ಟಿ.ಜಿ.ಮುಡೂರು
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಟಿ.ಜಿ.ಮುಡೂರು ಎಂದೆ ಹೆಸರು ಪಡೆದಿರುವ ಇವರು ಕರಾವಳಿಯ ಹಿರಿಯ ಬರಹಗಾರರಲ್ಲಿ ಒಬ್ಬರು.[೧] ಇವರ ಪೂರ್ಣ ಹೆಸರು ತಮ್ಮಯ್ಯ ಗೌಡ ಮುಡೂರು
ಹುಟ್ಟು
[ಬದಲಾಯಿಸಿ]ಕಾಸರಗೋಡು ಜಿಲ್ಲೆಯ ಅಡೂರು ಸಮೀಪ ಇರುವ ಮುಡೂರು ಎಂಬಲ್ಲಿ ೨೪-೧೧-೧೯೨೭ ರಲ್ಲಿ ಸುಬ್ಬಪ್ಪ ಗೌಡ ಮತ್ತು ಬಾಲಕ್ಕ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು.
ವೃತ್ತಿ
[ಬದಲಾಯಿಸಿ]೧೯೪೬ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನೇಮಕವಾದರು. ಕಲ್ಮಡ್ಕ,ಸುಬ್ರಹ್ಮಣ್ಯ, ಅಜ್ಜಾವರ , ಪ್ರೌಢಶಾಲಾ ಶಿಕ್ಷಕರಾಗಿ ಬೆಳ್ತಂಗಡಿ, ಪೂಂಜಾಲಕಟ್ಟೆ, ಪಂಜ ಪದವಿ ಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಕೃತಿಗಳು
[ಬದಲಾಯಿಸಿ]ಕವನ ಸಂಕಲನಗಳು
[ಬದಲಾಯಿಸಿ]- ಕಾಡ ಮಲ್ಲಿಗೆ
- ಹೊಸತು ಕಟ್ಟು.
- ಕುಡಿಮಿಂಚು
- ಪ್ರಗತಿಗೆ ಕರೆ
- ಬೆಳ್ಳಿಬೆಳಕು
ಕಾದಂಬರಿ
[ಬದಲಾಯಿಸಿ]- ಅಬ್ಬಿಯ ಮಡಿಲು
- ಕಣ್ ಕನಸು ತೆರೆದಾಗ
ಗದ್ಯಾನುವಾದ
[ಬದಲಾಯಿಸಿ]- ಜೀವದಯಾಷ್ಟಮಿ
ಲೇಖನ
[ಬದಲಾಯಿಸಿ]- ಧಾರಾ ಪಯಸ್ವಿನಿ
ಜಾನಪದ ರೂಪಕ
[ಬದಲಾಯಿಸಿ]- ಹೊಸಕೆರೆಯ ಹೊನ್ನಮ್ಮ
ನಾಟಕ
[ಬದಲಾಯಿಸಿ]- ಶಿವಕುಮಾರಿ
- ಕೇರಳಕುಮಾರಿ
- ಸಖು
- ಅಚ್ಚರಿಯ ಅರಳೆಯ
- ಮಧ್ಯಮಾ
- ಇನ್ಸೂರಳಿಯ
ತುಳು ನಾಟಕ
[ಬದಲಾಯಿಸಿ]- ಜೋಕುಳೆ ಬುದ್ಧಿ.
ಬಾನುಲಿ ರೂಪಕ
[ಬದಲಾಯಿಸಿ]- ಹುತ್ತದಲ್ಲಿ ಹೂ
- ದಯೆಯ ದಾಂಗುಡಿ
- ಅಮರ ಕಲ್ಯಾಣ ಕ್ರಾಂತಿ
ಛಂದೊ ನಾಟಕ
[ಬದಲಾಯಿಸಿ]- ಮಕುಡೋರು ಭಂಗ
- ಸಾವೋಲಿದ ಸಾವಿತ್ರಿ
ಗೀತಾ ರೂಪಕ
[ಬದಲಾಯಿಸಿ]- ಗುರುವನಗುಡಿ
- ಸೊನ್ನೆಯಿಂದ ಸೊನ್ನೆಗೆ
- ಹೃದಯ ರೂಪಕ
ಖಂಡ ಕಾವ್ಯ
[ಬದಲಾಯಿಸಿ]- ಸಿಡಿಲಮರಿ ಅಶ್ವಥಾಮನ್
- ಮೋಹನ ಮುರಲಿ
ಯಕ್ಷಗಾನ
[ಬದಲಾಯಿಸಿ]- ಪ್ರಥಮ ಸ್ವಾತಂತ್ರ್ಯ ಸಮರ
ತುಳು ಯಕ್ಷಗಾನ ಕೃತಿ
[ಬದಲಾಯಿಸಿ]- ಕೊಟಿ ಚೆನ್ನಯ್ಯ
ಸಂಪಾದಿತ ಕೃತಿ
[ಬದಲಾಯಿಸಿ]- ಸ್ಪಂದನ
- ಸ್ವರ್ಣಶಾರದೆ
- ರಜತ ರಶ್ಮಿ
- ಅಮೃತವಾಹಿನಿ
ಅರೆಗನ್ನಡ ಕೃತಿ
[ಬದಲಾಯಿಸಿ]- ಬೊಲ್ಪಾಕನ ಮುಕ್ತ್
ಹವಿಗನ್ನಡ ಕೃತಿ
[ಬದಲಾಯಿಸಿ]- ಒಪ್ಪಕುಂಞಿ
ನಿರ್ವಹಿಸಿದ ಹುದ್ದೆಗಳು
[ಬದಲಾಯಿಸಿ]- ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ.
- ಅರಂತೋಡುವಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
ಪ್ರಶಸ್ತಿ
[ಬದಲಾಯಿಸಿ]- ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.
- ಅರೆಭಾಷೆ ಅಕಾಡೆಮಿ ಪ್ರಶಸ್ತಿ.[೨]
ಉಲ್ಲೇಖ
[ಬದಲಾಯಿಸಿ]