ತಾಜ್ ಮಹಲ್ ಹೋಟೆಲ್, ಮುಂಬಯಿ
ತಾಜ್ ಮಹಲ್ ಹೋಟೆಲ್,[೧] ದಕ್ಷಿಣ ಮುಂಬಯಿನಲ್ಲಿರುವ ಅತ್ಯಂತ ಪ್ರಸಿದ್ಧವಾದ ಪಂಚತಾರಾ ಹೋಟೆಲ್. ಇದನ್ನು ಪಾರ್ಸಿವರ್ತಕ, ಭಾರತದ ಔದ್ಯೋಗಿಕ ಕ್ಷೇತ್ರದ ಮಹಾರುವಾರಿ, ಉಕ್ಕು, ಜವಳಿ, ವಿದ್ಯುತ್, ಸಿಮೆಂಟ್, ಹಾಗೂ ಜೀವನಾವಶ್ಯಕವಸ್ತುಗಳ ತಯಾರಕ, " ಶ್ರೀ.ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ " ರವರೇ ಅತ್ಯಂತ ಶ್ರದ್ಧೆವಹಿಸಿ ಸ್ಥಾಪಿಸಿದರು. ಜಮ್ ಸೆಟ್ ಜಿಯವರು ತಮ್ಮ ಜೀವಿತಕಾಲದಲ್ಲಿ ಹಲವಾರು ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ತಾಜ್ ಮಹಲ್ ಹೋಟೆಲ್ ಉದ್ಯಮಗಳಲ್ಲಿ ಒಂದು.
ಅರಬ್ಬೀ ಸಮುದ್ರದ ಬಳಿ ಇದ್ದ ಒಂದೇ ಕಟ್ಟಡ
[ಬದಲಾಯಿಸಿ]'ಬೊಂಬಾಯಿನಶಾನ್ ' ಎಂಬಂತೆ, ಅರಬ್ಬೀಸಮುದ್ರಕ್ಕೆ ಮುಖಮಾಡಿಕೊಂಡು ಪಶ್ಚಿಮದಿಕ್ಕಿನಿಂದ ಬರುವ ಹಡಗುಗಳಿಗೆ ಮಾರ್ಗದರ್ಶಿಯಾಗಿರುವ ಈ ಭವ್ಯ ಪ್ರತಿಶ್ಠಿತ ಕಟ್ಟಡವನ್ನು, ನಿರ್ಮಿಸಿದ ಸಮಯದಲ್ಲಿ, " ಗೇಟ್ವೇ ಆಫ್ ಇಂಡಿಯ," ಸ್ಮಾರಕವಾಗಲೀ, " ಪೆಟ್ರೋಲಿಯಮ್ ಶುದ್ಧೀಕರಣ ಘಟಕ," ವಾಗಲೀ ಅಸ್ತಿತ್ವಕ್ಕೆ ಬಂದಿರಲಿಲ್ಲ. ಸುತ್ತಮುತ್ತಲಿನ ಜಾಗದಲ್ಲಿ ಯಾವದೊಡ್ಡ ಕಟ್ಟಡಗಳೂ ಇರಲಿಲ್ಲ. ೧೯೧೧ ರಲ್ಲಿ ಇಂಗ್ಲೆಂಡ್ ನ ಚಕ್ರವರ್ತಿ, ೫ ನೇ ಜಾರ್ಜ್ ರವರು, ಪ್ರಪ್ರಥಮವಾಗಿ ಭಾರತಕ್ಕೆ ಭೇಟಿನೀಡಿದ್ದ ಪ್ರಥಮ ಹಾಗೂ ಅಂತಿಮ ಭೇಟಿಯಾಗಿತ್ತು. ಆ ಸಮಯದಲ್ಲಿ, "ಗೇಟ್ ವೇ ಆಫ್ ಇಂಡಿಯಸ್ಮಾರಕ," ದ ಶಿಲಾನ್ಯಾಸ ಮಾಡಲಾಗಿತ್ತು. ನಂತರ ೧೯೨೪ ರ ಹೊತ್ತಿಗೆ ನಿರ್ಮಾಣಕಾರ್ಯ, ಪೂರೈಸಿತು.
