ವಿಷಯಕ್ಕೆ ಹೋಗು

ಜ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ವರವು ದೇಹದ ಉಷ್ಣಾಂಶದ ನಿಯಂತ್ರಕ ಉದ್ದೇಶಿತ ಬಿಂದುವಿನ ಹೆಚ್ಚಳದ ಕಾರಣ ಸಾಮಾನ್ಯ ಪರಿಮಿತಿಯಾದ ೯೮-೧೦೦ °ಎಫ್‌ಕಿಂತ ಏರಿದ ಉಷ್ಣತೆಯ ಲಕ್ಷಣವಿರುವ ಒಂದು ಸಾಮಾನ್ಯವಾದ ವೈದ್ಯಕೀಯ ಚಿಹ್ನೆ. ಉದ್ದೇಶಿತ ಬಿಂದುವಿನಲ್ಲಿನ ಹೆಚ್ಚಳವು ಹೆಚ್ಚಿದ ಸ್ನಾಯುಕರ್ಷಣ ಮತ್ತು ನಡುಕವನ್ನು ಪ್ರಚೋದಿಸುತ್ತದೆ. ಒಬ್ಬ ವ್ಯಕ್ತಿಯ ಉಷ್ಣಾಂಶ ಹೆಚ್ಚಿದಂತೆ, ದೇಹದ ಉಷ್ಣಾಂಶ ಹೆಚ್ಚುತ್ತಿದ್ದರೂ, ಸಾಮಾನ್ಯವಾಗಿ ಚಳಿಯ ಅರಿವಾಗುತ್ತದೆ. ಇದರ ಲಕ್ಶಣಗಳು ತಲೆನೋವು,ಮೈಕೈನೋವು,ಬಳಲಿಕೆ,ಬೇಸರ,ಹಸಿವು ಇಲ್ಲದಿರುವುದು.ಚಳಿ ಹೀಗೆ ಎಷ್ಟೋ ವಿಧಗಳು ಶರೀರವನ್ನು ಕಾಡಿಸುತ್ತದೆ.ಇವೆಲ್ಲವು ವೈರಸ್,ಫ೦ಗಸ್ ಅ೦ತಹ ಸೂಕ್ಶ್ಮ ಜೀವಿಗಲಳಿ೦ದ ಬರುತ್ತದೆ. ೧೦೦ ರಿಂದ ೧೦೨ ಡಿಗ್ರಿಗಳ ಫ್ಯಾರಿನ್ ಹೀಟ್ನಲ್ಲಿದ್ದರೇ ಅದು ಮಾಧ್ಯಮಜ್ವರ.೧೦೩ ರಿಂದ ೧೦೬ ಡಿಗ್ರಿಗಳ ಫ್ಯಾರಿನ್ ಹೀಟ್ನಲ್ಲಿದ್ದರೆ ಹೈ ಫೀವರ್.ಇದಕ್ಕೆ ಅತ್ಯವರಸರದ ಚಿಕಿತ್ಸೆ ಅಗತ್ಯ. ರೆಮಿನೆಂಟ್ ಫೀವರ್: ಇದು ೨೪ ಗ೦ಟೆಗಳಲ್ಲಿ ಜ್ವರ ೩ ಡಿಗ್ರಿಗಳ ಫಾರಿನ್ ಹೀಟ್ವರೆಗೂ ಕಡಿಮೆ ಆಗುವುದು ,ಹೆಚ್ಛಾಗುವುದು. ಈಗ ಚಿಕುನ್ಗುನ್ಯಾ,ಡೆ೦ಗ್ಯೂ,ಫೀವರ್ಗಳುಹ ಹೆಚ್ಚಾಗಿ ಬರುತ್ತದೆ.

ವಾಸ್ತಾವವಾಗಿ ಅನೇಕ ವೇಳೆ ಜ್ವರ ಒಂದು ನಿರ್ದಿಷ್ಟ ರೋಗವೇ ಅಲ್ಲ. ಇನ್ನಾವುದೇ ರೋಗದ (ಸಾಮಾನ್ಯವಾಗಿ ಸೋಂಕುರೋಗ) ಆನುಷಂಗಿಕ ಲಕ್ಷಣ ಮಾತ್ರ. ಬಹುವೇಳೆ ಇದು ಒಂದು ಅನುಕೂಲ ಪರಿಸ್ಥಿತಿ. ದೇಹ ಕಾವೇರಿದಾಗ ವಿಷಾಣುರೋಧಕಗಳು ಹಾಗೂ ವಿಷಹಾರಿಗಳ ಉತ್ಪನ್ನ ಹೆಚ್ಚುವುದು ತಿಳಿದುಬಂದಿದೆ. ಆದ್ದರಿಂದ ಜ್ವರಮಟ್ಟ ಅಧಿಕವಾಗಿಲ್ಲದಿದ್ದಾಗ ಜ್ವರವನ್ನು ಕೃತಕವಾಗಿ ಇಳಿಸಲು ಪ್ರಯತ್ನಪಡಬಾರದು. ಜ್ವರ ಮಿತಿಮೀರಿದರೆ ಆಸ್ಪಿರಿನ್ ಮುಂತಾದ ಔಷಧಗಳಿಂದಲೋ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಹಣೆಮೇಲೆ ಹಾಕಿಯೋ ಅದನ್ನು ಕಡಿಮೆ ಮಾಡಬಹುದು. ಸಾಮಾನ್ಯ ಮಟ್ಟದ ಜ್ವರ ದೇಹಕ್ಕೆ ಅನುಕೂಲವಾಗಿಯೂ ಕೆಲವು ವಿಷಾಣುಗಳಿಗೆ ಪ್ರತಿಕೂಲವಾಗಿಯೂ ಇರುವುದರಿಂದ ಕೀಲುವಾಯು, ಫರಂಗಿ ರೋಗ (ಸಿಫಿಲಿಸ್) ಇತ್ಯಾದಿಗಳ ಚಿಕಿತ್ಸೆಗೆ ಕೃತಕವಾಗಿ ಜ್ವರ ಬರಿಸುವುದುಂಟು. ಹೀಗೆ ಮಾಡಲು ದೇಹಕ್ಕೆ ಹೊರತಾದ ಜಡ ಪ್ರೋಟೀನನ್ನು ಚುಚ್ಚುಮದ್ದಾಗಿ ಕೊಡುವುದು ವಾಡಿಕೆ. ಜ್ವರದ ತೀವ್ರತೆಗೂ ಸೋಂಕಿನ ತೀವ್ರತೆಗೂ ಸಂಬಂಧ ಖಚಿತವಿಲ್ಲ. ಸೋಂಕು ಉಂಟಾದಾಗ ಜ್ವರ ಬಾರದಿರುವುದು ದೇಹದ ರೋಗವಿರುದ್ಧ ರಕ್ಷಣೆಯ ಸಾಮಥ್ರ್ಯ ಕುಗ್ಗಿರುವುದರ ಚಿಹ್ನೆ.

ಲಕ್ಷಣಗಳು

[ಬದಲಾಯಿಸಿ]

ಜ್ವರದಲ್ಲಿ ಮೈ ಕಾವೇರುವುದು ಮಾತ್ರವಲ್ಲ. ಇರಸುಮುರಸು (ಮೆಲೈಸ್), ತಲೆನೋವು, ಮೈಕೈ ಕೀಲುನೋವುಗಳು, ಅರೋಚಿಕ ಅಗ್ನಿಮಾಂದ್ಯ, ಸುಸ್ತು ಸಂಕಟ, ನಾಲಗೆ ಮೇಲೆ ಅಗ್ರ, ಮೂತ್ರ ಪ್ರಮಾಣ ಕಡಿಮೆ ಆಗಿ ಮೂತ್ರ ಕೆಂಪಾಗಿರುವುದು. ಚರ್ಮ ಶುಷ್ಕತೆ, ಚಳಿ, ನಡುಕ, ಬೆವರುವುದು, ಬೆವರುಸಲೆ ಬೊಕ್ಕೆಗಳುಂಟಾಗುವುದು. ಮಲಬದ್ಧತೆ ಇಂಥ ಹಲವಾರು ಲಕ್ಷಣಗಳು ಹೆಚ್ಚು ಕಡಿಮೆ ಕಂಡುಬರಬಹುದು. ದೇಹದ ಉಷ್ಣತೆ ಹೆಚ್ಚುವುದುರಿಂದ ನಾಡಿಮಿಡಿತ ಹಾಗೂ ಶ್ವಾಸಕ್ರಮಗಳ ದರಗಳು ಹೆಚ್ಚುವುವು. ಧರ್ಮ, ಮೂತ್ರಪಿಂಡ, ಜಠರ, ಕರುಳು ಇವುಗಳ ಸ್ರಾವ ಕಡಿಮೆ ಆಗುವುದೂ ಸಾಮಾನ್ಯ. ಜ್ವರ ಅಧಿಕವಾಗಿ ಇರುವಾಗ ಇಲ್ಲವೇ ವಿಷಮಿಸಿದಾಗ (ಟಾಕ್ಸಿಕ್) ಜ್ಞಾನಜ್ಞಾನಾ, ಸನ್ನಿ, ಸೆಟೆವಾಯುಗಳು ತಲೆದೋರಬಹುದು. ಜ್ವರಕಾಲದಲ್ಲಿ ಬಾಯಾರಿ ನೀರಡಿಕೆ ಆಗುವುದು ಸಾಮಾನ್ಯ. ಈ ಕಾಲದಲ್ಲಿ ತಕ್ಕಷ್ಟು ನೀರು ಕೊಡಬೇಕಾದ್ದು ಅಗತ್ಯ. ಇಲ್ಲದಿದ್ದರೆ ದೇಹದಲ್ಲಿ ದ್ರವಾಂಶ ಕಡಿಮೆ ಆಗಿ ಜ್ವರ ಇನ್ನೂ ಹೆಚ್ಚು ಹಚ್ಚಾಗುವ ಸಂಭಾವ್ಯತೆ ಉಂಟು. ಶೀತವಾಗುತ್ತದೆ ಎಂದು ಜ್ವರಗ್ರಸ್ತರಿಗೆ ನೀರನ್ನು ನಿಷೇದಿಸುವುದು ಜನತೆಯಲ್ಲಿ ಸಾಮಾನ್ಯವಾಗಿರುವ ರೂಢಿ. ಆದರೆ ಇದರಿಂದ ಅಪಾಯ ಉಂಟು. ಜ್ವರ 100( ಈ ನಷ್ಟು ಇರುವಾಗ ನಾಡಿಮಿಡಿತವೂ ಮಿನಿಟಿಗೆ ಸುಮಾರು 100 ಇರುವುದು ಸಾಮಾನ್ಯ. ಪ್ರತಿ 1( ಈ ಜ್ವರ ಏರಿಕೆಗೆ 10 ನಾಡಿ ಮಿಡಿತಗಳು ಏರುತ್ತವೆ. ಶ್ವಾಸಕ್ರಮದ ವೇಗವೂ ಅಧಿಕವಾಗುತ್ತದೆ. ಇದು ಎಲ್ಲ ಜ್ವರಗಳಲ್ಲೂ ಸಾಧಾರಣವಾಗಿ ಪ್ರಕಟವಾಗುವ ಲಕ್ಷಣ. ವೈಯಕ್ತಿಕವಾಗಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಕಂಡುಬರುವುದು ಸಹಜ. ಕೆಂಡಾಮಂಡಲ (ಸ್ಕಾರ್ಲೆಟ್ ಫೀವರ್), ಕ್ಷಯ ಇವುಗಳಲ್ಲಿ ನಿರೀಕ್ಷೆಗಿಂತಲೂ ಅಧಿಕವಾಗಿ ನಾಡಿ ಬಡಿಯುವುದೂ ಟೈಫಾಯಿಡ್ ಜ್ವರದಲ್ಲಿ ನಿರೀಕ್ಷೆಗಿಂತ ಕಡಿಮೆ ನಾಡಿ ಮಿಡಿತವಿರುವುದೂ ನ್ಯೂಮೋನಿಯದಲ್ಲಿ ನಿರೀಕ್ಷೆಗಿಂತ ಬಲು ಹೆಚ್ಚಾಗಿ ಶ್ವಾಸಕ್ರಮ ಕಂಡುಬರುವುದೂ ಆಯಾ ರೋಗಗಳ ವೈಶಿಷ್ಟ್ಯ. ಹೆಚ್ಚಿನ ಜ್ವರಗಳಲ್ಲಿ ಉಷ್ಣತೆ ರಾತ್ರಿಕಾಲದಲ್ಲಿ ಸ್ವಲ್ಪ ಹೆಚ್ಚಾಗುವುದೂ ಬೆಳಗಾದಮೇಲೆ ಕಡಿಮೆ ಆಗುವುದೂ ತಿಳಿದಿದೆ. ಆದರೆ ಕ್ಷಯ, ಟೈಫಾಯಿಡ್, ಮಿದುಳಿನ ಜ್ವರಗಳಲ್ಲಿ ಉಷ್ಣತೆ ಹಗಲು ಹೆಚ್ಚು, ರಾತ್ರಿ ಕಡಿಮೆ ಯಕೃತ್ತಿನ ರಕ್ತನಾಳಗಳು ಕೀವಿನಿಂದ ಆವೃತವಾಗಿ ಜ್ವರ ಬಂದಿದ್ದರೆ ಸಾಮಾನ್ಯವಾಗಿ ದಿನದಿನವೂ ಎರಡು ಸಾರಿ ಏರಿಳಿತಗಳು ಕಂಡುಬರುತ್ತವೆ. ಆರೋಗ್ಯಸ್ಥಿತಿಯಲ್ಲಿ ಮಿದುಳಿನಲ್ಲಿರುವ ಉಷ್ಣತಾ ನಿಯಂತ್ರಣ ಕೇಂದ್ರ ದೇಹೋಷ್ಣತೆಯ ಉತ್ಪಾದನೆ ಮತ್ತು ವ್ಯಯಗಳನ್ನು ನಿಯಂತ್ರಿಸಿ ಸಮತೋಲವನ್ನು ಉಂಟುಮಾಡುತ್ತದೆ ಮತ್ತು ಉಷ್ಣತೆಯ ಸಾಮಾನ್ಯ ಮಟ್ಟ ಸುಮಾರು 37( ಅ ಅಥವಾ 98.6( ಈ ನಷ್ಟು ಇರುವುದಕ್ಕೆ ಕಾರಣವಾಗಿದೆ. ಸಮತೋಲ ಇದ್ದರೂ ದೇಹದ ಉಷ್ಣತೆ ಸಾಮಾನ್ಯಮಟ್ಟಕ್ಕಿಂತ ಹೆಚ್ಚಾಗಿರುವುದು ಜ್ವರಸ್ಥಿತಿ.

ಸೋಂಕು ಪರಿಸ್ಥಿತಿ

[ಬದಲಾಯಿಸಿ]

ಸೋಂಕು ಪರಿಸ್ಥಿತಿಯಲ್ಲಿ ವಿಷಾಣುಗಳ ಉತ್ಪನ್ನವಾದ ಜೀವಿವಿಷಗಳಿಂದ ಇಲ್ಲವೇ ಶ್ವೇತಕಣಗಳ ಛಿಧ್ರತೆಯಿಂದ ಬಿಡುಗಡೆಯಾದ ದಸ್ತುಗಳಿಂದ ಉಷ್ಣತಾ, ನಿಯಂತ್ರಣ ಕೇಂದ್ರ ಪ್ರಭಾವಿತವಾಗಿ ದೇಹೋಷ್ಣತೆ ಸಾಮಾನ್ಯ ಮಟ್ಟಿಕ್ಕಿಂತ ಮೇಲ್ಮಟ್ಟದಲ್ಲಿರುದಂತೆ ಏರ್ಪಡುತ್ತದೆ. ಬೆಲ್ಲಡೋನ್ನ ಕೊಕೆಯ್ನ್ ಮುಂತಾದ ರಾಸಾಯನಿಕಗಳ ಇಲ್ಲವೇ ತಲೆಗೆ ತೀವ್ರ ಪೆಟ್ಟುಬಿದ್ದುದರ ಇಲ್ಲವೇ ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ಹೀಗಾಗುವುದುಂಟು. ದೇಹಕ್ಕೆ ಹೊರತಾದ ಪ್ರೋಟೀನುಗಳು ರಕ್ತಗತವಾದಾಗ ಜ್ವರ ಬರುವುದನ್ನು ಮೇಲೆ ಹೇಳಿದೆ.

ಗುಂಡಿಗೆ ಆಘಾತದಲ್ಲಿ. ದೇಹದಲ್ಲಿ ದ್ರವಾಂಶ ಕಡಿಮೆ ಆದಾಗ ದೇಹಕ್ಕೆ ಒಗ್ಗದ ಔಷಧಿಗಳನ್ನು ಸೇವಿಸಿದಾಗ ಕೂಡ ಜ್ವರ ಬರುವುದುಂಟು. ಜ್ವರ ಇರುವ ಕಾಲದಲ್ಲಿ ಉಷ್ಣತಾನಿಯಂತ್ರಣ ಕೇಂದ್ರದ ಕ್ರಿಯೆಗೆ ಧಕ್ಕೆ ಉಂಟಾಗಿರುವುದಿಲ್ಲ. ಈಗಲೂ ಅದು ದೇಹದಲ್ಲಿ ಉಷ್ಣತೆಯ ಉತ್ಪನ್ನ ಮತ್ತು ವ್ಯಯಗಳನ್ನು ಸಮವಾಗಿರುವಂತೆ ನಿಯಂತ್ರಿಸುವುದು. ಆದರೆ ದೇಹೋಷ್ಣತೆ ಮಾತ್ರ ಏರಿದ ಮಟ್ಟದಲ್ಲಿರುತ್ತದೆ. ಈ ಏರುವಿಕೆಗೆ ಕಾರಣ ಪ್ರಾರಂಭಕಾಲದಲ್ಲಿ ದೇಹದಿಂದ ಉಷ್ಣತೆಯ ವ್ಯಯ ಕುಂಠಿತಗೊಳ್ಳುವುದೂ. ಸೋಂಕು ರೋಗಗಳಲ್ಲಿ ವಿಷಾಣುಜನಿತ ವಿಷಗಳು ಚರ್ಮದ ರಕ್ತನಾಳಗಳನ್ನು ಸಂಕೋಚಿಸುವುದೂ (ಜ್ವರ ಏರುವುದಕ್ಕೆ ಮುನ್ನ ಚಳಿಯಾಗುವುದು ಈ ಕಾರಣದಿಂದಲೇ) ದೇಹದಲ್ಲಿ ದ್ರವಾಂಶ ಕಡಿಮೆ ಆಗಿ ಸ್ವೇದಗ್ರಂಥಿಗಳು ಸ್ಥಗಿತಗೊಂಡು ಬೆವರಾಡದಿರುವುದೂ ಇವುಗಳಿಂದ ಉಷ್ಣತೆಯ ವ್ಯಯ ಕುಂಠಿತಗೊಳ್ಳುವುದು ತಿಳಿದಿದೆ. ಜ್ವರ ಬಿಡುವ ಕಾಲದಲ್ಲಿ ಅನುಗುಣವಾಗಿ ಉಷ್ಣತೆಯ ವ್ಯಯ ಅಧಿಕಗೊಳ್ಳುವುದು (ಬೆವರಾಡಿ ಅದು ಆರುವುದರಿಂದ) ಕಂಡುಬಂದಿದೆ. ಜ್ವರ ಏರುವುದಕ್ಕೆ ಮತ್ತು ಇಳಿಯುವುದಕ್ಕೆ ಕಾರಣ ಸಾಮಾನ್ಯವಾಗಿ ಉಷ್ಣದ ಉತ್ಪನ್ನ ಅಧಿಕವಾಗುವುದು ಅಥವಾ ಕಡಿಮೆ ಆಗುವುದು ಅಲ್ಲ.

