ದಿವ್ಯಾ ಸಿಂಗ್
Divya Singh | |
---|---|
Sport | Basketball |
Position | Guard/forward |
Jersey # | 4 |
Height | 5 ft 9 in (1.75 m) |
Nationality | Indian |
Born | Varanasi, ಉತ್ತರ ಪ್ರದೇಶ, India | ೨೧ ಜುಲೈ ೧೯೮೨
High school | RMKBI, Varanasi |
Former school(s) | Rajershi Shishu Vihar |
ದಿವ್ಯಾ ಸಿಂಗ್ ಹಿಂದಿ 'दिव्या सिंह(1982 ,ಜುಲೈ 21ರಂದು ಜನನ)ಭಾರತದ ಮಹಿಳೆಯರ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡದ ಮಾಜಿ ನಾಯಕಿ. ದಿವ್ಯಾ 2006ರ ಮೆಲ್ಬರ್ನ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡವನ್ನು ನಾಯಕಿಯಾಗಿ ಮುನ್ನಡೆಸಿದರು. ಆಟದ ಕೌಶಲ್ಯಗಳು, ನಾಯಕತ್ವ ಗುಣಗಳು, ಶೈಕ್ಷಣಿಕ ಬಲ ಮತ್ತು ವ್ಯಕ್ತಿತ್ವಕ್ಕೆ ಹೆಸರಾದ ಅವರು ಭಾರತದಲ್ಲಿ [ಸೂಕ್ತ ಉಲ್ಲೇಖನ ಬೇಕು]ಅತ್ಯುತ್ತಮ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಅವರು ಪ್ರಸಕ್ತ ದೆಲಾವೇರ್‌ನ ನೀವಾರ್ಕ್‌ನಲ್ಲಿರುವ ಯೂನಿವರ್ಸಿಟಿ ಆಫ್ ದೆಲಾವೇರ್‌ನಲ್ಲಿ ಕ್ರೀಡಾ ವ್ಯವಸ್ಥಾಪನೆ ಅಧ್ಯಯನ ಮಾಡುತ್ತಿದ್ದು, UDಗೆ ಸಹಾಯಕ ಮಹಿಳಾ ಬ್ಯಾಸ್ಕೆಟ್‌ಬಾಲ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಕ್ರೀಡಾ ಸಾಧನೆಗಳು
[ಬದಲಾಯಿಸಿ]- 2007 ಜೂನ್ 3ರಿಂದ ಜೂನ್ 10ರವರೆಗೆ ನಡೆದ ದಕ್ಷಿಣ ಕೊರಿಯದ ಇಂಚೆಯನ್‌ನಲ್ಲಿ ಮಹಿಳೆಯರ FIBA ಏಷ್ಯಾ ಚಾಂಪಿಯನ್‌ಷಿಪ್‌ನ ಪೂಲ್-Bಯಲ್ಲಿ ವಿಜೇತೆ.
- 2006ರ ಮಾರ್ಚ್ 15ರಿಂದ 26 , ಮೆಲ್ಬರ್ನ್,ಆಸ್ಟ್ರೇಲಿಯ,ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಯಕಿ.
- 2006ರ ಮಾರ್ಚ್ 7ರಿಂದ 12 , ಆಕ್‌ಲ್ಯಾಂಡ್,ನ್ಯೂಜಿಲೆಂಡ್, ಸೌಹಾರ್ದ ಪಂದ್ಯ ಸರಣಿ.
- 2006 ,ಸೆಪ್ಟೆಂಬರ್ 22ರಿಂದ 25 ,ಫುಕೆಟ್,ಥಾಯ್ಲೆಂಡ್, ಪ್ರಥಮ ಫುಕೆಟ್ ಅಂತಾರಾಷ್ಟ್ರೀಯ ಆಹ್ವಾನಿತ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ.
- 2005 ಜನವರಿ 13ರಿಂದ 19 ,ಸೆಂಡಾಯಿ, ಜಪಾನ್‌ನಲ್ಲಿ, ಹಿರಿಯ ಮಹಿಳೆಯರ 20ನೇ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಒಕ್ಕೂಟ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ.
- ಅಕ್ಟೋಬರ್ 29ರಿಂದ ನವೆಂಬರ್ 2 ,ಕೌಲಾಲಂಪುರ್, ಮಲೇಶಿಯ, ಹಿರಿಯ ಮಹಿಳೆಯರಪೋರ್ಟ್ ಡಿಕ್ಸನ್ ಅಂತಾರಾಷ್ಟ್ರೀಯ ಆಹ್ವಾನಿತ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ.
