ವಿಷಯಕ್ಕೆ ಹೋಗು

ಪಟಿಯಾಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


Patiala
ਪਟਿਆਲਾ
Moti Bagh Palace, Patiala now houses the National Institute of Sports
Moti Bagh Palace, Patiala now houses the National Institute of Sports
Country India
StatePunjab
DistrictPatiala
Settled1754
Founded byGuru Tegh Bahadur Ji
Named forBaba Ala Singh
Government
 • TypeDemocratic
 • BodyMunicipal Corporation of Patiala
 • Deputy CommissionerRam vir singh
 • MayorAmarinder Singh Bajaj
 • Municipal CommissionerDr. Indu Malhotra
 • Senior Superintendent of PoliceHarpreet Singh
Area
 • Total೧೩೧.೨೫ sq mi (೩೩೯.೯ km2)
Elevation೧೧೫೦ ft (೩೫೦ m)
Population
 (2011)
 • Total೪,೦೬,೧೯೨[]
 • Metro
೬,೬೦,೪೫೩
DemonymPatialvi
Languages
 • OfficialPunjabi
Time zoneUTC+5:30 (IST)
PIN
147001
Telephone codePatiala: 91-(0)175, Rajpura: 91-(0)1762, Samana: 91-(0)1764, Nabha: 91-(0)1765 & Amloh: 91-(0)1768
ISO 3166 codeIN-Pb
Vehicle registrationPB-11
Largest cityPatiala
HDIIncrease
0.860[ಸೂಕ್ತ ಉಲ್ಲೇಖನ ಬೇಕು]
HDI Categoryvery high
Literacy84.39%
Websitepatiala.nic.in

ಪಂಜಾಬ್ ರಾಜ್ಯದ ನೈರುತ್ಯ ಭಾಗದಲ್ಲಿ ಮೂರನೇಯ ಅತಿ ದೊಡ್ಡ ನಗರವಾಗಿರುವ ಪಟಿಯಾಲಾ ಪಟ್ಟಣವು ಸಮುದ್ರ ಮಟ್ಟದಿಂದ 250 ಮೀ. ಎತ್ತರದಲ್ಲಿ ನೆಲೆಸಿದೆ. ಸರ್ದಾರ್ ಲಖ್ನಾ ಮತ್ತು ಬಾಬಾ ಅಲಾ ಸಿಂಗ್‍ರಿಂದ ಸ್ಥಾಪಿತವಾದ ಈ ನಗರವು ನಂತರ ಮಹಾರಾಜ ನರೇಂದ್ರಸಿಂಗ್‍ರಿಂದ ಸುಮಾರು (1845-1862) ರ ಸಮಯದಲ್ಲಿ ಕೋಟೆಗಳಿಂದ ಸುಭದ್ರಗೊಳಿಸಲ್ಪಟ್ಟಿತು. ಈ ನಗರವು ಪಟಿಯಾಲಾ ಜಿಲ್ಲೆಯ ಆಡಳಿತಾತ್ಮಕ ರಾಜಧಾನಿಯಾಗಿದ್ದು, ಹಲವು ಸ್ಮಾರಕಗಳು ಮತ್ತು ಹತ್ತು ದ್ವಾರಗಳನ್ನು ಒಳಗೊಂಡಿದೆ.[]

