ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್
ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್ (Total quality management (TQM) )ಎಂದರೆ ಸಂಸ್ಥೆಗಳು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಗಿರಾಕಿಗಳಿಗೆ ಒದಗಿಸುವ ಸಾಮರ್ಥ್ಯವನ್ನು ನಿರಂತರವಾಗಿ ಸುಧಾರಿಸಲು ಶಾಶ್ವತ ವಾತಾವರಣವನ್ನು ನಿರ್ಮಿಸುವುದು ಮತ್ತು ಅನುಸ್ಥಾಪಿಸಲು ಸಾಂಘಿಕ ಪ್ರಯತ್ನಗಳನ್ನು ಒಳಗೊಂಡಿದೆ. ಆದರೆ ಎಲ್ಲರೂ ಒಪ್ಪಿಕೊಂಡ ವಿಧಾನಗಳಿಲ್ಲ. ಹಿಂದೆ ಅಭಿವೃದ್ಧಿ ಪಡಿಸಿದ ಗುಣಮಟ್ಟ ನಿಯಂತ್ರಣದ ಸಾಧನಗಳು ಮತ್ತು ತಂತ್ರಗಳಿಂದ ಬಹಳಷ್ಟು ಅಂಶಗಳನ್ನು 'ಟೀಕ್ಯುಎಂ' ಒಳಗೊಂಡಿರುತ್ತದೆ. ಟೀಕ್ಯುಎಂ ಐಎಸ್ಓ-9000, ಲೀನ್ ಮ್ಯಾನುಪ್ಯಾಕ್ಚರಿಂಗ್ ಮತ್ತು ೬-ಸಿಗ್ಮ ಗಳಿಂದ ಮೂಲೆಗುಂಪಾಗುವ ಮೊದಲು ೧೯೮೦ ದಶಕದ ಕೊನೆಯಲ್ಲಿ ಮತ್ತು ೧೯೯೦ ರ ಪ್ರಾರಂಭದಲ್ಲಿ ವ್ಯಾಪಕವಾಗಿ ಗಮನ ಸೆಳೆದಿತ್ತು.
ಚರಿತ್ರೆ
[ಬದಲಾಯಿಸಿ]೧೯೭೦ರ ದಶಕದ ಮೊದಲು ಮತ್ತು ೧೯೮೦ರ ಪ್ರಾರಂಭದಲ್ಲಿ ಅಭಿವೃದ್ಧಿಯಾದ ಉತ್ತರ ಅಮೇರಿಕ ಮತ್ತು ಪೂರ್ವ ಯುರೋಪು ಜಪಾನಿನ ಬಹಳ ಸ್ಪರ್ಧಾತ್ಮಕ ಬೆಲೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯದಿಂದ ಸ್ಪರ್ಧೆಯನ್ನು ಎದುರಿಸ ಬೇಕಾಗಿ ಆರ್ಥಿಕವಾಗಿ ನರಳಿದವು. ಕೈಗಾರಿಕಾ ಕ್ರಾಂತಿಯ ನಂತರ ಮೊದಲ ಬಾರಿಗೆ ಸಂಯುಕ್ತ ರಾಜ್ಯವು ಸಿದ್ಧಪಡಿಸಿದ ಸರಕುಗಳ ನಿವ್ವಳ ಆಮದುಗಾರನಾಗಬೇಕಾಯಿತು. ಅಮೇರಿಕ ಸಂಯುಕ್ತ ಸಂಸ್ಥಾನವು ಬಹಳ ಆಗ್ರಹಪೂರ್ವಕವಾಗಿ 'ಇಫ್ ಜಪಾನ್ ಕೆನ‍್...ವೈ ಕಾಂಟ್ ವಿ?'(If Japan Can... Why Can't We?) ಎಂಬ ಟೀವಿ ಪ್ರಸಾರದಲ್ಲಿ ವ್ಯಕ್ತಪಡಿಸಿ ತನ್ನ ಆತ್ಮ ವಿಮರ್ಶೆಯನ್ನು ಕೈಗೆತ್ತಿಕೊಂಡಿತು. ಉದ್ಯಮಗಳು ಕಳೆದ ೫೦ ವರ್ಷಗಳಲ್ಲಿ ಕಂಡಿಹಿಡಿದ ಗುಣಮಟ್ಟದ ತಂತ್ರಗಳನ್ನು ಮತ್ತು ಆ ತಂತ್ರಗಳು ಜಪಾನ್‍ನವರಿಂದ ಯಶಸ್ವಿಯಾಗಿ ಉಪಯೋಗಿಸಲ್ಪಟ್ಟವು ಎಂದು ಮರುಪರೀಕ್ಷೆಗಳನ್ನು ಶುರು ಮಾಡಿದವು. ಈ ಆರ್ಥಿಕ ಅನಿಶ್ಚಿತತೆ ಮದ್ಯೆ ಟಿಕ್ಯುಎಂ(TQM) ಬೇರು ಬಿಡಲು ಪ್ರಾರಂಭಿಸಿತು.
ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಶಬ್ದದ ಮೂಲವು ಅನಿಶ್ಚಿತವಾಗಿರುವುದು.[೧]. ಅದು ಬಹು ಆವೃತ್ತಿ ಪುಸ್ತಕ ಅರ್ಮಂಡ್ ವಿ. ಫಿಗೆನಬಾಮ್(Armand V. Feigenbaum)ನ ಟೋಟಲ್ ಕ್ವಾಲಿಟಿ ಕಂಟ್ರೋಲ್(Total Quality Control (OCLC 299383303)) ಮತ್ತು ಕವೊರು ಇಶಿಕವಾವ(Kaoru Ishikawa)ನ ವಾಟ್ ಈಸ್ ಕ್ವಾಲಿಟಿ ಕಂಟ್ರೋಲ್?ದಿ ಜಪಾನಿಸ್ ವೇ(What Is Total Quality Control?The Japanese Way (OCLC 11467749))ಗಳಿಂದ ನಿಶ್ಚಿತವಾಗಿ ಬಹಳ ಪ್ರಭಾವಿತವಾಗಿರುವುದು. ಸಂಯುಕ್ತ ರಾಜ್ಯವು ಡಿಪಾರ್ಟಮೆಂಟ್ ಆಫ್ ಟ್ರೇಡ್ ಆಂಡ್ ಇಂಡಸ್ಟ್ರೀಸ್ನ ತನ್ನ 1983ರ "ನ್ಯಾಶನಲ್ ಕಂಟ್ರೋಲ್ ಕ್ಯಾಂಪೇನ್(National Quality Campaign)"ನಲ್ಲಿ ಬಹುಶಃ ಮೊದಲ ಬಾರಿಗೆ ಬಳಕೆಗೆ ಬಂದಿರಬೇಕು[೧] ಅಥವಾ ಅಮೇರಿಕಾ ಸಂಯುಕ್ತ ಸಂಸ್ಥಾನ 1985ರಲ್ಲಿ ನ್ಯಾವಲ್ ಏರ್ ಸಿಸ್ಟಂಸ ಕಮ್ಯಾಂಡ್(National Quality Campaign)ನಲ್ಲಿ ತನ್ನ ಗುಣಮಟ್ಟ ಸುಧಾರಣಾ ಕ್ರಮಗಳನ್ನು ವಿವರಿಸಲು ಬಳಕೆಯಾಗಿದ್ದಿರಬೇಕು.[೧]
ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅಭಿವೃದ್ಧಿ
[ಬದಲಾಯಿಸಿ]೧೯೮೪ರ ಒಂದು ವಸಂತ ಋತುವಿನಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ನೌಕಾದಳವು ಕೆಲವು ನಾಗರಿಕ ಸಂಶೋಧಕರಿಗೆ ಸಂಖ್ಯಾಶಾಸ್ತ್ರೀಯ ಸಂಸ್ಕರಣಾ ನಿಯಂತ್ರಣ (ಸ್ಟಾಟಿಸ್ಟಿಕಲ್ ಪ್ರೊಸೆಸ್ ಕಂಟ್ರೋಲ್ (statistical process control)(SPC)) ಮತ್ತು ಹಲವು ಮುಖ್ಯವಾದ ಗುಣಮಟ್ಟ ಸಲಹೆಗಾರರ ಮೌಲ್ಯಮಾಪನ ಮಾಡುವಂತೆಯು ಮತ್ತು ನೌಕಾದಳದ ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವವನ್ನು ಸುಧಾರಿಸಲು ಹೇಗೆ ಅವರ ವಿಧಾನಗಳನ್ನು ಅನ್ವಯಿಸಬಹುದೆಂದು ಶಿಫಾರಸುಗಳನ್ನು ಮಾಡಲು ಕೇಳಿಕೊಂಡಿತು.[೨] ಡಬ್ಲು. ಎಡ್ವವರ್ಡ್ಸ ಡೇಮಿಂಗ(W. Edwards Deming)ನ ಬೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಶಿಫಾರಸಾಗಿದ್ದಿತು.[೨][೩] ೧೯೮೫ ರಲ್ಲಿ ನೌಕಾದಳವು ಪರಿಶ್ರಮವನ್ನು "ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್(Total Quality Management)" ಎಂದು ಮುದ್ರೆಹಾಕಿತು.[೨][Note ೧]
ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್ (Total quality management (TQM) ) ನೌಕಾದಳದಿಂದ ಅಮೇರಿಕಾ ಒಕ್ಕೂಟ ಸರ್ಕಾರದ ಎಲ್ಲಾ ಕಡೆ ಹರಡಿ, ಈ ಕೆಳಕಂಡ ಫಲಿತಾಂಶಗಳು ಉಂಟಾದವು.
