ಧರ್ಮಪುರಿ ಜಿಲ್ಲೆ
ಧರ್ಮಪುರಿ ಜಿಲ್ಲೆ[೧] ದಕ್ಷಿಣ ಭಾರತದ ತಮಿಳುನಾಡು ಎಂಬ ರಾಜ್ಯದಲ್ಲಿದೆ. ಇದು ೩೨ ಜಿಲ್ಲೆಗಳಲ್ಲಿ ಒಂದಾಗಿದೆ. ಈ ಜಿಲ್ಲೆ ೧೦ನೇ ಅಕ್ಟೋಬರ್, ೧೯೬೫ರಿಂದ ಅಸ್ತಿತ್ವಕ್ಕೆ ಬಂದಿತು. ಇದು ಸ್ವಾತಂತ್ರ್ಯದ ನಂತರ ತಮಿಳುನಾಡು ರಚಿಸಿದ ಮೊದಲ ಜಿಲ್ಲೆಯಾಗಿದೆ. ೨೦೧೧ನೇ ವರ್ಷದ ಪ್ರಕಾರ ಜಿಲ್ಲೆಯ ಪ್ರತಿ ೧೦೦೦ ಪುರುಷರಿಗೆ ೯೪೬ ಮಹಿಳೆಯರು ಲಿಂಗ ಅನುಪಾತದ ಜೊತೆ ೧೫೦೬೮೪೩ ಜನಸಂಖ್ಯೆಯನ್ನು ಹೊಂದಿತ್ತು.
ನಿಷ್ಪತ್ತಿ
[ಬದಲಾಯಿಸಿ]ಧರ್ಮಪುರಿ, ಸಂಗಮ ಯುಗದಲ್ಲಿ "ತಗಡೂರ್" ಎಂದು ಕರೆಯಲಾಗುತ್ತಿತ್ತು. "ತಗಡು" ಎಂದರೆ ಕಬ್ಬಿಣ(ಕಬ್ಬಿಣದ ಅದಿರು), "ಊರ್" ಎಂದರೆ ಸ್ಥಳ.
ಇತಿಹಾಸ
[ಬದಲಾಯಿಸಿ]ಸಂಗಮ ಯುಗದ ಆರಂಭದಲ್ಲಿ ತಗಡೂರನ್ನು ಆಳಿದ ನಾಯಕ ಅದಿಯಮಾನ್ ನಡುಮಾನ್ ಅಂಜಿ, ಅವರು ಪ್ರೋತ್ಸಾಹಗೊಂಡ ಅವ್ವೈಯಾರ್, ಆಸ್ಥಾನದಲ್ಲಿ ಕವಯಿತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವ್ವೈಯಾರ್'ರವರು ತಮಿಳಿನ ಪ್ರಸಿದ್ದ ಕವಯಿತ್ರಿಯಾಗಿದ್ದಾರೆ. ೮ನೇ ಶತಮಾನದಲ್ಲಿ ಪಲ್ಲವರ ಪ್ರಭುತ್ವದಲ್ಲಿ ಈ ಪ್ರದೇಶವನ್ನು ನಿಯಂತ್ರಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಪ್ರಸ್ತುತ ಧರ್ಮಪುರಿ ಜಿಲ್ಲೆಯು ಸೇಲಂ ಜಿಲ್ಲೆಯ ಭಾಗವಾಗಿತ್ತು. ನಮ್ಮ ದೇಶದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಿಂದ ೧೯೪೭ರ ತನಕ ಧರ್ಮಪುರಿ, ಸೇಲಂ ಜಿಲ್ಲೆಯ ತಾಲೂಕುಗಳಲ್ಲಿ ಒಂದಾಗಿತ್ತು. ೨ನೇ ಅಕ್ಟೋಬರ್, ೧೯೬೫ರಿಂದ ಧರ್ಮಪುರಿ ಜಿಲ್ಲೆಯನ್ನು ಒಂದು ಪ್ರತ್ಯೇಕ ಜಿಲ್ಲೆಯಾಗಿ ರೂಪಿಸಲಾಯಿತು. ಶ್ರೀ.ಜಿ.ತಿರುಮಾಲ್, ಐಎಎಸ್, ಧರ್ಮಪುರಿ ಜಿಲ್ಲೆಯ ಮೊದಲ ಕಲೆಕ್ಟರಾಗಿದ್ದರು. ೨೦೦೪ರಲ್ಲಿ ಧರ್ಮಪುರಿ ಜಿಲ್ಲೆಯನ್ನು ಇಂದಿನ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಾಗಿ ಎರಡು ಭಾಗ ಮಾಡಲಾಯಿತು.[೨] ಈ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಕಲ್ಲಿನ ಶಿಲ್ಪಿಗಳು ಕಂಡು ಬರುತ್ತವೆ. ಧರ್ಮಪುರಿ ಹತ್ತಿರದಲ್ಲಿರುವ ಮೊಧುರ್ ಹಳ್ಳಿ, ನವಶಿಲಾಯುಗದ ಕಾಲದಿಂದಲೂ ಉಳಿದಿದೆ.
