ವಿಷಯಕ್ಕೆ ಹೋಗು

ಪದವಿನ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದವಿನ್ಯಾಸ(ಸಿನ್ಟ್ಯಾಕ್ಸ್) ಭಾಷಾಶಾಸ್ತ್ರದಲ್ಲಿ (ಲಿಂಗ್ವಿಸ್ಟಿಕ್ಸ್) ಪದವಿನ್ಯಾಸ (ಸಿನ್ಟ್ಯಾಕ್ಸ್) ಎಂದರೆ ನಿರ್ದಿಷ್ಟ ಭಾಷೆಗಳ ವಾಕ್ಯಗಳ ರಚನೆಯ ತತ್ವಗಳು ಮತ್ತು ಪ್ರಕ್ರಿಯೆಗಳ ಒಂದು ಅದ್ಯಯನವಾಗಿದೆ. ಯಾವುದೇ ಒಂದು ಭಾಷೆಯ ವಾಕ್ಯ ರಚನೆಯನ್ನು ನಿಯಂತ್ರಿಸುವ ನಿಯಮ ಮತ್ತು ತತ್ವಗಳನ್ನು ನೇರವಾಗಿ ಹೇಳುವುದಕ್ಕೆ ಪದವಿನ್ಯಾಸವನ್ನು ಬಳಸಲಾಗುತ್ತದೆ. ಉದಾಹರಣೆಗೆ- 'ನವ ಐರಿಶ್ ನ ಪದವಿನ್ಯಾಸ' (ಸಿನ್ಟ್ಯಾಕ್ಸ್ ಆಫ್ ಮಾಡೆರ್ನ್ ಐರಿಶ್). ಪದವಿನ್ಯಾಸದಲ್ಲಿನ ನವೀನ ಶೋಧನೆಯು ಭಾಷೆಗಳನ್ನು ವಿವರಿಸಲು ಈ ರೀತಿಯ ನಿಯಮಗಳ ಮೂಲಕ ಪ್ರಯತ್ನಿ ಸುತ್ತದೆ. ಈ ಒಂದು ಶಿಸ್ತಿನ ಹಲವಾರು ವೃತ್ತಿಪರರು ಎಲ್ಲಾ ನೈಸರ್ಗಿಕ ಭಾಷೆಗಳಿಗು ಹೊಂದುವ ಸಮಾನ್ಯ ನಿಯಮಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ.

ಹಿನ್ನೆಲೆ

[ಬದಲಾಯಿಸಿ]

ನವೀನ ಪದವಿನ್ಯಾಸ ಬರುವ ಬಹಳ ಮುಂಚಿತವಾಗಿ ವ್ಯಾಕರಣದ ಮೆಲೆ ಅನೇಕ ಲೇಖನಗಳು ಬರೆಯಲ್ಪಟ್ಟಿದ್ದವು. ಒಂದು ಹೊಸ ಪದವಿನ್ಯಾಸ ಸಿದ್ದಾಂತದ(syntactical theory) ಜಟಿಲ ವಿಚಾರ ಸರಣಿಯ ನವ ಲೇಖನಕ್ಕಿಂತ ಮುನ್ಚಿತವಾಗಿ ಬರೆಯಲ್ಪಟ್ಟ ಪಾಣಿನಿಅಷ್ಟಾಧ್ಯಾಯೀ (ಸು. ಕ್ರಿ.ಪೂ.೪ನೇ ಶತಮಾನ) ಯನ್ನು ಅಗ್ಗಾಗ್ಗೆ ಉದಾಹರಣೆಯಾಗಿ ಬಳಸಲಾಗಿದೆ. ಪಶ್ಚಿಮದಲ್ಲಿ Dionysius Thrax ನ ಲೇಖನದ ಮೂಲಕ ವ್ಯಾಕರಣ ಸಂಪ್ರದಾಯ ಬೆಳಕಿಗೆ ಬಂತು. ಕೆಲವು ಶತಮಾನದವರೆಗೆ ಪದವಿನ್ಯಾಸದಲ್ಲಿನ ಲೇಖನ Grammaire générale ಎಂಬ ಚೌಕತಟ್ಟಿನಿಂದ ಪ್ರಭಾವಿಸಲ್ಪಟ್ಟಿದ್ದವು, ಇದು Antonio Arnould ನ ಇದೇ ಶೀರ್ಶಿಕೆಯ ಪುಸ್ತಕದಲ್ಲಿ ಮೊದಲಿಗೆ ೧೬೬೦ರಲ್ಲಿ ಮೊದಲಿಗೆ ಮಂಡಿಸಲ್ಪಟ್ಟವು.

