ವಿಷಯಕ್ಕೆ ಹೋಗು

ದೇವಿ (1960 ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವಿ
ಬೆಂಗಾಲಿ ಶೀರ್ಷಿಕೆಯೊಂದಿಗೆ ಚಲನಚಿತ್ರ ಪ್ರಕಟಣಾ ಪತ್ರಿಕೆ.
ನಿರ್ದೇಶನಸತ್ಯಜಿತ್ ರೇ
ನಿರ್ಮಾಪಕಸತ್ಯಜಿತ್ ರೇ
ಲೇಖಕಪ್ರಭಾತ್ ಕುಮಾರ್ ಮುಖೋಪದ್ಧಯ್
ಪಾತ್ರವರ್ಗಶರ್ಮಿಳಾ ಟ್ಯಾಗೋರ್
ಸೌಮಿತ್ರ ಚಟರ್ಜಿ
ಚಾಬಿ ಬಿಸ್ವಾಸ್
ಸಂಗೀತಅಲಿ ಅಕ್ಬರ್ ಖಾನ್
ಛಾಯಾಗ್ರಹಣಸುಬ್ರತ ಮಿತ್ರ
ಸಂಕಲನದುಲಾಲ್ ದತ್ತಾ
ಬಿಡುಗಡೆಯಾಗಿದ್ದು
  • 19 ಫೆಬ್ರವರಿ 1960 (1960-02-19)
ಅವಧಿ೯೩ ನಿಮಿಷಗಳು
ದೇಶಭಾರತ
ಭಾಷೆಬಂಗಾಳಿ

ದೇವಿ (ದೇವತೆ) ೧೯೬೦ ರಲ್ಲಿ, ನಿರ್ದೇಶಕರಾದ ಸತ್ಯಜಿತ್ ರೇ ಅವರ ಬಂಗಾಳಿ ಭಾಷೆಯ ನಾಟಕವಾಗಿದ್ದು, ಶರ್ಮಿಳಾ ಟ್ಯಾಗೋರ್, ಸೌಮಿತ್ರ ಚಟರ್ಜಿ ಮತ್ತು ಚಾಬಿ ಬಿಸ್ವಾಸ್ ನಟಿಸಿದ್ದಾರೆ. ಇದು ಪ್ರಭಾತ್ ಕುಮಾರ್ ಮುಖ್ಯೋಪಾಧ್ಯಾಯ ಅವರ ಸಣ್ಣ ಕಥೆಯನ್ನು ಆಧರಿಸಿದೆ. ತನ್ನ ಸೊಸೆ (ಠಾಕೂರ) ಕನಸಿನಲ್ಲಿ ಅವತಾರ ತಾಳಿದ ದೇವತೆ ಎಂದು ನಂಬುವ ಜಮೀನ್ದಾರ (ಬಿಸ್ವಾಸ್) ನನ್ನು ಕಥಾವಸ್ತು ಅನುಸರಿಸುತ್ತದೆ.

ಕಥಾವಸ್ತು

[ಬದಲಾಯಿಸಿ]

೧೯ ನೇ ಶತಮಾನದಂದು ಗ್ರಾಮೀಣ ಬಂಗಾಳದಲ್ಲಿ, ಕಾಳಿ ದೇವಿಯ ಭಕ್ತರಾದ ಜಮೀನ್ದಾರ (ಕಾಳಿಕಿಂಕರ್ ರಾಯ್‌ರವರು) ಅವರ ಮಕ್ಕಳಾದ ತಾರಾಪ್ರಸಾದ್ ಮತ್ತು ಉಮಾಪ್ರಸಾದ್, ತಾರಾಪ್ರಸಾದ್ ಅವನ ಪತ್ನಿ ಹರಸುಂದರಿ ಮತ್ತು ಉಮಾಪ್ರಸಾದ್ ಅವನ ಪತ್ನಿ ಡೊಯಾಮೊಯಿ ಮಗ ಖೋಕಾ ಅವರೊಂದಿಗೆ ಸೇವಕರು ಮತ್ತು ಸಾಕಷ್ಟು ಸ್ಥಳಾವಕಾಶವಿರುವ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಹಬ್ಬದ ನಂತರ, ಉಮಾಪ್ರಸಾದ್ ತನ್ನ ಶಾಲಾ ಶಿಕ್ಷಣವನ್ನು ಮುಂದುವರಿಸಲು ಕಲ್ಕತ್ತಾಗೆ (ಕೋಲ್ಕತ್ತಾ) ಮರಳುತ್ತಾನೆ. ಇದರಲ್ಲಿ ಇಂಗ್ಲಿಷ್ ಕಲಿಕೆಯು ಸೇರಿದೆ. ಆದರೆ, ಡೊಯಾಮೊಯಿ ಖೋಕಾಳನ್ನು ನೋಡಿಕೊಳ್ಳಲು ಸಹಾಯ ಮಾಡಲು ಮನೆಯಲ್ಲೇ ಉಳಿಯುತ್ತಾಳೆ. ಅವನೊಂದಿಗೆ ಅವಳು ಬಹುತೇಕ ತಾಯಿಯ ಬಂಧವನ್ನು ಹೊಂದಿದ್ದಾಳೆ. ಜೊತೆಗೆ, ಕಾಳಿಕಿಂಕರ್ ತನ್ನ ದೈನಂದಿನ ಪ್ರಾರ್ಥನೆಗಳು ಮತ್ತು ಆಚರಣೆಗಳಿಗೆ ಸಹಾಯ ಮಾಡುತ್ತಾಳೆ.

