ವಿಷಯಕ್ಕೆ ಹೋಗು

ನೆಹರು ಮೈದಾನ, ಮಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೆಹರು ಮೈದಾನ
ಸೆಂಟ್ರಲ್ ಮೈದಾನ
ಸ್ಥಳಮಂಗಳೂರು ನಗರ, ಕರ್ನಾಟಕ
ಮಾಲೀಕಮಂಗಳೂರು ಮಹಾನಗರ ಪಾಲಿಕೆ
ಸಾರ್ವಜನಿಕ ಸಾರಿಗೆ ಪ್ರವೇಶಬಸ್ ನಿಲ್ದಾಣಗಳು: ಸ್ಟೇಟ್ ಬ್ಯಾಂಕ್ ಮತ್ತು ಹಂಪನಕಟ್ಟೆ ರೈಲು ನಿಲ್ದಾಣ: ಮಂಗಳೂರು ಸೆಂಟ್ರಲ್

ನೆಹರು ಮೈದಾನ ಅಥವಾ ಸೆಂಟ್ರಲ್ ಮೈದಾನವು ಭಾರತದ ಕರ್ನಾಟಕದ ಮಂಗಳೂರಿನಲ್ಲಿರುವ ಬಹು ಉದ್ದೇಶಿತ ಮೈದಾನವಾಗಿದೆ. ಈ ಮೈದಾನವು ನಗರದ ಹಂಪನಕಟ್ಟೆಯ ಹೃದಯಭಾಗದಲ್ಲಿದೆ. ಮೈದಾನವನ್ನು ಮುಖ್ಯವಾಗಿ ಫುಟ್ಬಾಲ್, ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಪಂದ್ಯಗಳನ್ನು ಆಯೋಜಿಸಲು ಬಳಸಲಾಗುತ್ತದೆ. ಇಲ್ಲಿ ಆಯೋಜಿಸಲಾದ ರಾಜಕೀಯ ರ್ಯಾಲಿಗಳು, ಧಾರ್ಮಿಕ ಉತ್ಸವಗಳು, ಪ್ರದರ್ಶನಗಳಂತಹ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ.[][] ನೆಹರು ಮೈದಾನಕ್ಕೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರನ್ನು ಇಡಲಾಯಿತು.

ನೆಹರು ಮೈದಾನವು ದೇಶೀಯ ಪಂದ್ಯಾವಳಿಗಳು ಮತ್ತು ಅನೇಕ ಅಂತರ-ಶಾಲಾ ಮತ್ತು ಕಾಲೇಜು ಪಂದ್ಯಾವಳಿಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿದೆ. ಮಂಗಳೂರು ಸ್ಪೋರ್ಟ್ಸ್ ಕ್ಲಬ್ (MSC) ನಗರದಲ್ಲಿ ಜನಪ್ರಿಯ ಸಂಸ್ಥೆಯಾಗಿದ್ದು, ನೆಹರೂ ಮೈದಾನದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಮಂಗಳೂರು ವಲಯಕ್ಕೆ ಸಾಂಸ್ಥಿಕ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಫುಟ್ಬಾಲ್ ಅಸೋಸಿಯೇಷನ್ (DKDFA), ನೆಹರು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಾರ್ಷಿಕವಾಗಿ "ಸ್ವಾತಂತ್ರ್ಯ ದಿನದ ಕಪ್" ಅನ್ನು ಆಯೋಜಿಸುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ವಿವಿಧ ಶಾಲಾ-ಕಾಲೇಜುಗಳು ಭಾಗವಹಿಸಲಿದ್ದು, ಏಳು ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.[]

ಕ್ರೀಡಾ ಘಟನೆಗಳು

[ಬದಲಾಯಿಸಿ]

ಇತರೆ ಘಟನೆಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Mangalore: Grand Procession, Enticing Tableaus Mark Nehru Maidan's Ganesha Immersion". www.daijiworld.com. Retrieved 2016-11-06.
  2. "The Times Of India". timesofindia.indiatimes.com. Retrieved 2016-11-06.
  3. Network, CD. "Independence Day Cup football tourney concludes on a high note". Coastaldigest.com (in ಅಮೆರಿಕನ್ ಇಂಗ್ಲಿಷ್). Archived from the original on 18 October 2016. Retrieved 2016-11-06.
  4. Ali, Safoora (2012-07-13). "Teams in Mangalore begin practise for Independence Cup". The Hindu (in Indian English). ISSN 0971-751X. Retrieved 2016-11-06.
  5. "Over 3,00000 fans take part in IPL Fan Parks". IPLT20. 2016-05-24. Archived from the original on 2016-11-06. Retrieved 2016-11-06.