ದೊಡ್ಡಮನೆ
ಗೋಚರ
ದೊಡ್ಡಮನೆಯು (ಸೌಧ) ದೊಡ್ಡದಾದ ವಾಸದ ಮನೆ.
ಆಧುನಿಕ ದೊಡ್ಡಮನೆಗಳು
[ಬದಲಾಯಿಸಿ]೨೦ನೇ ಮತ್ತು ೨೧ನೇ ಶತಮಾನದ ಅವಧಿಯಲ್ಲಿ ಕಟ್ಟಲ್ಪಟ್ಟ ದೊಡ್ಡಮನೆಗಳು ಸಾಮಾನ್ಯವಾಗಿ ನಿರ್ದಿಷ್ಟ ಬಗೆಯ ಬಿಡುವಿನ ಚಟುವಟಿಕೆಗಳ ಸ್ಥಳಮಾಡಿಕೊಡಲು ಕಲ್ಪಿಸಲಾದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೋಣೆಗಳನ್ನು ಹೊಂದಿರುತ್ತವೆ. ಅನೇಕ ದೊಡ್ಡಮನೆಗಳು ಸಂರಕ್ಷಣಾಲಯ ಅಥವಾ ಹಸಿರುಮನೆಯನ್ನು ಹೊಂದಿದ್ದರೆ, ಇತರ ದೊಡ್ಡಮನೆಗಳು ಈಜುಕೊಳ ಅಥವಾ ಹೋಮ್ ಥಿಯೇಟರ್‌ನ್ನು ಹೊಂದಿರುತ್ತವೆ. ಕೆಲವು ದೊಡ್ಡಮನೆಗಳು ಈ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಈ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೋಣೆಗಳ ತುಲನಾತ್ಮಕ ಮಹತ್ವವು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ೨೦ನೇ ಶತಮಾನದ ಆರಂಭದಲ್ಲಿ, ಖಾಸಗಿ ಗ್ರಂಥಾಲಯ ಅಥವಾ ವ್ಯಾಸಂಗದ ಕೋಣೆಯಿರದ ಯಾವುದೇ ನೈಜ ದೊಡ್ಡಮನೆಯನ್ನು ಕಟ್ಟುತ್ತಿರಲಿಲ್ಲ. ೨೧ನೇ ಶತಮಾನದ ಆರಂಭದಲ್ಲಿ, ಹೋಮ್ ಥಿಯೇಟರ್ ಅಥವಾ ಸಿನೆಮಾಗಾಗಿ ವಿನ್ಯಾಸಗೊಳಿಸಲಾದ ಕೋಣೆ ಇರುವುದು ಸಾಮಾನ್ಯವಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Historic Mansions and Estates in Latin America
- Estonian Manors Portal the English version introduces 438 well-preserved historical manors (mansions, estates) in Estonia