ಸೋಂಕಿನ ಜ್ವರಗಳಲ್ಲಿ ಸಾಮಾನ್ಯವಾಗಿ 5 ಘಟ್ಟಗಳು ಇವೆ : (1) ಹೊದಗುವಿಕೆ (ಇನ್‍ಕ್ಯುಬೇಷನ್)-ರೋಗಾಣುಗಳು ದೇಹದಲ್ಲಿ ನೆಲೆಗೊಳ್ಳುವ ಕಾಲ (2) ಜ್ವರ ಹೊಮ್ಮುವಿಕೆ (3) ಜ್ವರ ಸ್ಥಿತಿ (4) ಜ್ವರ ಆರುವಿಕೆ (5) ಸ್ವಾಸ್ಥ್ಯ ಲಾಭ

ಜ್ವರ ಹೊಮ್ಮುವಾಗ ಆರಂಭ ಕ್ಷಿಪ್ರವಾಗಿರಬಹುದು (ನ್ಯೂಮೋನಿಯ, ಸಿಡುಬು, ಇನ್‍ಫ್ಲೂಎನ್‍ಜಾ, ಸ್ಟ್ರೆಪ್ಟೊಕಾಕಸ್ ಸೋಂಕುಗಳು) ಇಲ್ಲವೇ ನಿಧಾನವಾಗಿರಬಹುದು (ನೆಗಡಿ, ಜ್ವರ, ಬ್ರಾಂಕೋನ್ಯೂಮೋನಿಯ, ವಿಷಮಶೀತ ಜ್ವರ ಅಥವಾ ಟೈಫಾಯಿಡ್, ಕ್ಷಯ, ದಡಾರ, ನಾಯಿಕೆಮ್ಮು). ಜ್ವರ ಆರುವುದೂ ವಿಧಾನವಾಗಿರಬಹುದು (ಬಹು ಜ್ವರಗಳಲ್ಲಿ ಇದು ಸಾಮಾನ್ಯ). ಇಲ್ಲವೇ ಜ್ವರ ಹಠಾತ್ತಾಗಿ ಇಳಿಯಬಹುದು (ನ್ಯೂಮೋನಿಯ, ಟೈಫಸ್). ಟೈಫಾಯಿಡ್ ಜ್ವರದಲ್ಲಿ ಹೀಗೆ ಹಠಾತ್ತಾಗಿ ಇಳಿಯುವುದು ಕರುಳಿನಲ್ಲಿ ರಕ್ತಸ್ರಾವ ಇಲ್ಲವೇ ರಂಧ್ರೀಕರಣವಾಗಿರುವಂಥ ಅಪಾಯ ಚಿಹ್ನೆ. ಹಠಾತ್ತಾಗಿ ಜ್ವರ ಏರುವುದೂ ಅಪಾಯ ಚಿಹ್ನೆಯೇ. ಧನುರ್ವಾಯು, ಏಡಿಗಂತಿ, ಕಾಲರಾ, ಮೂರ್ಛಾರೋಗ ಮುಂತಾದ ರೋಗಗಳಲ್ಲಿ ಸಾವಿಗೆ ಮುನ್ನ ಹೀಗಾಗುವುದುಂಟು. ಜ್ವರ ಸ್ಥಿತಿಯಲ್ಲಿ ನಿರಂತರ ಜ್ವರ, ಬಿಟ್ಟು ಬಿಟ್ಟು ಬರುವ ಜ್ವರ, ಅನಿರ್ದಿಷ್ಟ ಜ್ವರಗಳೆಂಬ ಭೇದಗಳಿರುವುದನ್ನು ಕಾಣಬಹುದು. ನಿರಂತರ ಜ್ವರಗಳಲ್ಲಿ ಸಮಾನ ಸ್ಥಿತಿಯ ನಿರಂತರ ಜ್ವರ (ಕಂಟಿನ್ಯೂಯಿಸ್ ಫೀವರ್) ಮತ್ತು ಏರಿಳಿತವಿರುವ ನಿರಂತರ ಜ್ವರ (ರೆಮಿಟ್ಟೆಂಟ್ ಫೀವರ್) ಎಂದು ಎರಡು ಬಗೆ. ನಿರಂತರ ಜ್ವರದಲ್ಲಿ ಜ್ವರ ದಿನಪೂರ್ತಿ ಒಂದೇ ಸಮವಾಗಿ ಇಲ್ಲವೇ ಕೇವಲ 1/4( -1/2( ಈನಷ್ಟು ವ್ಯತ್ಯಾಸ ಉಳ್ಳದ್ದಾಗಿ ಇರುತ್ತದೆ. ಏರಿಳಿತವಿರುವ ಜ್ವರದಲ್ಲಿ 1-2 ( ನಷ್ಟು ಹೆಚ್ಚು ಕಡಿಮೆ ಆಗುತ್ತದೆ. ಆದರೆ ದೇಹೋಷ್ಣತೆ ಸಹಜ ಮಟ್ಟಕ್ಕೆ ಬರದೆ ಜ್ವರ ಇದ್ದೇ ಇರುತ್ತದೆ. ವಿಷಮಶೀತಜ್ವರದಲ್ಲಿ ಜ್ವರ ನಿರಂತರವಾಗಿರುತ್ತದೆ. ಮೊದಲ ವಾರದಲ್ಲಿ ದಿನದಿನವೂ ಏಣಿಮೆಟ್ಟಲಿನಂತೆ ಜ್ವರ ಏರುವುದೂ ಎರಡನೆಯ ಮೂರನೆಯ ವಾರಗಳಲ್ಲಿ ಅದರ ಮಟ್ಟ 1-2( ಈನಷ್ಟು ಏರಿ ತಗ್ಗುವುದೂ ನಾಲ್ಕನೆಯ ವಾರದಲ್ಲಿ ಜ್ವರ ಕಡಿಮೆ ಆಗುತ್ತ ಕೊನೆಗೆ ಪೂರ್ಣವಾಗಿ ನಿಲ್ಲುವುದೂ ಇದರ ವೈಶಿಷ್ಟ್ಯ. ಪ್ಯಾರಾಟೈಫಾಯಿಡ್, ನ್ಯೂಮೋನಿಯ, ಕೆಂಡಾಮಂಡಲಜ್ವರ (ಸ್ಕಾರ್ಲೆಟ್ ಫೀವರ್) ಇವು ಇತರ ನಿರಂತರ ಜ್ವರಗಳು. ಬಿಟ್ಟು ಬಿಟ್ಟು ಬರುವ ಜ್ವರದಲ್ಲಿ (ಇನ್‍ಟರ್‍ಮಿಟೆಂಟ್ ಫೀವರ್) ಬಂದ ಜ್ವರ ಬಿಟ್ಟು ಪುನಃ ಜ್ವರ ಬರುತ್ತದೆ. ದಡಾರ, ಡೆಂಗೆ ಇವುಗಳಲ್ಲಿ ಹೀಗೆ. ಟೈಫಾಯಿಡ್ ಜ್ವರದಲ್ಲೂ ಬಂದ ಜ್ವರ ಬಿಟ್ಟು ಕೆಲವು ದಿವಸಗಳಾದ ತರುವಾಯ ಪುನಃ ಜ್ವರ ಬರುವುದುಂಟು. ಆದರೆ ಇದನ್ನು ಬಿಡುವಿನ ಜ್ವರ ಅಲ್ಲ, ಮರುಕಳಿಸಿದ ಟೈಫಾಯಿಡ್ ಎಂದೇ ಪರಿಗಣಿಸಿದೆ. ರೋಗಕಾಲದಲ್ಲಿ ಅನೇಕ ಸಾರಿ ಬಿಟ್ಟು ಬಿಟ್ಟು ಬರುವ ಜ್ವರಗಳು ಚಿಕಿತ್ಸೆಗೆ ಒಳಪಡದಿದ್ದರೆ, ತಿಂಗಳು ವರ್ಷಗಟ್ಟಲೆ ಚಳಿಸಬಹುದು. ಬಹುವಾಗಿ ಇವು ಗಡುವಿನ ಜ್ವರಗಳು. ಜ್ವರ ಬಿಟ್ಟು ಪುನಃ ಜ್ವರ ಬರುವುದು ಹೆಚ್ಚು ಕಡಿಮೆ ನಿರ್ದಿಷ್ಟ ಗಡು ಮುಗಿದಮೇಲೆ. ಮಲೇರಿಯದಲ್ಲಿ ಗಡು ಒಂದು ಅಥವಾ ಎರಡು ದಿವಸ ಇರಬಹುದು. ಬ್ರೂಸೆಲ್ಲ ಸೋಂಕಿನಲ್ಲಿ (ಮಾಲ್ಟ ಜ್ವರ ಇತ್ಯಾದಿ) ಗಡು 5-6 ದಿವಸಗಳಿರಬಹುದು. ಮರುಕಳಿಸುವ ಜ್ವರದಲ್ಲಿ (ರಿಲ್ಯಾಪ್ಸಿಂಗ್ ಫೀವರ್) ಗಡು 6-8 ದಿವಸಗಳಿರುತ್ತವೆ. ಗಡುವಿನ ಜ್ವರಗಳಲ್ಲಿ ಜ್ವರ ಬಿಟ್ಟ ಕಾಲದಲ್ಲಿ ವ್ಯಕ್ತಿ ಹೆಚ್ಚು ಕಡಿಮೆ ಆರೋಗ್ಯವಾಗಿರುವಂತೆ ಕಾಣಬಹುದು. ಅನಿರ್ದಿಷ್ಟ ಜ್ವರಗಳಲ್ಲಿ ಯಾವ ಕ್ರಮವೂ ಕಾಣಬರುವುದಿಲ್ಲವೆಂಬುದು ಸ್ಪಷ್ಟವಾಗಿಯೇ ಇದೆ.


ಜ್ವರದ ಪ್ರಾರಂಭ ಕಾಲದಲ್ಲಿ ಚಳಿ, ಮೈನಡುಕ ಉಂಟಾಗಬಹುದು. ನ್ಯೂಮೋನಿಯದಲ್ಲಿ ರೋಗಾವಸ್ಥೆಯ ಪ್ರಾರಂಭದಲ್ಲಿ ಮಾತ್ರ ಚಳಿ ಉಂಟಾಗುವುದು ವೈಶಿಷ್ಟ್ಯ. ಬ್ಯಾಸಿಲ್ಲಸ್‍ಕೋಲೈ ಎಂಬ ಅಣು (ಸಾಮಾನ್ಯವಾಗಿ ನಿರುಪದ್ರವಿ) ವಿಷಮಿಸಿ ಮೂತ್ರಮಾರ್ಗದಲ್ಲಿ ಸೋಂಕನ್ನು ಉಂಟುಮಾಡಿದಾಗ ದಿನದಿನವೂ ಚಳಿ ಬರುವುದು ಸಾಮಾನ್ಯ. ಪಿತ್ತನಾಳಗಳ ಊತದಲ್ಲಿ ಚಳಿ ಅನಿರ್ದಿಷ್ಟ. ಮಲೇರಿಯದಲ್ಲಿ ಚಳಿ ಬಂದು ಜ್ವರ ಕಾಣಿಸಿಕೊಳ್ಳುವುದು ಖಚಿತ ಲಕ್ಷಣ. ಆದ್ದರಿಂದ ಅದಕ್ಕೆ ಜನ ಚಳಿಜ್ವರವೆಂದೇ ಕರೆದಿದ್ದಾರೆ. ಮೊದಲು ಚಳಿ ಅನುಭವ, ಅನಂತರ ನಡುಕ : ಮೈನಡುಗುವುದಲ್ಲದೆ ಹಲ್ಲುಗಳೂ ಗಡಗಡನೆ ನಡುಗುವುವು : ಇಷ್ಟು ಹೊದಿಸಿದರೂ ಅಡಗದ ಚಳಿ : ಚರ್ಮದ ರಕ್ತನಾಳಗಳು ಕುಗ್ಗಿ ಮೈ ತಣ್ಣಗಿರುವುದು : ಮುಖ ಬಿಳಿಚಿಕೊಂಡು ತುಟಿ ನೀಲಿಗಟ್ಟಿರುವುದು : ಇತ್ಯಾದಿಗಳು ಮಲೇರಿಯ ಜ್ವರ ಪ್ರಾರಂಭವಾದ ಕಾಲದಲ್ಲಿ ಕಾಣಬರುವ ಲಕ್ಷಣಗಳು. ನಿಜವಾಗಿ ಈ ಕಾಲದಲ್ಲಿ ಕೇಹೋಷ್ಣತೆ ಹೆಚ್ಚಾಗಿ ಜ್ವರ ಬಂದಿರುತ್ತದೆ. ವೈದ್ಯಕೀಯ ಉಷ್ಣತಾಮಾಪಕವನ್ನು (ಕ್ಲಿನಿಕಲ್ ಧರ್ಮಾಮೀಟರ್) ನಾಲಿಗೆ ಕೆಳಗೆ ಸುಮಾರು ಒಂದು ಮಿನಿಟು ಇಟ್ಟು ನೋಡಿ ಇದನ್ನು ಅರಿಯಬಹುದು. ಚಳಿ ಸುಮಾರು 1/4-1/2 ಗಂಟೆ ಇರಬಹುದು. ಅನಂತರ ಚರ್ಮದ ರಕ್ತನಾಳಗಳು ಹಿಗ್ಗಿ ಅಧಿಕ ರಕ್ತಪ್ರವಾಹದಿಂದ ಚರ್ಮ ಬಿಸಿಯಾಗುತ್ತದೆ. ಜ್ವರವೂ ಏರುತ್ತದೆ. ಹೊದಿಸಿದ್ದನ್ನೆಲ್ಲ ಕಿತ್ತು ಹಾಕುವಂತಾಗುತ್ತದೆ. ಇದು ಜ್ವರ ಏರುವ ಮುನ್ನ ಚಳಿ ಬರುವ ಸಂದರ್ಭಗಳಲ್ಲೆಲ್ಲ ಸಾಮಾನ್ಯ. ಮಲೇರಿಯ ಒಂದರಲ್ಲೆ ಅಲ್ಲ, ಮಲೇರಿಯದಲ್ಲಿ ಚಳಿ ಕಳೆದ ಬಳಿಕ ಏರಿದ ಜ್ವರ ಒಂದೆರಡು ಗಂಟೆಗಳಲ್ಲಿ ಥಟ್ಟನೆ ಇಳಿದು ಹೋಗುತ್ತದೆ. ಜ್ವರ ಇಳಿಯುವುದಕ್ಕೆ ಮುನ್ನ ಜಿಲ್ಲೆಂದು ಬೆವರುವುದು ಸಾಮಾನ್ಯ. ಜ್ವರದ ಪ್ರಾರಂಭದ ಮುನ್ನ ಕಾಣಬರುವ ಚಳಿಯ ಬದಲು ಮಕ್ಕಳಲ್ಲಿ ಸೆಳವು (ಕನ್‍ವಲ್ಷನ್) ಕಾಣಿಸಿಕೊಳ್ಳಬಹುದು.


ಜ್ವರದಲ್ಲಿ ದೇಹೋಷ್ಣತೆ ಹೆಚ್ಚುವಂತೆ ಉಷ್ಣಾಘಾತದಲ್ಲೂ (ಹೀಟ್ ಸ್ಟ್ರೋಕ್) ಹೆಚ್ಚುತ್ತದೆ. ಶ್ರಮಕೆಲಸ ವ್ಯಾಯಾಮಗಳನ್ನು ತಕ್ಕಷ್ಟು ದೀರ್ಘಕಾಲ ಮಾಡಿದಾಗ ಕೂಡ ದೇಹೋಷ್ಣತೆ ಹೆಚ್ಚುವುದು. ಈ ಸಂದರ್ಭಗಳಲ್ಲಿಯೂ ಬಹುಶಃ ದೇಹದಿಂದ ಉಷ್ಣತೆಯ ವ್ಯಯ ಕುಂಠಿತಗೊಳ್ಳುವುದರಿಂದ ದೇಹೋಷ್ಣತೆ ಹೆಚ್ಚುತ್ತದೆ. ಆದರೆ ಉಷ್ಣಾಘಾತದಲ್ಲಿ ಈ ಸ್ಥಿತಿ ತೀವ್ರವಾಗಿ ಮುಂದುವರಿಯುತ್ತ ದೇಹೋಷ್ಣತೆ 107(-108( ಈಗಿಂತ ಹೆಚ್ಚು ಮಟ್ಟಕ್ಕೆ ಏರಬಹುದು. ಇದು ಸಾಮಾನ್ಯವಾಗಿ ಸಹನಾತೀನ ಸ್ಥಿತಿ. ಆಲಸ್ಯ, ಬುದ್ಧಿಮಾಂದ್ಯ, ಮೂರ್ಛೆ ಮುಂತಾದವು ಶೀಘ್ರವಾಗಿ ಕಂಡುಬಂದು, ಕೊನೆಗೆ ರಕ್ತಪರಿಚಲನೆ ನಿಂತು ಸಾವು ಸಂಭವಿಸುತ್ತದೆ. ಜ್ವರವೇ ಉಲ್ಬಣಿಸಿ ಈ ಸ್ಥಿತಿ ಉಂಟಾಗುವುದು ಅಪರೂಪ. ಬಿಸಿಲು ಹೆಚ್ಚಾಗಿ ಹಾಗೂ ವಾತಾವರಣದಲ್ಲಿ ಜಲಾಂಶ ಹೆಚ್ಚಾಗಿರುವ ಸ್ಥಳಗಳಲ್ಲಿ ಉಷ್ಣಾಘಾತ ಸಾಮಾನ್ಯ. ಬೆವರು ದೇಹದಿಂದ ಆರಿಹೋಗಲು ಸಾಧ್ಯವಾಗದೆ ಇಲ್ಲವೇ ಬೆವರು ಗ್ರಂಥಿಗಳ ಕ್ರಿಯೆ ಕಾರಣಾಂತರದಿಂದ ಸ್ಥಗಿತಗೊಂಡು ದೇಹೋಷ್ಣತೆಯ ವ್ಯಯಕ್ಕೆ ಮಾರ್ಗವಿಲ್ಲದೆ ಉಷ್ಣ ಸಂಚಯನವಾಗಿ ಉಂಟಾಗುವ ಸ್ಥಿತಿ ಇದು. ರೋಗಲಕ್ಷಣವಾಗಿಲ್ಲದಿರುವ ಇದನ್ನು ಜ್ವರವೆಂದು ಗಣಿಸದೆ ಪ್ರತ್ಯೇಕ ಅನಾರೋಗ್ಯ ಸ್ಥಿತಿಯೆಂದು ಕಾಣುವುದು ರೂಢಿ.

