ದ ಕೆನೆಡಿಯನ್ ಇಂಟರ್ನ್ಯಾಷನಲ್ ಏರ್ ಶೊ
'ದ ಕೆನೆಡಿಯನ್ ಇಂಟರ್ ನ್ಯಾಷನಲ್ ಏರ್ ಶೊ' (CIAS) ಪ್ರತಿವರ್ಷವೂ ನಡೆಯುವ ಕಾರ್ಯಕ್ರಮಗಳಲ್ಲೊಂದು. 'ಕೆನೆಡಿಯನ್ ನ್ಯಾಷನಲ್ ಎಕ್ಸಿಬಿಶನ್' ಸಮಯದಲ್ಲಿ ನಡೆಯುತ್ತದೆ. ೧೯೪೯ ರಿಂದ ಟೊರಾಂಟೋ ನಗರದಲ್ಲಿ ಆಚರಿಸಲ್ಪಡುತ್ತಾ ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ೩ ದಿನ ಕೆನಡಾ, ಅಮೆರಿಕ, ಹಾಗೂ ಇತರದೇಶಗಳ ವಿಮಾನಗಳ ಹಾರಾಟದ ಪ್ರದರ್ಶನ ಜರುಗುತ್ತದೆ.
ಇತಿಹಾಸ
[ಬದಲಾಯಿಸಿ]೨೦ ನೆಯ ಶತಮಾನದ ಮೊದಲಿನಲ್ಲೇ ಟೊರಾಂಟೋ ನಗರ, ಪ್ರಯಾಣಿಕರ ವಿಮಾನಯಾನ, ಹಾಗೂ ವಿಮಾನ ತಯಾರುಮಾಡುವ ಕಾರ್ಖಾನೆಗಳ ನಗರವೆನಿಸಿದೆ. ಹಲವಾರು 'ಏರ್ ಶೋ'ಗ ತಾಣವೆನಿಸಿಕೊಂಡಿದೆ. ಸನ್ ೧೯೪೬ ರಲ್ಲಿ, 'ದ ಕೆನೆಡಿಯನ್ ಇಂಟರ್ ನ್ಯಾಷನಲ್ ಏರ್ ಶೊ' ಇಲ್ಲಿ ಆರಂಭವಾಯಿತು. 'ಡೌನ್ಸ್ ವ್ಯೂ ಏರ್ಪೋರ್ಟ್' ನಲ್ಲಿ ಆಫ್ ಕೆನಡಾ ಡಿ ಹ್ಯಾವಿಲ್ಯಾಂಡ್ ಕೆನಡ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್' ನಲ್ಲಿ 'ದ ನ್ಯಾಷನಲ್ ಏರೊನಾಟಿಕಲ್ ಅಸೋಸಿಯೇಷನ್' ನಡೆಸಿದ ಶೋವನ್ನು ಜನ ನಿಬ್ಬೆರಗಾಗಿ ವೀಕ್ಷಿಸುತ್ತಿದ್ದರು. ಇದರಿಂದ ಸ್ಫೋರ್ತಿಗೊಂಡು ಪ್ರತಿವರ್ಷವೂ ಈ ಶೋ ಆಯೋಜಿಸಲು ಏರ್ಪಾಡುಮಾಡಲಾಯಿತು. ೧೯೪೯ ರಲ್ಲಿ 'ಏರ್ ಶೊ ಎಕ್ಸಿಬಿಶನ್ ಪ್ಲೇಸ್ 'ಗೆ ಸ್ಥಾಳಾಂತರಗೊಳಿಸಲಾಯಿತು. ೧೯೫೬ ರ ಬಳಿಕ ಇದು ಸತತವಾಗಿ ಸಿ.ಎನ್.ಇ (CNE) ನಲ್ಲಿಯೇ ಮುಂದುವರೆದಿದೆ.