ನಾಟಿ ಮಾಡುವುದು
ಗೋಚರ
ಕೃಷಿ ಮತ್ತು ತೋಟಗಾರಿಕೆಯಲ್ಲಿ, ನಾಟಿ ಮಾಡುವುದು ಅಥವಾ ಮರುನೆಡುವಿಕೆ ಎಂದರೆ ಒಂದು ಸಸ್ಯವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ತಂತ್ರ. ಬಹುತೇಕ ವೇಳೆ ಇದು ಅನುಕೂಲಕರ ಪರಿಸ್ಥಿತಿಗಳಲ್ಲಿ ಬೀಜದಿಂದ ಒಂದು ಸಸ್ಯವನ್ನು ಆರಂಭಿಸಿ (ಉದಾಹರಣೆಗೆ ಹಸಿರುಮನೆ ಅಥವಾ ಸಂರಕ್ಷಿತ ಸಸಿಕಟ್ಟು ಸ್ಥಳದಲ್ಲಿ), ನಂತರ ಅದನ್ನು ಮತ್ತೊಂದು, ಸಾಮಾನ್ಯವಾಗಿ ಹೊರಾಂಗಣದ ಬೆಳೆಯುವ ಸ್ಥಳದಲ್ಲಿ ಮರುನೆಡುವ ರೂಪ ತೆಗೆದುಕೊಳ್ಳುತ್ತದೆ. ಇದು ಮಾರುಕಟ್ಟೆ ತೋಟಗಾರಿಕೆ ಹಾಗೂ ಟ್ರಕ್ ಕೃಷಿಯಲ್ಲಿ ಸಾಮಾನ್ಯವಾಗಿದೆ. ಇಲ್ಲಿ ಹೊರ ನೆಡುವಿಕೆಯು ನಾಟಿ ಮಾಡುವುದಕ್ಕೆ ಸಮಾನಾರ್ಥಕವಾಗಿದೆ. ಕೆಲವು ಅಲಂಕಾರಿಕ ಸಸ್ಯಗಳ ತೋಟಗಾರಿಕೆಯಲ್ಲಿ, ನಾಟಿಗಳನ್ನು ವಿರಳವಾಗಿ ಮತ್ತು ಎಚ್ಚರಿಕೆಯಿಂದ ಬಳಸಲಾಗುತ್ತದೆ ಏಕೆಂದರೆ ಇದರಲ್ಲಿ ಸಸ್ಯವನ್ನು ಸಾಯಿಸುವ ಗಣನೀಯ ಪ್ರಮಾಣದ ಅಪಾಯವಿರುತ್ತದೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ Basics of horticulture - Simson, Straus. Oxford Book Company, Edition 2010