ಜೇಸನ್ ಮೂರ್
ಜೇಸನ್ ಮೂರ್ | |
---|---|
Born | ೧೯೮೪/೧೯೮೫ |
Nationality | ಅಮೇರಿಕ |
Known for | ವಿಕಿಪೀಡಿಯಾ ಸಂಪಾದನೆ |
ಜೇಸನ್ ಮೂರ್ (ಜನನ ೧೯೮೪/೧೯೮೫) ಅಮೇರಿಕಾದ ಒಬ್ಬ ವಿಕಿಪೀಡಿಯಾ ಸಂಪಾದಕ. ಅವರು ೨೦೦೭ರಿಂದ ಸಕ್ರಿಯರಾಗಿದ್ದು, ಸಂಪಾದನೆಗಳ ಎಣಿಕೆಯ ಅನುಸಾರ ಆಂಗ್ಲ ವಿಕಿಪೀಡಿಯದ ಅತ್ಯಂತ ಸಕ್ರಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಮುಖ್ಯವಾಗಿ ಪ್ರಚಲಿತ ವಿದ್ಯಮಾನಗಳು, ಕೋವಿಡ್-೧೯ ಸಾಂಕ್ರಮಿಕ, ಜಾರ್ಜ್ ಫ್ಲಾಯ್ಡ್ ಪ್ರತಿಭಟನೆಗಳು ಹಾಗೂ ಅವರ ನೆಲೆಯಾದ ಪೋರ್ಟ್‌ಲ್ಯಾಂಡ್, ಒರೆಗಾನ್ ಕುರಿತು ಬರೆಯುತ್ತಾರೆ. ಮೂರ್ ಅವರು ಆಂಗ್ಲ ವಿಕಿಪೀಡಿಯಾದಲ್ಲಿ ಈ ವಿಷಯಗಳ ಕುರಿತ ಬರೆಯುವವರ ಸಹಕಾರಕ್ಕಾಗಿ ವಿಕಿಯೋಜನೆಗಳನ್ನು ರಚಿಸಿದ್ದಾರೆ. ವಿಕಿಮೀಡಿಯ ಸಂಘಟಕರಾಗಿ ವಿಕಿಸಮ್ಮಿಲನಗಳನ್ನು ಆಯೋಜಿಸಿದ್ದು, ಹೊಸ ಬಳಕೆದಾರರಿಗೆ ತರಬೇತಿ ನೀಡಲು ಸಂಪಾದನೋತ್ಸವಗಳನ್ನು ನಡೆಸಿದ್ದಾರೆ.
ವಿಕಿಪೀಡಿಯ
[ಬದಲಾಯಿಸಿ]ಮೂರ್ ಆಂಗ್ಲ ವಿಕಿಪೀಡಿಯದಲ್ಲಿ ಸಂಪಾದನೆಗಳ ಎಣಿಕೆಯ ಅನುಸಾರ ಅತ್ಯಂತ ಸಕ್ರಿಯ ಸದಸ್ಯರಲ್ಲಿ ಒಬ್ಬರು.[೧][೨] ೨೦೦೭ರಿಂದ[೩][೪] "Another Believer"[೫] ಬಳಕೆದಾರ ಹೆಸರಿನಡಿ ೫ ಲಕ್ಷಕ್ಕೂ ಹೆಚ್ಚು ಸಂಪಾದನೆಗಳನ್ನು ಹೊಂದಿದ್ದು,[೧] ಪ್ರಚಲಿತ ವಿದ್ಯಮಾನಗಳು, ನೈಸರ್ಗಿಕ ದುರಂತಗಳು, ಭಯೋತ್ಪಾದಕ ದಾಳಿಗಳು ಸೇರಿದಂತೆ ಹಲವು ವಿಷಯಗಳ ಕುರಿತು ಸಾವಿರಾರು ಲೇಖನಗಳನ್ನು ರಚಿಸಿದ್ದಾರೆ.[೧] ಆಂಗ್ಲ ವಿಕಿಪೀಡಿಯಾದಲ್ಲಿ ಮೂರ್ ಅವರು ಕೋವಿಡ್-೧೯ ಸಾಂಕ್ರಮಿಕದ ಕುರಿತ ಸಂಪಾದನೆಗಳಿಗೆ ಸಹಕರಿಸಲು ಸಂಪಾದಕರ ಬಾಂಧವ್ಯ ಗುಂಪನ್ನು (ವಿಕಿಯೋಜನೆ) ರಚಿಸಿದ್ದಾರೆ.[೫][೬] ಅಮೇರಿಕಾದ ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದ್ದ ಕೋವಿಡ್-೧೯ರ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ವ್ಯಾಪಕವಾಗಿ ಬರೆದಿದ್ದಾರೆ.[೭] ೨೦೨೧ರ ಅಮೇರಿಕ ಕ್ಯಾಪಿಟೊಲ್ ದಾಳಿಯ ಲೇಖನವನ್ನು ರಚಿಸಿ, ಸುಳ್ಳುಸಿದ್ದಿ ಹಾಗೂ ಆಧಾರರಹಿತ ಮಾಹಿತಿ ಹೆಚ್ಚುಕಾಲ ಉಳಿಯದಂತೆ ಜೋಪಾನವಹಿಸಿದ್ದರು.[೪]
ವಿಕಿಪೀಡಿಯ ಸಂಪಾದನೆಯೊಂದಿಗೆ ಮೂರ್ ವಿಕಿಸಮ್ಮಿಲನ ಹಾಗೂ ಹೊಸ ಬಳಕೆದಾರರಿಗೆ ತರಬೇತಿ ನೀಡಲು ಸಂಪಾದನೋತ್ಸವಗಳನ್ನು ಅಯೋಜಿಸಿದ್ದಾರೆ.[೩] ಅಂತರಜಾಲವನ್ನು ಸುಲಭವಾಗಿ ಉತ್ತಮಗೊಳಿಸುವುದರಿಂದ ಸಿಗುವ ಕ್ಷಣಿಕ ತೃಪ್ತಿ ಹಾಗೂ ಜಗತ್ತಿಗೆ ಜ್ಞಾನ ಹಂಚುವುದು ವಿಕಿಪೀಡಿಯ ಸಂಪಾದಿಸುವ ಪ್ರೇರಣೆ ಎಂದು ಮೂರ್ ಹೇಳಿದ್ದಾರೆ.[೫][೩] ಮೂರ್ ವಿಕಿಪೀಡಿಯಾದ ಪ್ರಭಾವಿ ವ್ಯಕ್ತಿಯರಲ್ಲೊಬ್ಬರು ಎಂದು ಸಿಎನ್‍ಎನ್ ಬಿಜ಼ನಸ್ ವಿಶ್ಲೇಷಿಸಿದೆ.[೧]
ವೈಯಕ್ತಿಕ ಜೀವನ ಹಾಗೂ ವೃತ್ತಿ
