ಡಂಬಳ
ಡಂಬಳ
ಡಂಬಳ | |
---|---|
village |
ಡಂಬಳ ಗ್ರಾಮವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿದೆ.
ಭೌಗೋಳಿಕ
[ಬದಲಾಯಿಸಿ]ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಜನಸಂಖ್ಯೆ
[ಬದಲಾಯಿಸಿ]೨೦೦೧ರ ಜನಗಣತಿಯಂತೆ ಡಂಬಳದ ಒಟ್ಟು ಜನಸಂಖ್ಯೆ ೧೦,೦೯೫. ಅದರಲ್ಲಿ ೫,೧೬೬ ಗಂಡಸರು ಮತ್ತು ೪,೯೨೯ ಹೆಂಗಸರು.
ಇತಿಹಾಸ
[ಬದಲಾಯಿಸಿ]ಮೌರ್ಯರು ಮತ್ತು ಶಾತವಾಹನರ ಆಳ್ವಿಕೆಯಲ್ಲಿ ಬುದ್ಧನ ಬೋಧನೆಗಳು ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬಂದವು. ಗ್ರಾಮದ ಸುತ್ತಲೂ ಅಲ್ಲಲ್ಲಿ ಬೌದ್ಧ ಅವಶೇಷಗಳು ಕಂಡುಬರುತ್ತವೆ.[೧]
ಡಂಬಳದಲ್ಲಿರುವ ಬೌದ್ಧ ದೇವತೆ ತಾರಾಳ ದೇವಾಲಯದಲ್ಲಿ, ಕ್ರಿ.ಶ. 1095 ರ ಶಾಸನವಿದೆ, ತಾರಾ ದೇವತೆಗಾಗಿ 16 ವ್ಯಾಪಾರಿಗಳು ನಿರ್ಮಿಸಿದ ದೇವಾಲಯ ಮತ್ತು ಬೌದ್ಧ ಸನ್ಯಾಸಿಗಳಿಗೆ ವಿಹಾರವಿದೆ.[೨]
ಹವಾಮಾನ
[ಬದಲಾಯಿಸಿ]- ಬೇಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - 35°C-42°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - 18°C-28°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ.
- ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.
ಜನಸಂಖ್ಯೆ
[ಬದಲಾಯಿಸಿ]ಗ್ರಾಮದಲ್ಲಿ ಜನಸಂಖ್ಯೆ ಸುಮಾರು 4000 ಇದೆ. ಅದರಲ್ಲಿ 2400 ಪುರುಷರು ಮತ್ತು 1600 ಮಹಿಳೆಯರು ಇದ್ದಾರೆ. ಒಟ್ಟಾರೆ ಸುಮಾರು 1000ಕ್ಕೂ ಹೆಚ್ಚು ಮತಗಳನ್ನು ಹೊಂದಿದೆ.
ಕಲೆ
[ಬದಲಾಯಿಸಿ]ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವು ಗ್ರಾಮದ ಕಲೆಯಾಗಿದೆ.
ಸಂಸ್ಕೃತಿ
[ಬದಲಾಯಿಸಿ]ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ (ಬಿಳಿ ಪಂಚ), ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಸಾಮಾನ್ಯ ಸೀರೆಗಳನ್ನು ಕೆಲವರು ಇಲಕಲ್ಲ ಸೀರೆಗಳನ್ನು ಧರಿಸುತ್ತಾರೆ.
ಆಹಾರ (ಊಟ-ತಿಂಡಿ)
[ಬದಲಾಯಿಸಿ]ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.
ಕೃಷಿ
[ಬದಲಾಯಿಸಿ]ಗ್ರಾಮದ ಪ್ರತಿಶತ 90 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕಾಲುವೆ
[ಬದಲಾಯಿಸಿ]ತುಂಗಭದ್ರ ನದಿಯ [[ತುಂಗಭದ್ರ
ಆಣೆಕಟ್ಟು]] ವಿನಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಉದ್ಯೋಗ
[ಬದಲಾಯಿಸಿ]ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 90% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿಸಾಕಾಣಿಕೆ ಉಪಕಸುಬುಗಳಾಗಿವೆ.
