ರಗಳಾಗಿದ್ದವು, ಅಲ್ಲಿ ಜೇನುಗೂಡಿನ ಮೇಣವು ಮೇಣಬತ್ತಿಗಳ ತಯಾರಿಕೆಗಾಗಿ ಅಧಿಕ ಬೆಲೆಗೆ ಮಾರಾಟವಾಗುತ್ತಿದ್ದುದು ಮತ್ತು ವೈನ್‌ಗಳು ಬೆಳೆಯದಂತಹ ಯುರೋಪಿನ ಪ್ರದೇಶಗಳಲ್ಲಿ ಹುಳಿಬರಿಸಿದ ಜೇನುತುಪ್ಪವನ್ನು ಸರಾಯಿಯ ಪಾನೀಯವನ್ನಾಗಿ ಉಪಯೋಗಿಸುತ್ತಿದ್ದುದೆ ಇದಕ್ಕೆ ಕಾರಣ.

18ನೆಯ ಮತ್ತು 19ನೆಯ ಶತಮಾನಗಳಲ್ಲಿ ಜೇನುಸಾಕಣೆಯ ಸಂಪೂರ್ಣ ಬದಲಾವಣೆಯ ಸಫಲ ಹಂತಗಳನ್ನು ಕಾಣಲಾಯಿತು, ಇದು ಜೇನಿನ ಫಸಲನ್ನು ಸಂಗ್ರಹಿಸುವಾಗ ಜೇನುನೊಣಗಳು ತಮ್ಮನ್ನು ತಾವೇ ರಕ್ಷಿಸುಕೊಳ್ಳಲು ಸಹಾಯವಾಯಿತು.

ಜೇನುಸಾಕಣೆಯ ಹಳೇ ಪದ್ಧತಿಯಿಂದ ಹೊಸಾ ಪದ್ಧತಿಗೆ ವರ್ಗಾವಣೆಯಾಗುವ ನಡುವಣ ಹಂತಗಳನ್ನು ಉದಾಹರಣೆಗಾಗಿ 1768/1770ರಲ್ಲಿ ಥೋಮಸ್ ವಿಲಿಯಮ್‌ರಿಂದ ದಾಖಲಿಸಲಾಯಿತು, ಮತ್ತು ಅವರು ನಾಶವಾಗುವಂತಹ ಹಳೆಯ ಸ್ಕೆಪ್ ಆಧಾರಿತ ಜೇನುಸಾಕಣೆಯ ಅಭಿವೃಧಿಯ ಅಂಶಗಳನ್ನು ವಿವರಿಸಿದರು, ಇದರಿಂದ ಮುಂದೆ ಜೇನಿನ ಫಸಲನ್ನು ಪಡೆಯಲು ಜೇನುನೊಣಗಳನ್ನು ಸಾಯಿಸುವ ಅಗತ್ಯವಿಲ್ಲದೆ ಪಡೆಯಬಹುದಾಗಿತ್ತು.[೧೦] ಉದಾಹರಣೆಗೆ ವೈಲ್ಡ್‌ಮನ್ ಜೇನುಗೂಡಿನ ಮೇಲ್ಬಾಗದಲ್ಲಿ ಸಮಾನಾಂತರದ ಮರದ ವ್ಯೂಹವನ್ನು ಜೋಡಿಸಿದರು (ನಂತರ ಪ್ರತ್ಯೇಕ ಒಣಹುಲ್ಲಿನ ಮುಚ್ಚಳವನ್ನು ಜೋಡಿಸುವುದರೊಂದಿಗೆ) "ಜೇನುನೊಣಗಳು ತಮ್ಮ ಜೇನು ಹುಟ್ಟುಗಳನ್ನು ಸ್ಥಿರಗೊಳಿಸುವ", "ವಿತರಣೆಯ ಎಲ್ಲಾ ಏಳು ಬಾರ್‌ಗಳಲ್ಲಿ ಇರುವಂತೆ" [ಜೇನುಗೂಡಿನ 10-inch-diameter (250 mm) ಒಳಗೆ].[೧೧] ಅವರು ಮಹು-ಮಹಡಿಯ ವಿನ್ಯಾಸದಲ್ಲಿ ಈ ರೀತಿಯ ಗೂಡುಗಳನ್ನು ಉಪಯೋಗಿಸುವಿಕೆಯನ್ನು ಸಹ ವಿವರಿಸಿದರು, ಮೇಲಿನವುಗಳ ಆಧುನಿಕ ಉಪಯೋಗದ ಭವಿಷ್ಯನುಡಿಯುವುದು: ಅನುಕ್ರಮ ಒಣಹುಲ್ಲಿನ ಗೂಡುಗಳನ್ನು ಕೆಳಗೆ ಸೇರಿಸುವುದು (ಸರಿಯಾದ ಸಮಯದಲ್ಲಿ), ಮತ್ತು ಸಾಂದರ್ಭಿಕವಾಗಿ ಮೇಲಿನವುಗಳನ್ನು ತೆಗೆಯುವುದು ಅಂದರೆ ಅವುಗಳಲ್ಲಿ ಜೇನುತುಪ್ಪ ತುಂಬಿದಾಗ ಮತ್ತು ಅವುಗಳ ಸಂಸಾರ ಅಲ್ಲಿ ಇಲ್ಲದೇ ಇದ್ದಾಗ, ಇದರಿಂದ ಜೇನಿನ ಫಸಲಿನ ಸಮಯದಲ್ಲಿ ಜೇನುನೊಣಗಳನ್ನು ಪ್ರತ್ಯೇಕವಾಗಿ ಮುಂದಿನ ಕಾಲಕ್ಕೆ ಸಂರಕ್ಷಿಸಿದಂತಾಗುತ್ತದೆ ಎಂಬುದನ್ನು ಸಹ ಅವರು ವಿವರಿಸಿದರು. ಚಲಿಸಲಾಗುವ ಜೇನುಗೂಡುಗಳ ಆಧುನಿಕ ಉಪಯೋಗದ ಮುಂದೋರಿಸುವಿಕೆಯಾದ, ಜೇನುನೊಣಗಳು ತಮ್ಮ ಮೇಣದ ಗೂಡುಗಳನ್ನು ಸ್ಥಾಪಿಸಲು ಇಳೀಜಾರು ರಚನೆಯನ್ನು ಹೊಂದಿದ್ದ" ಜೇನು ಗೂಡುಗಳನ್ನು ಉಪಯೋಗಿಸುವಿಕೆಯನ್ನು ವೈಲ್ಡ್‌ಮನ್ ಸಹ ವಿವರಿಸಿದರು[೧೨]. ವೈಲ್ಡ್‌ಮನ್ ಪುಸ್ತಕವು, ಮೊದಲೇ ಸ್ವಮೆರ್‌ದಮ್, ಮರಾಲ್ಡಿ ಮತ್ತು ದೆ ರೆಯುಮುರ್ ಅವರಿಂದ ಮಾಡಿದ ಜೇನುನೊಣಗಳ ವಿಜ್ಞಾನದ ಸುಧಾರಣೆಗಳನ್ನು ಸಮ್ಮತಿಸಿದೆ-ಅವರು ಜೇನುನೊಣಗಳ ಸ್ವಾಭಾವಿಕ ಇತಿಹಾಸದ ರಿಯಾಮರ್‌ರ ಹೇಳೀಕೆಯ ಉದ್ದನೆಯ ಭಾಷಾಂತರವನ್ನು ಸೇರಿಸಿದರು-ಮತ್ತು ಅವರು 1750ರ ಕಾಲದ ಬ್ರಿಟನಿಯ ಕೆಲವು ಮುಖ್ಯ ವರದಿಗಳಲ್ಲಿನ ಉದಾಹರಣೆಗಳೊಂದಿಗೆ, ಜೇನುತುಪ್ಪದ ಫಸಲನ್ನು ಪಡೆಯುವ ಸಮಯದಲ್ಲಿ ಜೇನುನೊಣಗಳನ್ನು ರಕ್ಷಿಸಲು ಅನುಕೂಲವಾಗುವಂತಹ ಜೇನುಗೂಡುಗಳ ರಚನೆಯಲ್ಲಿನ ಇತರರ ಮೊದಲ ಪ್ರಯತ್ನಗಳನ್ನು ಸಹ ವಿವರಿಸಿದರು.

ಲೊರೆಂಜೊ ಲ್ಯಾಂಗ್‌ಸ್ಟ್ರೊತ್ (1810-1895)

ಯುನೈಟೆಡ್ ಸ್ಟೇಟ್ಸ್‌ಗೆ ವಲಸೆಬಂದ ಯೋರ್ಕ್‌ಶೈರ್ ಒಕ್ಕಲಿಗರ ವಂಶಸ್ಥರಾದ, ಲೊರೆಂಜೊ ಲೊರೈನ್ ಲಾಂಗ್ಸ್‌ಟ್ರೊತ್ ಇವರಿಂದ ಸಲಿಸಲಾಗುವ ಜೇನು ಹುಟ್ಟಿನ ಗೂಡುಗಳ ಪರಿಪೂರ್ಣತೆಯ ಮೂಲಕ ಪೂರ್ಣಗೊಂಡ ಜೇನುಸಾಕಣೆಯ ಸಂಪೂರ್ಣ ಬದಲಾವಣೆಯನ್ನು 19ನೆಯ ಶತಮಾನದಲ್ಲಿ ಕಾಣಲಾಯಿತು. ಹರ್ಬರ್‌ರ ಮುಂಚಿನ ಶೋಧನೆಯಾದ, ನಂತರ "ದಿ ಬೀ ಸ್ಫೇಸ್" ಎಂದು ಕರೆಯಲಾಯಲಾದ, ಮೇಣದ ಜೇನು ಹುಟ್ಟುಗಳ ನಡುವಿನ ಸ್ಪಷ್ಟ ಪ್ರಾದೇಶಿಕ ಅಳತೆಯನ್ನು, ಮೊದಲು ಕಾರ್ಯರೂಪಕ್ಕೆ ತಂದವರು ಲಾಂಗ್ಸ್‌ಟ್ರೊತ್, ಜೇನುನೊಣಗಳಿಗೆ ಇದನ್ನು ಮೇಣದಿಂದ ತುಂಬಲು ಸಾಧ್ಯವಿಲ್ಲ, ಆದರೆ ನಡುವೆ ಹಾದುಹೋಗುವ ಖಾಲಿ ದಾರಿಯನ್ನಾಗಿ ಬಿಡಲಾಗುತ್ತದೆ. ಈ "ಜೇನುನೊಣದ ಜಾಗದ" ಅಳತೆಯನ್ನು ಖಚಿತಪಡಿಸುವುದರೊಂದಿಗೆ (5 ಮತ್ತು 8 ಮಿಮೀ ನಡುವೆ, ಅಥವಾ 1/4 ರಿಂದ 3/8"), ಲಾಂಗ್ಸ್‌ಟ್ರೊತ್ ಸಮಚತುಷ್ಕೋನದ ಜೇನು ಗೂಡಿನ ಪೇಟ್ಟಿಗೆಯೊಳಗೆ ಮರದ ಚೌಕಗಳ ಶ್ರೇಣಿಯನ್ನು ವಿನ್ಯಾಸಿಸಿದರು, ಅನುಕ್ರಮ ಚೌಕಗಳ ನಡುವಿನ ಜಾಗವನ್ನು ಜಾಗರೂಕತೆಯಿಂದ ಒಂದೇರೀತಿಯಲ್ಲಿ ಕಾಪಾಡಿಕೊಂಡು ಬಂದರು ಮತ್ತು ಜೇನುನೊಣಗಳು ಪೇಟ್ಟಿಗೆಯೊಳಗೆ ಒಂದಕ್ಕೊಂದು ಅಂಟಿಕೊಳ್ಳದ ಅಥವಾ ಜೇನು ಗೂಡಿನ ಗೋಡೆಗಳಿಗೆ ಸೇರಿರದ, ಸಮಾಂತರದ ಜೇನು ಹುಟ್ಟುಗಳನ್ನು ರಚಿಸುತ್ತವೆ ಎಂಬುದನ್ನು ಕಂಡುಹಿಡಿದರು. ಇದರಿಂದ ಜೇನುಸಾಕಣೆಗಾರರಿಗೆ, ಜೇನುನೊಣಗಳಿಗೆ ತೊಂದರೆಯನ್ನುಂಟು ಮಾಡದೆ, ಕೋಶದಲ್ಲಿರುವ ಮೊಟ್ಟೆಗಳನ್ನು, ಮೊಟ್ಟೆಯಿಂದ ಹೊರಬಂದ ಸಣ್ಣ ಕೀಟಗಳನ್ನು ಮತ್ತು ಪೊರೆಹುಳುಗಳನ್ನು ಸಂರಕ್ಷಿಸುತ್ತಾ, ಜೇನು ಗೂಡಿನಿಂದ ಯಾವುದೇ ಚೌಕವನ್ನು ಪರೀಕ್ಷೆಗಾಗಿ ಹೊರತೆಗೆಯಲು ಅನುಕೂಲವಾಯಿತು. ಇದು ಜೇನು ಹುಟ್ಟುಗಳು ಒಳಗೊಂಡಿದ್ದ ಜೇನುತುಪ್ಪವನ್ನು ಜೇನು ಹುಟ್ಟುಗಳನ್ನು ನಾಶಮಾಡದೇ ನಿದಾನವಾಗಿ ತೆಗೆದು ಬೇರ್ಪಡಿಸಬಹುದು ಎಂಬುದನ್ನು ಸಹ ಸೂಚಿಸುತ್ತದೆ. ಖಾಲಿಯಾದ ಜೇನು ಹುಟ್ಟುಗಳನ್ನು ಮರುಶೇಖರಣೆಗಾಗಿ ಜೇನುಗೂಡಿನ ಒಳಗೆ ಮರಳಿ ಸೇರಿಸಬಹುದಾಗಿದೆ. 1853ರಲ್ಲಿ ಪ್ರಕಟವಾದ, ಲಾಂಗ್ಸ್‌ಟ್ರೊತ್'ರ ಅತ್ಯುತ್ತಮ ಪುಸ್ತಕ, ದಿ ಹೈವ್ ಆಂಡ್ ಹನೀ-ಬೀ , ಬೀ ಸ್ಫೇಸ್‌ ಬಗೆಗಿನ ಅವರ ಮರು ಪರಿಶೀಧನೆ ಮತ್ತು ಅವರ ಚಲಿಸಲಾಗುವ ಜೇನು ಹುಟ್ಟಿನ ಗೂಡುಗಳ ಅಭಿವೃದ್ಧಿಯನ್ನು ವರ್ಣಿಸುತ್ತದೆ.

ಚಲಿಸಲಾಗುವ ಜೇನು-ಹುಟ್ಟಿನ-ಗೂಡುಗಳ ಆವಿಷ್ಕರಣ ಮತ್ತು ಅಭಿವೃದ್ಧಿಯು ಯುರೋಪ್ ಮತ್ತು ಯುಎಸ್‌ಎ ಎರಡೂ ದೇಶಗಳಲ್ಲೂ ವಾಣಿಜ್ಯ ಜೇನು ಉತ್ಪಾದನೆಯ ಬೆಳವಣಿಗೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸಿದೆ.

ಜೇನು ಗೂಡುಗಳ ವಿನ್ಯಾಸದ ವಿಕಾಸ

[ಬದಲಾಯಿಸಿ]

ಚಲಿಸಲಾಗುವ ಜೇನು ಹುಟ್ಟಿನ ಗೂಡುಗಳಿಗೆ ಲಾಂಗ್ಸ್‌ಟ್ರೊತ್'ರ ವಿನ್ಯಾಸವನ್ನು ಅಟ್ಲಾಂಟಿಕಾದ ಎರಡೂ ಕಡೆ ಜೇನುಸಾಕಣೆಗಾರರಿಂದ ಮತ್ತು ಸೃಷ್ಟಿಕರ್ತರಿಂದ ಸ್ಥಗಿತಗೊಳಿಸಲಾಯಿತು ಮತ್ತು ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅವರ ಅಶ್ಯಕತೆಗೆ ತಕ್ಕಂತೆ ವಿಶಾಲ ಶ್ರೇಣಿಯ ಚಲಿಸಲಾಗುವ ಜೇನು ಹುಟ್ಟಿನ ಗೂಡುಗಳನ್ನು ವಿನ್ಯಾಸಿಸಲಾಯಿತು. ಪ್ರತಿಯೊಂದು ದೇಶದಲ್ಲೂ ಅತ್ಯುತ್ತಮ ವಿನ್ಯಾಸಗಳು ವಿಕಸಿಸಿದವು: ಯುಎಸ್‌ಎನಲ್ಲಿ ಇನ್ನೂ ದದಂತ್ ಜೇನುಗೂಡುಗಳು ಮತ್ತು ಲಾಂಗ್ಸ್‌ಟ್ರೊತ್ ಜೇನುಗೂಡುಗಳೇ ಪ್ರಭಲವಾಗಿವೆ; ಫ್ರಾನ್ಸ್‌ನಲ್ಲಿ ದೆ-ಲಯನ್ಸ್ ತೊಟ್ಟಿ-ಜೇನುಗೂಡು ಪ್ರಸಿದ್ಧವಾಗಿದೆ ಮತ್ತು ಯುಕೆಯಲ್ಲಿ ಬ್ರಿಟಿಷ್ ನ್ಯಾಷನಲ್ ಜೇನುಗೂಡನ್ನು ತಡವಾಗಿ ಅಂದರೆ 1930ರಲ್ಲಿ ನಿರ್ದಿಷ್ಟಗೊಳಿಸಲಾಯಿತು, ಅದಾಗ್ಯೂ, ಸ್ಕಾಟ್‌ಲ್ಯಾಂಡ್‌ನಲ್ಲಿ ಸ್ಮಾಲೆರ್ ಸ್ಮಿತ್ ಜೇನುಗೂಡು ಈಗಲೂ ಜನಪ್ರಿಯವಾಗಿದೆ. ಕೆಲವು ಸ್ಕಾಂಡಿನಾವಿಯನ್ ದೆಶಗಳಲ್ಲಿ ಮತ್ತು ರಷ್ಯದಲ್ಲಿ ಸಾಂಪ್ರದಾಯಿಕ ತೊಟ್ಟಿ ಜೇನುಗೂಡನ್ನು 20ನೆಯ ಶತಮಾನದ ಕೊನೆಯವರೆಗು ಉಪಯೋಗಿಸಲಾಗುತ್ತಿತ್ತು ಮತ್ತು ಕೆಲವು ಪ್ರದೇಶಗಳಲ್ಲಿ ಈಗಲೂ ಕಾಣಬಹುದಾಗಿದೆ. ಏನೇ ಆದರೂ, ಯುಎಸ್‌ಎ ಮತ್ತು ಯುರೋಪಿನ ಬಹುತೇಕ ಭಾಗಗಳಲ್ಲಿ, ಲಾಂಗ್ಸ್‌ಟ್ರೊತ್ ಮತ್ತು ದದಂತ್ ವಿನ್ಯಾಸಗಳು ಸರ್ವವ್ಯಾಪಕವಾಗಿ ಉಳಿದವು, ಅದಾಗ್ಯೂ ಸ್ವೆಡನ್, ಡೆನ್ಮಾರ್ಕ್, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ದೇಶಗಳು ತಮ್ಮ ಸ್ವಂತ ರಾಷ್ಟ್ರೀಯ ಜೇನುಗೂಡಿನ ವಿನ್ಯಾಸಗಳನ್ನು ಹೊಂದಿವೆ. ವಾತಾವರಣವನ್ನು ಹಿಂಪುಟಿಸಲು, ಮತ್ತು ಹೂವುಗಳ ಉತ್ಪಾದಕತೆ ಮತ್ತು ಸ್ಥಳೀಯ ಜೇನುನೊಣಗಳ ವಿವಿಧ ಉಪತಳಿಗಳ ಮರು ಉತ್ಪಾದಕ ಗುಣ ವಿಶೇಷತೆಗಳನ್ನು ಆದರಿಸಿ, ಜೇನುಗೂಡಿನ ಪ್ರಾಂತೀಯ ಮಾರ್ಪಾಡುಗಳು ವಿಕಸಿಸಿವೆ.

