ಡಿ.ಎನ್.ಶಂಕರ ಬಟ್
This article contains weasel words: vague phrasing that often accompanies biased or unverifiable information. |
This article may be unbalanced towards certain viewpoints. |
A major contributor to this article appears to have a close connection with its subject. |
(ಈ ಬರಹ ಶಂಕರ ಭಟ್ಟರು ಮುಂದಿಟ್ಟಿರುವ ಹೊಸಬರಹ'ದಲ್ಲಿದೆ)
ದರ್ಭೆ ನಾರಾಯಣಭಟ್ಟ ಶಂಕರಭಟ್ಟ,, ಡಿ.ಎನ್.ಶಂಕರ ಭಟ್ ಇಲ್ಲವೇ ಚುಟುಕಾಗಿ ಡಿ.ಎನ್.ಎಸ್. ಎಂದು ಗುರುತಿಸಲ್ಪಡುವ ಇವರು ಕನ್ನಡ ನುಡಿಯ ಕುರಿತ ಅರಕೆ ಕಯ್ಗೊಂಡ ನುಡಿಯರಿಗರಲ್ಲಿ ಮುಂಚೂಣಿಯವರು. ಹಲವಾರು ವರುಷಗಳ ಎಡೆಬಿಡದ ಅರಕೆಯ ಹಿನ್ನೆಲೆಯೊಂದಿಗೆ ಅವರು ಮುಂದಿಟ್ಟಿರುವ ಕನ್ನಡ ನುಡಿಯರಿಮೆ ಕುರಿತಾದ ವಿಷಯಗಳು ಇತ್ತೀಚಿನ ವರುಷಗಳಲ್ಲಿ ತುಂಬಾ ಮುಂಚೂಣಿಗೆ ಬರುತ್ತಿವೆ. ಕನ್ನಡ ನುಡಿಯರಿಮೆ ಸುತ್ತ ಶಂಕರ ಭಟ್ಟರು ಮಾಡಿದ ಕೆಲಸಕ್ಕಾಗಿ, ಕರ್ನಾಟಕ ಸರಕಾರ ನೀಡುವ, ಸಾಹಿತ್ಯ ದಲ್ಲಿ ಎಲ್ಲಕ್ಕಿಂತ ಮಿಗಿಲಾದ ಪಂಪ ಪ್ರಶಸ್ತಿಯನ್ನು 2012-13 ಸಾಲಿಗಾಗಿ ಶಂಕರ ಭಟ್ಟರಿಗೆ ನೀಡಲಾಗುತ್ತಿದೆ.[ಸೂಕ್ತ ಉಲ್ಲೇಖನ ಬೇಕು]
ಹುಟ್ಟು
[ಬದಲಾಯಿಸಿ]- ಶಂಕರ ಭಟ್ಟರು 15.07.1935 ರಂದು ಪುತ್ತೂರಿನಲ್ಲಿ ಹುಟ್ಟಿದರು.
ಕಲಿಕೆ
[ಬದಲಾಯಿಸಿ]- ಇಂಗ್ಲೆಂಡಿನಲ್ಲಿ ಬ್ರಿಟಿಷ್ ಕವ್ನ್ಸಿಲ್ ಪೆಲೋ ಆಗಿ ಒಂದು ವರ್ಷಒಳನುಡಿ ಸರ್‍ವೇಕ್ಶಣ ವಿಧಾನಗಳ ಕಲಿಕೆ, 1966.
