ವಿಷಯಕ್ಕೆ ಹೋಗು

ಪಾತಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಧರ್ಮಗಳಲ್ಲಿ, ಪಾತಾಳ ಬ್ರಹ್ಮಾಂಡದ ನೆಲದಡಿಯ ಪ್ರಾಂತಗಳನ್ನು ಸೂಚಿಸುತ್ತದೆ - ಅಂದರೆ ಭೂಮಿಯ ಕೆಳಗಿರುವ ಪ್ರಾಂತಗಳು.[] ಪಾತಾಳವನ್ನು ಅನೇಕವೇಳೆ ಭೂಗತಲೋಕ ಅಥವಾ ಅಧೋಲೋಕ ಎಂದು ಅನುವಾದಿಸಲಾಗುತ್ತದೆ.

ಹಿಂದೂ ವಿಶ್ವವಿಜ್ಞಾನದಲ್ಲಿ, ಬ್ರಹ್ಮಾಂಡವನ್ನು ಮೂರು ಜಗತ್ತುಗಳಾಗಿ ವಿಭಜಿಸಲಾಗುತ್ತದೆ: ಸ್ವರ್ಗ (ಮೇಲಿನ ಪ್ರದೇಶಗಳು), ಪೃಥ್ವಿ (ಭೂಮಿ) ಮತ್ತು ಪಾತಾಳ. ಪಾತಾಳವು ಏಳು ಪ್ರದೇಶಗಳು ಅಥವಾ ಲೋಕಗಳಿಂದ ಕೂಡಿದೆ, ಅವುಗಳಲ್ಲಿ ಏಳನೆಯ ಮತ್ತು ಅತ್ಯಂತ ಕೆಳಗಿನದನ್ನು ಪಾತಾಳ ಅಥವಾ ನಾಗಲೋಕ ಎಂದು ಕರೆಯಲಾಗುತ್ತದೆ. ದಾನವರು, ದೈತ್ಯರು, ಯಕ್ಷರು ಮತ್ತು ನಾಗರು ಪಾತಾಳ ಪ್ರದೇಶಗಳಲ್ಲಿ ಇರುತ್ತಾರೆ.

ಒಂದು ಖಗೋಳಶಾಸ್ತ್ರೀಯ ಪಠ್ಯವಾದ ಸೂರ್ಯ ಸಿದ್ಧಾಂತವು, ದಕ್ಷಿಣ ಗೋಲಾರ್ಧವನ್ನು ಪಾತಾಳವೆಂದು ಮತ್ತು ಉತ್ತರ ಗೋಲಾರ್ಧವನ್ನು ಜಂಬೂದ್ವೀಪವೆಂದು ಸೂಚಿಸುತ್ತದೆ.

ವಿಷ್ಣು ಪುರಾಣವು ದೈವಿಕ ಅಲೆದಾಡುವ ಋಷಿ ನಾರದರ ಪಾತಾಳ ಭೇಟಿಯ ಬಗ್ಗೆ ಹೇಳುತ್ತದೆ. ನಾರದರು ಪಾತಾಳವನ್ನು ಸ್ವರ್ಗಕ್ಕಿಂತ ಸುಂದರವೆಂದು ವರ್ಣಿಸುತ್ತಾರೆ. ಅದ್ಭುತ ಆಭರಣಗಳು, ಸುಂದರ ತೋಪುಗಳು ಮತ್ತು ಸರೋವರಗಳು ಮತ್ತು ಸುಂದರ ಅಸುರ ಕನ್ಯೆಯರಿಂದ ತುಂಬಿದ್ದು ಎಂದು ಪಾತಾಳವನ್ನು ವರ್ಣಿಸಲಾಗಿದೆ. ಗಾಳಿಯಲ್ಲಿ ಮಧುರ ಪರಿಮಳವಿದೆ ಮತ್ತು ಮಧುರ ಸಂಗೀತ ಸೇರಿಕೊಂಡಿದೆ. ಇಲ್ಲಿನ ಮಣ್ಣು ಬಿಳಿ, ಕಪ್ಪು, ಕೆನ್ನೀಲಿ, ಮರಳಿನಂತೆ, ಹಳದಿ, ಕಲ್ಲಿನಿಂದ ಕೂಡಿದೆ ಮತ್ತು ಚಿನ್ನವನ್ನು ಹೊಂದಿದೆ.

ಭಾಗವತ ಪುರಾಣವು ಏಳು ಕೆಳಗಿನ ಲೋಕಗಳನ್ನು ಭೂಮಿಯ ಕೆಳಗಿನ ಗ್ರಹಗಳು ಅಥವಾ ಗ್ರಹಗಳ ವ್ಯವಸ್ಥೆಗಳೆಂದು ಪರಿಗಣಿಸುತ್ತದೆ. ಈ ಲೋಕಗಳು ಸ್ವರ್ಗವನ್ನು ಒಳಗೊಂಡ ಬ್ರಹ್ಮಾಂಡದ ಮೇಲಿನ ಲೋಕಗಳಿಗಿಂತ ಭವ್ಯವಾಗಿವೆ ಎಂದು ವರ್ಣಿಸಲಾಗಿದೆ. ಇಲ್ಲಿನ ಜೀವನ ಆಹ್ಲಾದಕರ, ಸಂಪತ್ತು ಮತ್ತು ಐಷಾರಾಮದಿಂದ ಕೂಡಿದ್ದು, ಮತ್ತು ಯಾತನಾರಹಿತವಾಗಿದೆ. ಅಸುರರ ವಾಸ್ತುಶಿಲ್ಪಿ ಮಯನು ವಿದೇಶಿಯರಿಗಾಗಿ ಆಭರಣಯುಕ್ತ ಅರಮನೆಗಳು, ದೇಗುಲಗಳು, ಮನೆಗಳು, ಅಂಗಳಗಳು, ಮತ್ತು ವಸತಿಗೃಹಗಳನ್ನು ನಿರ್ಮಿಸಿದ್ದಾನೆ. ಕೆಳಗಿನ ಲೋಕಗಳಲ್ಲಿ ಸೂರ್ಯನ ಬೆಳಕಿಲ್ಲ, ಆದರೆ ಪಾತಾಳದ ನಿವಾಸಿಗಳು ಧರಿಸುವ ಆಭರಣಗಳ ಹೊಳಪಿನಿಂದ ಕತ್ತಲು ಕಣ್ಮರೆಯಾಗುತ್ತದೆ. ಪಾತಾಳದಲ್ಲಿ ವೃದ್ಧಾಪ್ಯ, ಬೆವರು, ರೋಗಗಳಿಲ್ಲ.

ಭಾಗವತ ಪುರಾಣದಲ್ಲಿ ವಿವರಿಸಲಾದ ಕೆಳಗಿನ ಏಳು ಲೋಕಗಳೆಂದರೆ: ಅತಳ, ವಿತಳ, ಸುತಳ, ತಲಾತಳ, ಮಹಾತಳ, ರಸಾತಳ, ಮತ್ತು ಪಾತಾಳ.

ಉಲ್ಲೇಖಗಳು

[ಬದಲಾಯಿಸಿ]
  1. Wilson, Horace Hayman (1865). "Chapter V". The Vishnu Purana (Translation). Vol. II. London: Trubner & co. pp. 209–213.


"https://kn.wikipedia.org/w/index.php?title=ಪಾತಾಳ&oldid=858132" ಇಂದ ಪಡೆಯಲ್ಪಟ್ಟಿದೆ