ವಿಷಯಕ್ಕೆ ಹೋಗು

ನಟಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆರಳಿನ ಕೀಲುಗಳ ನಟಿಕೆ ಮುರಿಯುವುದು ವಿಶಿಷ್ಟ ಕರ್ಕಶ ಅಥವಾ ಪಾಪ್ ಧ್ವನಿಯನ್ನು ಮಾಡುತ್ತದೆ.

ನಟಿಕೆ (ಲಟಿಕೆ) ಎಂದರೆ ವಿಶಿಷ್ಟ ಕರ್ಕಶ ಅಥವಾ ಪಾಪ್ ಶಬ್ದವನ್ನು ಉಂಟುಮಾಡಲು ಕೀಲುಗಳನ್ನು ಮಡಿಸುವುದು. ಇದನ್ನು ಕೆಲವೊಮ್ಮೆ ದೈಹಿಕ ಚಿಕಿತ್ಸಕರು, ಕಶೇರುಕಮರ್ದಕರು, ಮೂಳೆ ವೈದ್ಯರು ಮತ್ತು ಟರ್ಕಿಷ್ ಸ್ನಾನದ ಮನೆಗಳಲ್ಲಿನ ಮಾಲೀಸುಗಾರರು ಮಾಡುತ್ತಾರೆ.[]

ಕೀಲುಗಳ ನಟಿಕೆ, ವಿಶೇಷವಾಗಿ ಗೆಣ್ಣುಗಳದ್ದು, ಸಂಧಿವಾತ ಮತ್ತು ಇತರ ಕೀಲು ಸಮಸ್ಯೆಗಳಿಗೆ ಕಾರಣವಾಗುತ್ತದೆಂದು ಬಹಳ ಕಾಲದವರೆಗೆ ನಂಬಲಾಗಿತ್ತು. ಆದರೆ, ವೈದ್ಯಕೀಯ ಸಂಶೋಧನೆಯು ಅಂತಹ ಸಂಬಂಧವನ್ನು ತೋರಿಸಿಕೊಟ್ಟಿಲ್ಲ.

ನಟಿಕೆಯ ಕಾರ್ಯವಿಧಾನ ಮತ್ತು ಉಂಟಾಗುವ ಶಬ್ದವು ಕಾರ್ಬನ್ ಡೈಆಕ್ಸೈಡ್‍ನ ಗುಳ್ಳೆಗಳು ಕೀಲುಗಳ ಒಳಗೆ ಹಠಾತ್ತಾಗಿ ಭಾಗಶಃ ಕುಸಿಯುವ ಕಾರಣದಿಂದ ಸಂಭವಿಸುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Richard Boggs, Hammaming in the Sham: A Journey Through the Turkish Baths of Damascus, Aleppo and Beyond, 2012,
  2. Dvorsky, George. "Simulation May Finally Explain Why Knuckle Cracking Makes That Awful Sound". Gizmodo (in ಅಮೆರಿಕನ್ ಇಂಗ್ಲಿಷ್). Retrieved 2018-03-30.


"https://kn.wikipedia.org/w/index.php?title=ನಟಿಕೆ&oldid=914818" ಇಂದ ಪಡೆಯಲ್ಪಟ್ಟಿದೆ