- ಪಿ.ಎಚ್.ಡಿ (ನುಡಿಯರಿಮೆ), ಪುಣೆ ವಿಶ್ವವಿದ್ಯಾಲಯ, 1962
- ಎಂ.ಎ. (ಸಂಸ್ಕೃತ), ಮದ್ರಾಸ್ ವಿಶ್ವವಿದ್ಯಾಲಯ, 1960
ಕೆಲಸ ಮತ್ತು ಹುದ್ದೆಗಳು
[ಬದಲಾಯಿಸಿ]- ಅತಿಥಿ ವಿಜ್ಞಾನಿ, ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್, ಲಯ್ಪ್ಸಿಗ್, ಜರ್‍ಮನಿ, ಜನವರಿ-ಜುಲೈ 2001
- ವಿಸಿಟಿಂಗ್ ಪೆಲೋ, ಸೆಂಟರ್ ಪಾರ್ ಟಯ್ಪೊಲಾಜಿಕಲ್ ಸ್ಟಡೀಸ್, ಲಾ ಟ್ರೋಬೆ ವಿಶ್ವವಿದ್ಯಾಲಯ, ಬಂಡೂರ (ಮೆಲ್ಬರ್‍ನ್), ಆಸ್ಟ್ರೇಲಿಯಾ, ಆಗಸ್ಟ್-ಅಕ್ಟೋಬರ್ 2000
- ವಿಸಿಟಿಂಗ್ ಸ್ಕಾಲರ್, ಆಂಟ್ವೆರ್‍ಪ್ ವಿಶ್ವವಿದ್ಯಾಲಯ, ಬೆಲ್ಜಿಯಂ, ಜುಲೈ-ಡಿಸೆಂಬರ್ 1997
- ಸಂಶೋಧನಾ ವಿಜ್ಞಾನಿ, ಯು.ಜಿ.ಸಿ., ಭಾರತೀಯ ಭಾಷಾ ಸಂಸ್ಥಾನ, ಮೈಸೂರಿನೊಡನೆ, 1988-95
- ನುಡಿಯರಿಮೆಯ ಪ್ರೊಫೆಸರ್, ಮಣಿಪುರ ವಿಶ್ವವಿದ್ಯಾಲಯ, ಇಂಪಾಲ್, 1985-88
- ನುಡಿಯರಿಮೆಯ ಪ್ರೊಫೆಸರ್, ಅಯ್.ಎಸ್.ಡಿ.ಎಲ್, ತಿರುವನಂತಪುರಂ, 1979-85
- ಟಿಬೆಟೋ-ಬರ್‍ಮನ್ ರೀಡರ್, ಡೆಕನ್ ಕಾಲೇಜು, ಪುಣೆ, 1965-79
- ರಿಸರ್‍ಚ್ ಅಸೋಸಿಯೇಟ್, ಲ್ಯಾಂಗ್ವೇಜ್ ಯುನಿವರ್‍ಸಲ್ಸ್ ಯೋಜನೆ, ಸ್ಟ್ಯಾನ್ಪೋರ್‍ಡ್ ವಿಶ್ವವಿದ್ಯಾಲಯ, ಸ್ಟ್ಯಾನ್ಪೋರ್‍ಡ್, ಯು.ಎಸ್.ಎ., 1973-5
- ಸಂಶೋಧನೆ ನೆರವಿಗ, ಮರಾಟಿ ಒಳನುಡಿ ಸರ್‍ವೇಕ್ಶಣ ಯೋಜನೆ, ಡೆಕನ್ ಕಾಲೇಜು, ಪುಣೆ, 1963
- ದ್ರಾವಿಡ ನುಡಿಗಳ ಲೆಕ್ಚರರ್, ಪುಣೆ ವಿಶ್ವವಿದ್ಯಾಲಯ, 1963
ನಿಲುವುಗಳು
[ಬದಲಾಯಿಸಿ]This article contains weasel words: vague phrasing that often accompanies biased or unverifiable information. |
ಶಂಕರ ಭಟ್ಟರು ಕನ್ನಡ ನುಡಿಯರಿಮೆಯಲ್ಲಿ ಕ್ರಾಂತಿಕಾರಿಯಾದಂತಹ ವಿಚಾರಗಳನ್ನು ಮುಂದಿಟ್ಟಂತವರು. ಆಳವಾದ ಅರಕೆಯಿಂದ ಮೂಡಿಬಂದ ಅವರ ನಿಲುವು, ತಿಳಿವುಗಳಲ್ಲಿ ಕೆಲವನ್ನು ಈ ಕೆಳಗೆ ಕೊಡಲಾಗಿದೆ,
- ಕನ್ನಡ ತನ್ನದೇ ಆದ ಹುಟ್ಟು, ಬೆಳವಣಿಗೆ ಹೊಂದಿದ್ದು, ಸಂಸ್ಕೃತಕ್ಕಿಂತ ಹಲವು ವಿಷಯಗಳಲ್ಲಿ ಬೇರು ಮಟ್ಟದಲ್ಲಿಯೇ ಬೇರೆಯಾಗಿದೆ
- ಹಿಂದಿನ ಕಾಲದಿಂದಲೂ ಕನ್ನಡವೆಂದುಕೊಳ್ಳುತ್ತಾ ಕಲಿಸಲಾಗುತ್ತಿರುವ ವ್ಯಾಕರಣವು ಕನ್ನಡದ್ದಾಗಿರದೇ ಹೆಚ್ಚಿನ ವಿಷಯದಲ್ಲಿ ಸಂಸ್ಕೃತದ್ದಾಗಿದೆ. ಇಂದು ಕನ್ನಡದ ನಿಜವಾದ ಸೊಲ್ಲರಿಮೆ/ವ್ಯಾಕರಣವನ್ನು ತಿಳಿದುಕೊಳ್ಳುವ, ಕಲಿಸುವ ಅಗತ್ಯವಿದೆ.