ಈ ಎಲ್ಲಾ ಜೇನುಗೂಡುಗಳಲ್ಲಿನ ಒಂದೇತರಹದ ವಿಷಯಗಳ ಹೋಲಿಕೆ ಮಾಡುವಲ್ಲಿ, ಜೇನುಗೂಡುಗಳ ವಿಸ್ತೀರ್ಣದಲ್ಲಿನ ವ್ಯತ್ಯಾಸಗಳು ಕ್ಷುಲ್ಲಕವಾಗುತ್ತವೆ: ಇವು ಎಲ್ಲವು ಚೌಕವಾಗಿ ಅಥವಾ ಸಮಚತುಷ್ಕೋನಾಕಾರವಾಗಿವೆ; ಇವೆಲ್ಲವು ಚಲಿಸಲಾಗುವ ಮರದ ಚೌಕಟ್ಟುಗಳನ್ನು ಉಪಯೋಗಿಸುತ್ತವೆ; ಇವೆಲ್ಲವು ಮಹಡಿ, ಸಂಸಾರದ-ಪೆಟ್ಟಿಗೆ, ಹನಿ-ಸೂಪೆರ್, ಶಿಖರದ-ಫಲಕ ಮತ್ತು ಮೆಲ್ಛಾವಣಿಗಳನ್ನು ಒಳಗೊಂಡಿವೆ. ಜೇನುಗೂಡುಗಳನ್ನು ಸಾಂಪ್ರದಾಯಕವಾಗಿ ಸೆದರ್, ಪೈನ್, ಅಥವಾ ಸಿಪ್ರೆಸ್ ಮರದಿಂದ ನಿರ್ಮಿಸಲಾಗುತ್ತದೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಚುಚುಮದ್ದಿನಿಂದ ಆಕಾರನೀಡಿದ ಪಟ್ಟನೆಯ ಪ್ಲಾಸ್ಟಿಕ್‌ಗಳ ಪ್ರಾಮುಖ್ಯತೆಯು ವೃದ್ಧಿಯಾಯಿತು.

ಜೇನುಗೂಡುಗಳು ರಾಣಿಹುಳುಗಳ ನಿಷೇಧಕಗಳನ್ನು ಹನಿಸೂಪೆರ್ಸ್ ಮತ್ತು ಸಂಸಾರದ-ಪೆಟ್ಟಿಗೆಯ ನಡುವೆ ಇರಿಸಿ, ಬಳಕೆಯ ಉದ್ದೆಶದಿಂದ ಜೇನುತುಪ್ಪ ಇರುವುದರ ನಂತರದ ಕೋಶದಲ್ಲಿ ರಾಣಿ ಜೇನುಹುಳು ಮೊಟ್ಟೆಗಳನ್ನು ಇಡುವಂತೆ ನೋಡಲಾಗುತ್ತದೆ. ಹಾಗು, 20ನೆಯ ಶತಮಾನದಲ್ಲಿ ಆಗಮಿಸಿದ ಸಣ್ಣಹುಳುಗಳ ತೊಂದರೆಯಿಂದ, ಜೇನುಗೂಡಿನ ಮಹಡಿಗಳನ್ನು ವರ್ಷದ ಕೆಲವು ಸಮಯಗಳಲ್ಲಿ (ಅಥವಾ ಪೂರ್ಣ ವರ್ಷದಲ್ಲಿ) ತಂತಿಯ ಮೆಷ್ (ಬಲೆ)ಯಿಂದ ಮತ್ತು ತಗೆಯಬಹುದಾದಂತಹ ಟ್ರೇಗಳಿಂದ ತುಂಬಿಸಲಾಗುತ್ತದೆ.

ಕ್ರಿಯಾತ್ಮಕ ಮತ್ತು ವಾಣಿಜ್ಯ ಜೇನುಸಾಕಣೆಯ ಆದಿ ಪರಿಶೋಧಕರು.

[ಬದಲಾಯಿಸಿ]

19ನೆಯ ಶತಮಾನವು ಜೇನು ಗೂಡುಗಳ ವಿನ್ಯಾಸ ಮತ್ತು ಉತ್ಪಾದನೆಯನ್ನು, ನಿರ್ವಹಣೆಯನ್ನು, ಸಂಗೋಪನೆಯನ್ನು, ಮತ್ತು ವಿಶೇಷ ಸಂಗೋಪನೆಯ ಮೂಲಕ ಶೇಖರಣೆಯ ಸುಧಾರಣೆ, ಜೇನುತುಪ್ಪವನ್ನು ಬೇರ್ಪಡಿಸುವಿಕೆ ಮತ್ತು ಮಾರಾಟಮಾಡುವಿಕೆಯನ್ನು ಪರಿಪೂರ್ಣಗೊಳಿಸಿದ ಪರಿವರ್ತನಕಾರರನ್ನು ಮತ್ತು ಶೋಧಕರನ್ನು ವ್ಯಾಪಕವಾಗಿ ಉತ್ಪತ್ತಿಮಾಡಿದೆ. ಈ ಪರಿವರ್ತನಕಾರರಲ್ಲಿ ಶ್ರೇಷ್ಠವಾದವರೆಂದರೆ:

ಜಾನ್ ಝಿಯರ್ಝನ್ , ಆಧುನಿಕ ಜೇನುನೊಣಗಳ ಜೀವಶಾಸ್ತ್ರ ಮತ್ತು ಜೇನುಸಾಕಣೆಯ ಪಿತಾಮಹರಾಗಿದ್ದರು. ಎಲ್ಲಾ ಅಧುನಿಕ ಜೇನು ಗೂಡುಗಳು ಇವರ ವಿನ್ಯಾಸದ ವರ್ಗಕ್ಕೆ ಸೇರಿದವು.

ಎಲ್. ಎಲ್. ಲಾಂಗ್ಸ್‌ಟ್ರೊತ್ , "ಅಮೆರಿಕಾದ ಜೇನುಸಾಕಣೆಯ ಪಿತೃ" ಎಂಬ ಗೌರವಕ್ಕೆ ಪಾತ್ರರಾದರು, ಲೊರೆಂಜೊ ಲೊರೈನ್ ಲಾಂಗ್ಸ್‌ಟ್ರೊತ್ ಗಿಂತಲೂ ಹೆಚ್ಚಾಗಿ ಬೇರೆ ಯಾರೂ ಆಧುನಿಕ ಜೇನುಸಾಕಣೆಯ ಪದ್ಧತಿಯನ್ನು ಪ್ರಭಾವಗೊಳಿಸಲಿಲ್ಲ. ಅವರ ಅತ್ಯುತ್ತಮ ಪುಸ್ತಕದಿ ಹೈವ್ ಆಂಡ್ ಹನಿ-ಬೀ 1853ರಲ್ಲಿ ಪ್ರಕಟಗೊಂಡಿತ್ತು.

ಮೊಸೆಸ್ ಕ್ವಿನ್‌ಬಿ ರನ್ನು,’ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಗಾಗ್ಗೆ ವಾಣಿಜ್ಯ ಜೇನುಸಾಕಣೆಯ ಪಿತೃ’ ಎಂದು ಸೂಚಿಸಲಾಗುತ್ತಿತ್ತು, ಇವರು ಮಿಸ್ಟೆರೀಸ್ ಆಫ್ ಬೀ-ಕೀಪಿಂಗ್ ಎಕ್ಸ್‌ಪ್ಲೇನ್ಡ್‌ ನ ಲೇಖಕರು.

ಅಮೋಸ್ ರೂಟ್ , ಸತತವಾಗಿ ಪರಿಶೋಧಿಸಿ ಮುದ್ರಣ ಗೊಳಿಸಿದ ಎ ಬಿ ಸಿ ಆಫ್ ಬೀ ಕಲ್ಚರ್‌ ನ ಲೇಖಕರು. ರೂಟ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜೇನುಗೂಡುಗಳ ಉತ್ಪಾದನೆ ಮತ್ತು ಜೇನುನೊಣದ-ಪ್ಯಾಕೆಜ್‌ಗಳ ವಿತರಣೆಯ ಆದಿಪರಿಶೋಧಕರಾಗಿದ್ದರು.

ಎ.ಜೆ. ಕೂಕ್ , ದಿ ಬೀ-ಕೀಪರ್ಸ್' ಗೈಡ್; ಅಥವಾ ಮ್ಯಾನ್ಯುಯಲ್ ಆಫ್ ದಿ ಅಪಿಯರಿ ನ ಲೇಖಕರು, 1876.

ಡಾ. ಸಿ.ಸಿ. ಮಿಲ್ಲೆರ್ ಜೇನುಸಾಕಣೆಯನ್ನು ಜೀವನೋಪಾಯವನ್ನಾಗಿ ಮಾಡಿಕೊಂಡ ಮೊದಲ ವಾಣಿಜ್ಯೋದ್ಯಮಿಗಳಲ್ಲಿ ಒಬ್ಬರು. 1878ರ ವೇಳೆಗೆ ಅವರು ಜೇನುಸಾಕಣೆಯನ್ನು ಅವರ ಏಕೈಕ ವ್ಯಾಪಾರ ಚಟುವಟಿಕೆಯನ್ನಾಗಿ ಮಾಡಿದರು. ಅವರ ಪುಸ್ತಕ, ಪಿಪ್ಟಿ ಯಿಯರ್ಸ್ ಅಮೋಂಗ್ ದಿ ಬೀಸ್ , ಅತ್ಯುತ್ತಮವಾಗಿ ಉಳಿಯಿತು ಮತ್ತು ಇಂದಿನ ಜೇನುನೊಣಗಳ ನಿರ್ವಹಣೆಯ ಮೆಲಿನ ಅವರ ಪ್ರಭಾವನ್ನು ಉಳಿಸಿತು.

ಇಟಲಿಯ ಮಿಲಿಟರಿ ಅಧಿಕಾರಿಯಾದ ಮಜೋರ್ ಫ್ರಾನ್ಸಿಸ್ಕೊ ದೆ ಹ್ರುಸ್ಚ್‌ಕಾ ಮಾಡಿದ ಮಹತ್ತರವಾದ ಶೋಧನೆಯು ವಾಣಿಜ್ಯ ಜೇನುತುಪ್ಪದ ಉದ್ಯಮವನ್ನು ಉಪಕ್ರಮಿಸಿತು. 1865ರಲ್ಲಿ ಅವರು ಕೇಂದ್ರದಿಂದ ದೂರಕ್ಕೆ ಚಿಮ್ಮುವ ಶಕ್ತಿಯ ಮೂಲಕ ಜೇನು ಹುಟ್ಟುಗಳಿಂದ ಜೇನುತುಪ್ಪವನ್ನು ಬೇರ್ಪಡಿಸುವ ಸರಳ ಯಂತ್ರವನ್ನು ಕಂಡುಹಿಡಿದರು. ಅವರ ಮೂಲ ಕಲ್ಫನೆಯು ಜೇನು ಹುಟ್ಟುಗಳಿಗೆ ಆಧಾರವಾಗಿ ಲೋಹದ ಚೌಕಟ್ಟನ್ನು ನಿರ್ಮಿಸಿ ಮತ್ತು ನಂತರ ಜೇನುತುಪ್ಪವನ್ನು ಸಂಗ್ರಹಿಸುವ ಪಾತ್ರೆಯ ಒಳಗೆ ಗಿರ್ರನೆ ತಿರುಗಿಸಿ, ಆಗ ಕೇಂದ್ರದಿಂದ ದೂರಕ್ಕೆ ಚಿಮ್ಮುವ ಶಕ್ತಿಯಿಂದ ಹೊರ ಚಿಮ್ಮುವ ಜೇನುತುಪ್ಪವನ್ನು ಸಂಗ್ರಹಿಸುವಂತದಾಗಿತ್ತು. ಇದರಿಂದ ಖಾಲಿಯಾದ ಜೇನು ಹುಟ್ಟುಗಳನ್ನು ಯಾವುದೇ ಹಾನಿಗೊಳಗಾಗದಂತೆ ಜೇನು ಗೂಡುಗಳಿಗೆ ಮರಳಿ ಸೇರಿಸಬಹುದಾಗಿದೆ - ಇದು ಜೇನುನೊಣಗಳಿಗೆ ದೊಡ್ಡ ಪ್ರಮಾಣದ ಕೆಲಸವನ್ನು ಕಡಿತಗೊಳಿಸುತ್ತದೆ, ಮತ್ತು ಸಮಯ ಮತ್ತು ಮೂಲಪದಾರ್ಥಗಳನ್ನು ಉಳಿಸುತ್ತದೆ. ಈ ಏಕೈಕ ಸಂಶೊಧನೆಯು ಜೇನುತುಪ್ಪದ ಫಸಲಿನ ಸಂಗ್ರಹಣೆಯ ದಕ್ಷತೆಯನ್ನು ಮಹತ್ತರವಾಗಿ ಸುಧಾರಿಸಿದೆ ಮತ್ತು ಆಧುನಿಕ ಜೇನುತುಪ್ಪದ ಉದ್ದಿಮೆಯನ್ನು ಉಪಕ್ರಮಿಸಿದೆ.

ಯುಕೆನಲ್ಲಿ 20ನೆಯ ಶತಮಾನದ ಆರಂಭದಲ್ಲಿ ಕೆಲವು ಜನರಿಂದ ಕ್ರಿಯಾತ್ಮಕ ಜೇನುಸಾಕಣೆಯು ಅಗ್ರಸ್ಥಾನದಲ್ಲಿತ್ತು, ಉತ್ಕೃಷ್ಟವಾಗಿ ಬ್ರದೆರ್ ಆಡಮ್ ಮತ್ತು ಅವರ ಬಕ್‌ಫಾಸ್ಟ್ ಬೀ ಮತ್ತು ’ಹನಿ ಪ್ರೊಡಕ್ಷನ್ ಇನ್ ದಿ ಬ್ರಿಟಿಷ್ ಇಸ್‌ಲೆಸ್’ ಸೇರಿ ಅನೇಕ ಪುಸ್ತಕಗಳ ಲೇಖಕರು ಮತ್ತು ಮಾನ್ಲೆ ಚೌಕಟ್ಟಿನ ಸಂಶೋಧಕರಾದ ಆರ್.ಒ.ಬಿ. ಮಾನ್ಲೆ , ಇನ್ನೂ ಸಹ ಯುಕೆನಲ್ಲಿ ಸರ್ವವ್ಯಾಪಕವಾಗಿ ಜನಪ್ರಿಯವಾಗಿದ್ದಾರೆ.

ಇತರ ಪ್ರಮುಖ ಬ್ರಿಟಿಷ್ ಆದಿ ಸಂಶೋಧಕರೆಂದರೆ ವಿಲಿಯಮ್ ಹೆರೋಡ್-ಹೆಂಪ್ಸಾಲ್ ಮತ್ತು ಗಲೆ.

ಸಾಂಪ್ರದಾಯಕ ಜೇನುಸಾಕಣೆ

[ಬದಲಾಯಿಸಿ]

ಸ್ಥಿರ ಜೇನು ಹುಟ್ಟಿನ ಜೇನುಗೂಡುಗಳು

[ಬದಲಾಯಿಸಿ]
ಲಿಥುಯಾನಿಯಾದಲ್ಲಿನ ಸ್ಟ್ರಿಪೆಯಿಕಿಯಾಯ್‌ನಲ್ಲಿರುವ ಮರದ ಜೇನುಗೂಡುಗಳು

ಸ್ಥಿರ ಜೇನು ಹುಟ್ಟಿನ ಜೇನುಗೂಡಿನಲ್ಲಿ ಜೇನು ಹುಟ್ಟು ಸ್ಥಿರವಾಗಿದ್ದು, ಇದನ್ನು ತಗೆಯಲು ಸಾಧ್ಯವಾಗುವುದಿಲ್ಲ ಅಥವಾ ನಿರ್ವಹಣೆ ಮಾಡಲು ಅಥವಾ ಜೇನು ಹುಟ್ಟನ್ನು ಸಂಪೂರ್ಣವಾಗಿ ನಾಶಮಾಡದೆ ಜೇನುತುಪ್ಪದ ಸಂಗ್ರಹಣೆಯನ್ನು ಮಾಡಲು ಸಾಧ್ಯವಿಲ್ಲ. ಇದಕ್ಕೆ ಮರದ ದಿಮ್ಮಿ, ದುಂಡನೆಯ ಮರದ ಪೆಟ್ಟಿಗೆ ಅಥವಾ ಜೇಡಿಮಣ್ಣಿನ ಮಡಿಕೆಯಂತಹ ಯಾವುದೆ ಟೊಳ್ಳು ರಚನೆಯನ್ನು ಉಪಯೋಗಿಸಬಹುದಾಗಿದೆ. ಬಹುತೇಕ ಪ್ರದೇಶಗಳಲ್ಲಿ ಸ್ಥಿರ ಜೇನು ಹುಟ್ಟಿನ ಜೇನುಗೂಡುಗಳನ್ನು ಹೆಚ್ಚುಕಾಲ ಬಳಕೆಯಲ್ಲಿ ಉಳಿದಿಲ್ಲ, ಮತ್ತು ವರೊರ ಮತ್ತು ಅಮೆರಿಕಾದ ಪೋಲ್‌ಬ್ರೂಡ್‌ ಜೇನುನೊಣಗಳ ರೋಗಗಳಿಗೆ ತಪಾಸಣೆ ಅಗತ್ಯವಿರುವ ಪ್ರದೇಶಗಳಲ್ಲಿ ಇವು ಕಾನೂನು ಭಾಹಿರವಾಗಿವೆ.

ಆಧುನಿಕ ಜೇನುಸಾಕಣೆ

[ಬದಲಾಯಿಸಿ]

ಚಲಿಸಲಾಗುವ ಚೌಕಟ್ಟಿನ ಜೇನುಗೂಡುಗಳು

[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಲಾಂಗ್ಸ್‌ಟ್ರೊತ್ ಜೇನುಗೂಡನ್ನು ಸಾಮಾನ್ಯವಾಗಿ ಉಪಯೋಗಿಸಲಾಗುತ್ತಿತ್ತು. ಲಾಂಗ್ಸ್‌ಟ್ರೊತ್ ಚಲಿಸಲಾಗುವ ಚೌಕಗಳನ್ನು ಒಳಗೊಂಡ ಮೇಲಿನಿಂದ ತೆರೆಯಲಾಗುವ ಮೊಟ್ಟಮೊದಲ ಸಾಧಿತ ಜೇನುಗೂಡಾಗಿತ್ತು, ಮತ್ತು ಜೇನುಗೂಡಿನ ಇತರ ವಿನ್ಯಾಸಗಳೆಲ್ಲವನ್ನೂ ಇದರ ಆಧಾರದಮೇಲೆ ಮಾಡಲಾಗಿದೆ. ಏನೇ ಆಗಲಿ ಲಾಂಗ್ಸ್‌ಟ್ರೊತ್ ಜೇನುಗೂಡು ಜಾನ್ ಝಿಯರ್ಝನ್’ರ ಪಾಲಿಷ್ ಜೇನುಗೂಡಿನ ವಿನ್ಯಾಸದ ವರ್ಗದಿಂದ ಬಂದದ್ದಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ, ಬ್ರಿಟಿಷ್ ನ್ಯಾಷನಲ್ ಜೇನುಗೂಡನ್ನು ಅತ್ಯಂತ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ, ಇದು ಹಾಫ್‌ಮನ್, ಬ್ರಿಟಿಷ್ ಸ್ಟ್ಯಾಂಡರ್ಡ್, ಅಥವಾ ಜನಪ್ರಿಯ ಮನ್ಲೆ ಚೌಕಗಳನ್ನು ಒಳಗೊಳ್ಳುವಂತಹದಾಗಿದೆ, ಆದರೆ ಇತರ ಪ್ರಕಾರದ ಜೇನುಗೂಡುಗಳನ್ನು (ಸ್ಮಿಥ್, ಕಮರ್ಷಿಯಲ್ ಮತು ಅಪರೂಪವಾಗಿ ಲಾಂಗ್ಸ್‌ಟ್ರೊತ್) ಕಾಣುವಂತಹದು ಅಸಾಮಾನ್ಯವೇನಲ್ಲ. ಒಣಹುಲ್ಲಿನ ಸ್ಕೆಪ್‌ (ದುಂಡನೆಯ ಮರದ ಪೆಟ್ಟಿಗೆ)ಗಳು, ಟೊಳ್ಳು ಮರದ ದಿಮ್ಮಿಯ ಜೇನುಗೂಡುಗಳು, ಮತ್ತು ಚೌಕಗಳನ್ನೊಳಗೊಳ್ಳದ ಪೆಟ್ಟಿಗೆಯ ಜೇನುಗೂಡುಗಳು ಈಗ ಬಹುತೇಕ ಯುಎಸ್ ಸ್ಟೇಟ್ಸ್‌ಗಳಲ್ಲಿ ಕಾನೂನು ಬಾಹಿರವಾಗಿವೆ, ಜೇನು ಹುಟ್ಟು ಮತ್ತು ಜೇನುಹುಳುಗಳ ಸಂಸಾರದ ರೋಗತಪಾಸಣೆ ಸಡೆಸಲು ಸಾಧ್ಯವಾಗದೇ ಇರುವುದೇ ಇದಕ್ಕೆ ಕಾರಣ. ಅದಾಗ್ಯೂ, ಯುಕೆನಲ್ಲಿ ಹವ್ಯಾಸಗಾರರಿಂದ ಸ್ಟ್ಯಾಂಡರ್ಡ್ ಜೇನುಗೂಡುಗಳಿಗೆ ಸ್ಥಳಂತರಿಸುವ ಮೊದಲು ಜೇನುನೊಣಗಳ ಜಂಗುಳಿಯನ್ನು ಸಂಗ್ರಹಿಸಲು ಈಗಲೂ ಒಣಹುಲ್ಲಿನ ದುಂಡಗಿನ ಗೂಡುಗಳನ್ನು ಉಪಯೋಗಿಸಲಾಗುತ್ತಿದೆ.

