ವಿಷಯಕ್ಕೆ ಹೋಗು

ಧಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧಾಮ್ ಎನ್ನುವುದು ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಆಚರಿಸಲ್ಪಡುವ ಸಾಂಪ್ರದಾಯಿಕ ಆಹಾರ ಉತ್ಸವವಾಗಿದೆ.[][] ಕುಟುಂಬದಲ್ಲಿನ ಪ್ರತಿಯೊಂದು ಸಂತೋಷದಾಯಕ ಕಾರ್ಯಕ್ರಮ ಅಥವಾ ಆಚರಣೆಯಲ್ಲೂ ಧಾಮ್‍ನ್ನು ತಯಾರಿಸಿ ಬಡಿಸಲಾಗುತ್ತದೆ. ಬಹುತೇಕ ಧಾರ್ಮಿಕ ಹಬ್ಬಗಳು ಅಥವಾ ಶುಭ ದಿನಗಳಂದು ದೇವಾಲಯಗಳೂ ಧಾಮ್‌ನ್ನು ಬಡಿಸುತ್ತವೆ.

ಸಾಂಪ್ರದಾಯಿಕ ಧಾಮ್ ರಾಜ್ಯದ ಪ್ರತಿಯೊಂದು ಪ್ರದೇಶದಲ್ಲೂ ಭಿನ್ನವಾಗಿದೆ. ಧಾಮ್‍ನ ಸಾಮಾನ್ಯ ಖಾದ್ಯಪಟ್ಟಿಯು ಅನ್ನದೊಂದಿಗೆ ಪ್ರಾರಂಭವಾಗುತ್ತದೆ. ಜೊತೆಗೆ ಹೆಸರು ಬೇಳೆಯ ತೊವ್ವೆ (ಧೋತ್ವಿನ್), ರಾಜ್ಮಾದ (ಕೆಂಪು ಅವರೆ) ಅಥವಾ (ಮೊಸರಿನಲ್ಲಿ ಬೇಯಿಸಲಾದ) ಕಡಲೇಬೇಳೆಯ ಮದ್ರಾ ಇರುತ್ತದೆ. ಇವನ್ನು ಸರಿಸುಮಾರು ಇಪ್ಪತ್ತು ಮಸಾಲೆಗಳನ್ನು ಸೇರಿಸಿ ಅನನ್ಯ ಶೈಲಿಯಲ್ಲಿ ತಯಾರಿಸಲಾಗುತ್ತದೆ. ಇದರ ನಂತರ ಹಿಸುಕಿದ ಬೇಳೆ, ಮೇಲೆ ಹುಣಸೆ ಮತ್ತು ಬೆಲ್ಲದಿಂದ ತಯಾರಿಸಲಾದ ಖಟ್ಟಾವನ್ನು (ಸಿಹಿ ಮತ್ತು ಹುಳಿ ಸಾಸ್) ಬಡಿಸಲಾಗುತ್ತದೆ. ಧಾಮ್ ಮೀಠಾ ಭಟ್ (ಸಿಹಿತಿನಿಸು) ನೊಂದಿಗೆ ಕೊನೆಗೊಳ್ಳುತ್ತದೆ (ಭಟ್ ಎಂದರೆ ಹಿಮಾಚಲಿ ಭಾಷೆಯಲ್ಲಿ ಅನ್ನ) - ಸಿಹಿ ಅನ್ನ ಅಥವಾ ಮಿಥ್ಡಿ (ಬೂಂದಿ ಅಥವಾ ಬ್ರೆಡ್‍ನ ಪುಡಿ ಇತ್ಯಾದಿಗಳಿಂದ ತಯಾರಿಸಲ್ಪಡುತ್ತದೆ).

ಉಲ್ಲೇಖಗಳು

[ಬದಲಾಯಿಸಿ]
  1. Chaudhry, Minakshi (2006). Himachal, a complete guide to the land of Gods. Rupa & Co. p. 51. ISBN 978-81-291-1000-8.
  2. Laveesh, Bhandari (2009). Indian states at a glance, 2008-09: Himachal Pradesh : performance, facts and figures. Pearson Education India. p. 26. ISBN 978-81-317-2336-4.


"https://kn.wikipedia.org/w/index.php?title=ಧಾಮ್&oldid=1017490" ಇಂದ ಪಡೆಯಲ್ಪಟ್ಟಿದೆ