- ಇಂದಿನ ಕನ್ನಡ ಲಿಪಿಯಲ್ಲಿ ಬೇಕಿರದ ಹೆಚ್ಚಿನ ಬರಿಗೆಗಳಿದ್ದು ಅವುಗಳನ್ನು ಕಯ್ಬಿಟ್ಟರೆ ಕನ್ನಡ ಬರವಣಿಗೆ ಸುಲಭವೂ, ಎಲ್ಲರಿಗೂ ಎಟುಕುವಂತಾಗಬಲ್ಲದು. ಹೆಚ್ಚಿನ ಕನ್ನಡಿಗರು ಉಲಿಯದಂತಹ ’ಮಹಾಪ್ರಾಣ’ಗಳನ್ನು ಬರಹದಿಂದ ಕಯ್ಬಿಡುವುದು ಮತ್ತು ’ಅಯ್’ ಯನ್ನು ’ಅಯ್’ ಅಂತಾ, ’ಅವ್’ ಅನ್ನುವುದನ್ನು ’ಅವ್’ ಅಂತಾ ಮಾರ್ಪಡಿಸಿ ಕೊಳ್ಳಬಹುದಾದ ಲಿಪಿ, ಕನ್ನಡದ ಇಂದಿನ ಅಗತ್ಯಗಳಲ್ಲೊಂದು. ಹೀಗೆ ಮಾರ್ಪಾಡು ಮಾಡಿ ಕೊಂಡ ಬರಹವನ್ನು ಈ ಹೊತ್ತಿಗೆ ’ಹೊಸಬರಹ’ ಅಂತಾ ಕರೆಯಲಾಗುತ್ತಿದೆ.
- ಇಂದಿನ ಬರಹ ಕನ್ನಡದಲ್ಲಿ ಎರವಲು ಪದಗಳು ಅದರಲ್ಲೂ ಸಂಸ್ಕೃತ ಪದಗಳ ಬಳಕೆ ತುಂಬಾ ಆಗುತ್ತಿರುವುದರಿಂದ ಆಡುಗನ್ನಡದಿಂದ ಬರಹಗನ್ನಡವು ತುಂಬಾ ದೂರವಾಗಿದ್ದು, ಹೆಚ್ಚಿನ ಕನ್ನಡಿಗರಿಗೆ ತೊಡಕಾಗುತ್ತಿದೆ. ಬರಹ ಕನ್ನಡದಲ್ಲಿ ಎರವಲು ಪದಗಳನ್ನು ಒಂದು ಮಿತಿಯಲ್ಲಿಟ್ಟು ಹೆಚ್ಚೆಚ್ಚು ಕನ್ನಡದ್ದೇ ಪದಗಳನ್ನು ಬಳಕೆಗೆ ತಂದಲ್ಲಿ ಹೆಚ್ಚಿನ ಕನ್ನಡಿಗರಿಗೆ ನೆರವಾಗಲಿದೆ.
- ಈ ಹೊತ್ತಿಗೆ ’ಎಲ್ಲರ ಕನ್ನಡ’ ಅಂತಾ ಗುರುತಿಸಲ್ಪಡುತ್ತಿರುವುದು ಮೇಲೆ ಹೊಸಬರಹದಲ್ಲಿ ತಿಳಿಸಿದಂತಹ ಲಿಪಿ ಸುಧಾರಣೆ ಮತ್ತು ಹೆಚ್ಚೆಚ್ಚು ಕನ್ನಡ ಬೇರಿನ ಪದಗಳನ್ನು ಬಳಸುವ ನಡೆಯನ್ನು ಸೂಚಿಸುತ್ತದೆ.
