ನೀನಾ ನಾಯಕ್
ನೀನಾ ನಾಯಕ್ | |
---|---|
ನೀನಾ ನಾಯಕ್ (ಮಾರ್ಚ್ ೨೦೧೪) | |
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು
| |
ಹಾಲಿ | |
ಅಧಿಕಾರ ಸ್ವೀಕಾರ ೨೦೦೯ | |
ಮಕ್ಕಳ ಕಲ್ಯಾಣ ಸಮಿತಿ ಬೆಂಗಳೂರು, ಇದರ ಅಧ್ಯಕ್ಷರು
| |
ಅಧಿಕಾರ ಅವಧಿ ೨೦೦೩ – ೨೦೦೭ | |
ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ಉಪಾಧ್ಯಕ್ಷರು
| |
ಅಧಿಕಾರ ಅವಧಿ ೨೦೦೬ – ೨೦೦೯ | |
ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ ಅಧ್ಯಕ್ಷರು
| |
ಅಧಿಕಾರ ಅವಧಿ ೧೯೯೯ – ೨೦೦೮ | |
ಸಮುದಾಯ ಆರೋಗ್ಯ ಮತ್ತು ಶಿಕ್ಷಣ ಸಮಾಜದ ಸಲಹೆಗಾರ
| |
ಅಧಿಕಾರ ಅವಧಿ ೨೦೦೪ – ೨೦೦೬ | |
ಚೈಲ್ಡ್ ರೈಟ್ಸ್ ಆಂಡ್ ಯು ಸಂಸ್ಥೆಯ ರಾಷ್ಟ್ರೀಯ ಸಲಹೆಗಾರ
| |
ಅಧಿಕಾರ ಅವಧಿ ೨೦೦೨ – ೨೦೦೫ | |
ವೈಯಕ್ತಿಕ ಮಾಹಿತಿ | |
ಜನನ | ೨೪ ನವೆಂಬರ್ ೧೯೫೩ |
ರಾಜಕೀಯ ಪಕ್ಷ | ಆಮ್ ಆದ್ಮಿ ಪಕ್ಷ |
ಮಕ್ಕಳು | ೨ ದತ್ತು ಮಕ್ಕಳು |
ವಾಸಸ್ಥಾನ | ಬೆಂಗಳೂರು |
ಅಭ್ಯಸಿಸಿದ ವಿದ್ಯಾಪೀಠ | ಮದ್ರಾಸ್ ವಿಶ್ವವಿದ್ಯಾನಿಲಯ (ಮಾಸ್ಟರ್ ಆಫ್ ಆರ್ಟ್ಸ್) |
ನೀನಾ ಪಿ. ನಾಯಕ್ (ಜನನ ೨೪ ನವೆಂಬರ್ ೧೯೫೩) ದಕ್ಷಿಣ ಕನ್ನಡದ ಸಾಮಾಜಿಕ ಕಾರ್ಯಕರ್ತೆ ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತೆ. ಮಕ್ಕಳ ಹಕ್ಕುಗಳ ಪ್ರಚಾರ ಮತ್ತು ರಕ್ಷಣೆಗಾಗಿ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. [೧] [೨] [೩]
ಅವರು ೬ ಏಪ್ರಿಲ್ ೨೦೧೨ ರಂದು ಬೆಂಗಳೂರಿನಲ್ಲಿ ನಡೆದ ಟೆಡ್ಎಕ್ಸ್ ಕಾರ್ಯಕ್ರಮದಲ್ಲಿ ಆಡಳಿತದಲ್ಲಿ ಮಕ್ಕಳ ಪಾತ್ರದ ಕುರಿತು ಪ್ರಸ್ತುತಿಯನ್ನು ನೀಡಿದರು. [೪] [೫] ಅವರು ಹಲವಾರು ಲೇಖನಗಳು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ನಾಯಕ್ ಅವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷರಾಗಿದ್ದರು. [೬] ಈ ಹಿಂದೆ, ಅವರು ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ಉಪಾಧ್ಯಕ್ಷರಾಗಿದ್ದರು ಮತ್ತು ಭಾರತದ ರಾಷ್ಟ್ರೀಯ ಯೋಜನಾ ಆಯೋಗದ ಮಕ್ಕಳ ವಿಭಾಗದ ಉಪ ಸಮಿತಿಯ ಸದಸ್ಯರಾಗಿದ್ದರು. [೭] [೮] [೯]
ಶಿಕ್ಷಣ
