ದೂರಸಂಪರ್ಕ ವ್ಯವಸ್ಥೆಯ ಜಾಲ
ದೂರಸಂಪರ್ಕ ವ್ಯವಸ್ಥೆಯ ಜಾಲ ಎಂಬುದು ಸಂಪರ್ಕ ಸಲಕರಣೆಗಳು, ಕೊಂಡಿಗಳು ಮತ್ತು ನಿಸ್ಪಂದಗಳ ಒಂದು ಜಮಾವಣೆಯಾಗಿದ್ದು, ಇದು ಸಂಪರ್ಕ ಸಲಕರಣೆಗಳ ಬಳಕೆದಾರರ ನಡುವಿನ ದೂರಸಂಪರ್ಕ ವ್ಯವಸ್ಥೆಯನ್ನು ಸಾಧ್ಯವಾಗಿಸಲೆಂದು ಪರಸ್ಪರ ಸಂಪರ್ಕಿಸುತ್ತದೆ. ಜಾಲಗಳು ಮಂಡಲ ಸಂಬಂಧಕ ವ್ಯವಸ್ಥೆಯನ್ನು ಬಳಸಬಹುದು ಅಥವಾ ಸಂದೇಶ ಸಂಬಂಧಕ ವ್ಯವಸ್ಥೆಯನ್ನು ಬಳಸಬಹುದು. ಜಾಲದಲ್ಲಿರುವ ಪ್ರತಿಯೊಂದು ಸಲಕರಣೆಯೂ ಒಂದು ಅನನ್ಯ ವಿಳಾಸವನ್ನು ಹೊಂದಿರಬೇಕಾಗುತ್ತದೆ; ಹೀಗಿದ್ದಾಗಲೇ ಸಂದೇಶಗಳನ್ನು ಅಥವಾ ಸಂಪರ್ಕಗಳನ್ನು ಸರಿಯಾದ ಗ್ರಾಹಿಗಳಿಗೆ ಮಾರ್ಗನಿರ್ದೇಶಿಸಲು ಸಾಧ್ಯವಾಗುತ್ತದೆ. ಜಾಲದಲ್ಲಿನ ವಿಳಾಸಗಳ ಜಮಾವಣೆಯನ್ನು ವಿಳಾಸ ಸ್ಥಳಾವಕಾಶ ಎಂದು ಕರೆಯಲಾಗುತ್ತದೆ.
ಕೊಂಡಿಗಳು ನಿಸ್ಪಂದಗಳನ್ನು ಒಟ್ಟಿಗೆ ಸಂಪರ್ಕಿಸುತ್ತವೆ ಮತ್ತು ಆಧಾರವಾಗಿರುವ ಸಂವಹನ ಜಾಲವೊಂದರ ಮೇಲೆ ಅವು ಸ್ವತಃ ನಿರ್ಮಿಸಲ್ಪಟ್ಟಿರುತ್ತವೆ; ಈ ಸಂವಹನ ಜಾಲವು ಕೊಂಡಿಯ ಅಡ್ಡ ಹಾಯುವಂತೆ ಸಂದೇಶವನ್ನು ಭೌತಿಕವಾಗಿ ತಳ್ಳುತ್ತದೆ.
