ಪಣಂಬೂರು
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (November 2008) |
ಪಣಂಬೂರು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡಜಿಲ್ಲೆಯ ಮಂಗಳೂರು ತಾಲ್ಲೂಕಿನಲ್ಲಿ ಇದೆ. ಪಣಂಬೂರು ಮಂಗಳೂರಿನಲ್ಲಿ ಒಂದು ಪ್ರವಾಸಿ ತಾಣವಾಗಿ ಪ್ರಸಿದ್ಧವಾಗಿದೆ ಮತ್ತು ಪ್ರಮುಖ ಕೈಗಾರಿಕಾ ಪ್ರದೇಶವಾಗಿದೆ. ಪಣಂಬೂರಿನಲ್ಲಿ ನವ ಮಂಗಳೂರು ಬಂದರು ಎಂಬ ಹೆಸರಿನ ಬಂದರು ಇದೆ.
ಪಣಂಬೂರು | |
---|---|
ಸ್ಥಳೀಯತೆ | |
Coordinates: 12°55′44″N 74°49′19″E / 12.929°N 74.822°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಪ್ರದೇಶ | ತುಳುನಾಡು |
ಜಿಲ್ಲೆ | ದಕ್ಷಿಣ ಕನ್ನಡ |
ನಗರ | ಮಂಗಳೂರು |
Government | |
• Body | ಮಂಗಳೂರು ಮಹಾನಗರ ಪಾಲಿಕೆ |
ಭಾಷೆಗಳು | |
• ಅಧಿಕೃತ | ತುಳು, ಬ್ಯಾರಿ, ಕೊಂಕಣಿ |
Time zone | UTC+5:30 (IST) |
ದೂರವಾಣಿ ಕೋಡ್ | 0824 |
Vehicle registration | ಕೆ ಏ ೧೯ |
ಲೋಕಸಭೆ ಕ್ಷೇತ್ರ | ದಕ್ಷಿಣ ಕನ್ನಡ |
ವಿಧಾನ ಸಭೆ ಕ್ಷೇತ್ರ | ಮಂಗಳೂರು ನಗರ ಉತ್ತರ |
ನಾಗರಿಕ ಸಂಸ್ಥೆ | ಮಂಗಳೂರು ಮಹಾನಗರ ಪಾಲಿಕೆ |
ಪಶ್ಚಿಮ ಕರಾವಳಿಯ ಆಳವಾದ ಒಳ ಬಂದರು ಮತ್ತು ಕರ್ನಾಟಕದ ಏಕೈಕ ಬಂದರುವಾಗಿದೆ. ಪ್ರಸ್ತುತ ಭಾರತದಲ್ಲಿ ಏಳನೇ ದೊಡ್ಡ ಬಂದರು ಇದಾಗಿದೆ. ಇದನ್ನು 'ಕರ್ನಾಟಕದ ಹೆಬ್ಬಾಗಿಲು' ಎಂದು ಕರೆಯಲಾಗುತ್ತದೆ. ನವ ಮಂಗಳೂರು ಬಂದರು ಟ್ರಸ್ಟ್ ಈ ಬಂದರ್ ಅನ್ನು ಕಾರ್ಯನಿರ್ವಹಿಸುತ್ತಾ ಇದೆ. ಪ್ರಮುಖ ಕೈಗಾರಿಕೆಗಳಾದ ಮಂಗಳೂರು ಕೆಮಿಕಲ್ಸ್ & ಫರ್ಟಿಲೈಸರ್ಸ್ ಮತ್ತು KIOCL ಕೂಡ ಪಣಂಬೂರಿನಲ್ಲಿವೆ. ಉತ್ತರದಲ್ಲಿರುವ ಅರೇಬಿಯನ್ ಸಮುದ್ರದೊಂದಿಗೆ ಗುರುಪುರ ನದಿಯ ಸಂಗಮವಾಗುತ್ತದೆ. ಬೈಕಂಪಾಡಿ ಮತ್ತು ಜೋಕಟ್ಟೆ ಜೊತೆಗೆ ಪಣಂಬೂರು ಮಂಗಳೂರಿನ ಕೈಗಾರಿಕಾ ಪ್ರದೇಶಗಳು ಕರ್ನಾಟಕದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದೆ.