ಸೋಂಕು ಜ್ವರಗಳು

[ಬದಲಾಯಿಸಿ]

ಸಾಂಕ್ರಾಮಿಕ ಜ್ವರಗಳೆಂದೂ ಹೆಸರಿದೆ. ವಿಷಾಣುಗಳು ದೇಹದ ಒಳಹೊಕ್ಕು ನಿರ್ದಿಷ್ಟ ಸ್ಥಳಗಳಲ್ಲಿ ಇಲ್ಲವೇ ರಕ್ತದಲ್ಲಿ ವೃದ್ಧಿಯಾಗಿ, ಅದೇ ಕಾರಣದಿಂದ ಅಥವಾ ಅವು ಉತ್ಪಾದಿಸುವ ಜೀವಿವಿಷಯಗಳಿಂದ ಉಂಟಾಗುವ ಜ್ವರಗಳಿವು (ಇನ್‍ಫೆಕ್ಷನ್ ಫೀವರ್). ವಿಷಾಣುಗಳ ಮೂಲ ಇರುವುದು ರೋಗದಿಂದ ನರಳುತ್ತಿರುವ ಅಥವಾ ಹೊರನೋಟಕ್ಕೆ ಆರೋಗ್ಯವಾಗಿರುವಂತೆಯೇ ಕಾಣುವ ಜೀವಿಗಳಲ್ಲಿ. ಇಂಥ ಮೂಲದಿಂದ ಆರೋಗ್ಯವಾಗಿರುವ ವ್ಯಕ್ತಿಗೆ ವಿಷಾಣು ಸಂಕ್ರಮಿಸಿ ರೋಗ ಉಂಟಾಗುವುದರಿಂದ ಇದನ್ನು ಸಾಂಕ್ರಾಮಿಕ ರೋಗವೆನ್ನಲಾಗಿದೆ. ಇದನ್ನೇ ಸೋಂಕು ಎಂದೂ ಕರೆದಿದೆ (ಇನ್‍ಫೆಕ್ಷನ್). ಸೋಂಕು ರೋಗಗಳು ಜ್ವರಯುಕ್ತವಾಗಿರಬಹುದು ಇಲ್ಲವೇ ಜ್ವರಮುಕ್ತವಾಗಿರಬಹುದು. ಜ್ವರವೇ ಪ್ರಧಾನ ರೋಗ ಚಿಹ್ನೆಯಾದ ಸೋಂಕು ರೋಗಗಳಿಗೆ ಸಾಂಕ್ರಾಮಿಕ ಜ್ವರಗಳೆಂದು ಹೆಸರು. ರೋಗಿಯಿಂದ ರೋಗಿಗೆ ಸಾನ್ನಿಧ್ಯ ಸಂಪರ್ಕಗಳಿಂದ ಸೋಂಕು ಅಂಟಬಹುದು ; ಅಥವಾ ವಿಷಾಣುಯುಕ್ತ ವಾಯು, ಆಹಾರ ಪಾನೀಯಗಳು ಹಾಗೂ ಕೀಟಗಳಿಂದ ಉಂಟಾಗಬಹುದು. ಆದ್ದರಿಂದ ಇವು ಒಂದು ಸ್ಥಳದಲ್ಲಿ ಸಮಕಾಲಿಕವಾಗಿ ಬಹುಜನರಲ್ಲಿ ಕಂಡುಬರುವ ಸ್ಥಿತಿ. ಸಾಂಕ್ರಾಮಿಕ ರೋಗಗಳು ಜಗತ್ತಿನ ಎಲ್ಲ ಕಡೆಗಳಲ್ಲಿಯೂ ಸ್ಥಳೀಯವಾಗಿ ಅಥವಾ ವ್ಯಾಪಕವಾಗಿ ಕಾಣಬರುತ್ತವಾದರೂ ಉಷ್ಣವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅವು ವ್ಯಕ್ತವಾಗಿವೆ. ವಿಷಾಣುಗಳು ನಾನಾ ರೀತಿಯವು. ವೈರಸ್, ರಿಕೆಟ್ಸಿಯಗಳು, ಬ್ಯಾಕ್ಟೀರಿಯಗಳು (ದುಂಡು, ಕಡ್ಡಿ ಹಾಗೂ ತಿರುಪುಮುರಿ ಆಕಾರದ ಮೂರು ವಿಧಗಳೂ). ಏಕಕೋಶಿಯಗಳು ಇವೆಲ್ಲವೂ ಸೋಂಕುಜ್ವರಕಾರಕಗಳು.

ವೈರಸ್ ಜ್ವರಗಳು

[ಬದಲಾಯಿಸಿ]

ಅಣಬೆಗಳು ಹಾಗೂ ಬಹುಕೋಶಿಗಳಿಂದಲೂ ಉಂಟಾಗಬಹುದು : ವೈರಸ್‍ಕೃತ ಜ್ವರಗಳು ಸೀತಾಳೆ ಸಿಡುಬು, ದಡಾರ, ಸಿಡುಬು, ಪೋಲಿಯೋ ಇತ್ಯಾದಿ. ಇವುಗಳಲ್ಲಿ ಜ್ವರ ಪ್ರಧಾನವೆಂದು ಗಣಿಸಬೇಕಾದ ಲಕ್ಷಣವಲ್ಲ. ರಿಕೆಟ್ಲಿಯಕೃತ ಜ್ವರಗಳು ಟೈಫಸ್, ರಾಕಿಪರ್ವತದ ರಕ್ತಗಂಧೆ ಜ್ವರ ಇತ್ಯಾದಿ: ಬ್ಯಾಕ್ಟೀರಿಯಗಳಿಂದ ಉಂಟಾದವು ಗಂಟಲು ನೋವು. ಗಾನರೀಯ, ನ್ಯೂಮೋನಿಯ, ಬಾಣಂತಿಜ್ವರ, ಬೆನ್ನುಫಣಿಜ್ವರ, ಕ್ಷಯ, ಕುಷ್ಠ ರೋಗ, ಕಾಲರಾ, ಆಮಶಂಕೆ, ಟೈಫಾಯಿಡ್, ಧನುರ್ವಾಯು, ಡಿಫ್ತೀರಿಯ, ಸಿಫಿಲಿಸ್ ಇತ್ಯಾದಿ. ಇವುಗಳಲ್ಲಿ ಗಂಟಲುನೋವ, ಗಾನರೀಯ, ಬೆನ್ನುಫಣಿ, ಕುಷ್ಠರೋಗ, ಕಾಲರಾ, ಆಮಶಂಕೆ, ಧನುರ್ವಾಯು, ಸಿಫಿಲಿಸುಗಳಲ್ಲಿ ಜ್ವರವೇನೂ ಮುಖ್ಯವಾಗಿ ಗಣಿಸಬೇಕಾದ ಲಕ್ಷಣವಲ್ಲ. ಅಣಬೆಗಳಿಂದ ಉಂಟಾದ ಧರ್ಮವ್ಯಾಧಿಗಳಲ್ಲೂ ಏಕಕೋಶೀಯಗಳಿಂದ ಉಂಟಾದ ಮಲೇರಿಯ, ಜೋಗರಿಕೆ ಬೇನೆ, ಕಾಲಾಅeóÁರ್, ಆಮಶಂಕೆ ಇವುಗಳಲ್ಲೂ ಜ್ವರ ಕಂಡುಬರುತ್ತದೆ. ಆದರೆ ಮಲೇರಿಯದಲ್ಲಿ ಮಾತ್ರ ಜ್ವರವೇ ಪ್ರಧಾನವಾಗಿ ಗಣಿಸಬೇಕಾದ ಲಕ್ಷಣ. ಸಾಂಕ್ರಾಮಿಕ ಜ್ವರಗಳು ಸೋಂಕುಕಾರಕ ವಿಷಾಣುಗಳ ಉತ್ಪನ್ನವಾದ ಜೀವಿ ವಿಷಗಳ ಪರಿಣಾಮ, ಇಲ್ಲವೇ ಅವುಗಳಿಂದ ನಾಶವಾದ ಅಂಗಾಂಶಗಳ ಕೋಶಗಳ ಹಾಗೂ ಶ್ವೇತಕಣಗಳಿಂದ ಬಿಡುಗಡಿಯಾದ ವಸ್ತುಗಳ ಪರಿಣಾಮ. ಈ ಕೆಳಗೆ ಕೆಲವು ಸಾಂಕ್ರಾಮಿಕ ಜ್ವರಗಳನ್ನು ವಿವರಿಸಿದೆ. (ಎಚ್.ಎಸ್.ಎಸ್.ಎಚ್.)

ಡಂಗೆ ಜ್ವರ

[ಬದಲಾಯಿಸಿ]

ಒಂದು ಬಗೆ ವೈರಸ್ಸಿನ ಸೋಂಕಿನಿಂದ ಉಂಟಾಗುವ ಜ್ವರ, ಸೋಂಕು ಮಾನವರಿಂದ ಮಾನವರಿಗೆ ಎಯ್ದಿಸ್ ಎಂಬ ಜಾತಿಯ ಸೊಳ್ಳೆಯಿಂದ ಹಬ್ಬುತ್ತದೆ. ಸೋಂಕು ತಗುಲಿದ 10-12 ದಿವಸಗಳ ಬಳಿಕ ಜ್ವರ, ಅಸಹ್ಯ ತಲೆನೋವು, ಸ್ನಾಯು ಕೀಲುಗಳ ನೋವು ಇವು ಇದ್ದಕ್ಕಿದ್ದಂತೆ ತಲೆದೋರುತ್ತವೆ. ಮೂಳೆ ಮುರಿದಷ್ಟು ನೋವಾಗುವುದರಿಂದ ಇದಕ್ಕೆ ಇಂಗ್ಲಿಷಿನಲ್ಲಿ ಬ್ರೇಕ್ ಬೋನ್ ಫೀವರ್ ಎಂಬ ಹೆಸರಿದೆ. ರೋಗಕಾಲದಲ್ಲಿ ಜ್ವರ ಇಳಿದು ಪುನಃ ಇನ್ನೊಂದು ಸಾರಿ ಬರುವುದು ಸಾಮಾನ್ಯ. ಸುಮಾರು ಒಂದು ವಾರದಲ್ಲಿ ಜ್ವರ ತಾನಾಗಿಯೇ ಗುಣವಾಗುತ್ತದೆ. ಮಾರಕ ರೋಗವಲ್ಲ. ಒಂದು ಸಲ ಡಂಗೆ ಜ್ವರ ಬಂದವರಿಗೆ ಸಾಮಾನ್ಯವಾಗಿ ಇನ್ನೊಂದು ಸಲ ಸೋಂಕು ಅಂಟುವುದಿಲ್ಲ.

ಟೈಫಸ್

[ಬದಲಾಯಿಸಿ]

ಇದು ರಿಕೆಟ್ಸಿಯ ಎಂಬ ಜಾತಿಯ ಒಂದು ವಿಷಾಣುವಿನ ಸೋಂಕಿನಿಂದ ಉಂಟಾದುದು. ರಾಕಿ ಪರ್ವತದ ರಕ್ತಗಂಧೆ ಜ್ವರದಂತೆ ಟೈಫಸ್‍ಕಾರಕ್ಕಕ್ಕೆ ರಿಕೆಟ್ಲಿಯ ಪ್ರೋವೋಸಿóಕಿ ಎಂಬ ಹೆಸರು. ಟೈಫಸ್ ಸೋಂಕು ಜ್ವರಗಳಲ್ಲಿ ಕೆಲವು ಬಗೆಗಳುಂಟು. ಬೇರೆ ಬೇರೆ ಬಗೆಯ ಟೈಫಸುಗಳಲ್ಲಿ ಸೋಂಕು ಬೇರೆ ಬೇರೆ ಜೀವಿಗಳಿಂದ ಹರಡುತ್ತದೆ. ಮುಖ್ಯವಾಗಿ ಹೇನಿನಿಂದ ಹರಡುವುದು. ಚಿಗಟದಿಂದ ಹರಡುವುದು ಎಂದು ವಿಂಗಡಿಸಬಹುದು. ಹೇನಿನಿಂದ ಹರಡುವುದು ಬಹುವ್ಯಾಪಕವಾಗಿ ಕಂಡುಬರುವ ತೀವ್ರ ಸಾಂಕ್ರಾಮಿಕ ರೋಗ, ಸೈನ್ಯ, ಸೆರೆಮನೆ ಮುಂತಾದ ಸ್ಥಳಗಳಲ್ಲಿ ಅಸಂಖ್ಯಾತ ವ್ಯಕ್ತಿಗಳು ಅನಾರೋಗ್ಯ ಪರಿಸ್ಥತಿಯಲ್ಲಿ ಜೀವಿಸುತ್ತಿರುವ ಸಂದರ್ಭಗಳಲ್ಲಿ ಹೇನಿನಿಂದ ಹರಡುವ ಟೈಫಸ್ ರೋಗ ಸಹಸ್ರಾರು ಜನರಿಗೆ ಸಮಕಾಲಿಕವಾಗಿ ತಗಲುತ್ತದೆ. ಸೋಂಕು ತಗುಲಿದ 5-6 ದಿವಸಗಳಲ್ಲಿ ಮೈಮೇಲೆ ಗಂಧೆಗಳು ಎದ್ದು ಚಳಿ, ಜ್ವರ, ತಲೆನೋವು, ಮೈಕೈನೋವುಗಳು ಹಠಾತ್ತಾಗಿ ತಲೆದೋರುತ್ತವೆ. ವಿಷಮ ಪರಿಸ್ಥಿತಿ (ಟಾಕ್ಸೀಮಿಯ) ಸಾಮಾನ್ಯ. ಸುಮಾರು 14 ದಿವಸಗಳು ಜ್ವರ ಕಾದ ಬಳಿಕ ಕ್ರಮೇಣ 2-3 ದಿವಸಗಳಲ್ಲಿ ಜ್ವರ ಇಳಿಯುತ್ತದೆ. ಹೇನು ಕಡಿಯುವುದರಿಂದ ಸೋಂಕು ತಗಲುವುದಿಲ್ಲ. ಹೇನನ್ನು ಸ್ಥಳದಲ್ಲೆ ಕುಕ್ಕಿ ಸಾಯಿಸಿದಾಗ ಅಥವಾ ಇನ್ನಾವುದಾದರೂ ಗಾಯದ ಮೂಲಕ ದೇಹದ ಒಳಹೊಕ್ಕು ಸೋಂಕು ಉಂಟಾಗುತ್ತದೆ. ಮೊದಲನೆಯ ಮಹಾಯುದ್ಧ ಕಾಲದಲ್ಲೂ ಟೈಫಸ್ಸು ಪ್ಲೇಗಿನಂತೆ ಮಹಾಮಾರಕ ರೋಗವಾಗಿದ್ದಿತು. ಇದರ ವಿಷಾಣುವನ್ನು ಬೇರ್ಪಡಿಸಿ ಅದರ ಲಕ್ಷಣವನ್ನು ವ್ಯಾಸಂಗಿಸಲು ಪ್ರಯತ್ನಿಸಿದ ರಿಕೆಟ್ಸ್, ಬೇಕಟ್, ಪ್ರೊವಾಸೆóಕ್ ಮುಂತಾದ ವಿಜ್ಞಾನಿಗಳು ತಮ್ಮ ವ್ಯಾಸಂಗದಲ್ಲೆ ಸೋಂಕು ತಗಲಿಸಿಕೊಂಡು ಈ ರೋಗಕ್ಕೆ ಆಹುತಿ ಆದರು. ಚಿಗಟದಿಂದ ಹರಡುವ ಸೋಂಕು ಇಷ್ಟು ವ್ಯಾಪಕವಾಗಿ ಹರಡುವುದಿಲ್ಲವಾದ್ದರಿಂದ ಸ್ಥಳೀಯ ಪಿಡುಗಾಗಿ ಕಂಡುಬರುತ್ತದೆ. ಅಲ್ಲದೆ ಹೇನು ಟೈಫಸ್ಸಿನಷ್ಟು ತೀವ್ರರೋಗವೂ ಅಲ್ಲ. ಆದರೂ ಬಹುಶಃ ಇದೂ ಹೇನಿನಿಂದ ಹರಡುವ ಟೈಫಸ್ಸೂ ಒಂದೇ ಇರಬಹುದು. ಹೇನು ಬಹುಕಾಲ ಬದುಕುವುದಿಲ್ಲ. ಆದ್ದರಿಂದ ಮಾನವರಿಂದ ಕಂಡು ಬಂದ ವ್ಯಾಪಕ ಟೈಫಸ್ಸು ಕಡಿಮೆ ಆಗುತ್ತ ಬಂದಮೇಲೆ ಕ್ರಮೇಣ ಮಾಯವಾಗಬೇಕು. ಹೀಗಾಗದೆ ಪುನಃಪುನಃ ರೋಗ ವ್ಯಾಪಕವಾಗಿ ಹರಡುವುದಕ್ಕೆ ಕಾರಣ ಇರಬೇಕು ಎನ್ನಿಸಿ ವ್ಯಾಸಂಗ ಮುಂದುವರಿಸಿದಾಗ ಗುತ್ತು ಹೊರಬಿತ್ತು. ಮನೆ ಇಲಿಗಳು ಟೈಫಸ್ ವಿಷಾಣುವಿನ ವಾಸಸ್ಥಳ. ಚಿಗಟಗಳಿಂದ ಈ ವಿಷಾಣು ಇಲಿಯಿಂದ ಇಲಿಗೆ ಪ್ರಸಾರವಾಗುತ್ತದೆ. ಹಾಗೆಯೇ ಮಾನವರಿಗೂ ಅಕಸ್ಮಾತ್ ಪ್ರಸಾರವಾಗುವುದುಂಟು.

