ಪಂಚಮಿ
ಗೋಚರ
ಪಂಚಮಿ ಎಂದರೆ ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಒಂದು ಪಕ್ಷದ ಐದನೇ ದಿನವಾಗಿರುತ್ತದೆ (ತಿಥಿ).[೧]
ಹಬ್ಬಗಳು
[ಬದಲಾಯಿಸಿ]- ನಾಗ ಪಂಚಮಿಯು ಭಾರತದ ಬಹುತೇಕ ಭಾಗಗಳಲ್ಲಿ ಹಿಂದೂಗಳಿಂದ ಆಚರಿಸಲ್ಪಡುವ ಒಂದು ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ದಿನದಂದು, ಜನರು ನಾಗ ದೇವತೆಯನ್ನು (ನಾಗರಹಾವು) ಪೂಜಿಸುತ್ತಾರೆ.
- ವಸಂತ ಪಂಚಮಿಯು ಜ್ಞಾನ, ಸಂಗೀತ ಹಾಗೂ ಕಲೆಯ ದೇವತೆಯಾದ ಸರಸ್ವತಿಗೆ ಮೀಸಲಾದ ಒಂದೂ ಹಿಂದೂ ಹಬ್ಬ. ಇದನ್ನು ಪ್ರತಿವರ್ಷ ಮಾಘಮಾಸದ (ಜನವರಿ-ಫ಼ೆಬ್ರುವರಿ) ಐದನೇ ದಿನದಂದು ಆಚರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಹಬ್ಬದಲ್ಲಿ ಮಕ್ಕಳಿಗೆ ತಮ್ಮ ಮೊದಲ ಶಬ್ದಗಳನ್ನು ಬರೆಯಲು ಕಲಿಸಲಾಗುತ್ತದೆ; ಬ್ರಾಹ್ಮಣರಿಗೆ ಭೋಜನ ಮಾಡಿಸಲಾಗುತ್ತದೆ; ಪಿತೃ ತರ್ಪಣವನ್ನು ಮಾಡಲಾಗುತ್ತದೆ.
- ವಿವಾಹ ಪಂಚಮಿ: ಇದು ರಾಮ ಮತ್ತು ಸೀತೆಯರ ವಿವಾಹವನ್ನು ಆಚರಿಸುವ ಒಂದು ಹಿಂದೂ ಹಬ್ಬವಾಗಿದೆ. ಇದನ್ನು ಹಿಂದೂ ಪಂಚಾಂಗದ ಪ್ರಕಾರ, ಮಾರ್ಗಶಿರ ಮಾಸದ (ನವೆಂಬರ್ - ಡಿಸೆಂಬರ್) ಶುಕ್ಲಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ.
- ತೀಜ್ ಭಾರತ ಹಾಗೂ ನೇಪಾಳದಲ್ಲಿ ಆಚರಿಸಲ್ಪಡುವ ಒಂದು ಹಬ್ಬವಾಗಿದೆ ಮತ್ತು ಋಷಿ ಪಂಚಮಿಯಂದು ಆರಂಭವಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]