ಭೂಗೋಳಶಾಸ್ತ್ರ
[ಬದಲಾಯಿಸಿ]ಧರ್ಮಪುರಿ ಜಿಲ್ಲೆಯು ತಮಿಳುನಾಡಿನ ಉತ್ತರ ಪಶ್ಚಿಮ ಭಾಗದಲ್ಲಿದೆ. ಪೂರ್ವದಲ್ಲಿ ತಿರುವಣ್ಣಾಮಲೈ ಮತ್ತು ವಿಲುಪುರಂ ಜಿಲ್ಲೆಗಳು, ಉತ್ತರದಲ್ಲಿ ಕೃಷ್ಣಗಿರಿ ಜಿಲ್ಲೆ, ದಕ್ಷಿಣದಲ್ಲಿ ಸೇಲಂ ಜಿಲ್ಲೆ ಹಾಗು ಪಶ್ಚಿಮದಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯಿಂದ ಸುತ್ತುವರಿದಿದೆ. ಧರ್ಮಪುರಿಯ ಭೂಪ್ರದೇಶ ಸಮತಟ್ಟಾದ ರೀತಿಯಲ್ಲಿದೆ. ಇದು ಎನ್ ೧೧ ೪೭' ಮತ್ತು ೧೨ ೩೩' ಅಕ್ಷಾಂಶಗಳು(ಲಾಟಿಟ್ಯೂಡ್/ಲೈಟಿಟ್ಯೂಡ್) ಮತ್ತು ಇ ೭೭ ೦೨' ಮತ್ತು ೭೮ ೪೦' ರೇಖಾಂಶಗಳ(ಲಾಂಗಿಟ್ಯೂಡ್) ನಡುವೆ ಇದೆ. ಇಡೀ ಜಿಲ್ಲೆಯು ಬೆಟ್ಟಗಳು ಹಾಗೂ ಅರಣ್ಯಗಳಿಂದ ಸುತ್ತುವರಿದಿದೆ.
ಹವಾಮಾನ ಮತ್ತು ಮಳೆ
[ಬದಲಾಯಿಸಿ]ಧರ್ಮಪುರಿ ಜಿಲ್ಲೆಯ ಹವಾಮಾನವು ಸಾಮಾನ್ಯವಾಗಿ ಬೆಚ್ಚಗಿನ ವಾತಾವರಣವಾಗಿರುತ್ತದೆ. ಸಾಮಾನ್ಯವಾಗಿ ವರ್ಷದ ಅತ್ಯಂತ ಉಷ್ಣಾಂಶದ ಕಾಲವು ಮಾರ್ಚ್ ತಿಂಗಳಿಂದ ಮೇ ತಿಂಗಳ ವರೆಗೆ ಇರುತ್ತದೆ. ಏಪ್ರಿಲ್ ತಿಂಗಳಿನಲ್ಲಿ ತಾಪಮಾನವು ೩೮ ಡಿಗ್ರಿಗಳ ವರೆಗೆ ಹೋಗುತ್ತದೆ. ಹವಾಮಾನವು ಡಿಸೆಂಬರ್'ನಲ್ಲಿ ತಂಪಾಗುತ್ತದೆ, ಅದು ಫೆಬ್ರವರಿ ತಿಂಗಳ ತನಕ ಮುಂದುವರಿಯುತ್ತದೆ. ಜನವರಿಯಲ್ಲಿ ಈ ಚಳಿಗಾಲದ ಹವಾಮಾನದಲ್ಲಿ ೧೭ ಡಿಗ್ರಿ ತಲುಪುತ್ತದೆ. ಸರಾಸರಿಯಾಗಿ ಧರ್ಮಪುರಿ ಜಿಲ್ಲೆಯು ೮೯೫.೫೬ ಮಿ.ಮೀ. ವಾರ್ಷಿಕ ಮಳೆಯನ್ನು ಪಡೆಯುತ್ತದೆ.