ಅಧಿಕೃತ ಭಾಷೆಯಾದ ಪಂಜಾಬಿಯ ಜೊತೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಕೂಡ ಕೆಲವು ಆಡಳಿತಾತ್ಮಕ ವಿಚಾರಗಳಲ್ಲಿ ಬಳಸಲಾಗುತ್ತದೆ. ಈ ಪಟ್ಟಣದಲ್ಲಿ ಆಚರಿಸಲಾಗುವ ಕೆಲವು ಪ್ರಮುಖ ಹಬ್ಬಗಳೆಂದರೆ, ದೀಪಾವಳಿ, ಓಕುಳಿ ಹಬ್ಬ, ದಸರಾ ಉತ್ಸವ, ಗುರ್ಪುರಬ್ ಮತ್ತು ಬೈಸಾಖಿ. ಕೇವಲ ಈ ಪಟ್ಟಣದಲ್ಲೆ ಆಚರಿಸಲಾಗುವ ಪ್ರಮುಖ ಉತ್ಸವವೆಂದರೆ "ಪಟಿಯಾಲಾ ಸಾಂಪ್ರದಾಯಿಕ ಉತ್ಸವ" ಅಥವಾ "ಪಟಿಯಾಲಾ ಹೆರಿಟೇಜ್ ಫೆಸ್ಟಿವಲ್". ಪ್ರತಿ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಆಚರಿಸಲಾಗುವ ಈ ಉತ್ಸವವು ಹತ್ತಿರದ ಹಾಗು ದೂರದ ಪ್ರದೇಶಗಳಿಂದ ಹಲವಾರು ಕಲಾಪ್ರಿಯರು ಹಾಗು ಸಂಗೀತಪ್ರಿಯರನ್ನು ತನ್ನತ್ತ ಆಕರ್ಷಿಸುತ್ತದೆ. ಸುಮಾರು ಹತ್ತು ದಿನಗಳ ಕಾಲ ನಡೆಯುವ 'ಕ್ರಾಫ್ಟ್ಸ್ ಮೇಳ' ಇಲ್ಲಿನ ಪ್ರಮುಖ ಆಕರ್ಷಣೆ. ಈ ನಗರವು ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ನೆಲೆ ಎನ್ನಲಾಗಿದೆ. ಅದುವೆ "ಪಟಿಯಾಲಾ ಘರಾನಾ" ಎಂದು ಪ್ರಸಿದ್ಧವಾಗಿದೆ.[]

ಪಟಿಯಾಲಾ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

[ಬದಲಾಯಿಸಿ]

ಈ ನಗರವು ತನ್ನಲ್ಲಿರುವ ಶ್ರೀಮಂತ ಸಂಸ್ಕೃತಿ ಹಾಗು ಪರಂಪರೆಯಿಂದಾಗಿ ಪ್ರವಾಸೋದ್ಯಮಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಇಲ್ಲಿ ಹಲವು ಕೋಟೆ ಹಾಗು ಉದ್ಯಾನಗಳನ್ನು ಕಾಣಬಹುದು. ಉದಾಹರಣೆಗೆ ಕಿಲ್ಲಾ ಮುಬಾರಕ್ ಸಂಕೀರ್ಣ, ಶೀಷ್ ಮಹಲ್, ಬರ್ದಾರಿ ಉದ್ಯಾನಗಳು, ಕಿಲ್ಲಾ ಅಂದ್ರೂನ್, ರಂಗ ಮಹಲ್, ಮೈಜಿ ದಿ ಸರಾಯಿ, ಮಾಲ್ ರಸ್ತೆ ಮತ್ತು ದರ್ಬಾರ್ ಹಾಲ್. ಇನ್ನುಳಿದಂತೆ ಸಮನಾ, ಬನುರ್ ಮತ್ತು ಸನೌರ್ ಎಂಬ ಪ್ರವಾಸಿ ಸ್ಥಳಗಳು ಪಟಿಯಾಲಾ ನಗರದ ಬಳಿಯಿವೆ.

ಪಟಿಯಾಲಾದಲ್ಲಿ ದೊರಕುವ ವಿಶೇಷಗಳು

[ಬದಲಾಯಿಸಿ]

