ವಿಷಯಕ್ಕೆ ಹೋಗು

ತ್ರಿವೇಣಿ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಲೆಫ್ಟಿನೆಂಟ್

ತ್ರಿವೇಣಿ ಸಿಂಗ್

ಅಶೋಕ ಚಕ್ರ(ಮಿಲಿಟರಿ ಅಲಂಕಾರ)
ಲೆಫ್ಟಿನೆಂಟ್ ತ್ರಿವೇಣಿ ಸಿಂಗ್ ಅವರ ಭಾವಚಿತ್ರ
ಜನನ೧ ಫ಼ೆಬ್ರವರಿ ೧೯೭೮
ನಾಂಕುಮ್‌ ಜಾರ್ಖಂಡ್‌
ಮರಣ೨ ಜನವರಿ ೨೦೦೪
ಜಮ್ಮು ಮತ್ತು ಕಾಶ್ಮೀರ
ವ್ಯಾಪ್ತಿಪ್ರದೇಶ ಭಾರತ
ಶಾಖೆ ಭಾರತೀಯ ಭೂಸೇನೆ
ಸೇವಾವಧಿ೨೦೦೧- ೨೦೦೪
ಶ್ರೇಣಿ(ದರ್ಜೆ) ಲೆಫ್ಟಿನೆಂಟ್
ಘಟಕಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳ
ಪ್ರಶಸ್ತಿ(ಗಳು) ಅಶೋಕ ಚಕ್ರ

ಲೆಫ್ಟಿನೆಂಟ್ ತ್ರಿವೇಣಿ ಸಿಂಗ್ (೧ ಫೆಬ್ರವರಿ ೧೯೭೮ - ೨ ಜನವರಿ ೨೦೦೪) ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳದಿಂದ ಭಾರತೀಯ ಸೇನೆಯ ಅಧಿಕಾರಿಯಾಗಿದ್ದರು ಮತ್ತು ಜಮ್ಮು-ರೈಲ್ವೆ ನಿಲ್ದಾಣದ ಮೇಲಿನ ಭಯೋತ್ಪಾದಕ ದಾಳಿಯಲ್ಲಿನ ಕ್ರಮಗಳಿಗಾಗಿ ಭಾರತದ ಅತ್ಯುನ್ನತ ಶಾಂತಿಕಾಲದ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿಯನ್ನು ಜನವರಿ ೨, ೨೦೦೪ ರಂದು ಜಮ್ಮು-ರೈಲ್ವೆ ನಿಲ್ದಾಣದಲ್ಲಿ ಮರಣೋತ್ತರವಾಗಿ ನೀಡಲಾಯಿತು.[]

 

ತ್ರಿವೇಣಿ ಸಿಂಗ್ ಅವರು ತಮ್ಮ ಘಟಕದ ಸಹಾಯಕರಾಗಿದ್ದರು ಮತ್ತು ಜಮ್ಮು- ರೈಲ್ವೆ ನಿಲ್ದಾಣದಲ್ಲಿ ಭಯೋತ್ಪಾದಕ ದಾಳಿಯ ಬಗ್ಗೆ ಮಾಹಿತಿ ಬಂದಾಗ ಕಮಾಂಡಿಂಗ್ ಆಫೀಸರ್ ಕಚೇರಿಗೆ ಹೊಂದಿಕೊಂಡಿರುವ ಕೋಣೆಯಲ್ಲಿರುತಿದ್ದರು. ಅವರು ಕರೆಗೆ ಹಾಜರಾಗುವ ಅಗತ್ಯವಿಲ್ಲದಿದ್ದರೂ (ಬ್ಯಾರಕ್‌ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಮತ್ತು ಸೈನಿಕರನ್ನು ರೈಲ್ವೆ ನಿಲ್ದಾಣಕ್ಕೆ ತೆರಳುವಂತೆ ಎಚ್ಚರಿಸಲು ಕಮಾಂಡಿಂಗ್ ಅಧಿಕಾರಿ ಅವರನ್ನು ಕೇಳಿದರು) ಭಯೋತ್ಪಾದಕರನ್ನು ನಿಭಾಯಿಸಲು ಕ್ವಿಕ್ ರಿಯಾಕ್ಷನ್ ಟೀಮ್ ಅನ್ನು ಮುನ್ನಡೆಸುವ ಅವಕಾಶ ನೀಡುವಂತೆ ತ್ರಿವೇಣಿ ಮನವಿ ಮಾಡಿಕೊಂಡರು. ಕೊನೆಗೆ ತ್ರಿವೇಣಿ ಕೊಂದ ಕೊನೆಯ ಭಯೋತ್ಪಾದಕನಿಂದ ಆರು ಇಂಚುಗಳಷ್ಟು ದೂರದಲ್ಲಿ ಇವರ ದೇಹವು ಪತ್ತೆಯಾಗಿತ್ತು. []