ಅರಣ್ಯಗಳು
[ಬದಲಾಯಿಸಿ]ಇಡೀ ಜಿಲ್ಲೆಯು ಅರಣ್ಯಗಳಿಂದ ಸುತ್ತುವರಿದಿದೆ. "ಸ್ಪೈಡರ್ ವ್ಯಾಲಿ" ಎಂಬ ಕಣಿವೆಯು ಹೊಗೆನ್ಕಲ್ ಜಲಪಾತಕ್ಕೆ ಹತ್ತಿರದಲ್ಲಿರುವುದರಿಂದ ಅನೇಕ ಕಾಡು ಪ್ರಾಣಿಗಳಿಗೆ ಅದು ಆಶ್ರಯವಾಗಿದೆ. ಈ ಜಿಲ್ಲೆಯು, ಆನೆಗಳು ವಲಸೆ ಹೋಗುವ ಮಾರ್ಗದಲ್ಲಿ ಬರುತ್ತದೆ. ಮನುಷ್ಯ ಮತ್ತು ಆನೆಗಳ ಸಂಘರ್ಷಣೆಗಳು ಈ ಭಾಗಗಳಲ್ಲಿ ಸರ್ವೇ ಸಾಮಾನ್ಯ. ಬಹಳಷ್ಟು ಆದಿವಾಸಿಗಳು/ಕಾಡಿನ ಜನರು ಈ ಅರಣ್ಯವನ್ನೇ ಅವಲಂಬಿಸುತ್ತಾರೆ. ಕಾಫಿ ಮತ್ತು ಹಲಸಿನಹಣ್ಣನ್ನು ಬೆಳೆಸಲು, ವತಲ್ಮಲೈ ಬೆಟ್ಟದ ಸರಣಿ ಮೇಲಿರುವ ಶೇರ್ವರಯನ್(ಪರ್ವತ ಪ್ರದೇಶ) ಸೂಕ್ತವಾದ ಹವಾಮಾನವನ್ನು ಹೊಂದಿದೆ. ಸಾಮಾನ್ಯವಾಗಿ ಮೊರಪ್ಪೂರ್ ಮತ್ತು ಹರೂರ್ ಕಾಡು ಪ್ರದೇಶಗಳಲ್ಲಿ ಕಾಡು ಹಂದಿ(ಸಾಮಾನ್ಯವಾಗಿ ಗಂಡು ಹಂದಿ) ಮತ್ತು ಮಚ್ಚೆಯುಳ್ಳ/ಚುಕ್ಕೆಗಳಿರುವ ಜಿಂಕೆಗಳು ಕಂಡುಬರುತ್ತದೆ. ಕೆಲವೊಮ್ಮೆ ಕಾಡೆಮ್ಮೆಗಳು ಬೊಮ್ಮಿಡಿ ಹಳ್ಳಿ ಪ್ರದೇಶದಲ್ಲಿ ಅಡ್ಡಾಡುತ್ತವೆ ಅಥವಾ ಕಾಣಿಸಿಕೊಳ್ಳುತ್ತವೆ. ತೊಪ್ಪುರ್ ವಿಭಾಗದ ಸುತ್ತಾಮುತ್ತ ಹೆದ್ದಾರಿಗಳ ಸುಂದರ ದೃಶ್ಯವು ಗುಡ್ಡ ಮತ್ತು ಕಾಡುಗಳ ಮೂಲಕ ಕಾಣಿಸುತ್ತದೆ.
ಆಡಳಿತ
[ಬದಲಾಯಿಸಿ]ಧರ್ಮಪುರಿ ನಗರ, ಜಿಲ್ಲಾಪ್ರಧಾನ ಕಾರ್ಯಸ್ಥಾನವಾಗಿದೆ. ಜಿಲ್ಲೆಯು ಎರಡು ಆದಾಯ ವಿಭಾಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಧರ್ಮಪುರಿ ಮತ್ತು ಹರೂರ್ ಒಳಗೊಂಡಿರುವ ೫ ತಾಲ್ಲೂಕುಗಳಿವೆ.
