ವಿಷಯಕ್ಕೆ ಹೋಗು

ಡಾ ಬ್ರೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಗನ್ ಶ್ರೀನಿವಾಸ್, ಡಾ ಬ್ರೋ (Dr Bro) ಎಂದು ಜನಪ್ರಿಯವಾಗಿದ್ದಾರೆ[]. ಇವರು ಭಾರತದ ದೇಶದ ಕರ್ನಾಟಕ ಮೂಲದ ಯೂಟ್ಯೂಬರ್ ಮತ್ತು ಟ್ರಾವೆಲ್ ವ್ಲಾಗರ್ ಆಗಿದ್ದಾರೆ[].

ಡಾ ಬ್ರೋ
ವೈಯಕ್ತಿಕ ಮಾಹಿತಿ
ಜನನಗಗನ್ ಶ್ರೀನಿವಾಸ್
(2000-10-21) ೨೧ ಅಕ್ಟೋಬರ್ ೨೦೦೦ (ವಯಸ್ಸು ೨೪)
ರಾಷ್ಟ್ರೀಯತೆಭಾರತೀಯ
ಶಿಕ್ಷಣಬಿಕಾಂ ಪದವಿ
ವೃತ್ತಿಜೀವನಯೂಟ್ಯೂಬರ್
ಧರ್ಮಹಿಂದೂ
ಯುಟ್ಯೂಬ್ ಮಾಹಿತಿ
ಗುಪ್ತನಾಮ
  • Dr Bro
  • ಗಗನ್
ಚಾನಲ್ಡಾ ಬ್ರೋ, ಡಾ ಬ್ರೋ ಶಾಟ್ಸ್, ಗಗನ್ ಶ್ರೀನಿವಾಸ್
ಸಕ್ರಿಯ ಅವಧಿ2018- ಪ್ರಸ್ತುತ
ಚಂದಾದಾರರು
2.03 ಮಿಲಿಯನ್
ಒಟ್ಟು ವೀಕ್ಷಿಸಿ193,612,298 (ಡಾ ಬ್ರೋ)
ಚಂದಾದಾರರು ಮತ್ತು ಒಟ್ಟು ವೀಕ್ಷಣೆ ಎಣಿಕೆ 25 ಸೆಪ್ಟಂಬರ್ 2023 ಟಿಲ್।

ವೈಯಕ್ತಿಕ ಜೀವನ

[ಬದಲಾಯಿಸಿ]

ಗಗನ್ ಶ್ರೀನಿವಾಸ್ (ಜನನ ೨೧ ಅಕ್ಟೋಬರ್ ೨೦೦೦) ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು[]. ಇವರ ತಂದೆ ಶ್ರೀನಿವಾಸ್ ದೇವಾಲಯದಲ್ಲಿ ಅರ್ಚಕರಾಗಿದ್ದರೆ, ತಾಯಿ ಪದ್ಮಾವತಿ ಗೃಹಿಣಿ ಆಗಿದ್ದಾರೆ. ಗಗನ್‌ಗೆ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ, ಆದರೆ ಇವರು ಶಾಲಾ ದಿನಗಳಲ್ಲಿ ನಾಟಕ, ಭಾಷಣ ಮತ್ತು ಹಾಡುಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.

ಶಿಕ್ಷಣ

[ಬದಲಾಯಿಸಿ]

ಇವರು 1 ರಿಂದ 10 ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದರು. ಪ್ರಥಮ ಪಿಯು ವಿಜ್ಞಾನ ಅನುತ್ತೀರ್ಣವಾಗಿದ್ದರು. ನಂತರ ಇವರು ನೆಲಮಂಗಲದ ಬಸವೇಶ್ವರ ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಪದವಿಪೂರ್ವವನ್ನು ಮುಗಿಸಿದರು. ನಂತರ ಕೆ.ಆರ್.ಪುರದ ವಿಶ್ವೇಶ್ವರಪುರ ಕಾಲೇಜಿನ ಬಿಕಾಂನಲ್ಲಿ 2021ರಲ್ಲಿ[] ಪದವಿಯನ್ನು ಪಡೆದರು.