ಚಿಗಟ ಕಡಿದ ವ್ಯಕ್ತಿಗೆ ಟೈಫಸ್ ರೋಗ ತಗುಲಿ ಆ ವ್ಯಕ್ತಿ ಹೇನುಗಳಿಂದ ಕೂಡಿದ ವ್ಯಕ್ತಿಯಾಗಿದ್ದರೆ ನೆರೆಯವರಿಗೆ ಸೋಂಕು ಹಬ್ಬಿ ರೋಗ ಪುನಃ ವ್ಯಾಪಕವಾಗುವುದು ಆಶ್ಚರ್ಯವಲ್ಲ. ಆದ್ದರಿಂದ ಹೇನು ಟೈಫಸ್ ಹಾಗೂ ಚಿಗಟ ಟೈಫಸ್ಸುಗಳಿಗೆ ಪರಸ್ಪರ ಸಂಬಂಧವಿದೆ ಎನ್ನಿಸಿದೆ. ಬಹುಶಃ ಟೈಫಸ್ ರೋಗಾಣು ಹೇನಿನ ದೇಹದಲ್ಲಿ ವೃದ್ಧಿ ಹಾಗುತ್ತಿರುವಾಗ ಪ್ರಬಲ ವಿಷಾಣುವಾಗಿ ಮಾರ್ಪಡುತ್ತದೆ ಎಂದು ತೋರಿಸುತ್ತದೆ.

ರಾಕಿ ಪರ್ವತದ ರಕ್ತಗಂಧೆ ಜ್ವರ (ರಾಕಿ ಮೌಂತನ್ ಸ್ಪಾಟೆಡ್ ಫೀವರ್)

[ಬದಲಾಯಿಸಿ]

ಇದು ರಿಕೆಟ್ಸಿಯ ರಿಕೆತ್ಸಿ ಎಂಬ ಸೂಕ್ಷ್ಮಾಣುಗಳಿಂದ ಉಂಟಾಗುವ ತೀವ್ರತರ: ಜ್ವರ. ಖಾಯಿಲಸ್ತನ ದೇಹದಲ್ಲಿರುವ ಈ ಸೂಕ್ಷ್ಮಾಣುಗಳು ಉಣ್ಣಿಗಳ ಕಚ್ಚುವಿಕೆಯಿಂದ ಇತರರಿಗೆ ಹರಡಿ ರೋಗ ಉಂಟಾಗುತ್ತದೆ. ರೋಗ ತಗುಲಿದ ಮನುಷ್ಯನಿಗೆ ಪ್ರಾರಂಭದಲ್ಲಿ ಅಂದರೆ 3-4 ದಿವಸಗಳಲ್ಲಿ ಕೈ ಹರಡು ಕಾಲಿನ ಹರಡುಗಳಲ್ಲಿ ಅನಂತರ ಅಂಗೈ ಅಂಗಾಲು ಮುಖ ಮೊದಲಾಗಿ ಶರೀರದ ಎಲ್ಲ ಭಾಗಗಳಲ್ಲೂ ಕೆಂಪು ಗಂಧೆಗಳೇಳುತ್ತವೆ. ಚಳಿ, ಜ್ವರ, ತಲೆನೋವು, ಮೈಕೈನೋವುಗಳಿಂದ ತೀವ್ರವಾಗಿಯೇ ಪ್ರಾರಂಭವಾಗಿ ಎರಡನೆಯ ವಾರದಲ್ಲಿ ಈ ರೋಗ ಉಲ್ಬಣಾವಸ್ಥೆಗೆ ಬರುತ್ತದೆ. ಈ ಕಾಲದಲ್ಲಿ ಮರಣವೂ ಉಂಟಾಗಬಹುದು. 14 ದಿವಸಗಳು ಕಳೆದರೆ ವಾಸಿ ಆಗುವ ಅವಕಾಶ ಹೆಚ್ಚು. ಮೂರನೆಯ ವಾರದಿಂದ ಜ್ವರ ಇಳಿಯುತ್ತ ಬರುತ್ತದೆ. ವಿಷಾಣುವಿನ ಪ್ರಾಬಲ್ಯ ಮತ್ತು ರೋಗಿಯ ವಯಸ್ಸು ಇವು ರೋಗಿಯ ಮರಣವನ್ನು ನಿರ್ಧರಿಸುತ್ತವೆ. ಮರಣ 5%-80%ರ ವರಗೂ ಆಗಬಹುದು. ಸಣ್ಣ ಮಕ್ಕಳಿಗಿಂತಲೂ 50 ವರ್ಷ ವಯಸ್ಸಿಗೆ ಮೇಲ್ಪಟ್ಟವರು ಸಾಯುವುದು ಜಾಸ್ತಿ. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಈ ರೋಗದಿಂದ 22%ರಷ್ಟು ಮರಣ ಉಂಟಾಗುತ್ತದೆ ಇಂದು ತಿಳಿದುಬಂದಿದೆ. ಅಲ್ಲಿನ ರಾಕಿ ಪರ್ವತ ಪ್ರದೇಶಗಳಲ್ಲಿ ಮಾತ್ರ ಈ ರೋಗ ಇರುವುದೆಂದು ಮುಂದೆ ತಿಳಿದಿದ್ದರು. ಆದರೆ ಇತ್ತೀಚೆಗೆ ಕೆನಡ, ಅಮೆರಿಕದ 42 ಸಂಸ್ಥಾನಗಳು, ಬ್ರೆಜಿಲ್, ಕೊಲಂಬಿಯ ಮತ್ತು ಮೆಕ್ಸಿಕೋ ರಾಜ್ಯಗಳಲ್ಲಿಯೂ ಈ ರೋಗ ಇರುವುದೆಂದು ಗೊತ್ತಾಗಿದೆ. ಈ ರೋಗ ಉಣ್ಣಿ ಮತ್ತು ಅವುಗಳ ವಾಸಸ್ಥಾನವಾದ ದಂಶಕ ಪ್ರಾಣಿಗಳು ವಿಶೇಷವಾಗಿರುವ ಹಳ್ಳಗಾಡಿನ ಪ್ರದೇಶಗಳಲ್ಲೇ ಇರುವುದು ಹೆಚ್ಚು ಆದರೂ ಸಂಯುಕ್ತಸಂಸ್ಥಾನದ ಪೂರ್ವ ಪ್ರದೇಶದಲ್ಲಿ ನಾಯಿಗಳ ಮುಖೇನ ಉಣ್ಣಿ ಪಟ್ಟಣಗಳಿಗೆ ಸೇರಿ ಕೆಲವು ನಗರಗಳಲ್ಲಿಯೂ ಈ ರೋಗ ಮನೆಮಾಡಿಕೊಂಡಿದೆ. ಇದಕ್ಕೆ ರಕ್ಷಣೆ ಪಡಿದಿರುವ ಮೊಲಗಳ ರಕ್ತ ಸಾರವನ್ನು (ಹೈಪರ್‍ಇಮ್ಯೂನ್ ರ್ಯಾಬಿಟ್ ಸೀರಮ್) ಚುಚ್ಚುಮದ್ದಿನ ಮೂಲಕ ಪ್ರಾರಂಭದಲ್ಲಿ ಕೊಡುವುದರಿಂದ ಸ್ವಲ್ಪ ಪ್ರಯೋಜನ ಉಂಟಾಗಬಹುದು. ಪ್ರತಿ ಜೈವಿಕ ಔಷಧಗಳನ್ನೂ ಇತ್ತೀಚೆಗೆ ಉಪಯೋಗಿಸಲಾಗುತ್ತಿದೆ. ಸತ್ತಿರುವ ರೋಗಕ್ರಿಮಿಗಳಿರುವ ದ್ರಾವಣವನ್ನು ಚುಚ್ಚುಮದ್ದಾಗಿ ಕೊಟ್ಟು ಕಾಯಿಲೆ ಇರುವ ಪ್ರದೇಶಗಳಲ್ಲಿ ಬಹುಜನರಿಗೆ ಈ ರೋಗ ತಗಲದಂತೆ ರಕ್ಷಣೆ ಮಾಡಲಾಗಿದೆ. ಒಂದು ವೇಳೆ ಕಾಮುಲೆ ತಗುಲಿದರೂ ಅವರಿಗೆ ಅದರ ಉಪದ್ರವ ಜಾಸ್ತಿ ಇರುವುದಿಲ್ಲ. ಕಾಯಿಲೆ ಇರುವ ಪ್ರದೇಶಗಳಲ್ಲಿ ವರ್ಷಕ್ಕೊಂದು ಬಾರಿ ಸೂಜಿಮದ್ದು ಮಾಡಬೇಕು. ಈ ರೋಗವನ್ನು ತಡೆಗಟ್ಟುವ ಬೇರೆ ಮಾರ್ಗಗಳು ಯಾವುವು ಎಂದರೆ ಉಣ್ಣೆಗಳ ಕಡಿತವನ್ನು ತಪ್ಪಿಸಿಕೊಳ್ಳುವುದು ; ನಾಯಿ ಮುಂತಾದ ಪ್ರಾಣಿಗಳ ಮೈಮೇಲೆ ಇರುವ ಉಣ್ಣೆಗಳನ್ನು ನಾಶ ಮಾಡುವುದು, ಉಣ್ಣೆಗಳನ್ನು ತೆಗೆಯಬೇಕಾದರೆ ಬರಿ ಕೈಬೆರಳುಗಳಿಂದ ತೆಗೆಯದೆ ಇಕ್ಕಳ ಅಥವಾ ಕಾಗದದ ಚೂರುಗಳಿಂದ ಹಿಡಿದುಕೋಡು ತೆಗೆಯುವುದು ; ಕೈಯಲ್ಲಿ ಮುಟ್ಟಿದ್ದೇ ಆದರೆ ಬೆರಳುಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳುವುದು ಇತ್ಯಾದಿ. ಡಿ.ಡಿ.ಟಿ. ಮುಂತಾದ ಕೀಟನಾಶಕ ವಸ್ತುಗಳಿಂದ ಉಣ್ಣಿಗಳನ್ನು ನಾಶಪಡಿಸಬೇಕು.

ಇನ್‍ಪ್ಲೂಎನ್‍ಜಾ

[ಬದಲಾಯಿಸಿ]

ನೆಗಡಿ ಕೆಮ್ಮು ಜ್ವರಗಳೇ ಪ್ರಧಾನ ಲಕ್ಷಣಗಳಾಗಿರುವ ಹಾಗೂ ಜನ ಬಹುಸಾಮಾನ್ಯವಾಗಿ ನರಳುವ ಒಂದು ರೋಗ. ಹೀಮೋಫಿಲಿಸ್ ಇನ್‍ಪ್ಲೂಎನ್‍ಜû ಎಂಬ ಏಕಾಣು ರೋಗಕಾರಕವೆಂದಿದ್ದರೂ ವೈರಸ್ ಸೋಂಕು ಕಾರಣವಾಗಿರಬಹುದು ಎಂಬುದು ಪ್ರಾಯಶಃ ನಿಜ. ಏಕಾಣುವಿನ ಸೋಂಕು ಅನಂತರ ಉಂಟಾಗಿ ಜ್ವರ ಇತ್ಯಾದಿಗಳು ಕಂಡುಬರುತ್ತವೆ ಇಂದು ತೋರುತ್ತದೆ. ಬಹು ಹಿಂದಿನಿಂದ ರೋಗ ಗುರುತಿಸಲ್ಪಟ್ಟಿತ್ತೆಂಬುದು ಅನುಮಾನ. 1889-90ರಲ್ಲಿ ಈ ರೋಗ ಪ್ರಪಂಚದಲ್ಲಿ ಅನೇಕ ಕಡೆ ವ್ಯಾಪಿಸಿ ಜನರ ಲಕ್ಷ್ಯಕ್ಕೆ ಬಂತು ಎನ್ನಲಾಗಿದೆ. ಪೂರ್ವದೇಶಗಳಿಂದ ರಷ್ಯ ಜರ್ಮನಿ, ಫ್ರಾನ್ಸ್, ಇಂಗ್ಲೆಂಡುಗಳಿಗೂ ಅನಂತರ ಕೆನಡ ಅಮೆರಿಕಗಳಿಗೂ ಹರಡಿ ಚಿಕ್ಕವರು ದೊಡ್ಡವರು, ಗಂಡಸರು ಹೆಂಗಸರು ಎನ್ನದೆ ಎಲ್ಲರಿಗೂ ತಗಲಿ ಸ್ವತಃ ತಾನಾಗಿಯೇ ಇಲ್ಲವೇ ಸಮಕಾಲಿಕ ಇತರ ರೋಗಗಳ ಮೂಲಕ ಮಾರಕವಾದ ಗಂಡಾಂತರವಾಯಿತು. ಪುನಃ ಮೊದಲ ಯುದ್ಧಕಾಲದಲ್ಲಿ ಜಗದ್ವ್ಯಾಪಕವಾಗಿ ಹರಡಿ ತನ್ನ ಮಾರಿತನವನ್ನು ಪ್ರದರ್ಶಿಸಿತು. ಈಚೆಗೆ 1956ರಲ್ಲಿ ಪೂರ್ವ ಪ್ರದೇಶಗಳಲ್ಲಿ ಪ್ರಾರಂಭವಾಗಿ ಪ್ರಾಪಂಚಿಕವಾಗಿ ಹರಡಿದ ಪ್ರಬಲ ಸೋಂಕಾಗಿ ಕಾಡಿತು. ರೋಗ ಆರೋಗ್ಯ ವ್ಯಕ್ತಿಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತದೆ.ಚಳಿ, ಅನಂತರ ಆರಕ್ತತೆಯಿಂದ ಮೈ ಬಿಸಿಯಾಗುವಿಕೆ, ವಿಪರೀತ ಜ್ವರ, ಬೆನ್ನುನೋವು, ಕೈಕಾಲುನೋವು, ವಾಕರಿಕೆ ವಮನ ಇವು ಕಂಡುಬರುತ್ತವೆ. ಪ್ರಾರಂಭದಲ್ಲಿ ಮೂಗುಬಾಯಿಗಳು ಒಣಗಿ ಬಿಸಿ ಉಸಿರಾಡುವುದು, ಕಣ್ಣುರಿ, ಕಣ್ಣು ಕೆಂಪಾಗುವಿಕೆ, ಅನಂತರ ವಿಪರೀತ ಸೀನು, ಹಣೆ ಕಣ್ಣುಗುಡ್ಡೆಗಳ ನೋವು, ಗಂಟಲು ನೋವು, ಶ್ಲೇಷ್ಮರಹಿತ ಕೆಮ್ಮು ಇವು ಇತರ ಲಕ್ಷಣಗಳು. ಅಗ್ರ (ನಾಲಗೆಯ ಮೇಲೆ ಕಟ್ಟಿರುವುದು). ಮಲಬದ್ಧತೆ, ಅತಿ ನಿಶ್ಯಕ್ತಿ ಇವೂ ಕಾಣಿಸಿಕೊಳ್ಳುವ ಲಕ್ಷಣಗಳು. ಶೀಘ್ರವಾಗಿಯೇ ಕಣ್ಣು ಮೂಗುಗಳಲ್ಲಿ ನೀರು ತುಂಬಿ ಸುರಿಯುವುದಕ್ಕೆ ಪ್ರಾರಂಭವಾಗುತ್ತದೆ.ಬೆವರುವುದು, ಶ್ಲೇಷ್ಮಯುಕ್ತ ಶ್ರಮಸಹಿತ ಕೆಮ್ಮು, ಕಷ್ಟಶ್ವಾಸಕ್ರಮ ಇವು ಕೂಡ ಉಂಟಾಗಿ 3ರಿಂದ 5 ದಿವಸಗಳ ಪರ್ಯಂತ ಕಾಡಿಸಿ ಅನಂತರ ಜ್ವರ ಶಮನವಾಗುತ್ತದೆ. ಜ್ವರ ಇಳಿಯುವ ಮುನ್ನ ಬಹಳವಾಗಿ ಬೆವರಿ ಅತ್ಯಂತ ನಿಶ್ಯಕ್ತಿಯನ್ನು ಉಂಟುಮಾಡುವುದು ಸಾಮಾನ್ಯ. ನಿಶ್ಯಕ್ತಿ ಕೆಮ್ಮುಗಳು ಜ್ವರ ನಿಂತ ಹಲವು ದಿವಸಗಳಾದ ಬಳಿಕವೂ ಮುಂದುವರಿಯುತ್ತವೆ. ಸೋಂಕು ಶ್ವಾಸನಾಳಗಳು ಫುಪ್ಫುಸಗಳಿಗೆ ಹರಡುವುದರಿಂದ ರೋಗವು ತೀವ್ರತಿಯನ್ನು ತಳೆದು ಮಾರಕವೂ ಆಗಬಹುದು. ಆದರೆ ಎಲ್ಲ ಕಾಲದಲ್ಲೂ ರೋಗ ಹೀಗಿರುವುದಿಲ್ಲ. ಸಾಧಾರಣವಾಗಿ ವಾಯು ಕೆರಳಿಕೊಂಡು ತಲೆನೋವು, ಮೈಕೈನೋವು, ಕೆಮ್ಮು ನೆಗಡಿ ಜ್ವರಗಳು ಕಡಿಮೆಯಾಗಿಯೋ ಹೆಚ್ಚಾಗಿಯೋ ಕಂಡುಬಂದು 3-4 ದಿವಸಗಳಲ್ಲಿ ಶಮನವಾಗುವುದೇ ಸಾಮಾನ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಸೀನುವಿಕೆ ಸ್ಪರ್ಶಗಳಿಂದ ರೋಗ ಸುಲಭವಾಗಿ ಹರಡಿದರೂ ಸ್ಥಳೀಯವಾಗಿಯೇ ಇದ್ದು ಮಾಯವಾಗುತ್ತದೆ. ಆದರೆ ಅಪರೂಪ ಸಂದರ್ಭಗಳಲ್ಲಿ ಯಾವುದೋ ಅವ್ಯಕ್ತ ಕಾರಣಗಳಿಂದ ರೋಗ ಪ್ರಪಂಚವ್ಯಾಪಕವಾಗಿ ತೀವ್ರಮಾರಕವಾಗಿ ಮಾರ್ಪಡುತ್ತದೆ. ರೋಗಕ್ಕೆ ನಿರ್ದಿಷ್ಟ ಔಷಧವಿಲ್ಲ. ಲಸಿಕೆಗಳಿಂದ ರೋಗರಕ್ಷಣೆ ಪಡಿಯುವುದು ಸುಲಭಸಾಧ್ಯವಲ್ಲ. ಆಸ್ಪಿರಿನ್ ಇತ್ಯಾದಿಗಳನ್ನೂ ಪ್ರತಿಜೈವಿಕಗಳನ್ನೂ ಚಿಕಿತ್ಸೆಗಾಗಿ ಉಪಯೋಗಿಸುವುದು ರೂಢಿಯಲ್ಲಿದೆ.

