ವಿಷಯಕ್ಕೆ ಹೋಗು

ನಥಾನ್ ಲಿಯೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಥಾನ್ ಲಿಯೋನ್

ನಥಾನ್ ಮೈಕೇಲ್ ಲಿಯೋನ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಬಲಗೈ ಆಫ್ ಬ್ರೇಕ್ ಬೌಲರ್ ಹಾಗೂ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್ಮನ್. ದೇಶೀಯ ಕ್ರಿಕೆಟ್ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ನ್ಯೂ ಸೌತ್ ವೇಲ್ಸ್ ತಂಡಗಳಿಗೆ ಆಡುತ್ತಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ಲಿಯೋನ್ ರವರು ನವಂಬರ್ ೨೦, ೧೯೮೭ರಲ್ಲಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನ ಯಂಗ್ನಲ್ಲಿ ಜನಿಸಿದರು. ನಥಾನ್ ರವರು ತಮ್ಮ ಬಾಲ್ಯದಲ್ಲಿ ಕ್ಯಾಂಬೇರ್ರಾಗೆ ಬಂದು ಎ ಸಿ ಟಿ ಕ್ರಿಕೆಟ್ ನ ೧೭ರ ವಯೋಮಿತಿ ತಂಡದಲ್ಲಿ ಹಾಗೂ ೧೮ರ ವಯೋಮಿತಿ ತಂಡದಲ್ಲಿ ಅಡಲಾರಂಭಿಸಿದರು. ಇವರು ಯೂನಿವರ್ಸಿಟಿ ಹಾಗೂ ಜಿಲ್ಲಾ ಮಟ್ಟದ ಕ್ರಿಕೆಟ್ ತಂಡದಲ್ಲಿ ಆಡಿದರು. ನಂತರ ಮಾರ್ಕ್ ಹಿಗ್ಗ್ಸ್ ರವರ ಮಾರ್ಗದರ್ಶನದಲ್ಲಿ ಆಫ್ ಬ್ರೇಕ್ ಬೌಲಿಂಗ್ ಕಲಿತರು.[]

ವೃತ್ತಿ ಜೀವನ

[ಬದಲಾಯಿಸಿ]

ಲಿಯೋನ್ ರವರು ಫೆಬ್ರವರಿ ೧೦, ೨೦೧೧ರಂದು ಪರ್ತ್ ನಲ್ಲಿ ಸೌತ್ ಆಸ್ಟ್ರೇಲಿಯಾ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.[]

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಅಗಸ್ಟ್ ೩೧, ೨೦೧೧ ಗ್ಯಾಲೇಯಲ್ಲಿ ಶ್ರೀಲಂಕಾ ವಿರುಧ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[] ಮಾರ್ಚ್ ೦೮, ೨೦೧೨ರಂದು ಅಡಿಲೇಡ್ ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೂರನೇ ಫೈನಲ್ ಏಕದಿನ ಪಂದ್ಯದಿಂದ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪನೆ ಮಾಡಿದರು.[] ಜನವರಿ ೨೨, ೨೦೧೬ ರಂದು ಮೆಲ್ಬರ್ನ್ನಲ್ಲಿ ಭಾರತದ ವಿರುದ್ಧ ನಡೆದ ಎರಡನೇ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು.[]

ಪಂದ್ಯಗಳು

[ಬದಲಾಯಿಸಿ]
  • ಏಕದಿನ ಕ್ರಿಕೆಟ್ : ೨೯ ಪಂದ್ಯಗಳು[]
  • ಟೆಸ್ಟ್ ಕ್ರಿಕೆಟ್ : ೮೯ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೦೨ ಪಂದ್ಯಗಳು

ವಿಕೇಟಗಳು

[ಬದಲಾಯಿಸಿ]
  1. ಏಕದಿನ ಪಂದ್ಯಗಳಲ್ಲಿ : ೨೯
  2. ಟೆಸ್ಟ್ ಪಂದ್ಯಗಳಲ್ಲಿ  : ೩೫೭
  3. ಟಿ-೨೦ ಪಂದ್ಯಗಳಲ್ಲಿ  : ೦೧

ಉಲ್ಲೇಖಗಳು

[ಬದಲಾಯಿಸಿ]
  1. https://www.cricbuzz.com/profiles/7850/nathan-lyon
  2. http://www.espncricinfo.com/magazine/content/story/529959.html
  3. https://www.espncricinfo.com/series/8043/scorecard/474039/western-australia-vs-south-australia-sheffield-shield-2010-11
  4. https://www.espncricinfo.com/series/12795/scorecard/516212/sri-lanka-vs-australia-1st-test-australia-tour-of-sri-lanka-2011
  5. https://www.espncricinfo.com/series/8531/scorecard/518970/australia-vs-sri-lanka-3rd-final-commonwealth-bank-series-2011-12
  6. https://www.espncricinfo.com/series/11188/scorecard/895819/australia-vs-india-2nd-t20i-india-tour-of-australia-2015-16
  7. http://www.espncricinfo.com/australia/content/player/272279.html