ಮೇಲೆ ಅಡ್ಡ ಪಟ್ಟಿ ಹೊಂದಿದ ಜೇನುಗೂಡುಗಳು

[ಬದಲಾಯಿಸಿ]

ಕೆಲವು ಹವ್ಯಾಸದ ಜೇನುಸಾಕಣೆದಾರರಿಂದ ಆಫ್ರಿಕಾದಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಮೇಲೆ ಅಡ್ಡ ಪಟ್ಟಿ ಹೊಂದಿದ ಜೇನುಗೂಡುಗಳನ್ನು ಉಪಯೋಗಿಸಲಾಗುತ್ತಿದೆ. ಮೇಲೆ ಅಡ್ಡ ಪಟ್ಟಿ ಹೊಂದಿದ ಜೇನುಗೂಡುಗಳನ್ನು ಮೂಲತಃ ಗ್ರೀಸ್ ಮತ್ತು ವಿಯಟ್ನಮ್ ಎರಡೂ ಪ್ರದೇಶಗಳಲ್ಲಿ ಸಾಂಪ್ರದಾಯಕ ಜೇನುಸಾಕಣೆಯ ಪದ್ಧತಿಯನ್ನಾಗಿ ಉಪಯೋಗಿಸಲಾಗಿತ್ತು[೧೩]. ಈ ಜೇನುಗೂಡುಗಳು ಚೌಕಗಳನ್ನು ಹೊಂದಿಲ್ಲ ಮತ್ತು ಲಾಂಗ್ಸ್‌ಟ್ರೊತ್‌ ಜೇನುಗೂಡುಗಳಲ್ಲಿನ ಮಾದರಿಯಲ್ಲಿ, ಜೇನುತುಪ್ಪವನ್ನು ಹೊರತೆಗೆದ ನಂತರ ಜೇನು ಹುಟ್ಟುಗಳನ್ನು ಜೇನುಗೂಡುಗಳಿಗೆ ಮರಳಿ ಸೇರಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ, ಮೇಲೆ ಅಡ್ಡ ಪಟ್ಟಿ ಹೊಂದಿದ ಜೇನುಗೂಡುಗಳಲ್ಲಿ ಜೇನುತುಪ್ಪದ ಉತ್ಪಾದನೆಯನ್ನು, ಲಾಂಗ್ಸ್‌ಟ್ರೊತ್‌ ಜೇನುಗೂಡುಗಳಿಗಿಂತ ಕೇವಲ 20% ಮಾಡಲಾಗುತ್ತದೆ, ಆದರೆ ಇದರಲ್ಲಿ ಆರಂಭದ ವೆಚ್ಚ ಮತ್ತು ಸಲಕರಣೆಗಳ ಅವಶ್ಯಕತೆಯು ಅತೀ ಕಡಿಮೆ ಪ್ರಮಾಣದಲ್ಲಿರುತ್ತದೆ. ಮೇಲೆ ಅಡ್ಡ ಪಟ್ಟಿ ಹೊಂದಿದ ಜೇನುಗೂಡುಗಳು ಸಹ ಜೇನುನೊಣಗಳೊಂದಿಗೆ ಪರಸ್ಪರ ವರ್ತಿಸುವಲ್ಲಿ ಕೆಲವು ಅನುಕೂಲಗಳನ್ನು ಹೊಂದಿವೆ ಮತ್ತು ಇವುಗಳಲ್ಲಿ ಮೇಲೆತ್ತಬೇಕಾದ ಭಾರವು ಮಹತ್ತರವಾಗಿ ಕಡಿಮೆಯಾಗಿತ್ತದೆ. ಅಭಿವೃದ್ಧಿಹೊಂದುವ ದೇಶಗಳಾದ ಆಫ್ರಿಕಾ ಮತ್ತು ಏಷಿಯ ದೇಶಗಳಲ್ಲಿ, 'ಬೀಸ್ ಫರ್ ಡೆವಲಪ್‌ಮೆಂಟ್' ಕಾರ್ಯಕ್ರಮದ ಪರಿಣಾಮವಾಗಿ ಮೇಲೆ ಅಡ್ಡ ಪಟ್ಟಿ ಹೊಂದಿದ ಜೇನುಗೂಡುಗಳು ವ್ಯಾಪಕವಾಗಿ ಉಪಯೋಗಿಸಲ್ಫಟ್ಟಿದ್ದವು.[೧೪]

ರಕ್ಷಣಾತ್ಮಕ ಉಡುಪು

[ಬದಲಾಯಿಸಿ]
ಕುಟುಕಿನಿಂದ ತಪ್ಪಿಸಿಕೊಳ್ಳಲು ಜೇನುಸಾಕಣೆದಾರರು ತಮ್ಮನ್ನು ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸಿಕೊಳ್ಳುವುದರ ಮೂಲಕ ರಕ್ಷಿಸಿಕೊಳ್ಳುತ್ತಾರೆ.

ಜೇನುನೊಣಗಳ ತಿಳಿವಳಿಕೆಯಲ್ಲಿ ರಕ್ಷಣೆಯು ಆದ್ಯತೆಯಲ್ಲಿರುವುದರಿಂದ, ಬಹುತೇಕ ಜೇನುಸಾಕಣೆದಾರರು ರಕ್ಷಣಾತ್ಮಕ ಉಡುಪುಗಳನ್ನು ಧರಿಸುತ್ತಾರೆ. ನೊವೀಸ್ ಜೇನುಸಾಕಣೆದಾರರು ಸಾಮಾನ್ಯವಾಗಿ ಹಸ್ತತ್ರಾಣಗಳನ್ನು ಮತ್ತು ತಲೆಗವುಸು ಮಾದರಿಯ ಉಡುಪು ಅಥವಾ ಟೋಪಿ ಮತ್ತು ಮುಸುಕನ್ನು ಧರಿಸುತ್ತಾರೆ. ಅನುಭವಶೀಲ ಜೇನುಸಾಕಣೆದಾರರು ಕೆಲವುಸಲ ಹಸ್ತತ್ರಾಣಗಳನ್ನು ಧರಿಸದೇ ಇರಲು ನಿರ್ಧರಿಸುತ್ತಾರೆ, ಇದಕ್ಕೆ ಕಾರಣ ಇವು ಅತೀ ಸೂಕ್ಷ್ಮ ಕೈಚಳಕಕ್ಕೆ ಅಡ್ಡಿಯಾಗುತ್ತವೆ. ಮುಖ ಮತ್ತು ಕುತ್ತಿಗೆ ಇವೆರಡು ರಕ್ಷಿಸಿಕೊಳ್ಳಬೇಕಾದ ಅತೀ ಮುಖ್ಯ ಭಾಗಗಳಾಗಿದ್ದು, ಬಹುತೇಕ ಜೇನುಸಾಕಣೆದಾರರು ಕನಿಷ್ಟ ಪಕ್ಷ ಮುಸುಕನ್ನು ಧರಿಸುತ್ತಾರೆ.

ಇದು ಯಾವುದೇ ಜೇನುಸಾಕಣೆದಾರನಿಗೆ ತೆರೆದ ಜೇನುಗೂಡಿನಿಂದ ಹಾರುವ ಆಕ್ರಮಣಶೀಲ ಜೇನುನೊಣಗಳಿಂದ ಆಹ್ಲಾದಕರ ಅನುಭವವನ್ನು ನೀಡುವುದಿಲ್ಲ, ಆದ್ದರಿಂದ ಇದು ದಯಾಳು ಜೇನುನೊಣಗಳ ಸಮೂಹವನ್ನು ಹೊಂದುವಿಕೆಯನ್ನು ಸಾಫಲ್ಯಪಡಿಸುತ್ತದೆ.

ಆಕ್ರಮಣಶೀಲ ಜೇನುನೊಣಗಳು ಉಸಿರಾಟಕ್ಕೆ ಹೆಚ್ಚು ಆಕರ್ಷಿತವಾಗುತ್ತವೆ, ಆದ್ದರಿಂದ ಬೇರೆಕಡೆಗಿಂತ ಮುಖದ ಮೇಲಿನ ಕುಟುಕವು ಹೆಚ್ಚಿನ ನೋವಿಗೆ ಮತ್ತು ಊತಕ್ಕೆ ಕಾರಣವಾಗುತ್ತದೆ, ಆದರೆ ಬೆತ್ತಲೆ ಕೈ ಮೇಲಿನ ಕುಟುಕದ ಕೊಂಡಿಯನ್ನು ಜೂಡಲೇ ಉಗುರುನಿಂದ ತೆಗೆದು ವಿಷ ಒಳಸೇರುವುದನ್ನು ತಡೆಯಬಹುದಾಗಿದೆ.

ಸಾಮಾನ್ಯವಾಗಿ ರಕ್ಷಣಾತ್ಮಕ ಉಡುಪುಗಳು ತಿಳಿ ಬಣ್ಣದಲ್ಲಿರುತ್ತವೆ (ಆದರೆ ವರ್ಣ ರಂಜಿತವಾಗಲ್ಲ) ಮತ್ತು ಮೃಧುವಾದ ಬಟ್ಟೆಯವಾಗಿರುತ್ತವೆ. ಇದು ಗಾಢಬಣ್ಣದ ಮತ್ತು ರೋಮದಿಂದ ಕೂಡಿರುವ ಸ್ವಾಭಾವಿಕ ಪರಭಕ್ಷಕ ಸಮೂಹದಿಂದ (ಕರಡಿಗಳು, ಸ್ಕಂಕ್ಸ್, ಮುಂತಾದವು) ಗರಿಷ್ಟ ತಾರತಮ್ಯವನ್ನು ಒದಗಿಸುತ್ತದೆ.

ಪ್ಯಾಬ್ರಿಕ ಉಡುಪುಗಳಲ್ಲಿ ಸಿಕ್ಕ ಕುಟುಕುವ ಕೊಂಡಿಗಳು ಎಚ್ಚರಿಕೆಯ ಫೆರೊಮೊನ್‌ (ಕೀಟಗಳಲ್ಲಿ ಹುಪ್ತವಾಗಿತುವ ಒಂದು ರಾಸಾಯನಿಕ ದ್ರವ) ಹೊರಚಿಮ್ಮಲು ಮುಂದುವರೆಸುತ್ತವೆ, ಆಗ ಇದು ಆಕ್ರಮಣಕಾರಿ ಚಟುವಟಿಕೆಗಳನ್ನು ಇನ್ನೂ ಹೆಚ್ಚಾಗುವಂತೆ ಮಾಡುತ್ತದೆ ಇದರಿಂದ ಉಳಿದ ಕುಟುಕಗಳು ದಾಳಿ ಮಾಡುತ್ತವೆ. ಉಡುಪುಗಳನ್ನು ಕ್ರಮಬದ್ದವಾಗಿ ಶುಭ್ರಗೊಳಿಸುವುದರಿಂದ, ಮತ್ತು ಕವಚ ಹೊಂದಿದ ಕೈಗಳನ್ನು ವಿನೆಗರ್‌ನಲ್ಲಿ ತೊಳೆಯುವುದರಿಂದ ಈ ಆಕರ್ಷಣೆಯನ್ನು ಕಡಿಮೆಗೊಳಿಸಬಹುದಾಗಿದೆ.

ಸೇದುವ ಸಾಧನ

[ಬದಲಾಯಿಸಿ]
ಬೀ ಸ್ಮೋಕರ್

ಹೊಗೆಯು ಜೇನುಸಾಕಣೆದಾರರ ಮೂರನೇ ಪಂಕ್ತಿಯ ರಕ್ಷಣೆಯ ಸಾಧನ. ಬಹುತೇಕ ಜೇನುಸಾಕಣೆದಾರರು "ಸೇದುವ ಸಾಧನವನ್ನು" ಉಪಯೋಗಿಸುತ್ತಾರೆ — ಇದು ವಿವಿಧ ಇಂದನಗಳ ಅಸಂಪೂರ್ಣ ದಹನದಿಂದ ಹೊಗೆಯನ್ನು ಉತ್ಪತ್ತಿಮಾಡಲು ವಿನ್ಯಾಸಿಸಿದ ಸಾಧನವಾಗಿದೆ. ಹೊಗೆಯು ಜೇನುನೊಣಗಳನ್ನು ಪ್ರಸನ್ನಗೊಳಿಸುತ್ತದೆ; ಇದು ಬೆಂಕಿಯ ಕಾರಣದಿಂದ ಸಂಭವನೀಯ ಜೇನುಗೂಡಿನ ಪರಿತ್ಯಾಗದ ಪೂರ್ವಾಲೋಚನೆಯಿಂದ ಮೇಯಿಸುವ ಪ್ರತಿಕ್ರಿಯೆಯನ್ನು ಆರಂಭಿಸುವಂತೆ ಮಾಡುತ್ತದೆ. ಸೂಕ್ಷ್ಮ ಪರೀಕ್ಷೆಯಲ್ಲಿ ಜೇನುನೊಣಗಳು ಮಾಡುವ ಗದ್ದಲವನ್ನು ಅಥವಾ ಕಾವಲುಗಾರ ಜೇನುನೊಣಗಳಿಂದ ಬಿಡುಗಡೆಯಾದ ಎಚ್ಚರಿಕೆಯ ಫೆರೊಮೊನ್‌‌ನ್ನು ಸಹ ಹೊಗೆಯು ಮುಚ್ಚಿಹಾಕುತ್ತದೆ. ಉದ್ಭವಿಸುವ ಗೊಂದಲವು ಜೇನುಸಾಕಣೆದಾರ ಯಾವುದೇ ರಕ್ಷಣಾತ್ಮಕ ಪ್ರತಿಕ್ರಿಯೆಯನ್ನು ಪ್ರಚೋದಿಸದೇ ಜೇನುಗೂಡನ್ನು ತೆರೆದು ತನ್ನ ಕಾರ್ಯವನ್ನು ನೆರವೇರಿಸಲು ಸಹಾಯವಾಗುತ್ತದೆ. ಇದರ ಜೊತೆಗೆ, ಜೇನುನೊಣವು ಜೇನುತುಪ್ಪವನ್ನು ಸೇವಿಸಿದಾಗ ಅದರ ಹೊಟ್ಟೆಯು ಬಾತಿಕೊಳ್ಳುತ್ತದೆ, ಇದರಿಂದ ಇದು ಕುಟುಕಲು ಬೇಕಾದಲ ಚಲನೆಯನ್ನು ಮಾಡಲು ಕಷ್ಟವಾಗುತ್ತದೆ, ಅದಾಗ್ಯೂ ಇದನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಿಲ್ಲ.

ಮುಕರಿದ ಜೇನುನೊಣಗಳೊಂದಿಗೆ ಹೊಗೆಯು ಪ್ರಶ್ನಾರ್ಥಕ ಉಪಯೋಗವಾಗುತ್ತದೆ, ಇದಕ್ಕೆ ಕಾರಣ ಮುಕರಿದ ಜೇನುನೊಣಗಳು ಪ್ರತಿಕ್ರಿಯೆಯಾಗಿ ಒದಗಿಸಲು ಜೇನುತುಪ್ಪದ ಶೇಖರಣೆಯನ್ನು ಹೊಂದಿರುವುದಿಲ್ಲ. ಸಾಮಾನ್ಯವಾಗಿ ಮುಕರಿದ ಜೇನುನೊಣಗಳು ರಕ್ಷಿಸುವ ಯಾವುದೇ ಶೇಖರಣೆಯನ್ನು ಹೊಂದಿರುವುದಿಲ್ಲವಾದ್ದರಿಂದ, ಅವು ಕಡಿಮೆ ರಕ್ಷಣಾರ್ಥಕವಾಗಿರುತ್ತವೆ, ಮತ್ತು ನವ ಹಿಂಡು ಜೇನುಗೂಡಿನಿಂದ ಚೆನ್ನಾಗಿ ಉಣಿಸಲ್ಪಟ್ಟಿರುತ್ತದೆ, ಆದ್ದರಿಂದ ಇಲ್ಲಿ ಹೊಗೆಯ ಅವಶ್ಯಕತೆ ಇರುವುದಿಲ್ಲ.

ಸೇದುವ ಸಾಧನದಲ್ಲಿ ಸ್ವಾಭಾವಿಕವಾದ ಮತ್ತು ಅಪಾಯಕಾರಿ ಪದಾರ್ಥಗಳಿಂದ ಕಲ್ಮಶಗೊಳ್ಳದ ಯಾವುದೇ ಉರುವಲುಗಳನ್ನು ಉಪಯೋಗಿಸಬಹುದಾಗಿದೆ. ಈ ಉರುವಲುಗಳಲ್ಲಿ ಹೆಸ್ಸಿಯನ್, ಹುರಿಮಾಡಿದ ನೂಲು, ಗೋಣಿತಾಟು, ಪೈನ್ ಮರದ ಎಲೆಗಳು, ಸುಕ್ಕುಗಟ್ಟಿದ ರಟ್ಟು, ಮತ್ತು ಕೆಲಕ್ಕೆ ಬಾರದ ಅಥವಾ ಒರಟು ಮರದ ತುಂಡುಗಳು ಸೇರಿವೆ. ಭಾರತೀಯ ಜೇನುಸಾಕಣೆದಾರರು, ಅದರಲ್ಲೂ ಮುಖ್ಯವಾಗಿ ಕೇರಳದಲ್ಲಿ, ಕೂಡಲೇ ದೊರೆಯುವ, ಅನಪಾಯಕಾರಿ, ಮತ್ತು ಕಡಿಮೆ ವೆಚ್ಚದ ತೆಂಗಿನಮರದ ನಾರುಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಜೇನುಸಾಕಣೆಯ ಸಾಮಗ್ರಿಗಳನ್ನು ಒದಗಿಸುವ ಕೆಲವು ಮೂಲಗಳು ತಿರುಳನ್ನು ಹೊಂದಿದ ಕಾಗದ ಮತ್ತು ಮುದ್ದೆಮಾಡಿದ ಹತ್ತಿಯಂತಹ ವಾಣಿಜ್ಯ ಉರುವಲುಗಳನ್ನು ಅಥವಾ ಹೊಗೆಯ ಎರೊಸೊಲ್ ಕೇನುಗಳನ್ನು ಸಹ ಮಾರಾಟಮಾಡುತ್ತವೆ. ಇತರ ಜೇನುಸಾಕಣೆದಾರರು ಸುಮಕ್ ಸಸಿಯನ್ನು ಉರುವಲನ್ನಾಗಿ ಉಪಯೋಗಿಸುತ್ತಾರೆ, ಇದಕ್ಕೆ ಕಾರಣ ಇದು ದಟ್ಟವಾದ ಹೊಗೆಯನ್ನು ಹೊರಹಾಕುತ್ತದೆ ಮತ್ತು ಯಾವುದೇ ವಾಸನೆಯನ್ನು ಹೊಂದಿರುವುದಿಲ್ಲ.

