ನಾಗದಂತಿ
ನಾಗದಂತಿ | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Baliospermum |
ಪ್ರಜಾತಿ: | Baliospermum montanum
|
ನಾಗದಂತಿ ಸಾಮಾನ್ಯವಾಗಿ ರೆಡ್ ಫಿಸಿಕ್ ನಟ್, ವೈಲ್ಡ್ ಕ್ಯಾಸ್ಟರ್, ವೈಲ್ಡ್ ಕ್ರೋಟನ್ ಮತ್ತು ವೈಲ್ಡ್ ಸುಲ್ತಾನ್ ಸೀಡ್ ಎಂದು ಕರೆಯಲ್ಪಡುತ್ತದೆ. ಇದು ಯುಫೋರ್ಬಿಯೇಸಿಯ ಕುಟುಂಬದ ಸಸ್ಯವಾಗಿದೆ. ಬಾಲಿಯೋಸ್ಪರ್ಮಮ್ ಮೊಂಟಾನಮ್ (Baliospermum montanum) ಎಂಬುದು ಇದರ ವೈಜ್ಞಾನಿಕ ಹೆಸರು. ನಾಗದಂತಿಯನ್ನು ಸಂಸ್ಕ್ರತದಲ್ಲಿ ದಂತಿ ಎಂದು ಕರೆಯುತ್ತಾರೆ.[೧]
ಬೆಳೆಯುವ ಪ್ರದೇಶಗಳು
[ಬದಲಾಯಿಸಿ]ನಾಗದಂತಿಯನ್ನು ಖಾಸಿ ಪರ್ವತ ಹಾಗೂ ಕಾಶ್ಮೀರದ ಉಪ-ಹಿಮಾಲಯ ಪ್ರದೇಶಗಳಲ್ಲಿ ಕಾಣಬಹುದು. ಇದು ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಭಾರತದಲ್ಲಿ ಸಾಮಾನ್ಯವಾಗಿದೆ.[೨]
ಸಸ್ಯದ ವಿವರಣೆ
[ಬದಲಾಯಿಸಿ]ನಾಗದಂತಿ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳನ್ನು ಉತ್ಪಾದಿಸುತ್ತವೆ. ಹಣ್ಣುಗಳು ೮-೧೩ ಮಿಮೀ ಉದ್ದವಿರುತ್ತವೆ. ಬೀಜಗಳು ಅಂಡಾಕಾರವಾಗಿ ಮೃದುವಾಗಿರುತ್ತದೆ.[೩]
ಔಷಧೀಯ ಉಪಯೋಗ
[ಬದಲಾಯಿಸಿ]ಮಲಬದ್ಧತೆ, ಕಿಬ್ಬೊಟ್ಟೆಯ ನೋವು, ಪೈಲ್ಸ್, ಚರ್ಮ ರೋಗ, ಜಂತುಹುಳದ ಸಮಸ್ಯೆಗಳು, ಕಫ ಮತ್ತು ಪಿತ್ತದ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ನೋವು ಮತ್ತು ಊತಗಳಿಗೆ ಇದರ ಬೇರನ್ನು ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಎಲೆ ಹಾಗೂ ಬೀಜಗಳನ್ನು ಅಸ್ತಮಾ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ನಾಗದಂತಿಯ ಬೇರುಗಳು ಜೀರ್ಣಕಾರಿ ಮತ್ತು ದೇಹ ಶುದ್ಧೀಕರಿಸುವ ಅಂಶಗಳನ್ನು ಹೊಂದಿದೆ.[೪][೫]
ಉಲ್ಲೇಖ
[ಬದಲಾಯಿಸಿ]- ↑ https://indiabiodiversity.org/species/show/228830
- ↑ http://vikaspedia.in/agriculture/crop-production/package-of-practices/medicinal-and-aromatic-plants/baliospermum-montanum
- ↑ http://www.techno-preneur.net/technology/project-profiles/food/danti.html
- ↑ http://www.planetayurveda.com/library/danti-baliospermum-montanum
- ↑ https://www.researchgate.net/publication/308209501_Phytochemical_profile_of_Baliospermum_montanum_Wild_Muell_Arg