ತಾನಿಯಾ ಸಚ್ದೇವ್
ತಾನಿಯ ಸಚ್ದೇವ್ | |||||||||||
---|---|---|---|---|---|---|---|---|---|---|---|
![]() ೨೦೨೩ರಲ್ಲಿ ತೆಗೆದ ತಾನಿಯರ ಚಿತ್ರ | |||||||||||
Country | India | ||||||||||
Born | Delhi, India | ೨೦ ಆಗಸ್ಟ್ ೧೯೮೬||||||||||
Title |
| ||||||||||
Peak rating | 2443 (September 2013) | ||||||||||
|
ತಾನಿಯಾ ಸಚ್ದೇವ್ (ಜನನ 20 ಆಗಸ್ಟ್ 1986)[೧] ಒಬ್ಬ ಭಾರತೀಯ ಚೆಸ್ ಆಟಗಾರ್ತಿಯಾಗಿದ್ದು, ಅವರು ಫಿಡೆ ಇಂಟರ್ನ್ಯಾಷನಲ್ ಮಾಸ್ಟರ್ (ಐಎಂಎಂ) ಮತ್ತು ವುಮನ್ ಗ್ರ್ಯಾಂಡ್ಮಾಸ್ಟರ್ (ಡಬ್ಲ್ಯುಜಿಎಂ) ಪ್ರಶಸ್ತಿಗಳನ್ನು/ಶೇಣಿಯನ್ನು ಹೊಂದಿದ್ದಾರೆ. ಅವರು 2006 ಮತ್ತು 2007 [೨][೩]ರಲ್ಲಿ ಎರಡು ಬಾರಿ ಭಾರತೀಯ ಮಹಿಳಾ ಚೆಸ್ ಚಾಂಪಿಯನ್ಶಿಪ್ ಗೆದ್ದಿದ್ದಾರೆ. 2007[೪][೫] ರಲ್ಲಿ ಒಂದು ಬಾರಿ ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್ ಆಗಿದ್ದಾರೆ. ೨೦೧೬,[೬],೨೦೧೮[೭] ಮತ್ತು ೨೦೧೯[೮] ರಲ್ಲಿ ಮೂರು ಬಾರಿ ಕಾಮನ್ವೆಲ್ತ್ ಮಹಿಳಾ ಚೆಸ್ ಚ್ಯಾಂಪಿಯನ್ ಆಗಿದ್ದಾರೆ. ಆಕೆ ಚೆಸ್ ನಿರೂಪಕಿಯೂ ಆಗಿದ್ದಾರೆ.
ಆರಂಭಿಕ ವರ್ಷಗಳು
[ಬದಲಾಯಿಸಿ]ದೆಹಲಿಯಲ್ಲಿ ಜನಿಸಿದ ಸಚ್ದೇವ್ ಅವರಿಗೆ 6ನೇ ವಯಸ್ಸಿನಲ್ಲಿ ಆಕೆಯ ತಾಯಿ ಅಂಜು ಈ ಆಟವನ್ನು ಪರಿಚಯಿಸಿದರು.[೯]. ಆಕೆಯ ಪೋಷಕರು ಆಕೆಗೆ ವೃತ್ತಿಪರ ತರಬೇತಿಯನ್ನು ನೀಡಿದರು. ಆಕೆ ತನ್ನ ಎಂಟನೇ ವಯಸ್ಸಿನಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದರು. ಆಕೆಯ ಆರಂಭಿಕ ವರ್ಷಗಳಲ್ಲಿ ಕೆ. ಸಿ. ಜೋಶಿ ಅವರಿಂದ ತರಬೇತಿ ಪಡೆದಿದ್ದಳು. ಬಾಲ್ಯದಲ್ಲಿ ಅವರು ಅನೇಕ ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ೧೯೯೮ರಲ್ಲಿ ಅವರು 12 ವರ್ಷದೊಳಗಿನ ಭಾರತೀಯ ಚಾಂಪಿಯನ್ ಆಗಿದ್ದರು[೧೦]. 2000 ರಲ್ಲಿ ಇವರು ಏಷ್ಯನ್ U14 ಬಾಲಕಿಯರ ಚಾಂಪಿಯನ್ ಮತ್ತು 1998 ರಲ್ಲಿ ವಿಶ್ವ ಯುವ ಚೆಸ್ ಚಾಂಪಿಯನ್ಶಿಪ್ ಬಾಲಕಿಯರ U12 ವಿಭಾಗದಲ್ಲಿ ಕಂಚಿನ ಪದಕದ ಗೆದ್ದಿದ್ದಾರೆ . 2002ರಲ್ಲಿ ಮರವಿಲಾದಲ್ಲಿ ನಡೆದ ಏಷ್ಯನ್ ಜೂನಿಯರ್ ಗರ್ಲ್ಸ್ ಚಾಂಪಿಯನ್ಶಿಪ್ ಅನ್ನು ಗೆದ್ದರು.[೧೧]

ವೃತ್ತಿಜೀವನ
[ಬದಲಾಯಿಸಿ]2005ರಲ್ಲಿ ಸಚ್ದೇವ್ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದ ಎಂಟನೇ ಭಾರತೀಯ ಆಟಗಾರರಾದರು. ಅವರು 2006 ಮತ್ತು 2007ರಲ್ಲಿ ಭಾರತದ ರಾಷ್ಟ್ರೀಯ ಮಹಿಳಾ ಪ್ರೀಮಿಯರ್ ಚೆಸ್ ಚಾಂಪಿಯನ್ಶಿಪ್ ಗೆದ್ದರು. 2007ರಲ್ಲಿ ಆಕೆ ಟೆಹ್ರಾನ್ನಲ್ಲಿ ನಡೆದ ಒಂಬತ್ತು ಸುತ್ತುಗಳ ಪಂದ್ಯಾವಳಿಯಲ್ಲಿ 61⁄2 ಅಂಕಗಳೊಂದಿಗೆ ಮಹಿಳಾ ಏಷ್ಯನ್ ಚೆಸ್ ಚಾಂಪಿಯನ್ಷಿಪ್ ಅನ್ನು ಗೆದ್ದರು [೧೨]. ಆಕೆಗೆ 2009ರಲ್ಲಿ ಅರ್ಜುನ ಪ್ರಶಸ್ತಿ ನೀಡಲಾಯಿತು. 2016ರಲ್ಲಿ, ಸಚ್ದೇವ್ ಅವರು ರೇಕ್ಜಾವಿಕ್ ಓಪನ್ ನಲ್ಲಿ ಅತ್ಯುತ್ತಮ ಮಹಿಳಾ ಸ್ಪರ್ಧಿ ಎಂಬ ಪ್ರಶಸ್ತಿಯನ್ನು ಗೆದ್ದರು [೧೩][೧೪] . ಕಲುತಾರಾದಲ್ಲಿ ಮಹಿಳಾ ಕಾಮನ್ವೆಲ್ತ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದಿದ್ದರು.[೧೫]
ಅವರು 2008 ರಿಂದ ಮಹಿಳಾ ಚೆಸ್ ಒಲಿಂಪಿಯಾಡ್ಸ್ ನ ಭಾರತೀಯ ತಂಡದ ಭಾಗವಾಗಿದ್ದಾರೆ. ಇವರು 2009 ಮತ್ತು 2011 ರಲ್ಲಿ ಮಹಿಳಾ ವಿಶ್ವ ತಂಡ ಚೆಸ್ ಚಾಂಪಿಯನ್ಶಿಪ್ ನಲ್ಲಿ ಭಾರತ ತಂಡದ ಭಾಗವಾಗಿದ್ದರು.2003 ರಿಂದ ಮಹಿಳಾ ಏಷ್ಯನ್ ತಂಡ ಚೆಸ್ ಚಾಂಪಿಯನ್ಸಿಪ್, 2006 ರ ಏಷ್ಯನ್ ಗೇಮ್ಸ್ ಮತ್ತು 2009 ರ ಏಷ್ಯನ್ ಒಳಾಂಗಣ ಕ್ರೀಡಾಕೂಟಗಳಲ್ಲಿ ಭಾರತೀಯ ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದಾರೆ. ಸಚ್ದೇವ್ ಅವರು ಇಸ್ತಾಂಬುಲ್ನಲ್ಲಿ ನಡೆದ 2012ರ ಮಹಿಳಾ ಚೆಸ್ ಒಲಿಂಪಿಯಾಡ್ನಲ್ಲಿ ಬೋರ್ಡ್ 3ರ ಆಟಕ್ಕಾಗಿ ವೈಯಕ್ತಿಕ ಕಂಚಿನ ಪದಕವನ್ನು ಗೆದ್ದರು. ಇವರು ನಾಲ್ಕು ತಂಡದ ಬೆಳ್ಳಿ ಪದಕಗಳನ್ನು (2008,2009,2012, ಮತ್ತು 2014ರಲ್ಲಿ) ಮತ್ತು ನಾಲ್ಕು ವೈಯಕ್ತಿಕ ಪದಕಗಳನ್ನು (ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ) ಮಹಿಳಾ ಏಷ್ಯನ್ ತಂಡ ಚಾಂಪಿಯನ್ಶಿಪ್ನಲ್ಲಿ ಗೆದ್ದಿದ್ದಾರೆ .[೧೬]