- ಮಾಲ್ಕಾಲ್ಮ್ ಬಾಲ್ದ್ರಿಗ್ ನ್ಯಾಶನಲ್ ಕ್ವಾಲಿಟಿ( Malcolm Baldrige National Quality Award) ಪ್ರಶಸ್ತಿ 1987ರಲ್ಲಿ ಸ್ಥಾಪಿತವಾಯಿತು.
- ಫೆಡರಲ್ ಕ್ವಾಲಿಟಿ ಇನ್ಸ್ಟಿಟ್ಯೂಟ್( Federal Quality Institute) 1988 ರಲ್ಲಿ ಸ್ಥಾಪಿತವಾಯಿತು.
- ಅಮೇರಿಕಾ ಸಂಯುಕ್ತ ಸಂಸ್ಥಾನದ ರಕ್ಷಣಾ ವಿಭಾಗ,[೪] ಅಮೇರಿಕಾ ಸಂಯುಕ್ತ ಸಂಸ್ಥಾನದ ಭೂದಳ[೫] ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಕರಾವಳಿ ರಕ್ಷಣದಳವು[೬] ಸೇರಿದಂತೆ ಸರ್ಕಾರದ ಮತ್ತು ಸೈನ್ಯದ ಬಹಳ ಘಟಕಗಳು ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್ (Total quality management (TQM) ) ಅಳವಡಿಸಿದ್ದು.
"ಸಂಪೂರ್ಣ ಗುಣಮಟ್ಟವು(total quality)" ಸಂಸ್ಕರಣೆ ಸುಧಾರಣಾ ಕೆಲಸಗಳಲ್ಲಿ ಉದ್ಯೋಗಿಗಳನಲ್ಲದೆ, ಪೂರೈಕೆದಾರರನ್ನು ತೊಡಗಿಸಿಕೊಳ್ಳವಿಕೆಯು ಬೇಕಾಗುವುದರಿಂದ, ಜಪಾನಿನಿಂದ ಮಾರುಕಟ್ಟೆಯ ಪುನರ್ವಶವಲ್ಲದೆ, ಒಕ್ಕೂಟ ಸರ್ಕಾರದಿಂದ[೭] ಗುತ್ತಿಗೆ ಕೇಳುವಾಗ ಸ್ಪರ್ಧಾತ್ಮಕವಾಗಿ ಇರಲು, ಖಾಸಗಿ ವಲಯವು ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್ (Total quality management (TQM) ) ತತ್ವಗಳ ವಿರುದ್ದ ಗುಂಪುಗೂಡಿ ಕಾನೂನು ಕ್ರಮಗಳನ್ನು ಮೊರೆಹೋಗುವುದು ಒಂದು ವಿಧಾನವಾಗಲ್ಪಟ್ಟಿತು.
ಗುಣ ಲಕ್ಷಣಗಳು
[ಬದಲಾಯಿಸಿ]ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್ (Total quality management (TQM) ) ಅಂದರೆ ಎನೆಂದು ಮತ್ತು ಇದಕ್ಕೆ ಸಂಸ್ಥೆಯ ಯಾವ ಕ್ರಮಗಳು ಬೇಕಾಗುತ್ತವೆಯೆಂದು ಸಾರ್ವತ್ರಿಕವಾಗಿ ಒಮ್ಮತವಿಲ್ಲದಿದ್ದರೂ,[೮][೯][೧೦] ಅಮೇರಿಕಾ ಸಂಯುಕ್ತ ಸಂಸ್ಥಾನದ ನೌಕಾದಳದ ಮೂಲ ಕೃತಿಗಳನ್ನು ಅವಲೋಕಿಸಿದಾಗ, ಟಿಕ್ಯುಎಮ್(TQM) ಎನನ್ನು ಒಳಗೊಂಡಿದೆಯೆಂದು, ಸುಮಾರಾಗಿ ತಿಳುವಳಿಕೆಯನ್ನು ನೀಡುವುದು. ೧೯೮೦ರಲ್ಲಿ ನೌಕಾದಳವು ಮಾಡಿದ ಕೆಲಸಗಳ ಪ್ರಮುಖ ಪರಿಕಲ್ಪನೆಗಳು ಈ ರೀತಿ ಇವೆ.[೧೧]
- "ಗ್ರಾಹಕನ ಅಗತ್ಯತೆಗಳು ಗುಣಮಟ್ಟವನ್ನು ನಿರೂಪಿಸುವವು."