ವೃತ್ತಿ

[ಬದಲಾಯಿಸಿ]

ಗಗನ್ ತಮ್ಮ 17 ನೇ ವಯಸ್ಸಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಬೆಂಗಳೂರಿನಲ್ಲಿ ಡ್ರೈವಿಂಗ್ ಕೆಲಸವನ್ನು ಸಹ ಮಾಡುತ್ತಿದ್ದರು. ನಂತರ ಅವರು ತಮ್ಮ ಕೆಲಸವನ್ನು ತೊರೆದು, ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ಮನೆಯಲ್ಲಿ ತಯಾರಿಸಿದ ಉತ್ಪನ್ನವನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ನಂತರ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು.

ಯೂಟ್ಯೂಬ್

[ಬದಲಾಯಿಸಿ]

ಗಗನ್ ಶ್ರೀನಿವಾಸ್ 2018[] ರಲ್ಲಿ ಡಾ.ಬ್ರೋ ಎಂಬ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಮಾಡಿದರು. ಆರಂಭದ ದಿನಗಳಲ್ಲಿ ಹಾಸ್ಯ ವೀಡಿಯೊಗಳು ಮತ್ತು ಸಂದರ್ಶನ ವೀಡಿಯೊಗಳನ್ನು ಮಾಡುತ್ತಿದ್ದರು, ನಂತರ ಅವರು ಕರ್ನಾಟಕದಲ್ಲಿ ಮಾತ್ರ ವ್ಲಾಗ್ ಮಾಡಲು ಪ್ರಾರಂಭಿಸಿದರು. ಇವರು ನಿಧಾನವಾಗಿ ಭಾರತದೆಲ್ಲೆಡೆ ವ್ಲಾಗ್ ಮಾಡಲು ಪ್ರಾರಂಭಿಸಿದರು. ಮೊದಲಿಗೆ ಭಾರತ ರಾಜ್ಯಗಳಾದ ಕೇರಳ, ಅಸ್ಸಾಂ, ರಾಜಸ್ಥಾನ, ಹಿಮಾಚಲ ಪ್ರದೇಶ ಇತ್ಯಾದಿಗಳಿಗೆ ಭೇಟಿ ನೀಡಿದ್ದರು. ಇವರು ಕನ್ನಡದಲ್ಲಿ ಮಾತನಾಡುವ ಶೈಲಿಗೆ ಬಹಳ ಪ್ರಸಿದ್ಧರಾಗಿದ್ದಾರೆ. ಇವರು ಯಾವಾಗಲೂ ನಮಸ್ಕಾರ ದೇವರು []ಎನ್ನುತ್ತ ತಮ್ಮ ವ್ಲಾಗ್ ಅನ್ನು ಪ್ರಾರಂಭಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಇವರು ವ್ಲಾಗ್ ಮಾಡಲು ವಿದೇಶಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಮೊದಲ ವಿದೇಶಿ ಪ್ರವಾಸ ಪಾಕಿಸ್ತಾನ ದೇಶವಾಗಿದೆ. ನಂತರ ಇವರು ದುಬೈ, ಥೈಲ್ಯಾಂಡ್, ರಷ್ಯಾ, ಅಫ್ಘಾನಿಸ್ತಾನ[], ಮತ್ತು ಆಫ್ರಿಕಾ[] [] ಮುಂತಾದ ಅನೇಕ ವಿದೇಶಗಳಿಗೆ ಭೇಟಿ ನೀಡಿದ್ದರು. ಡಾ.ಬ್ರೋ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲ, ತಾಲಿಬಾನ್ ಜೊತೆ ವ್ಲಾಗ್ ಅನ್ನು ಮಾಡಿದ್ದಾರೆ. ಇಂಗ್ಲಿಷ್ ಸರಿಯಾಗಿ ಗೊತ್ತಿಲ್ಲದಿದ್ದರೂ ವಿದೇಶ ಪ್ರವಾಸ ಮಾಡಬಹುದು ಎಂದು ಅವರು ತೋರಿಸಿದ್ದಾರೆ.

