ವಿಷಯಕ್ಕೆ ಹೋಗು

ನಾಮ್ಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಮ್ಚಿ ಮೊನ್ಯಾಸ್ಟರಿ

ನಾಮ್ಚಿ ಅಥವಾ ನಾಮ್‍ಟ್ಸೆ[] ಭಾರತದ ಸಿಕ್ಕಿಂ ರಾಜ್ಯದ ದಕ್ಷಿಣ ಸಿಕ್ಕಿಂ ಜಿಲ್ಲೆಯ ಕೇಂದ್ರಕಾರ್ಯಸ್ಥಾನವಾಗಿದೆ. ಸಿಕ್ಕಿಮೀಸ್ ಭಾಷೆಯಲ್ಲಿ ನಾಮ್ಚಿ ಹೆಸರಿನ ಅರ್ಥ ಗಗನ (ನಾಮ್) ಎತ್ತರ (ಚಿ).[]

ಇದು ಸ್ಟ್ರೊಮ್ಯಾಟೊಲೈಟನ್ನು ಉತ್ಪತ್ತಿಮಾಡುವ ಡಾಲಮೈಟ್ ಸುಣ್ಣದಕಲ್ಲುಗಳಾದ ಮಾಮ್ಲೆಯ ಬಕ್ಸಾ ರಚನೆಯ ತವರಾಗಿದೆ. ಇವುಗಳ ರಕ್ಷಣೆ, ನಿರ್ವಹಣೆ, ಪ್ರಚಾರ ಮತ್ತು ಭೂಪ್ರವಾಸೋದ್ಯಮಕ್ಕಾಗಿ ಇದನ್ನು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆಯು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವೆಂದು ಘೋಷಿಸಿದೆ.[][][]

ಇದು ಪಕ್ಕದ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿರುವ ಬಕ್ಸಾ ಹುಲಿ ಮೀಸಲು ಪ್ರದೇಶಕ್ಕೆ ಹೊಂದಿಕೊಂಡಿದೆ.

ಪ್ರವಾಸೋದ್ಯಮ

[ಬದಲಾಯಿಸಿ]
ಟೇಮಿ ಟೀ ಗಾರ್ಡನ್ ಒಳಗೆ ಚೆರಿ ರೆಸಾರ್ಟ್, ನಾಮ್ಚಿ, ಸಿಕ್ಕಿಂ

ನಾಮ್ಚಿ ವೇಗವಾಗಿ ಪ್ರವಾಸಿ ತಾಣ ಮತ್ತು ತೀರ್ಥಯಾತ್ರಾ ಕೇಂದ್ರವಾಗುತ್ತಿದೆ. ನಾಮ್ಚಿ ಮೊನ್ಯಾಸ್ಟರಿ, ರಾಲಾಂಗ್ ಮೊನ್ಯಾಸ್ಟರಿ ಮತ್ತು ಟೆಂಡಾಂಗ್ ಗುಡ್ಡ ಸ್ಥಳೀಯ ಬೌದ್ಧ ಯಾತ್ರಾ ಕೇಂದ್ರಗಳಾಗಿವೆ. ಸಿಕ್ಕಿಂನ ಪೋಷಕ ಸಂತನಾದ ಗುರು ರಿಂಪೋಚೆ ಎಂದೂ ಕರೆಯಲ್ಪಡುವ ಬೌದ್ಧ ಪದ್ಮಸಂಭವನ ವಿಶ್ವದ ಅತಿದೊಡ್ಡ ಪ್ರತಿಮೆ (118 ಅಡಿಗಳು) ನಾಮ್ಚಿಯ ಎದುರಿನ ಸಮ್‍ದ್ರುಪ್ತ್ಸೆ ಬೆಟ್ಟದ ಮೇಲೆ ಇದೆ. ಪಟ್ಟಣದಿಂದ ಸಂದ್ರುಪ್ಸೆಗೆ ಹೋಗುವ ದಾರಿಯಲ್ಲಿ ಕೆಲವು ಕಿಲೋಮೀಟರ್ ದೂರದಲ್ಲಿ ರಾಕ್ ಗಾರ್ಡನ್ ಕೂಡ ಇದೆ. ಈ ಪ್ರದೇಶವು ಪ್ರಪಂಚದ ಮೂರನೇ ಅತಿ ಎತ್ತರದ ಶಿಖರವಾದ ಕಾಂಚನಜುಂಗಾ ಪರ್ವತದ ವೀಕ್ಷಣೆಗಳನ್ನು ಹೊಂದಿದೆ.