ಆಡಳಿತಾತ್ಮಕ ವಿಭಾಗಗಳು
[ಬದಲಾಯಿಸಿ]ಆದಾಯ ವಿಭಾಗಗಳು: ಧರ್ಮಪುರಿ ಮತ್ತು ಹರೂರ್.
ಕಂದಾಯ ತಾಲ್ಲೂಕುಗಳು: ಧರ್ಮಪುರಿ, ಹರೂರ್, ಕರಿಮಂಗಳಂ, ನಲ್ಲಂಪಳ್ಳಿ, ಪಾಲಕ್ಕೋಡು, ಪಾಪೀರೆಡ್ಡಿಪಟ್ಟಿ, ಪೆನ್ನಾಗರಂ.
ಪಟ್ಟಣ ಪಂಚಾಯತಿ: ಹರೂರ್, ಮಾರಂಡಹಳ್ಳಿ, ಬೊಮ್ಮಿಡಿ, ಪಾಲಕ್ಕೋಡು, ಪೆನ್ನಾಗರಂ, ಕರಿಮಂಗಳಂ, ಕಂಬೈನಲ್ಲೂರ್, ಪಾಪಾರಪಟ್ಟಿ, ಕಡತ್ತೂರ್, ಪಾಪೀರೆಡ್ಡಿಪಟ್ಟಿ.
ಪಂಚಾಯತಿ ಸಂಘಗಳು: ಧರ್ಮಪುರಿ, ಹರೂರ್, ನಲ್ಲಂಪಳ್ಳಿ, ಪೆನ್ನಾಗರಂ, ಕರಿಮಂಗಳಂ, ಪಾಲಕ್ಕೋಡು, ಪಾಪೀರೆಡ್ಡಿಪಟ್ಟಿ, ಮೊರಪ್ಪೂರ್.
ಆರ್ಥಿಕಸ್ಥಿತಿ
[ಬದಲಾಯಿಸಿ]ವ್ಯವಸಾಯ ಮತ್ತು ತೋಟಗಾರಿಕೆ
[ಬದಲಾಯಿಸಿ]ಜಿಲ್ಲೆಯ ಆರ್ಥಿಕ ಪ್ರಕೃತಿಯಲ್ಲಿ ಮುಖ್ಯವಾಗಿ ಕೃಷಿಕ ಆಗಿದೆ. ಸುಮಾರು ೭೦ರಷ್ಟು ಕಾರ್ಯಪಡೆ ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಅವಲಂಬಿಸಿದೆ. ರಾಜ್ಯದ ಅತ್ಯಂತ ಹಿಂದುಳಿದ ಮತ್ತು ಬರ ಪೀಡಿತ ಪ್ರದೇಶಗಳಲ್ಲಿ ಈ ಜಿಲ್ಲೆಯು ಒಂದಾಗಿದೆ. ಧರ್ಮಪುರಿ ಜಿಲ್ಲೆಯಲ್ಲಿ ರಾಜ್ಯದ ಪ್ರಮುಖ ತೋಟಗಾರಿಕೆಯ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಜಿಲ್ಲೆಯು ಬರ ಪೀಡಿತ ಪ್ರದೇಶವಾದ್ದರಿಂದ, ಹಣ್ಣುಗಳನ್ನು ಬೆಳೆಯಲಿಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಈ ಜಿಲ್ಲೆಯ ಮುಖ್ಯ ತೋಟಗಾರಿಕೆ ಬೆಳೆ ಮಾವು ಆಗಿದೆ. ಮಾವಿನ ಬೆಳೆ ಸುಮಾರು ಅರ್ಧ ಜಿಲ್ಲೆಯಲ್ಲಿ ಬೆಳೆಯಲಾಗುತ್ತೆದೆ. ಪಾಲಕ್ಕೋಡು ಟೊಮೆಟೊಗಳನ್ನು ಬೆಳೆಸಲು ಮುಖ್ಯ ಪ್ರದೇಶವಾಗಿದೆ. ಹಾಗೆಯೇ ಮೆಣಸಿನಕಾಯಿಯನ್ನು ಸಹ ಪೆನ್ನಾಗರಂನಲ್ಲಿ ಬೆಳೆಯಲಾಗಿದೆ.