ಯೂರೋಪಿಯನ್ನರಿಗೆ ಭಾರತೀಯರ ಬಗ್ಗೆ ತಾತ್ಸಾರ
[ಬದಲಾಯಿಸಿ]ಭಾರತೀಯರ ಬಗ್ಗೆ, ಯೂರೋಪಿಯನ್ನರ ಅಸಡ್ಡೆಯೇ 'ತಾಜ್ ಮಹಲ್ ಹೋಟೆಲ್ ,’[೧] Archived 2013-07-11 ವೇಬ್ಯಾಕ್ ಮೆಷಿನ್ ನಲ್ಲಿ. ಕಟ್ಟಲು ಪ್ರೇರಣೆಯಾಯಿತು. ೧೯೦೦ ರಲ್ಲಿ ಜಮ್ ಸೆಟ್ ಜಿ ಯವರು, ಈ ಕಟ್ಟಡವನ್ನು ಕಟ್ಟಲು ಕಾರಣವಿತ್ತು. ಒಮ್ಮೆ ಅವರು, ತಮ್ಮ ಒಬ್ಬ ಯೂರೋಪಿಯನ್ ಮಿತ್ರನ ಜೊತೆ, ಬೊಂಬಾಯಿನ ಪ್ರಮುಖಹೋಟೆಲ್ ಒಂದಕ್ಕೆ ರಾತ್ರಿಭೋಜನಕ್ಕೆ ಹೋದರು. 'ಬಾಗಿಲು ಕಾಯುವ ಪೇದೆ', ಜೆಮ್ ಸೆಟ್ ಜಿ ಟಾಟಾರವರನ್ನು ಹಾಗೆಯೇ ಹೊರಗೆನಿಲ್ಲಿಸಿ, ಅವರಗೆಳೆಯನನ್ನು ಒಳಗಡೆ ಬಿಟ್ಟನು. 'ಡೋರ್ ಮನ್', ಕೈಯಲ್ಲಿ "ಕೇವಲ ಯೂರೋಪಿಯನ್ನರಿಗೆ ಮಾತ್ರ," ಎಂಬ ಫಲಕ ಎದ್ದು ಕಾಣಿಸುತ್ತಿತ್ತು. ಈ ಘಟನೆ, 'ಜೆಮ್ ಸೆಟ್ ಜಿ' ಯವರ ಮನಸ್ಸಿನಮೇಲೆ, ತೀವ್ರವಾದ ಪರಿಣಾಮಬೀರಿತು. ಯೂರೋಪಿಯನ್ನರಿಗೆ ತಲೆಯಮೇಲೆ ಹೊಡೆಯುವಂತಹ, ಭಾರತೀಯ ರೆಸ್ಟೋರೆಂಟ್ ಒಂದನ್ನು ನಿರ್ಮಿಸಿ ಭಾರತಕ್ಕೆ ಬರುವ ಯಾತ್ರಾರ್ಥಿಗಳಿಗೆಲ್ಲಾ/ಪರ್ಯಟಕರಿಗೆಲ್ಲಾ, ಒದಗಿಸುವ ಬೃಹತ್ ಆಸೆಯನ್ನು ಅವರು ಅಂದೇ ಮನಗಂಡರು. ೧೯೦೨ ರಲ್ಲಿ, ತಾವೇ ಇಂಗ್ಲೆಂಡ್ ಮತ್ತು ಯೋರೋಪ್ ದೇಶಗಳನ್ನು ಸುತ್ತಿ, ಅಲ್ಲಿನ ಪ್ರಮುಖ ಹೋಟೆಲ್ ಗಳ ರೀತಿ-ನೀತಿಗಳನ್ನು ಸರ್ವೆ ಮಾಡಿದರು. 'ಸೋಡಾ' ಮತ್ತು 'ಐಸ್' ತಯಾರಿಸುವ ಯಂತ್ರ, ಒಂದು ಬಟ್ಟೆ ಒಗೆಯುವ ಯಂತ್ರ ,(Washing machine) ಹಾಗೂ ಎಲೆಕ್ಟ್ರಿಕ್ ಜನರೇಟರ್, ಯಂತ್ರಗಳನ್ನು ಖರೀಸಿದರು. ಲಂಡನ್ ನಿಂದಲೇ ತಮ್ಮ ಮಗ ದೊರಾಬ್ ಟಾಟಾನಿಗೆ, ತಾಜ್ ಹೋಟೆಲ್ ಗೆ, 'ಟರ್ಕಿಷ್ ಸ್ನಾನಗೃಹ', 'ಪುಟ್ಟ ಅಂಚೆ-ಕಛೇರಿ,' 'ಔಷಧಿಸಾಮಗ್ರಿಗಳನ್ನು