ಸೆಂಟ್ರಲ್ ಪಾರ್ಕ್, ನಾಮ್ಚಿ

ಸಿದ್ಧೇಶ್ವರ ಧಾಮವು ಸಿಕ್ಕಿಂ ಸರ್ಕಾರದ ತೀರ್ಥಯಾತ್ರೆ-ಪ್ರವಾಸೋದ್ಯಮ ಸಾಹಸವಾಗಿದ್ದು 87-ಅಡಿ ಶಿವನ ಪ್ರತಿಮೆ ಮತ್ತು ದೇಶದ ಚಾರ್‌ಧಾಮಗಳ ಪ್ರತಿಕೃತಿಗಳೆಲ್ಲವನ್ನು ಒಂದೇ ಸ್ಥಳದಲ್ಲಿ, ಸೊಲೊಫೋಕ್ ಗುಡ್ಡದ ತುದಿಯಲ್ಲಿ ಹೊಂದಿದೆ.

ಇದು ಸಿಕ್ಕಿಂನ ನಾಮ್ಚಿಯಲ್ಲಿರುವ ಸಿದ್ಧೇಶ್ವರ ಧಾಮದಲ್ಲಿರುವ ಶಿವನ ಪ್ರತಿಮೆಯಾಗಿದೆ

ಶಿವನ ಪ್ರತಿಮೆಯ ಸುತ್ತ ದ್ವಾದಶ ಜ್ಯೋತಿರ್ಲಿಂಗಗಳ ಪ್ರತಿಕೃತಿಗಳಿವೆ. ಇಲ್ಲಿ ಕಿರಾತೇಶ್ವರ ಮಹಾದೇವ್‍ನ ಬೃಹತ್ ಪ್ರತಿಮೆ ಮತ್ತು ಶಿರ್ಡಿ ಸಾಯಿ ಬಾಬಾನ ಪ್ರತಿಮೆಯೂ ಇದೆ.

ಪಟ್ಟಣದ ಸಮೀಪದಲ್ಲಿ, ಸಿಕ್ಕಿಂನ ಏಕೈಕ ಟೀ ಎಸ್ಟೇಟ್ — ಟೆಮಿ ಟೀ ಗಾರ್ಡನ್ ಸ್ಥಿತವಾಗಿದೆ. ಪ್ರವಾಸಿಗರು ಟೆಮಿ ಚಹಾ ಉದ್ಯಾನದ ರಮಣೀಯ ನೋಟವನ್ನು ಆನಂದಿಸಬಹುದು. ಇಲ್ಲಿಯ ಚಹಾವು ಅದರ ವಿಲಕ್ಷಣ ಕಂಪು ಮತ್ತು ಸುವಾಸನೆಯಿಂದ ಗುರುತಿಸಲ್ಪಟ್ಟಿದೆ.

ಸಿಕ್ಕಿಂನ ಪೋಷಕ ಸಂತ ಗುರು ಪದ್ಮಸಂಭವ (ಗುರು ರಿಂಪೋಚೆ) ಅವರ ಪ್ರತಿಮೆಯ ಪರಿದೃಶ್ಯಕ ನೋಟ. ಇದು ನಾಮ್ಚಿಯ ಸಮ್‍ದ್ರುಪ್ತ್ಸೆ ಗುಡ್ಡದ ಮೇಲಿದೆ
ನಾಮ್ಚಿಯಲ್ಲಿರುವ ಸಾಯಿ ದೇವಾಲಯ

ಫೆಬ್ರವರಿ ತಿಂಗಳಲ್ಲಿ, ನಾಮ್ಚಿ ಉದ್ಯಾನದಲ್ಲಿ ವಾರ್ಷಿಕ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಪುಷ್ಪ ಪ್ರದರ್ಶನವು ಸಿಕ್ಕಿಂನಲ್ಲಿ ಅತ್ಯಂತ ದೊಡ್ಡದಾಗಿದ್ದು, ಎದ್ದುಕಾಣುವ ಬಣ್ಣಗಳ ಹೂವುಗಳನ್ನು ಹೊಂದಿದೆ. ಈ ಪ್ರದರ್ಶನದ ಪ್ರಮುಖ ಆಕರ್ಷಣೆಯೆಂದರೆ ವಿಲಕ್ಷಣ ಮತ್ತು ಅಪರೂಪದ ಆರ್ಕಿಡ್‌ಗಳ ಪ್ರದರ್ಶನ.

ಉಲ್ಲೇಖಗಳು

[ಬದಲಾಯಿಸಿ]

 

  1. ೧.೦ ೧.೧ "South Skikkim". National Informatics Centre. Retrieved 12 August 2015.
  2. "National Geological Monument, from Geological Survey of India website". Archived from the original on 12 July 2017. Retrieved 21 January 2019.
  3. "Geo-Heritage Sites". pib.nic.in. Press Information Bureau. 2016-03-09. Retrieved 2018-09-15.
  4. national geo-heritage of India Archived 2017-01-11 ವೇಬ್ಯಾಕ್ ಮೆಷಿನ್ ನಲ್ಲಿ., INTACH


"https://kn.wikipedia.org/w/index.php?title=ನಾಮ್ಚಿ&oldid=1125385" ಇಂದ ಪಡೆಯಲ್ಪಟ್ಟಿದೆ