- "ಗುಣಮಟ್ಟ ಸುಧಾರಣೆಗಳಿಗೆ ಉನ್ನತ ನಿರ್ವಹಣೆಯು ಜವಾಬ್ದಾರಿಯಾಗಿರುವುದು."
- "ಹೆಚ್ಚಿದ ಗುಣಮಟ್ಟವು ವ್ಯವಸ್ತಿತ ರೀತಿಯ ವಿಶ್ಲೇಷಣೆಯಿಂದ ಮತ್ತು ಕೆಲಸದ ವಿಧಾನಗಳ ಸುಧಾರಣೆಯಿಂದ ಬರುವುದು."
- "ಗುಣಮಟ್ಟ ಸುಧಾರಣೆಯು ಒಂದು ನಿರಂತರ ಕ್ರಿಯೆಯಾಗಿದೆ ಮತ್ತು ಸಂಸ್ಥೆಯ ಎಲ್ಲಾ ಕಡೆ ನಡೆಸಲ್ಪಡುವುದು."
ಅಡಿ ಟಿಪ್ಪಣಿ
[ಬದಲಾಯಿಸಿ]ಇವುಗಳನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ name="TTQMM">Martínez-Lorente, Angel R.; Dewhurst, Frank (1998), "Total Quality Management: Origins and Evolution of the Term", The TQM Magazine, Bingley, United Kingdom: MCB University Publishers Ltd, vol. 10, no. 5, pp. 378–386, doi:10.1108/09544789810231261
{{citation}}
: Unknown parameter|coauthors=
ignored (|author=
suggested) (help) - ↑ ೨.೦ ೨.೧ ೨.೨ ೨.೩ Houston, Archester; Dockstader, Steven L. (1997), Total Quality Leadership: A Primer (PDF), Washington, D.C.: United States Navy, pp. 10–11, OCLC 38886868, 97-02, archived from the original (PDF) on 2013-10-21, retrieved 2013-10-19
- ↑ United States Department of Defense (1989), Total Quality Management: A Guide for Implementation, Springfield, Virginia: National Technical Information Service, OCLC 21238720, DoD 5000.51-G
- ↑ Total Army Quality Management, Washington, D.C.: United States Army, 1992-06-12, Army Regulation 5–1, retrieved 2013-10-19
- ↑ Nelson, Robert T. (1991-01-10), COAST GUARD TOTAL QUALITY MANAGEMENT (TQM) GENERIC ORGANIZATION (PDF), Washington, D.C.: United States Coast Guard, COMDTINST 5224.7, archived from the original (PDF) on 2011-10-16, retrieved 2013-10-19
- ↑ Creech, Bill (1994), The Five Pillars of TQM: How to Make Total Quality Management Work for You, New York: Truman Talley Books/Dutton, p. 153, ISBN 9780525937258, OCLC 28508067,
...the DOD took steps to extend its reach to the thousands of vendors who sell to the department... Thus was born the DOD's TQM outreach program to all its vendors, large and small. And the TQM banners went up all over America.
- ↑ Juran, Joseph M. (1995), A History of Managing for Quality: The Evolution, Trends, and Future Directions of Managing for Quality, Milwaukee, Wisconsin: ASQC Quality Press, p. 596, ISBN 9780873893411, OCLC 32394752, retrieved 2013-10-20
- ↑ Holmes, Ken (1992), Total Quality Management, Leatherhead, United Kingdom: Pira International, Ltd., p. 10, ISBN 9781858020112, OCLC 27644834,
Ask ten people what TQM is and you will hear ten different answers. There is no specification or standard for it, or certification programme to proclaim that you have it. What we understand by TQM probably depends on which of the thought leaders, (often referred to as 'gurus') we have come across.
- ↑ Creech, Bill (1994), The Five Pillars of TQM: How to Make Total Quality Management Work for You, New York: Truman Talley Books/Dutton, p. 4, ISBN 9780525937258, OCLC 28508067,
In fact, the term TQM has become so widely used that it has become the number one buzzphrase to describe a new type of quality-oriented management. Thus, the name TQM now covers a very broad tent encompassing all sorts of management practices. In my management advisory activities I run into scores of these different programs all parading under the same name. Few are alike, and those varied programs have a wide variety of features—a mixture of the old and the new—with, in more cases than not, very little of the new. ... However, I have forewarned you there are almost as many different TQM programs as there are companies that have started them because that creates confusion about what to do in your own case.
- ↑ Houston, Archester (December 1988), A Total Quality Management Process Improvement Model (PDF), San Diego, California: Navy Personnel Research and Development Center, pp. vii–viii, OCLC 21243646, AD-A202 154, archived from the original (PDF) on 2013-10-21, retrieved 2013-10-20