ವ್ಯಾಕರಣ (grammar)

[ಬದಲಾಯಿಸಿ]
  • ಈ ಅಧ್ಯಾಯದಲ್ಲಿ ಹೆಳಲೇಬೇಕಾಗಿರುವ ಮೊದಲನೆ ಅಂಶವೆಂದರೆ 'ವ್ಯಾಕರಣ' ಎಂಬ ಶಬ್ದ ಫೊನಾಲಜಿ ಮತ್ತು ಸೆಮಾಟಿಕ್ಸ್ ನದುವಿನ ವ್ಯತ್ಯಾಸಗಲೊಂದಿಗೆ ಇಲ್ಲಿ ಮತ್ತು ಇಲ್ಲಿಂದ ಮುಂದಕ್ಕೆ ಈ ಪುಸ್ತಕದುದ್ದಕ್ಕು ಸಮಂಜಸ ಅರ್ಥದೊಂದಿಗೆ ಬಳಸಲಾಗಿದೆ.(ಟ್ರಡಿಶನಲ್ ಗ್ರಾಮರ್ ಮತ್ತು ಜೆನೆರೇಟಿವ್ ಗ್ರಾಮರ್ ಎಂಬ ಪದ ಸಮುಚ್ಚಯಗಳನ್ನು ಹೊರತು ಪಡಿಸಿ). ಇದರ ಪಾರಂಪರಿಕ ಅರ್ಥ ಗಳಲ್ಲಿ ಇದು ಒಂದು ಮತ್ತು ಇದು 'ಗ್ರಮಾಟಿಕಲ್'ನ ಸಾಮಾನ್ಯ ಅರ್ಥಕ್ಕೆ ಹತ್ತಿರವಾಗುತ್ತದೆ.
  • ಇತ್ತೀಚಿನ ದಿನಗಳಲ್ಲಿ, ಹಲವು ಭಾಷಾತಗ್ನರು 'ಫೊನಾಲಜಿ ಮತ್ತು ಸೆಮಾಂಟಿಕ್ಸ್' ಈ ಎರಡನ್ನು 'ಗ್ರಾಮರ್ ನ ಮಿತಿಯಲ್ಲಿ ಸೇರಿಸಿದ್ದಾರೆ. ಆದರೆ ಇದು ಗೊಂದಲವನ್ನು ಸೃಸ್ಟಿಸುತ್ತದೆ. ಇದುವರೆಗೂ ನಾವು ಭಾಷೆಗಳು ಎರಡು ವಿಧಾನದಲ್ಲಿವೆ ಎಂದು ಕಲ್ಪಿಸಿಕೊಂಡಿದ್ದೆವು-ಭಾಷೆಗಳ 'ಪದ ಶಬ್ದ ' (ಫೊನಲಜಿ) ಮತ್ತು ಪದವಿನ್ಯಾಸ (ಸಿನ್ಟಾಕ್ಸ್) ಆದರೆ ಈ ಕಲ್ಪನೆಯು ಬದಲಾಗಬೇಕು. ಇಲ್ಲವಾದರೆ ನಾವು ಫೊನಲಜಿ ಬಗೆಗಿನ ನಮ್ಮ ಅಭಿಪ್ರಾಯವನ್ನು ವಿಸ್ತ್ರುತಗೊಳಿಸಿಕೊಳ್ಳಬೇಕು ಅಥವಾ ಸಿನ್ಟಾಕ್ಸ್ ನ ಪಾರಂಪರಿಕ ವ್ಯಾಖ್ಯಾನವನ್ನು ಅದನ್ನು ಬಳಸಬೇಕು, ವಿಸ್ತ್ರುತಗೊಳಿಸಿ ಅದನ್ನು ಬಳಸಬೇಕು. ನಾವು ಈ ಮೇಲೆ ತಿಳಿದಂತೆ ನೈಸರ್ಗಿಕ ಭಾಷೆಗಳ ಅವಲಂಬನಾತ್ಮಕತೆಯಿಂದ phonological ಮತ್ತು syntactical ವಿಧಾನಗಳ ನಡುವೆ ವಿಭಜನೆ ಅಸಾದ್ಯವಾಗಿದೆ.