ಕೆಲವು ಜೇನುಸಾಕಣೆದಾರರು, ಸುರಕ್ಷಿತವಾಗಿ, ಹೆಚ್ಚು ಅನುಕೂಲವಾಗಿ, ಪರ್ಯಾಯವಾಗಿ "ದ್ರವರೂಪದ ಹೊಗೆಯನ್ನು" ಉಪಯೋಗಿಸುತ್ತಾರೆ. ಇದು ಒಂದು ನೀರು ಆಧಾರಿತ ದ್ರಾವಣವಾಗಿದ್ದು ಇದನ್ನು ಸಿಂಪಡಿಸುವ ಪ್ಲಾಸ್ಟಿಕ್ ಸೀಸೆಯಿಂದ ಜೇನುನೊಣಗಳಮೇಲೆ ಸಿಂಪಡಿಸಲಾಗುತ್ತದೆ.

ಕುಟುಕುಗಳ ಪರಿಣಾಮಗಳು ಮತ್ತು ರಕ್ಷಣಾತ್ಮಕ ಕ್ರಮಗಳು

[ಬದಲಾಯಿಸಿ]

ಕೆಲವು ಜೇನುಸಾಕಣೆದಾರರು ತಾವು ಹೆಚ್ಚು ಹೆಚ್ಚು ಕಚ್ಚಿಸಿಕೊಂಡಷ್ಟೂ, ಪ್ರತಿಯೊಂದು ಕುಟುಕದಿಂದ ಆಗುವ ತೊಂದರೆಯು ಕಡಿಮೆಯಾಗುತ್ತದೆ ಎಂದು ನಂಬುತ್ತಾರೆ, ಮತ್ತು ಜೇನುಸಾಕಣೆದಾರರ ರಕ್ಷಣೆಗೆ ಪ್ರತಿಯೊಂದು ಋತುವಿನಲ್ಲೂ ಕೆಲವುಸಲ ಕಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂಬುದನ್ನೂ ಅವರು ಪರಿಗಣಿಸುತ್ತಾರೆ. ಜೇನುಸಾಕನೆದಾರರು ಹೆಚ್ಚು ಪರಿಣಾಮಕಾರಿ ಪ್ರತಿವಿಷಗಳನ್ನು (ಮುಖ್ಯವಾಗಿ IgG) ತಗೆದುಕೊಳ್ಳುತ್ತಾರೆ, ಇದು ಜೇನುನೊಣದ ವಿಷ, ಫೋಸ್‌ಫೊಲಿಪೇಸ್ ಎ2 (ಪಿಎಲ್‌ಎ) ವಿರುದ್ಧ ಪ್ರತಿಕ್ರಿಯಿಸುತ್ತದೆ. ಪ್ರತಿವಿಷಗಳು ಪದೇ ಪದೇ ಸಂಭವಿಸುವ ಜೇನುನೊಣದ ಕುಟುಕಗಳೊಂದಿಗೆ ಸಹ ಸಂಬಂಧ ಹೊಂದುತ್ತವೆ.

ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದರಿಂದ ಸಹ ಜೇನುನೊಣಗಳ ಕುಟುಕದಿಂದ ವಿಷ ದೇಹವನ್ನು ಪ್ರವೇಶಿಸದಂತೆ ತಡೆಯಬಹುದಾಗಿದೆ ಮತ್ತು ನಂತರ ಈ ಉಡುಪುಗಳ ಮೇಲಿನ ಕುಟುಕದ ಕೊಂಡಿಗಳನ್ನು ಮತ್ತು ವಿಷದ ಕೋಶಗಳನ್ನು ಸರಳವಾಗಿ ಎಳೆಯುವುದರ ಮೂಲಕ ತೆಗೆಯಬಹುದಾಗಿದೆ.

ನೈಸರ್ಗಿಕ ಜೇನುಸಾಕಣೆ

[ಬದಲಾಯಿಸಿ]

ಪ್ರಸ್ತುತ ಕ್ರಮವು ಜೇನುಸಾಕಣೆಯಲ್ಲಿ ರಾಸಾಯನಿಕಗಳನ್ನು ತ್ಯಜಿಸುತ್ತದೆ ಮತ್ತು ಜೇನುನೊಣಗಳು ಅಗತ್ಯವಾಗಿ ತಮ್ಮನ್ನು ತಾವೇ ಅಗೌರವಿಸುವಂತೆ ಮಾಡುವುದರ ಮೂಲಕ ಅಸ್ತವ್ಯಸ್ತವಾದ ಸಮೂಹವನ್ನು ಅತ್ಯಂತ ಪ್ರಯೋಜನೀಯವಾಗಿ ಒಲಿಸಿಕೊಳ್ಳಬಹುದು ಎಂದು ಭಾವಿಸುತ್ತದೆ. ಫಸಲಿನ ಸಿಂಪಡಿಸುವಿಕೆ, ಕೃತಕ ಪರಿಸ್ಥಿತಿಗಳಲ್ಲಿ ಜೇನುನೊಣಗಳು ವಾಣಿಜ್ಯ ಬೆಳೆಯ ಪರಾಗಸ್ಪರ್ಶಕ್ಕಾಗಿ ಸಾವಿರಾರು ಮೈಲಿಗಳಷ್ಟು ದೂರ ತೆರಳುವಂತೆ ಮಾಡುವುದು, ರಾಣಿ ಜೇನುನೊಣಗಳು ಕೃತಕವಾಗಿ ಗರ್ಭದರಿಸುವಂತೆ ಮಾಡುವುದು, ಮತ್ತು ಸಕ್ಕರೆಯ ನೀರನ್ನು ಸೇವಿಸುವಂತೆ ಮಾಡುವುದು, ಈ ಎಲ್ಲವೂ ಜೇನುನೊಣಗಳ ಸಂಯೋಜನೆಯ ಸಾರ್ವತ್ರಿಕ ದುರ್ಭಲಕ್ಕೆ ಕಾರಣವಾಗುತ್ತವೆ ಎಂದು ನಂಬಲಾಗಿದೆ.

ನಗರದ ಅಥವಾ ಹಿತ್ತಲಿನ ಜೇನುಸಾಕಣೆ

[ಬದಲಾಯಿಸಿ]

ನೈಸರ್ಗಿಕ ಜೇನುಸಾಕಣೆಗೆ ಸಂಬಂಧಪಟ್ಟು, ನಗರದ ಜೇನುಸಾಕಣೆಯು, ಕಡಿಮೆ ಔದ್ಯೋಗೀಕರಣಕ್ಕೆ ಮರಳಿ ನಗರದ ಉದ್ಯಾನವನಗಳಿಂದ ಪರಾಗಸ್ಪರ್ಶ ಹೊಂದುವ ಅಲ್ಪ ಪ್ರಮಾಣದ ಸಮೂಹದಿಂದ ಜೇನುತುಪ್ಪವನ್ನು ಉತ್ಪತ್ತಿ ಮಾಡುವ ಒಂದು ಪ್ರಯತ್ನವಾಗಿದೆ. 2000ರಲ್ಲಿ ನಗರದ ಜೇನುಕೃಷಿಯು ಪುನರುಜ್ಜೀವನಕ್ಕೆ ಒಳಗಾಗಿತ್ತು. ಜೇನುಸಾಕಣೆಯ ನಗರಗಳಲ್ಲಿ ಪ್ಯಾರೀಸ್, ಬರ್ಲಿನ್, ಲಂಡನ್, ಟೊಕ್ಯೊ ಮತ್ತು ವಾಷಿಂಗ್‌ಟನ್, ಡಿ.ಸಿ., ಸೇರಿವೆ. 2010ರವರೆಗು, ನ್ಯೂಯಾರ್ಕ್ ನಗರದಲ್ಲಿ ಜೇನುಸಾಕಣೆಯನ್ನು ನಿಷೇಧಿಸಲಾಗಿತ್ತು ಮತ್ತು ಯಾರಾದರೂ ಇದರಲ್ಲಿ ತೊಡಗಿದ್ದಲ್ಲಿ ಅವರಿಗೆ $2,000 ದಂಡ ವಿಧಿಸಲಾಗುತ್ತಿತ್ತು.[೧೫][೧೬] ಕೀಟನಾಶಕಗಳ ನಿಷೇಧವನ್ನು ಹೊಂದಿದ್ದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ನಗರದ ಜೇನುಸಾಕಣೆಯು ರೂಢಿಯಲ್ಲಿತ್ತು. ಇದು ಪ್ಯಾರೀಸ್, ಹಾಗು ಕೆನಡಾದಲ್ಲಿನ 156 ನಗರಸಭೆಯ ಪ್ರದೇಶಗಳನ್ನು ಮತ್ತು ಕೆನಡಾದ 10 ಪ್ರಾಂತಗಳಲ್ಲಿ 3ನ್ನು ಒಳಗೊಂಡಿದೆ. 2003ರ ವರೆಗೂ ವಾನ್‌ಕೊವೆರ್‌ನಲ್ಲಿ ಜೇನುಸಾಕಣೆಯನ್ನು ನಿಷೇಧಿಸಲಾಗಿತ್ತು, ಆದರೆ 2010ರ ವೇಳೆಗೆ ವಾನ್‌ಕೊವೆರ್‌ ನಗರದ ಹಾಲ್‌ನ ಮೇಲು ಛಾವಣಿಯಲ್ಲಿ ಜೇನುನೊಣಗಳನ್ನು ಕಾಣಲಾಗಿತ್ತು.[೧೭]

ಜೇನುನೊಣದ ಸಮೂಹಗಳು

[ಬದಲಾಯಿಸಿ]

ವರ್ಗಗಳು

[ಬದಲಾಯಿಸಿ]

ಜೇನುನೊಣಗಳ ಸಮೂಹವು ಮೂರು ವರ್ಗಗಳ ಜೇನುನೊಣಗಳನ್ನು ಒಳಗೊಂಡಿರುತ್ತದೆ:

  • ರಾಣಿ ಜೇನುಹುಳು, ಸಾಮಾನ್ಯವಾಗಿ ಸಮೂಹದಲ್ಲಿ ಇದು ಒಂದೇ ಫೋಷಣೆಯ ಹೆಣ್ಣು ಹುಳು ಆಗಿರುತ್ತದೆ;
  • ಬಹು ದೊಡ್ಡ ಸಂಖ್ಯೆಯ ಹೆಣ್ಣು ಕೆಲಸದ ಜೇನುಗುಳುಗಳಿರುತ್ತವೆ, ಸಾಂಕೇತಿಕವಾಗಿ ಇವು 30,000–50,000 ಸಂಖ್ಯೆಯಲ್ಲಿರುತ್ತವೆ;
  • ಅನೇಕ ಸಂಖ್ಯೆಯ ಗಂಡು ಡ್ರೋನ್‌ಗಳು, ಇವು ವಸಂತಕಾಲದಲ್ಲಿ ಸಾವಿರಾರು ಸಂಖ್ಯೆಯಿಂದ ಬರಗಾಲ ಅಥವಾ ಚಳಿ ಕಾಲದಲ್ಲಿ ಕಡಿಮೆ ಸಂಖ್ಯೆಗೆ ಇಳಿಯುತ್ತವೆ.

ಜೇನು ಗೂಡಿನಲ್ಲಿ ರಾಣಿ ಜೇನುಹುಳು ಮಾತ್ರ ಲೈಂಗಿಕವಾಗಿ ಪ್ರೌಢವಾಗಿರುತ್ತದೆ ಮತ್ತು ಇತರ ಎಲ್ಲಾ ಹೆಣ್ಣು ಕೆಲಸದ ಹುಳುಗಳು ಮತ್ತು ಗಂಡು ಡ್ರೋನ್‌ಗಳು ಇದರ ಸಂತತಿ ಆಗಿರುತ್ತವೆ. ರಾಣಿ ಜೇನುಹುಳು ಸುಮಾರು ಮೂರು ವರ್ಷಗಳ ವರೆಗೂ ಅಥವಾ ಅದಕ್ಕಿಂತಲೂ ಹೆಚ್ಚಿನ ಕಾಲ ಜೀವಿಸಬಹುದಾಗಿದೆ ಮತ್ತು ಇದು ಅದರ ಜೀವಮಾನದಲ್ಲಿ ಅರ್ಧ ಮಿಲಿಯನ್ ಅಥವಾ ಹೆಚ್ಚಿನ ಮೊಟ್ಟೆಗಳನ್ನು ಇಡಬಹುದಾದಷ್ಟು ಸಾಮರ್ಥ್ಯವಾಗಿರುತ್ತದೆ. ಪೋಷಣೆಯ ಮಹತ್ವದ ಕಾಲವಾದ, ವಸಂತಕಾಲದ ಕೊನೆ ಮತ್ತು ಬೇಸಿಗೆಯ ಆರಂಭದ ಸಮಯದಲ್ಲಿ, ಒಳ್ಳೆ ಜಾತಿಯ ರಾಣಿ ಜೇನುಹುಳು ಒಂದು ದಿನಕ್ಕೆ, ತನ್ನ ಸ್ವಂತ ಶರೀರದ ಭಾರಕ್ಕಿಂತಲೂ ಹೆಚ್ಚಾದ 3,000 ಮೊಟ್ಟೆಗಳನ್ನು ಇಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಏನೇ ಆದರೂ ಇದು ಅನನ್ಯಸಾಧಾರಣವಾಗಿದೆ; ಫಲಭರಿತ ರಾಣಿ ಜೇನುಹುಳು ಹೆಚ್ಚೆಂದರೆ ಒಂದು ದಿನಕ್ಕೆ 2,000 ಮೊಟ್ಟೆಗಳನ್ನು ಇಡುತ್ತದೆ, ಆದರೆ ಸಾಮಾನ್ಯ ರಾಣಿ ಜೇನುಹುಳು ಒಂದು ದಿನಕ್ಕೆ 1,500 ಮೊಟ್ಟೆಗಳನ್ನು ಇಡುತ್ತದೆ. ಸಾಮಾನ್ಯ ಕೆಲಸ ಮೊಟ್ಟೆಯಿಂದಲೇ ರಾಣಿ ಜೇನುಹುಳು ಉದ್ಭವಿಸುತ್ತದೆ, ಆದರೆ ಸಾಮಾನ್ಯ ಕೆಲಸದ ಜೇನುಹುಳು ಗಿಂತಲೂ ಇದಕ್ಕೆ ಹೆಚ್ಚಿನ ಪ್ರಮಾಣದ ಉತ್ತಮ ಫಲಪಾಕವನ್ನು ಸೇವನೆಗೆ ಕೊಡಲಾಗುತ್ತದೆ, ಇದರಿಂದ ಇದು ಇತರ ಎಲ್ಲಾ ಹುಳುಗಳಿಗಿಂತಲೂ ವಿಭಿನ್ನವಾದ ಬೆಳವಣಿಗೆ ಮತ್ತು ಪರಿವರ್ತನೆಯನ್ನು ಹೊಂದುತ್ತದೆ. ವಿವಿಧ ಫೆರೊಮೋನ್‌‍ಗಳನ್ನು ಅಥವಾ "ರಾಣಿ ಹುಳುವಿನ ದ್ರವಗಳನ್ನು" ಉತ್ಪತ್ತಿ ಮಾಡುವುದರಿಂದ ಮತ್ತು ಹೊರಗೆಡಹುದರಿಂದ ರಾಣಿ ಹುಳು ಸಮೂಹದಲ್ಲಿ ಪ್ರಭಲವಾಗಿರುತ್ತದೆ. ಈ ರಾಸಾಯನಿಕಗಳಲ್ಲಿ ಒಂದು ಜೇನು ಗೂಡುನಲ್ಲಿರುವ ಎಲ್ಲಾ ಹೆಣ್ಣು ಕೆಲಸದ ಹುಳುಗಳಲ್ಲಿ ಅಂಡಾಶಯಗಳನ್ನು (ಮರುಉತ್ಪತ್ತಿಗೆ ಕಾರಣವಾದ ಗ್ರಂಥಿ) ದಹಿಸಿ, ಅವು ಮೊಟ್ಟೆಗಳನ್ನು ಇಡದಹಾಗೆ ಮಾಡುತ್ತದೆ.

ರಾಣಿ ಜೇನುಹುಳುಗಳ ಕೂಡುವಿಕೆ

[ಬದಲಾಯಿಸಿ]

ಬೆಳವಣಿಗೆಯ 15 ದಿನಗಳ ನಂತರ ರಾಣಿ ಹುಳು ಕೋಶದಿಂದ ಹೊರಬರುತ್ತದೆ ಮತ್ತು ಕೂಡುವಿಕೆಯ ಗಂಡುಹುಳುವಿನ (ಮೇಟಿಂಗ್ ಪ್ಲೈಟ್) ಹುಡುಕಾಟದಲ್ಲಿ ಹೊರಗೆ ಹಾರುವ ಮೊದಲು ಜೇನುಗೂಡಿನಲ್ಲಿ 3–7 ದಿನಗಳ ವರೆಗೂ ಇರುತ್ತದೆ. ಕೂಡುವಿಕೆಯ ಗಂಡುಹುಳು (ಮೇಟಿಂಗ್ ಪ್ಲೈಟ್) ಅನ್ನು 'ನುಪ್ಚಿಯಲ್ ಪ್ಲೈಟ್' ಎಂದು ಸಹ ಗುರುತಿಸಲಾಗುತ್ತದೆ. ಅದರ ನಿಲುವಿನ ಮೊದಲ ಹಾರಾಟವು, ಜೇನುಗೂಡಿನ ಜಾಗವನ್ನು ಗುರುತಿಸಿಕೊಳ್ಳಲು, ಕೇವಲ ಕೆಲವು ಸೆಕಂಡುಗಳ ವರೆಗಷ್ಟೆ ಸೀಮಿತವಾಗಿರುತ್ತದೆ. ನಂತರದ ಹಾರಾಟಗಳು 5 ನಿಮಿಷಗಳಿಂದ 30 ನಿಮಿಢಗಳ ವರೆಗೂ ಇರುತ್ತವೆ, ಮತ್ತು ಇದು ಪ್ರತಿಯೊಂದು ಹಾರಾಟದಲ್ಲೂ ಬಹು ಸಂಖ್ಯೆಯ ಗಂಡು ಡ್ರೋನ್‌ಗಳೊಂದಿಗೆ ಕೂಡಿರಬಹುದಾಗಿದೆ. ಒಂದು ಡಜೆನ್ ಅಥವಾ ಹೆಚ್ಚಿನ ಸಂಖ್ಯೆಯ ಕೂಡುವಿಕೆಯಲ್ಲಿ, ರಾಣಿ ಜೇನುಹುಳು ಸಾವಿರಾರು ಮೊಟ್ಟೆಗಳ ಫಲವತ್ತತೆಗೆ ಸಾಕಾಗುವಷ್ಟು ವೀರ್ಯವನ್ನು ಅನುಕ್ರಮ ಡ್ರೋನ್ ಹುಳುಗಳಿಂದ ಪಡೆದು ಶೇಖರಿಸಿಕೊಳ್ಳುತ್ತದೆ. ಅದಕ್ಕೆ ಒಂದು ವೇಳೆ ವಾತಾವರಣ ಅನಾನುಕೂಲದಿಂದಲೊ ಅಥವಾ ಜೇನುಗೂಡಿನ ಒಳಗೇ ಬಂದಿಸಲ್ಪಟ್ಟಿಯೊ - ಕೂಡುವಿಕೆಗೆ ಜೇನುಗೂಡಿನಿಂದ ಆಚೆ ಹೋಗಲು ದಾದ್ಯವಾಗದಿದ್ದರೆ - ಅದು ಫಲವತ್ತಾಗದೆ ಉಳಿಯುತ್ತದೆ ಮತ್ತು ’ಡ್ರೋನ್‌ನ ಸ್ವಭಾವನ್ನು’ ಪಡೆಯುತ್ತದೆ, ಮತ್ತು ಇದರಿಂದ ಜೇನುಗೂಡು ಅವನತಿ ಹೊಂದುತ್ತದೆ.