ಸಿನಿಮಾ

[ಬದಲಾಯಿಸಿ]

ಡೇರ್‌ಡೆವಿಲ್ ಮುಸ್ತಾಫಾ [೧೦] [೧೧]ಕನ್ನಡ ಚಲನಚಿತ್ರದ ಟ್ರೈಲರ್‌ಗೆ ಕಂಠದಾನ ಮಾಡಿದ್ದಾರೆ.

ಬಾಹ್ಯಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Dr Bro aka Gagan Srinivas's Monthly income". News18 Kannada. Retrieved 14 June 2022.
  2. "ನಮ್ಮಸ್ಕಾರ ದ್ರೇವು ಎಂದ ಡಾ ಬ್ರೋ". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 2 ಡಿಸೆಂಬರ್ 2022.
  3. "ಡಾ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಶ್". ಮಸಲಾಚಾಹಿಮೀಡಿಯಾ. Archived from the original on 2023-12-09. Retrieved 10 ಸೆಪ್ಟಂಬರ್ 2023.
  4. "ಫಸ್ಟ್ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡೂ ಫೇಲಾದೆ, ನಂತರ ಕಾಮರ್ಸ್ ತೆಗೆದುಕೊಂಡು ಪಿಯುಸಿ ಪಾಸದೆ; ಡಾಬ್ರೊ". ವಿಜಯವಾಣಿ. Retrieved 28 ಜೂನ್ 2022.
  5. "ಡಾಬ್ರೋ ಬಯೋಗ್ರಪಿ". ಆಸಕ್ತಿ. Retrieved 29 ಸೆಪ್ಟಂಬರ್ 2022.
  6. "ನಮಸ್ಕಾರ ದೇವ್ರು ಎಂದ ತಕ್ಷಣ ನೆನಾಪಾಗುವುದೇ ಡಾಬ್ರೋ". ವಿಜಯವಾಣಿ. Retrieved 16 ಜನವರಿ 2023.
  7. "ಅಫ್ಘಾನಿಸ್ತಾನದಲ್ಲಿ ಡ್ರಾಬ್ರೋ ಜೊತೆ ತಾಲಿಬಾನ್". News18 Kannada. Retrieved 18 ನವೆಂಬರ್ 2022.
  8. "ಆಫ್ರಿಕಾದಲ್ಲಿ ಡಾಬ್ರೋ". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 2 ಸೆಪ್ಟಂಬರ್ 2023.
  9. "ಈ ದೇಶದಲ್ಲಿ ಬೀದಿಬದಿಯಲ್ಲಿ ಹಣ ಎಕ್ಸ್‌ಚೇಂಜ್: ಡಾಬ್ರೋ". News18 Kannada. Retrieved 1 ಸೆಪ್ಟಂಬರ್ 2023.
  10. "ಡೇರ್‌ಡೆವಿಲ್ ಮುಸ್ತಫಾಗೆ ಕಂಠದಾನ ಮಾಡಿದ ಡಾಬ್ರೋ". ಫಿಲ್ಮಿಬೀಟ್ ಕನ್ನಡ. Retrieved 2 ಆಗಸ್ಟ್ 2022.
  11. "ಸಿನಿಮಾರಂಗಕ್ಕೆ ಎಂಟ್ರಿ ನೀಡಿದ ಡಾಬ್ರೋ". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 4 ಮೇ 2023.


"https://kn.wikipedia.org/w/index.php?title=ಡಾ_ಬ್ರೋ&oldid=1263377" ಇಂದ ಪಡೆಯಲ್ಪಟ್ಟಿದೆ