ವಿಷಯಕ್ಕೆ ಹೋಗು

ಪತ್ರೊಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ರೊಡೆ ಮಾಲ್ವಣಿ/ಮಹಾರಾಷ್ಟ್ರ ಮತ್ತು ಪಶ್ಚಿಮ ಭಾರತಗುಜರಾತಿ ಪಾಕಪದ್ಧತಿಯಲ್ಲಿನ ಒಂದು ಸಸ್ಯಾಹಾರಿ ಖಾದ್ಯ. ಅದನ್ನು ಅಕ್ಕಿ ಹಿಟ್ಟು ಮತ್ತು ಸಂಬಾರ ಪದಾರ್ಥಗಳು, ಹುಣಸೆ, ಹಾಗೂ ಬೆಲ್ಲದಂತಹ ಪರಿಮಳಕಾರಕಗಳಿಂದ ತುಂಬಲಾದ ಕೆಸವಿನ ಎಲೆಗಳಿಂದ ತಯಾರಿಸಲಾಗುತ್ತದೆ. “ಪತ್ರೊಡೆ” “ಪತ್ರ” ಮತ್ತು “ವಡೆ” ಎರಡು ಶಬ್ದಗಳನ್ನು ಒಳಗೊಂಡ ಒಂದು ಮಿಶ್ರ ಶಬ್ದ. "ಪತ್ರ" ಎಂದರೆ ಎಲೆ, ಮತ್ತು “ವಡೆ” ಎಂದರೆ ಒಂದು ಡಂಪ್ಲಿಂಗ್ (ಹೂರಣ ತುಂಬಿದ ಕಣಕದ ಖಾದ್ಯ).

ಇದನ್ನು ಕೆಸವಿನ ಎಲೆಗಳು, ಅಕ್ಕಿ ಹಿಟ್ಟು ಮತ್ತು ಮಸಾಲೆಗಳು, ಹುಣಸೆಹಣ್ಣು ಮತ್ತು ಬೆಲ್ಲ ನಂತಹ ಸುವಾಸನೆಗಳಿಂದ ತುಂಬಿದ ವಸ್ತುಗಳಿಂದ ತಯಾರಿಸಲಾಗುತ್ತದೆ.[][]

ಜುಲೈ 2021 ರಲ್ಲಿ, ಇದನ್ನು ‘ಆಯುಷ್‌ ಮೆಡಿಸಿನ್‌ ಪ್ರಕಾರದ ಸಾಂಪ್ರದಾಯಿಕ ಆಹಾರ ಖಾದ್ಯಗಳಲ್ಲಿ’ ಒಂದಾಗಿ ಕೇಂದ್ರ ಆಯುಷ್ ಸಚಿವಾಲಯ ಗುರುತಿಸಿದೆ.[] ಕೆಸುವಿನ ಎಲೆಗಳಲ್ಲಿ ಕಬ್ಬಿಣ ಸಮೃದ್ಧವಾಗಿದ್ದು, ಹಿಮೋಗ್ಲೋಬಿನ್‌ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಧಿವಾತದಂತಹ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲೆಗಳಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್‌ ಸಿ ಮತ್ತು ಬೀಟಾ ಕ್ಯಾರೋಟಿನ್‌ ಇದೆ ಎಂದು ಸಚಿವಾಲಯ ತಿಳಿಸಿದೆ.[] ಸಚಿವಾಲಯ ಇಂತಹ 26 ಸಾಂಪ್ರದಾಯಿಕ ಖಾದ್ಯಗಳಿಗೆ ಸಾಂಪ್ರದಾಯಿಕ ಆಹಾರ ಖಾದ್ಯ ಸ್ಥಾನವನ್ನು ನೀಡಿದ್ದಾರೆ. ಇದು ಆಯುಷ್ ಇಲಾಖೆಯ ವೆಬ್‌ಸೈಟ್‌ನಲ್ಲೂ ಇ-ನಮೂನೆಯಲ್ಲಿ ಲಭ್ಯವಿದೆ. ಫೋಟೊಗಳು, ವಿವರಣೆ, ಬೇಕಾದ ಪದಾರ್ಥಗಳು, ತಯಾರಿ ವಿಧಾನ, ಆರೋಗ್ಯಕ್ಕೆ ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Karen Anand (1994). The Penguin food lover's guide to India & Nepal. Penguin. p. 45. Retrieved 23 August 2012.
  2. "Patra Recipe". The Times of India. 24 November 2020. Retrieved 9 December 2020.
  3. "Patrode identified as 'traditional food recipe from AYUSH system of medicine". The Hindu. 29 June 2021. Retrieved 2 July 2021.
  4. "ಆಯುಷ್‌ ಸಾಂಪ್ರದಾಯಿಕ ಖಾದ್ಯ ಪಟ್ಟಿಯಲ್ಲಿ ಕರಾವಳಿ, ಮಲೆನಾಡಿನ ಪತ್ರೊಡೆ!". ಕನ್ನಡಪ್ರಭ. 2 July 2021. Retrieved 3 July 2021.
  5. "ಆರೋಗ್ಯಪೂರ್ಣ ಆಹಾರದ ಪಟ್ಟಿಯಲ್ಲಿ ಪತ್ರೊಡೆಗೂ ಸಿಕ್ತು ಸ್ಥಾನ". 2 July 2021. Retrieved 3 July 2021.


"https://kn.wikipedia.org/w/index.php?title=ಪತ್ರೊಡೆ&oldid=1183396" ಇಂದ ಪಡೆಯಲ್ಪಟ್ಟಿದೆ