ಡೆಕ್ಕನ್ ೩೬೦
| ||||
ಸ್ಥಾಪನೆ | ೨೦೦೯ | |||
---|---|---|---|---|
Ceased operations | ಮೇ ೨೦೧೧[೧] | |||
Hubs | ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು | |||
Fleet size | ೨ | |||
Destinations | ೧೫ | |||
Parent company | ಡೆಕ್ಕನ್ ಏವಿಯೇಶನ್ | |||
Headquarters | ಬೆಂಗಳೂರು, ಕರ್ನಾಟಕ, ಭಾರತ | |||
Key people | ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ | |||
Website | www |
ಡೆಕ್ಕನ್ ೩೬೦ (ಡೆಕ್ಕನ್ ಕಾರ್ಗೋ ಮತ್ತು ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಎಂದೂ ಕರೆಯುತ್ತಾರೆ) ಇದು ಭಾರತದ ಬೆಂಗಳೂರು ಮೂಲದ ಸರಕು ಸಾಗಾಣಿಕಾ ಸೇವೆಗಳನ್ನು ಒದಗಿಸುವ ವೈಮಾನಿಕ ಸಂಸ್ಥೆ. ಇದನ್ನು ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಅವರು ಸ್ಥಾಪಿಸಿದರು.
ಇತಿಹಾಸ
[ಬದಲಾಯಿಸಿ]ಡೆಕ್ಕನ್ 360 ನವೆಂಬರ್ 2009 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, ಕಂಪನಿಯನ್ನು ಕ್ಯಾಪ್ಟನ್ ಜಿಆರ್ ಗೋಪಿನಾಥ್ ಸ್ಥಾಪಿಸಿದರು. ಆರಂಭದಲ್ಲಿ ಸಂಸ್ಥೆ ಮೂರು ಏರ್‌ಬಸ್ A310 ಕಾರ್ಗೋ ವಿಮಾನಗಳು ಮತ್ತು ಐದು ATR ಕಾರ್ಗೋ ವಿಮಾನಗಳನ್ನು ಹೊಂದಿತ್ತು. ಅವುಗಳಲ್ಲಿ ಏರ್‌ಬಸ್‌ಗಳು ನಿರ್ವಹಣೆ ಸಮಸ್ಯೆಗಳನ್ನು ಹೊಂದಿದ್ದವು ಮತ್ತು ಆಗಾಗ್ಗೆ ರಿಪೇರಿಗೆ ಮಾಡಲ್ಪಟ್ಟವು. ಡೆಕ್ಕನ್ ಸಂಸ್ಥೆ ಈ ವಿಮಾನಗಳನ್ನು ಮೇ 2011 ರಲ್ಲಿ ಗುತ್ತಿಗೆದಾರನಿಗೆ ಹಿಂದಿರುಗಿಸಿತು. [೨] ಮತ್ತು ಅದೇ ತಿಂಗಳಲ್ಲಿ ಸಂಸ್ಥೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. [೩] ಡೆಕ್ಕನ್ ಕಾರ್ಗೋ ಮತ್ತು ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಪ್ರೈ.ಲಿ ಎಂದು ಮರುನಾಮಕರಣ ಮಾಡಲಾಯಿತು. 2007-2008 ರಲ್ಲಿ, ದುಬೈ ಮೂಲದ ಯುನೈಟೆಡ್ ಏವಿಯೇಷನ್ ಸರ್ವಿಸಸ್ (UAS) ಮತ್ತು M/s ಪಟೇಲ್ ಇಂಟಿಗ್ರೇಟೆಡ್ ಲಾಜಿಸ್ಟಿಕ್ಸ್ (PIL) ಪ್ರೈ.ಲಿ. ಸಂಸ್ಥೆಗಳು ತಮಗೆ ಡೆಕ್ಕನ್ ಸಂಸ್ಥೆಯಿಂದ ಬರಬೇಕಿದ್ದ ಬಾಕಿ ಮೊತ್ತವನ್ನು ಕೊಡಿಸುವಂತೆ ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ದೂರು ದಾಖಲಿಸಿದವು. ಈ ದೂರು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ, ಸಂಸ್ಥೆಯನ್ನು ಮುಚ್ಚುವ ಮೂಲಕ, ದೂರುದಾರರಿಗೆ ಬಾಕಿ ಉಳಿಸಿಕೊಂಡ ಮೊತ್ತವನ್ನು ಮರಳಿಸುವಂತೆ ಡೆಕ್ಕನ್ ಸಂಸ್ಥೆಗೆ ಆದೇಶಿಸಿತು.