ಬೆಳೆಗಳು
[ಬದಲಾಯಿಸಿ]ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಡಂಬಳ ಗ್ರಾಮದ ಪ್ರಮುಖ ವಾಣಿಜ್ಯ ಬೆಳೆಯಾದ ಪೇರಲ ಹಣ್ಣನ್ನು ಪ್ರಾಚೀನ ಕಾಲದಿನದಲೂ ಬೆಳೆಯುತ್ತಿದ್ದಾರೆ ಹಾಗೂ ಇತ್ತೀಚಿನ ದಿನಗಳಲ್ಲಿ ಅದರ ಜೊತೆಗೆ ಬಾಳೆಯನ್ನು ಸಹ ಹೇರಳವಾಗಿ ಬೆಳೆಯುತ್ತಿದ್ದಾರೆ.
ಸಸ್ಯ ವರ್ಗ
[ಬದಲಾಯಿಸಿ]ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿ ವರ್ಗ
[ಬದಲಾಯಿಸಿ]ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.
ಆರ್ಥಿಕತೆ
[ಬದಲಾಯಿಸಿ]ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.
ಧರ್ಮಗಳು
[ಬದಲಾಯಿಸಿ]ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.
ಭಾಷೆಗಳು
[ಬದಲಾಯಿಸಿ]ಗ್ರಾಮದ ಪ್ರಮುಖ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ.
ಇದರೊಂದಿಗೆ ಕೆಲವು ಜನರು ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯ
[ಬದಲಾಯಿಸಿ]- ಶ್ರೀ ಮಹಾಲಕ್ಷ್ಮಿ ದೇವಾಲಯ
- ಶ್ರೀ ದುರ್ಗಾದೇವಿ ದೇವಾಲಯ
- ಶ್ರೀ ಮಲ್ಲಿಕಾರ್ಜುನ ದೇವಾಲಯ
- ಶ್ರೀ ಬಸವೇಶ್ವರ ದೇವಾಲಯ
- ಶ್ರೀ ವೆಂಕಟೇಶ್ವರ ದೇವಾಲಯ
- ಶ್ರೀ ಪಾಂಡುರಂಗ ದೇವಾಲಯ
- ಶ್ರೀ ಹಣಮಂತ ದೇವಾಲಯ
- ಶ್ರೀ ಮಾಳಿಂಗರಾಯ ದೇವಾಲಯ
ಮಠ
[ಬದಲಾಯಿಸಿ]ಗದುಗಿನ ತೋಂಟಾದಾರ್ಯ ಮಠದ ಸಂಬಂಧಿಸಿದ ಮಠವು ಡಂಬಳದಲ್ಲಿದೆ. ವೀರಶೈವ ಜಂಗಮರ ಮಠ ಇದೆ.
ಮಸೀದಿ
[ಬದಲಾಯಿಸಿ]ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ಹಬ್ಬಗಳು
[ಬದಲಾಯಿಸಿ]ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಓಕುಳಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
[ಬದಲಾಯಿಸಿ]ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಹೈಸ್ಕೂಲ್,ಐಟಿಐ ಕಾಲೇಜುವಿದೆ
ಸಾಕ್ಷರತೆ
[ಬದಲಾಯಿಸಿ]ಗ್ರಾಮದ ಸಾಕ್ಷರತೆ ಪ್ರಮಾಣವು ಸುಮಾರು 75%. ಅದರಲ್ಲಿ 65% ಪುರುಷರು ಹಾಗೂ 55% ಮಹಿಳೆಯರು ಸಾಕ್ಷರತೆ ಹೊಂದಿದೆ.
ರಾಜಕೀಯ
[ಬದಲಾಯಿಸಿ]ಗ್ರಾಮವು ರೋಣ ವಿಧಾನ ಸಭಾ ಕ್ಷೇತ್ರ ಮತ್ತು ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Kamat Research Database - Buddhist System of Education". Retrieved 2007-03-12.
- ↑ "The Buddhist Legacy". Archived from the original on 2012-05-15. Retrieved 2007-03-12.
- Pages using the JsonConfig extension
- Short description is different from Wikidata
- Articles using infobox templates with no data rows
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಗದಗ ಜಿಲ್ಲೆಯ ಪ್ರವಾಸಿ ತಾಣಗಳು
- ಗದಗ ಜಿಲ್ಲೆ