ಇತಿಹಾಸ
[ಬದಲಾಯಿಸಿ]ಪಣಂಬೂರು ಎಂಬ ಹೆಸರು ಪಣಮ್ ಎಂಬ ಪದದಿಂದ ಬಂದಿದೆ. ಪಣಮ್ ಇದರ ಅರ್ಥ "ಹಣ" ಮತ್ತು ಊರ್ ಎಂದರೆ "ಸ್ಥಳ" ಅಥವಾ "ಗ್ರಾಮ" ಆಗಿದೆ. ತುಳುವಿನ ಊರ್ ಎಂದರೆ ಕನ್ನಡದ ಊರು
ಸ್ಥಳ
[ಬದಲಾಯಿಸಿ]ಪಣಂಬೂರು ಕಡಲತೀರವು ಮಂಗಳೂರು ನಗರದ ಉತ್ತರಕ್ಕೆ 10 ಕಿಮೀ (6.2 ಮೈಲಿ) ದೂರದಲ್ಲಿದೆ. ಇದು ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯ, ಉತ್ತಮ ಸಂಪರ್ಕ ಮತ್ತು ಹೆಚ್ಚು ಭೇಟಿ ನೀಡುವ ಬೀಚ್ (ಕಡಲತೀರ) ಆಗಿದೆ. ಪಣಂಬೂರು ಕಡಲತೀರವು ಅನೇಕ ತಿನಿಸುಗಳು, ಜೀವರಕ್ಷಕರು, ದೋಣಿ ವಿಹಾರ ಇತ್ಯಾದಿಗಳನ್ನು ಹೊಂದಿದೆ. ಬೀಚ್ ಉತ್ಸವಗಳನ್ನು ಅಪರೂಪಕೊಮ್ಮೆ ಆಯೋಜಿಸಲಾಗುತ್ತದೆ. ಪಣಂಬೂರಿನಲ್ಲಿ ನಂದನೇಶ್ವರ ದೇವಸ್ಥಾನವಿದೆ. ಪಣಂಬೂರ್ ಬಂದರು ಸುರತ್ಕಲ್ ರೈಲ್ವೇ ನಿಲ್ದಾಣದ ಸಮೀಪದಲ್ಲಿದ್ದು, ಇದು ಮುಂಬೈ-ಮಂಗಳೂರು ರೈಲ್ವೆ ಮಾರ್ಗದಲ್ಲಿದೆ. ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್, ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ ಸೇರಿದಂತೆ ಅನೇಕ ಸಣ್ಣ, ಮಧ್ಯಮ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆಗಳು ಪಣಂಬೂರಿನಲ್ಲಿ ಇವೆ.
ನವ ಮಂಗಳೂರು ಬಂದರು ಟ್ರಸ್ಟ್
[ಬದಲಾಯಿಸಿ]ನವ ಮಂಗಳೂರು ಬಂದರು ಪಣಂಬೂರಿನಲ್ಲಿ ಆಳವಾದ ನೀರಿನ, ಎಲ್ಲಾ ಹವಾಮಾನ ಬಂದರು, ಇದು ಪಶ್ಚಿಮ ಕರಾವಳಿಯ ಆಳವಾದ ಒಳ ಬಂದರು ಮತ್ತು ಕರ್ನಾಟಕದ ಏಕೈಕ ಪ್ರಮುಖ ಬಂದರು ಮತ್ತು ಪ್ರಸ್ತುತ ಭಾರತದಲ್ಲಿ ಏಳನೇ ದೊಡ್ಡ ಬಂದರು. ಇದನ್ನು 'ಕರ್ನಾಟಕದ ಹೆಬ್ಬಾಗಿಲು' ಎಂದು ಕರೆಯಲಾಗುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Pages using gadget WikiMiniAtlas
- Articles needing additional references from November 2008
- All articles needing additional references
- Short description is different from Wikidata
- Pages using infobox settlement with bad settlement type
- Coordinates on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು