ವಿಷಯಕ್ಕೆ ಹೋಗು

ತ್ರಿಪುರ ಸುಂದರಿ (ಕನ್ನಡ ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತ್ರಿಪುರ ಸುಂದರಿ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು 2023 ರ ಜನವರಿ 2 ರಿಂದ 7 ಅಕ್ಟೋಬರ್ 2023ರವೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಂಡಿತು.[]

ತ್ರಿಪುರ ಸುಂದರಿ (ಕನ್ನಡ ಧಾರಾವಾಹಿ)
ಶೈಲಿದೈನಂದಿನ ಧಾರಾವಾಹಿ
ನಿರ್ದೇಶಕರುವಿನೋದ್ ದೊಂಡಾಲೆ
ನಟರು
  • ದಿವ್ಯ ಸುರೇಶ್
  • ಅಭಿನವ್ ವಿಶ್ವನಾಥನ್
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು199
ನಿರ್ಮಾಣ
ನಿರ್ಮಾಪಕ(ರು)ವೃದ್ಧಿ ಕ್ರಿಯೆಷನ್ಸ್
ಕ್ಯಾಮೆರಾ ಏರ್ಪಾಡುಮಲ್ಟೀಕ್ಯಾಮೆರಾ
ಸಮಯ22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ವೃದ್ಧಿ ಕ್ರಿಯೆಷನ್ಸ್
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
ಮೂಲ ಪ್ರಸಾರಣಾ ಸಮಯ2 ಜನವರಿ 2023 (2023-01-02) – 6 ಅಕ್ಟೋಬರ್ 2023 (2023-10-06)
ಕಾಲಕ್ರಮ
ನಂತರಬಿಗ್‌ಬಾಸ್ ಕನ್ನಡ ಸೀಸನ್ 10


ಕಥಾವಸ್ತು

[ಬದಲಾಯಿಸಿ]

ಗಂಧರ್ವ ಲೋಕದ ಸುಂದರವಾದ ಹುಡುಗಿಯಾದ ಆಮ್ರಪಾಲಿ (ಅಮ್ಮು), ಗಂಧರ್ವ ಲೋಕದ ಏಕೈಕ ರಕ್ಷಕನಾದ ಗಂಧರ್ವ ರಾಜಕುಮಾರನನ್ನು(ಪ್ರದ್ಯುಮ್ನ) ಹುಡುಕುವ ಕಾರ್ಯಾಚರಣೆಯಲ್ಲಿದ್ದಾಳೆ. ಆಕೆಯ ಉದ್ದೇಶವು ಆಕೆಯನ್ನು ಅನಾನುಕೂಲ ಸ್ಥಳವಾದ ಭೂಲೋಕಕ್ಕೆ ಕರೆದೊಯ್ಯುತ್ತದೆ. ಅಮ್ಮು, ಪ್ರದ್ಯುಮ್ನನ ಕುಟುಂಬದೊಂದಿಗೆ ವಾಸಿಸಲು ಪ್ರಾರಂಭ ಮಾಡುತ್ತಾಳೆ. ಪ್ರದ್ಯುಮ್ನ ಈ ಕುಟುಂಬದ ವಾರಸುದಾರನಾಗಿರುತ್ತಾನೆ. ಸ್ವಲ್ಪ ದಿನಗಳ ನಂತರ ಪ್ರದ್ಯುಮ್ನನೇ ಗಂಧರ್ವ ರಾಜಕುಮಾರನೆಂದು ಅವಳಿಗೆ ಗೊತ್ತಾಗುತ್ತದೆ.

ಪಾತ್ರವರ್ಗ

[ಬದಲಾಯಿಸಿ]
  • ದಿವ್ಯಾ ಸುರೇಶ್[]: ಆಮ್ರಪಾಲಿ / ಅಮ್ಮು ಪಾತ್ರದಲ್ಲಿ, ಗಂಧರ್ವ ರಾಜಕುಮಾರಿಯಾಗಿ.
  • ಅಭಿನವ್ ವಿಶ್ವನಾಥನ್[]: - ಪ್ರದ್ಯುಮ್ನ ಪಾತ್ರದಲ್ಲಿ ಗಂಧರ್ವ ರಾಜಕುಮಾರನಾಗಿ. ಸತ್ಯಜಿತ್ ಮತ್ತು ದೇವಯಾನಿಯ ದತ್ತು ಮಗ.
  • ರೇಖಾ ಪ್ರಸಾದ್[]: ದೇವಯಾನಿಯಾಗಿ, ಬದಲಿಗೆ ಸಂಗೀತಾ ಭಟ್
  • ಹರ್ಷ ನಾಗ್ಪಾಲ್: ನೀನಾದ್ ಪಾತ್ರದಲ್ಲಿ, ಪ್ರದ್ಯುಮ್ನ್, ಛಾಯಾ , ಅನ್ಯಾ ಮತ್ತು ಬೃಂದಾಳ ಸಹೋದರನಾಗಿ.
  • ಪೃಥ್ವಿ: ಬ್ರುಂಡನಾಗಿ
  • ಹರ್ಷಿತಾ ಛಾಯಾ ಪಾತ್ರದಲ್ಲಿ
  • ರೋಹಿತ್ ಶ್ರೀನಾಥ್

ವಿಶೇಷಪಾತ್ರದಲ್ಲಿ

[ಬದಲಾಯಿಸಿ]
  • ದಿಶಾ ಮದನ್[]: ಪ್ರದ್ಯುಮ್ನನ ಹೆತ್ತತಾಯಿ ಪಾತ್ರದಲ್ಲಿ

ನಿರ್ಮಾಣ

[ಬದಲಾಯಿಸಿ]

ಈ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ವೃದ್ಧಿ ಕ್ರಿಯೇಷನ್ಸ್ ನ ಮೊದಲ ಕಾಲ್ಪನಿಕ ನಿರ್ಮಾಣವಾಗಿದೆ. ಮೊದಲ ಪ್ರೊಮೊವನ್ನು 12 ಡಿಸೆಂಬರ್ 2022 ರಂದು ಪ್ರಾರಂಭಿಸಲಾಯಿತು. ಮೊದಲ ಪ್ರದರ್ಶನವು 2 ಜನವರಿ 2023 ರಂದು ಪ್ರಸಾರವಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "Daily soap 'tripura sundari' completes 100 episodes - Times of India". The Times of India.
  2. "Will Divya Suresh act in the TV show tripura sundari? - Times of India". The Times of India.
  3. "Abhinav Vishwanathan to play the lead role in upcoming daily soap 'tripura sundari' - Times of India". The Times of India.
  4. "Rekha to make her small screen debut with fantasy drama - Times of India". The Times of India.
  5. "Disha Madan to play a cameo in upcoming daily soap 'tripura sundari' - Times of India". The Times of India.
  6. "Kannada TV show 'tripura sundari' gets dubbed in Bengali - Times of India". The Times of India.


ಬಾಹ್ಯಕೊಂಡಿಗಳು

[ಬದಲಾಯಿಸಿ]