ಪುಸ್ತಕಗಳು
[ಬದಲಾಯಿಸಿ]- ಕನ್ನಡ ನುಡಿಯರಿಮೆಯ ಇಣುಕುನೋಟ, ಭಾಷಾ ಪ್ರಕಾಶನ, ಹೆಗ್ಗೋಡು, 2014
- ಕನ್ನಡ ಬರಹದ ಸೊಲ್ಲರಿಮೆ - 4,ಭಾಷಾ ಪ್ರಕಾಶನ, ಹೆಗ್ಗೋಡು, 2013
- ಕನ್ನಡ ಬರಹದ ಸೊಲ್ಲರಿಮೆ - 3,ಭಾಷಾ ಪ್ರಕಾಶನ, ಹೆಗ್ಗೋಡು, 2012
- ಮಾತು ಮತ್ತು ಬರಹದ ನಡುವಿನ ಗೊಂದಲ,ಭಾಷಾ ಪ್ರಕಾಶನ, ಹೆಗ್ಗೋಡು, 2011
- ಕನ್ನಡ ಬರಹದ ಸೊಲ್ಲರಿಮೆ - 2,ಭಾಷಾ ಪ್ರಕಾಶನ, ಹೆಗ್ಗೋಡು, 2011
- ಕನ್ನಡ ಬರಹದ ಸೊಲ್ಲರಿಮೆ - 1,ಭಾಷಾ ಪ್ರಕಾಶನ, ಹೆಗ್ಗೋಡು, 2010
- ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು,ಭಾಷಾ ಪ್ರಕಾಶನ, ಹೆಗ್ಗೋಡು, 2009
- ಮಾತಿನ ಒಳಗುಟ್ಟು,ಭಾಷಾ ಪ್ರಕಾಶನ, ಹೆಗ್ಗೋಡು, 2009
- ಕನ್ನಡ ನುಡಿ ನಡೆದು ಬಂದ ದಾರಿ, ಭಾಷಾ ಪ್ರಕಾಶನ, ಹೆಗ್ಗೋಡು, 2007, 2009
- ಕನ್ನಡ ಬರಹವನ್ನು ಸರಿಪಡಿಸೋಣ, ಭಾಷಾ ಪ್ರಕಾಶನ, ಮಯ್ಸೂರು, 2005
- ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?,ಭಾಷಾ ಪ್ರಕಾಶನ, ಮಯ್ಸೂರು, 2005
- Pronouns: A Cross Linguistic Study, Oxford, Oxford University Press, 2004
- ಕನ್ನಡ ವಾಕ್ಯಗಳ ಒಳರಚನೆ,ಭಾಷಾ ಪ್ರಕಾಶನ, ಮಯ್ಸೂರು, 2004
- ಕನ್ನಡ ಸರ್ವನಾಮಗಳು, ಭಾಷಾ ಪ್ರಕಾಶನ, ಮಯ್ಸೂರು, 2003
- ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಭಾಷಾ ಪ್ರಕಾಶನ, ಮಯ್ಸೂರು, 2000
- Introducing grammatical notions, University of Pune, Pune, 2000
- The prominence of tense, aspect and Mood: a new basis for language typology, John Benjamins, Amsterdam, 1999.
- ಕನ್ನಡ ಶಬ್ದ ರಚನೆ, ಕ್ರೈಸ್ತ ಕಾಲೇಜು, ಕನ್ನಡ ಸಂಘ, ಬೆಂಗಳೂರು, 1999. ತಿದ್ದಿದ ಮುಂದಿನ ಒಬ್ಬೆ: ಕನ್ನಡ ಪದಗಳ ಒಳರಚನೆ,ಭಾಷಾ ಪ್ರಕಾಶನ, ಮೈಸೂರು, 2002.
- Manipuri grammar (written jointly with M.S. Ningomba), Lincom Europa, Munich, 1997
- The adjectival category, John Benjamins, Amsterdam, 1994
- Grammatical relations, Routledge, London, 1991. Reprinted by Bejing World Publishers, Bejing in 1992.
- An introduction to linguistics, Teachers’ Forum, Imphal. 1986
- Identification, Dravidian Linguistics Association, Trivandrum, 1981
- Referents of noun phrases, Deccan College, Pune, 1979
- ಕನ್ನಡ ವಾಕ್ಯಗಳು, ಗೀತಾ ಬುಕ್ ಹೌಸ್, ಮೈಸೂರು, 1978
- Pronominalization, Deccan College, Pune, 1978
- Sound change, Bhasha Prakashan, Pune, 1972, Revised edition, published by Motilal Banarsidass, New Delhi, 1999.
