ವಿಷಯಕ್ಕೆ ಹೋಗು

ಪಾರ್ಶ್ವನಾಥ ಸ್ವಾಮಿ ಬಸಿದಿ, ಪಾದೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾರ್ಶ್ವನಾಥ ಸ್ವಾಮಿ ಬಸದಿಯು ಕರ್ನಾಟಕ ರಾಜ್ಯದಲ್ಲಿನ ಜೈನ ಬಸದಿಗಳಲ್ಲೊಂದು.

ಸ್ಥಳ[ಬದಲಾಯಿಸಿ]

ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಮೂಲ ಉಡುಪಿ ತಾಲೂಕು ಹೊಸಬೆಟ್ಟು ಗ್ರಾಮದ ಪಾದೂರಿನಲ್ಲಿದೆ. ಇದರ ಹತ್ತಿರ ಇತ್ತೀಚೆಗೆ ಕೇಂದ್ರ ಸರಕಾರದ ಯೋಜನೆಯಾಗಿರುವ ಭೂಗತ ಕಚ್ಚಾತೈಲ ಸಂಗ್ರಹಣಗಾರದ[೧][೨] ಕಾಮಗಾರಿ ಪ್ರಗತಿಯಲ್ಲಿದೆ. ಈ ಬಸದಿಯ ಪ್ರಾಕಾರಕ್ಕೆ ತಾಗಿಕೊಂಡು ಶ್ರೀ ಅನಂತನಾಥ ಸ್ವಾಮಿ ಬಸದಿ ಹೊಸಬೆಟ್ಟು,[೩][೪] ಮತ್ತು ಶ್ರೀ ಧರ್ಮನಾಥ ಸ್ವಾಮಿ ಬಸದಿ ಕಾಪು ೬ ಕಿ.ಮೀ ದೂರದಲ್ಲಿದೆ.

ಮಾರ್ಗ[ಬದಲಾಯಿಸಿ]

ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಗೆ ಮೂಡುಬಿದಿರೆ,ಕಾರ್ಕಳ,ಬೆಳ್ಳಣ್,ಶಿರ್ವ,ಮಂಚಕಲ್,ಶಾಂತಿಗುಡ್ಡ ,ಪಾದೂರು ಹೊಸಬೆಟ್ಟು ಮಾರ್ಗವಾಗಿ ಬರಬಹುದಾಗಿದೆ. ಇನ್ನೊಂದು ಮಂಗಳೂರು ಮತ್ತು ಉಡುಪಿಯಿಂದ ಕಾಮ,ಚಂದ್ರನಗರ,ಶಾಂತಿಗುಡ್ಡ,ಪಾದೂರು ಹೊಸಬೆಟ್ಟು ಮಾರ್ಗವಾಯೂ ಬರಬಹುದಾಗಿದೆ.[೫]

ಇತಿಹಾಸ[ಬದಲಾಯಿಸಿ]

ಬಸದಿಯು ಶ್ರೀ ಜೈನ ಮಠ ಮೂಡುಬಿದಿರೆ ಇಲ್ಲಿಯ ಸಂಸ್ಥಾನಕ್ಕೆ ಒಳಪಟ್ಟಿದೆ, ಬಸದಿಗೆ ಇರುವ ಕುಟುಂಬ ಕುತ್ಯಾರು ಅರಮನೆಗೆ ಸಂಬಂಧಿಸಿದ ಕುಟುಂಬ ಹಾಗೂ ಬಸದಿಯ ಅರ್ಚಕರ ಕುಟುಂಬವಾಗಿದೆ. ಕುತ್ಯಾರು ಅರಮನೆಯು ಬಸದಿಗೆ ಸುಮಾರು ೬ ಕಿ.ಮೀ. ದೂರದಲ್ಲಿದೆ. ಈ ಬಸದಿಯನ್ನು ಊರಿನ ಪ್ರಮುಖರು ಕಟ್ಟಿಸಿದರೆಂದೂ ಹೇಳಲಾಗಿದೆ, ಕಾಲಾನಂತರದಲ್ಲಿ ಊರಿನಲ್ಲಿ ಜೈನರ ಸಂಖ್ಯೆ ಇಲ್ಲವಾಗಿ, ಅರ್ಚಕರ ಮನೆಯೊಂದೇ ಉಳಿವ ಸರಳ ಕುತ್ಯಾರು ಅರಮನೆಯ ವ್ಯಾಪ್ತಿಗೆ ಸೇರಿದೆ. ಈ ಬಸದಿಯು ಸುಮಾರು ೫೦೦ ರಿಂದ ೫೦೦ ವರ್ಷಗಳ ಪೂರ್ವದಲ್ಲಿ ನಿರ್ಮಾಣಗೊಂಡಿದೆ ಮತ್ತು ಈ ಬಸದಿ ೧೯೯೯ರಲ್ಲಿ ಜೀರ್ಣೋದ್ದಾರಗೊಂಡಿದೆ.