  • ನಾವೀಗ ಸಿನ್ಟಾಕ್ಸ್ ಮತ್ತು ಫೊನಲಜಿಗಳ ಮದ್ಯೆ ಇರುವ ಕನಿಷ್ಟ ಅಂತರಗಳನ್ನು ಕೆಲವು ಭಾಷೆಗಳಲ್ಲಿ ನೊಡಭಹುದು. ಈ ಅಂತರವು ಟ್ರಡಿಶನಲ್ ಗ್ರಾಮರ್ ನಲ್ಲಿ 'inflection' ಎಂಬ ಶಬ್ದದಿಂದ ಮರೆ ಮಾಚಲಾಗಿದೆ. ಯುರೊಪಿಯನ್ ಭಾಷೆಗಳು ಪ್ರಾಚೀನ ಮತ್ತು ಆದುನಿಕ, ಎಲ್ಲ ಉನ್ನತ ನಿಘಂಟುಗಳು, 'syntax ಮತ್ತು inflection' ನಡುವಿನ ವ್ಯತ್ಯಾಸಗಳನ್ನು ಮೊದಲೇ ಗ್ರಹಿಸಿದವು. ನಾವೆಲ್ಲ ಶಾಲೆಯಲ್ಲಿ ಭಾಷೆಯ ಬಗ್ಗೆ ಮಾತಾಡಲು ಕಲಿತ ರೀತಿಯಲ್ಲಿಯೇ ಮಾಡಿದವು.
  • ಆದಾಗ್ಯು syntax ಮತ್ತು inflection' ಎಂಬ ಶಬ್ದಗಳು ನಮಗೆ ಹೊಸದರಂತಿವೆ ಆದರು ಅವರೇನು ಹೆಳುತ್ತಿದ್ದಾರೆಂಬ ಅರಿವು ನಮಗೆಲ್ಲರಿಗು ಇರುತ್ತದೆ. Traditional grammar ನಲ್ಲಿದ್ದ ಪದ್ದತಿಯಂತೆ ಎರಡು ವಿಬಿನ್ನ ಅರ್ಥಗಳ ಮೂಲಕ 'ವರ್ಡ್' ಎಂಬ ಶಬ್ದ ಬಳಸಲು ನಾವು ಹೊಂದಿಕೊಂಡಿದ್ದೇವೆ. ನಾವೀಗ ಮೊದಲಿಗೆ ವರ್ಡ್ ಇಂದ ಶುರು ಮಾಡೋಣ. ಇಂಗ್ಲೀಷ್ ನಲ್ಲಿ ಎಷ್ಟು ಪದಗಳಿವೆ? ಈ ಪ್ರಶ್ನೆ ಅನಿಶ್ಚಿತವಾದುದು.
  • ಒಂದು ಅರ್ಥ ವಿವರಣೆಯಲ್ಲಿ ಹಾಡು, ಹಾಡುವ, ಹಾಡುತ್ತಿರುವ, ಹಾಡಿದ, ಹಾಡಿದ್ದ ಪದಗಳು ವಿಭಿನ್ನವಾಗಿ ಕಾಣುತ್ತವೆ ಆದರೆ ಇನ್ನೊಂದು ಅರ್ಥದಲ್ಲಿ ಇವೆಲ್ಲ 'ಹಾಡು' ಎಂಬ ಮೂಲ ಪದದ ಬೇರೆ ಬೇರೆ ರೂಪಗಳಗಿ ಕಾಣುತ್ತವೆ.ಸಾಮನ್ಯವಾಗಿ ಹೇಳುವುದಾದರೆ ಒಂದು ನಿಗದಿತ ನಿಘಂಟಿನಲ್ಲಿ ಎಷ್ಟು ಪದಗಳಿವೆ ಎಂದು ಕೇಳಲ್ಪಟ್ಟರೆ ನಾವು ಪದ ಎಂಬ ಶಬ್ದ ವನ್ನು ಎರಡನೇ ಅರ್ಥದಲ್ಲಿ ಪರಿಗಣಿಸುತ್ತೇವೆ.