ದೂರಸಂಪರ್ಕ ವ್ಯವಸ್ಥೆಯ ಜಾಲಗಳ ಉದಾಹರಣೆಗಳು ಹೀಗಿವೆ:
- ಕಂಪ್ಯೂಟರ್ ಜಾಲಗಳು
- ಅಂತರಜಾಲ
- ದೂರವಾಣಿಯ ಜಾಲ
- ಜಾಗತಿಕ ಟೆಲೆಕ್ಸ್ ಜಾಲ
- ವಾಯುಯಾನ ವಿಜ್ಞಾನದ ACARS ಜಾಲ
ಸಂದೇಶಗಳು ಮತ್ತು ವಿಧ್ಯುಕ್ತ ಕ್ರಮಗಳು
[ಬದಲಾಯಿಸಿ]ರವಾನೆ ಮಾಡುವ ಸಲಕರಣೆಯೊಂದರಿಂದ ಸಂದೇಶಗಳು ಸೃಷ್ಟಿಸಲ್ಪಡುತ್ತವೆ. ನಂತರ ಅವು ಗಮ್ಯಸ್ಥಾನದ ಸಲಕರಣೆಗೆ ಬಂದು ಮುಟ್ಟುವವರೆಗೂ, ಕೊಂಡಿಗಳು ಮತ್ತು ನಿಸ್ಪಂದಗಳ ಜಾಲದ ಮೂಲಕ ಹಾದುಹೋಗುತ್ತವೆ. ಸಂದೇಶಗಳನ್ನು ನಿಭಾಯಿಸುವುದು ಮತ್ತು ಸದರಿ ಸಂದೇಶಗಳನ್ನು ಅವುಗಳ ಅಂತಿಮ ಗಮ್ಯಸ್ಥಾನದ ಕಡೆಗೆ ಸರಿಯಾದ ಕೊಂಡಿಯ ಮೂಲಕ ಹಾದುಹೋಗುವಂತೆ ಮಾರ್ಗ ನಿರ್ದೇಶಿಸುವುದು ಮಧ್ಯವರ್ತಿ ನಿಸ್ಪಂದಗಳ ಕೆಲಸವಾಗಿರುತ್ತದೆ.
ನಿಯಂತ್ರಣದ (ಅಥವಾ ಸಂಕೇತ ನೀಡುವ) ಮತ್ತು ಧಾರಕ ಭಾಗಗಳನ್ನು ಸಂದೇಶಗಳು ಒಳಗೊಂಡಿದ್ದು, ಇವುಗಳನ್ನು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಕಳಿಸಲು ಸಾಧ್ಯವಿರುತ್ತದೆ. ಧಾರಕ ಭಾಗವೆಂಬುದು ಬಳಕೆದಾರನು ಸಂವಹಿಸಲು ಬಯಸುವ ವಾಸ್ತವಿಕ ಹೂರಣವಾಗಿದ್ದರೆ (ಉದಾಹರಣೆಗೆ ಸಂಕೇತ ಭಾಷೆಗೆ ಪರಿವರ್ತಿಸಿರುವ ಒಂದಷ್ಟು ಮಾತು, ಅಥವಾ ಒಂದು ಇ-ಮೇಲ್), ಜಾಲದ ಮೂಲಕ ಸಂದೇಶವನ್ನು ಎಲ್ಲಿಗೆ ಮತ್ತು ಸಾಧ್ಯವಾದರೆ ಹೇಗೆ ಮಾರ್ಗನಿರ್ದೇಶಿಸಬೇಕಾಗುತ್ತದೆ ಎಂಬುದನ್ನು ನಿಸ್ಪಂದಗಳಿಗೆ ನಿಯಂತ್ರಣ ಭಾಗವು ಸೂಚಿಸುತ್ತದೆ. ಇದನ್ನು ಪರಿಣಾಮಕಾರಿಯಾಗಿ ಸಾಧಿಸುವ ದೃಷ್ಟಿಯಿಂದ ಪ್ರತಿಯೊಂದು ವಿಭಿನ್ನ ಬಗೆಯ ದೂರಸಂಪರ್ಕ ವ್ಯವಸ್ಥೆಯ ಜಾಲವು ನಿಯಂತ್ರಣ ಮತ್ತು ಧಾರಕ ಸಂದೇಶಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಿರ್ದಿಷ್ಟವಾಗಿ ಹೇಳಲೆಂದು, ಕಳೆದ ಹಲವಾರು ವರ್ಷಗಳ ಅವಧಿಯಲ್ಲಿ ವಿಧ್ಯುಕ್ತ ಕ್ರಮಗಳನ್ನು ಒಂದು ದೊಡ್ಡ ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಘಟಕಗಳು
[ಬದಲಾಯಿಸಿ]ದೂರಸಂಪರ್ಕ ವ್ಯವಸ್ಥೆಯ ಎಲ್ಲಾ ಜಾಲಗಳೂ ಐದು ಮೂಲಭೂತ ಘಟಕಗಳಿಂದ ಮಾಡಲ್ಪಟ್ಟಿದ್ದು, ಜಾಲದ ಬಗೆ ಅಥವಾ ಬಳಕೆಯನ್ನು ಲೆಕ್ಕಿಸದೆ ಅವು ಪ್ರತಿಯೊಂದು ಜಾಲದಲ್ಲಿ ಹಾಜರಿರುತ್ತವೆ. ಸಂಪರ್ಕ ಸಲಕರಣೆಗಳು, ದೂರಸಂಪರ್ಕ ವ್ಯವಸ್ಥೆಯ ಸಂಸ್ಕಾರಕಗಳು, ದೂರಸಂಪರ್ಕ ವ್ಯವಸ್ಥೆಯ ವಾಹಿನಿಗಳು, ಕಂಪ್ಯೂಟರ್‌ಗಳು, ಮತ್ತು ದೂರಸಂಪರ್ಕ ವ್ಯವಸ್ಥೆಯ ನಿಯಂತ್ರಣ ತಂತ್ರಾಂಶ ಇವು ಈ ಮೂಲಭೂತ ಘಟಕಗಳಲ್ಲಿ ಸೇರಿರುತ್ತವೆ.