ಕಾಲಿಕಿಂಕರ್‌ರವರಿಗೆ ಒಂದು ಕನಸು ಬೀಳುತ್ತದೆ. ಅದರಲ್ಲಿ, ಕಾಳಿ ದೇವಿ ಮತ್ತು ಡೊಯಾಮೊಯಿ ಅವರ ಕಣ್ಣುಗಳು ವಿಲೀನಗೊಳ್ಳುತ್ತವೆ. ಇದು ಡೊಯಾಮೊಯಿ ದೇವಿಯ ಅವತಾರ ಎಂದು ಬಹಿರಂಗಪಡಿಸುತ್ತದೆ ಎಂದು ಅವರು ವ್ಯಾಖ್ಯಾನಿಸುತ್ತಾರೆ. ಕಾಲಿಕಿಂಕರ್‌‌ರವರು ಅವಳನ್ನು ಎಬ್ಬಿಸಿ ಅವಳ ಕಾಲಿಗೆ ಬೀಳುತ್ತಾರೆ ಮತ್ತು ನಿಷ್ಕ್ರಿಯನಾದ ತಾರಾಪ್ರಸಾದ್ ಅದನ್ನು ಅನುಸರಿಸುತ್ತಾನೆ. ಆದರೂ, ಹರಸುಂದರಿ ಅನುಮಾನದಿಂದ ಇರುತ್ತಾಳೆ. ಕುಟುಂಬದ ಪುರೋಹಿತರನ್ನು ಕರೆದು ಹೋಮ ಮತ್ತು ಗಂಟೆಗಳೊಂದಿಗೆ ಆಚರಣೆಯನ್ನು ನಡೆಸಲಾಗುತ್ತದೆ. ಡೊಯಾಮೊಯಿ ಮೂರ್ಛೆ ಹೋಗುತ್ತಾಳೆ. ಇದನ್ನು ಕಾಳಿಕಿಂಕರ್‌ರವರು ಅವಳು ಪ್ರಜ್ಞೆಗೆ ಹೋಗುತ್ತಿರುವಂತೆ ವ್ಯಾಖ್ಯಾನಿಸುತ್ತಾರೆ. ಅವಳು ಎಚ್ಚರವಾದಾಗ, ಉಮಾಪ್ರಸಾ‌ದ್‌ಗೆ ಪತ್ರ ಬರೆಯುವಂತೆ ಹರಸುಂದರಿಯನ್ನು ಕೇಳುತ್ತಾಳೆ.

