ನಾಯಕ (ಜಾತಿ) ವಾಲ್ಮೀಕಿ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
- ನಾಯಕ ಇದು ಕರ್ನಾಟಕದ ಒಂದು ಜಾತಿಯ ಹೆಸರು. ಬೇಡ, ನಾಯಕ, ವಾಲ್ಮೀಕಿ, ಬೇಡರು, ಬೋಯ, ರಾಯ ,ಪಾಳೇಗಾರ, ಬೇಡನಾಯಕ, ಹೀಗೆ ಸ್ಥಳೀಯವಾಗಿ ಹಲವಾರು ಪರ್ಯಾಯ ಹೆಸರುಗಳಿಂದ ಈ ಜನಾಂಗವು ಗುರುತಿಸಲ್ಪಡುತ್ತಿದೆ.
ಬೇಡ ನಾಯಕ ಜನಾಂಗಕ್ಕೆ ತನ್ನದೇ ಆದ ಸಂಸ್ಕೃತಿ ಇದೆ; ಇತಿಹಾಸವಿದೆ.
ಹಿಂದೂ ತತ್ತ್ವಶಾಸ್ತ್ರ
ಕ್ಷತ್ರಿಯ ಬೇಡನಾಯಕರು |
ಆಚರಣೆಗಳು |
---|
ನಂಬಿಕೆ • ಹಿಂದೂ |
ದೇವರು • ಶಿವ, ಸ್ಥಳೀಯ ದೇವರು |
ಮೂಲ ಪುರುಷ · ವೇನ ಮಹಾರಾಜ |
ಪ್ರಮುಖ ವ್ಯಕ್ತಿಗಳು |
ರಾಮಾಯಣ ರಚಿಸಿದ ವಾಲ್ಮೀಕಿ |
ಏಕಲವ್ಯ |
ಬೇಡರ ಕಣ್ಣಪ್ಪ |
ಸಾಮ್ರಾಟರು |
ಶ್ರೀ ಕೃಷ್ಣದೇವರಾಯ |
ಇಮ್ಮಡಿ ಪುಲಕೇಶಿ ಮಹಾರಾಜ್ |
ಹರಿಹರ ಬುಕ್ಕರಾಯ |
ಮದಕರಿ ನಾಯಕರು |
ಕುಮಾರ ರಾಮ |
ಸಿಂಧೂರ ಲಕ್ಷ್ಮಣ |
ರಾಜಾ ವೆಂಕಟಪ್ಪ ನಾಯಕ |
ಕರ್ನಾಟಕದಲ್ಲಿ ಬಹುದೊಡ್ಡ ಕ್ಷತ್ರಿಯ ಜನಾಂಗವಿದೆ. ಕರ್ನಾಟಕದಲ್ಲಿ ಈ ಜನಾಂಗದವರ ಆಳ್ವಿಕೆ ಮಹಾಭಾರತದ ಕಾಲದಿಂದಲೂ ಇರುವುದಾಗಿ ತಿಳಿದುಬರುತ್ತದೆ. ಈ ಜನಾಂಗದವರು ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಮತ್ತು ಪಾಂಡವರ ಎರಡೂ ಪಕ್ಷಗಳ ಪರವಾಗಿ ಭಾಗವಹಿಸಿದ್ದರು. ಸಹದೇವನು ರಾಜಸೂಯ ಯಾಗದ ಪ್ರಯುಕ್ತ ತನ್ನ ದಕ್ಷಿಣ ಭಾರತದ ದಂಡಯಾತ್ರೆಯಲ್ಲಿ ಈ ಜನಾಂಗವನ್ನು ಸೋಲಿಸಿ ಕಪ್ಪ ಪಡೆದಿದ್ದಾಗಿ ಉಲ್ಲೇಖವಿದೆ. ಕರ್ನಾಟಕವನ್ನು ಆಳಿದ ಪುರಾಣಶ್ರೇಷ್ಠ ಚಕ್ರವರ್ತಿ ಚಂದ್ರಹಾಸನು ಇದೇ ಜನಾಂಗದವನು. ನಿಷಾದ ದೇಶದ ಚಕ್ರವರ್ತಿ ನಳ ಮಹಾರಾಜ, ಶೃಗಂಭೇರಪುರದ ರಾಜನಾದ ಹಿರಣ್ಯಧನುವಿನ ಪುತ್ರ ಮುಂತಾದ ಪೌರಾಣಿಕ ಅರಸರು ಈ ಜನಾಂಗದವರಾಗಿರುವರು.