ಕೂಡುವಿಕೆಯು ಜೇನುಗೂಡುಗಳಿಂದ ಬಹಳ ದೂರದಲ್ಲಿ ನಡೆಯುತ್ತದೆ ಮತ್ತು ಇದು ಹೆಚ್ಚಾಗಿ ಭೂಮಿಯಿಂದ ಅನೆಕ ಅಡಿಗಳ ಎತ್ತರದಲ್ಲಿ ಗಾಳಿಯಲ್ಲಿ ನಡೆಯುತ್ತದೆ; ಇದರಿಂದ ಪ್ರಬಲ ಡ್ರೋನ್‌ಗಳನ್ನು ದುರ್ಬಲ ಡ್ರೋನ್‌ಗಳಿಂದ ಬೆರ್ಪಡಿಸಬಹುದೆಂದು ಯೋಚಿಸಿ - ಕೇವಲ ಪ್ರಬಲವಾದ ಮತ್ತು ವೇಗದ ಡ್ರೋನ್‌ಗಳನ್ನಷ್ಟೇ ಅವುಗಳ ಗೀನ್ಸ್‌ ಮೂಲಕ ಹಾಯಲು ಬಿಡುತ್ತವೆ.

ಹೆಣ್ಣು ಕೆಲಸದ ಜೇನುನೊಣಗಳು

[ಬದಲಾಯಿಸಿ]

ಬಹಳಮಟ್ಟಿಗೆ ಜೇನುಗೂಡಿನಲ್ಲಿರುವ ಎಲ್ಲಾ ಜೇನುನೊಣಗಳು ಹೆಣ್ಣು ಕೆಲಸದ ಜೇನುನೊಣಗಳಾಗಿರುತ್ತವೆ. ಕಡು ಬೇಸಿಗೆಯಲ್ಲಿ ಜೇನುಗೂಡಿನಲ್ಲಿನ ಚಟುವಟಿಕೆಗಳು ಅತಿಯಾಗಿ ಉದ್ರೆಕಗೊಂಡಾಗ ಮತ್ತು ಕೆಲಸ ನಿಲುಗಡೆಯಿಲ್ಲದೆ ಸಾಗುತ್ತಿರುವಾಗ, ಕೆಲಸದ ಜೇನುನೊಣದ ಜೀವಮಾನವು ಕೇವಲ 6 ವಾರಗಳಷ್ಟೆ ಇರುತ್ತದೆ; ಶರತ್ಕಾಲದ ಕೊನೆಯಲ್ಲಿ, ಯಾವುದೇ ಮರಿಗಳ ಉತ್ಪತ್ತಿ ಕಾರ್ಯ ನಡೆಯದಿದ್ದಾಗ ಮತ್ತು ಮಕರಂದ ಫಸಲನ್ನು ಪಡೆಯದಿದ್ದಾಗ, ತರುಣ ಜೇನುನೊಣವು ಚಳಿಗಾಲವನ್ನು ಸೇರಿ 16 ವಾರಗಳ ವರೆಗೂ ಜೀವಿಸಬಹುದಾಗಿದೆ. ಇವುಗಳ ಜೀವನದ ಸಮಯದಲ್ಲಿ ಕೆಲಸದ ಜೇನುನೊಣವು ಜೇನುಗೂಡಿನಲ್ಲಿ ಜೇನುನೊಣದ ವಯಸ್ಸಿನಿಂದ ಆಜ್ಞಾಪಿಸುವ ಅನೇಕ ಕಾರ್ಯಗಳನ್ನು ನೆರವೇರಿಸುತ್ತದೆ.

ಸಮಯ." ಕಾರ್ಯದ ಚಟುವಟಿಕೆ
1-3ನೆಯ ದಿನಗಳು ಕೋಶಗಳನ್ನು ಶುಭ್ರಗೊಳಿಸುವುದು ಮತ್ತು ಕಾವಿಗೆ ಕೊಡುವುದು
3-6 ದಿನ ಹೊಡ್ಡ ಮರಿಹುಳುಗೆ ಆಹಾರ ನೀಡುವುದು
6-10 ದಿನ ಚಿಕ್ಕ ಮರಿಹುಳುಗೆ ಆಹಾರ ನೀಡುವುದು
8-16 ದಿನ ಜೇನುತುಪ್ಪ ಮತ್ತು ಪುಷ್ಪಧೂಳಿಯನ್ನು ಕ್ಷೇತ್ರದ ಜೇನುನೊಣಗಳಿಂದ ಪಡೆದುಕೊಳ್ಳುವುದು
12-18 ದಿನ ಮೇಣ ತಯಾರಿಸುವಿಕೆ ಮತ್ತು ಕೋಶಗಳ ನಿರ್ಮಾಣ
14 ದಿನದ ನಂತರ ಪ್ರವೇಶದ್ವಾರದ ಕಾವಲುಗಾರರು; ಮಕರಂದ ಮತ್ತು ಪುಷ್ಪಧೂಳಿಯ ಹುಡುಕಾಟ

ಗಂಡು ಜೇನುನೊಣಗಳು (ಡ್ರೋನ್ಸ್)

[ಬದಲಾಯಿಸಿ]

ಡ್ರೋನ್ಸ್ ಜೇನುಗೂಡಿನಲ್ಲಿನ ಅತೀ ದೊಡ್ಡದಾದ ಜೇನುನೊಣಗಳು (ರಾಣಿ ಜೇನುಹುಳುವನ್ನು ಬಿಟ್ಟು), ಇವು ಬಹು ಮಟ್ಟಿಗೆ ಕೆಲಸದ ಜೇನುನೊಣಗಳ ಗಾತ್ರಕ್ಕಿಂತಲೂ ಎರಡರಷ್ಟಿರುತ್ತವೆ. ಅವು ಯಾವುದೇ ಕಾರ್ಯ ಮಾಡುವುದಿಲ್ಲ, ಪರಾಗ ಅಥವಾ ಮಕರಂದಕ್ಕಾಗಿ ಮೇವನ್ನು ಸಂಗ್ರಹಿಸುವುದಿಲ್ಲ, ಮತ್ತು ಅವನ್ನು ಕೇವಲ ರಾಣಿ ಜೇನುನೊಣದ ಕೂಡುವಿಕೆಯ ಹಾರಾಟದ ಸಮಯದಲ್ಲಿ, ಅದರೊಂದಿಗೆ ಕೂಡಿ ಅವನ್ನು ಫಲವತ್ತಾಗಿಸಲು ಉತ್ಪತ್ತಿಮಾಡಿರುತ್ತಾರೆ. ಸಾಮಾನ್ಯವಾಗಿ ನ್ಯೂನತೆಯ ರಾಣಿ ಜೇನುನೊಣವನ್ನು ಅತಿಕ್ರಮಿಸಲು ಅಥವಾ ಜಂಗುಳಿಯ ತಯಾರಿಯಲ್ಲಿ, ರಾಣಿ ಜೇನುನೊಣದ ಕೋಶಗಳನ್ನು ನಿರ್ಮಿಸುವ ಕೆಲವು ವಾರಗಳ ಮೊದಲೇ ಡ್ರೋನ್‌ಗಳನ್ನು ಹೆಚ್ಚಿಸಲು ಜೇನುನೊಣಗಳ ಸಮೂಹವನ್ನು ಪ್ರಾರಂಭಿಸಲಾಗುವುದು. ರಾಣಿ ಜೇನುನೊಣಗಳನ್ನು ಹೆಚ್ಚಿಸುವ ಋತು ಮುಗಿದಾಗ, ತಣ್ಣನೆಯ ವಾತಾವರಣದಲ್ಲಿನ ಜೇನುನೊಣಗಳು ಅವುಗಳ ಕಾಲುಗಳ ಮೇಲೆ ಕಚ್ಚುವುದರ ಮೂಲಕ ಮತ್ತು ಅವುಗಳ ರೆಕ್ಕೆಗಳನ್ನು ಹರಿಯುವುದರ ಮೂಲಕ ಗಂಡು ಡ್ರೋನ್‌ಗಳನ್ನು ಸಾಯಲು ಜೇನು ಗೂಡಿನಿಂದ ಹೊರಹೋಡಿಸುತ್ತವೆ.

ಬೆಳವಣಿಗೆಯ ವಿಭಿನ್ನ ಹಂತಗಳು

[ಬದಲಾಯಿಸಿ]
ಬೆಳವಣಿಗೆಯ ಹಂತ ರಾಣಿ ಕೆಲಸದ ಜೇನುನೊಣ ಗಂಡು ಜೇನುನೋಣ
ಮೊಟ್ಟೆ 3 ದಿನಗಳು 3 ದಿನಗಳು 3 ದಿನಗಳು
ಮರಿಹುಳು 8 ದಿನಗಳು 10 ದಿನಗಳು 13 ದಿನಗಳು
ಪೊರೆಹುಳು 4 ದಿನಗಳು 8 ದಿನಗಳು 8 ದಿನಗಳು
ಒಟ್ಟು 15 ದಿನಗಳು 21 ದಿನಗಳು 24 ದಿನಗಳು

ಜೇನುನೊಣ ಸಮೂಹದ ರಚನೆ

[ಬದಲಾಯಿಸಿ]

ಪಳಗಿಸಿದ ಜೇನುನೊಣದ ಸಮೂಹವನ್ನು ಸಾಮಾನ್ಯಾವಾಗಿ ಸಮಚತುಷ್ಕೋನದ ಗೂಡಿನಲ್ಲಿಡಲಾಗುತ್ತದೆ, ಇದರ ಒಳಗೆ ಎಂಟರಿಂದ ಹತ್ತು ಸಮನಾಂತರದ ಚೌಕಗಳನ್ನು ಹೊಂದಿದ್ದು ಇವು ಮೊಟ್ಟೆಗಳನ್ನು, ಮರಿಹುಳುಗಳನ್ನು, ಪೊರೆಹುಳುಗಳನ್ನು ಮತ್ತು ಸಮೂಹಕ್ಕೆ ಬೇಕಾದ ಆಹಾರವನ್ನು ಒಳಗೊಂಡಿದ್ದ, ಜೇನು ಹುಟ್ಟಿನ ಲಂಬವಾದ ಪ್ಲೇಟುಗಳನ್ನು ಹೊಂದಿರುತ್ತವೆ. ಒಂದು ವೇಳೆ ಪಕ್ಕದಿಂದ ಪಕ್ಕಕ್ಕೆ ಜೇನು ಗೂಡಿನ ಮೂಲಕ ಲಂಬವಾಗಿ ಸೀಳಿದರೆ, ಹುಳಗಳ ಮರಿಗಳನ್ನೊಂದಿದ ಗೂಡು, ವಿಸ್ತರಿಸಿದ ಜೇನುಹುಟ್ಟಿನ 5-8 ಚೌಕಗಳ ಮೊಟ್ಟೆಯಾಕಾರದ ಚೆಂಡಿನಂತೆ ಕಾಣುತ್ತದೆ. ಪ್ರತಿಯೊಂದು ಬದಿಯ ಹೊರಗಿನ ಎರಡು ಜೇನುಹುಟ್ಟುಗಳನ್ನು ಜೇನುತುಪ್ಪ ಮತ್ತು ಮಕರದ ದೀರ್ಘಾವದಿಯ ಶೇಖರಣೆಗಾಗಿಯೆ ಪ್ರತ್ಯೇಕವಾಗಿ ಉಪಯೋಗಿಸಲಾಗುತ್ತದೆ.

ಜೇನುನೊಣಗಳ ಗೂಡಿನ ಮಧ್ಯದೊಳಗೆ, ಜೇನು ಹುಟ್ಟಿನ ಒಂಟಿ ಚೌಕವು ಮೊಟ್ಟೆಗಳನ್ನು, ಮರಿಹುಳುಗಳನ್ನು, ಮತ್ತು ಚೌಕದ ತುದಿಯ ವರೆಗು ವಿಸ್ತಾರವಾಗಬಹುದಾದ ಮುಚ್ಚಿದ ಮರಿಗಳ ಕೋಶಗಳನ್ನು ಹೊಂದಿರುತ್ತದೆ. ಮರಿಗಳ ತೇಪೆಯ ಮೇಲೆ ಇಂದು ಬದಿಯಿಂದ ಮತ್ತೊಂದು ಬದಿ ವರೆಗು ವಿಸ್ತರಿಸುವ ಮಕರಂದ-ತುಂಬಿದ ಕೋಶಗಳ ಕಮಾನು ಇರುತ್ತದೆ, ಮತ್ತು ಅದರ ಮೇಲೆ ಚೌಕದ ಶಿಖರದ ವರೆಗು ವಿಸ್ತರಿಸಿದ ಜೇನುತುಪ್ಪ-ತುಂಬಿದ ಕೋಶಗಳ ವಿಶಾಲವಾದ ಕಮಾನು ಇರುತ್ತದೆ. ಮಕರಂದವು ಮರಿಹುಳುಗಳ ಬೆಳವಣಿಗೆಗೆ ಪ್ರೋಟೀನ್ ಸಮೃದ್ಧ ಆಹಾರವಾಗಿದೆ, ಜೇನುತುಪ್ಪವು ಸಹ ಅವುಗಳಿಗೆ ಆಹಾರವಾಗುತ್ತದೆ ಆದರೆ ಇದು ಶಕ್ತಿ ಸಮೃದ್ಧ ಆಹಾರವಾಗಿರುತ್ತದೆ. ಮರಿಗಳ ಬೆಳವಣಿಗೆಗೆ ಕಾಳಜಿ ವಹಿಸುವ ಪೋಷಣೆಯ ಜೇನು ಹುಳುಗಳು, ಜೇನುತುಪ್ಪ ಮತ್ತು ಮಕರಂದವನ್ನು ತಾವು ಸೇವಿಸಿ ಮರಿಗಳಿಗೆ ’ರಾಯಲ್ ಜೆಲ್ಲಿ’ ಎಂದು ಕರೆಯುವ ವಿಶೇಷ ಆಹಾರವನ್ನು ಒದಗಿಸುತ್ತವೆ. ಮರಿ ಹುಳುಗೆ ಉಣಿಸಿದ ರಾಯಲ್ ಜೆಲ್ಲಿಯ ಪ್ರಮಾಣವು ಅದು ರಾಣಿ ಹುಳೂವಾಗಿ ಬೆಳೆಯುತ್ತದೆಯೊ ಅಥವಾ ಕೆಲಸದ ಜೇನು ಹುಳುವಾಗುತ್ತದೊ ಎಂಬುದನ್ನು ನಿರ್ಧರಿಸುತ್ತದೆ.

ಮರಿಹುಳುಗಳ ಚೌಕದ ಮಧ್ಯದಲ್ಲಿ ಶೇಖರಿಸಿದ ಜೇನುತುಪ್ಪವನ್ನು ಹೊರತು ಪಡಿಸಿ, ಜೇನುನೊಣಗಳು ಮರಿಗಳ ಗೂಡಿನ ಮೇಲ್ಭಾಗದ ಜೇನು ಹುಟ್ಟುಗಳಲ್ಲಿ ಹೆಚ್ಚಿನ ಜೇನುತುಪ್ಪವನ್ನು ಶೇಖರಿಸಿಡುತ್ತವೆ. ಆದುನಿಕ ಜೇನುಗೂಡುಗಳಲ್ಲಿ ಜೇನುಸಾಕಣೆದಾರರು, ಜೇನುತುಪ್ಪದ ಶೇಖರಣೆಗೆ ಆಳವಿಲ್ಲದ ಜೇನು ಹುಟ್ಟುಗಳನ್ನು ಹೊಂದಿದ್ದ ’ಸೂಪೆರ್ಸ್’ ಎಂದು ಕರೆಯಲ್ಪಡುವ ಪ್ರತ್ಯೇಕ ಪೆಟ್ಟಿಗೆಯನ್ನು ಮರಿಗಳ ಪೆಟ್ಟಿಗೆಯ ಮೇಲೆ ಇರಿಸುತ್ತಾರೆ. ಇದು ಬೇಸಿಗೆಯ ಕೊನೆಯಲ್ಲಿ ಕೆಲವು ಸೂಪೆರ್ಸ್‌ಗಳನ್ನು ತೆಗೆಯಲು ಜೇನುಸಾಕಣೆದಾರರಿಗೆ ಸಹಾಯವಾಗುತ್ತದೆ, ಮತ್ತು ಕೆಳಗಿನ ಜೇನುನೊಣದ ಸಮೂಹವನ್ನು ಮತ್ತು ಇದರ ಮರಿಗಳ ಗೂಡನ್ನು ನಾಶಮಾಡದೆ ಅಧಿಕ ಪ್ರಮಾಣದ ಜೇನುತುಪ್ಪದ ಫಸಲನ್ನು ಪಡೆಯಲು ಅನುಕೂಲವಾಗುತ್ತದೆ. ಒಂದು ವೇಳೆ ಚಳಿಗಾಲದಲ್ಲಿ ಜೀವಿಸಲು ಬೇಕಾದ ಪ್ರಮಾಣದ ಜೇನುತುಪ್ಪವನ್ನು ಸೇರಿ ಎಲ್ಲಾ ಜೇನುತುಪ್ಪವನ್ನು ’ಕದಿಯಲಾಗಿದ್ದರೆ’, ಶರತ್ಕಾಲದಲ್ಲಿ ಜೇನುಸಾಕಣೆದಾರ ಈ ಶೇಖರಣೆಗಳನ್ನು ಜೇನು ನೊಣಗಳ ಸಕ್ಕರೆ ಅಥವಾ ಕಾರ್ನ್ ಪಾನಕಗಳಿಂದ ಮರು ತುಂಬಿಸಬೇಕಾಗುತ್ತದೆ.

ಜೇನುನೊಣ ಸಮೂಹದ ವಾರ್ಷಿಕ ಪೂರ್ಣಾವಧಿ

[ಬದಲಾಯಿಸಿ]

ಜೇನುನೊಣ ಸಮೂಹದ ಅಭಿವೃದ್ಧಿಯು ವಾರ್ಷಿಕ ಪೂರ್ಣಾವಧಿಯ ವೆಳವಣೀಗೆಯನ್ನು ಅನುಸರಿಸುತ್ತದೆ, ಇದು ಮರಿಹುಳುಗಳಿಗೆ ಉಣಿಸಲು ಪರಾಗ ಲಭ್ಯವಾದ ಕೂಡಲೇ, ಮರಿಗಳ ಗೂಡಿನ ತ್ವರಿತ ವಿಸ್ತಾರದೊಂದಿಗೆ ವಸಂತಕಾಲದಲ್ಲಿ ಆರಂಭವಾಗುತ್ತದೆ. ಕೆಲವು ಸಂತಾನೋತ್ಪತ್ತಿ ಬೇಗ ಜನವರಿಯಲ್ಲೇ ಆರಂಭವಾಗುತ್ತದೆ, ಚಳಿಗಾಲದಲ್ಲೂ ಸಹ ಆರಂಭವಾಗಬಹುದು, ಆದರೆ ಪೋಷಣೆಯು ತೀವ್ರಗೊಳ್ಳುವುದು ಮೇ ತಿಂಗಳಲ್ಲಿ (ಉತ್ತರದ ಭಾಗಗಳಲ್ಲಿ), ಆ ಪ್ರದೇಶಗಳಲ್ಲಿ ಸಮೃದ್ಧಿಯ ಫಸಲಿನ ಜೇನುನೊಣಗಳ ಉತ್ಪಾದನೆಯು ಮುಖ್ಯ ’ಮಕರಂದ ಪ್ರವಾಹದೊಂದಿಗೆ’ ಏಕಕಾಲದಲ್ಲಿ ಸಂಭವಿಸುತ್ತದೆ. ಇದನ್ನು ರಚಿಸುವ ಜೇನುನೊಣದ ಪ್ರತಿಯೊಂದು ಸಂತತಿಯ ಆರಂಭದ ಸಮಯವು, ಆಯಾ ಪ್ರದೇಶದ ಸಸ್ಯಸಂಪತ್ತಿನ ಹರಳುವಿಕೆಯ ಆಧಾರದ ಮೇಲೆ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿರುತ್ತದೆ. ಯುರೋಪಿನ ಕೆಲವು ಪ್ರದೇಶಗಳು ಎರಡು ಮಕರಂದದ ಪ್ರವಾಹಗಳನ್ನು ಹೊಂದಿರುತ್ತವೆ: ಒಂದು ವಸಂತಕಾಲದ ಕೊನೆಯಲ್ಲಿ ಸಂಭವಿಸಿದರೆ ಮತ್ತೊಂದು ಆಗಸ್ಟ್‌ನ ಕೊನೆಯಲ್ಲಿ ಉದ್ಭವಿಸುತ್ತದೆ. ಇತರ ಪ್ರದೇಶಗಳು ಕೇವಲ ಒಂದೇ ಮಕರಂದದ ಪ್ರವಾಹವನ್ನು ಹೊಂದಿರುತ್ತವೆ. ತಮ್ಮ ಪ್ರದೇಶದಲ್ಲಿ ಯಾವಾಗ ಮಕರಂದ ಪ್ರವಾಹ ಆರಂಭವಾಗುತ್ತದೆ ಎಂದು ಊಹಿಸುವುದು ಮತ್ತು ತನ್ನ ಜೇನುನೊಣ ಸಮೂಹವು ಫಸಲು ಸಂಗ್ರಹಿಸುವ ಗರಿಷ್ಟ ಪ್ರಮಾಣದ ಸಂಖ್ಯೆಯನ್ನು ಸರಿಯಾದ ಸಮಯದಲ್ಲಿ ಹೊಂದುವಂತೆ ನೋಡಿಕೊಳ್ಳುವುದು ಜೇನುಸಾಕಣೆದಾರನ ಪರಿಣತೆಯನ್ನು ಅವಲಂಭಿಸಿರುತ್ತದೆ.