  • ಮತ್ತೊಂದು ಕಡೆ ಒಂದು ವಿಷಯದ ಮೇಲೆ ಎರಡು ಸಾವಿರ ಪದಗಳ ಪ್ರಬಂದ ಬರೆಯಬೇಕೆಂದಾದರೆ ನಾವು ಮೊದಲನೆ ಅರ್ಥದಲ್ಲಿ ಪರಿಗಣಿಸುತ್ತೇವೆ ಮತ್ತು ಹಾಡು, ಹಾಡಿದ, ಹಾಡುತ್ತಿರುವ ಕೊನೆಯಲ್ಲಿ ಬೇರೆ ಬೇರೆಯಾಗಿ ಎಣಿಸಲ್ಪದುತ್ತವೆ. 'ವರ್ಡ್' ನ ಅರ್ಥಗಳನ್ನು ಪ್ರತ್ಯೇಕ ವಾಗಿಡಲು ಅಗತ್ಯವಿರುವಲ್ಲಿ ಬಳಸಬಹುದಾದ ಕೆಲವು ಪದ ಪ್ರಯೊಗಗಳನ್ನು ನಾವಿಲ್ಲಿ ಪರಿಚಯಿಸೊಣ. ಹಾಡು, ಹಾಡುವ, ಹಾಡುತ್ತಿರುವ ಮುಂತಾದುವುಗಳ ಪದ ನಮೂನೆಗಳು (ವರ್ಡ್-ಫಾರ್ಮ್) ಎಂದು ನಾವಿಲ್ಲಿ ಹೇಳಬಹುದಾಗಿದೆ(ಅವುಗಳು ನಮೂನೆಗಳು ಹೌದು ಮತ್ತು ಪದಗಳು ಕೂಡ ಆಗಿವೆ): ನಾವು ಈಗಾಗಲೆ ಹಿಂದಿನ ಭಾಗದಲ್ಲಿ ಪದನಮೂನೆಯನ್ನು ಸಾಂದರ್ಬಿಕವಾಗಿ ಬಳಸಿದ್ದೇವೆ.
  • ಹಾಡು (ಟಿಪ್ಪಣಿ: ಹಾಡು ಎಂದರೆ ಇಲ್ಲಿ ಹಾಡುವುದು ಎಂದಲ್ಲ)ಒಂದು lexeme ಅಥವಾ ಗೊತ್ತಿರುವ ಒಂದು ಪದ ಹಾಡು, ಹಾಡುವ, ಹಾಡುತ್ತಿರುವ ಮುಂತಾದವು ಎಲ್ಲ ಇದರ ಸ್ವರೂಪಗಳು ಎಂದು ಹೇಳಬಹುದಾಗಿದೆ. ಪಾರಂಪರ್ಯವಾಗಿ ಅವೆಲ್ಲವುಗಳನ್ನು ಅದರ ನೈಜ inflectional-form ಎಂದು ವಿವರಿಸಲಾಗಿದೆ. ಆದರೆ 'ಹಾಡು'ವಿನ ನಮೂನೆಗಳಲ್ಲಿ ಹಾಡು ಒಂದು ವಿಶೇಷ ಸ್ತಾನವನ್ನು ಆಕ್ರಮಿಸಿಕೊಳ್ಳುತ್ತದೆ:
  • ಇದು citation form ಮತ್ತು ಹಲವಾರು ಭಾಷಾ ಶಾಸ್ತ್ರಜ್ನರು ಬಳಸುವ base-form ಎರಡನ್ನು ಒಳಗೊಳ್ಳುತ್ತದೆ . ಇದು base-formಇಂದ citation form ಗಳ ನಡುವೆ ವ್ಯತ್ಯಾಸ ಹುಡುಕಲು ಪ್ರಾಮುಕ್ಯತೆ ಕೊಡುವುದರ ಬದಲು ಇದು lexeme ಇಂದ ಇವೆರಡರ ಮದ್ಯೆ ಇರುವ ವ್ಯತ್ಯಾಸಕ್ಕೆ ಪ್ರಾಮುಕ್ಯತೆ ನೀಡಬೆಕು.lexeme ನ citation form ಇನ್ನೊಂದು lexeme ನ್ನು ಒಪ್ಪಿಸಲು ಬಳಸಲಾಗುತ್ತದೆ.