2015ರಲ್ಲಿ ಸಚ್ದೇವ್ ಏಷ್ಯನ್ ಕಾಂಟಿನೆಂಟಲ್ ಮಹಿಳಾ ರಾಪಿಡ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು.[೧೭]
ಸಚ್ದೇವ್ ಅವರು ಚೆಸ್ ಬೇಸ್ ಫ್ರಿಟ್ಜ್ಟ್ರೈನರ್ ಸ್ಟ್ರಾಟಜಿ ಡಿವಿಡಿ ಯನ್ನು ಪ್ರಸ್ತುತಪಡಿಸಿದ್ದಾರೆ ಮತ್ತು 2013ರಲ್ಲಿ ಚೆನ್ನೈನಲ್ಲಿ ನಡೆದ ಮ್ಯಾಗ್ನಸ್ ಕಾರ್ಲ್ಸನ್ ಮತ್ತು ವಿಶ್ವನಾಥನ್ ಆನಂದ್ ನಡುವಿನ ವಿಶ್ವ ಚಾಂಪಿಯನ್ಷಿಪ್ ಪಂದ್ಯದ ಅಧಿಕೃತ ವೀಕ್ಷಣಾ ವಿವರಣೆಗಾರ ತಂಡದ ಸದಸ್ಯರಾಗಿದ್ದರು [೧೮]. ಜುಲೈ 2019 ರಲ್ಲಿ, ಸಚ್ದೇವ್ ಕಾಮನ್ವೆಲ್ತ್ ಮಹಿಳಾ ಚಾಂಪಿಯನ್ಶಿಪ್ ಗೆದ್ದರು ಮತ್ತು ಮುಂದಿನ ವರ್ಷವೂ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡರು.[೧೯][೨೦]
ಸೆಪ್ಟೆಂಬರ್ 2024 ರಲ್ಲಿ ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ 45 ನೇ ಚೆಸ್ ಒಲಿಂಪಿಯಾಡ್ನಲ್ಲಿ ಮಹಿಳಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಆ ವರ್ಷ ದೇಶವು ಮೊದಲ ಬಾರಿಗೆ ಒಲಿಂಪಿಯಾಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತು..[೨೧][೨೨][೨೩] ಫೆಬ್ರವರಿ 2025ರಲ್ಲಿ ಅವರು ಬಿಬಿಸಿ ಚೇಂಜ್ಮೇಕರ್ ಆಫ್ ದಿ ಇಯರ್ 2024 ಪ್ರಶಸ್ತಿಯನ್ನು ಪಡೆದರು. [೨೪]
ವೈಯಕ್ತಿಕ ಜೀವನ
[ಬದಲಾಯಿಸಿ]ಸಚ್ದೇವ್ ದೆಹಲಿಯ ವಸಂತ್ ವಿಹಾರದ ಮಾಡರ್ನ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಪದವಿ ಪಡೆದರು. [ಸಾಕ್ಷ್ಯಾಧಾರ ಬೇಕಾಗಿದೆ][citation needed]
ಆಕೆಯನ್ನು ರೆಡ್ ಬುಲ್ ಸಂಸ್ಥೆ ಪ್ರಾಯೋಜಿಸಿದೆ. ಅವರು ನವೆಂಬರ್ 2014 ರಲ್ಲಿ ದೆಹಲಿ ಮೂಲದ ವಾಸ್ತುಶಿಲ್ಪಿ ವಿರಾಜ್ ಕಟಾರಿಯಾರನ್ನು ವಿವಾಹವಾದರು.[೨೫][೨೬]
ಉಲ್ಲೇಖಗಳು
[ಬದಲಾಯಿಸಿ]- ↑ "Tania Sachdev". Red Bull (in ಇಂಗ್ಲಿಷ್). Retrieved 30 January 2018.
- ↑ "Tania Sachdev | Chess Celebrities". Chess.com.
- ↑ "The evolution of women's chess in India". ChessBase India. 8 March 2021.
- ↑ "Tania Sachdev | Chess Celebrities". Chess.com.
- ↑ "Tania sachdev wins Asian chess title". Mumbai Mirror.
- ↑ "Tania wins maiden Commonwealth gold, sets eyes on 2016 Chess Olympiad". Hindustan Times. 9 August 2016.
- ↑ Kulkarni, Rakesh. "P. Karthikeyan, Tania Sachdev Win Commonwealth Titles". Chess.com.
- ↑ Rao, Rakesh (7 July 2019). "Commonwealth chess championship: Fantastic fifth for Abhijeet Gupta". The Hindu – via www.thehindu.com.
- ↑ "Tania Sachdev". Red Bull (in ಇಂಗ್ಲಿಷ್). Retrieved 30 January 2018.
- ↑ "Tania Sachdev joins the Chessdom commentators team". Chessdom. 6 November 2013. Retrieved 20 November 2013.
- ↑ "Deepan and Tania Champs, India sweeps all the titles". 25th Asian Juniors 2002, Sri Lanka (in ಇಂಗ್ಲಿಷ್). Colombo. Retrieved 7 November 2015 – via Tripod.
- ↑ "12th Asian Women Indevidual [sic] Chess Championship". Chess-Results.com (in ಇಂಗ್ಲಿಷ್). Retrieved 14 June 2021.
- ↑ Ramirez, Alejandro (20 March 2016). "Indian success in Iceland" (in ಇಂಗ್ಲಿಷ್). ChessBase.
- ↑ "Abhijeet wins Reykjavik Open; Tania makes Grandmaster norm". The Times of India (in ಇಂಗ್ಲಿಷ್). 17 March 2016. Retrieved 2016-08-31.
- ↑ Jayaratnam, Narayanaswamy (19 August 2016). "Gupta and Sachdev overall champions of Commonwealth Open Chess". Daily News (in ಇಂಗ್ಲಿಷ್). Retrieved 31 August 2016.
- ↑ "OlimpBase :: Women's Chess Olympiads :: Sachdev Tania". OlimpBase (in ಇಂಗ್ಲಿಷ್). Retrieved 14 June 2021.
- ↑ "Tania Sachdev wins silver in rapid chess | Chess News - Times of India". The Times of India (in ಇಂಗ್ಲಿಷ್). PTI. Aug 12, 2015. Retrieved 2021-07-03.
- ↑ Shah, Sagar (4 July 2014). "Improve Your Chess With Tania Sachdev". Chess News (in ಇಂಗ್ಲಿಷ್). ChessBase. Retrieved 5 September 2016.
- ↑ "Abhijeet Gupta wins the Commonwealth title for a record fifth time!". ChessBase India. 8 July 2019. Retrieved 2021-10-13.
- ↑ "Abhijeet Gupta wins the Commonwealth title for a record fifth time!". ChessBase India. 8 July 2019. Retrieved 2021-10-13.
- ↑ "68 years in the making: Olympiad golds mark milestones in Indian chess history". ESPN. Retrieved 3 October 2024.
- ↑ "Chess Olympiad: Double delight for India as they clinch gold medals in Open and Women's events; Gukesh, Arjun and Divya star once more". The Indian Express (in ಇಂಗ್ಲಿಷ್). 2024-09-22. Retrieved 2024-10-03.
- ↑ "45th Olympiad Chennai 2024 Women – Final Ranking after 11 Rounds". Chess-results.com. Archived from the original on 22 September 2024. Retrieved 22 September 2024.
- ↑ "Tania Sachdev receives BBC Changemaker of the Year 2024 award - ChessBase India". www.chessbase.in. 2025-02-20. Retrieved 2025-02-22.
- ↑ Bhalla, Ankita (4 November 2014). "Chess champ Tania Sachdev ties knot with Viraj Kataria in Delhi". The Times of India (in ಇಂಗ್ಲಿಷ್).
- ↑ "Tania Sachdev". Red Bull (in ಇಂಗ್ಲಿಷ್). Retrieved 30 January 2018.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Tania Sachdevರೇಟಿಂಗ್ ಟೆಂಪ್ಲೇಟು:FIDE
- Tania Sachdev365Chess.com ನಲ್ಲಿ ಚೆಸ್ ಆಟಗಳು
- Tania Sachdevಆಟಗಾರರ ಪ್ರೊಫೈಲ್ ಮತ್ತು ಆಟಗಳುChessgames.com