ಇದರಲ್ಲಿನ ಪ್ರಮುಖ ವಿಷಯವು ನಿವಾರಣೆ, ಅಥವಾ ಗುಂಪುಗೂಡಿಸುವ ಊರವಣೆಯ ಯುಕ್ತಿಯುತ ನಿರ್ವಹಣೆ. ಒಂದು ವೇಳೆ ಸಮೂಹವು ಅನಿರೀಕ್ಷಿತವಾಗಿ ಗುಂಪಾಗಿ ಚಲಿಸುತ್ತಿದ್ದರೆ ಮತ್ತು ಜೇನುಸಾಕಣೆದಾರನಿಗೆ ಈ ಗುಂಪನ್ನು ಸೆರೆಹಿಡಿಯಲು ಸಾಧ್ಯವಾಗದಿದ್ದರೆ, ಒಂದೇ ಸಮಯಕ್ಕೆ ಅವನ ಕೆಲಸದ ಜೇನುನೊಣಗಳ ಅರ್ಧದಷ್ಟನ್ನು ಕಳೆದುಕೊಂಡ ಪರಿಣಾಮ, ಆ ಜೇನುಗೂಡಿನಿಂದ ಅವನು ಕಡಿಮೆ ಪ್ರಮಾಣದ ಫಸಲನ್ನು ಮಾತ್ರ ಪಡೆಯಲು ಸಾಧ್ಯ. ಒಂದು ವೇಳೆ, ಹೇಗಾದರೂ ಮಾಡಿ, ಅವನು ಗುಂಪುಗೂಡಿಸುವ ಊರವಣೆಯನ್ನು ಹೊಸಾ ರಾಣಿ ಜೇನುಹುಳದ ಪೋಷಣೆಗೆ ಉಪಯೋಗಿಸಿದರೆ ಮತ್ತು ಎಲ್ಲಾ ಜೇನುನೊಣಗಳನ್ನು ಜೊತೆಯಾಗಿ ಸಮೂಹದಲ್ಲಿ ಇರಿಸಿದರೆ, ಅವನು ಉತ್ತಮ ಫಸಲನ್ನು ಪಡೆಯಲು ಇದ್ದ ಅವಕಾಶಗಳನ್ನು ಹೆಚ್ಚಿಸಬಹುದಾಗಿದೆ. ವಿವಿಧ ಸಂದರ್ಭಗಳಿಗನುಗುಣವಾಗಿ ಬಹುತೇಕ ಆರಂಭದ ಜೇನುಸಾಕಣೆದಾರರು ಆಗಾಗ್ಗೆ ಉತ್ತಮ ಜೇನುತುಪ್ಪದ ಫಸಲನ್ನು ಪಡೆದಿದ್ದರೂ, ಜೇನುಸಾಕಣೆಯಲ್ಲಿನ ಈ ಎಲ್ಲಾ ವಿಷಯಾಂಶಗಳನ್ನು ಸಫಲವಾಗಿ ನಿರ್ವಹಿಸಲು, ಅನೇಕ ವರ್ಷಗಳ ಕಲಿಕೆ ಮತ್ತು ಅನುಭವದ ಅವಶ್ಯಕತೆಯಿದೆ.

ಹೊಸ ಸಮೂಹಗಳ ರಚನೆ

[ಬದಲಾಯಿಸಿ]

ಸಮೂಹದ ಮರುಉತ್ಪಾದನೆ; ಗುಂಪುಗೂಡಿಸುವಿಕೆ ಮತ್ತು ಅತಿಕ್ರಮಿಸುವಿಕೆ

[ಬದಲಾಯಿಸಿ]
ಭೂಮಿಗಿಳಿಯುತ್ತಿರುವ ಒಂದು ಸಮೂಹ

ಎಲ್ಲಾ ಸಮೂಹಗಳು ಮೊಟ್ಟೆಗಳನ್ನು ಇಡುವ, ಏಕಮಾತ್ರ ರಾಣಿಹುಳುವನ್ನೇ ಸಂಪೂರ್ಣವಾಗಿ ಅವಲಂಬಿಸಿರುತ್ತವೆ. ಅದಾಗ್ಯೂ, ಉತ್ತಮವಾದ ರಾಣಿ ಹುಳುವೇ ಕೇವಲ ಕೆಲವು ವರ್ಷಗಳು ಜೀವಿಸುತ್ತದೆ ಮತ್ತು ಸಾಮ್ ಸಾಮಾನ್ಯವಾಗಿ ಒಂದು ಅಥವಾ ಎರಡು ವರ್ಷಗಳ ಕಾಲದ ಆಯುಷಿಗಳಾಗಿರುತ್ತವೆ. ರಾಣಿಹುಳು ಮೊಟ್ಟೆಯನ್ನು ಇಡುವಾಗ ಅದನ್ನು ಫಲವತಾಗಿಸುವುದಾ ಅಥವಾ ಬೇಡವಾ ಎಂಬುದನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ; ಒಂದು ವೇಳೆ ಫಲವತ್ತಾಗಿಸಿದರೆ ಅದು ಹೆಣ್ಣು ಕೆಲಸದ ಜೇನುನೊಣವಾಗಿ ಬೆಳೆಯುತ್ತದೆ, ಇಲ್ಲದಿದ್ದರೆ ಅದು ಗಂಡು ಡ್ರೋನ್ ಆಗುತ್ತದೆ. ಜೇನುಹುಟ್ಟುನಲ್ಲಿ ಅದು ಎದುರಿಸುವ ಪೋಷಣೆಯ ತೆರೆದ ಕೋಶದ ಗಾತ್ರವನ್ನು ಅವಲಂಬಿಸಿ ರಾಣಿ ಜೇನುಹುಳು ಯಾವ ತರಹದ ಮೊಟ್ಟೆಯನ್ನು ಇಡಬೇಕೆಂದು ತೀರ್ಮಾನಿಸುತ್ತದೆ; ಚಿಕ್ಕದಾದ ಕೆಲಸದ ಕೋಶದಲ್ಲಿ ಅದು ಫಲವತ್ತಾದ ಮೊಟ್ಟೆಯನ್ನು ಇಡುತ್ತದೆ; ಒಂದು ವೇಳೆ ಅದು ದೊಡ್ಡ ಗಾತ್ರದ ಡ್ರೋನ್ ಕೋಶವನ್ನು ಕಂಡಲ್ಲಿ ಅದು ಫಲವತ್ತಾಗದ ಡ್ರೋನ್ ಮೊಟ್ಟೆಯನ್ನು ಇಡುತ್ತದೆ.

ಪ್ರತಿಸಲ ರಾಣಿ ಜೇನುಹುಳು ಫಲವತ್ತಾಗಿ ಮೊಟ್ಟೆಗಳನ್ನು ಇಡುವಾಗ ಅದು ವಿವಿಧ ಪೆರೋಮೋನ್‌ಗಳನ್ನು ಉತ್ಪತ್ತಿಮಾಡುತ್ತದೆ, ಅವು ಜೇನುಗೂಡಿನಲ್ಲಿನ ಜೇನುನೊಣಗಳ ವರ್ತನೆಯನ್ನು ಹತೋಟಿಯಲ್ಲಿಡುತ್ತವೆ; ಸಾಮಾನ್ಯವಾಗಿ ಇವನ್ನು ’ರಾಣಿಹುಳುವಿನ ದ್ರವ್ಯಗಳ’ ಎಂದು ಕರೆಯಲಾಗುತ್ತದೆ ಆದರೆ ನಿಜವಾಗಿಯು ಇವು ವಿವಿಧ ಉಪಯೋಗಗಳನ್ನು ಹೊಂದಿದ ವಿಭಿನ್ನ ಪೆರೋಮೋನ್‌ಗಳು (ಕೀಟಗಳಲ್ಲಿ ಅಡಗಿರುವ ರಾಸಾಯನಿಕಗಳು). ರಾಣಿ ಜೇನುಹುಳುವಿಗೆ ವಯಸ್ಸಾದಂತೆ ಅದರಲ್ಲಿ ಶೇಖರಣೆಯಾಗಿದ್ದ ವಿರ್ಯವು ಮುಗಿಯಲು ಪ್ರಾರಂಭವಾಗುತ್ತದೆ ಮತ್ತು ಅದರ ಪೆರೋಮೋನ್‌ಗಳು ವಿಫಲವಾಗುತ್ತವೆ. ಕೆಲವು ಸಮಯದ ನಂತರ, ಅನಿವಾರ್ಯವಾಗಿ, ರಾಣಿ ಜೇನುನೊಣ ತಡವರಿಸಲು ಪ್ರಾರಂಭಿಸುತ್ತದೆ ಇದರಿಂದ ಜೇನುನೊಣಗಳು ಕೆಲಸದ ಜೇನುನೊಣಗಳಿಂದ ಒಂದು ಹೊಸಾ ರಾಣಿ ಹುಳುವನ್ನು ತಯಾರಿಸಿ ಇದರ ಸ್ಥಾನವನ್ನು ಭರ್ತಿಮಾಡಲು ತೀರ್ಮಾನಿಸುತ್ತವೆ. ರಾಣಿಹುಳು ಹಾನಿಗೊಳಗಾದಾಗ (ಕಾಲನ್ನು ಅಥವಾ ಸ್ಪರ್ಶಾಂಗವನ್ನು ಕಳೆದುಕೊಂಡಾಗ), ಅದರಲ್ಲಿ ಶೇಖರಣೆಯಾದ ವೀರ್ಯ ಮುಗಿದುಹೋಗಿ ಅದು ಫಲವತ್ತಾದ ಮೊಟ್ಟೆಗಳನ್ನು ಇಡಲು ಸಾಧ್ಯವಿಲ್ಲದಿದ್ದಾಗ (ಅದು ’ಡ್ರೋನ್ ಮೊಟ್ಟೆಗಳನ್ನು ಇಡುವ’ ರಾಣಿ ಹುಳುವಾದಾಗ), ಅಥವಾ ಅದರ ಪೆರೋಮೋಗಳು ಜೇನುಗೂಡಿನಲ್ಲಿನ ಎಲ್ಲಾ ಜೇನುನೊಣಗಳನ್ನು ಹತೋಟಿಯಲ್ಲಿಡಲು ಸಾಧ್ಯವಿಲ್ಲದ ಮಟ್ಟಕ್ಕೆ ಕ್ಷೀಣಿಸಿದಾಗ, ಅವು ರಾಣಿ ಹುಳುವನ್ನು ಬದಲಾಯಿಸಬಹುದಾಗಿದೆ.

ಈ ಸಮಯದಲ್ಲಿ ಜೇನುನೊಣಗಳು ಪ್ರಸ್ತುತ ಇರುವ ಸಾಮಾನ್ಯ ಹೆಣ್ಣು ಮೊಟ್ಟೆಯನ್ನು ಹೊಂದಿರುವ ಕೆಲಸದ ಕೋಶಗಳನ್ನು ಮಾರ್ಪಡಿಸುವ ಮೂಲಕ ಒಂದು ಅಥವಾ ಹೆಚ್ಚಿನ ರಾಣಿ ಕೋಶಗಳನ್ನು ತಯಾರಿಸುತ್ತವೆ. ಅದಾಗ್ಯೂ, ಅಲ್ಲಿ ಜೇನುನೊಣಗಳು ಪಾಲಿಸುವ ಎರಡು ವಿಭಿನ್ನ ನಡವಳಿಕೆಗಳಿವೆ:

  1. ಅತಿಕ್ರಮಿಸುವಿಕೆ : ಗುಂಪುಗೂಡಿಸದೆ ಒಂದೇ ಜೇನುಗೂಡಿನೊಳಗೆ ರಾಣಿ ಹುಳುವನ್ನು ಬದಲಿಸುವುದು
  2. ಮುಕರುವ ಕೋಶದ ಉತ್ಪಾದನೆ: ಜೇನುಗೂಡಿನ ವಿಭಾಗವನ್ನು ಎರಡು ಸಮೂಹಗಳಾಗಿ ಗುಂಪುಗೂಡಿಸುವುದು

ಅಪಿಸ್ ಮೆಲ್ಲಿಫೆರಾ ದ ವಿವಿಧ ಉಪ-ತಳಿಗಳು ಯುರೋಪ್ ಖಂಡದ ವಿವಿಧ ದಾಣಗಳಲ್ಲಿನ ಅವುಗಳ ವಿಕಸನವನ್ನು ವ್ಯಕ್ತಪಡಿಸುವ ವಿಭಿನ್ನ ಗುಂಪುಗೂಡುವ ಲಕ್ಷಣಗಳನ್ನು ತೋರುತ್ತವೆ. ಸಾಧಾರಣವಾಗಿ ಹೆಚ್ಚು ಉತ್ತರದಿಕ್ಕಿನ ಕಪ್ಪು ಸಂತತಿಗಳು ಕಡಿಮೆ ಗುಂಪುಗೂಡುತ್ತವೆ ಮತ್ತು ಹೆಚ್ಚು ಅತಿಕ್ರಮಿಸುತ್ತವೆ ಎಂದು ಹೇಳಲಾಗುತ್ತದೆ, ಹೀಗಿರುವಾಗ ಹೆಹ್ಚ್ಚು ದಕ್ಷಿಣದಿಕ್ಕಿನ ಹಳದಿ ಮತ್ತು ಬೂದಿ ಬಣ್ಣದ ವಿಧಗಳು ಹೆಚ್ಚಾಗಿ ಗುಂಪುಗೂಡುತ್ತವೆ ಎಂದು ಹೇಳಲಾಗಿದೆ. ಎಲ್ಲೆಡೆಯು ಕಾಣಲಾಗುವ ಮಿಶ್ರ ತಳಿಗಳಿಂದ ಮತ್ತು ಉಪ ತಳಿಗಳ ಸಂಕರವನ್ನು ಮಾಡುವಿಕೆಯಿಂದ ಮತ್ತು ವಿಭಿನ್ನ ಅಭಿಪ್ರಾಯಗಳಿಂದ ನಿಜಾಂಶವು ಕ್ಲಿಷ್ಟವಾಗಿದೆ.

ಅತಿಕ್ರಮಿಸುವಿಕೆಯು ಜೇನುಸಾಕಣೆದಾರರಿಂದ ನಡವಳಿಕೆಯ ಲಕ್ಷಣವಾಗಿ ಹೆಚ್ಚಿನ ಮನ್ನಣೆಗೆ ಒಳಗಾಗಲು ಕಾರಣ ತನ್ನ ಹಳೇ ರಾಣಿ ಹುಳುವನ್ನು ಬದಲಿಸುವ ಜೇನುಗೂಡು ಗುಂಪುಗೂಡುವುದಿಲ್ಲ ಆದ್ದರಿಂದ ಶೇಖರಣೆಯು ಹಾನಿಯಾಗುವುದಿಲ್ಲ; ಇದು ಕೇವಲ ಹೊಸಾ ರಾಣಿ ಹುಳುವನ್ನು ತಯಾರಿಸುತ್ತದೆ ಮತ್ತು ಹಳೇ ರಾಣಿ ಜೇನುನೊಣವನ್ನು ಮಾಯವಾಗಲು ಬಿಡುತ್ತದೆ, ಅಥವಾ ಹೊಸಾ ರಾಣಿ ಜೇನುಹುಳ ತಯಾರಾದಾಗ ಇದನ್ನು ಸಾಯಿಸಲಾಗುತ್ತದೆ. ಪರ್ಯಾಯ ರಾಣಿ ಹುಳುವನ್ನು ತಯಾರಿಸುವಾಗ ಜೇನುನೊಣಗಳು ಕೇವಲ ಒಂದು ಅಥವಾ ಎರಡು ರಾಣಿ ಕೋಶಗಳನ್ನು ರಚಿಸುತ್ತವೆ, ವಿಶೇಷವಾಗಿ ಪೋಷಣೆಯ ಜೇನು ಹುಟ್ಟುನ ಮಧ್ಯಭಾಗದಲ್ಲಿ.

ವಿಭಿನ್ನತೆಯಿಂದ ಗುಂಪುಗೂಡಿಸುವಲ್ಲಿ, ಅನೇಕ ಸಂಖ್ಯೆಯ ರಾಣಿ ಕೋಶಗಳನ್ನು ರಚಿಸಲಾಗುತ್ತದೆ - ಸಾಂಕೇತಿಕವಾಗಿ ಒಂದು ಡಜನ್ ಅಥವಾ ಅದಕ್ಕಿಂತಲೂ ಹೆಚ್ಚಿನ - ಮತ್ತು ಇವು ಪೋಷಣೆಯ ಜೇನು ಹುಟ್ಟುನ ತುದಿಯ ಸುತ್ತಲು ಇರುತ್ತವೆ, ಹೆಚ್ಹ್ಚಾಗಿ ಬದಿಯಲ್ಲಿ ಮತ್ತು ಕೆಳಗೆ ಕಾಣಲಾಗುತ್ತದೆ.