- ಸಂಪರ್ಕ ಸಲಕರಣೆಗಳು ಯಾವುದೇ ದೂರಸಂಪರ್ಕ ವ್ಯವಸ್ಥಾ ಜಾಲದ ಪರಿಸರದಲ್ಲಿನ ಆರಂಭದ ಮತ್ತು ನಿಲುಗಡೆಯ ಘಟ್ಟಗಳಾಗಿರುತ್ತವೆ. ದತ್ತಾಂಶವನ್ನು ಸಂವಹಿಸಲು ಅಥವಾ ಸ್ವೀಕರಿಸಲೆಂದು ಬಳಸಲಾಗುವ ಯಾವುದೇ ಪ್ರದಾನ ಅಥವಾ ಫಲಿತ ಮಾಹಿತಿಯ ಸಾಧನವನ್ನು ಸಂಪರ್ಕ ಸಲಕರಣೆಯ ಒಂದು ಘಟಕವೆಂದು ವರ್ಗೀಕರಿಸಬಹುದು.[೧]
- ಸಂಪರ್ಕ ಸಲಕರಣೆಗಳು ಮತ್ತು ಕಂಪ್ಯೂಟರ್‌ಗಳ ನಡುವಿನ [೧] ದತ್ತಾಂಶ ಸಂವಹನ[೧] ಮತ್ತು ಗ್ರಹಿಸುವಿಕೆಯನ್ನು ದೂರಸಂಪರ್ಕ ವ್ಯವಸ್ಥೆಯ ಸಂಸ್ಕಾರಕಗಳು ಬೆಂಬಲಿಸುತ್ತವೆ; ಒಂದು ವೈವಿಧ್ಯಮಯವಾದ ನಿಯಂತ್ರಣದ ಮತ್ತು ಬೆಂಬಲದ ಕಾರ್ಯಚಟುವಟಿಕೆಗಳನ್ನು (ಅಂದರೆ ದತ್ತಾಂಶವನ್ನು ಡಿಜಿಟಲ್ ಸ್ವರೂಪದಿಂದ ಅನಲಾಗ್ ಸ್ವರೂಪಕ್ಕೆ ಹಾಗೂ ಅನಲಾಗ್ ಸ್ವರೂಪದಿಂದ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸುವುದು) {2/} ಒದಗಿಸುವ ಮೂಲಕ ಅವು ಈ ಕಾರ್ಯವನ್ನು ನೆರವೇರಿಸುತ್ತವೆ.
