ವಿಷಯಕ್ಕೆ ಹೋಗು

ಪರಶು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಶು (ಸಂಸ್ಕೃತ: Paraśu) ಎಂಬುದು ಯುದ್ಧದಲ್ಲಿ ಉಪಯೋಗಿಸುವ ಕೊಡಲಿಯಾಗಿದೆ. ಪರಶು ಎಂಬುದು ಮೂಲತಃ ಸಂಸ್ಕೃತ ಪದವಾಗಿದೆ. ಇದನ್ನು ಒಂದು ಅಥವಾ ಎರಡೂ ಕೈಗಳಿಂದ ಪ್ರಯೋಗಿಸಬಹುದು.

ನಿರ್ಮಾಣ

[ಬದಲಾಯಿಸಿ]

ಪರಶು ಎರಡು ಬದಿಯಲ್ಲಿ (ಡಬಲ್-ಎಡ್ಜ್) ಬ್ಲೇಡ್ ಆಗಿರಬಹುದು ಅಥವಾ ಏಕ-ಅಂಚಿನ ಬ್ಲೇಡ್ ಆಗಿರಬಹುದು. ಇದು ಸಾಮಾನ್ಯವಾಗಿ ೩ ರಿಂದ ೫ ಅಡಿ (೦.೯೧ ರಿಂದ ೧.೫೨ ಮೀ) ಉದ್ದವಿರುತ್ತದೆ. ಆದರೆ ಕೆಲವು ೭ ಅಡಿ (೨.೧ ಮೀ) ಉದ್ದವಿರುತ್ತವೆ. ಪರಶುವನ್ನು ಸಾಮಾನ್ಯವಾಗಿ ಕಬ್ಬಿಣ ಅಥವಾ ವೂಟ್ಜ್ ಉಕ್ಕಿನಿಂದ ತಯಾರಿಸಲಾಗುತ್ತದೆ. ಕತ್ತರಿಸುವ ಅಂಚು ಅದಕ್ಕೆ ಜೋಡಿಸಲಾದ ಹಿಡಿಕೆಯ ಅಂಚಿಗಿಂತ ಅಗಲವಾಗಿರುತ್ತದೆ. ಉತ್ತಮ ಹಿಡಿತವನ್ನು ಒದಗಿಸಲು ಹಿಡಿಕೆಯನ್ನು ಸಾಮಾನ್ಯವಾಗಿ ಚರ್ಮದ ಹಾಳೆಯಿಂದ ಕಟ್ಟಲಾಗುತ್ತದೆ.

ಹಿಂದೂ ಧರ್ಮ

[ಬದಲಾಯಿಸಿ]

ವಿದ್ಯುದಾಭಿ ಎಂಬ ಹೆಸರಿನ ಪರಶುವು ಶಿವನ ಆಯುಧವಾಗಿತ್ತು. ಶಿವನು ಇದನ್ನು ಪರಶುರಾಮನಿಗೆ ನೀಡಿದರು[]. ಪರಶುರಾಮ ವಿಷ್ಣುವಿನ ಆರನೇ ಅವತಾರ []. ಪರಶುರಾಮ ದ್ರೋಣಾಚಾರ್ಯರ ಗುರು. ಭೀಷ್ಮ ಮತ್ತು ಕರ್ಣನು ಪರಶುರಾಮರ ಶಿಷ್ಯರು. ಕರ್ಣನು ಪರಶುರಾಮನಿಗೆ ಶಿವನು ಕಲಿಸಿದ ಆಯುಧಗಳ ಎಲ್ಲಾ ಜ್ಞಾನವನ್ನು ಪರಶುರಾಮನಿಂದ ಪಡೆದನು. ತನ್ನ ತಂದೆಯನ್ನು ಕ್ಷತ್ರಿಯ ಕಾರ್ತವೀರ್ಯ ಅರ್ಜುನ ಕೊಂದರಿಂದ ಪರಶುರಾಮನು ಕ್ಷತ್ರಿಯರ ಮೇಲೆ ಕೋಪಹೊಂದಿದ್ದನು. ಪರಶುರಾಮನ ಆಯುಧಕ್ಕೆ ಅಲೌಕಿಕ ಶಕ್ತಿ ಇತ್ತು. ಇದು ನಾಲ್ಕು ಕತ್ತರಿಸುವ ಅಂಚುಗಳನ್ನು ಹೊಂದಿತ್ತು.

ಪರಶು ಶಿವ, ಪರಶುರಾಮ ಮತ್ತು ದುರ್ಗೆಯ ಆಯುಧಗಳಲ್ಲಿ ಒಂದಾಗಿದೆ. ಇದನ್ನು ಇಂದಿಗೂ ಭಾರತದಾದ್ಯಂತ ಅನೇಕ ವಿಗ್ರಹಗಳ ಮೇಲೆ ಚಿತ್ರಿಸಲಾಗಿದೆ. ಇದು ಗಣೇಶನ ಆಯುಧಗಳಲ್ಲಿ ಸಹ ಒಂದು ಮತ್ತು ಸಹದೇವ ಮತ್ತು ಶಕುನಿಯ ಪ್ರಮುಖ ಆಯುಧವಾಗಿದೆ.

ದಂತಕಥೆ

[ಬದಲಾಯಿಸಿ]

ಸಂಪ್ರದಾಯದ ಪ್ರಕಾರ, ಪರಶುರಾಮನಿಗೆ ಸಮುದ್ರ ಮತ್ತು ಭೂಮಿಯನ್ನು ಪ್ರತಿನಿಧಿಸುವ ದೇವತೆಗಳಾದ ವರುಣ ಮತ್ತು ಭೂದೇವಿ ಇಬ್ಬರೂ ವರಗಳನ್ನು ಅರ್ಪಿಸಿದರು. ಅವನು ಭಾರತದ ಮುಖ್ಯ ಭೂಭಾಗದ ದಕ್ಷಿಣದ ತುದಿಯಾದ ಕನ್ಯಾಕುಮಾರಿಗೆ ಪ್ರಯಾಣಿಸಿ ತನ್ನ ಪರಶುವನ್ನು ಉತ್ತರದ ಕಡೆಗೆ ಎಸೆದನು, ಸಮುದ್ರದಿಂದ ಒಂದು ಭೂಪ್ರದೇಶವನ್ನು ಬೇರ್ಪಡಿಸಿದನು ನಂತರ ಆ ಪ್ರದೇಶ ಕೇರಳವಾಯಿತು.


ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಪರಶು&oldid=1251238" ಇಂದ ಪಡೆಯಲ್ಪಟ್ಟಿದೆ