ಡೊಯಾಮೊಯಿಯನ್ನು ಬಂಗಲೆಯ ಖಾಸಗಿ ಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ ಮತ್ತು ವಿಗ್ರಹವಾಗಿ ಕುಳಿತುಕೊಳ್ಳುವಂತೆ ಮಾಡಲಾಗುತ್ತದೆ. ಅದರ, ಸುತ್ತಲೂ ನಿಯಮಿತ ಪೂಜಾ ಆಚರಣೆಗಳನ್ನು ನಡೆಸಲಾಗುತ್ತದೆ. ಸ್ಥಳೀಯ ಭಿಕ್ಷುಕನೊಬ್ಬ ತಾನು ಯೋಚಿಸಬಹುದಾದ ಎಲ್ಲವನ್ನೂ ಪ್ರಯತ್ನಿಸಿದ ನಂತರ, ತನ್ನ ಪ್ರಜ್ಞಾಹೀನ ಮೊಮ್ಮಗನನ್ನು ಅವಳ ಬಳಿಗೆ ಕರೆತರುತ್ತಾನೆ ಮತ್ತು ಕಾಳಿಕಿಂಕರ್‌ರವರು ಹುಡುಗನಿಗೆ ಕುಡಿಯಲು ಸ್ವಲ್ಪ ಚರಣಾಮೃತವನ್ನು (ದೇವಿಯ ಪಾದಗಳನ್ನು ತೊಳೆಯಲು ಬಳಸುವ ನೀರು) ನೀಡುವಂತೆ ಸೂಚಿಸುತ್ತಾನೆ. ಈ ಪ್ರಕ್ರಿಯೆಯ ಸಮಯದಲ್ಲಿ ಉಮಾಪ್ರಸಾದ್ ಆಗಮಿಸುತ್ತಾನೆ ಮತ್ತು ಇಡೀ ದೃಶ್ಯದಿಂದ ಆಘಾತಕ್ಕೊಳಗಾಗಿ, ತನ್ನ ತಂದೆಯೊಂದಿಗೆ ಖಾಸಗಿಯಾಗಿ ವಾದಿಸುತ್ತಾನೆ. ಕಾಳಿಕಿಂಕರ್‌ರವರು ತಮ್ಮ ಖಚಿತತೆಯನ್ನು ಸಂಕ್ಷಿಪ್ತವಾಗಿ ಪ್ರಶ್ನಿಸುತ್ತಾರೆ. ಆದರೆ, ಅನಾರೋಗ್ಯದ ಹುಡುಗ ಕಣ್ಣು ತೆರೆದಾಗ, ಅದು ಡೊಯಾಮೊಯಿಯ ದೈವತ್ವಕ್ಕೆ ಪುರಾವೆ ಎಂದು ಅವರು ಭಾವಿಸುತ್ತಾರೆ.

ಆ ರಾತ್ರಿ, ಉಮಾಪ್ರಸಾದ್ ಡೊಯಾಮೊಯಿಯ ಕೋಣೆಗೆ ಹೋಗುತ್ತಾನೆ ಮತ್ತು ಅವಳನ್ನು ತನ್ನೊಂದಿಗೆ ಬರುವಂತೆ ಕೇಳುತ್ತಾನೆ. ಅವರು ನದಿಯ ದಡಕ್ಕೆ ತಲುಪುತ್ತಾರೆ. ಅಲ್ಲಿ ದೋಣಿ ಕಾಯುತ್ತಿರುತ್ತದೆ. ಆದರೆ, ಡೊಯಾಮೊಯಿ ಹಿಂಜರಿಯುತ್ತಾಳೆ ಮತ್ತು ಆತಂಕಕ್ಕೊಳಗಾಗುತ್ತಾಳೆ. ಅವಳು ಬಹುಶಃ ದೇವತೆಯೇ ಎಂದು ಯೋಚಿಸಲು ಪ್ರಾರಂಭಿಸುತ್ತಾಳೆ ಮತ್ತು ಹೊರಡಲು ಹೆದರಿ, ಉಮಾಪ್ರಸಾದ್‌ನನ್ನು ಮನೆಗೆ ಕರೆದೊಯ್ಯುವಂತೆ ಕೇಳುತ್ತಾಳೆ. ಒಲ್ಲದ ಮನಸ್ಸಿನಿಂದ ಅವನು ಅದನ್ನು ಪಾಲಿಸುತ್ತಾನೆ ಮತ್ತು ಕಲ್ಕತ್ತಾಗೆ ಒಬ್ಬಂಟಿಯಾಗಿ ಹಿಂದಿರುಗುತ್ತಾನೆ.