ಮಾರಾಟಮಾಡುವ ಅಂಗಡಿ ', ಹಾಗೂ ೨೪ ಘಂಟೆ, ಹೋಟೆಲ್ ನ ಅತಿಥೇಯರಿಗೆ ಆರೋಗ್ಯವನ್ನು ತಪಾಸಣೆಮಾಡಲು, 'ತಜ್ಞ ವೈದ್ಯ' ರನ್ನು ನೇಮಿಸಲು ಮನವಿಮಾಡಿಕೊಂಡರು. ೧೯೦೩ ರಲ್ಲಿ ನಡೆದ ಪ್ರಾರಂಭೋತ್ಸವದ ದಿನ, ೧೦೦ ಜನ ಪ್ರಮುಖ ಗಣ್ಯ ಅತಿಥಿಗಳ ಸಮ್ಮುಖದಲ್ಲಿ, ಸಾಯಂಕಾಲದ ಕಡಲಬಳಿಯ 'ರಮಣೀಯ ಸೂರ್ಯಾಸ್ತ' ವನ್ನು ನೋಡಿ ಆನಂದಿಸಿದರು. ಸ್ವಲ್ಪಹೊತ್ತಿನಲ್ಲಿ ಶುರುವಾದ ಕತ್ತಲಿನರಾತ್ರಿಗೆ, ಝಗ-ಝಗಿಸುವ ವಿದ್ಯುತ್ ದೀಪಗಳಿಂದ ಹೋಟೆಲ್ ಕಟ್ಟಡಕ್ಕೆ ಮಾಡಿದ ಅಲಂಕಾರವನ್ನು ಬೊಂಬಾಯಿನ ಸಾರ್ವಜನಿಕ ಕಟ್ಟಡಗಳಿಗೆ ಅಳವಡಿಸಿದ್ದು ಅದೇ ಮೊದಲು. ಒಳಗಿನ 'ಸ್ವೀಟ್ 'ನಲ್ಲಿ ಅವರ ಆಪ್ತರಾದ, ಕೇವಲ ೧೭ ಜನ 'ಖಾಸ್ ಮೆಹಮಾನ್,' ಗಳಿದ್ದರು-ಜಮ್ ಸೆಟ್ ಜಿ ಯವರೂ ಸೇರಿದಂತೆ. ದೂರದ ಕಡಲಿನಲ್ಲಿ, ಚುಕ್ಕಿಗಳಂತೆ ಕಾಣುವ ಚಿಕ್ಕ-ಚಿಕ್ಕ ನಾವೆಗಳು, ಮಿನುಹಿಡಿಯುವ ಬೆಸ್ತರ ದೋಣಿಗಳು, ದೂರದಲ್ಲಿ ಲಂಗರ್ ಹಾಕ್ಕಿ ಸ್ಥಳಕ್ಕಾಗಿ ಕಾಯುತ್ತಿರುವ ವಿದೇಶಿ ಜಹಜುಗಳು ಇದ್ದವು. ನಂತರದ ದಶಕಗಳಲ್ಲಿ ಗುಡ್ಡದ ಬಳಿ,'ಪೆಟ್ರೋಲ್ ಎಣ್ಣೆ ಶುದ್ಧೀಕರಣದ ಕಾರ್ಖಾನೆ' ಯ ಚಿಮಿನಿಯಲ್ಲಿ ಹೊಗೆಯಜೊತೆ, 'ಬೆಂಕಿಜ್ವಾಲೆಗಳು' ಗಾಳಿಯಲ್ಲಿ ಮೇಲಕ್ಕೇರುವ ದೃಷ್ಯ ಕಾಣಿಸತೊಡಗಿದವು.
ದೊರೆಯುವ ಸೌಲಭ್ಯಗಳು
[ಬದಲಾಯಿಸಿ]ಬೊಂಬಾಯಿನ, 'ಹೋಟೆಲ್ ತಾಜ್ ಮಹಲ್' ನಲ್ಲಿ ದೊರೆಯುವ ವಸತಿ ಸೌಲಭ್ಯಗಳು ಹೀಗಿವೆ. ಒಟ್ಟಾರೆ ೫೮೨ (Centrally air-conditioned rooms) ಹವನಿಯಂತ್ರಿತ ರೂಂ ಗಳಿವೆ. ಇದರ ಜೊತೆಗೆ, ೪೯ (Suites) ಸ್ವೀಟ್ಸ್ ರೂಮ್ ಗಳ ಆಯ್ಕೆಯನ್ನು ಮಾಡಿಕೊಳ್ಳಬಹುದು :
- (Tower Wing Rooms) ,ಟವರ್ ವಿಂಗ್ ರೂಮ್ಗಳು.