ಪ್ರಶಸ್ತಿಗಳು ಮತ್ತು ಸಾಧನೆಗಳು
[ಬದಲಾಯಿಸಿ]- ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ 2006ರ ಸಾಲಿನ ನಾಯಕಿ.
ಮೆಲ್ಬರ್ನ್, ಆಸ್ಟ್ರೇಲಿಯಾ.
- ಉತ್ತರಪ್ರದೇಶದ ವಾರಣಾಸಿಯ ಉದಯ್ ಪ್ರತಾಪ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ 2006ನೇ ಸಾಲಿನ ಶ್ರೇಷ್ಟ ಆಟಗಾರ್ತಿ ಗೌರವ.
- 21ನೇ ಕಾರ್ಪ್ ಇಂಪೆಕ್ಸ್ ಫೆಡರೇಷನ್ ಕಪ್ ಚಾಂಪಿಯನ್‌ಷಿಪ್‌ನಲ್ಲಿ 2005ನೇ ಸಾಲಿನ ಅತ್ಯುತ್ತಮ ಆಟಗಾರ್ತಿ ಗೌರವ.
- ಸೆಂಟೌರಿ ಕ್ರೀಡಾ ಕ್ಲಬ್‌ನಿಂದ 2004ನೇ ಸಾಲಿನ ಸೆಂಚುರಿ ಕ್ರೀಡಾ ಪ್ರಶಸ್ತಿ
- ಕಾನ್ಪುರದಲ್ಲಿ ನಡೆದ UPರಾಜ್ಯ ಹಿರಿಯರ ಚಾಂಪಿಯನ್‌ಷಿಪ್‌ನಲ್ಲಿ 2002ನೇ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ.
- ಲಕ್ನೊ ಬ್ಯಾಸ್ಕೆಟ್‌ಬಾಲ್ ಒಕ್ಕೂಟದಿಂದ 2002ನೇ ಸಾಲಿನ ಶ್ರೇಷ್ಟ ಆಟಗಾರ್ತಿ ಪ್ರಶಸ್ತಿ.
- ವಾರಣಾಸಿ ಬೆನಾರಸ್ ಹಿಂದು ವಿಶ್ವವಿದ್ಯಾನಿಲಯದ ಉಪಕುಲಪತಿಯಿಂದ 2002ನೇ ಸಾಲಿನ ಶ್ರೇಷ್ಟ ಆಟಗಾರ್ತಿ ಪ್ರಶಸ್ತಿ.
ರಾಷ್ಟ್ರೀಯ ಕ್ರೀಡಾ ಸಾಧನೆ
[ಬದಲಾಯಿಸಿ]- ರಾಜಸ್ಥಾನದ ಜೈಪುರದಲ್ಲಿ ನಡೆದ 2006 -07ನೇ ಸಾಲಿನ 57ನೇ ರಾಷ್ಟ್ರೀಯ ಹಿರಿಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ.
- ಜಾರ್ಖಂಡ್‌ನ ಜಮ್ಷೆಡ್‌ಪುರದಲ್ಲಿ 2006ನೇ ಸಾಲಿನ 22ನೇ ಫೆಡರೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ.
- ಮಹಾರಾಷ್ಟ್ರದ ಪುಣೆಯಲ್ಲಿ 2006ನೇ ಸಾಲಿನ 56ನೇ ರಾಷ್ಟ್ರೀಯ ಹಿರಿಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ.
- ನವದೆಹಲಿಯಲ್ಲಿ 2005ನೇ ಸಾಲಿನ ಮಹಿಳೆಯರ ಆರ್. ವೈಕುಂಠಮ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ.
- ಗುಜರಾತ್, ಭವ್‌ನಗರ್‌ನಲ್ಲಿ 2005ನೇ ಸಾಲಿನ 21ನೇ ಕಾರ್ಪ್ ಇಂಪೆಕ್ಸ್ ಫೆಡರೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ.
- ಪಂಜಾಬ್, ಲೂಧಿಯಾನದಲ್ಲಿ 2005ನೇ ಸಾಲಿನ 55ನೇ ರಾಷ್ಟ್ರೀಯ ಹಿರಿಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ.
- ನವಿ ಮುಂಬೈನ ವಶಿಯಲ್ಲಿ 2003ನೇ ಸಾಲಿನ 20ನೇ ಫೆಡರೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ.
- AP,ಹೈದರಾಬಾದ್‌ನ 2003ನೇ ಸಾಲಿನ 53ನೇ ರಾಷ್ಟ್ರೀಯ ಹಿರಿಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ.