ಅಸ್ವಸ್ಥ ಹುಡುಗನೊಂದಿಗೆ ಪವಾಡದ ಬಗ್ಗೆ ಸುದ್ದಿ ಹರಡುತ್ತಿದ್ದಂತೆ, ಡೊಯಾಮೊಯಿಯ ಅನುಯಾಯಿಗಳು ವೇಗವಾಗಿ ಬೆಳೆಯುತ್ತಾರೆ ಮತ್ತು ಬೇಡಿಕೊಳ್ಳುವವರು ಅವಳನ್ನು ಪೂಜಿಸಲು ದೂರದಿಂದ ಪ್ರಯಾಣಿಸುತ್ತಾರೆ. ಸಮಾರಂಭಗಳ ಸಮಯದಲ್ಲಿ ಅವಳು ಮೌನವಾಗಿ ಕುಳಿತುಕೊಳ್ಳುತ್ತಾಳೆ. ಆದರೆ, ಅವಳ ಪ್ರತ್ಯೇಕತೆಯ ಭಾವನೆಗಳು ಬೆಳೆಯುತ್ತವೆ. ಮಗ ಖೋಕಾ ಕೂಡ ಅವಳನ್ನು ತಪ್ಪಿಸಲು ಪ್ರಾರಂಭಿಸುತ್ತಾನೆ.

ಒಂದು ದಿನ, ಖೋಕಾಗೆ ಹೆಚ್ಚಿನ ಜ್ವರ ಬರುತ್ತದೆ. ಹರಸುಂದರಿ ವೈದ್ಯರನ್ನು ಕರೆಯುತ್ತಾಳೆ ಮತ್ತು ಕಾಳಿಕಿಂಕರ್‌ರವರಿಗೆ ತಿಳಿಯದೆ ಅಲ್ಲಿರಲು ಅವಳಿಗೆ ಅನಾನುಕೂಲವಾಗಿದ್ದರೂ, ಅವಳು ಕೆಲವು ಔಷಧಿಗಳೊಂದಿಗೆ ಹಿಂತಿರುಗಲು ಒಪ್ಪುತ್ತಾಳೆ. ಆದಾಗ್ಯೂ, ವೈದ್ಯರು ಹೊರಡುತ್ತಿದ್ದಂತೆ ತಾರಾಪ್ರಸಾದ್ ಪ್ರವೇಶಿಸುತ್ತಾನೆ ಮತ್ತು ಅವನು ಏನು ನಡೆಯುತ್ತಿದೆ ಎಂದು ಕಾಳಿಕಿಂಕರ್‌ರವರಿಗೆ ಹೇಳುತ್ತಾನೆ. ಕಾಳಿಕಿಂಕರ್‌ರವರು ಖೋಕನನ್ನು ಡೊಯಾಮಿಯ ಬಳಿಗೆ ಕರೆತಂದು ಹುಡಗನನ್ನು ಗುಣಪಡಿಸುವಂತೆ ಕೇಳುತ್ತಾರೆ. ಹರಸುಂದರಿ ಮತ್ತು ಡೊಯಾಮೊಯಿ ಇಬ್ಬರಿಗೂ ಇದು ಒಳ್ಳೆಯದು ಎಂದು ಗಂಭೀರ ಅನುಮಾನಗಳಿದ್ದರೂ, ಖೋಕಾಗೆ ಸ್ವಲ್ಪ ಚರಣಾಮೃತವನ್ನು ನೀಡುವ ಯೋಜನೆಯೊಂದಿಗೆ ಹೋಗಲು ಅವರು ಒಪ್ಪುತ್ತಾರೆ ಮತ್ತು ಆ ರಾತ್ರಿ ಡೊಯಾಮೊಯಿ ಅವನನ್ನು ಹಿಡಿದಿಡಲು ಅವಕಾಶ ನೀಡುತ್ತಾಳೆ. ಖೋಕಾ ಬೆಳಿಗ್ಗೆ ಸತ್ತಿರುತ್ತಾನೆ.

ಉಮಾಪ್ರಸಾದ್ ಮನೆಗೆ ಹಿಂದಿರುಗಿದಾಗ ಕಾಳಿಕಿಂಕರ್‌ರವರು ಒಬ್ಬಂಟಿಯಾಗಿ ಕಾಳಿಯ ಪ್ರತಿಮೆಯ ಬುಡದಲ್ಲಿ ಅಳುತ್ತಿರುವುದನ್ನು ನೋಡುತ್ತಾನೆ. ಅವನು ತನ್ನ ತಂದೆ ತನ್ನ ಕುರುಡು ನಂಬಿಕೆಯ ಮೂಲಕ ಖೋಕಾಳನ್ನು ಕೊಂದಿದ್ದಾನೆ ಎಂದು ಆರೋಪಿಸುತ್ತಾನೆ. ನಂತರ, ತನ್ನ ಹೆಂಡತಿಯನ್ನು ದೈವತ್ವದ ಹೊರೆಯಿಂದ ರಕ್ಷಿಸಲು ಉದ್ದೇಶಿಸಿದ್ದೇನೆ ಎಂದು ಹೇಳುತ್ತಾನೆ. ಆದರೆ, ಅವನು ತುಂಬಾ ತಡವಾಗಿ ಬಂದಂತೆ ತೋರುತ್ತದೆ. ಡೊಯಾಮೊಯಿ ತನ್ನ ಮದುವೆಯ ಉಡುಪನ್ನು ಧರಿಸಿರುವುದನ್ನು ಅವನು ನೋಡುತ್ತಾನೆ. ಅವಳನ್ನು ಕೊಲ್ಲುವ ಮೊದಲು ಅವರು ಹೊರಡಬೇಕು ಎಂದು ಹೇಳುತ್ತಾನೆ. ಅವಳು ಮಂಜಿನಲ್ಲಿ ಓಡಿಹೋಗುತ್ತಾಳೆ. ಉಮಾಪ್ರಸಾದ್ ಅವಳನ್ನು ಕರೆಯುತ್ತಾನೆ.