- (Heritage Wing rooms), ಹೆರಿಟೇಜ್ ವಿಂಗ್ ರೂಮ್ಗಳು.
- (ತಾಜ್ (Club and Suites) (Junior, Executive, Large, Luxury, Grand Luxe Suites). ತಾಜ್ ಕ್ಲಬ್ ಮತ್ತು ಸ್ವೀಟ್ಸ್ಗಳು.
- ವಿಶಾಲ ಹಾಗೂ ಭವ್ಯವಾದ, ಉತ್ತಮ ವ್ಯವಸ್ಥೆಯ ಕೊಟಢಿಗಳು, ಮತ್ತು ವೇಗದ (Internet access) ಇಂಟರ್ನೆಟ್ ಸೌಲಭ್ಯಗಳು.
- (Interactive televisions onnectivity), ವಿಶ್ವದಾದ್ಯಂತ ಯವಹರಿಸಲು ದೊರೆಯುತ್ತವೆ. (Conference) ಕಾನ್ಫರೆನ್ಸ್ ಮತ್ತು (Banquet Facilities) ಬ್ಯಾಂಕ್ವೆಟ್ ಅನುಕೂಲತೆಗಳು ದೊರೆಯುತ್ತವೆ.
- ತಾಜ್ ಹೋಟೆಲ್ ನಲ್ಲಿ ಮೀಟಿಂಗ್ ರೂಂ ಗಳು, ಮತ್ತು ಬ್ಯಾಂಕ್ವೆಟ್ ಫೆಸಿಲಿಟಿಗಳು. ೨೪-ಗಂಟೆ ಎಲ್ಲಾ ಸೌಲಭ್ಯಗಳನ್ನೂ ಅಳವಡಿಸಿದ ಬಿಸಿನೆಸ್ ಸೆಂಟರ್ ೮ ಮೀಟಿಂಗ್ ರೂಮ್ಸ್ ನಲ್ಲಿ -'ಇಂಟರ್ನೆಟ್ ಕನೆಕ್ಟಿವಿಟಿ', 'ವರ್ಕ್ ಸ್ಟೇಶನ್ಸ್', 'ಮಲ್ಟಿಮೀಡಿಯ ಕಂಪ್ಯುಟರ್ಸ್', 'ಲ್ಯಾಪ್ ಟಾಪ್ಸ್', 'ಪೋರ್ಟಬಲ್ ಪ್ರಿಂಟರ್ಸ್' ಮತ್ತು 'ಸೆಲ್ ಫೋನ್ಸ್', 'ಕಲರ್ ಕಾಪಿಯರ್ ಫೆಸಿಲಿಟಿ' ಮತ್ತು 'ಸೆಕ್ರೆಟರಿಯಲ್ ಸೇವೆ'. 'ಇಂಟರ್ ಪ್ರಿಟೇಶನ್' / 'translation' ಸಲಭ್ಯಗಳು ಬೇಕೆಂದು ತಿಳಿಸಿದರೆ,೧೨ ಗಳು ಲಭ್ಯವಿವೆ.
- ೨೫ ರಿಂದ ೫೦೦ ಜನ ಕೂಡುವ ’ಹವಾನಿಯಂತ್ರಿತ ಆಡಿಟೋರಿಯಮ್ ” ಇದೆ. ಅಥವಾ ಬೇಕಾದರೆ, ೧೮ ರಿಂದ ೨,೦೦೦ ಜನರಿಗೆ,’ ಕಾಕ್ ಟೇಲ್ ಪಾರ್ಟಿ ’ಗೆ ಅಣಿಮಾಡಲು/ರಿಸೆಪ್ಶನ್ಸ್, ಮಾಡಬಯಸುವವರಿಗೆ, ಇದರಬಳಿಯೇ”(state-of-the-art),’ ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ಕೂಡಿದ, ”ಕಾನ್ಫರೆನ್ಸ್ ಹಾಲ್ ’ನ ಸೌಲಭ್ಯವೂ ದೊರೆಯುತ್ತದೆ.