ನ್ಯೂಮೋನಿಯ

[ಬದಲಾಯಿಸಿ]

ನೂಮೋಕಾಕಸ್ ಎಂಬ ದಂಡಾಣುವಿನ ಸೋಂಕಿನಿಂದುಂಟಾದ ಜ್ವರ, ಸ್ಟ್ರೆಪ್ಟೊಕಾಕಸ್ ಹಾಗೂ ಇನ್‍ಫ್ಲೂಎನ್eóÁ ವಿಷಾಣುಗಳೂ ನ್ಯೂಮೋನಿಯವನ್ನು ಉಂಟುಮಾಡಬಹುದು. ಅಪರೂಪವಾಗಿ ಕ್ಲೆಬ್ಸಿಎಲ್ಲ ಎಂಬ ವಿಷಾಣುವಿನ ಸೋಂಕು ತೀವ್ರ ಹಾಗೂ ಆತಂಕಕಾರಕ ರೀತಿಯ ನ್ಯೂಮೋನಿಯಕ್ಕೆ ಕಾರಣವಾಗಿದೆ. ಎಲ್ಲ ಸೋಂಕುಗಳಲ್ಲಿಯೂ ಪ್ರಧಾನವಾಗಿ ಫುಪ್ಫುಸಗಳ ಉರಿ ಊತ ಕಂಡುಬರುತ್ತದೆ. ನೂಮೋಕಾಕಸ್‍ಕೃತ ನ್ಯೂಮೋನಿಯದಲ್ಲಿ ನಿರಂತರ ಜ್ವರ, ಎದೆನೋವು, ಉಸಿರಾಟದ ದರ ತೀವ್ರವಾಗಿ ಹೆಚ್ಚಿರುವುದು. ವಿಷಯ ಪರಿಸ್ಥಿತಿ ಜ್ಞಾನಾಜ್ಞಾನ, ಕೆಮ್ಮು ವಿಸರ್ಜಿತ ಶ್ಲೇಷ್ಮ, ಕಬ್ಬಿಣದ ತುಕ್ಕಿನ ಬಣ್ಣದಂತೆ ಅಲ್ಲಲ್ಲಿ ಬಣ್ಣವಾಗಿರುವುದು ಇವು ಪ್ರಮುಖ ಲಕ್ಷಣಗಳು. ಜ್ವರ ಸಾಧಾರಣವಾಗಿ 8-10 ದಿವಸಗಳಲ್ಲಿ ಹಠಾತ್ತಾಗಿ ಇಳಿಯುತ್ತದೆ. ಹೀಗೆ ಇಳಿಯುವಾಗ ವ್ಯಕ್ತಿಯ ಸ್ಥಿತಿ ಆಸ್ತಾವಸ್ಥೆಯಾಗಿರುತ್ತದೆ. ಅನೇಕ ವೇಳೆ ಸಾವು ಉಂಟಾಗಬಹುದು ಈ ಕಾಲದಲ್ಲೇ. ಮುಂಚೆಯೇ ಸಾವು ಸಂಭವಿಸುವುದು ಸಾಮಾನ್ಯವಲ್ಲ. ವ್ಯಕ್ತಿ ಉಳಿದುಕೊಂಡರೆ ಕ್ರಮೇಣ ಚೇತರಿಸಿಕೊಂಡು ಗುಣಮುಖವಾಗುವುದು ಸಂಭಾವ್ಯ. ನ್ಯೂಮೋನಿಯ ರೋಗಕ್ಕೆ ವಿರುದ್ಧ ರಕ್ಷಣೆಯನ್ನು ಪೂರ್ವಭಾವಿ ಲಸಿಕೆ ಚುಚ್ಚುಮದ್ದಿನಿಂದ ಪಡೆಯುವುದು ಸುಲಭವಲ್ಲ. ಒಂದು ಸಲ ನ್ಯೂಮೋನಿಯ ಬಂದರೆ ಇನ್ನೊಂದು ಸಲ ಬರಬಾರದೆಂದೇನೂ ಇಲ್ಲ. ಪ್ಲೇಗ್, ಟೈಫಾಯಿಡ್, ದಡಾರ ಇಂಥ ರೋಗಗಳಲ್ಲೂ ನ್ಯೂಮೋನಿಯ ಲಕ್ಷಣಗಳು ಕಂಡುಬರಬಹುದು. ನ್ಯೂಮೋನಿಯ ಚಿಕಿತ್ಸೆಗೆ ಮೊದಲು ಸಲ್ಫ ಥೈಯಸೋಲ್ ಕೊಡುತ್ತಿದ್ದರು. ಈಚೆಗೆ ಪೆನಿಸಿಲ್ಲಿನ್ ಮುಂತಾದ ಪ್ರತಿಜೈವಿಕಗಳನ್ನು ಕೊಡುವುದು ಆಚರಣೆಯಲ್ಲಿದೆ. ನ್ಯೂಮೋನಿಯದಲ್ಲಿ ಉಸಿರಾಟಕ್ಕೆ ಬಹು ತೊಂದರೆ ಆಗಿ ರೋಗಿ ಒದ್ದಾಡುವುದರಿಂದ ರೋಗಿಗೆ ಆಕ್ಸಿಜನ್ನನ್ನು ಕೊಡುವುದು ರೂಢಿ. (ಎಸ್.ಆರ್.ಆರ್.)

ಟೈಫಾಯಿಡ್ ಮತ್ತು ಪ್ಯಾರಾಟೈಫಾಯಿಡ್

[ಬದಲಾಯಿಸಿ]

ಇವನ್ನು ವಿಷಮಶೀತಜ್ವರಗಳೆನ್ನುತ್ತಾರೆ. ಸಾಲ್ಮೊನೆಲ್ಲ ಟೈಫಿ ಇಂಬ ಕಡ್ಡಿಯಾಕಾರದ ಏಕಾಣುವಿನ ಸೋಂಕಿನಿಂದ ಉಂಟಾಗುವ ಜ್ವರ ಟೈಫಾಯಿಡ್. ಇದು ಸಾಧಾರಣವಾಗಿ ನಾಲ್ಕು ವಾರಗಳು ಚಳಿಸುತ್ತದೆ. ಮೂರನೆಯ ವಾರದಲ್ಲಿ ರೋಗ ಉಲ್ಬಣಗೊಂಡು ಕರುಳಿನಲ್ಲಿ ರಂಧ್ರೀ ಕ್ರಮೇಣ ಇಲ್ಲವೆ ರಕ್ತಸ್ರಾವವಾಗಿ ಸಾವು ಸಂಭವಿಸದಿದ್ದರೆ 4ನೆ ವಾರದಲ್ಲಿ ಜ್ವರ ಕ್ರಮೇಣ ಇಳಿಯುತ್ತ ಬಂದು ರೋಗ ಗುಣವಾಗುತ್ತದೆ. ಮೊದಲ ವಾರದಲ್ಲಿ ಜ್ವರ ಏಣಿ ಮೆಟ್ಟಲಿನಂತೆ ಏರುತ್ತದೆ. ಆಲಸ್ಯ, ತಲೆನೋವು, ಕೆಮ್ಮು, ಮೂಗಿನಿಂದ ರಕ್ತಸ್ರಾವ ಇವು ಕೂಡ ಉಂಟಾಗುತ್ತವೆ. ಎರಡನೆಯ ವಾರದಲ್ಲಿ ಜ್ವರ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತ ನಿರಂತರವಾಗಿ ಇರುವುದೇ ಅಲ್ಲದೆ ಈ ಕಾಲದಲ್ಲಿ ಗುಲ್ಮ ಊದಿಕೊಳ್ಳುವುದು. ಕರುಳಿನಲ್ಲಿ ವಿಷಾಣುಗಳು ನೆಲೆಸಿ ಅಲ್ಲಲ್ಲಿ ಸ್ಥಳೀಯ ಊತಗಳನ್ನು ಉಂಟುಮಾಡುವುದು. ಭೇದಿಯಾಗುವುದು ಇತ್ಯಾದಿ ಕಂಡುಬರುತ್ತವೆ.ಮೂರನೆಯ ವಾರ ಮೇಲೆ ಹೇಳಿರುವಂತೆ ಅಪಾಯಕಾಲ. ಎರಡನೆಯ ಮತ್ತು ಮೂರನೆಯ ವಾರಗಳಲ್ಲಿ ಜ್ಞಾನಜ್ಞಾನ ಸಾಮಾನ್ಯ. ಮಂಕು ಕವಿದು, ಮುಖ ಕಂದಿರುತ್ತದೆ. ಪ್ರಯೋಗಶಾಲೆಯಲ್ಲಿ ವೈಡಾಲ್ ಪರೀಕ್ಷೆ ಎಂಬ ರಕ್ತ ಪರೀಕ್ಷೆಯಿಂದ ಈ ರೋಗವನ್ನು ಖಂಡಿತವಾಗಿ ಪತ್ತೆ ಮಾಡಬಹುದು. ಆದರೆ ಇದು ಜ್ವರ ಕಾಣಿಸಿಕೊಂಡ 10-12 ದಿವಸಗಳ ಅನಂತರವೇ ಮಾಡಬೇಕಾದ ಪರೀಕ್ಷೆ. ಕ್ಲೋರಾಮ್‍ಫನಿಕಾಲ್ (ಕ್ಲೋರಾಮೈಸೆಟಿನ್) ಎಂಬ ಪ್ರತಿಜೈವಿಕ ಟೈಫಾಯ್ಡಿಗೆ ಖಚಿತ ಚಿಕಿತ್ಸಕ ಮದ್ದು, ರೋಗವನ್ನು ಮೊದಲ ವಾರದಲ್ಲೆ ತಡೆಗಟ್ಟಿ ಗುಣ ಮಾಡುವಷ್ಟು ಉಪಯುಕ್ತ ವಸ್ತು. ಲಸಿಕೆ ಹಾಕಿ ರೋಗ ಬರದಂತೆ ತಡೆಯಲೂಬಹುದು.

ಸಾಲ್ಮೊನೆಲ್ಲ ಪ್ಯಾರಾಟೈಫಿ ಂ ಮತ್ತು ಃ ಎಂಬ ಕಡ್ಡಿಯಾಕಾರದ ಏಕಾಣುಗಳ ಸೋಂಕಿನಿಂದ ಉಂಟಾಗುವ ಜ್ವರಗಳು ಪ್ಯಾರಾಟೈಫಾಯಿಡ್. ಹೆಚ್ಚು ಕಡಿಮೆ ಟೈಫಾಯಿಡ್ ಜ್ವರದಂತೆಯೆ ಇರುತ್ತದೆ. ಆದರೆ ರೋಗದ ಅವಧಿ ನಾಲ್ಕು ವಾರಗಳ ಬದಲು ಸುಮಾರು 12-14 ದಿವಸಗಳು ಮಾತ್ರ. ಸಾಮಾನ್ಯವಾಗಿ ಟೈಫಾಯಿಡ್‍ನಷ್ಟು ತೀವ್ರ ರೋಗವಲ್ಲ. ಪ್ಯಾರಾಟೈಫಾಯಿಡ್‍ನಿಂದ ಸಾವು ಸಂಭವಿಸುವುದು ಅಪರೂಪ. ಪ್ಯಾರಾಟೈಫಾಯ್ಡಿಗೂ ಕ್ಲೋರಾಮ್ ಫೆನಿಕಾಲನ್ನೇ ಮದ್ದನ್ನಾಗಿ ಉಪಯೋಗಿಸುತ್ತಾರೆ.

ಮಾಲ್ಟ ಜ್ವರ

[ಬದಲಾಯಿಸಿ]

ಮಾಲ್ಟ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಸಾಧಾರಣವಾಗಿ ಕಾಣಬರುವ ಜ್ವರಯುಕ್ತ ಸೋಂಕು ರೋಗ ಬ್ರೂಸೆಲ್ಲ ಎಂಬ ಸೂಕ್ಷ್ಮ ವಿಷಕ್ರಮಿಯ ಸೋಂಕಿನಿಂದ ಹರಡುತ್ತದೆ. ಸಾಧಾರಣವಾಗಿ ಸೋಂಕು ತಗುಲಿದ ಎರಡು ವಾರಗಳ ತರುವಾಯ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಜ್ವರವೇರುವುದು ನಿಧಾನ, ತೀಕ್ಷ್ಣತೆ ಕಡಿಮೆ. ಸುಮಾರು ಎರಡು ವಾರಗಳ ಕಾಲ ಜ್ವರ ಕಾದು ಮತ್ತೆ ತಣಿಯುತ್ತದೆ. ಒಂದು ವಾರದ ಬಳಿಕ ಪುನಃ ಮತ್ತೆರಡು ವಾರ ಜ್ವರ ಕಾಯುತ್ತದೆ. ಕೆಲವು ತಿಂಗಳುಗಳಿಂದ ತೊಡಗಿ ಒಂದೆರಡು ವರ್ಷಗಳವರೆಗೂ ಈ ರೀತಿ ರೋಗಿ ಬಳಲಬಹುದು. ಜ್ವರ ಬಂದಾಗ ಮೈ ಬಹಳವಾಗಿ ಬೆವರಿ ಸುಸ್ತಾಗುವುದುಂಟು. ರೋಗಿಯ ಮನಸ್ಸಿಗೆ ಬೇಸರ, ಆಲಸ್ಯ ಇತ್ಯಾದಿ ಸಾಮಾನ್ಯ. ರಕ್ತಹೀನತೆ ಮತ್ತು ಸುಸ್ತು ಮುಂತಾದ ಚಿಹ್ನೆಗಳು ಅನಂತರ ಕಾಣಿಸಿಕೊಳ್ಳುತ್ತವೆ. ಆಡುಗಳಿಂದ ಸೋಂಕು ಉಂಟಾಗುತ್ತದೆ. ಆಡಿನ ಹಾಲನ್ನು ಕುಡಿಯುವುದರಿಂದಲೂ ಈ ಹಾಲಿನಿಂದ ತಯಾರಿಸಿದ ಬೆಣ್ಣೆ ಮುಂತಾದವನ್ನು ಉಪಯೋಗಿಸುವುದರಿಂದಲೂ ಮನುಷ್ಯನಿಗೆ ಈ ರೋಗ ಅಂಟುತ್ತದೆ. ಕಾಯಿಲೆಯಿಂದ ನರಳುತ್ತಿರುವ ಆಡುಗಳನ್ನು ತತ್‍ಕ್ಷಣ ನಾಶಪಡಿಸಬೇಕು. ಈ ಕಾಯಿಲೆಯಿಂದ ನರಳುತ್ತಿರುವವರಿಗೆ ಸ್ತ್ರೆಪ್ಟೋಮೈಸಿನ್ ಎಂಬ ಔಷಧಿಯ ಪ್ರಯೋಗದಿಂದ ಬಹಳ ಗುಣ ಉಂಟಾಗುತ್ತದೆ.

ಮರುಕಳಿಸುವ ಜ್ವರ (ರಲಾಪ್ಸಿಂಗ್ ಫೀವರ್)

[ಬದಲಾಯಿಸಿ]

ಬೊರ್ರಲಿಯ ಗುಂಪಿಗೆ ಸೇರಿದ ವಿಷಾಣುವಿನ ಸೋಂಕಿನಿಂದ ತಲೆದೋರುವ ಜ್ವರ. ಬೊರ್ರಲಿಯ ಎಂಬುದು ಸ್ಟೈರೊಕೀತ ಪಂಗಡಕ್ಕೆ ಸೇರಿದ ಬ್ಯಾಕ್ಟೀರಿಯ. ಹೇನು ಮತ್ತು ಉಣ್ಣೆಗಳಿಂದ ವಿಷಾಣುವಿನ ಸೋಂಕು ಉಂಟಾಗುತ್ತದೆ. ಸೋಂಕು ತಗುಲಿದ 6ರಿಂದ 12 ದಿವಸಗಳಲ್ಲಿ ಸುಮಾರು 101-103( ಈನಷ್ಟು ಜ್ವರ ಏರುತ್ತದೆ.ಮೈಕೈ ನೋವು. ಮೂಗಿನಿಂದ ರಕ್ತಸ್ರಾವ ಮತ್ತು ಚರ್ಮದಲ್ಲಿ ಕೆಲವು ಕೆಂಪು ಗುಳ್ಳೆಗಳು ಏಳುವುದು ಇತರ ಲಕ್ಷಣಗಳು. ಜ್ವರ ಬಿತ್ತು 6-10 ದಿನಗಳ ಅನಂತರ ಪುನಃ ಮರುಕಳಿಸುವುದೂ, ಇದೇ ರೀತಿ ಮರುಕಳಿಸುತ್ತ ರೋಗ ವಾರಗಳ ಗಟ್ಟಲೆ ಚಳಿಸುವುದೂ ಇತರ ಲಕ್ಷಣ. ಪ್ರತಿಸಲವೂ ಜ್ವರ ಹಠಾತ್ತನೆ ಇಳಿಯುವುದರಿಂದ ಆತಂಕಕಾರಕ. ಔಷಧೋಪಚಾರಗಳಿಂದ ಇದನ್ನು ಗುಣಪಡಿಸಬಹುದು.