ಖನಿಜ ಸಂಪನ್ಮೂಲಗಳು
[ಬದಲಾಯಿಸಿ]ಧರ್ಮಪುರಿ ಜಿಲ್ಲೆಯು ದೊಡ್ಡ ಗಾತ್ರದ ಪೆಡಸುಕಲ್ಲಿಗೆ(ಗ್ರಾನೈಟ್) ಆಸ್ತಿಯಾಗಿದೆ/ಹೆಸರುವಾಸಿಯಾಗಿದೆ. ಉತ್ತಮ ಗುಣಮಟ್ಟದ ಕಪ್ಪು ಗ್ರಾನೈಟ್'ಗಳು ಪೆನ್ನಾಗರಂ, ಹರೂರ್ ಮತ್ತು ಪಾಲಕೋಡ್ ಪ್ರದೇಶಗಳಲ್ಲಿ ಲಭ್ಯವಿದೆ. ಸ್ಫಟಿಕವು, ಪೆನ್ನಾಗರಂ ತಾಲ್ಲೂಕಿನ ಕೆಣ್ಡಿಗನಪಳ್ಳಿ ಗ್ರಾಮ, ಹರೂರ್ ತಾಲ್ಲೂಕಿನ ವೆಲಾಮ್ಪಟ್ಟಿ ಮತ್ತು ಪಾಪೀರೆಡ್ಡಿಪಟ್ಟಿ ತಾಲ್ಲೂಕಿನ ಪೆದಮ್ಪಟ್ಟಿಯಲ್ಲಿ ಲಭ್ಯವಿದೆ. ಇತರ ಅತಿ ಉನ್ನತ ಖನಿಜವು, ಮೊಲಿಬ್ಡಿನಮ್ ಹರೂರಿನಲ್ಲಿ ಲಭ್ಯವಿದೆ. ಅದು "ಉತ್ತಮ ವಾಹಕ"ವೆಂದು ಕರೆಯಲಾಗಿದೆ.
ಪ್ರವಾಸೋದ್ಯಮ(ಟೂರಿಸಮ್)
[ಬದಲಾಯಿಸಿ]ಧರ್ಮಪುರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೇಗವಾಗಿ ವಿಸ್ತರಿಸಿ ಬರುವ ಉದ್ಯಮವಾಗಿದೆ. ಕಾವೇರಿ ನದಿಯು ಧರ್ಮಪುರಿ ಜಿಲ್ಲೆಯಲ್ಲಿ ಹರಿದು, ಹೊಗೆನ್ಕಲ್ ಮೂಲಕ ತಮಿಳುನಾಡನ್ನು ಪ್ರವೇಶಿಸುತ್ತದೆ. ಹೊಗೆನ್ಕಲ್ ಧರ್ಮಪುರಿಯಿಂದ ಸುಮಾರು 46 ಕಿ.ಮೀ. ದೂರದಲ್ಲಿ ನೆಲೆಗೊಂಡಿರುವ ಒಂದು ಪಟ್ಟಣ. ಅಲ್ಲಿ ಕಾವೇರಿ ನದಿ ಬೀಳುವ ದೃಶ್ಯ ಸುಂದರವಾದ ಜಲಪಾತವಾಗಿ ರೂಪಗೊಂಡಿದೆ. ರಾಜ್ಯದ ಮತ್ತೊಂದು ಪ್ರಮುಖ ಪ್ರವಾಸಿ ತಾಣ, ಹರೂರ್ ತಾಲ್ಲೂಕಿನ ತೀರ್ಥಮಲೈ ಬೆಟ್ಟದ ದೇವಾಲಯ. ಇದು ಹಿಂದೂಗಳಿಗೆ ಪವಿತ್ರ ಧಾರ್ಮಿಕ ಸ್ಥಳವಾಗಿದೆ, ಮತ್ತು ಇದು ಚೋಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಕಾಲದಿಂದಲೂ ಉಳಿದು ಬಂದಿದೆ. ಧರ್ಮಪುರಿ ಮತ್ತು ಅದಿಯಮಾನ್ಕೋಟೆಯಲ್ಲಿ ಗಂಗಾ ಸಾಮ್ರಾಜ್ಯವು ನಿರ್ಮಿಸಿದ ದೇವಾಲಯಗಳಿವೆ. ಅದರಲ್ಲಿ ಧರ್ಮಪುರಿಯ ಮಲ್ಲಿಕಾರ್ಜುನ ದೇವಾಲಯದ ಜೊತೆಗೆ ವಿಶೇಷವಾಗಿ ಪ್ರಸ್ತಾಪಿಸಿದ ಬೈರವ, ಅಷ್ಟದಿಕ್ ಪಾಲಕಗಳು ಇತ್ಯಾದಿ ಮತ್ತು ಅದಿಯಮಾನ್ಕೋಟೆಯ ಹಳೆಯ ಬಸದಿಯ ದೇವಾಲಯವು ಇದೆ. [೩]