ಟರ್ಬನ್ (ಪಗಡಿ), ಪರಂದಾ(ಕೂದಲನ್ನು ಹಿಡಿದಿಡುವ ಒಂದು ವಸ್ತು), ಪಟಿಯಾಲಾ ಸಲ್ವಾರ್ (ಸ್ತ್ರೀಯರು ಧರಿಸುವ ಒಂದು ಬಗೆಯ ಪ್ಯಾಂಟು), ಜುಟ್ಟಿ (ಒಂದು ಬಗೆಯ ಪಾದರಕ್ಷೆ) ಅಥವಾ ಪಟಿಯಾಲಾ ಪೆಗ್ (ಮದ್ಯದ ಒಂದು ಅಳತೆ): ಇವೆಲ್ಲವೂ ಒಟ್ಟಾರೆಯಾಗಿ ಪಟಿಯಾಲಾ ಪ್ರವಾಸೋದ್ಯಮಕ್ಕೆ ಒಂದು ಇಂಬನ್ನು ನೀಡಿವೆ. ಪ್ರವಾಸಿಗರು ತಮಗೋಸ್ಕರ ಇಲ್ಲವೆ ತಮ್ಮ ಪ್ರೀತಿಪಾತ್ರರಿಗೆ ಕಾಣಿಕೆಯಾಗಿ ನೀಡಲು ಇವುಗಳನ್ನು ಖರೀದಿಸಬಹುದು. ಇವುಗಳಲ್ಲದೆ ಪ್ರವಾಸಿಗರು ತಂಗಲು ಹಲವು ಮಿತವ್ಯಯದ ಹೋಟೆಲುಗಳಿಂದ ಹಿಡಿದು ತಾರಾ ಹೋಟೆಲ್‍ಗಳೂ ಇವೆ.

ತಲುಪುವ ಬಗೆ

[ಬದಲಾಯಿಸಿ]

ಪ್ರವಾಸಿಗರು ಈ ಸ್ಥಳವನ್ನು ಬಸ್, ಟ್ರೈನ್, ಟ್ಯಾಕ್ಸಿ ಹಾಗು ವಿಮಾನಿನ ಮೂಲಕ ಸುಲಭವಾಗಿ ತಲುಪಬಹುದು. ರೈಲು ಹಾಗು ಬಸ್ಸಿನ ಉತ್ತಮ ಸಂಪರ್ಕ ಜಾಲ ಈ ಪಟ್ಟಣಕ್ಕಿರುವುದರಿಂದ ಪ್ರವಾಸ ಸುಗಮವಾಗಿರುತ್ತದೆ. ಪ್ರಮುಖ ಪಟ್ಟಣಗಳಾದ ದೆಹಲಿ, ಚಂದೀಗಡ್ ಮತ್ತು ಮುಂಬೈಗಳಿಂದ ನಿರಂತರವಾಗಿ ಇಲ್ಲಿಗೆ ರೈಲುಗಳು ಬರುತ್ತಿರುತ್ತವೆ. ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಚಂದೀಗಡ್. ಇದು ಸುಮಾರು 60 ಕಿ.ಮೀ ದೂರದಲ್ಲಿದೆ.

ಭೇಟಿ ನೀಡಲು ಉತ್ತಮ ಕಾಲ

[ಬದಲಾಯಿಸಿ]

ಪಟಿಯಾಲಾ ನಗರವು ಉಷ್ಣವಲಯದ ಹವಾಗುಣವನ್ನು ಹೊಂದಿದ್ದು, ಬೇಸಿಗೆ, ಮಳೆ ಮತ್ತು ಚಳಿಗಾಲದ ಋತುಗಳನ್ನು ಅನುಭವಿಸುತ್ತದೆ. ಈ ನಗರಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯವೆಂದರೆ ಅಕ್ಟೋಬರ್ ಹಾಗು ಮಾರ್ಚ್ ಮಧ್ಯದ ಅವಧಿ. ಈ ಸಂದರ್ಭದಲ್ಲಿ ಪಟ್ಟಣವು ಹಿತ ಹಾಗು ಆಹ್ಲಾದಕರವಾದ ವಾತಾವರಣವನ್ನು ಅನುಭವಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "US Gazetteer files: 2010, 2000, and 1990". United States Census Bureau. 12 February 2011. Retrieved 23 April 2011.
  2. "US Board on Geographic Names". United States Geological Survey. 25 October 2007. Retrieved 31 January 2008.
  3. "Patiala Urban Region". Census 2011. Retrieved 8 April 2016.
  4. "History of Patiala". Official Website of District Patiala. Archived from the original on 7 ಸೆಪ್ಟೆಂಬರ್ 2009. Retrieved 19 August 2011.
  5. "Falling Rain Genomics, Inc – Patiala".


"https://kn.wikipedia.org/w/index.php?title=ಪಟಿಯಾಲಾ&oldid=1060495" ಇಂದ ಪಡೆಯಲ್ಪಟ್ಟಿದೆ