ಮಲೇರಿಯ

[ಬದಲಾಯಿಸಿ]

ಚಳಿಜ್ವರವೆಂದು ಸ್ವಲ್ಪ ಹಳೆಯ ಕಾಲದ ಜನರಿಗೆ ಚಿರಪರಿಚಿತವಾದ ಜ್ವರ. ಕೆಲವು ವರ್ಷಗಳ ಹಿಂದೆ ಸಾಮಾನ್ಯವಾಗಿ ಅನೇಕ ಕಡೆ ವ್ಯಾಪಕವಾಗಿ ಇತ್ತು. ಅನಂತರ ರೋಗ ದೇಶದಿಂದಲೇ ನಿರ್ಮೂಲನವಾಗಿ ಹೋಯಿತೇನೋ ಎನ್ನುವ ಸ್ಥಿತಿ ತೀರ 3-4 ವರ್ಷಗಳ ತನಕ ಇತ್ತು. ಅದು ಭ್ರಮೆಯಾಗಿ ರೋಗ ಪುನಃ ಅಲ್ಲಲ್ಲಿ ಕಾಣಬರುತ್ತಿರುವುದು ವರದಿ ಆಗಿದೆ. ಮಲೇರಿಯ ಜ್ವರ ಮಲೇರಿಯ ವಿಷಾಣುಗಳ (ಪ್ಲಾಸ್ಮೋಡಿಯಮ್) ಸೋಂಕಿನಿಂದ ಉಂಟಾದುದು. ಇವುಗಳು ಏಕಕೋಶಿಗಳ ಗುಂಪಿಗೆ ಸೇರಿದವು. ಅನಾಫೆಲೀಸ್ ಜಾತಿಯ ಸೊಳ್ಳೆಯ ಕಡಿತದಿಂದ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ತಗಲುತ್ತದೆ. ಚಳಿ ನಡುಕಗಳು ಉಂಟಾಗಿ ಜ್ವರ ಏರುವುದೂ ಕೆಲವು ಗಂಟೆಗಳಲ್ಲೇ ಜ್ವರ ಇಳಿಯುವುದೂ ಕ್ಲುಪ್ತವಾಗಿ ಒಂದೋ ಎರಡೋ ದಿವಸಗಳ ಬಳಿಕ ಪುನಃ ಚಳಿಜ್ವರ ಬರುವುದೂ, ಇದೇ ರೀತಿ ವಾರಗಟ್ಟಲೆ ತಿಂಗಳುಗಟ್ಟಲೆ ಮುಂದುವರಿಯುವುದೂ ಈ ಜ್ವರದ ಲಕ್ಷಣ. ಅತೀವ ಸುಸ್ತು ಮತ್ತು ರಕ್ತಕಣಗಳ ಹೀನತೆಯನ್ನು ಉಂಟುಮಾಡಿ ಮಾರಕವಾಗಿ ಪರಿಣಮಿಸುತ್ತದೆ. ಜೌಗು ಪ್ರದೇಶಗಳಲ್ಲಿ ಈ ರೋಗ ಸರ್ವೇಸಾಮಾನ್ಯವಾಗಿದ್ದುದರಿಂದ ಅಂಥ ಪ್ರದೇಶಗಳ ಕಲುಷಿತ ವಾಯುವಿನಿಂದಲೇ ರೋಗ ಉಂಟಾಗುವುದೆಂದು ಜನ ನಂಬಿ ಇದಕ್ಕೆ ಮಲೇರಿಯ (ಮಾಲ್ ಏರ್ ಎಂದರೆ ಕೆಟ್ಟ ವಾಯು) ಎಂದು ಹೆಸರಿಟ್ಟರು. ಕ್ರಮೇಣ ಈ ರೋಗ ಕೆಟ್ಟ ವಾಯುನಿಂದ ಉಂಟಾದುದಲ್ಲವೆಂದೂ ಪ್ಲಾಸ್ಮೋಡಿಯಮ್ ಎಂಬ ಏಕಕೋಶಿ ರಕ್ತಕಣದ ಪರಾವಲಂಬಿ ಜೀವಿಯಾಗಿ ಸೋಂಕನ್ನು ಉಂಟುಮಾಡುವುದರಿಂದ ಹರಡುವ ರೋಗವೆಂದೂ ತಿಳಿಯಿತು.

ಜೌಗುಪ್ರದೇಶದಲ್ಲಿ ತೀವ್ರವಾಗಿ ವೃದ್ಧಿಯಾಗುವ ಸೊಳ್ಳೆಗಳಿಂದ ಸೋಂಕು ಹರಡುವುದೆಂದೂ ಸೊಳ್ಳೆಗಳಲ್ಲೂ ಅನಾಫಲೀಸ್ ಜಾತಿಯ ಹೆಣ್ಣು ಸೊಳ್ಳೆಯ ಕಡಿತದಿಂದ ರೋಗ ಹರಡುವುದೆಂದೂ ಅನಂತರ ತಿಳಿದುಬಂತು. ರೋಗಕ್ಕೆ ಬಹುಕಾಲದಿಂದಲೂ ಕ್ವಿನೀನನ್ನು ನಿರ್ದಿಷ್ಟ ಚಿಕಿತ್ಸಕ ಮದ್ದನ್ನಾಗಿ ಕೊಡುತ್ತಿದ್ದರು. ಅನಂತರ ಪ್ಲಾಸ್ಮೋಕ್ವಿನ್, ಕ್ವನೀಕ್ವನ್, ಕ್ವಿನಕ್ರನ್, ಕ್ಲೋರೋಕ್ವಿನ್ ಮುಂತಾದ ಬೇರೆ ಔಷಧಗಳನ್ನು ಸಂಶ್ಲೇಷಿಸಿ ಅವನ್ನು ಮಲೇರಿಯಕ್ಕೆ ಕೊಡಲಾಗುತ್ತಿದೆ.

ಅನಿಶ್ಚಿತ ಕಾರಣಗಳಿಂದ ತಲೆದೋರುವ ಜ್ವರಗಳು

[ಬದಲಾಯಿಸಿ]

ಬಹುಜನರು ಸಾಮಾನ್ಯವಾಗಿ ಅನುಭವಿಸುವ ಜ್ವರಗಳು 3-4 ದಿವಸಗಳಿದ್ದು ವಾಸಿ ಆಗುವಂಥವು. ಇದಕ್ಕೆ ನಿರ್ದಿಷ್ಟವಾಗಿ ಇಂಥ ಸೋಂಕು ಕಾರಣವೆಂದು ಹೇಳುವಂತಿಲ್ಲ. ಅನೇಕ ವೇಳೆ ಸೋಂಕು ಉಂಟಾಗದೇ ಜ್ವರ ಬರುತ್ತದೆ. ಸೋಂಕುಕಾರಕಗಳು ವೈರಸ್, ಏಕಾಣುಗಳು, ಬೂಷ್ಟುಗಳು, ಏಕಕೋಶಿಗಳು, ಬಹುಕೋಶಿಗಳು ಮುಂತಾದ ಎಲ್ಲ ಗುಂಪಿನವೂ ಆಗಿರಬಹುದು. ನೈಸರ್ಗಿಕವಾದ ಸೋಂಕು ನಿರೋಧಕ ಸಾಮಥ್ರ್ಯ ಕುಂದಿದ್ದರೂ ನಿರುಪದ್ರವಿಗಳೆಂದು ಗಣಿಸಬಹುದಾದ ಸೂಕ್ಷ್ಮಾಣುಗಳು ಜ್ವರವನ್ನು ಉಂಟುಮಾಡಬಲ್ಲವು. ಮೂತ್ತನಾಳದಲ್ಲಿ ಕೃತಕನಾಳ ಪ್ರಯೋಗ (ಕ್ಯಾಥಿಟರೈಸೇಷನ್), ನಿಯೋ ಆರ್ಸಫೀನ ಮೀನ್, ಡಿಫ್ತೀರಿಯ ಪ್ರತಿವಿಷ, ದಾನಿಗಳಿಂದ ರಕ್ತ ಇವನ್ನು ಚುಚ್ಚುಮದ್ದಿನ ವಿಧಾನದಿಂದ ಅಭಿಧಮನಿಗಳೊಳಗೆ ಸೇರಿಸುವಿಕೆ, ಕಾರ್ಟಿಕೊ ಸ್ಟೀರಾಯ್ಡ್‍ಗಳ ಉಪಯೋಗ, ಶಸ್ತ್ರಚಿಕಿತ್ಸೆ ಇಂಥ ಸಂದರ್ಭಗಳಲ್ಲೂ ಜ್ವರ ಕಂಡುಬರುತ್ತದೆ. ಕೋಶಗಳ ಮರಣ ಹಾಗೂ ಸ್ವಯಂ ಜೀರ್ಣಕ್ರಿಯೆಗಳಿಂದ ಬಿಡುಗಡೆಯಾದ ವಸ್ತುಗಳಿಂದ ಬರುವ ಜ್ವರವನ್ನು ಅನೇಕ ರೀತಿಯ ಏಡಿಗಂತಿ ಪ್ರಸಂಗಗಳಲ್ಲಿ ಕಾಣಬಹುದು. ಹೈಪರ್ ನೆಪ್ರೋಮ ಎಂಬ ಮೂತ್ರಪಿಂಡದ ಏಡಿಗಂಡಿ, ಹಾಡ್ಜ್‍ಕಿನ್ನನ ವ್ಯಾಧಿ, ಲಿಂಪೊಸಾರ್ಕೊಮ, ಮಯ ಲೋಮೆಟೋಸಿಸ್ ಇತ್ಯಾದಿಯಾದ ಶ್ವೇತಕಣಗಳಿಗೆ ಸಂಬಂಧಪಟ್ಟ ಅರ್ಬುದ ವ್ಯಾಧಿಗಳು, ದೊಡ್ಡ ಕರುಳಿನ ಏಡಿಗಂತಿಯಿಂದ ಅದರ ನೆರೆಯಲ್ಲಿ ಉಂಟಾಗುವ ಕೀವುಬಾವು, ಶ್ವಾಸನಾಳದ ಏಡಿಗಂತಿಯಿಂದ ಫುಪ್ಫುಸದಲ್ಲಿ ಕಾಣಬರುವ ಕೀವು ಉರಿಯೂತ ಇಂಥ ಸಂದರ್ಭಗಳು ಉದಾಹರಣೆಗಳು.

ರಕ್ತ, ರಕ್ತನಾಳಗಳಿಗೆ ಸಂಬಂಧಪಟ್ಟ ಅನೇಕ ರೋಗಗಳಲ್ಲಿ ಜ್ವರ ಕಾಣಿಸಿಕೊಳ್ಳುವುದು ಉಂಟು. ಜೀಣಾನಾಳ, ಫುಪ್ಫುಸವನ್ನು ಆವಸಿರಿಸುವ ಪ್ಲೂರದ ಚೀಲ, ಗುಂಡಿಗೆಯನ್ನು ಆವರಿಸಿರುವ ಪೆರಿಕಾರ್ಡಿಯಮ್ ಚೀಲ, ಉದರದ ಅಂಗಗಳನ್ನು ಆವರಿಸಿರುವ ಪೆರಿಟೋ ನಿಯಮ್ ಚೀಲ ಇವುಗಳೊಳಗೆ ಕಾರಣಾಂತರದಿಂದ ರಕ್ತಸ್ರಾವವಾಗಿ ರಕ್ತ ಸಂಗ್ರಹಿಸಿರುವ ಸ್ಥಿತಿಗತಿಗಳಲ್ಲಿ ಜ್ವರ ಸಾಮಾನ್ಯ. ಸ್ಕರ್ವಿಯಲ್ಲಿ ಕಾಣಬರುವಂತೆ ಎಲುಬುಗಳ ಹೊದ್ದಿಕೆ (ಪೆರಿ ಆಸ್ಟಿಯಮ್) ಕೆಳಗಡೆ ಮತ್ತು ಕುಸುಮ ರೋಗದಲ್ಲಿ (ಹೀಮೋಫೀಲಿಯ) ಕಾಣಬರುವಂತೆ ಕೀಲಿಗಳೊಳಗೆ ರಕ್ತಸ್ರಾವವಾದಾಗಲೂ ಇದೇ ರೀತಿ ಗುಂಡಿಗೆ ಫುಪ್ಫುಸಗಳ ರಕ್ತನಾಳಗಳಲ್ಲಿ ಆಚಡಣೆ ಉಂಟಾಗಿ ಸ್ಥಳೀಯ ಕೋಶನಾಶ. ಬರ್ಗರನ ರೋಗ, ಕತ್ತಿಕಣರೋಗ (ಸಿಕ್ಕಲ್‍ಸೆಲ್ ಡಸೀಸ್) ಈ ಸ್ಥಿತಿಗಳಲ್ಲೂ ಜ್ವರ ಉಂಟಾಗುತ್ತದೆ.

ಗೌಟ್, ಪಾರ್ಫೇರಿಯ, ರಕ್ತಕಣಹೀನತೆ, ರಕ್ತಕಣಛಿದ್ರತೆ (ಹೀಮಾಲಿಸಿಸ್), ಸಿರ್ಹೋಸಿಸ್ ಇಂಥ ರೋಗಗಳಲ್ಲಿ ತೀವ್ರಪರಿಸ್ಥಿತಿ ಉಂಟಾಗುವ (ಕ್ರೈಸಿಸ್) ಜ್ವರ ಬರುವುದುಂಟು. ಅದಿರುವಾಯು ಚಿತ್ತೋದ್ರೇಕ ರೋಗ (ಮೇನಿಯ); ಉನ್ಮಾದ, ಮದ್ಯ ಅಫೀಮು ಚಟವಿರುವವರಲ್ಲಿ ಹಠಾತ್ತಾಗಿ ಆ ವಸ್ತುಗಳ ಸೇವನೆಯನ್ನು ನಿಲ್ಲಿಸುವುದು ಇತ್ಯಾದಿ ಕಾರಣಗಳಿಂದಲೂ ಜ್ವರ ಉಂಟಾಗಬಹುದು. ಇಂಥ ಸಂದರ್ಭಗಳಲ್ಲಿ ಜ್ವರಕ್ಕೆ ಕಾರಣ ನಿಶ್ಚಿತವಲ್ಲ. ಅಲ್ಲದೆ ಜ್ವರ ಮುಖ್ಯವಾದ ಲಕ್ಷಣವೆಂದು ಗಣಿಸುವಂತೆಯೂ ಇಲ್ಲ. ಅನೇಕ ವೇಳೆ ಜ್ವರ ತಾನಾಗಿಯೇ ನಿಲ್ಲುವುದುಂಟು. ಜ್ವರಕಾರಕ ಸಂದರ್ಭ ವ್ಯಕ್ತವಾದದ್ದೇ ಆದರೆ ಆ ಸಂದರ್ಭಕ್ಕೆ ತಕ್ಕ ಚಿಕಿತ್ಸೆಯಿಂದ ಜ್ವರವೂ ಗುಣವಾಗುತ್ತದೆ.

ಆಯುರ್ವೇದದಲ್ಲಿ ಜ್ವರ

[ಬದಲಾಯಿಸಿ]

ನಿಸರ್ಗದ ಸಕಲ ಪ್ರಾಣಿ ಸಸ್ಯ ವಸ್ತುಗಳಿಗೂ ಜ್ವರ ಬರುತ್ತದೆ. ಆಗ ಪ್ರಕೃತಿ ಸಹಜವಾದ ಲಕ್ಷಣಗಳು ಮರೆಯಾಗಿ ವಿಚಿತ್ತ ಲಕ್ಷ್ಷಣಗಳು ತಲೆದೋರುತ್ತವೆ. ಶೀತೋಷ್ಣಗಳ ಸಮತೋಲದಲ್ಲಿ ಏರುಪೇರು ಉಂಟಾದಾಗ ಉಷ್ಣದಿಂದ ಬಳಲುವುದು, ಶೈತ್ಯದಿಂದ ನಡುಗುವುದು ಮುಂತಾದ ಬಾಹ್ಯಲಕ್ಷಣಗಳು ತಲೆದೋರುವುವು.

ಧಾನ್ಯಗಳಿಗೆ ಜ್ವರ ಬಂದರೆ ಅದಕ್ಕೆ ಚೂರ್ಣವೆಂದು ಹೆಸರು. ನೀರಿಗೂ ಜ್ವರ ಬರಬಹುದು. ಆಗ ನೀರಿಗೆ ನಸು ನೀಲಿ ಬಣ್ಣ ಬರುವುದರ ಜೊತೆಗೆ ಬಲು ಸೂಕ್ಷ್ಮವಾದ ರುಚಿ ವಾಸನೆಗಳೂ ಪ್ರಾಪ್ತವಾಗುವುವು. ಸಾಂಕ್ರಾಮಿಕ ರೋಗಗಳು ಉತ್ಪನ್ನವಾಗಿ ಹರಡುವುದು ಇಂಥ ನೀರಿನ ಸೇವನೆಯಿಂದ, ನೀರಿಗೆ ಜ್ವರ ಬರುವಂತೆ ನೆಲಕ್ಕೂ ಜ್ವರ ಬರುವುದುಂಟು. ಭೂಮಿಯ ಅಂತರಾಳದಲ್ಲಿರುವ ಶೀತೋಷ್ಣಗಳಲ್ಲಿ ಫನತರ ಅಸಮಾನತೆ ಉಂಟಾಗಿ ಭೂಮಿ ನಡುಗುತ್ತದೆ_ಇದೇ ಭೂಕಂಪನ. ಮರಗಿಡಗಳಿಗೆ ಜ್ವರ ಬರುವುದರಿಂದ ಅವುಗಳಲ್ಲಿ ಗಂಟು ಮತ್ತು ಪೊಟರೆಗಳು ಉಂಟಾಗುತ್ತವೆ. ಇದಕ್ಕೆ ಕೋಟರ ಎಂದು ಹೆಸರು. ಮನುಷ್ಯರಲ್ಲಿ ಜ್ವರ ಬರಲು ಒಂಭತ್ತು ಮುಖ್ಯ ಕಾರಣಗಳು ಇವೆ.