ವತಲ್ಮಲೈ/ವ್ಯತಲ್ ಬೆಟ್ಟಗಳು ಧರ್ಮಪುರಿ ತಾಲೂಕಿನಲ್ಲಿರುವ ಒಂದು ಹಳ್ಳಿ. ತೋಟಗಳ ಸೃಷ್ಟಿಯ ಕಾರಣದಿಂದ ತೀವ್ರ ಆವಾಸಸ್ಥಾನ ಛಿದ್ರೀಕರಣದ ಫಲವಾಗಿ, ವ್ಯತಲದ ಸುಮಾರು ಸಸ್ಯ ಮತ್ತು ಪ್ರಾಣಿಗಳು ಕಣ್ಮರೆಯಾಗಿವೆ. ಹೇಗಾದರೂ, ಕೆಲವು ಪ್ರಾಣಿಗಳು ಬದುಕಲು ಸುರಕ್ಷಿತವಾದ ಪ್ರದೇಶಗಳನ್ನು ಹುಡುಕಿಕೊಂಡು ಮತ್ತು ಅಲ್ಲಿಯೇ ಅವುಗಳ ವಾಸವನ್ನು ಮುಂದುವರಿಸಲು ಹತ್ತಿರದ ಶೇರ್ವರ್ಯಾನ್ ಹಿಲ್ಸ್(ಏರ್ಕಾಡ್)ನಲ್ಲಿ ಸೇರಿವೆ.
'ಹೊಗೆನಕಲ್ ಫಾಲ್ಸ್ /ಜಲಪಾತ'ವು ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದ್ದು. ಇದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ ಸುಮಾರು ೧೮೦ ಕಿ.ಮೀ. ಹಾಗು ಧರ್ಮಪುರಿಯಿಂದ ಸುಮಾರು ೪೬ ಕಿ.ಮೀ. ದೂರದಲ್ಲಿದೆ. ಈ ಜಲಪಾತವು ಭಾರತದ "ನಯಾಗರ ಜಲಪಾತ"ವೆಂದೇ ಸುಪ್ರಸಿದ್ಧವಾಗಿದೆ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆ
ಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು. ಹೊಗೆನಕಲ್ ಜಲಪಾತ ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ. ಜಲಪಾತದ ಬಳಿ ಕಾರ್ಬನಟೈಟ್ ಬಂಡೆಗಳು ಕಂಡು ಬರುತ್ತವೆ. ವಿಶ್ವದ ಅತ್ಯಂತ ಪ್ರಾಚೀನ ಬಂಡೆಗಳಲ್ಲಿ ಇವೂ ಒಂದಾಗಿದೆ. ಇಲ್ಲಿನ ದೋಣಿಯ ಪಯಣ ಹಾಗು ಆಯುರ್ವೇದದ ಸ್ನಾನದ ಪ್ರಖ್ಯಾತಿಯಿಂದ ಹೊಗೆನಕಲ್ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಕುಡಿಯುವ ನೀರು ಸೃಷ್ಟಿಸಲು ಉದ್ದೇಶಿತ ಯೋಜನೆ ತಾಣವಾಗಿದೆ. ಶುಷ್ಕ ಕಾಲದಲ್ಲಿ ಮಾತ್ರ ಹೊಗೆನಕಲ್ ನಲ್ಲಿ ದೋಣಿ ವಿಹಾರ ಮಾಡಲು ಅವಕಾಶವಿದೆ. ದೋಣಿ ನಡೆಸುವವರಿಗೆ ಇದೇ ಪ್ರಧಾನ ಆದಾಯವಾಗಿದೆ. ದೋಣಿ ವಿಹಾರಕ್ಕೆ ಇಲ್ಲಿ ತೆಪ್ಪಗಳನ್ನು ಬಳಸುತ್ತಾರೆ. ತೆಪ್ಪಗಳು ಸುಮಾರು ೨.