ನಿತ್ಯಮಲ್ಲಿಗೆ
ಗೋಚರ
Jasminum flexile | |
---|---|
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಲ್ಯಾಮಿಯೇಲ್ಸ್ |
ಕುಟುಂಬ: | ಓಲಿಯೇಸೀ |
ಕುಲ: | ಜಾಸ್ಮಿನಮ್ |
ಪ್ರಜಾತಿ: | J. flexile
|
Binomial name | |
Jasminum flexile |
ನಿತ್ಯಮಲ್ಲಿಗೆ ಜಾಸ್ಮಿನಮ್ ಫ್ಲೆಕ್ಸೈಲ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಮಲ್ಲಿಗೆಯ ಒಂದು ಪ್ರಭೇದ.[೧][೨] ಅಸ್ಸಾಮಿನ ಹಾಗೂ ದಕ್ಷಿಣ ಭಾರತದ ಮೈದಾನದಿಂದ ಹಿಡಿದು ಸು.1500 ಮೀ ಎತ್ತರದ ಪ್ರದೇಶಗಳಲ್ಲಿ ಸಾಮಾನ್ಯ.
ಗುಣಲಕ್ಷಣಗಳು
[ಬದಲಾಯಿಸಿ]ಹಂಬಿನ ರೂಪದಲ್ಲಿ ಬೆಳೆಯುತ್ತದೆ. ಎಲೆಗಳು ಸಂಯುಕ್ತ ರೀತಿಯವು; ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಒಂದೊಂದರಲ್ಲೂ 3 ಪತ್ರಕಗಳಿದ್ದು ತುದಿಯಲ್ಲಿರುವ ಪತ್ರಕ ಉಳಿದವಕ್ಕಿಂತ ದೊಡ್ಡದಾಗಿರುತ್ತದೆ. ಹೂಗಳು ಸೀಮಾಕ್ಷಿ ರೀತಿಯ ಮಂಜರಿಗಳಲ್ಲಿ ಅರಳುವುವು. ದಳಗಳು ಚೂಪು ತುದಿಯುಳ್ಳವು. ಇದು ಸಹ ವರ್ಷವಿಡೀ ಹೂಬಿಡುವುದಾದರೂ ಚಳಿಗಾಲದಲ್ಲಿ ಹೂಗಳ ಸಮೃದ್ಧಿ ಹೆಚ್ಚು.
ಉಲ್ಲೇಖಗಳು
[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: