ವಿಷಯಕ್ಕೆ ಹೋಗು

ತೋಪುಖಾನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೋಪುಖಾನೆ (ಆಯುಧಾಗಾರ, ಶಸ್ತ್ರಾಗಾರ) ಎಂದರೆ ಆಯುಧಗಳು ಮತ್ತು ಯುದ್ಧಸಾಮಗ್ರಿಗಳನ್ನು ತಯಾರಿಸುವ, ಕಾಪಾಡಿಡಲಾಗುವ, ದುರಸ್ತಿ ಮಾಡಲಾಗುವ, ಸಂಗ್ರಹಿಸಿಡಲಾಗುವ, ಅಥವಾ ಪೂರೈಕೆ ಮಾಡಲಾಗುವ ಸ್ಥಳ. ಇವುಗಳ ಒಡೆತನವು ಖಾಸಗಿ ಅಥವಾ ಸಾರ್ವಜನಿಕವಾಗಿರಬಹುದು.

ಬಗೆಗಳು

[ಬದಲಾಯಿಸಿ]

ಒಂದು ಸಣ್ಣ ಸೈನ್ಯಕ್ಕೆ ಸಾಮಗ್ರಿ ಮತ್ತು ಉಪಕರಣಗಳನ್ನು ಒದಗಿಸಬಲ್ಲ ಕೆಳದರ್ಜೆಯ ಆಯುಧಾಗಾರವು ಪ್ರಯೋಗಶಾಲೆ, ಬಂದೂಕು ಹಾಗೂ ವಾಹನಗಳ ಕಾರ್ಖಾನೆಗಳು, ಸಣ್ಣ ಆಯುಧ ಸಾಮಗ್ರಿ, ಸಣ್ಣ ಆಯುಧಗಳು, ಕುದುರೆ ಸಜ್ಜು, ಗುಡಾರಗಳು ಮತ್ತು ಪುಡಿ ಕಾರ್ಖಾನೆಗಳನ್ನು ಹೊಂದಿರಬಹುದು; ಜೊತೆಗೆ ಅದು ದೊಡ್ಡ ಉಗ್ರಾಣಗಳನ್ನು ಹೊಂದಿರಬೇಕು. ಎರಡನೇ ದರ್ಜೆಯ ಆಯುಧಾಗಾರದಲ್ಲಿ, ಕಾರ್ಖಾನೆಗಳ ಬದಲಾಗಿ ಕಾರ್ಯಾಗಾರಗಳಿರುತ್ತವೆ. ಆಯುಧಾಗಾರವಿರುವ ಸ್ಥಳವು ಯುದ್ಧತಂತ್ರದ ಅಂಶಗಳಿಂದ ನಿರ್ಧರಿತವಾಗಿರಬೇಕು. ಮೊದಲನೇ ದರ್ಜೆಯ ಆಯುಧಾಗಾರವಾಗಿದ್ದರೆ, ಅದು ಕಾರ್ಯಾಚರಣೆಗಳು ಹಾಗೂ ಪೂರೈಕೆಯ ಕೇಂದ್ರಸ್ಥಾನದಲ್ಲಿ ಸ್ಥಿತವಾಗಿರಬೇಕು. ಅದು ಆಕ್ರಮಣದಿಂದ ಸುರಕ್ಷಿತವಾಗಿರಬೇಕು, ಮತ್ತು ಗಡಿರೇಖೆಗೆ ಬಹಳ ಹತ್ತಿರವಿರಬಾರದು, ಮತ್ತು ದೇಶದ ಸಂಪನ್ಮೂಲಗಳನ್ನು ಸರಾಗವಾಗಿ ಸೆಳೆಯುವಂತೆ ಸ್ಥಿತವಾಗಿರಬೇಕು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

 This article incorporates text from a publication now in the public domainChisholm, Hugh, ed. (1911). "Arsenal" . Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help)