ವಿಷಯಕ್ಕೆ ಹೋಗು

ನಮಿತಾ ಥಾಪರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನಮಿತಾ ಥಾಪರ್
೨೦೧೯ ರಲ್ಲಿ, ಥಾಪರ್‌ರವರು
Born
ನಮಿತಾ ಮೆಹ್ತಾ

(1977-03-21) ೨೧ ಮಾರ್ಚ್ ೧೯೭೭ (ವಯಸ್ಸು ೪೭)
Nationalityಭಾರತೀಯ
Alma materಫುಕ್ವಾ ಸ್ಕೂಲ್ ಆಫ್ ಬ್ಯುಸಿನೆಸ್, ಬೃಹನ್ ಮಹಾರಾಷ್ಟ್ರ ಕಾಲೇಜ್ ಆಫ್ ಕಾಮರ್ಸ್
Occupations
  • ಉದ್ಯಮಿ
  • ವಾಣಿಜ್ಯೋದ್ಯಮಿ
  • ಏಂಜೆಲ್ ಹೂಡಿಕೆದಾರ
Years active೧೯೯೬–ಪ್ರಸ್ತುತ
Organizationಅಮ್ಕ್ಯೂರ್ ಫಾರ್ಮಾಸ್ಯೂಟಿಕಲ್ಸ್
Televisionಶಾರ್ಕ್ ಟ್ಯಾಂಕ್ ಇಂಡಿಯಾ (೨೦೨೧–ಪ್ರಸ್ತುತ)
Spouse

ವಿಕಾಸ್ ಥಾಪರ್ (ವಿವಾಹ:2003)

Children
Parents
  • ಸತೀಶ್ ಮೆಹ್ತಾ (father)
  • ಭಾವನಾ ಮೆಹ್ತಾ (mother)
Relatives
  • ಸಮಿತ್ ಮೆಹ್ತಾ (ಸಹೋದರ)

ನಮಿತಾ ಥಾಪರ್ (ನಮಿತಾ ಮೆಹ್ತಾ, ಜನನ ೨೧ ಮಾರ್ಚ್ ೧೯೭೭) ಇವರು ಭಾರತೀಯ ಉದ್ಯಮಿ, ವ್ಯವಹಾರ ಕಾರ್ಯನಿರ್ವಾಹಕರು ಮತ್ತು ಏಂಜಲ್ ಹೂಡಿಕೆದಾರರು.[] ಅವರು ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ.[] ಅವರು ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ೧೦೦ ಕ್ಕೂ ಹೆಚ್ಚು ಕಂಪನಿಗಳಲ್ಲಿ ಹೂಡಿಕೆ ಮಾಡುವ ಪ್ರಮುಖ ಹೂಡಿಕೆದಾರರಾಗಿದ್ದಾರೆ. ಅವರು ಥಾಪರ್ ಎಂಟರ್ಪ್ರೈನರ್ ಅಕಾಡೆಮಿಯ ಸ್ಥಾಪಕರೂ ಆಗಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ನಮಿತಾ ಅವರು ಉದ್ಯಮಿ ಸತೀಶ್ ರಮಣ್ ಲಾಲ್ ಮೆಹ್ತಾ ಅವರ ಪುತ್ರಿ.[][] ಅವರು ೨೦೦೧ ರಲ್ಲಿ, ಡ್ಯೂಕ್ ವಿಶ್ವವಿದ್ಯಾಲಯದ ಫುಕ್ವಾ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಎಂಬಿಎ ಪೂರ್ಣಗೊಳಿಸಿದರು ಮತ್ತು ಐಸಿಎಐನಿಂದ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ.[]

ವೃತ್ತಿಜೀವನ

[ಬದಲಾಯಿಸಿ]

ನಮಿತಾರವರು ಎಂಬಿಎ ಮುಗಿಸಿದ ನಂತರ, ಗೈಡೆಂಟ್ ಕಾರ್ಪೊರೇಷನ್‌ನಲ್ಲಿ ಬಿಸಿನೆಸ್ ಫೈನಾನ್ಸ್ ಮುಖ್ಯಸ್ಥರ ಪಾತ್ರವನ್ನು ವಹಿಸಿಕೊಳ್ಳಲು ಅಮೆರಿಕಕ್ಕೆ ತೆರಳಿದರು. ನಂತರ, ಅವರು ಭಾರತಕ್ಕೆ ಸ್ಥಳಾಂತರಗೊಂಡರು. ಅಲ್ಲಿ ಅವರು ಎಮ್ಕ್ಯೂರ್ ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಸಿಎಫ್‌ಒ ಪಾತ್ರವನ್ನು ವಹಿಸಿಕೊಂಡರು.[] ನಂತರ, ಅವರನ್ನು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ನೇಮಿಸಲಾಯಿತು.

ದೂರದರ್ಶನ

[ಬದಲಾಯಿಸಿ]

ಥಾಪರ್‌ರವರು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನ ಕಾರ್ಯಕ್ರಮವಾದ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ೧, ೨, ೩ ಮತ್ತು ೪ ಸೀಸನ್‌ಗಳಲ್ಲಿ "ಶಾರ್ಕ್" ಎಂಬ ಏಂಜಲ್ ಹೂಡಿಕೆದಾರರಾಗಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ನಮಿತಾರವರು ವಿಕಾಸ್ ಥಾಪರ್ ಅವರನ್ನು ವಿವಾಹವಾದರು.[] ಈ ದಂಪತಿಗಳಿಗೆ ಜೈ ಮತ್ತು ವಿರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "When Shark Tank India's Namita Thapar addressed being called a 'nepo-kid' and 'papa ki pari'; says 'one needs to have entrepreneurial mindset' - Exclusive". The Times of India. 14 March 2024.
  2. "Namita Thapar: Growth Champion". 10 December 2021.
  3. "Namita Thapar shuts down troll who asked: 'if daddy's money hadn't been there…'". 13 March 2024.
  4. "Queen size". The Times of India.
  5. "namita thapar Profile".
  6. "Meet Namita Thapar: The businesswoman with a Rs 600 crore net worth, Rs 50 crore mansion, and a taste for luxury". 15 February 2024.
  7. "Namita Thapar, husband Vikas invite Shark Tank India sports pitchers to their home for dinner; former shares their success story". The Times of India. May 2023.
  8. "Shark Tank India judge Namita Thapar lives life queen size with hubby Vikas Thapar and kids; here's all about her early days, education and net worth". The Times of India.


ಬಾಹ್ಯ ಕೊಂಡಿಗಳು

[ಬದಲಾಯಿಸಿ]