ಪಾಡ್ರಿಕ್ ಕಾಲಂ
ಪಾಡ್ರಿಕ್ ಕಾಲಂ | |
---|---|
ಜನನ | Patrick Collumb ೮ ಡಿಸೆಂಬರ್ ೧೮೮೧ Columbkille, County Longford, Ireland |
ಮರಣ | 11 January 1972 Enfield, Connecticut, United States | (aged 90)
ರಾಷ್ಟ್ರೀಯತೆ | Irish |
ಜನಾಂಗೀಯತೆ | Irish |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | University College Dublin |
ಕಾಲ | 1902–58 |
ಪಾಡ್ರಿಕ್ ಕಾಲಂ (8 ಡಿಸೆಂಬರ್ 1881 – 11 ಜನವರಿ 1972) ಐರಿಷ್ ಕವಿ ಮತ್ತು ನಾಟಕಕಾರ.ಐರಿಷ್ ಸಾಹಿತ್ಯ ಪುನರುಜ್ಜೀವನದಲ್ಲಿ ಇವನದು ದೊಡ್ಡ ಹೆಸರು.
ಆರಂಭಿಕ ಜೀವನ
[ಬದಲಾಯಿಸಿ]ಹುಟ್ಟಿದ್ದು ಐರ್ಲೆಂಡಿನ ಲಾಂಗ್‍ಫೋರ್ಡ್‍ನಲ್ಲಿ.ಇವನ ಹೆತ್ತವರ ಎಂಟು ಜನ ಮಕ್ಕಳಲ್ಲಿ ಇವನು ಹಿರಿಯವ[೧] . ಸ್ಥಳೀಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಡಬ್ಲಿನ್‍ಗೆ ಹೋಗಿ ರೈಲ್ವೆ ಕಚೇರಿಯೊಂದರಲ್ಲಿ ಗುಮಾಸ್ತನಾದ.
ಸಾಹಿತ್ಯ ಸೇವೆ
[ಬದಲಾಯಿಸಿ]ಯೇಟ್ಸ್, ಜಾರ್ಜ್ ವಿಲಿಯಂ ರಸೆಲ್, ಸಿಂಜ್ ಮತ್ತು ಲೇಡಿ ಗ್ರೆಗರಿ ಇವರನ್ನೊಳಗೊಂಡ ಐರಿಷ್ ಸಾಹಿತ್ಯ ಪುನರುಜ್ಜೀವನ ಲೇಖಕರ ಗುಂಪಿಗೆ ಸೇರಿದ. ಇವನು ಡಬ್ಲಿನಿನಲ್ಲಿ ಸ್ಥಾಪಿಸಿದ ಅಟ್ಟೆ ಥಿಯೋಡರ್ ಎನ್ನುವ ರಂಗಮಂದಿರವು ಐರ್ಲೆಂಡಿನ ನವೋದಯದಲ್ಲಿ ದೊಡ್ಡ ಪಾತ್ರವನ್ನು ವಹಿಸಿತು. ದಿ ಲ್ಯಾಂಡ್ (1905) ಎಂಬ ನಾಟಕ ಐರಿಷ್ ರಂಗಭೂಮಿಯ ಮೇಲೆ ಬಂದು ಗೌರವ ತಂದಿತು. ದಿ ಫಿಡ್ಲರ್ಸ್ ಹೌಸ್ (1907), ಥಾಮಸ್ ಮಸ್ಕೆರಿ (1910), ದಿ ಡೆಸರ್ಟ್ (1912), ಬಲೂನ್ (1929) ಇವು ಈತನ ಇತರ ನಾಟಕಗಳು. ಜೇಮ್ಸ್ ಸ್ಟೀಫನ್ಸ್ ಮತ್ತು ಥಾಮಸ್ ಮೆಕ್‍ಡೊನಾ ಇವರ ಜೊತೆಗೂಡಿ ಐರಿಷ್ ರಿವ್ಯೂ ಪತ್ರಿಕೆ ಸ್ಥಾಪಿಸಿ ಕೆಲಕಾಲ ಅದರ ಸಂಪಾದಕನಾಗಿಯೂ ಕೆಲಸ ಮಾಡಿದ.
ಅಮೆರಿಕದಲ್ಲಿ
[ಬದಲಾಯಿಸಿ]1914ರಲ್ಲಿ ಅಮೆರಿಕಕ್ಕೆ ತೆರಳಿ ಕನೆಕ್ಟಿಕಟ್‍ನಲ್ಲಿ ನೆಲಸಿದ. 1923ರಲ್ಲಿ ಹವಾಯಿ ಸರ್ಕಾರದ ಆದೇಶದಿಂದ ಅಲ್ಲಿಗೆ ಹೋಗಿ ಆ ಜನರ ಜಾನಪದವನ್ನು ಅಭ್ಯಸಿಸಿ ಎರಡು ಹೊತ್ತಗೆಗಳನ್ನು ಹೊರತಂದ. 1939 ರಿಂದ ನ್ಯೂಯಾರ್ಕಿನಲ್ಲಿ ನೆಲೆಸಿದ. ವೈಲ್ಡ್ ಅರ್ತ್ (1907), ಡ್ರಮ್ಯಾಟಿಕ್ ಲೆಜೆಂಡ್ಸ್ (1922), ದಿ ಸ್ಟೋರಿ ಆಫ್ ಲೋರಿ ಮೇನ್ (1937) ಈತನ ಮುಖ್ಯ ಕಾವ್ಯಕೃತಿಗಳು. ಕ್ಯಾಸಲ್ ಕಾನ್‍ಕರ್ ಎಂಬ ಒಂದು ಕಾದಂಬರಿಯನ್ನಲ್ಲದೆ ಮಕ್ಕಳಿಗಾಗಿ ಅನೇಕ ಗ್ರಂಥಗಳನ್ನು ಈತ ರಚಿಸಿದ್ದಾನೆ. 1952ರಲ್ಲಿ ಅಮೆರಿಕನ್ ಅಕೆಡಮಿ ಆಫ್ ಪೊಯಟ್ಸ್ ಗೌರವವನ್ನೂ 1953ರಲ್ಲಿ ಗ್ರೆಗರಿ ಪದಕವಾದ ಐರಿಷ್ ಅಕಾಡೆಮಿ ಆಫ್ ಲೆಟರ್ಸ್‍ನ ಗ್ರೆಗರಿ ಪದಕವನ್ನೂ ಈತ ಗಳಿಸಿದ.
ಉಲ್ಲೇಖಗಳು
[ಬದಲಾಯಿಸಿ]
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by Padraic Colum at Project Gutenberg
- Works by Padraic Colum at The Online Books Page
- Cregan Library page on Colum Archived 2013-01-07 at Archive.is
- Finding Aid for the Padriac Colum Letters at The University of North Carolina at Greensboro
- "Padraic Colum Papers", Special Collections, University of Delaware Library
- "Padraic and Mary Colum Collection" Archived 2015-06-20 ವೇಬ್ಯಾಕ್ ಮೆಷಿನ್ ನಲ್ಲಿ., Binghamton University Libraries
- Padraic Colum Reading His Irish Tales and Poems Album Details at Smithsonian Folkways
- Archival material relating to ಪಾಡ್ರಿಕ್ ಕಾಲಂ listed at the UK National Archives
- Padraic Colum at Library of Congress Authorities – with 138 catalogue records
- Hervey Allen Papers, 1831–1965, SC.1952.01, Special Collections Department, University of Pittsburgh
- Padraic and Mary Colum Papers, University of Pennsylvania Libraries.