ನೆಲಮನೆಯ ಅಡ್ಡತೊಲೆಯ ಮಧ್ಯದಲ್ಲಿರುವ ಹೊಸ ಮೇಣದ ಜೇನು ಹುಟ್ಟುಗಳು

ಅತಿಕ್ರಮಿಸುವ ಪ್ರಕ್ರಿಯೆಯು ಪ್ರಾರಂಭವಾದಾಗ, ಮೊದಲ ರಾಣಿ ಜೇನುನೊಣದ ಕೋಶಗಳಿಗೆ ಕಾವುಕೊಡುವುದರೊಂದಿಗೆ ಹಳೇ ರಾಣಿ ಜೇನುನೊಣ ಸಾಮಾನ್ಯವಾಗಿ ಜೇನುಗೂಡನ್ನು ಬಿಟ್ಟು ಹೋಗುತ್ತದೆ. ರಾಣಿ ಹುಳು ಗೂಡನ್ನು ಬಿಟ್ಟುಹೋಗುವಾಗ ಅದರೊಂದಿಗೆ ಹೆಚ್ಚಿನ ಸಂಖ್ಯೆಯ ಜೇನುನೊಣಗಳು ಹೋಗುತ್ತವೆ, ಪ್ರಧಾನವಾಗಿ ತರುಣ ಜೇನುನೊಣಗಳು (ಮೇಣ-ತಯಾರಿಸುವವು), ಇವು ಹೊಸಾ ಜೇನುಗುಡಿನ ತಳಪಾಯವನ್ನು ರಚಿಸುತ್ತವೆ. ಯೋಗ್ಯವಾದ ಟೊಳ್ಳು ಮರಗಳು ಅಥವಾ ಕಲ್ಲಿನ ಸಂದುಗಳನ್ನು ಹುಡುಕಲು, ಗುಂಪಿನಿಂದ ಅನ್ವೇಷಕರನ್ನು ಹೊರಗೆ ಕಳುಹಿಸಲಾಗುತ್ತದೆ ಮತ್ತು ಅದು ಕಂಡುಹಿಡಿದ ಕೂಡಲೇ ಪೂರ್ಣ ಗುಂಪು ಅಲ್ಲಿಗೆ ತೆರಳಿ, ತರುಣ ಜೇನುನೊಣಗಳು ಹಳೇ ಜೇನುಗೂಡಿನಿಂದ ತಮ್ಮಲ್ಲಿ ಶೇಖರಿಸಿಕೊಂಡ ತೇನುತುಪ್ಪದ ಸಹಾಯದಿಂದ ಹೊಸಾ ಸಂಸಾರದ ಜೇನು ಹುಟ್ಟನ್ನು ಕೆಲವೇ ಗಂಟೆಗಳಲ್ಲಿ ನಿರ್ಮಾಣಮಾಡುತ್ತವೆ. ಕೇವಲ ತರುಣ ಜೇನುನೊಣಗಳು ತಮ್ಮ ವಿಶಿಷ್ಟ ಹೊಟ್ಟೆಯ ಭಾಗಗಳಲ್ಲಿ ಮೆಣವನ್ನು ಗುಪ್ತವಾಗಿ ಇಟ್ಟುಕೊಳ್ಳಬಹುದಾಗಿದೆ ಮತ್ತು ಇದರಿಂದಲೇ ಗುಂಪಿನಲ್ಲಿ ಹಳೇ ಜೇನುನೊಣಗಳಿಗಿಂತಲೂ ಹೆಚ್ಚಿನ ತರುಣ ಜೇನುನೊಣಗಳೇ ಇರಲು ಹವಣಿಸುತ್ತವೆ. ಆಗಾಗ್ಗೆ ಕನ್ನಿಕೆ ರಾಣಿ ಜೇನುನೊಣಗಳು ಮೊದಲ ಗುಂಪಿನ ಜೊತೆಯಲ್ಲಿರುತ್ತವೆ (’ಪ್ರೈಮ್ ಸ್ವಾರ್ಮ್’), ಮತ್ತು ಮಗಳಾದ ರಾಣಿ ಹುಳು ಕೂಡಲು ಮತ್ತು ಮೊಟ್ಟೆಗಳನ್ನು ಇಡಲು ಪ್ರಾರಂಭಿಸಿದ ತಕ್ಷಣ ಹಳೇ ರಾಣಿ ಜೇನುನೊಣದ ಸ್ಥಾನವನ್ನು ಇದರಿಂದ ಭರ್ತಿಮಾಡಲಾಗುವುದು. ಇಲ್ಲದಿದ್ದರೆ, ಇದು ಶೀಘ್ರವಾಗಿ ತನ್ನ ಹೊಸಾ ಗೂಡಿನಲ್ಲಿ ಅತಿಕ್ರಮಿಸುತ್ತದೆ.

ಗುಂಪುಗೂಡುವಿಕೆಯನ್ನು ಪ್ರಚೋದಿಸುವ ವಿಷಯಾಂಶಗಳು

[ಬದಲಾಯಿಸಿ]

ಸಮೂಹದ ಜೇನುನೊಣಗಳು ಅವುಗಳ ಎಲ್ಲಾ ಸಂಸಾರದ ಜೇನು ಹುಟ್ಟುಗಳನ್ನು ಪೂರ್ಣಗೊಳಿಸುವ ವರೆಗು ಗುಂಪಾಗಿ ಚಲಿಸುವುದಿಲ್ಲ ಎಂಬುದನ್ನು ಸಾಮಾನ್ಯವಾಗಿ ಸಮ್ಮತಿಸಲಾಗಿದೆ, ಅಂದರೆ ಲಭ್ಯವಿರುವ ಎಲ್ಲಾ ಜಾಗವನ್ನು ಮೊಟ್ಟೆಗಳಿಂದ, ಮರಿಹುಳುಗಳಿಂದ ಮತ್ತು ಪೂರ್ಣ ಸಂಸಾರದಿಂದ ತುಂಬುವುದು. ಸಾಮಾನ್ಯವಾಗಿ ಇದು ವಸಂತಕಾಲದ ಕೊನೆಯಲ್ಲಿ ಜೇನುಗೂಡಿನ ಉಳಿದ ಭಾಗಗಳು ಜೇನುತುಪ್ಪದ ಶೇಖರಣೆಯಿಂದ ಶೀಘ್ರವಾಗಿ ತುಂಬುತ್ತಿರುವ ಸಮಯದಲ್ಲಿ ನಡೆಯುತ್ತದೆ. ಗುಂಪುಗೂಡುವಿಕೆಯ ಸಹಜಗುಣದ ಒಂದು ಮುಖ್ಯ ಪ್ರಚೋದನೆ ಎಂದರೆ ರಾಣಿ ಜೇನುನೊಣಕ್ಕೆ ಮೊಟ್ಟೆಗಳನ್ನು ಇಡಲು ಯಾವುದೇ ಕೋಣೆ ಇಲ್ಲದಿದ್ದಾಗ ಮತ್ತ್ತು ಜೇನುಗೂಡಿನ ಜೇನುನೊಣಗಳ ಸಂಖ್ಯೆಯು ತುಂಬಾ ಕಿಕ್ಕಿರಿದಾಗ. ಇಂತಹ ಪರಿಸ್ಥಿತಿಗಳಲ್ಲಿ ರಾಣಿ ಜೇನುನೊಣದೊಂದಿಗೆ ಪ್ರಥಮ ಗುಂಪು ಚಲಿಸುವಂತೆ ಮಾಡಲಾಗುತ್ತದೆ, ಇದರ ಪರಿಣಾಮವಾಗಿ ಜೇನುಗೂಡಿನಲ್ಲಿನ ಜೇನುನೊಣಗಳ ಸಂಖ್ಯೆಯು ಅರ್ಧಕ್ಕಿಳಿಯುತ್ತದೆ ಮತ್ತು ಹಲೇ ಸಮೂಹದಲ್ಲಿ ಹೆಚ್ಚಿನ ಸಂಖ್ಯೆಯ ಕಾವುಕೊಡುವ ಜೇನುನೊಣಗಳು ಮಾತ್ರ ಇರುತ್ತವೆ. ಗೂಡನ್ನು ಬಿಟ್ಟ ರಾಣಿ ಜೇನುನೊಣವು ಮೊಟ್ಟೆಗಳು, ಮರಿಹುಳುಗಳು ಇಲ್ಲದ ಆದರೆ ಕೆರೆಯುವಿಕೆಯಿಂದ ಅತೀ ಕಡಿಮೆ ಸಮಯದಲ್ಲಿ ಹೊಸಾ ಸಂಸಾರದ ಜೇನು ಹುಟ್ಟುಗಳನ್ನು ರಚಿಸುವ ಅತೀ ಚುರುಕಾದ ತರುಣ ಜೇನುನೊಣಗಳ ಗೂಡನ್ನು ಸೇರುತ್ತದೆ.

ಗುಂಪುಗೂಡುವಿಕೆಯಲ್ಲಿನ ಮತ್ತೊಂದು ಮುಖ್ಯವಾದ ವಿಷಯ ರಾಣಿ ಜೇನುನೊಣದ ವಯಸ್ಸು. ಒಂದು ವರ್ಷದ ವಯಸ್ಸಿನ ಒಳಗಿನ ರಾಣಿ ಜೇನು ನೊಣಗಳು ಜೇನುಗೂಡು ಅತಿಯಾಗಿ ಕಿಕ್ಕಿರಿದಾಗ ಹೊರತುಪಡೆಸಿ ಬೇರೆಸಮಯದಲ್ಲಿ ಗುಂಪಾಗಿ ಚಲಿಸಲು ಇಷ್ಟಪಡುವುದಿಲ್ಲ, ಇದೇ ಸಮಯದಲ್ಲಿ ವಯಸ್ಸಾದ ರಾಣಿ ಹುಳುಗಳು ಅವನ್ನು ವಿಲೇವಾರಿ ಮಾಡುವ ಮೊದಲೇ ಗುಂಪುಗೂಡಿ ಸಲಿಸುತ್ತವೆ.

ಜೇನುಸಾಕಣೆದಾರರು ತಮ್ಮ ಸಮೂಹವನ್ನು ವಸಂತಕಾಲದಲ್ಲಿ ಅತೀ ಜಾಗೃತಿಯಿಂದ ಪರಿವೀಕ್ಷಿಸುತ್ತಾರೆ ಮತ್ತು ಗುಂಪುಗೂಡುವಿಕೆಯ ನಿರ್ಧಾರದ ಸೂಚನೆಯಾದ ರಾಣಿ ಕೋಶಗಳ ಉದ್ಗಮಕ್ಕಾಗಿ ಗಮನಿಸುತ್ತಾರೆ.

ಸಮೂಹವು ಗುಂಪುಗೂಡಲು ನಿರ್ಧರಿಸಿದಾಗ, ರಾಣಿ ಕೋಶಗಳನ್ನು ಒಂದು ಡಜನು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಮಾಡಲಾಗುತ್ತದೆ. ಈ ರಾಣಿ ಕೋಶಗಳ ಮೊದಲವನ್ನು ಮುಚ್ಚಲಾದಾಗ, ಮರಿಹುಳುವಿನ ಆಹಾರದಾನದ 8 ದಿನಗಳ ನಂತರ, ಕನ್ನಿಕೆಯ ರಾಣಿ ಜೇನುನೊಣ ಪೊರೆಹುಳುವಾಗಿ ಏಳು ದಿನಗಳ ನಂತರ ಹೊರಬರುತ್ತದೆ. ಹೊರಡುವ ಮೊದಲು, ಕೆಲಸದ ಜೇನುನೊಣಗಳು ಹೊಸಾ ಗೂಡಿನಲ್ಲಿ ಹೊಸಾ ಜೇನು ಹುಟ್ಟುಗಳನ್ನು ನಿರ್ಮಿಸುವ ತಯಾರಿಯಲ್ಲಿ ತಮ್ಮ ಹೊಟ್ಟೆಯನ್ನು ಜೇನುತುಪ್ಪದಿಂದ ತುಂಬಿಸಿಕೊಳ್ಳುತ್ತವೆ. ಈ ಜೇನುತುಪ್ಪದ ಸಾಗಣೆಯು ಗುಂಪಲ್ಲಿ ಚಲಿಸುವ ಜೇನುನೊಣಗಳು ಕುಟುಕುವಲ್ಲಿ ಕಡಿಮೆ ಒಲವು ತೋರುವಂತೆ ಮಾಡುತ್ತದೆ ಮತ್ತು ಹೊಸದಾಗಿ ಹೊರಡುವ ಗುಂಪು 24 ಗಂಟೆಗಳ ವರೆಗೂ ಸೌಮ್ಯವಾಗಿರುತ್ತದೆ - ಆಗಾಗ್ಗೆ ಜೇನುಸಾಕಣೆದಾರರು ಇಂತಹ ಜೇನುನೊಣಗಳನ್ನು ಯಾವುದೇ ಹಸ್ತತ್ರಾಣಗಳು ಅಥವಾ ಮುಸುಕಿನ ಅವಶ್ಯಕೆಯಿಲ್ಲದೆ ಹಾಗೆಯೇ ನಿಭಾಯಿಸಬಹುದಾಗಿದೆ.

ಒಂದು ಕೊಂಬೆಗೆ ಅಂಟಿಕೊಂಡಂತಹ ಸಮೂಹ

ಈ ಗುಂಪು ಹೊಸಾ ತಾಣದ ಹುಡುಕಾಟದಲ್ಲಿರುತ್ತದೆ. ಅವುಗಳ ಈ ಅವಶ್ಯಕೆಯನ್ನು ಪೂರೈಸುವಲ್ಲಿ ಸಹಾಯಮಾಡಲು, ಜೇನುಸಾಕಣೆದಾರ ಈ ಜೇನುನೊಣಗಳನ್ನು ಹಿಡಿದು ಹೊಸಾ ಜೇನುಗೂಡಿನಲ್ಲಿ ಬಿಡಬಹುದಾಗಿದೆ. ಇಲ್ಲದಿದ್ದರೆ, ಇವು ಕಾಡು ಜೇನುನೊಣಗಳಾಗಿ ಮಾರ್ಪಡುತ್ತವೆ, ಇಂತಹ ಪರಿಸ್ಥಿತಿಯಲ್ಲಿ ಇವು ತಮ್ಮ ತಾಣವನ್ನು ಟೊಳ್ಳು ಮರದಲ್ಲಿ, ಅಗೆದ ಗುಂಡಿಯಲ್ಲಿ, ತ್ಯಜಿಸಿದ ಚಿಮಣಿಯಲ್ಲಿ, ಅಥವಾ ಕಪಾಟಿನ ಹಿಂದೆ ಹುಡುಕಿಕೊಳ್ಳುತ್ತವೆ.

ಮೂಲ ಜೇನು ಗೂಡಿಗೆ ಮರಳಿದಾಗ, ತನ್ನ ಕೋಶದಿಂದ ಹೊರಬಂದ ಮೊದಲ ಕನ್ನಿಕೆಯ ರಾಣಿಹುಳು ಇನ್ನೂ ಕೋಶಗಳಿಂದ ಹೊರ ಬರದ ಎಲ್ಲಾ ಸ್ಪರ್ಧಿ ರಾಣಿ ಹುಳುಗಳನ್ನು ಕೊಲ್ಲಲು ಪ್ರಯತ್ನಿಸುತ್ತದೆ. ಅದಾಗ್ಯೂ, ಸಾಮಾನ್ಯವಾಗಿ ಜೇನುನೊಣಗಳು ಜಾಗರೂಕತೆಯಿಂದ ರಾಣಿ ಹುಳು ಈ ರೀತಿ ಮಾಡದಂತೆ ತಡೆಯುತ್ತವೆ, ಇಂತಹ ಪರಿಸ್ಥಿತಿಯಲ್ಲಿ ರಾಣಿ ಹುಳು ಸಹ ಎರಡನೆಯ ಗುಂಪುಚಲನೆಯ ಮುಂದಾಳತ್ವವನ್ನು ವಹಿಸುತ್ತದೆ. ಅನುಕ್ರಮದ ಗುಂಪು ಚಲನೆಯನ್ನು ’ನಂತರದ-ಗುಂಪುಚಲನೆ’ ಅಥವಾ ’ಕ್ಯಾಸ್ಟ್ಸ್’ ಎಂದು ಕರೆಯಲಾಗುತ್ತದೆ ಮತ್ತು ಇವುಗಳ ಸಂಖ್ಯೆಯು ಅತೀ ಕಡಿಮೆಯಾಗಿರುತ್ತದೆ, ಅಂದರೆ ಇದು ಕೇವಲ ಸಾವಿರ ಅಥವಾ ಕಡಿಮೆ ಜೇನುನೊಣಗಳನ್ನು ಹೊಂದಿರುತ್ತದೆ, ಇವು ಹತ್ತರಿಂದ ಇಪ್ಪತ್ತು ಸಾವಿರ ಜೇನುನೊಣಗಳನ್ನು ಹೊಂದಿದ್ದ ಪ್ರೈಮ್ ಗುಂಪನ್ನು ವಿರೋಧಿಸಿದವು ಗಳಾಗಿರುತ್ತವೆ.

ಚಿಕ್ಕದಾದ ನಂತರದ-ಗುಂಪು ಉಳಿಗಾಲದ ಕಡಿಮೆ ಅವಕಾಶಗಳನ್ನು ಹೊಂದಿರುತ್ತದೆ, ಮೂಲ ಜೇನುಗೂಡನ್ನು ಬರಿದಾಗಿಸಿದ್ದು ಅವುಗಳ ಉಳಿಗಾಲವನ್ನು ಬೆದರಿಸಿರಬಹುದು. ಜೇನುಸಾಕಣೆದಾರನ ತಡೆಯುವ ಪ್ರಯತ್ನಗಳನ್ನು ಮೀರಿ ಜೇನುಗೂಡು ಗುಂಪುಗೂಡುವಿಕೆಯನ್ನು ಒಳಗೊಂಡಾಗ, ಬರಿದಾದ ಜೇನುಗೂಡನ್ನು ಮೊಟ್ಟೆಗಳನ್ನು ಒಳಗೊಂಡ ತೆರೆದ ಸಂಸಾರದ ಜೋಡಿ ಚೌಕಗಳಿಂದ ತುಂಬುವುದು ಉತ್ತಮ ನಿರ್ವಹಣೆಯ ಅಬ್ಯಾಸವಾಗುತ್ತದೆ. ಇದು ಜೇನುಗೂಡನ್ನು ಶೀಘ್ರವಾಗಿ ಮರುತುಂಬಲು ಸಹಾಯವಾಗುತ್ತದೆ, ಮತ್ತು ಅಲ್ಲಿ ಕೂಡುವಿಕೆಯು ವಿಫಲವಾಗಿದ್ದಲ್ಲಿ, ರಾಣಿ ಜೇನುನೊಣವನ್ನು ತಯಾರಿಸುವ ಎರಡನೆಯ ಅವಕಾಶವನ್ನು ಒದಗಿಸುತ್ತದೆ.

ಪ್ರತಿಯೊಂದು ಸಂತತಿ ಅಥವಾ ಜೇನುನೊಣದ ಉಪ-ತಳಿಗಳು ತನ್ನದೇ ಆದ ಗುಂಪುಗೂಡುವಿಕೆಯ ವೈಶಿಷ್ಟ್ಯತೆಯನ್ನು ಹೊಂದಿವೆ. ಇಟಲಿಯ ಜೇನುನೊಣಗಳು ಬಹಳ ಫಲಭರಿತವಾಗಿದ್ದು ಗುಂಪುಗೂಡುವ ಒಲವನ್ನು ತೋರುತ್ತವೆ; ಉತ್ತರದಿಕ್ಕಿನ ಯುರೋಪಿನ ಕಪ್ಪು ಜೇನುನೊಣಗಳು ಗುಂಪುಗೂಡಿಸದೇ ತಮ್ಮ ಹಳೇ ರಾಣಿ ಹುಳುವನ್ನು ಬದಲಿಸುವ ಪ್ರವೃತ್ತಿಯನ್ನು ಹೊಂದಿರುತ್ತವೆ. ಪ್ರತಿಯೊಂದು ಉಪ-ತಳಿಗಳು ಬೆಳೆದ ಪ್ರದೇಶದಲ್ಲಿನ ವಿಕಸನ ಸಂಬಂಧಿತ ಒತ್ತಡಗಳೇ ಈ ವ್ಯತ್ಯಾಸಗಳಿಗೆ ಕಾರಣ.