[ಬದಲಾಯಿಸಿ]ನೀನಾ ನಾಯಕ್ ಅವರು ಸಾಮಾಜಿಕ ಕಾರ್ಯ ವಿಭಾಗದ ಸ್ನಾತಕೋತ್ತರ ಪದವಿಯನ್ನು ಕುಟುಂಬ ಮತ್ತು ಮಕ್ಕಳ ಕಲ್ಯಾಣ ವಿಷಯದಲ್ಲಿ ಹೊಂದಿದ್ದಾರೆ. ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಗೃಹ ವಿಜ್ಞಾನದಲ್ಲಿ ಪದವಿಯನ್ನು ಮಕ್ಕಳ ಅಭಿವೃದ್ಧಿ, ಆಹಾರ ಮತ್ತು ಪೋಷಣೆಯ ಪ್ರಮುಖ ವಿಷಯಗಳೊಂದಿಗೆ ಹೊಂದಿದ್ದಾರೆ. [೧೦] ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (ಐಜಿಎನ್ಒಯು) ಮಾನವ ಹಕ್ಕುಗಳ ಪ್ರಮಾಣಪತ್ರವನ್ನು ಹೊಂದಿದ್ದಾರೆ. [೧೧]
ವೃತ್ತಿ
[ಬದಲಾಯಿಸಿ]ಕಳೆದ 30 ವರ್ಷಗಳಿಂದ ಮಕ್ಕಳ ಹಕ್ಕುಗಳ ಕಾರ್ಯಕರ್ತೆಯಾಗಿ ಅವರು ಹಲವಾರು ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿದ್ದಾರೆ [೧೨] [೧೩]
- ಮಕ್ಕಳ ಕಲ್ಯಾಣ ಸಮಿತಿ ಬೆಂಗಳೂರು, ಇದರ ಅಧ್ಯಕ್ಷರು.
- ಮೂರು ಸಲ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು. [೧೪]
- ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ಉಪಾಧ್ಯಕ್ಷರು. [೪]
- ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದ ಸದಸ್ಯರು (ಭಾರತ ಸರ್ಕಾರದ ಕಾರ್ಯದರ್ಶಿಗೆ ಸಮಾನ).
- ಭಾರತದ ರಾಷ್ಟ್ರೀಯ ಯೋಜನಾ ಆಯೋಗದ ೧೧ ನೇ ಪಂಚವಾರ್ಷಿಕ ಯೋಜನೆಯ ಮಕ್ಕಳ ಉಪಸಮಿತಿಯ ಸದಸ್ಯರು.
- ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಅಫ್ರೋಜ್ ಅಪ್ರಾಪ್ತ ವಯಸ್ಕನೆಂಬ ಕಾರಣಕ್ಕಾಗಿ ಅವರನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು.
ರಾಜಕೀಯ
[ಬದಲಾಯಿಸಿ]೧೦ ಮಾರ್ಚ್ ೨೦೧೪ ರಂದು ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದರು. ಮತ್ತು ೨೧೪೦೩ ಮತಗಳನ್ನು ಪಡೆದು (ಒಟ್ಟು ಮತಗಳಲ್ಲಿ ೧.೯%) ಬಿಜೆಪಿಯ ಅನಂತ್ ಕುಮಾರ್ ವಿರುದ್ಧ ಸೋತರು. [೧೫]
ವೈಯಕ್ತಿಕ ಜೀವನ
[ಬದಲಾಯಿಸಿ]ನೀನಾ ನಾಯಕ್ ೨ ದತ್ತು ಮಕ್ಕಳನ್ನು ಬೆಳೆಸಿದ್ದಾರೆ. [೧೬]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಟೆಡ್ಎಕ್ಸ್ ನಲ್ಲಿ ನೀನಾ ನಾಯಕ್
ಉಲ್ಲೇಖಗಳು
[ಬದಲಾಯಿಸಿ]- ↑ "Nina Nayak: Child rights activist". The Hindu. 3 ಜುಲೈ 2009. Archived from the original on 7 ಜುಲೈ 2009.