ಜಿಡ್ಡಿನ ಅಂಶ ಲೇಶಮೂ ಇಲ್ಲದ ಅತ್ಯಂತ ಶೀತಲ ಮತ್ತು ಲಘುವಾದ ಆಹಾರ ಸೇವನೆ ಅಕಾಲದಲ್ಲಿ ಅತಿಯಾದ ವ್ಯಾಯಾಮ ಮೂತ್ರಮಲಗಳನ್ನು ವಿಸರ್ಜಿಸದಿರುವುದು ಆಹಾರವನ್ನೇ ಸೇವಿಸದಿರುವುದು (ನಿರಶನ) ಇಲ್ಲದೆ ಅಕಾಲದಲ್ಲಿ ಆಹಾರ ಸೇವನೆ ಸಾಂಕ್ರಾಮಿಕ ರೋಗಗಳಿಂದ ಕೂಡಿದ ನೀರಿನ ಸೇವನೆ ಅಭ್ಯಾಸವಿರುವ ಆಹಾರವನ್ನು ಬಿಟ್ಟು ಅಭ್ಯಾಸವಿಲ್ಲದ ಆಹಾರ ಸೇವನೆ ಮಾನಸಿಕವಾಗಿ ಉದ್ರೇಕ, ರಾತ್ರಿ ವೇಳೆ ನಿದ್ರೆ ಕೆಡುವುದು ಅತಿಯಾದ ಲೈಂಗಿಕ ಭೋಗ,ನಿಸರ್ಗದಲ್ಲಿ ಋತುಧರ್ಮದ ಬದಲಾವಣೆಗಳು,ನಾವು ಸೇವಿಸಿದ ಆಹಾರ ಅಮಾಶಯ ಮತ್ತು ಪಕ್ವಾಶಯಗಳಲ್ಲಿ ಅಂದರೆ ಜಠರ ಮತ್ತು ಕರುಳುಗಳಲ್ಲಿ ಕ್ರಮಶಃ ಪಾಕಗೊಂಡು ಆಹಾರದ ಸಾರವಾದ ದ್ರವ ಬೇರ್ಪಡುತ್ತದೆ. ಇದರ ಹೆಸರು ರಸಧಾತು. ಇದು ರಸವಾಹಿನಾಳದ (ತೊರ್ಯಾಸಿಕ್ ಡಕ್ಟ್) ಮೂಲಕ ಸಾಗಿ ಹೃದಯದ ಹತ್ತಿರ ಶಿರಸ್ಸಿನ ಕಡೆಯಿಂದ ಬರುವ ಅಭಿಧಮನಿಯನ್ನು ತಲುಪುವುದು. ಅಲ್ಲಿಂದ ಹೃದಯವನ್ನು ಸೇರಿ ಮುಂದೆ ರಕ್ತ ನಾಳಗಳ ಮೂಲಕ ಶರೀರದ ಸಮಸ್ತ ಭಾಗಗಳಿಗೂ ಪೂರೈಕೆ ಆಗುತ್ತದೆ. ಈಗ, ಮೇಲೆ ಬರೆದಿರುವ ಒಂಬತ್ತು ಕಾರಣಗಳ ಪೈಕಿ ಯಾವುದೇ ಒಂದರ ಅಥವಾ ಹಲವಾರು ಸಂಯುಕ್ತ ಫಲವಾಗಿ ದೇಹದಲ್ಲಿನ ವಾಯು ಪ್ರಕೋಪಗೊಂಡು ಜಠರವನ್ನು ಪ್ರವೇಶಿಸುತ್ತದೆ. ಇದು ವಾತಜ್ವರ, ಹಾಗೇ ಪಿತ್ತ, ಶ್ಲೇಷ್ಮಜ್ವರಗಳು. ಅಲ್ಲಿ ಅದು ಜಠರಾಗ್ನಿಯ ತೇಜಸ್ಸನ್ನು ಹೊರಗಟ್ಟಿ ರಸಧಾತುವನ್ನು ಕೆಡುಸುವುದು. ಹೀಗೆ ಕೆಟ್ಟ ರಸಧಾತುವಿನೊಡನೆ ಸೇರಿಕೊಂಡ ವಾಯು ಶರೀರದಲ್ಲೆಲ್ಲ ಸಂಚರಿಸುತ್ತದೆ. ತತ್ಪರಿಣಾಮವಾಗಿ ಆರೋಗ್ಯ ಹದಗೆಟ್ಟು ಜ್ವರ ಬರುವುದು. ಇಂಥ ಜ್ವರದಲ್ಲಿ ರೋಗಿ ಬೆವರುವುದಿಲ್ಲ. ಅಲ್ಲದೇ ವಾಯುವು ಜಠರ ಮತ್ತು ಕರುಳುಗಳಿಂದ ತೇಜಸ್ಸನ್ನು (ಆಹಾರವನ್ನು ಜೀರ್ಣ ಮಾಡುವ ಶಕ್ತಿ) ಹೊರಹಾಕುವುದರಿಂದ ಆಹಾರ ಜೀರ್ಣವಾಗದೆ ಆ ತೇಜಸ್ಸಿಗೆ ಅನುಗುಣವಾಗಿ ಮೈಕಾವು ಏರಿರುತ್ತದೆ. ಇದು ಜ್ವರ ಬಂದಿರುವುದರ ಒಂದು ಲಕ್ಷಣ ಮಾತ್ರ. ಆಹಾರವಿಹಾರ ದೋಷಗಳಿಂದ ವಾಯು ಪ್ರಕೋಪಗೊಂಡು ಬರುವ ಜ್ವರ ವಾತಜ್ವರ; ಅಂತೆಯೇ ಪಿತ್ತ ಪ್ರಕೋಪಗೊಂಡು ಬರುವ ಜ್ವರ ಪಿತ್ತಜ್ವರ; ಕಫ ಪ್ರಕೋಪಗೊಂಡು ಬರುವ ಜ್ವರ ಕಫಜ್ವರ. ಇವು ಮೂರೂ ಸಂಯುಕ್ತವಾಗಿ ಪ್ರಕೋಪವಾದಾಗ ಬರುವ ಜ್ವರವೇ ಸನ್ನಿಪಾತ. 1. ಏಕಕಾಲದಲ್ಲಿ ಇಡೀ ಶರೀರದಲ್ಲಿ ಜ್ವರ (ಮೈ ಕಾವೇರಿರುವ ಸ್ಥಿತಿ) ಕಾಣಿಸಿಕೊಳ್ಳುವುದು 2. ಆಹಾರ ಸೇವನಾನಂತರ ಜೀರ್ಣವಾಗುವ ವೇಳೆ ಬಾಯಿಯಲ್ಲಿ ಕಹಿರಸ ಒಸರಿದಂಥ ಅನುಭವ 3. ಕಂಠ ಬಾಯಿ ಅಂಗುಳ ತುಟಿಗಳಲ್ಲಿ ಕೆಲವು ವೇಳೆ ಕೆಂಪಾಗಿರುವುದು ಸಮಸ್ತ ಶರೀರವೂ ಧಗಧಗಿಸುತ್ತಿರುವಂಥ ಅನುಭವ ಅಸಂಬದ್ಧ ಪ್ರಲಾಪ ಕನವರಿಕೆ ಜ್ಞಾನತಪ್ಪಿ ಬೀಳುವುದು ಮೈ ಬಿಸಿಯಾಗಿದ್ದರೂ ಚಳಿಯ ಅನುಭವ ಶರೀರದ ಅಂಗಪ್ರತ್ಯಂಗಗಳ ಸಂಧಿಗಳಲ್ಲಿ ಅಸಹ್ಯ ನೋವು ಜ್ವರವನ್ನು ಸ್ಥೂಲವಾಗಿ ಎರಡು ವರ್ಗಗಳಾಗಿ ವಿಭಾಗಿಸಬಹುದು : ಆಗಂತು ಜ್ವರ, ನಿಜ ಜ್ವರ. ಆಗಂತು ಜ್ವರ: ಹೊರಗಿನ ಕಾರಣಗಳಿಂದ ಮೊದಲು ವ್ಯಾಧಿ ಕಾಣಿಸಿಕೊಂಡು ಇದರ ಪ್ರಭಾವದಿಂದ ದೇಹದಲ್ಲಿ ವ್ಯಾಧಿ ಲಕ್ಷಣಗಳ ಪ್ರಕಟಣೆ. ಇದರಲ್ಲಿ ಏಳು ಮುಖ್ಯ ವಿಭಾಗಗಳಿವೆ. ಇವನ್ನೂ ಇವುಗಳ ಲಕ್ಷಣಗಳನ್ನೂ ಮುಂದೆ ಬರೆದಿದೆ.

ವಿಷಜನಿತ ಜ್ವರ

[ಬದಲಾಯಿಸಿ]

ವಿಷಮಿಶ್ರಿತ ಆಹಾರಸೇವನೆಯ ಪರಿಣಾಮ, ಬಾಯಿಯ ಒಳಬಾಗ ಕಪ್ಪಾಗಿರುವುದು, ಅತಿಸಾರ, ರುಚಿ ತಿಳಿಯಲು ಅಸಾಮಥ್ರ್ಯ, ದಾಹ, ಜ್ಞಾನ ತಪ್ಪುವುದು, ಇತ್ಯಾದಿ. ವಿಷಾನಿಲ ಸೇವನೆಯಿಂದ ಬಂದ ಜ್ವರ : ಮೂರ್ಛೆ, ಅತಿಯಾದ ಶಿರೋವೇದನೆ, ವಾಂತಿ, ಸೀನು, ಇತ್ಯಾದಿ. ಕಾಮಜನ್ಯ ಜ್ವರ : ಮನಸ್ಸಿನಲ್ಲಿ ಅಸ್ಥಿರವಾದ ಅಭಿಪ್ರಾಯಗಳು, ಸದಾ ನಿದ್ರೆಮಾಡಬೇಕೆಂಬ ಆಸೆ, ಆಹಾರದಲ್ಲಿ ಅನಾಸಕ್ತಿ, ಇತ್ಯಾದಿ.

ಭಯಜನ್ಯ ಜ್ವರ

[ಬದಲಾಯಿಸಿ]

ಅಸಂಬದ್ಧ ಪ್ರಲಾಪ. ನಿರಿಚ್ಛಾ ಮಲಮೂತ್ರ ವಿಸರ್ಜನೆ, ಇತ್ಯಾದಿ. ಶೋಕಜನ್ಯ ಜ್ವರ : ಭಯಜನ್ಯ ಜ್ವರದಂತೆಯೇ. ಕೋಪಜನ್ಯ ಜ್ವರ : ಭಯಜನ್ಯ ಜ್ವರದ ಲಕ್ಷಣಗಳ ಜೊತೆಗೆ ದೇಹದ ನಡುಕ. ಭೂತಾಭಿಷಂಗ ಜ್ವರ : ಅಸ್ಥಿರ ಮನೋವ್ಯಾಪಾರ, ಹಾಸ್ಯ ಮಾಡುವುದು, ಅಳುವುದು, ನಡುಗುವುದು, ಇತ್ಯಾದಿ. ಇವುಗಳಲ್ಲದೆ ಅಭಿಚಾರ, ಅಭಿಶಾಪ ಮತ್ತು ಅಭಿಷಂಗ ಜ್ವರಗಳೆನ್ನುವ ಪ್ರಭೇದಗಳೂ ಇವೆ. ಅಭಿಚಾರ ಜ್ವರದಲ್ಲಿ ಕೃತಿ ವಿಶೇಷಗಳಿಂದ ಪರೋಕ್ಷವಾಗಿ ಶರೀರದ ನೈಜಕ್ರಿಯೆಗಳು ಕುಂಠಿತವಾಗುತ್ತವೆ. ಅಭಿಶಾಪ ಜ್ವರದಲ್ಲಿ ಮತ್ತೊಬ್ಬನ ಕೋಪ ತಾಪಗಳಿಂದ ಮನಸ್ಸು ಪ್ರಭಾವಿತವಾಗಿ ಶರೀರದ ಕ್ರಿಯೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅಭಿಷಂಗ ಜ್ವರದಲ್ಲಿ ಬಾಹ್ಯ ವಲಯದಲ್ಲಿರುವ ಅದೃಶ್ಯ ದುಷ್ಟ ಶಕ್ತಿಗಳಿಂದ ಶರೀರ ಉಪಹತವಾಗುತ್ತದೆ.

ಕಾಮಜನ್ಯ, ಶೋಕಜನ್ಯ ಮತ್ತು ಭಯಜನ್ಯ ಜ್ವರಗಳು ವಾತಜ್ವರದ ಲಕ್ಷಣಗಳನ್ನೂ ಕೋಪಜ್ವರ ಪಿತ್ತಜ್ವರದ ಲಕ್ಷಣಗಳನ್ನೂ ಅಭಿಚಾರ, ಅಭಿಶಾಪ ಮತ್ತು ಅಭಿಷಂಗ ಜ್ವರಗಳು ವಾತಪಿತ್ತಕಫದ (ಸನ್ನಿಪಾತದ) ಲಕ್ಷಣಗಳನ್ನೂ ಪ್ರದರ್ಶಿಸುತ್ತವೆ.

ನಿಜಜ್ವರ

[ಬದಲಾಯಿಸಿ]

ಮಿಥ್ಯಾಹಾರವಿಹಾರಗಳ ಪರಿಣಾಮವಾಗಿ ದೇಹದಲ್ಲಿಯೇ ಸಂಜನಿಸುವ ಜ್ವರವಿದು. ಇದರಲ್ಲಿ ಎಂಟು ಮುಖ್ಯ ಪ್ರಭೇದಗಳನ್ನು ಗುರುತಿಸಲಾಗಿದೆ : ವಾತಜ್ವರ, ಪಿತ್ತಜ್ವರ, ಕಫಜ್ವರ, ವಾತಪಿತ್ತಜ್ವರ, ವಾತಕಫಜ್ವರ, ಪಿತ್ತ ಕಫಜ್ವರ, ಸನ್ನಿಪಾತಜ್ವರ, ವಿಷಮಜ್ವರ.

ಸನ್ನಿಪಾತ ಜ್ವರದ ಇನ್ನೂ ಕೆಲವು ಲಕ್ಷಣಗಳು ಈ ಮುಂದಿನವು : ಬಹು ಕಾಲಾನಂತರ ಬೆವರಿಕೆ ಮತ್ತು ಮಲಮೂತ್ರ ವಿಸರ್ಜನೆ ; ಗಂಟಲಿನಲ್ಲಿ ಸದ್ದು ; ಜ್ವರ ಗುಣವಾಗಲು ಬಹು ಕಾಲಾವಧಿ ; ನಾಲಗೆಯಲ್ಲಿ ದ್ರವ ಪೂರ್ಣವಾಗಿ ಬತ್ತಿಹೋಗಿ ಮುಳ್ಳುಗಳಂತೆ ಕಾಣಿಸುವುದು ; ಇತ್ಯಾದಿ. 8. ವಿಷಮಜ್ವರ : ಇದರಲ್ಲಿ ಕಾಲದ ನಿಯಮಗಳು ನಿರ್ದಿಷ್ಟವಾಗಿ ತಿಳಿದಿಲ್ಲ. ಅನಿಯತ ಕಾಲಿಕವಾಗಿ ಮೈ ಕಾವೇರಿ ಇಳಿಯತ್ತದೆ. ಜ್ವರ ಬಂದ ಬಳಿಕ ಚಳಿ ಆಗಬಹುದು ಅಥವಾ ಚಳಿ ಬಂದ ಬಳಿಕ ಜ್ವರ ಕಾಯಬಹುದು. ಜ್ವರದ ತೀವ್ರತೆ ಮತ್ತು ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವುದುಂಟು. 3ರಿಂದ ತೊಡಗಿ, 6, 12, 24, 48, 72 ಗಂಟೆಗಳ ವರೆಗೂ ಇರುವುದು. ಈ ಜ್ವರಕ್ಕೆ ಮುಖ್ಯ ಕಾರಣ ಆಹಾರದಲ್ಲಿ ತಲೆದೋರುವ ವೈಷಮ್ಯ. ಇದರ ಪರಿಣಾಮ ಕಫದ ಆಧಿಕ್ಯ. ವಾತಪಿತ್ತಗಳ ದೌಷ್ಟ್ಯವೂ ಸ್ವಲ್ಪಮಟ್ಟಿಗೆ ಸೇರಿಕೊಳ್ಳಬಹುದು. ಚಿಕಿತ್ಸಾಮಾರ್ಗ ಕಫವನ್ನು ಹತೋಟಿಗೆ ತರುವ ದಿಶೆಯಲ್ಲಿ ಮುಂದುವರಿಯಬೇಕು.