- The Koraga language, Deccan College, Pune, 1971
- Outline grammar of Havyaka, Deccan College, Pune, 1971
- ಭಾಷೆಯ ಬಗೆಗೆ ನೀವೇನು ಬಲ್ಲಿರಿ?, ಭಾಷಾ ಪ್ರಕಾಶನ, ಪುಣೆ, 1970, ತಿದ್ದಿದ ಎರಡನೆ ಒಬ್ಬೆ: ಕನ್ನಡ ಸಂಗ, ಪುತ್ತೂರು, 1998; ತಿದ್ದಿದ ಮೂರನೆ ಒಬ್ಬೆ: ಭಾಷಾ ಪ್ರಕಾಶನ, 2002.
- ಕನ್ನಡ ಭಾಷೆಯ ಸಂಕ್ಷಿಪ್ತ ಚರಿತ್ರೆ, ಭಾಷಾ ಪ್ರಕಾಶನ, ಪುಣೆ, 1970; ತಿದ್ದಿದ ಒಬ್ಬೆ: ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1995.
- Tankhur Naga vocabulary, Deccan College, Pune, 1969
- Boro grammar and vocabulary, Deccan College, Pune, 1968
- Descriptive analysis of Tulu, Deccan College, Pune, 1967.
ಆಯ್ದ ಕೆಲವು ಅರಕೆ ಹಾಳೆಗಳು / Research Papers
[ಬದಲಾಯಿಸಿ]- “The Indefinite-interrogative puzzle”, Linguistic Typology, 4, 2000.
- “Lexical suppletion in baby talk”, Anthropological Linguistics 1962-3
- “Adjectives”. (Jointly with R. Pustet). Handbücher zur Sprach- und Kommunikationswissenschaft: Morphology. Mouton de Gruyter, Berlin.2000
- “Havyaka Kannada: Modality and negation” (jointly with van der Auwera, J.) Indian Linguistics, 2000.
- “Functional constraints on word-formation rules”. The yearbook of South Asian languages and linguistics, 2000. New Delhi: Sage
- Review article on Stassen, L. 1997, Intransitive predication, and Wetzer, H. 1996, The typology of adjectival predication. Linguistic Typology, 3.1, 1999
- “Word classes and sentential functions”. In Comrie, B., and Vogel, P.M. (eds.), An anthology of word classes, Mouton de Gruyter, Berlin, 1999
- “Indefinite pronouns in Kannada”. In The life of Language: Papers in Linguistics in honor of W.Bright, 369-83. Berlin: Mouton de Gruyter, 1998.
- “Tulu”. In Steever, S. (ed.), The Dravidian Languages, (158-177), Routledge, London, 1997.
- “Need for a dualistic theory of language”, IJDL 14, 1985
- “Word and its meaning in the Indian Grammatical Tradition”, IJDL 14, 1985
- “Physical identification in Kannada”, Studies in Linguistic Sciences 11, 1982
- “A general study of palatalization”, in Greenberg et al (eds.) Universals of Human Language, Stanford University Press, Stanford, 1978
- “Multiple case roles”, Lingua 42, 1977
- “Ambiguity in negative sentences”, Glossa 11, 1977
- “Dichotomy in phonological change”, Lingua 39, 1976
- “A semantic constraint on neg-raising rule”, Papers in Linguistics 8, 1975
- “The basis of comparative method”, Language Sciences 35, 1975
- “Two studies on nasalization”, Nasalfest 1975
- “Retroflection and retraction”, Journal of Phonetics 2, 1975
- “The Phonology of liquid consonants”, Working Papers in Language Universals 16, 73-104.
- “Kudux indicatives”, Indo-Iranian Journal 12, 1970
- “Age grading and sound change”, Word 26, 1970
- “Is sound change gradual?”, Linguistics 40, 1968
- “The rate of language change”, Linguistics 39, 1968.