ಮುಂಬಯಿನ 'ಹೋಟೆಲ್ ತಾಜ್ ಮಹಲ್,'
[ಬದಲಾಯಿಸಿ]'ಗಾಲ್ಫ್ ಆಟ' ಕ್ಕೆ ತಕ್ಕ ಏರ್ಪಾಟುಗಳು, 'ಬ್ಯಾಡ್ ಮಿಂಟನ್', 'ಸ್ಕ್ಯಾಷ್', 'ಬಿಲ್ಲಿಯರ್ಡ್ಸ್', 'ಟೆನ್ನಿಸ್' ಮತ್ತು 'ಟೇಬಲ್ ಟೆನ್ನಿಸ್' ಆಟಕ್ಕೆ ಅನುಕೂಲ ಕಲ್ಪಿಸುತ್ತಾರೆ. ಇದಕ್ಕೆ ಮೊದಲೇ ಮುಂಗಡವಾಗಿ ತಿಳಿಸಬೇಕು. ೨೪-ಗಂಟೆ 'ರೂಮ್ ಸರ್ವಿಸ್,' ಮತ್ತು 'ಲಾಂಡ್ರಿ ಸರ್ವಿಸ್', ಸಿಗುತ್ತದೆ. ಕಾಲಕಳೆಯಲು ಸಿಗುವ ಕೆಲವು ಸಾಧನಗಳು. 'ತಾಜ್ ಮಹಲ್ ಹೋಟೆಲ್ ಈಜುಕೊಳ', 'ಫಿಟ್ ನೆಸ್ ಸೆಂಟರ್', 'ಬ್ಯೂಟಿ ಪಾರ್ಲರ್', 'ಬಾರ್ಬರ್ ಶಾಪ್', 'ಟ್ರಾವೆಲ್ ಡೆಸ್ಕ್', ಕಾರ್ ಬಾಡಿಗೆಗೆ ಸಿಗುತ್ತದೆ. 'ಪ್ಯಾಸ್ಟ್ರಿ ಶಾಪ್', 'ಬುಕ್ ಶಾಪ್', 'ಶಾಪಿಂಗ್ ಅರ್ಕೇಡ್', 'ಕರೆನ್ಸಿ ಎಕ್ಸ್ಚೇಂಜ್', ಕರೆದ ತಕ್ಷಣ ಡಾಕ್ಟರ್ ಸಿಗುತ್ತಾರೆ. 'ಬೇಬಿಸಿಟಿಂಗ್'. ಬೇಕಾದಹಾಗೆ ಹಬೆಯ ಬಳಕೆ, 'ಸೌನ', 'jakuzi' ಮತ್ತು 'ಜೆಮ್ನಾಸಿಯುಮ್', 'ಫಿಟ್ ನೆಸ್ ಸೆಂಟರ್', ಎಲ್ಲಾ ಅತಿಥಿಗಳಿಗೂ ತಾಜ್ ಗೆ ದೊರಕುವ ಸೌಲಭ್ಯ.
'ತಾಜ್ ಮಹಲ್ ಹೋಟೆಲ್,' ಕಟ್ಟಿರುವ ಭವ್ಯ ಪರಿಸರ
[ಬದಲಾಯಿಸಿ]ಮುಖ್ಯವಾಗಿ ಹೇಳಬೇಕೆಂದರೆ,’ತಾಜ್ ಮಹಲ್ ಹೋಟೆಲ್’ ನಿರ್ಮಿಸಲು ಬೊಂಬಾಯಿನಲ್ಲಿ ಈಗಿರುವ ಜಾಗಕ್ಕಿಂತ ಉತ್ತಮಜಾಗ ಸಿಗುವುದು ದುರ್ಲಭ. ಜೆ.ಎನ್.ಟಾಟರವರ ದೂರದೃಷ್ಟಿ ಹಾಗೂ ದೈತ್ಯ ಪ್ರತಿಭೆಯನ್ನು ಸಾಬೀತು ಮಾಡುವಂತಿರುವ ಈ ಸ್ಥಳ, ಹೇಳಿಮಾಡಿಸಿದ ಜಾಗವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಪೊಲೊ ಬಂದರ್ ಹತ್ತಿರ, ನಾರಿಮನ್ ಪಾಯಿಂಟ್ ಮತ್ತು, ಗೇಟ್ವೆ ಆಫ್ ಇಂಡಿಯ,ಕ್ಕೆ ಸಮೀಪವಾಗಿದೆ. ಮುಂಬಯಿ ನ, "ಸಹಾರಾ ಏರ್ಪೋರ್ಟ್", ನಿಂದ ೩೨ ಕಿ.ಮೀ. ಹಾಗೂ, "ಛತ್ರಪತಿ ಶಿವಾಜಿಮಹರಾಜ್ ರೈಲ್ವೆ ಸ್ಟೇಶನ್', '(Victoria Terminus)' ನಿಂದ ಕೇವಲ, ೨.೫ ಕಿ.ಮೀ.ದೂರದಲ್ಲಿದೆ.