- ↑ "AAP fields child rights activist against Nandan". The Times of India. 11 ಮಾರ್ಚ್ 2014. Retrieved 13 ಏಪ್ರಿಲ್ 2014.
- ↑ "Nina Nayak is our candidate". Archived from the original on 13 ಏಪ್ರಿಲ್ 2014. Retrieved 12 ಏಪ್ರಿಲ್ 2014.
- ↑ ೪.೦ ೪.೧ "Theme: The Big Picture". Domlur Change. TEDx. Retrieved 13 ಏಪ್ರಿಲ್ 2014.
- ↑ "A Mantra For Change: Nina Nayak". TEDxDomlurChange. TEDx. Retrieved 13 ಏಪ್ರಿಲ್ 2014.
- ↑ "Nina Nayak : KSCPCR".
- ↑ "Ex-Infosys CFO, Delhi scribe on AAP fourth list". Hindustan Times. 11 ಮಾರ್ಚ್ 2014. Archived from the original on 11 ಮಾರ್ಚ್ 2014. Retrieved 11 ಮಾರ್ಚ್ 2014.
- ↑ "Selection of Members in the National Commission for Protection of Child Rights (NCPCR)" (PDF). Ministry of Women & Child Development Government of India. Retrieved 13 ಏಪ್ರಿಲ್ 2014.
- ↑ "Guardians of Foster Love". Parenting. Outlook. Retrieved 13 ಏಪ್ರಿಲ್ 2014.
- ↑ "Selection of Members in the National Commission for Protection of Child Rights (NCPCR)" (PDF). Ministry of Women & Child Development Government of India. Retrieved 13 ಏಪ್ರಿಲ್ 2014."Selection of Members in the National Commission for Protection of Child Rights (NCPCR)" (PDF). Ministry of Women & Child Development Government of India. Retrieved 13 April 2014.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedNCPCR_nic
- ↑ "Nina Nayak is our candidate". Archived from the original on 13 ಏಪ್ರಿಲ್ 2014. Retrieved 12 ಏಪ್ರಿಲ್ 2014."Nina Nayak is our candidate" Archived 13 April 2014[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. Retrieved 12 April 2014.
- ↑ "Ex-Infosys CFO, Delhi scribe on AAP fourth list". Hindustan Times. 11 ಮಾರ್ಚ್ 2014. Archived from the original on 11 ಮಾರ್ಚ್ 2014. Retrieved 11 ಮಾರ್ಚ್ 2014."Ex-Infosys CFO, Delhi scribe on AAP fourth list". Hindustan Times. 11 March 2014. Archived from the original on 11 March 2014. Retrieved 11 March 2014.
- ↑ "Theme: The Big Picture". Domlur Change. TEDx. Retrieved 13 ಏಪ್ರಿಲ್ 2014."Theme: The Big Picture". Domlur Change. TEDx. Retrieved 13 April 2014.
- ↑ "AAP fields child rights activist against Nandan". The Times of India. Retrieved 11 ಮಾರ್ಚ್ 2014.
- ↑ "Guardians of Foster Love". Parenting. Outlook. Retrieved 13 ಏಪ್ರಿಲ್ 2014."Guardians of Foster Love". Parenting. Outlook. Retrieved 13 April 2014.
- Pages with reference errors
- Pages using the JsonConfig extension
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Short description matches Wikidata
- Use Indian English from March 2014
- All Wikipedia articles written in Indian English
- Use dmy dates from April 2022
- ಸಮಾಜಸೇವಕರು
- ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