ಪಾತ್ರವರ್ಗ

[ಬದಲಾಯಿಸಿ]
  • ಉಮಾಪ್ರಸಾದ್ ಅವರ ಪತ್ನಿ ಮತ್ತು ಕಾಳಿಕಿಂಕರ್ ಅವರ ಸೊಸೆಯಾಗಿ ಶರ್ಮಿಳಾ ಟ್ಯಾಗೋರ್.
  • ಉಮಾಪ್ರಸಾದ್ ರಾಯ್ ಪಾತ್ರದಲ್ಲಿ ಸೌಮಿತ್ರ ಚಟರ್ಜಿ, ಡೊಯಾಮೊಯಿ ಅವರ ಪತ್ನಿ ಮತ್ತು ಕಾಲಿಕಿಂಕರ್ ಅವರ ಕಿರಿಯ ಮಗ.
  • ಕಾಳಿಕಿಂಕರ್ ರಾಯ್ ಪಾತ್ರದಲ್ಲಿ ಚಾಬಿ ಬಿಸ್ವಾಸ್.
  • ತಾರಾಪ್ರಸಾದ್ ಪತ್ನಿ ಹರಸುಂದರಿಯಾಗಿ ಕರುಣಾ ಬ್ಯಾನರ್ಜಿ.
  • ಕಾಳಿಕಿಂಕರ್ ಅವರ ಹಿರಿಯ ಮಗ ತಾರಾಪ್ರಸಾದ್ ರಾಯ್ ಪಾತ್ರದಲ್ಲಿ ಪೂರ್ಣೇಂದು ಮುಖರ್ಜಿ.
  • ಖೋಕಾ, ತಾರಾಪ್ರಸಾದ್ ಮತ್ತು ಹರಸುಂದರಿಯ ಮಗನಾಗಿ ಅರ್ಪನ್ ಚೌಧರಿ.
  • ಭುದೇಬ್ ಪಾತ್ರದಲ್ಲಿ ಅನಿಲ್ ಚಟರ್ಜಿ, ಕಲ್ಕತ್ತಾದಲ್ಲಿ ಉಮಾಪ್ರಸಾದ್ ಸ್ನೇಹಿತ.
  • ತನ್ನ ಮೊಮ್ಮಗನನ್ನು ನೋಡಿಕೊಳ್ಳುವ ಭಿಕ್ಷುಕ ನಿಬಾರನ್ ಪಾತ್ರದಲ್ಲಿ ಮೊಹಮ್ಮದ್ ಇಸ್ರೈಲ್.
  • ಉಮಾಪ್ರಸಾದ್‌ಗೆ ಸಲಹೆ ನೀಡುವ ಪ್ರೊಫೆಸರ್ ಸರ್ಕಾರ್ ಪಾತ್ರದಲ್ಲಿ ಕಾಳಿ ಸರ್ಕಾರ್, ಕವಿರಾಜ್ ಪಾತ್ರದಲ್ಲಿ ಖಗೇಶ್ ಚಕ್ರವರ್ತಿ.
  • ಸರಳಾ ಪಾತ್ರದಲ್ಲಿ ಸಾಂತಾ ದೇವಿ.
  • ಪುರೋಹಿತರಾಗಿ ನಾಗೇಂದ್ರನಾಥ ಕಬ್ಯಾಬ್ಯಾಕರತೀರ್ಥ.

ಸಂರಕ್ಷಣೆ

[ಬದಲಾಯಿಸಿ]

ಅಕಾಡೆಮಿ ಫಿಲ್ಮ್ ಆರ್ಕೈವ್ ದೇವಿಯನ್ನು ೧೯೯೬ ರಲ್ಲಿ ಸಂರಕ್ಷಿಸಿತು.[]

ವಿಮರ್ಶಾತ್ಮಕ ಸ್ವಾಗತ ಮತ್ತು ಪರಂಪರೆ

[ಬದಲಾಯಿಸಿ]

ಈ ಚಿತ್ರವು ಬಿಡುಗಡೆಯಾದ ನಂತರ, ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು.[] ವಿಮರ್ಶೆ ಸಂಗ್ರಾಹಕ ವೆಬ್ಸೈಟ್ ರಾಟನ್ ಟೊಮ್ಯಾಟೋಸ್‌ನಲ್ಲಿ, ಚಿತ್ರದ ಬಗ್ಗೆ ೧೭ ವಿಮರ್ಶಕರ ವಿಮರ್ಶೆಗಳಲ್ಲಿ ೧೦೦% ಸಕಾರಾತ್ಮಕವಾಗಿವೆ. ಸರಾಸರಿ ರೇಟಿಂಗ್ ೭.೭/೧೦ ಆಗಿದೆ.[]

ನಿರ್ದೇಶಕರಾದ ವಿಲಿಯಂ ವೈಲರ್[][] ಮತ್ತು ಎಲಿಯಾ ಕಜಾನ್ ಈ ಚಿತ್ರವನ್ನು "ಸೆಲ್ಯುಲಾಯ್ಡ್ ಮೇಲಿನ ಕಾವ್ಯ" ಎಂದು ಬಣ್ಣಿಸಿದರು ಮತ್ತು ನಿರ್ದೇಶಕರಾದ ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾ ದೇವಿ ಚಿತ್ರವನ್ನು ರೇ ಅವರ ಅತ್ಯುತ್ತಮ ಕೃತಿ ಎಂದು ಪರಿಗಣಿಸುತ್ತಾರೆ. ಇದನ್ನು "ಸಿನಿಮೀಯ ಮೈಲಿಗಲ್ಲು" ಎಂದು ಕರೆಯುತ್ತಾರೆ.[]

ಈ ಚಲನಚಿತ್ರವನ್ನು, ಅಲೆನ್ ಶಿಯರೆರ್ ಅವರು ದಿ ಗಾಡೆಸ್ ಎಂಬ ಒಪೆರಾದಲ್ಲಿ ಅಳವಡಿಸಿಕೊಂಡರು.[]

ಪ್ರಶಸ್ತಿಗಳು

[ಬದಲಾಯಿಸಿ]
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
ಕ್ಯಾನ್ಸ್ ಚಲನಚಿತ್ರೋತ್ಸವ

ಇತರ ಖಾತ್ರಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Preserved Projects". Academy Film Archive. Archived from the original on 15 August 2016. Retrieved 11 August 2016.
  2. "Screen: Satyajit Ray's 'Devi' Arrives:Indian Film Deals With a Religious Conflict: Creator of 'Apu' Plays Old Against New". The New York Times print archive. 8 October 1962. Archived from the original on 2017-10-11. Retrieved 6 August 2022.
  3. "Devi (The Goddess)". Rotten Tomatoes. 11 July 2007. Archived from the original on 10 December 2017. Retrieved 18 January 2025.
  4. Gupta, Ranjan Das (30 April 2011). "Ray at Cannes". The Hindu Times. Archived from the original on 25 September 2020. Retrieved 25 May 2019.
  5. Roisin, Fariha (18 August 2014). "Why the Best American Filmmakers Owe a Debt to Satyajit Ray". IndieWire. Archived from the original on 15 April 2018. Retrieved 25 May 2019.
  6. Gupta, Ranjan Das (27 November 2010). "Back behind the camera". The Hindu (in Indian English). Archived from the original on 21 May 2022. Retrieved 21 May 2022.
  7. "Allen Shearer". American Composers Forum. Archived from the original on 9 December 2021. Retrieved 7 December 2021.
  8. "8th National Film Awards". International Film Festival of India. Archived from the original on 12 October 2013. Retrieved 7 September 2011.
  9. "Festival de Cannes: Devi". festival-cannes.com. Archived from the original on 23 August 2011. Retrieved 22 February 2009.


ಬಾಹ್ಯ ಕೊಂಡಿಗಳು

[ಬದಲಾಯಿಸಿ]