೨೪ ಮೀ ಅಡ್ಡಗಲ(ಡಯಾಮೀಟರ್) ಇರುತ್ತದೆ. ಆದರೂ ಸಹ ಒಂದು ತೆಪ್ಪದಲ್ಲಿ ಒಂದೇ ಸಲಕ್ಕೆ ಎಂಟು ಜನರನ್ನು ಕೂರಿಸಬಹುದು. ಈ ತೆಪ್ಪವನ್ನು ಬಿದಿರು ಮರದಿಂದ ಮಾಡಲಾಗಿದೆ. ಇದನ್ನು ಕಟ್ಟಲು ಒಂದು ದಿನಾವಾದರೂ ಬೇಕಾಗುತ್ತದೆ. ತೆಪ್ಪವು ಮುಳುಗದ ಹಾಗೆ, ಅದರ ಬುಡದಲ್ಲಿ ಪ್ಲಾಸ್ಟಿಕ್ ಅಥವಾ ಚರ್ಮದ ರೀತಿಯ ಪದರವನ್ನು ಹಾಕಿರುತ್ತಾರೆ. ಹೊಗೆನಕಲ್ ನಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದರಿಂದ,ಅದನ್ನು ತೆಪ್ಪಗಳಿಗೆ ಹಾಕಿ ಕಟ್ಟುವುದನ್ನು ನಿಷೇಧ ಮಾಡಿದ್ದಾರೆ. ದೋಣಿ ಅಥವಾ ತೆಪ್ಪವನ್ನು ನಡೆಸುವುದಕ್ಕೆ ಒಂದೇ ಹುಟ್ಟನ್ನು ಬಳಸುತ್ತಾರೆ. ಈ ತೆಪ್ಪಕ್ಕೆ ತಮಿಳಿನಲ್ಲಿ ಪರಿಸಲ್ ಎಂದು ಕರೆಯುತ್ತಾರೆ.
ಹೊಗೆನಕಲ್ ಜಲಪಾತದಲ್ಲಿ ಮೀನನ್ನು ಹಿಡಿಯುವ ರೂಢಿಯಲ್ಲಿದೆ. ಹಿಡಿದ ಮೀನನ್ನು ತಾಜವಾಗಿಯೇ ಮಾರಟ ಮಾಡುತ್ತಾರೆ. ಅಲ್ಲಿ ಸಿಗುವ ಮೀನುಗಳೆಂದಾರೆ ಕಾಟ್ಲ, ರೋಹು, ಕೆಂಡ್ಯೆ, ಕೆಲುತಿ, ವಲೈ, ಮಿರ್ಗಲ್, ಅರಂಜನ್ ಹಾಗು ಜಿಲೇಬಿ ಸಿಗುತ್ತವೆ. ಮೀನನ್ನು ಕಣಿವೆಯ ಸಂಧಿಯಲ್ಲಿ ಹಿಡಿಯುತ್ತಾರೆ. ಅಲ್ಲಿಯೇ ಮಾರಾಟ ಕೂಡ ಮಾಡುತ್ತಾರೆ. ಮೀನು ಹಿಡಿಯುವ ಕಣಿವೆಯ ಎಡಭಾಗಕ್ಕೆ ಬಂದರೆ,ಮೀನುಗಳನ್ನು ತಯಾರಿಸುವವರ ಅಂಗಡಿಗಳು ಕಂಡು ಬರುತ್ತವೆ.
ಉಲ್ಲೇಖನಗಳು
[ಬದಲಾಯಿಸಿ]- ↑ https://en.wikipedia.org/wiki/Dharmapuri_district
- ↑ "History of Dharmapuri District". Dharmapuri District Official TN Website. Retrieved 1 March 2014.
- ↑ http://www.tamilnadutourism.org/places/CitiesTowns/Dharmapuri.aspx?catid=010116P01.
{{cite web}}
: Missing or empty|title=
(help)