ಕೃತಕ ಗುಂಪುಗೂಡಿಸುವಿಕೆ

[ಬದಲಾಯಿಸಿ]

ಸಮೂಹವು ಅಕಸ್ಮಾತ್ತಾಗಿ ತನ್ನ ರಾಣಿ ಜೇನುನೊಣವನ್ನು ಕಳೆದುಕೊಂಡರೆ, ಅಂತಹ ಸಮೂಹವನ್ನು ’ರಾಣಿ ಇಲ್ಲದ’ ಸಮೂಹ ಎಂದು ಕರೆಯಲಾಗುತ್ತದೆ. ರಾಣಿ ಹುಳುವಿನ ಗೈರು ಹಾಜರಾತಿಯು ಒಂದು ಗಂಟೆಯ ನಂತರ ಜೇನುಗೂಡಿನಲ್ಲಿ ಅದರ ಪೆರೋಮೋಗಳು ಮಂಕಾದಾಗಷ್ಟೇ ಕೆಲಸದ ಜೇನುನೊಣಗಳ ಗಮನಕ್ಕೆ ಬರುತ್ತದೆ. ಅವುಗಳ ಸಂತತಿಯನ್ನು ವರ್ಧಿಸಲು ಮೊಟ್ಟೆಗಳನ್ನು ಇಡುವ ಫಲವತ್ತಾದ ರಾಣಿ ಜೇನುನೊಣ ಇಲ್ಲದೆ ಸಮೂಹವು ಬದುಕಲು ಸಾಧ್ಯವಿಲ್ಲ. ಆದ್ದರಿಂದ ಕೆಲಸದ ಜೇನುನೊಣಗಳು ಮೂರುದಿನದ ಒಳಗಿನ ಮೊಟ್ಟೆಗಳಿರುವ ಕೋಶಗಳನ್ನು ಆಯ್ಕೆಮಾಡಿಕೊಂಡು ಆವುಗಳನ್ನು ’ತ್ವರಿತ ರಾಣಿ ಕೋಶಗಳನ್ನಾಗಿ’ ಮಾಡಲು ವಿಸ್ತಾರಮಾಡುತ್ತವೆ. ಇವು ದೊಡ್ಡ ಗಾತ್ರದ ಶೇಂಗಾ ಬೀಜದ-ಮಾದರಿಯ ರಚನೆಯನ್ನು ಹೊಂದಿದ್ದು ಒಂದು ಇಂಚು ಉದ್ದವಾಗಿರುತ್ತವೆ, ಸಂಸಾರದ ಜೇನು ಹುಟ್ಟಿನ ಮಧ್ಯಭಾಗದಲ್ಲಿ ಅಥವಾ ಬದಿಯಲ್ಲಿ ನೇತಾಡಿಸಲಾಗಿರುತ್ತವೆ. ರಾಣಿ ಕೋಶದಲ್ಲಿ ಬೆಳೆಯುತ್ತಿರುವ ಮರಿಹುಳುವಿಗೆ ಸಾಧಾರಣ ಕೆಲಸದ ಜೇನುನೊಣಗಿಂತಲೂ ಭಿನ್ನವಾಗಿ ಆಹಾರ ನೀಡಲಾಗುವುದು, ಇದು ಸಾಮಾನ್ಯ ಜೇನುತುಪ್ಪ ಮತ್ತು ಪರಾಗದ ಜೊತೆಗೆ ಪೋಷಣೆಯ ಜೇನುನೊಣಗಳ ಹೈಪೊಫಾರಂಜಿಯಲ್ ಗ್ರಂಥಿಗಳಿಂದ ಉತ್ತಮ ರಾಯಲ್ ಜೆಲ್ಲಿಯನ್ನು ಪಡೆಯುತ್ತವೆ. ಈ ವಿಶೇಷ ಆಹಾರವು ಮರಿಹುಳುವಿನ ಬೆಳವಣಿಗೆ ಮತ್ತು ಆಕಾರವನ್ನು ಬದಲಾಯಿಸುತ್ತದೆ, ಆದ್ದರಿಂದ ರೂಪಾಂತರವಾಗಿ ಪೊರೆಹುಳುವಾದ ನಂತರ ಇದು ರಾಣಿ ಜೇನುನೊಣವಾಗಿ ಕೋಶದಿಂದ ಹೊರಬರುತ್ತದೆ. ಸಮೂಹದಲ್ಲಿ ಪೂರ್ಣ ಅಭಿವೃದ್ಧಿ ಹೊಂದಿದ ಅಂಡಾಶಯಗಳನ್ನು ಹೊಂದಿದ ಏಕೈಕ ಜೇನುನೊಣ ರಾಣಿ ಜೇನುಹುಳು ಮತ್ತು ಇದು ಇತರ ಎಲ್ಲಾ ಕೆಲಸದ ಜೇನುನೊಣಗಳಲ್ಲಿ ಅಂಡಾಶಯಗಳ ಬೆಳವಣಿಗೆಯನ್ನು ನಿರೋಧಿಸುವ ಪೆರೋಮೋನ್‌ಗಳನ್ನು ಹೊಂದಿರುತ್ತದೆ.

ಜೇನುಸಾಕಣೆದಾರರು ಸಮೂಹಗಳನ್ನು ಹೆಚ್ಚಿಸಲು, ಹೊಸಾ ರಾಣಿ ಜೇನುನೊಣವನ್ನು ಅಭಿವೃದ್ಧಿಮಾಡುವ ಜೇನುನೊಣಗಳ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುತ್ತಾರೆ, ಈ ಕಾರ್ಯವಿಧಾನವನ್ನು ಸಮೂಹವನ್ನು ವಿಭಜಿಸುವಿಕೆ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಗಾಗಿ, ಅವರು ಆರೋಗ್ಯವಂತ ಜೇನುಗೂಡಿನಿಂದ ಅನೇಕ ಸಂಸಾರದ ಜೇನು ಹುಟ್ಟುಗಳನ್ನು ತೆರವು ಗೊಳಿಸುತ್ತಾರೆ, ಆದರೆ ಹಳೇ ರಾಣಿ ಜೇನುಹುಳು ಕಡ್ಡಾಯವಾಗಿ ಅಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ಜೇನು ಹುಟ್ಟುಗಳು ಕಡ್ಡಾಯವಾಗಿ ಮೂರುದಿನದ ಒಳಗಿನ ಮೊಟ್ಟೆಗಳನ್ನು ಅಥವಾ ಮರಿಹುಳುಗಳನ್ನು ಒಳಗೊಂಡಿದ್ದು ಅವುಗಳನ್ನು ಆರೈಕೆ ಮಾಡಿ ಬೆಚ್ಚಗೆ ಇಡುವ ತರುಣ ’ಪೋಷಣೆಯ ಜೇನುನೊಣಗಳನ್ನು’ ಹೊಂದಿರಬೇಕು. ಈ ಸಂಸಾರದ ಜೇನು ಹುಟ್ಟುಗಳನ್ನು ಮತ್ತು ಅವುಗಳನ್ನು ಆರೈಕೆ ಮಾಡುವ ಪೋಷಣೆಯ ಜೇನುನೊಣಗಳನ್ನು, ಜೇನುತುಪ್ಪ ಮತ್ತು ಪರಾಗವನ್ನು ಹೊಂದಿದ್ದ ಇತರ ಜೇನು ಹುಟ್ಟುಗಳೊಂದಿಗೆ ಚಿಕ್ಕ ’ನ್ಯೂಕ್ಲಿಯಸ್ ಜೇನುಗೂಡಿನಲ್ಲಿ’ ಇಡಲಾಗುತ್ತದೆ. ಹೊಸಾ ಜೇನುಗೂಡಿನಲ್ಲಿ ಇರಿಸಿಲಾಗಿವೆ ಅಲ್ಲಿ ರಾಣಿ ಜೇನುನೊಣ ಇಲ್ಲ ಎಂದು ಗೊತ್ತಾದ ತಕ್ಷಣ ಆರೈಕೆಯ ಜೇನುನೊಣಗಳು ತಮ್ಮೊಂದಿಗೆ ಇದ್ದ ಜೇನುಹುಟ್ಟಿನಲ್ಲಿನ ಮೊಟ್ಟೆಗಳು ಮತ್ತು ಮರಿಗಳನ್ನು ಉಪಯೋಗಿಸಿಕೊಂಡು ತುರ್ತು ರಾಣಿ ಕೋಶಗಳ ನಿರ್ಮಾಣದ ವ್ಯವಸ್ಥೆಯನ್ನು ಮಾಡುತ್ತವೆ.

ವಿಶ್ವದ ಜೇನುಸಾಕಣೆ

[ಬದಲಾಯಿಸಿ]
2005ರ ವಿಶ್ವದ ಜೇನುತುಪ್ಪ ಉತ್ಪಾದನೆ ಮತ್ತು ಬಳಕೆ
ಉತ್ಪಾದನೆ
(ಮಿಲಿಯನ್ ಮೆಟ್ರಿಕ್ ಟನ್)
ಬಳಕೆ
(ಮಿಲಿಯನ್ ಮೆಟ್ರಿಕ್ ಟನ್)
ಕ್ರಮ ಸಂಖ್ಯೆ
ಜೇನುಸಾಕಣೆದಾರರು
ಕ್ರಮ ಸಂಖ್ಯೆ
ಜೇನುಗೂಡುಗಳು
ಯೂರೋಪ್ ಮತ್ತು ರಷ್ಯಾ
ಉಕ್ರೇನ್ 71.46 52
ರಷ್ಯಾ 52.13 54
ಸ್ಪೇನ್‌ 37.00 40
ಜರ್ಮನಿ (*2008) 21.23 89 90,000* 1,000,000*
ಹಂಗೇರಿ 19.71 4
ರೊಮೇನಿಯ 19.20 10
ಗ್ರೀಸ್‌ 16.27 16
ಫ್ರಾನ್ಸ್‌‌ 15.45 30
ಬಲ್ಗೇರಿಯ 11.22 2
ಸರ್ಬಿಯಾ 3 to 5 6.3 30,000 430,000
ಡೆನ್ಮಾರ್ಕ್‌[52] 2.5 5 *4,000 *150,000
ಉತ್ತರ ಅಮೆರಿಕಾ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (*2006, **2002) 70.306* 158.75* 12,029** (210,000 ಜೇನುಸಾಕಣೆದಾರರು) 2,400,000*
ಕೆನಡಾ 45 (2006); 28 (2007) [೧೮] 29 13,000 500,000
ಲ್ಯಾಟಿನ್ ಅಮೆರಿಕ
ಅರ್ಜೆಂಟೀನಾ 93.42 (ಸರಾಸರಿ 84)[೧೯] 3
ಮೆಕ್ಸಿಕೋ 50.63 31
ಬ್ರೆಜಿಲ್‌ 33.75 2
ಉರುಗ್ವೆ 11.87 1
ಓಸಿಯಾನಿಯ
ಆಸ್ಟ್ರೇಲಿಯಾ 18.46 16
ನ್ಯೂಜಿಲೆಂಡ್‌ 9.69 8
ಏಷ್ಯಾ
ಚೀನಾ 299.33 (ಸರಾಸರಿ 245) 238 7,200,000 [೧೯]
ಟರ್ಕಿ 82.34 (ಸರಾಸರಿ 70) 66 4,500,000 [೧೯][೨೦]
ಇರಾನ್‌ 3,500,000 [೧೯]
ಭಾರತ 52.23 | [45] 9,800,000 [೧೯]
ದಕ್ಷಿಣ ಕೊರಿಯ 23.82 27
ವಿಯೆಟ್ನಾಮ್‌‌ 13.59 0
ತುರ್ಕಮೆನಿಸ್ತಾನ್ 10.46 10
ಆಫ್ರಿಕಾ
ಇಥಿಯೋಪಿಯಾ 41.23 40 4,400,000
ಟಾಂಜೇನಿಯಾ 28.68 28
ಅಂಗೋಲಾ 23.77 23
ಕೀನ್ಯಾ 22.00 21
ಈಜಿಪ್ಟ್ (*1997) [16] 200,000* 2,000,000*
ಮಧ್ಯ ಆಫ್ರೀಕಾದ ಗಣರಾಜ್ಯ 14.23 14
ಮೊರೊಕ್ಕೊ (*1997) 4.5% 27,000* 400,000*
ಮೂಲ: ಯುನೈಟೆಡ್ ಸ್ಟೇಟ್ಸ್‌ನ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್ (ಎಫ್‌ಎಒ Archived 2007-03-10 ವೇಬ್ಯಾಕ್ ಮೆಷಿನ್ ನಲ್ಲಿ.), ಆಗಸ್ಟ್ 2007.

ಮೂಲಗಳು

  • ಡೆನ್ಮಾರ್ಕ್: beekeeping.com [೨೧] (1996)
  • ಅರಬ್ ದೇಶಗಳು: beekeeping.com [೨೨] (1997)
  • ಯುಎಸ್‌ಎ: ಯೂನಿವರ್ಸಿಟಿ ಆಫ್ ಆರ್ಕನ್ಸಾಸ್ ನ್ಯಾಷನಲ್ ಅಗ್ರಿಕಲ್ಚರಲ್ ಲಾ ಸೆಂಟರ್ [೨೩] (2002), ಅಗ್ರಿಕಲ್ಚರಲ್ ಮಾರ್ಕೆಟಿಂಗ್ ರೀಸೋರ್ಸ್ ಸೆಂಟರ್ [೨೪] (2006)
  • ಸರ್ಬಿಯಾ [೨೫]

ಜೇನು ಸುಗ್ಗಿಯ ಚಿತ್ರಗಳು

[ಬದಲಾಯಿಸಿ]

ಇವನ್ನೂ ಗಮನಿಸಿ

[ಬದಲಾಯಿಸಿ]
  • ಕೃಷಿ
  • ಬಯೋಸೆಕ್ಯೂರಿಟಿ
  • ಪಾಸ್ಚಿಮಾತ್ಯ ಜೇನುನೊಣದ ಜೀವನಚಕ್ರ
  • ನ್ಯೂಜಿಲ್ಯಾಂಡ್‌ನಲ್ಲಿ ಜೇನುಸಾಕಣೆ
  • ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಜೇನುಸಾಕಣೆ
  • ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜೇನುಸಾಕಣೆ

ಉಲ್ಲೇಖಗಳು

[ಬದಲಾಯಿಸಿ]
  1. [1]
  2. "ಬೀ ಸ್ಪೀಷೀಸ್ ಔಟ್‌ನಂಬರ್ ಮ್ಯಾಮಲ್ಸ್ ಅಂಡ್ ಬರ್ಡ್ಸ್ ಕಂಬೈನ್ಡ್ " ಬಯಾಲಜಿ ಆನ್‌ಲೈನ್ ಅಕ್ಸೆಸ್ ದಿನಾಂಕ: 28/09/2009
  3. "ಸಾಲಿಟರಿ ಬೀಸ್" Archived 2007-02-25 ವೇಬ್ಯಾಕ್ ಮೆಷಿನ್ ನಲ್ಲಿ. ಸಾಲಿಟರಿ ಬೀಸ್ ವೆಬ್‌ಸೈಟ್, ದಿನಾಂಕ: 28/09/2009
  4. ಪುರಾತನ ಈಜಿಪ್ಟ್‌ನಲ್ಲಿ ಜೇನುಸಾಕಣೆ
  5. ಪುರಾತನ ಈಜಿಪ್ಟ್‌ನಲ್ಲಿ ಜೇನುಸಾಕಣೆ
  6. ಎಪಿಕಲ್ಚರ್ ಇನ್ ಈಜಿಪ್ಟ್, ಡಾ ಟರೆಕ್ ಇಸ್ಸಾ ಎಬಿಡಿ ಎಲ್-ವಹಾಬ್
  7. ಹರಲಂಪೊಸ್ ವಿ, ಹರಿಸ್ಸಿಸ್, ಅನಸ್ಟಸಿಯೊಸ್ ವಿ.
  8. ಪ್ರಾಕ್ತನಶಾಸ್ತ್ರದ ಒಂದು ಉದಾಹಣೆಯಂತೆ ಜೇನುಸಾಕಣೆಯನ್ನು ಮೊದಲು ಕಂಡುಹಿಡಿದದ್ದು ಇಸ್ರೇಲ್‌ನಲ್ಲಿ Archived 2015-11-17 ವೇಬ್ಯಾಕ್ ಮೆಷಿನ್ ನಲ್ಲಿ. (ಸೆಪ್ಟೆಂಬರ್ 1st, 2008)
  9. ಮಝರ್, ಅಮಿಹಾಯ್ ಮತ್ತು ಪ್ಯಾನಿಟ್ಜ್-ಕೊಹೆನ್, ನಾವಾ, (ಡಿಸೆಂಬರ್ 2007) ಇಟ್ ಈಸ್ ಲ್ಯಾಂಡ್ ಆಫ್ ಹನಿ: ಬೀಕೀಪಿಂಗ್ ಅಟ್ ಟೆಲ್ ರೆಹೊವ್ Archived 2017-06-20 ವೇಬ್ಯಾಕ್ ಮೆಷಿನ್ ನಲ್ಲಿ. ಪೂರ್ವದ ಪ್ರಾಕ್ತನಶಾಸ್ತ್ರದಂತೆ, ಸಂಪುಟ 70, ಸಂಖ್ಯೆ 4, ಐಎಸ್‌ಎಸ್‌ಎನ್ 1094-2076
  10. ಥಾಮಸ್ ವೈಲ್ಡ್‌ಮನ್, ಎ ಟ್ರೀಟೈಸ್ ಆನ್ ದಿ ಮ್ಯಾನೇಜ್ಮೆಂಟ್ ಆಫ್ ಬೀಸ್ (ಲಂಡನ್, 1768, 2ನೆಯ ಆವೃತ್ತಿ 1770).
  11. ವೈಲ್ಡ್‌ಮನ್, ಅಪ್.ಸಿಟ್., 2ನೆಯ (1770) ಆವೃತ್ತಿ., 94-95 ಪುಟಗಳಲ್ಲಿ
  12. ವೈಲ್ಡ್‌ಮನ್, ಅಪ್.ಸಿಟ್., 2ನೆಯ (1770) ಆವೃತ್ತಿ., 112-115 ಪುಟಗಳಲ್ಲಿ.
  13. ಉಲ್ಲೇಖ ದೋಷ: Invalid <ref> tag; no text was provided for refs named Honey Hunting' 1999
  14. Gregory, Pam. "Better beekeeping in top-bar hives" (Web article). Bees For Development. Retrieved 2008-03-12.
  15. "ಆರ್ಕೈವ್ ನಕಲು". Archived from the original on 2010-09-16. Retrieved 2010-09-12.
  16. "ಆರ್ಕೈವ್ ನಕಲು". Archived from the original on 2010-03-22. Retrieved 2010-09-12.
  17. "ಆರ್ಕೈವ್ ನಕಲು". Archived from the original on 2010-03-29. Retrieved 2010-09-12.
  18. [೧] ಪ್ರೊಡಕ್ಷನ್ ಅಂಡ್ ವ್ಯಾಲ್ಯೂ ಆಫ್ ಹನಿ ಅಂಡ್ ಮ್ಯಾಪಲ್ ಪ್ರಾಡಕ್ಟ್ಸ್ ; 2007
  19. ೧೯.೦ ೧೯.೧ ೧೯.೨ ೧೯.೩ ೧೯.೪ ಎಕನಾಮಿಕ್ ಆಸ್ಪೆಕ್ಟ್ಸ್ ಆಫ್ ಬೀಕೀಪಿಂಗ್ ಪ್ರೊಡಕ್ಷನ್ ಇನ್ ಕ್ರೊಯೇಶಿಯಾ VETERINARSKI ARHIV 79 (4), 397-408, 2009
  20. ""ದಿ ಪ್ರಾಸ್ಪೆಕ್ಟ್ಸ್ ಫಾರ್ ಬೀಕೀಪಿಂಗ್ ಇನ್ ದಿ ಎಕ್ಸ್‌ಪ್ಯಾಂಡೆಡ್ ಇಯು"" (PDF). Archived from the original (PDF) on 2005-12-18. Retrieved 2010-09-12.
  21. "ಎಪಿಸರ್ವಿಸಸ್ - ಬೀಕೀಪಿಂಗ್ - ಎಪಿಕಲ್ಚರ್ - ಡೆನ್ಮಾರ್ಕ್/ಡೇನೆಮಾರ್ಕ್". Archived from the original on 2016-03-17. Retrieved 2010-09-12.
  22. "ದಿ ಫ್ಯೂಚರ್ ಆಫ್ ಬೀಸ್ ಅಂಡ್ ಹನಿ ಪ್ರೊಡಕ್ಷನ್ ಇನ್ ಅರಬ್ ಕಂಟ್ರೀಸ್". Archived from the original on 2016-03-04. Retrieved 2010-09-12.
  23. "ಆರ್ಕೈವ್ ನಕಲು" (PDF). Archived from the original (PDF) on 2010-11-26. Retrieved 2010-09-12.
  24. "ಜೇನುನೊಣಗಳು". Archived from the original on 2006-10-06. Retrieved 2010-09-12.
  25. "ಆರ್ಕೈವ್ ನಕಲು". Archived from the original on 2010-03-29. Retrieved 2010-09-12.


ಬಾಹ್ಯ ಕೊಂಡಿಗಳು

[ಬದಲಾಯಿಸಿ]