ಭಯೋತ್ಪಾದಕ ದಾಳಿ

[ಬದಲಾಯಿಸಿ]

ಲೆಫ್ಟಿನೆಂಟ್ ತ್ರಿವೇಣಿ ಸಿಂಗ್, ಅಶೋಕ ಚಕ್ರ ಅವರು ೨೦೦೪ ರ ಜನವರಿ ೨ ರಂದು ಜಮ್ಮು- ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಶಸ್ತ್ರಸಜ್ಜಿತ ಉಗ್ರರನ್ನು ಕೊಂದರು ಹಾಗೂ ಇವರು ಗಾಯಗೊಂಡು ಸಾಯುವ ಮೊದಲು ನೂರಾರು ಪ್ರಯಾಣಿಕರ ಜೀವವನ್ನು ಉಳಿಸಿದರು.

ಜನವರಿ ೨, ೨೦೦೪ ರ ಸಂಜೆ ಸಿಂಗ್ ಅವರು ಟಿವಿ ನ್ಯೂಸ್ ಬುಲೆಟಿನ್ ವೀಕ್ಷಿಸುತ್ತಿರುವಾಗ ಜಮ್ಮು-ರೈಲ್ವೆ ನಿಲ್ದಾಣದ ಮೇಲೆ ಫಿದಾಯಿನ್ ದಾಳಿಯ ಸುದ್ದಿಯನ್ನು ಕೇಳಿ, ಆದೇಶದ ನಂತರ ಸಿಂಗ್ ಐದು ಸೈನಿಕರೊಂದಿಗೆ ಜಮ್ಮು- ರೈಲ್ವೆ ನಿಲ್ದಾಣಕ್ಕೆ ಧಾವಿಸಿದರು. ನಂತರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮೊದಲ ಉಗ್ರಗಾಮಿಯನ್ನು ಕೊಂದು, ರೈಲ್ವೆ ಸೇತುವೆಯ ಮೇಲ್ಗಡೆಯಿಂದ ಗುಂಡು ಹಾರಿಸುತ್ತಿದ್ದ ಇನ್ನೊಬ್ಬ ಉಗ್ರಗಾಮಿಯನ್ನು ಹಿಂಬಾಲಿಸಿದರು.

ಗುಪ್ತ ಉಗ್ರಗಾಮಿಯು ಮಾರಕಾಸ್ತ್ರಗಳನ್ನು ಹೊಂದಿದ್ದು, ಸ್ವಲ್ಪ ದೂರದಲ್ಲಿರುವ ಪಾರ್ಸೆಲ್ ಕೊಠಡಿಯಲ್ಲಿ ಆಶ್ರಯ ಪಡೆದಿದ್ದ ೩೦೦ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೊಲ್ಲಬಲ್ಲನೆಂಬುದು ಸಿಂಗ್‌ಗೆ ಮೊದಲೇ ತಿಳಿದಿತ್ತು. ಸಿಂಗ್ ಆ ಉಗ್ರಗಾಮಿಯನ್ನು ಹಿಡಿದುಕೊಂಡು ಕೈಯಿಂದ ಕೈ ಮಿಲಾಯಿಸುತ್ತಿರುವಾಗ ಬೆಂಕಿಯ ಸ್ಫೋಟವು ಅವನನ್ನು ಕೆಡವಿತು. ಅನಂತರ ಸಿಂಗ್ ಮೂರನೇ ಭಯೋತ್ಪಾದಕನನ್ನು ಕೊಂದರು ಆದರೆ ಕೊನೆಗೆ ಮಾರಣಾಂತಿಕ ಗಾಯವನ್ನು ಪಡೆದರು.

ಸಾಯುವ ಮೊದಲು ಲೆಫ್ಟಿನೆಂಟ್ ತ್ರಿವೇಣಿ ಸಿಂಗ್ ಅವರು ತಮ್ಮ ಜಿಒಸಿ, ಮೇಜರ್ ಜನರಲ್ ರಾಜೇಂದ್ರ ಸಿಂಗ್‌ರವರಿಗೆ ವಂದಿಸಿದರು. "ಮಿಷನ್ ಸಾಧಿಸಲಾಗಿದೆ, ಸರ್" ಇದು ಅವರ ಕೊನೆಯ ಮಾತುಗಳು. ಲೆಫ್ಟಿನೆಂಟ್ ತ್ರಿವೇಣಿ ಸಿಂಗ್ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಲಾಯಿತು ಮತ್ತು ಶಾಂತಿಕಾಲದಲ್ಲಿ ಎದ್ದುಕಾಣುವ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ಕೂಡ ಲಭಿಸಿತು. ಆಗಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಲೆಫ್ಟಿನೆಂಟ್ ತ್ರಿವೇಣಿ ಸಿಂಗ್ ಅವರ ತಂದೆಯಾದ ಕ್ಯಾಪ್ಟನ್ ಜನ್ಮೇಜ್ ಸಿಂಗ್ (ನಿವೃತ್ತ) ಅವರಿಗೆ ೨೦೦೪ ರ ಗಣರಾಜ್ಯೋತ್ಸವ ಪರೇಡ್ ಸಂದರ್ಭದಲ್ಲಿ ಪ್ರಶಸ್ತಿಯನ್ನು ನೀಡಿದರು.

ಆರಂಭಿಕ ಜೀವನ

[ಬದಲಾಯಿಸಿ]

ಪಂಜಾಬ್‌ನ ಪಠಾಣ್‌ಕೋಟ್‌ನಿಂದ ಬಂದ ಇವರು ಫೆಬ್ರವರಿ ೧, ೧೯೭೮ ರಂದು ಜಾರ್ಖಂಡ್‌ನ ನಾಂಕುಮ್‌ನಲ್ಲಿ ಜನಿಸಿದ್ದಾರೆ. ತ್ರಿವೇಣಿ ಸಿಂಗ್, ಡೋಗ್ರಾ, ಒಬ್ಬ ಆಕ್ರಮಣಕಾರಿ ಮಗುವಾಗಿರಲಿಲ್ಲ ಮತ್ತು ಪ್ರಚೋದನೆಗಳಿಗೆ ಎಂದಿಗೂ ಪ್ರತಿಕ್ರಿಯಿಸುವುದಿಲ್ಲ. ತಮ್ಮ ಏಕೈಕ ಪುತ್ರ ಸಿಂಗ್ ಅವರಿಗೆ ೧೫ ವರ್ಷವಾದಾಗ ಸಮರ ಕಲೆಗಳು ಮತ್ತು ದೇಹದಾರ್ಢ್ಯದಲ್ಲಿ ತರಬೇತಿ ನೀಡಲು ನಿರ್ಧರಿಸಿದ್ದರು ಎಂದು ಇವರ ಪೋಷಕರು ನೆನಪಿಸಿಕೊಳ್ಳುತ್ತಾರೆ. ಸಮರ ಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದರು. ಅವರು ಈಜು ಮತ್ತು ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವೀಧರರಾಗಿದ್ದರೂ ಕೂಡ, ಸಿಂಗ್ ಸೇನೆಗೆ ಸೇರಲು ಬಯಸಿದ್ದರು. ತನ್ನ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾದ ನಂತರ ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಹೋದರು. ಅನಂತರ ಡಿಸೆಂಬರ್ ೮, ೨೦೦೧ ರಂದು ಸೈನ್ಯದಲ್ಲಿ ನೇಮಕಗೊಂಡರು. ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫಾಂಟ್ರಿಯ ೫ ಗಣ್ಯ ಘಟಕಕ್ಕೆ ಸೇರಿದರು. ಹಾಗೇ ಭಾರತೀಯ ಸೇನೆಯಲ್ಲಿನ ಶೌರ್ಯ ಮತ್ತು ಅಲಂಕಾರಗಳಿಗೆ ಹೆಸರುವಾಸಿಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ

[ಬದಲಾಯಿಸಿ]

ಸಿಂಗ್ ಅವರ ತಂದೆ ಜನವರಿ ೩೦, ೨೦೦೪ ರಂದು [] ತನ್ನ ಮಗನ ಪರವಾಗಿ ಪದಕವನ್ನು ಸ್ವೀಕರಿಸಿದರು.

ಉಲ್ಲೇಖಗಳು

[ಬದಲಾಯಿಸಿ]