ವಿಷಯಕ್ಕೆ ಹೋಗು

ನೂಪುರಭ್ರಮರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೂಪುರಭ್ರಮರಿ - 2007ರಲ್ಲಿ ಪುಟ್ಟದಾಗಿ ಆರಂಭವಾದ, ನೃತ್ಯಜಗತ್ತಿಗೆ ಒಂದು ಪರಿಭ್ರಮಣ ಮಾಡಿಸುವ ಪತ್ರಿಕೆ. ಪತ್ರಿಕೋದ್ಯಮ ಮತ್ತು ಭರತ ನಾಟ್ಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ನೃತ್ಯ-ಪತ್ರಿಕೋದ್ಯಮ ಗಳಿಗೆ ಸಂಬಂಧಪಟ್ಟು ಪಿ.ಎಚ್.ಡಿ ಪದವಿ ಪಡೆದ ಡಾ. ಮನೋರಮಾ ಬಿ ಎನ್ ಇದರ ಸಂಪಾದಕರಾಗಿದ್ದಾರೆ. 2011ರಲ್ಲಿ ಟ್ರಸ್ಟ್ ಆಗಿ ನೋಂದಣೆಗೊಂಡು ಯಶಸ್ವಿಯಾಗಿ 15 ವರ್ಷ ಪೂರೈಸಿದೆ. ಅಂತರರಾಷ್ಟ್ರೀಯ ಮನ್ನಣೆಯ ISSN ಮಾನ್ಯತೆ ಹೊಂದಿದ ನೃತ್ಯ ಸಂಶೋಧನ ನಿಯತಕಾಲಿಕೆ ಎಂದು ಹೆಸರುಪಡೆದಿದೆ. ಈ ಸಂಸ್ಥೆಯು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಸಮ್ಮೇಳನಗಳನ್ನೂ ವಿಚಾರ ಸಂಕಿರಣಗಳನ್ನೂ ನಡೆಸಿಕೊಂಡು ಬಂದಿದೆ. ನೃತ್ಯ, ನಾಟ್ಯ, ಶಾಸ್ತ್ರ, ಸಂಶೋಧನೆಗಳ ವಿಷಯಗಳುಳ್ಳ ಹಲವಾರು ಪುಸ್ತಕಗಳನ್ನು ಪ್ರಕಾಶಿಸಿದೆ. ನೂಪುರಭ್ರಮರಿ, ಮುದ್ರಾರ್ಣವ, ನೃತ್ಯ ಮಾರ್ಗ ಮುಕುರ, ನಾಯಿಕಾಂತರಂಗ, ನಾಟ್ಯಾಯನ, ಭರತ ನಾಟ್ಯ ಬೋಧಿನಿ ಇವು ಕೆಲವು ಪುಸ್ತಕಗಳು. ಆಸಕ್ತರಿಗೆ ಡಿಪ್ಲೊಮಾ ತರಹದ ಕೋರ್ಸ್ಗಳನ್ನೂ ಆನ್ಲೈನ್ ನಲ್ಲಿ ನಡೆಸುತ್ತಿದೆ. ನಾಟ್ಯಶಾಸ್ತ್ರ, ನಟ್ಟುವಾಂಗ, ನಾಯಿಕಾನಾಯಕ, ನೃತ್ಯಾನುಕೀರ್ತನ ಇತ್ಯಾದಿ ಕೋರ್ಸ್ ಗಳು ಜನಮನ್ನಣೆ ಪಡೆದಿವೆ.