ವಿಷ್ಣುಪುರಾಣ ಮತ್ತು ಕ್ಲದ ಪ್ರಕಾರ ಈ ಭೂಮಿಯ ಮೊದಲ ಪಟ್ಟಾಭಿಷಿಕ್ತ ಚಕ್ರವರ್ತಿಯಾದ ಪೃಥುವಿನ ತಂದೆಯಾದ ವೇನ ಮಹಾರಾಜನು (ಪೃಥುವಿನಿಂದ ಈ ಭೂಮಿಗೆ ಪೃಥ್ವಿ ಎಂಬ ಹೆಸರು ಬಂದಿದೆ) ಬೇಡ ನಾಯಕರ ಮೂಲಪುರುಷನಾಗಿರುವನು. ಪರಶುರಾಮನು ಕ್ಷತ್ರಿಯರ ಸಂಹಾರ ಮಾಡುವ ಸಂದರ್ಭದಲ್ಲಿ ಕೆಲ ಕ್ಷತ್ರಿಯರು ಬೆದರಿ ಕಾಡು ಸೇರಿದರು. ಇವರು ಅರಣ್ಯ, ಬೆಟ್ಟಗುಡ್ಡ ಮತ್ತು ನೀರಿನ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದರು. ಕಾಡಿನಲ್ಲಿ ವಾಸವಿದ್ದ ಋಷಿಮುನಿಗಳಿಗೆ ರಕ್ಷಣೆ ಒದಗಿಸಿದ್ದರಿಂದ, ವಿಷ್ಣುವಿನ ಪರ್ಯಾಯ ಹೆಸರಾದ ನಾಯಕ ಎಂಬ ಬಿರುದು ಪಡೆದರು. ಹಾಗಾಗಿ ಇಂದು ಕ್ಷತ್ರಿಯರ ಕೆಲ ಉಪಪಂಗಡಗಳನ್ನು ಕ್ಷತ್ರಿಯ ಬುಡಕಟ್ಟು ಜನಾಂಗ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದೆ. ಅನೇಕರು ಸಾಹಸಿಗಳಾಗಿ ಬಾಳಿ ಬದುಕಿ ಪಾಳೆಯಗಾರರಾಗಿ ರಾಜರೆನಿಸಿಕೊಂಡು, ಅಧಿಕಾರದಲ್ಲಿ ಮೆರೆದು, ಧೀಮಂತರೆನಿಸಿಕೊಂಡು ನಾಡಿನ ಉದ್ದಗಲಕ್ಕೂ ತಮ್ಮ ಪ್ರಭುತ್ವ ಸ್ಥಾಪಿಸಿ, ಧರ್ಮ ಪ್ರಭುಗಳಾಗಿ ರಾಷ್ಟ್ರ ಪ್ರೇಮಕ್ಕೆ, ಧೈರ್ಯಕ್ಕೆ, ಸಾಹಸಕ್ಕೆ, ಶೌರ್ಯ ಪರಾಕ್ರಮಗಳಿಗೆ ಹೆಸರುವಾಸಿಯಾಗಿ ಸಾಹಿತ್ಯ, ಸಂಸ್ಕೃತಿ, ಕಲೆಗಳ ಪ್ರೋತ್ಸಾಹದಿಂದ ಹೆಸರುವಾಸಿಗಳಾಗಿದ್ದಾರೆ.
77 ಪಾಳೇಪಟ್ಟುಗಳನ್ನು ಆಳ್ವಿಕೆ ಮಾಡಿ ಪಾಳೆಗಾರರು ಎಂದೆನೆಸಿಕೊಂಡವರು ಇದೆ ನಾಯಕ ಜನಾಂಗ.ಇಂದಿಗೂ ಹಲವಾರು ಹಳ್ಳಿಗಳ ಹೆಸರುಗಳು ನಾಯಕ ಎಂಬ ಪದದಿಂದಲೆ ಅಂತ್ಯಗೊಳ್ಳುವುದನ್ನು ಕಾಣಬಹುದು,ನಾಯಕ ಪಾಳೆಗಾರರು ಆಳಿದ ಊರುಗಳು ಅವು. ಮಹರ್ಷಿ ವಾಲ್ಮೀಕಿ ಜನಿಸಿದ ಸಮುದಾಯ ಇದು.
ನಾಯಕ ಸಮಾಜದ ಪ್ರಮುಖ ಗಣ್ಯರು
[ಬದಲಾಯಿಸಿ]- ಶಿವಭಕ್ತ ಬೇಡರ ಕಣ್ಣಪ್ಪ
- ಮಹಾತಾಯಿ ಶಬರಿ
- ಧನುರ್ದಾರಿ ಏಕಲವ್ಯ
- ಗಂಡುಗಲಿ ಕುಮಾರ ರಾಮ
- ಹರಿಹರ-ಬುಕ್ಕರಾಯ
- ಶ್ರೀ ಕೃಷ್ಣದೇವರಾಯ
- ಪಾಳೇಗಾರ ಮದಕರಿ ನಾಯಕರು
- ಪಾಳೇಗಾರ ಶಿವಪ್ಪ ನಾಯಕರು
- ವೀರ ಸಿಂಧೂರ ಲಕ್ಷ್ಮಣ
- ಕೆಳದಿ ಚೆನ್ನಮ್ಮ
- ಹಲಗಲಿ ಬೇಡರು [ಜಡಗ ಮತ್ತು ಬಾಲ]
- ರಾಜಾ ವೆಂಕಟಪ್ಪ ನಾಯಕ
- ಇಮ್ಮಡಿ ಪುಲಕೇಶಿ ಮಹಾರಾಜ
- ಕನಕದಾಸರು [ತಿಮ್ಮಪ್ಪನಾಯಕ ]
- ಎಚ್ಚಮ್ಮ ನಾಯಕ
- ಕಂಪಿಲರಾಯರು
ಪ್ರಮುಖ ಸಮಾಜದ ಸಂಘಟನೆಗಳು
[ಬದಲಾಯಿಸಿ]- ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ [ರಿ]
- ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘ [ರಿ] ಬೆಂಗಳೂರು
- ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟ [ರಿ]
- ರಾಜನಳ್ಳಿ ವಾಲ್ಮೀಕಿ ಗುರುಪೀಠ
ಉಲ್ಲೇಖ
[ಬದಲಾಯಿಸಿ]