ವ್ಯಾಪ್ತಿ
[ಬದಲಾಯಿಸಿ]ಡೆಕ್ಕನ್ ಸಂಸ್ಥೆ ಈ ಕೆಳಗಿನ ಸ್ಥಳಗಳಿಗೆ ಸರಕು ಸಾಗಾಣಿಕಾ ಸೇವೆಯನ್ನು ಒದಗಿಸುತ್ತಿತ್ತು. [೪]
- ಹಾಂಗ್ ಕಾಂಗ್
- ಹಾಂಗ್ಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- India
- ಅಹ್ಮದಾಬಾದ್ - ಸರ್ದಾರ್ ವಲ್ಲಭಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಬೆಂಗಳೂರು - ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (hub)
- ಚೆನ್ನೈ - ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಕೊಚ್ಚಿ - ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ತಿರುವನಂತಪುರಮ್ - ತಿರುವನಂತಪುರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಕೊಯಂಬತ್ತೂರು - ಕೊಯಂಬತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ದೆಹಲಿ - ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಗುವಾಹಟಿ - ಲೋಕಪ್ರಿಯ ಗೋಪಿನಾಥ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಬೆಳಗಾವಿ - ಬೆಳಗಾವಿ ವಿಮಾನ ನಿಲ್ದಾಣ
- ಹುಬ್ಬಳ್ಳಿ/ಧಾರವಾಡ - ಹುಬ್ಬಳ್ಳಿ ವಿಮಾನ ನಿಲ್ದಾಣ
- ಕೊಲ್ಕತ್ತಾ - ನೇತಾಜಿ ಸುಭಾಸ್ಚಂದ್ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಮುಂಬಯಿ - ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ನಾಗಪುರ - ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಸಂಯುಕ್ತ ಅರಬ್ ಸಂಸ್ಥಾನ
- ದುಬೈ - ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಫ್ಲೀಟ್
[ಬದಲಾಯಿಸಿ]ಡಿಸೆಂಬರ್ ೨೦೧೨ ರ ಹೊತ್ತಿಗೆ ಡೆಕ್ಕನ್ 360 ಫ್ಲೀಟ್ ಈ ಕೆಳಗಿನ ವಿಮಾನಗಳನ್ನು ಒಳಗೊಂಡಿತ್ತು: [೨]
ವಿಮಾನ | ಸೇವೆಯಲ್ಲಿ | ಆದೇಶಗಳು | ಸಾಮರ್ಥ್ಯ | ಮಾರ್ಗಗಳು | ನೋಂದಣಿ | ||
---|---|---|---|---|---|---|---|
ATR 72-202F | 2 | 0 | ಗೃಹಬಳಕೆಯ | VT-DEA, VT-DEB | |||
ಒಟ್ಟು | 2 | 0 |
ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿಮಾನ ಮಾದರಿಗಳು
[ಬದಲಾಯಿಸಿ]- ೧ ATR 42-300F
- 3 ಏರ್‌ಬಸ್ A310-300F
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "State Bank of India opposes airline licence for new venture of Capt Gopinath". The Times Of India. 9 June 2013. Retrieved 10 June 2013.
- ↑ ೨.೦ ೨.೧ "Deccan 360 fails to take off". Business Standard. 21 July 2011. Retrieved 10 June 2013.
- ↑ Deccan 360 grounded
- ↑ "Deccan's cargo airline is here". Business Standard. 20 January 2013. Retrieved 24 September 2018.