- ದೂರಸಂಪರ್ಕ ವ್ಯವಸ್ಥೆಯ ವಾಹಿನಿಗಳು ದತ್ತಾಂಶವು ಸಂವಹಿಸಲ್ಪಡುವ ಮತ್ತು ಸ್ವೀಕರಿಸಲ್ಪಡುವ ಮಾರ್ಗವಾಗಿರುತ್ತವೆ. ಒಂದು ವೈವಿಧ್ಯಮಯ ಮಾಧ್ಯಮಗಳ ಮೂಲಕ ದೂರಸಂಪರ್ಕ ವ್ಯವಸ್ಥೆಯ ವಾಹಿನಿಗಳು ಸೃಷ್ಟಿಸಲ್ಪಡುತ್ತವೆ; ಇವುಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವುದರಲ್ಲಿ ತಾಮ್ರದ ತಂತಿಗಳು ಮತ್ತು ಏಕಾಕ್ಷ ಕೇಬಲ್‌ಗಳು ಸೇರಿವೆ. ವ್ಯವಹಾರದ-ಅಸ್ತಿತ್ವಗಳು ಮತ್ತು ಮನೆಗಳಿಗೆ ಕ್ಷಿಪ್ರವಾದ ಹಾಗೂ ಹೆಚ್ಚು ದೃಢವಾದ ಸಂಪರ್ಕಗಳನ್ನು ಹೊತ್ತು ತರುವ ದೃಷ್ಟಿಯಿಂದ, ತಂತು-ದ್ಯುತಿ ಕೇಬಲ್‌ಗಳು (ಫೈಬರ್-ಆಪ್ಟಿಕ್ ಕೇಬಲ್‌ಗಳು) ಹೆಚ್ಚಿನ ಪ್ರಮಾಣದಲ್ಲಿ ಬಳಸಲ್ಪಡುತ್ತಿವೆ.[೧]
- ದೂರಸಂಪರ್ಕ ವ್ಯವಸ್ಥೆಯ ಪರಿಸರವೊಂದರಲ್ಲಿ ಕಂಪ್ಯೂಟರ್‌ಗಳು ತಮ್ಮ ಸಂವಹನಾ ಕಾರ್ಯಭಾರಗಳನ್ನು ಸಮರ್ಥವಾಗಿ ನಿರ್ವಹಿಸಲೆಂದು, ಅವುಗಳನ್ನು ಮಾಧ್ಯಮಗಳ ಮೂಲಕ ಸಂಪರ್ಕಿಸಲಾಗಿರುತ್ತದೆ.[೧]
- ದೂರಸಂಪರ್ಕ ವ್ಯವಸ್ಥೆಯ ನಿಯಂತ್ರಣ ತಂತ್ರಾಂಶವು ಜಾಲ ಕಲ್ಪಿಸಲ್ಪಟ್ಟ ಎಲ್ಲಾ ಕಂಪ್ಯೂಟರ್‌ಗಳಲ್ಲಿಯೂ ಇರುತ್ತದೆ ಮತ್ತು ಜಾಲದ ಚಟುವಟಿಕೆಗಳು ಹಾಗೂ ಕಾರ್ಯಾತ್ಮಕತೆಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಈ ತಂತ್ರಾಂಶವು ಹೊಣೆಗಾರನಾಗಿರುತ್ತದೆ.[೧]
ಆರಂಭಿಕ ಜಾಲಗಳನ್ನು ಕಂಪ್ಯೂಟರ್‌ಗಳ ನೆರವಿಲ್ಲದೆಯೇ ನಿರ್ಮಿಸಲಾಯಿತಾದರೂ, 20ನೇ ಶತಮಾನದ ಅಂತ್ಯಭಾಗದಲ್ಲಿ ಅವುಗಳ ಸಂಬಂಧಕ ಕೇಂದ್ರಗಳು ಗಣಕೀಕರಿಸಲ್ಪಟ್ಟವು ಅಥವಾ ಸದರಿ ಜಾಲಗಳು ಕಂಪ್ಯೂಟರ್ ಜಾಲಗಳಿಂದ ಬದಲಾಯಿಸಲ್ಪಟ್ಟವು.