[ಬದಲಾಯಿಸಿ]ಮೂರ್ ಅವರು ೧೯೮೪ ಅಥವಾ ೧೯೮೫ರಲ್ಲಿ ಜನಿಸಿದರು.[೫] ಬೆಳೆದಿದ್ದು ಹೂಸ್ಟನ್‍ನಲ್ಲಿ.[೩] ೨೦೨೨ ರಂತೆ ಪೋರ್ಟ್‌ಲ್ಯಾಂಡ್‍ನಲ್ಲಿ ನೆಲೆಸಿದ್ದು, ಡಿಜಿಟಲ್ ತಂತ್ರಗಾರರಾಗಿ ಕೆಲಸ ಮಾಡುತ್ತಾರೆ.[೧] ಇದಕ್ಕೂ ಮುನ್ನ ಒರೆಗಾನ್ ಸ್ವರಮೋಳದ ನಿಧಿಸಂಗ್ರಹಣೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.[೩]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ಕೆಲ್ಲಿ, ಸಮಂತಾ ಮರ್ಫಿ (May 20, 2022). "Meet the Wikipedia editor who published the Buffalo shooting entry minutes after it started". ಸಿಎನ್‍ಎನ್ ಬಿಜ಼ನಸ್ (in ಇಂಗ್ಲಿಷ್). Archived from the original on May 20, 2022. Retrieved May 20, 2022.
- ↑ ಗೆಡೈ, ಗ್ರೇಸ್ (February 4, 2021). "When the Capitol Was Attacked, Wikipedia Went to Work". ವಾಷಿಂಗ್ಟನ್ ಮಂತ್ಲಿ (in ಇಂಗ್ಲಿಷ್). Archived from the original on March 2, 2021. Retrieved February 4, 2021.
- ↑ ೩.೦ ೩.೧ ೩.೨ ೩.೩ ೩.೪ ಸ್ಟಾಬ್ಲರ್, ಡೇವಿಡ್ (May 11, 2013). "Wikipedia a passion for Portland's Jason Moore". ದಿ ಒರೆಗಾನಿಯನ್ (in ಇಂಗ್ಲಿಷ್). ಪೋರ್ಟ್‌ಲ್ಯಾಂಡ್, ಒರೆಗಾನ್. ISSN 8750-1317. Archived from the original on March 14, 2016. Retrieved March 11, 2016.
- ↑ ೪.೦ ೪.೧ ಪ್ಯಾಸ್ಟರ್ನ್ಯಾಕ್, ಅಲೆಕ್ಸ್ (January 14, 2021). "As a mob attacked the Capitol, Wikipedia struggled to find the right words". ಫಾಸ್ಟ್ ಕಂಪನಿ (in ಇಂಗ್ಲಿಷ್). Archived from the original on January 15, 2021. Retrieved January 14, 2021.
- ↑ ೫.೦ ೫.೧ ೫.೨ ೫.೩ ಆ್ಯಂಡ್ರೀವ್ಸ್, ಟ್ರೇವಿಸ್ ಎಂ. (August 7, 2020). "Covid-19 is one of Wikipedia's biggest challenges ever. Here's how the site is handling it". ದಿ ವಾಷಿಂಗ್ಟನ್ ಪೋಸ್ಟ್ (in ಇಂಗ್ಲಿಷ್). Archived from the original on August 9, 2020. Retrieved August 10, 2020.
- ↑ ವಾಸ್ಕೆಸ್, ಕರೇಲಿಯ (November 28, 2020). "¿Y tú te fiarías de la Wikipedia en 2020?". ಎಲ್ ಪಾಯ್ಸ್ (in ಸ್ಪ್ಯಾನಿಷ್). Archived from the original on May 21, 2022. Retrieved June 1, 2022.
- ↑ ಹ್ಯಾರಿಸನ್, ಸ್ಟೀಫನ್ (May 27, 2020). "Future Historians Will Rely on Wikipedia's COVID-19 Coverage". ಸ್ಲೇಟ್ (in ಇಂಗ್ಲಿಷ್). Archived from the original on May 27, 2020. Retrieved May 27, 2020.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- "Spotlight on people: Another Believer and Wiki Loves Libraries". Books & Bytes. ದಿ ವಿಕಿಪೀಡಿಯ ಲೈಬ್ರರಿ, ಆಂಗ್ಲ ವಿಕಿಪೀಡಿಯ. November 2013.