ಶಂಕರ ಭಟ್ಟರು ಮುಂದಿಟ್ಟಿರುವ ವಿಚಾರಗಳನ್ನು ಅಳವಡಿಸಿಕೊಳ್ಳುವತ್ತ ಹಲವಾರು ಕಡೆ ಕೆಲಸಗಳು ನಡೆಯುತ್ತಿವೆ. ಶಿವಮೊಗ್ಗ ವಿಶ್ವವಿದ್ಯಾಲಯ ಶಂಕರಭಟ್ಟರು ತಿಳಿಸಿರುವ ವಿಷಯಗಳನ್ನು ಈಗಾಗಲೇ ತನ್ನ ಪಠ್ಯ ಕ್ರಮದಲ್ಲಿ ಅಳವಡಿಸಿಕೊಂಡಿದ್ದರೆ, ಹೊನಲು Archived 2014-02-01 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಮಿಂದಾಣವು ಇಂಟರನೆಟ್‍ನಲ್ಲಿ ಈ ನಿಟ್ಟಿನಲ್ಲಿ ತೊಡಗಿಕೊಂಡಿದೆ.
ನೋಡಿ
[ಬದಲಾಯಿಸಿ]- ನಾವು ಧಾರವಾಡದ ಮಂದಿ. ನಮ್ಮ ಉತ್ತರ ಕರ್ನಾಟಕದ ಕನ್ನಡ, ಕನ್ನಡ ಹೌದೋ ಅಲ್ಲೋ? ಉತ್ತರ ಕರ್ನಾಟಕದ ಕನ್ನಡದಾಗ, ಸಾಹಿತ್ಯ, ಕಾದಂಬರಿ, ಕಾವ್ಯಗಳು ಐತೋ ಇಲ್ಲೋ? ಮುಂದನೂ ಈ ಕನ್ನಡ ಇರ್ಬಕೋ ಬ್ಯಾಡೋ? ನೀವು ಎಲ್ಲ ಮಹಾಪ್ರಾಣಗಳನ್ನು ನಮ್ಮ ಕನ್ನಡದ ಲಿಪಿಯಿಂದ ತಗದ್ರ ನಮ್ಮ ಸಾಹಿತ್ಯಕ್ಕ ಯಾವ ಲಿಪಿ ಇಟ್ಕೋಳೂಣು? ಬೆಂಗ್ಳೂರವ್ರು ಸತ್ಯ ಅನ್ಲಿಕ್ಕೆ ನಿಜ, ದಿಟ ಅನ್ನು ಪದ ಉಪಯೋಗಸ್ತಾರ. ಆದ್ರ ನಮ್ದು ಗಂಡ್ ಕನ್ನಡ ನೋಡ್ರಿ. ಖರೇನ ಹೇಳ್ತೀನಿ, ನಾವು 'ಖರೆ' ಅನ್ನುಮುಂದ ವಟ್ಟ 'ಕರೆ' ಅಂತ ಯಾವತ್ತೂ ಅನ್ನಂಗಿಲ್ರೀ. ನೀವು ಹವ್ಯಕರು, ಅಡಿಗಿ ಹೆಂಗಾಗ್ಯದ ಅಂತ ಕೇಳಿದ್ರ 'ಬಾರಿ ಚೊಲೊ ಆಯ್ದು ಮಾರಾಯ' ಅಂತೀರಿ. ಆದ್ರ ನಾವು ನಮ್ಮ ಗಂಡ್ ಕನ್ನಡದಾಗ 'ಭಾರೀ ಛೊಲೋ ಆಗ್ಯದ್ ಲೇ ಮಂಗ್ಯಾ' ಅಂತೀವಿ.-'-'-'-
- -'-'-ಕಚ್ಚಿ ಉಡೋ ದೊಡ್ಡ ಪಂಜಾಕ್ಕ ಧೋತ್ರ ಅಂತೀವಿ. ಧಾರವಾಡ ಊರನ್ನು ತಪ್ಪಿಯೂ ದಾರವಾಡ ಅಂತ ಯಾರೂ ಅನ್ನಂಗಿಲ್ರೀ. ಇನ್ನು ಅಲ್ಲಿ ಸ್ಪೆಷಲ್ ಫೇಮಸ್ ಫೇಡೆನ್ನ ನಾವು ಎಂದರೆ 'ಪೇಡಾ' ಅಂದಿದ್ದನ್ನ ನೀವು ನೋಡೀರೇನು? ಞ ಅಕ್ಷರ ತಗದ್ರ, ನಮ್ಮ ಕಯ್ಯಾರ ಕಿಞ್ಞಣ್ಣ ರೈ ಬಗ್ಗೆ ಏನಂತ ಬರಿಯೂಣು?