ಜಾಲದ ರಚನೆ
[ಬದಲಾಯಿಸಿ]ಸಾರ್ವತ್ರಿಕವಾಗಿ ಹೇಳುವುದಾದರೆ, ದೂರಸಂಪರ್ಕ ವ್ಯವಸ್ಥೆಯ ಪ್ರತಿಯೊಂದು ಜಾಲವೂ ಪರಿಕಲ್ಪನಾತ್ಮಕವಾಗಿ ಮೂರು ಭಾಗಗಳನ್ನು, ಅಥವಾ ಸಮತಲಗಳನ್ನು (ಇವುಗಳನ್ನು ಹೀಗೆ ಕರೆಯಲು ಕಾರಣವೇನೆಂದರೆ, ಅವುಗಳನ್ನು ಹಾಗಿರುವಂತೆ ಭಾವಿಸಬಹುದು, ಮತ್ತು ಅನೇಕವೇಳೆ ಅವು, ಪ್ರತ್ಯೇಕವಾದ {1}ಪೇರಿಸಿದ ಜಾಲ{/1}ಗಳಾಗಿರುತ್ತವೆ) ಒಳಗೊಂಡಿರುತ್ತದೆ:
- ನಿಯಂತ್ರಣ ಸಮತಲ ವು ನಿಯಂತ್ರಣ ಮಾಹಿತಿಯನ್ನು ಸಾಗಿಸುತ್ತದೆ (ಇದನ್ನು ಸಂಕೇತದ ಮೂಲಕ ಕಳುಹಿಸುವಿಕೆ ಎಂದೂ ಕರೆಯಲಾಗುತ್ತದೆ).
- ದತ್ತಾಂಶ ಸಮತಲ ಅಥವಾ ಬಳಕೆದಾರ ಸಮತಲ ವು ಜಾಲದ ಬಳಕೆದಾರರ ಸಂಚಾರವನ್ನು ಸಾಗಿಸುತ್ತದೆ.
- ನಿರ್ವಹಣಾ ಸಮತಲ ವು ಜಾಲದ ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯವಾಗಿರುವ ಕಾರ್ಯಾಚರಣೆಗಳು ಮತ್ತು ನಿರ್ವಹಣಾ ಸಂಚಾರವನ್ನು ಸಾಗಿಸುತ್ತದೆ.
ಉದಾಹರಣೆ: TCP/IP ದತ್ತಾಂಶ ಜಾಲ
[ಬದಲಾಯಿಸಿ]ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ಸಂಪರ್ಕಿಸುವ ದೃಷ್ಟಿಯಿಂದ, ದತ್ತಾಂಶ ಜಾಲವು ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸಲ್ಪಡುತ್ತದೆ. ಬಳಕೆದಾರರು ತಾವು ಸಂಪರ್ಕ ಹೊಂದಿರುವ ನಿರ್ದಿಷ್ಟ ಸೇವಾದಾರನ ಆಚೆಗೆ ಆಶ್ರಯ ಪಡೆದಿರುವ ಅಥವಾ ಆಯೋಜಿಸಲ್ಪಟ್ಟಿರುವ ಮೂಲಗಳೊಂದಿಗೆ ನ್ಯೂನತೆಯಿಲ್ಲದ ಸಂಪರ್ಕವನ್ನು ಹೊಂದುವುದಕ್ಕೆ ಅನುವುಮಾಡಿಕೊಡಲೆಂದು ದತ್ತಾಂಶ ಜಾಲಗಳನ್ನು ಒಟ್ಟಿಗೆ ಸಂಪರ್ಕಿಸಲು ಸಾಧ್ಯವಿದೆ. ವಿಭಿನ್ನ ಸಂಘಟನೆಗಳಿಗೆ ಸೇರಿದ ಅನೇಕ ದತ್ತಾಂಶ ಜಾಲಗಳಿಗೆ ಅಂತರಜಾಲವು ಅತ್ಯುತ್ತಮ ಉದಾಹರಣೆಯಾಗಿದ್ದು, ಇಲ್ಲಿ ಅವೆಲ್ಲವೂ ಒಂದು ಏಕ ವಿಳಾಸದ ಸ್ಥಳಾವಕಾಶದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ.