ವಿಷಮಜ್ವರದಲ್ಲಿ ಹನ್ನೆರಡು ವಿವಿಧ ಪ್ರಭೇದಗಳನ್ನು ಗುರುತಿಸಿದೆ. 1. ಸಂತತ ಜ್ವರ : ಇದು ಆಹಾರದ ರಸಧಾತುವಿನಲ್ಲಿ ಮಾತ್ರ ಸ್ಥಾನ ಪಡೆದಿರುವುದು. ಇದರ ಅವಧಿ ಹೀಗಿದೆ : ವಾತಜನ್ಯವಾದರೆ 7 ದಿವಸಗಳು, ಪಿತ್ತಜನ್ಯವಾದರೆ 10 ದಿವಸಗಳು, ಕಫಜನ್ಯವಾದರೆ 12 ದಿವಸಗಳು. 2. ಸತತ ಜ್ವರ : ಇದು ರಸಧಾತುವಿನಲ್ಲೂ ರಕ್ತದಲ್ಲೂ ಸ್ಥಾನವನ್ನು ಪಡೆದಿರುವುದು. ರಕ್ತಕ್ಕೂ ಪಿತ್ತಕ್ಕೂ ಆಶ್ರಯಾಶ್ರಯೀ ಸಂಬಂಧವಿರುವುದರಿಂದ ಮಧ್ಯೆ ಅಹಸ್ಸಿನ ಪಿತ್ತಕಾಲದಲ್ಲಿ ಒಂದು ಸಲವೂ ಮಧ್ಯರಾತ್ರಿಯ ಪಿತ್ತಕಾಲದಲ್ಲಿ ಒಂದು ಸಲವೂ ಈ ಜ್ವರ ಕಾಣಿಸಿಕೊಳ್ಳುವುದು.ವಾತಜ್ವರ ಪಿತ್ತಜ್ವರ ಕಫಜ್ವರ ವಾತಪಿತ್ತಜ್ವರ ವಾತಕಫಜ್ವರ ಪಿತ್ತಕಫಜ್ವರ ಸನ್ನಿಪಾತಜ್ವರ ವಿಷಮವೇಗ ತೀಕ್ಷ್ಣ ವೇಗ ಮಂದ ವೇಗ ಅತಿಯಾದ ದಾಹ ಮಧ್ಯ ವೇಗ - ಅನಿಶ್ಚಿತವಾದ ಶೀತ ಮತ್ತು ಜ್ವರದ ವೇಗಗಳು.ಕುತ್ತಿಗೆ, ತುಟಿ ಬಾಯಿ ಒಣಗುತ್ತವೆ ಕುತ್ತಿಗೆ, ತುಟಿ ಬಾಯಿ ಹುಣ್ಣಾಗುತ್ತದೆ ಬಾಯಿಯಲ್ಲಿ ಅತಿಯಾಗಿ ನೀರು ಬರುವುದು ಕುತ್ತಿಗೆ, ಬಾಯಿ ಒಣಗುತ್ತವೆ ಶರೀರದಲ್ಲಿ ಅತಿಯಾದ ತೂಕದ ಅನುಭವ ಕಫದಿಂದ ಬಾಯಿ ಅಂಟಾಗಿರುವುದು ಕೀಲುಗಳಲ್ಲಿ ಅತಿ ವೇದನೆ ಸಂಪೂರ್ಣ ನಿದ್ರಾವಶ ಅಲ್ಪ ನಿದ್ರೆ ಅಲ್ಪ ನಿದ್ರೆ ಸಂಪೂರ್ಣ ನಿದ್ರೆ ಅತಿ ನಿದ್ರೆ ಸದಾ ತೂಕಡಿಕೆ ಕಣ್ಣುಗಳಲ್ಲಿ ನೀರು ಸುರಿಯುವುದು ಶಿರಸ್ಸು, ಹೃದಯ ಕೈಕಾಲುಗಳಲ್ಲಿ ವೇದನೆ ಮಲಮೂತ್ರ ಮತ್ತು ಕಣ್ಣುಗಳ ಬಣ್ಣ ಹಳದಿ ಶರೀರದಲ್ಲಿ ಅಲ್ಪವಾದ ಶಾಖ ಶಿರಸ್ಸಿನಲ್ಲಿ ಅತಿ ವೇದನೆ ಕೀಲುಬಳಲ್ಲಿ ಅತಿ ವೇದನೆ, ಶಿರಸ್ಸನ್ನು ತಿರುಗಿಸಲು ಪ್ರಯಾಸ ಜ್ವರದ ತೀವ್ರತೆಯಿಂದ ಜ್ಞಾನ ತಪ್ಪುವುದು ಕಿವಿಗಳಲ್ಲಿ ಅತಿವೇದನೆ ಮತ್ತು ಶಬ್ದದ ಅನುಭವ ರುಚಿಯನ್ನು ವ್ಯತ್ಯಾಸವಾಗಿ ತಿಳಿಯುವುದು ಖಾರದ ರುಚಿಯ ಅನುಭವ ಸಿಹಿರುಚಿಯ ಅನುಭವ ರುಚಿಯನ್ನೇ ತಿಳಿಯದಿರುವುದು ಬಾಯಿ ಒಣಗಿರುವುದು ರುಚಿಯನ್ನೇ ತಿಳಿಯದಿರುವುದು ಪದೇ ಪದೇ ಜ್ಞಾನ ತಪ್ಪುವುದು ಮತ್ತು ಮನಸ್ವೀ ಮಾತಾಡುವುದು ಗಡಸು ಮಲ ಅತಿಸಾರ ಅತಿಬಿಳಿಯಾದ ಮಲ ಮೂತ್ರ ಮತ್ತು ಮಲಬಂಧ ವಾಂತಿ ಮಲಬದ್ಧತೆ ಮಲಬದ್ಧತೆ ಮಲಬದ್ಧತೆ ಬಾಯಿ ಮೂಗುಗಳಿಂದ ರಕ್ತಸ್ರಾವ ಹೊಟ್ಟೆಯಲ್ಲಿ ಉಬ್ಬರ ದೇಹವಿಡೀ ಉರಿಯುತ್ತಿರುವಂಧ ಅನುಭವ ಶರೀರದಲ್ಲಿ ಅತಿಯಾದ ತೂಕದ ಅನುಭವ ರೋಮಾಂಚನದ ಅನುಭವ ಅತಿಯಾದ ಜ್ವರದ ತಾಪದಿಂದ ಬಳಲಿಕೆ ಕಾಸ, ಬಾಯಾರಿಕೆಗಳಿಂದ ಬಳಲುವುದು ಅತಿಯಾದ ಬಾಯಾರಿಕೆ ಅತಿಯಾಗಿ ಆಕಳಿಸುವುದು ಜ್ಞಾನ ತಪ್ಪುವುದು ಮತ್ತು ಮನಸ್ವೀ ಮಾತಾಡುವುದು ಜಡತ್ವ, ಆಹಾರದಲ್ಲಿ ಸ್ವಲ್ಪವೂ ಇಚ್ಛೆ ಇಲ್ಲದೆ ಹೊಟ್ಟೆ ತುಂಬಿದಂತಿರುವುದು ಜ್ಞಾನ ತಪ್ಪುವುದು; ಮಾತುಗಳನ್ನು ತಪ್ಪಾಗಿ ತಿಳಿಯುವುದು ನೆಗಡಿ, ಕೆಮ್ಮು, ಸಂಪೂರ್ಣವಾಗಿ ಬೆವರು ಬರದೇ ಇರುವುದು ದೇಹದಲ್ಲಿ ಅತಿಯಾದ ಜ್ವರದ ವೇಗ. ಆ ಕೂಡಲೇ ಅತಿಯಾದ ಶೀತ. ಇಂಥ ಅನಿಶ್ಷಿತ ಪ್ರಕೃತಿ. ಸಂಪೂರ್ಣ ನಿದ್ರಾನಾಶ.


3 ಅನ್ಯೇದ್ಯುಷ್ಕ ಜ್ವರ : ಇದರ ಸ್ಥಾನ ಮಾಂಸದಲ್ಲಿ ಇದೆ. ಪ್ರತಿದಿವಸ ಒಂದು ಸಲ ಮಾತ್ರ ಜ್ವರ ಕಾಯುವುದು. ಈ ಜ್ವರದಲ್ಲಿ ಮೂರು ಪ್ರಭೇದಗಳಿವೆ: ತ್ರಿಕಗಾಹಿ (ಪೆಲ್ವಿಕ್ ರೀಜನ್), ಪೃಷ್ಠಗ್ರಾಹಿ (ವರ್ಟಿಬ್ರಲ್ ರೀಜನ್). ಶಿರೋಗ್ರಾಹಿ (ಸರ್ವಿಕಲ್ ಏರಿಯ). ತ್ರಿಕಗ್ರಾಹಿಯಲ್ಲಿ ಕಫಪಿತ್ತಗಳು ವಾಯುವಿನ ಸ್ಥಾನವನ್ನು ಅತಿಕ್ರಮಿಸಿ ಸೊಂಟದಲ್ಲಿ ಅತಿಯಾದ ವೇದನೆ ಉಂಟಾಗುವುದು. ಪೃಷ್ಠಗ್ರಾಹಿಯಲ್ಲಿ ವಾತಕಫಗಳು ಪಿತ್ತದೆ ಸ್ಥಾನವಾದ ಬೆನ್ನನ್ನು ಅತಿಕ್ರಮಿಸಿ ಅಲ್ಲಿ ಅತ್ಯಂತ ವೇದನೆಯನ್ನು ಉಂಟುಮಾಡುತ್ತವೆ. ಶರೋಗ್ರಾಹಿಯಲ್ಲಾದರೋ ವಾತಪಿತ್ತಗಳು ಕಫದ ಸ್ಥಾನಮಾನ ಕಂಠ ಪ್ರದೇಶವನ್ನು ಅತಿಕ್ರಮಿಸಿ ಅಲ್ಲಿ ವೇದನೆಯನ್ನು ಉಂಟುಮಾಡುವುವು.

4. ತೃತೀಯಕ ಜ್ವರ : ಇದು ಮೇದಸ್ಸಿನಲ್ಲಿ (ಫ್ಯಾಟ್) ಸ್ಥಾನ ಪಡೆದಿದೆ. 48 ಗಂಟೆಗಳ ಅವಧಿಯಲ್ಲಿ ಒಂದು ಸಲ ಮರುಕಳಿಸುತ್ತದೆ.

5. ಚತುರ್ಥದ ಜ್ವರ ; ಇದರ ಸ್ಥಾನ ಆಸ್ತಿ ಮತ್ತು ಮಜ್ಜಗಳಲ್ಲಿದೆ. ಇದರ ಮರುಕಳಿಸುವಿಕೆಯ ಅವಧಿ 72 ಗಂಟೆಗಳು.

6. ಅರ್ಧಾಂಗ ಜ್ವರ : ಸೇವಿಸಿದ ಆಹಾರ ದುಷ್ಟಪಿತ್ತದಿಂದ ವಿದಗ್ಧವಾದರೆ ಇದರಿಂದ ಶ್ಲೇಷ್ಠಪಿತ್ತಗಳು ಸಹ ದುಷ್ಟವಾಗಿ ಕಫಸ್ಥಾನವಾದ ಕುತ್ತಿಗೆಯ ಮೇಲು ಭಾಗದಲ್ಲಿ ಸಂಪೂರ್ಣ ಶೀತವೂ ಉಳಿದಿರುವ ಕಂಠದ ಕೆಳಭಾಗದ ಶರೀರದಲ್ಲಿ ಅತಿಯಾದ ಉಷ್ಣವೂ ಕಾಣಿಸುತ್ತದೆ. ಇಲ್ಲಿ ನೈಜ ಉಷ್ಣತೆಗಿಂತ ಮುಖದ ಒಳಭಾಗದ ಉಷ್ಣತೆ ಬಲು ಕಡಿಮೆಯಾಗಿಯೂ ಕತ್ತಿನ ಕೆಳಭಾಗದ ಉಷúತೆ ಬಲು ಹೆಚ್ಚಾಗಿಯೂ ಇರುವುವು.

7. ಶೀತಪಾಣಿಪಾದಜ್ವರ : ಶರೀರದ ಮಧ್ಯಭಾಗದಲ್ಲಿ ಪಿತ್ತ ಪ್ರಕುಪಿತವಾಗಿ ಕೈ ಮತ್ತು ಕಾಲುಗಳಲ್ಲಿ ಕಫ ಪ್ರಕುಪಿತವಾದರೆ ಆಗ ಈ ವ್ಯಾಧಿಯ ಸ್ವಭಾವದಿಂದ ಕೈ ಮತ್ತು ಕಾಲುಗಳಲ್ಲಿ ಅತಿಯಾದ ಶೈತ್ಯವೂ ಮಧ್ಯಕಾಲದಲ್ಲಿ (ಚೆಸ್ಟ್ ಅಂಡ್ ತೊರ್ಯಾಕ್ಸ್) ಔಷ್ಣ್ಯವೂ ಕಾಣಿಸಿಕೊಳ್ಳುತ್ತವೆ.

8. ಉಷ್ಣಪಾಣಿಪಾದಜ್ವರ : ಶರೀರದ ಮಧ್ಯಭಾಗದಲ್ಲಿ ಕಫ ಪ್ರಕುಪಿತವಾಗಿ ಕೈ ಮತ್ತು ಕಾಲುಗಳಲ್ಲಿ ಮಾತ್ರ ರಕ್ತ ಪ್ರಕುಪಿತವಾದರೆ ಆಗ ಕೈ ಮತ್ತು ಕಾಲುಗಳ ಭಾಗದಲ್ಲಿ ಅತಿಯಾದ ಔಷ್ಣ್ಯವೂ ಶರೀರದ ಮಧ್ಯಭಾಗದಲ್ಲಿ ಅತಿಯಾದ ಶೈತ್ಯವೂ ಕಾಣಿಸಿಕೊಳ್ಳುತ್ತದೆ.

9. ಶೀತಾದಿ ಜ್ವರ : ಚರ್ಮದ ಭಾಗದಲ್ಲಿ ವಾದ ಕಫಗಳು ಪ್ರಕುಷಿತವಾಗಿ ಅವುಗಳ ಗುಣಸಾಧಮ್ರ್ಯದಂತೆ ರೋಗಿಯನ್ನು ಮೊದಲು ಚಳಿಯಿಂದ ನರಳುವಂತೆ ಮಾಡಿ ವಾತಕಫಗಳ ವೇಗ ಕಡಿಮೆಯಾದ ಬಳಿಕ ಪ್ರಕುಪಿತ ಪಿತ್ತದಿಂದ ಅದರ ಗುಣಸಾಧಮ್ರ್ಯದಂತೆ ಜ್ವರ ಕಾಣಿಸಿಕೊಳ್ಳುವುದು.

10. ದಾಹಾದಿ ಜ್ವರ: ಪ್ರಕುಪಿತ ಪಿತ್ತ ತನ್ನ ಗುಣಧರ್ಮಗಳಿಗೆ ಅನುಸಾರವಾಗಿ ಚರ್ಮದಲ್ಲಿ ಅತ್ಯಂತ ಔಷ್ಣ್ಯವನ್ನು ಮಾಡುವುದರಿಂದ ಜ್ವರ ಬರುತ್ತದೆ. ಪಿತ್ತದ ವೇಗ ಶಾಂತವಾದ ಬಳಿಕ ಉಳಿದ ಪ್ರಕುಪಿತವಾದ ಶ್ಲೇಷ್ಮಗಳ ಗುಣಧರ್ಮಗಳಿಂದಾಗಿ ಅತಿಯಾದ ಶೈತ್ಯ ಉಂಟಾಗುವುದು. ಆದರೆ ಇದು ಬಲು ಅಪರೂಪ.

11. ಕೇವಲ ರಾತ್ರಿ ಮಾತ್ರ ಜ್ವರ : ವಾತ ಶ್ಲೇಷ್ಮಗಳು ಸಮವಾಗಿ ಪ್ರಕೋಪವನ್ನು ಹೊಂದಿ ಪಿತ್ತ ಪ್ರಮಾಣದಲ್ಲಿ ಅತ್ಯಂತ ಕಡಿಮೆ ಆಗಿದ್ದಾಗ ರಾತ್ರಿ ವೇಳೆ ವಾತ ಕಫಗಳಿಗೆ ಸಮಾನ ಗುಣಧರ್ಮಗಳಿರುವುದರಿಂದ ಇವುಗಳ ಬಲೋತ್ಕರ್ಷದ ಪರಿಣಾಮವಾಗಿ ಆಗ ಮಾತ್ರ ಕಾಣಿಸಿಕೊಳ್ಳುವ ಜ್ವರವಿದು. 12. ಕೇವಲ ಹಗಲು ಮಾತ್ರ ಜ್ವರ : ಚಿತ್ತ ಸಮಸ್ಥಿತಿಯಲ್ಲಿದ್ದು ವಾತ ಕಫಗಳು ಅತ್ಯಂತ ಕಡಿಮೆ ಆಗಿದ್ದರೆ ಅಂಥವನಿಗೆ ಹಗಲು ವೇಳೆ ಅಗ್ನಿ ಗುಣಾತ್ಮಕವಾಗಿರುವುದು. ಅದೇ ವೇಳೆ ಪಿತ್ತಕ್ಕೆ ಸಹಜವಾಗಿ ಕಲೋಚಿತವಾದ ಬಲೋತ್ಕರ್ಷ ಉಂಟಾಗುತ್ತದೆ. ಅಲ್ಲದೇ ಹಗಲು ಮತ್ತು ಪಿತ್ತ ಸಮಾನ ಗುಣಧರ್ಮ ಇರುವುವು. ಹೀಗಾಗಿ ಹಗಲು ಮಾತ್ರ ಜ್ವರ ಕಾಣಿಸಿಕೊಳ್ಳುತ್ತದೆ. ಚಿಕಿತ್ಸಕ್ರಮ: ಜ್ವರ ಯಾವುದೇ ಇರಲಿ ಆಹಾರ ಮತ್ತು ವಿಚಾರಗಳಲ್ಲಿ ತುಂಬ ಶಿಸ್ತ್ರಿನಿಂದ ಇರುವುದು ಅದರ ಉಪಶಮನದ ದಿಶೆಯಲ್ಲಿ ಪ್ರಥಮಾವಶ್ಯಕತೆ. ಚಿಕಿತ್ಸಾಕಾಲದಲ್ಲಿ ಈ ಮುಂದಿನ ಆರು ನಿಯಮಗಳನ್ನು ಪಾಲಿಸಲೇಬೇಕು. ಕೇವಲ ದ್ರವಾಹಾರ ಸೇವನೆ ಮಾತ್ರ. ರಾತ್ರಿ ನಿದ್ರೆ ಕೆಡಬಾರದು. ಶರೀರ, ಇಂದ್ರಿಯಗಳು ಮತ್ತು ಮನಸ್ಸು ಉದ್ವೇಗರಹಿತವಾಗಿ ಇರಬೇಕು ಸಂಪೂರ್ಣ ವಿಶ್ರಾಂತಿ ಅತ್ಯವಶ್ಯ ಬ್ರಹ್ಮಚರ್ಯವನ್ನು ಪಾಲಿಸಬೇಕು ಉತ್ತಮ ಗುಣಗಳಿಂದ ಕೂಡಿದ ಯೋಗ್ಯ ಔಷಧಿಯನ್ನು ಕ್ಲುಪ್ತವಾಗಿ ಸೇವಿಸಬೇಕು.

ಸಾಮಾನ್ಯವಾಗಿ ಎಲ್ಲರೂ ತಾವೇ ತಯಾರಿಸಿ ಸೇವಿಸಬಹುದಾದ ಒಂದು ಔಷಧಿಯನ್ನು ಮಾತ್ರ ಇಲ್ಲಿ ವಿವರಿಸಬಹುದಷ್ಟೆ. ಶುಂಠಿ, ಅಮೃತಬಳ್ಳಿ, ಬೇವಿನ ಚಕ್ಕೆ, ರಾಶ್ಮೆ, ನೆಲಬೇವು, ಪರ್ಪಾಷ್ಟಕ, ಕೊನ್ನಾರಿಗೆಡ್ಡೆ ಮತ್ತು ಕಹಿ ಪಡವಲ ಇವನ್ನು ತಲಾ 10 ಗ್ರಾಮುಗಳಂತೆ ತಂದು ಚೆನ್ನಾಗಿ ಪುಡಿ ಮಾಡಿ ಅರ್ಧ ಲೀಟರ್ ನೀರಿನಲ್ಲಿ ಬೆರೆಸಿ ಕುದಿಸಿ ಕಾಲಂಶಕ್ಕೆ ಇಳಿಸಬೇಕು. ಈ ಕಷಾಯ ಜ್ವರ ಹರವಾಗಿ ವರ್ತಿಸುವುದು

"https://kn.wikipedia.org/w/index.php?title=ಜ್ವರ&oldid=1160801" ಇಂದ ಪಡೆಯಲ್ಪಟ್ಟಿದೆ