- -'- '- ಅದಕ್ಕ ಹೇಳ್ಳಿಕತ್ತೀನಿ, ಈಗಿರೋ ಕನ್ನಡದಾಗ ಯಾವ ಅಕ್ಷರಾನೂ ತಗೀಬ್ಯಾಡ್ರಿ. ನಮ್ಮ ಕನ್ನಡ ಜಾತಿಯಿಂದ, ಜಾತಿಗೆ, ಊರಿಂದ ಊರಿಗೆ ಬ್ಯಾರೆ ಬ್ಯಾರೆ ಅದ. ಹಿಂಗಾಗಿ, ನಮ್ಮ ಕನ್ನಡದ ಲಿಪಿ, ಕರಾವಳಿ ಹವ್ಯಕರ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು, ರಾಯಚೂರ್ ಸಾಬ್ರ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು. ಬೆಳಗಾವಿ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು, ಚಾಮರಾಜನಗರದ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು. ಹುಡಗ್ರಿಗೆ 10 ಅಕ್ಷರ ಕಲೀಲಿಕ್ಕೆ ಜಾಸ್ತಿ ಆಗ್ತದ ಅಂತ ಹೇಳಿ ಅವನ್ನೆಲ್ಲ ತಗದು ಈಗಾಗ್ಲೇ ಹುಡಗ್ರಿಗೆ ಗೊತ್ತಿರೊ 10 ಸಾವಿರ ಶಬ್ದಕ್ಕ ಬ್ಯಾರೆ 10 ಸಾವಿರ ಶಬ್ದ ಹುಡಿಕಿ ಅದನ್ನ ಹುಡಗ್ರ ತಲ್ಯಾಗ ತುಂಬುದು ಎಲ್ಲಿ ಶಾಣ್ಯಾತನ? - ಇಂತಿ. ನಿಮ್ಮ ಗಂಡು ಕನ್ನಡದ ಅಭಿಮಾನಿ. ಎಲ್ಲರ ಕನ್ನಡದ ಶಂಕರ ಬಟ್ ರಿಗೊಂದು ಪತ್ರ By * ವಿನಾಯಕ್ ಹಂಪಿಹೊಳಿ | Updated: Friday, June 20, 2014,
ಪ್ರತಿಕ್ರಿಯೆ
[ಬದಲಾಯಿಸಿ]- ಪ್ರತಿಕ್ರಿಯೆ: ಕನ್ನಡಿಗರ ಮಾತಿನಲ್ಲಿ 'ಮಹಾಪ್ರಾಣ' ಇಲ್ಲ. ಈಗಿರುವ ಕನ್ನಡದಿಂದಲೇ ಕನ್ನಡಿಗರ ಏಳಿಗೆ ಸಾದ್ಯ ಅನ್ನುವ ನಿಲುವು ಬೇರೆಯವರದಾದರೆ ಸಂತೋಶ, ಇದಕ್ಕೆ ನಮ್ಮ ತಕರಾರೇನಿಲ್ಲ. ಹಾಗೆಯೇ ಎಲ್ಲರ ಕನ್ನಡದಿಂದ ಕನ್ನಡಿಗರ ಏಳಿಗೆ ಸಾದ್ಯ ಎನ್ನುವ ಗಟ್ಟಿಯಾದ ನಿಲುವು ನಮ್ಮದು, ಇದರ ಬಗ್ಗೆ ಬೇರೆಯವರು ಕೊಂಕು ನುಡಿದರೆ ನಮಗೇನು ಹಾನಿಯಿಲ್ಲ ಎಂದು ಮಾತ್ರ ಹೇಳಬಲ್ಲೆ.By *ಚೇತನ್ ಜೀರಾಳ್ | Updated: Friday, June 20, 2014,
ಹೊಸಗನ್ನಡದಲ್ಲಿ ಶಂಕರ ಭಟ್ಟರ ಬಗೆಗೆ ಲೇಖನ
[ಬದಲಾಯಿಸಿ]ಸುದ್ದಿ ಸೆಲೆ
[ಬದಲಾಯಿಸಿ]1. http://vijaykarnataka.indiatimes.com/articleshow/27547332.cms