ವಿಷಯಕ್ಕೆ ಹೋಗು

ದಾಸಮಂಗಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಾಸ ಮಂಗಟ್ಟೆ
Perched on a Mesua tree at Valparai, South India
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
ಬಿ.ಬೈಕಾರ್ನಿಸ್
Binomial name
ಬ್ಯುಸೆರೋಸ್ ಬೈಕಾರ್ನಿಸ್
Linnaeus, 1758
Synonyms

Buceros homrai[]
Dichoceros bicornis
Buceros cavatus
Homraius bicornis

ದಾಸಮಂಗಟ್ಟೆ' (Great Indian Hornbill) ಅಥವಾ (Great Pied Hornbill) ಮುಖ್ಯವಾಗಿ ಪಶ್ಚಿಮಘಟ್ಟ ,ಹಿಮಾಲಯ ಪರ್ವತ ಶ್ರೇಣಿ,ಇಂಡೋನೇಷಿಯಾ,ಸುಮಾತ್ರ ಹಾಗೂ ಮಲಯಾ ಪರ್ಯಾಯ ದ್ವೀಪಗಳಲ್ಲಿ ಕಂಡು ಬರುತ್ತದೆ. ತುಳುವಿನಲ್ಲಿ "ಮರ ಓಂಗೆಲೆ "ಎಂಬ ಹೆಸರಿದೆ.

ವೈಜ್ಞಾನಿಕ ಹೆಸರು

[ಬದಲಾಯಿಸಿ]

ಬ್ಯುಸೆರೋಟಿಡೇ ಕುಟುಂಬದಲ್ಲಿ ಬ್ಯುಸಿರೋಸ್ ಬೈಕಾರ್ನಿಸ್ {Buceros Bicornis) ಎಂಬುದು ಇದರ ಅಧಿಕೃತ ಹೆಸರು.

ಲಕ್ಷಣಗಳು

[ಬದಲಾಯಿಸಿ]

ಹದ್ದಿಗಿಂತ ದೊಡ್ಡದಾದ ಹಕ್ಕಿ.ತಲೆ,ಕತ್ತು,ಕೊಕ್ಕು ಹಳದಿ ಬಣ್ಣ. ಕಣ್ಣಿನ ಭಾಗದಲ್ಲಿ ಅಗಲವಾದ ಅಡ್ಡ ಕಪ್ಪು ಪಟ್ಟಿ ಇದೆ.ನೆತ್ತಿಯಿಂದ ಕೊಕ್ಕಿನ ಮದ್ಯ ಭಾಗದವರೇಗ ಹಳದಿ ಟೊಪ್ಪಿ ಇದೆ.ಕತ್ತಿನ ತಳ ಭಾಗ,ದೇಹ ಹಾಗೂ ರೆಕ್ಕೆ ಕಪ್ಪು. ಹೊಟ್ಟೆ ,ಬಾಲ ಬಿಳಿ.ಬಾಲದ ಮೇಲೆ ಅಗಲವಾದ ಕಪ್ಪು ಪಟ್ಟಿ ಇರುತ್ತದೆ.ಕಪ್ಪು ರೆಕ್ಕೆಯ ಮೇಲೆ ಅಗಲವಾದ ಬಿಳಿ ಪಟ್ಟಿ ಹಾರುವಾಗ ಸ್ಪಷ್ಟೃವಾಗಿ ಗೋಚರಿಸುತ್ತವೆ.

ಆಹಾರ ಹಾಗೂ ಆವಾಸ

[ಬದಲಾಯಿಸಿ]

ಆಹಾರ ಮುಖ್ಯವಾಗಿ ಹಣ್ಣು. ಇದರೊಂದಿಗ ಸಣ್ಣ ಹಕ್ಕಿಗಳು, ಸಣ್ಣ ಸರೀಸೃಪಗಳು ಕೂಡಾ ಆಹಾರವಾಗಿದೆ. ನಿತ್ಯಹರಿದ್ವರ್ಣ ಕಾಡುಗಳು,ತೇವ ಪರ್ಣಪಾತಿ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಮರದಲ್ಲಿ ಕುಳಿತುಕೊಳ್ಳುತ್ತವೆ.ಪೊಟರೆಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.೨ ಮೊಟ್ಟೆಗಳಿಗೆ ಸುಮಾರು ೪೦ ದಿನ ಕಾವು ಕೊಡುತ್ತವೆ.

ವಿಷೇಶತೆಗಳು

[ಬದಲಾಯಿಸಿ]

ಬರ್ಮಾದ ಚಿನ್ ರಾಜ್ಯ ,ಭಾರತದಲ್ಲಿ ಕೇರಳ ಹಾಗೂ ಅರುಣಾಚಲಪ್ರದೇಶ ರಾಜ್ಯಗಳ ರಾಜ್ಯ ಹಕ್ಕಿ ಎಂದು ಮಾನ್ಯತೆ.

ಬಾಹ್ಯ ಸಂಪರ್ಕ

[ಬದಲಾಯಿಸಿ]

Internet Bird Collection Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

ಉಲ್ಲೇಖಗಳು

[ಬದಲಾಯಿಸಿ]
  1. ಉಲ್ಲೇಖ ದೋಷ: Invalid <ref> tag; no text was provided for refs named iucn
  2. Hodgson,BH (1833). "Description of the Buceros Homrai of the Himalaya". Asiat. Res. 18 (2): 169–188.