IP ವಿಳಾಸಗಳನ್ನು ಬಳಸಿಕೊಂಡು TCP/IP ಜಾಲಗಳಿಗೆ ಜೋಡಿಸಲ್ಪಟ್ಟ ಸಂಪರ್ಕ ಸಲಕರಣೆಗಳಿಗೆ ಮಾರ್ಗನಿರ್ದೇಶಿಸಲಾಗುತ್ತದೆ ಅಥವಾ ತಲುಪಲಾಗುತ್ತದೆ. ವಿಭಿನ್ನ ಬಗೆಯ IP ವಿಳಾಸಗಳು ಅಸ್ತಿತ್ವದಲ್ಲಿವೆಯಾದರೂ, IP ಆವೃತ್ತಿ 4 ಎಂಬುದು ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತದೆ. ಪ್ರತಿಯೊಂದು ಅನನ್ಯ ವಿಳಾಸವು 0 ಮತ್ತು 255ರ ನಡುವಿನ 4 ಪೂರ್ಣಾಂಕಗಳನ್ನು ಒಳಗೊಂಡಿದ್ದು, ಅವನ್ನು ಬರೆದಾಗ ಚುಕ್ಕೆಗಳಿಂದ ಸಾಮಾನ್ಯವಾಗಿ ಪ್ರತ್ಯೇಕಿಸಲ್ಪಡುತ್ತವೆ; ಉದಾಹರಣೆಗೆ 82.131.34.56 - ಈ ಸ್ವರೂಪದಲ್ಲಿ ಅವನ್ನು ಬರೆಯಲಾಗುತ್ತದೆ.
TCP/IP ಇವು ಮೂಲಭೂತ ವಿಧ್ಯುಕ್ತ ಕ್ರಮಗಳಾಗಿದ್ದು, ದತ್ತಾಂಶ ಜಾಲದ ಅಡ್ಡಹಾಯುವಂತೆ ಸಂದೇಶಗಳ ನಿಯಂತ್ರಣ ಮತ್ತು ಮಾರ್ಗನಿರ್ದೇಶನವನ್ನು ಅವು ಒದಗಿಸುತ್ತವೆ. ಸಂದೇಶಗಳನ್ನು ಪರಿಣಾಮಕಾರಿಯಾಗಿ ಮಾರ್ಗ ನಿರ್ದೇಶಿಸಲೆಂದು TCP/IPಯನ್ನು ಅಡ್ಡಹಾಯ್ಕೆಯಾಗಿ ಬಳಸಲು ಸಾಧ್ಯವಿರುವ ವಿಭಿನ್ನವಾದ ಅನೇಕ ಜಾಲ ರಚನೆಗಳು ಅಸ್ತಿತ್ವದಲ್ಲಿವೆ, ಉದಾಹರಣೆಗೆ:
- ವ್ಯಾಪಕ ಪ್ರದೇಶದ ಜಾಲಗಳು (ವೈಡ್ ಏರಿಯಾ ನೆಟ್‌ವರ್ಕ್ಸ್-WAN)
- ಮಹಾನಗರ ಪ್ರದೇಶದ ಜಾಲಗಳು (ಮೆಟ್ರೋಪಾಲಿಟನ್ ಏರಿಯಾ ನೆಟ್‌ವರ್ಕ್ಸ್-MAN)
- ಸ್ಥಳೀಯ ಪ್ರದೇಶದ ಜಾಲಗಳು (ಲೋಕಲ್ ಏರಿಯಾ ನೆಟ್‌ವರ್ಕ್ಸ್-LAN)
- ಆವರಣ ಪ್ರದೇಶದ ಜಾಲಗಳು (ಕ್ಯಾಂಪಸ್ ಏರಿಯಾ ನೆಟ್‌ವರ್ಕ್ಸ್-CAN)
- ವಾಸ್ತವಾಭಾಸದ ಖಾಸಗಿ ಜಾಲಗಳು (ವರ್ಚುಯಲ್ ಪ್ರೈವೇಟ್ ನೆಟ್‌ವರ್ಕ್ಸ್-VPN)
MANಗಳನ್ನು LANಗಳಿಂದ ಅಥವಾ WANಗಳಿಂದ ಪ್ರತ್ಯೇಕಿಸುವ ಮೂರು ಲಕ್ಷಣಗಳು ಅಸ್ತಿತ್ವದಲ್ಲಿವೆ:
- ಜಾಲದ ಗಾತ್ರದ ವಿಸ್ತೀರ್ಣವು LANಗಳು ಮತ್ತು WANಗಳ ನಡುವೆ ಇರುತ್ತದೆ. ವ್ಯಾಸದಲ್ಲಿ 5 ಮತ್ತು 50 ಕಿ.ಮೀ. ನಡುವಿನ ಒಂದು ಭೌತಿಕ ವಿಸ್ತೀರ್ಣವನ್ನು MAN ಹೊಂದಿರುತ್ತದೆ.[೨]
- MANಗಳು ಸಾಮಾನ್ಯವಾಗಿ ಒಂದು ಏಕ ಸಂಘಟನೆಗೆ ಸೇರಿರುವುದಿಲ್ಲ. ಜಾಲವನ್ನು ಪರಸ್ಪರ ಸಂಪರ್ಕಿಸುವ ಉಪಕರಣವಾಗಿರುವ ಕೊಂಡಿಗಳ, ಮತ್ತು ಸ್ವತಃ MANನ ಸ್ವಾಮ್ಯತೆಯು ಅನೇಕವೇಳೆ ಸಂಸ್ಥೆಯೊಂದರ ಬಳಿ ಅಥವಾ ಜಾಲವನ್ನು ಒದಗಿಸುವ ಸಂಸ್ಥೆಯೊಂದರ ಬಳಿ ಇರುತ್ತದೆ; ಈ ಸಂಸ್ಥೆಗಳು ಇತರರಿಗೆ ಸೇವೆಯನ್ನು ಒದಗಿಸುತ್ತವೆ ಅಥವಾ ಗುತ್ತಿಗೆಯ ಆಧಾರದ ಮೇಲೆ ನೀಡುತ್ತವೆ.[೨]
- MAN ಎಂಬುದು ಜಾಲದ ವ್ಯಾಪ್ತಿಯೊಳಗೆ ಉನ್ನತವಾದ ವೇಗಗಳಲ್ಲಿ ಮೂಲಗಳನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದ ಒಂದು ಸಾಧನ ಅಥವಾ ಮಾರ್ಗವಾಗಿದೆ. ಅನೇಕವೇಳೆ ಇದು MANನ ವ್ಯಾಪ್ತಿಯ ಹೊರಗಡೆ ಇರುವ ಮೂಲಗಳಿಗೆ ಸಂಪರ್ಕ ಸಾಧಿಸುವುದಕ್ಕೆ ಸಂಬಂಧಿಸಿದಂತೆ WAN ಜಾಲಗಳಿಗೆ ಸಂಪರ್ಕಗಳನ್ನು ಒದಗಿಸುತ್ತದೆ.[೨]
ಇವನ್ನೂ ಗಮನಿಸಿ
[ಬದಲಾಯಿಸಿ]- ಸಕ್ರಿಯ ಜಾಲಕಲ್ಪಿಸುವಿಕೆ
- ಸಂಪರ್ಕ ಜಾಲ
- ಪ್ರಧಾನ ಜಾಲ
- ಪ್ರಸಾರವ್ಯಾಪ್ತಿ (ದೂರಸಂಪರ್ಕ ವ್ಯವಸ್ಥೆ)
- ಒಕ್ಕೂಟ (ಮಾಹಿತಿ ತಂತ್ರಜ್ಞಾನ)
- MVNE
- MVNO
- ಜಾಲ ನಿಸ್ಪಂದ
- ನ್ಯಾನೊಸ್ಕೇಲ್ ಜಾಲ
- ಜಾಲದ ಮಾದರಿ
- ದ್ಯುತಿ ತಂತು (ಆಪ್ಟಿಕಲ್ ಫೈಬರ್)
- ಜಲಾಂತರ್ಗಾಮಿ ಸಂಪರ್ಕಗಳ ಕೇಬಲ್
- ದ್ಯುತಿ ಜಾಲರಿಯ ಜಾಲ
ಉಲ್ಲೇಖಗಳು
[ಬದಲಾಯಿಸಿ]
[[ವರ್ಗ:ದೂರಸಂಪರ್ಕ ವ್ಯವಸ್ಥೆಯ ಮೂಲಸೌಕರ್ಯ]]