ಜೆ.ಎನ್.ಟಾಟರವರೇ ಖುದ್ದಾಗಿ ಮೇಲ್ವಿಚಾರಣೆಮಾಡಿದರು
[ಬದಲಾಯಿಸಿ]ಮುಂಬಯಿ ನಗರದ ತಾಜ್ ಮಹಲ್ ಹೋಟೆಲ್ ಕಟ್ಟಿರುವ ಜಾಗ, ಜಮ್ ಸೆಟ್ ಜಿಯವರು ತಾವೇ ಖುದ್ದಾಗಿ ನಿಂತು ಅತ್ಯಂತ ಎಚ್ಚರಿಕೆಯಿಂದ ಚುನಾಯಿಸಿ, ನಿರ್ಮಿಸಿರುವ ದಕ್ಷಿಣ ಮುಂಬಯಿ ನ ಭೂಭಾಗದ ಅಂತಿಮ ದಡವಾಗಿದೆ. ಜಮ್ ಸೆಟ್ ಜಿ ಯವರು ಯಾವಾಗಲೂ ಮುಂದಿನ '೧೦೦ ವರ್ಷದ ಪೀಳಿಗೆ', ಗೆ ಬೇಕಾದ ಅನುಕೂಲಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು, ಅದಕ್ಕೆ ಸಿದ್ಧವಾಗುತ್ತಿದ್ದ ದೂರಾಲೋಚನೆಯ ವ್ಯಕ್ತಿ. ದಕ್ಷಿಣ ಬೊಂಬಾಯಿನ ಅತ್ಯಂತ ಕೊನೆಯ ತುದಿಯಲ್ಲಿ ನಿರ್ಮಿಸಿರುವ ಈ ಅತ್ಯಂತ ಜನಪ್ರಿಯ ತಾಣಕ್ಕೆ, ವಿಶ್ವದ ಎಲ್ಲ ರಾಷ್ಟ್ರಗಳ ಪ್ರವಾಸಿಗಳು, ಯಾತ್ರಿಕರು ಬಂದು ಭೆಟ್ಟಿಮಾಡುತ್ತಾರೆ. ಹೋಟೆಲ್ ನಿಂದ ಹೊರಗೆಬಂದರೆ ಸಾಕು, ಅರಬ್ಬೀಸಮುದ್ರ ಸಿಗುತ್ತದೆ. ಹೋಟೆಲ್ ಮುಂದೆಯೇ " ಗೇಟ್ವೆ ಆಫ್ ಇಂಡಿಯ ", ಸ್ಮಾರಕವಿದೆ. 'ತಾಜ್ ಹೋಟೆಲ್ ', ’ಅಂತರರಾಷ್ಟ್ರೀಯ ಹೋಟೆಲ್ ಸಂಘ ” ದ ಸದಸ್ಯತ್ವ ಪಡೆದಿದೆ. ಆದ್ದರಿಂದ ತಾಜ್ ಹೋಟೆಲ್, 'Leading Hotels of the World' ಗೆಸ್ಟ್ ಗಳಿಗೆ, ಆದರದ ಆತಿಥ್ಯವನ್ನು ಒದಗಿಸುವ ಹೊಣೆಯನ್ನು ಹೊತ್ತಿದೆ. ಇತರ ಪ್ರವಾಸಿಗಳಿಗೆ, ಬೊಂಬಾಯಿನ ಈ ಹೋಟೆಲ್ ನಲ್ಲಿ, ಹಳೆಯ ಮತ್ತು ಅತ್ಯಾಧುನಿಕ, ಅಮೆನಿಟಿಗಳು, ಸೇವೆಗಳು,ನಿಯಮಿತಸಮಯಗಳಲ್ಲಿ ಲಭ್ಯವಾಗುತ್ತವೆ.