ನೇರಳೆ
ಗೋಚರ
ನೇರಳೆ | |
---|---|
ನೇರಳೆ | |
Scientific classification | |
ಸಾಮ್ರಾಜ್ಯ: | plantae
|
Division: | ಹೂ ಬಿಡುವ ಸಸ್ಯ
|
ವರ್ಗ: | ಮ್ಯಾಗ್ನೋಲಿಯೋಪ್ಸಿಡ
|
ಗಣ: | ಮಿರ್ಟೇಲ್ಸ್
|
ಕುಟುಂಬ: | ಮಿರ್ಟೇಸಿ
|
ಕುಲ: | ಸಿಜಿಜಿಯಮ್
|
ಪ್ರಜಾತಿ: | ಸಿ. ಕುಮಿನಿ
|
Binomial name | |
Syzygium cumini (ಕಾರೊಲಸ್ ಲಿನ್ನೆಯಸ್
|
ನೇರಳೆ ಒಂದು ನಿತ್ಯಹರಿದ್ವರ್ಣದ ಮರ. ಇದು ಭಾರತ, ಪಾಕಿಸ್ತಾನ ಹಾಗೂ ಇಂಡೊನೇಷ್ಯ ದೇಶಗಳ ಮೂಲ ನಿವಾಸಿಯಾಗಿದ್ದರೂ ಕೂಡಾ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳಲ್ಲಿ ಕಂಡು ಬರುವುದು. ಇದನ್ನು ಸಂಸ್ಕೃತದಲ್ಲಿ ಜಂಬು, ನೀಲಾಂಜನಚ್ಚದ, ಸುರಭಿಪತ್ರ, ಮೇಘಮೋದಿನಿ, ನೀಲಾಫಲ ಮುಂತಾದ ಹೆಸರಿನಿಂದ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಬ್ಲಾಕ್ ಪ್ಲಮ್, ಮಲಯಾಳಂನಲ್ಲಿ ನಾವಲ್, ಮರಾಠಿಯಲ್ಲಿ ಜಂಬುಲ್ ಎಂಬ ಹೆಸರಿದೆ.
ಬೆಳೆಯುವ ಪ್ರದೇಶ
[ಬದಲಾಯಿಸಿ]ಭಾರತದ ಎಲ್ಲೆಡೆಯೂ ಇದು ಬೆಳೆಯುತ್ತದೆ. ಇದನ್ನು ಉದ್ಯಾನವನದಲ್ಲಿಯೂ ಬೆಳೆಸಲಾಗುತ್ತದೆ.ಅದರಲ್ಲೂ ಕರ್ನಾಟಕದ ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು.
ಸಸ್ಯದ ಪರಿಚಯ
[ಬದಲಾಯಿಸಿ]ಇದು ಬೂದು ಬಣ್ಣದ ತೊಗಟೆಯನ್ನು ಹೊಂದಿದೆ. ಇದರ ಎಲೆಯು ಸರಳವಾಗಿದ್ದು, ಪರಸ್ಪರ ಅಭಿಮುಖವಾಗಿರುತ್ತದೆ. ಇದರ ಹೂವು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇದರ ಹಣ್ಣು ಕಡು ನೇರಳೆ ಬಣ್ಣ ಹೊಂದಿದ್ದು, ಒಂದು ಬೀಜವನ್ನು ಹೊಂದಿರುತ್ತದೆ.
ಉಪಯುಕ್ತ ಅಂಗಗಳು
[ಬದಲಾಯಿಸಿ]ಬೀಜ, ಫಲ, ತೊಗಟೆ ಹಾಗೂ ಎಲೆ
ಉಪಯೋಗಗಳು
[ಬದಲಾಯಿಸಿ]- ಇದರ ಎಲೆ ಹಾಗೂ ತೊಗಟೆಯನ್ನು ಅತಿಸಾರ, ಭೇದಿ, ಬಾಯಿ ಹುಣ್ಣು ಹಾಗೂ ಗಾಯಗಳಲ್ಲಿ ಬಳಸುತ್ತಾರೆ.
- ಇದರ ಬೀಜವನ್ನು ಸ್ತ್ರೀರೋಗಗಳ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.
- ಬೀಜದ ಚೂರ್ಣವನ್ನು ಮದುಮೇಹ ರೋಗ ನಿವಾರಣೆಗೆ ಬಳಸುತ್ತಾರೆ.
- ಇದರ ಎಲೆ ಹಾಗೂ ಮಾವಿನ ಎಲೆಯ ಕಷಾಯವನ್ನು ವಾಂತಿ ನಿವಾರಕವಾಗಿ ಉಪಯೋಗಿಸಲಾಗುತ್ತದೆ.
ಪೌಷ್ಟಿಕಾಂಶಗಳು
[ಬದಲಾಯಿಸಿ]
ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz) | |
---|---|
ಆಹಾರ ಚೈತನ್ಯ | 251 kJ (60 kcal) |
ಶರ್ಕರ ಪಿಷ್ಟ | 14 g |
- ಆಹಾರ ನಾರು | 0.6 g |
ಕೊಬ್ಬು | 0.23 g |
ಪ್ರೋಟೀನ್(ಪೋಷಕಾಂಶ) | 0.995 g |
ನೀರು | 84.75 g |
Thiamine (vit. B1) | 0.019 mg (2%) |
Riboflavin (vit. B2) | 0.009 mg (1%) |
Niacin (vit. B3) | 0.245 mg (2%) |
Vitamin B6 | 0.038 mg (3%) |
Vitamin C | 11.85 mg (14%) |
ಕ್ಯಾಲ್ಸಿಯಂ | 11.65 mg (1%) |
ಕಬ್ಬಿಣ ಸತ್ವ | 1.41 mg (11%) |
ಮೆಗ್ನೇಸಿಯಂ | 35 mg (10%) |
ರಂಜಕ | 15.6 mg (2%) |
ಪೊಟಾಸಿಯಂ | 55 mg (1%) |
ಸೋಡಿಯಂ | 26.2 mg (2%) |
Link to Newcrop entry Link to USDA Database entry Newcrop values given as averages Calories/B6 from USDA Percentages are roughly approximated using US recommendations for adults. Source: Purdue University NewcropSource: USDA Nutrient Database |
ನೇರಳೆ ಎಲೆ ಮತ್ತು ಹಣ್ಣಿನ ಪೌಷ್ಟಿಕತೆ ಸೂಚ್ಯಂಕ ಈ ಕೆಳಗಿನಂತಿದೆ.
ನೇರಳೆ ಎಲೆ | |
---|---|
ಸಂಯುಕ್ತ | ಶೇಕಡಾ |
ಕಚ್ಛಾ ಪ್ರೊಟೀನ್ | 9.1 |
ಕೊಬ್ಬು | 4.3 |
ಕಚ್ಛಾ ನಾರು | 17.0 |
ಬೂದಿ | 7 |
ಕ್ಯಾಲ್ಸಿಯಂ | 1.3 |
ರಂಜಕ | 0.19 |
Source: http://www.hort.purdue.edu/newcrop/morton/jambolan.html |
Syzygium cumini ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.