ಶೈಕ್ಷಣಿಕ
[ಬದಲಾಯಿಸಿ]- ಉತ್ತರಪ್ರದೇಶ, ವಾರಣಾಸಿಯ ಉದಯ್ ಪ್ರತಾಪ್ ಕಾಲೇಜಿನ ರಾಜೆರ್ಶಿ ಶಿಶು ವಿಹಾರದಿಂದ ಪ್ರಾಥಮಿಕ ಶಾಲಾ ಶಿಕ್ಷಣ.
- ವಾರಣಾಸಿಯ R.M.K.B.I ಕಾಲೇಜಿನಿಂದ ಪ್ರೌಢಶಾಲೆ ಶಿಕ್ಷಣ.
- ಭಾರತದ ಬನಾರಸ್ ಹಿಂದು ವಿಶ್ವವಿದ್ಯಾನಿಲಯದಿಂದ ದೈಹಿಕ ಶಿಕ್ಷಣ ಪದವಿ.
- ಡೆಲಾವೇರ್ ನೇವಾರ್ಕ್ ಡೆಲಾವೇರ್ ವಿಶ್ವವಿದ್ಯಾನಿಲಯದಲ್ಲಿ ಕ್ರೀಡಾ ವ್ಯವಸ್ಥಾಪನೆ ಅಧ್ಯಯನ.
ಕುಟುಂಬ
[ಬದಲಾಯಿಸಿ]ಅವರು ಬ್ಯಾಸ್ಕೆಟ್‌ಬಾಲ್ ಆಟಗಾರರ ಕುಟುಂಬದಿಂದ ಬಂದವರಾಗಿದ್ದು, ಅವರಲ್ಲಿ ಮೂವರು ಸಹೋದರಿಯರು ಪ್ರಸಕ್ತ ಭಾರತ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿಯರಾಗಿದ್ದಾರೆ.
- ಸಹೋದರಿ ಪ್ರಿಯಾಂಕ ಸಿಂಗ್(NIS ಬ್ಯಾಸ್ಕೆಟ್‌ಬಾಲ್ ಕೋಚ್) ಮನಿಶ್ ಕುಮಾರ್ ಪತ್ನಿ(
ಅವರು ಕೂಡ NIS ಬ್ಯಾಸ್ಕೆಟ್‌ಬಾಲ್ ಕೋಚ್)
- ಸಹೋದರಿ ಪ್ರಶಾಂತಿ ಸಿಂಗ್(ಪ್ರಸಕ್ತ ಭಾರತ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ).
- ಸಹೋದರಿ ಆಕಾಂಕ್ಷಾ ಸಿಂಗ್ (ಪ್ರಸಕ್ತ ಭಾರತ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ)
- ಸಹೋದರಿ ಪ್ರತಿಮಾ ಸಿಂಗ್(ಪ್ರಸಕ್ತ ಭಾರತದ ಮಹಿಳಾ ರಾಷ್ಟ್ರೀಯ ಕಿರಿಯರ ಬ್ಯಾಸ್ಕೆಟ್‌ಬಾಲ್ ತಂಡದ ನಾಯಕಿ).
- ಲೋವಿಷ್
ಉಲ್ಲೇಖಗಳು
[ಬದಲಾಯಿಸಿ]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಯುರೋಬಾಸ್ಕೆಟ್
- ಟೈಮ್ ನಿಯತಕಾಲಿಕೆ Archived 3 January 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಯುಟ್ಯೂಬ್
- ವಿಶ್ವವಿದ್ಯಾನಿಲಯ ನಿರ್ದೇಶಿಕೆ
- ಇಂಟರ್ಬ್ಯಾಸ್ಕೆಟ್
- ಎನ್ಬಲಿವಿಯರೇನ Archived 12 December 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- [೧]
- ಹೂಪಿಸ್ಟಾನಿ
- ಟೈಮ್ಸ್ Archived 3 January 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- [೨] Archived 3 January 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ಪೋರ್ಟ್ಕೀಡಾ
ಟೆಂಪ್ಲೇಟು:National-hoops-team-stub
ಈ ಲೇಖನ biographical relating to an Indian basketball figure ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |
- BLP articles lacking sources from July 2010
- Articles with unsourced statements from January 2009
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Use dmy dates from September 2010
- Persondata templates without short description parameter
- ಭಾರತೀಯ ಬ್ಯಾಸ್ಕೆಟ್‌ಬಾಲ್ ಆಟಗಾರರು
- ದಿಲಾವೇರ್ ಹಳೆಯ ವಿದ್ಯಾರ್ಥಿಗಳ ವಿಶ್ವವಿದ್ಯಾನಿಲಯ
- ಬದುಕಿರುವ ವ್ಯಕ್ತಿಗಳು
- 1982 ರಲ್ಲಿ ಜನಿಸಿದವರು
- Asian basketball biography stubs
- Indian sportspeople stubs