ಒಳಾಂಗಣ ಶಿಲಾನ್ಯಾಸ[ಬದಲಾಯಿಸಿ]

ಬಸದಿಯ ಒಳಾಂಗಣದಲ್ಲಿ ಮೂಲ ತೀರ್ಥಂಕರರು ಅಲ್ಲದೆ ಪ್ರಮುಖ ಯಕ್ಷಿಯಾಗಿ ಶ್ರೀ ಜ್ವಾಲಾಮಾಲಿನಿ ದೇವಿ, ಬ್ರಹ್ಮಯಕ್ಷಿಯ ಬಿಂಬಗಳಿವೆ ಮತ್ತು ಪಂಚಪರಮೇಷ್ಠಿಗಳು ಹಾಗೂ ಇತರ ತೀರ್ಥಂಕರರ ಬಿಂಬಗಳಿವೆ, ಹಾಗು ದ್ವಾರಪಾಲಕರನ್ನು ಬಣ್ಣದಲ್ಲಿ ರಚಿಸಿದ ಚಿತ್ರಗಳಿವೆ. ಬಸದಿಯ ಜೀರ್ಣೋದ್ದಾರದ ಮೊದಲು ನಾಲ್ಕು ಮರದ ಕಂಬಗಳಿರುವ ಮಂಟಪವಿತ್ತು, ಬಸದಿಯ ಜೀರ್ಣೋದ್ದಾರದ ನಂತರ ಕಂಬಗಳಿಲ್ಲದ ಮಂಟಪವಿದ್ದು, ಜಯಘಂಟೆಯನ್ನು ನೇತುಹಾಕಿ ಪರಿವರ್ತನೆಯನ್ನು ಮಾಡಲಾಗಿದೆ. ಈ ಬಸದಿಯು ಸಣ್ಣ ಬಸದಿಯಾಗಿರುವುದರಿಂದ ಎರಡೆ ಮಂಟಪಗಳಿವೆ. ಒಂದು ಮಂಟಪ ಗರ್ಭಗುಡಿಯಲ್ಲಿದೆ, ಇನ್ನೊಂದು ಮಂಟಪ ಅದು ಗಂಧಕುಟಿಯು ನಮಸ್ಕಾರ ಮಂಟಪದಲ್ಲಿದೆ. ಆ ಬಸದಿಯಲ್ಲಿ ಬ್ರಹ್ಮದೇವರ ಮೂರ್ತಿ ಹಾಗೂ ಪಂಚಪರಮೇಷ್ಟಿಗಳ ವಿಗ್ರಹಗಳಿದ್ದು ಆ ವಿಗ್ರಹಗಳಿಗೆ ಪೂಜೆ ನಡೆಯುತ್ತಿದೆ. ಪ್ರಮುಖ ಯಕ್ಷಿಯಾಗಿ ಶ್ರೀ ಸ್ವಾಲಾಮಾಲಿನಿ ದೇವಿಯ ವಿಗ್ರಹವಿದೆ. ಆ ವಿಗ್ರಹಗಳಿಗೆ ವಿಶೇಷ ಅಲಂಕಾರ ಪೂಜೆಯನ್ನು ಮಾಡಲಾಗುತ್ತದೆ. ಬಸದಿಯ ಸುತ್ತಲೂ ಕೆಂಪುಕಲ್ಲಿನಿಂದ ನಿರ್ಮಿತವಾದ ಪ್ರಾಕಾರವಿದೆ.

ಪೂಜಾ ವಿಧಾನ[ಬದಲಾಯಿಸಿ]

ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಉತ್ಸವ ಜರಗುತ್ತದೆ. ಪ್ರತಿದಿನ ಜಲಾಭಿಷೇಕ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ ಹಾಗೂ ಗಂಧಾಭಿಷೇಕ ನಡೆಯುತ್ತದೆ. ಇಷ್ಟಾ ಸಿದ್ದಿಗಾಗಿ ಭಕ್ತರು ಹರಕೆಯನ್ನು ಹೊತ್ತು, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ,ಬಸದಿಯಲ್ಲಿ ಆಚರಿಸುವ ವಿಶೇಷ ಹಬ್ಬಗಳು ನಾಗರ ಪಂಚಮಿ, ನುಲುಹುಣ್ಣಿಮೆ, ಕದಿರು ಕಟ್ಟುವುದು, ನವರಾತ್ರಿ ಹಬ್ಬ, ದೀಪಾವಳಿ ಹಾಗೂ ಯುಗಾದಿ. ಬಸದಿ ಉತ್ತರಾಭಿಮುಖವಾಗಿದ್ದು, ಎಡ ಪಾರ್ಶ್ವದಲ್ಲಿ ಶ್ರೀ ಕ್ಷೇತ್ರಪಾಲ ಹಾಗೂ ನಾಗದೇವರ ಸಾನ್ನಿಧ್ಯಗಳಿವೆ. ದಶದಿಕಾಲಕರ ಕಲ್ಲುಗಳಿವೆ. ಇವುಗಳಿಗೆ ಪೂಜೆ ಸಲ್ಲಿಸುತ್ತಾರೆ.[೬]

ಉಲ್ಲೇಖಗಳು[ಬದಲಾಯಿಸಿ]

  1. https://www.business-standard.com/industry/news/india-to-build-first-commercial-crude-oil-storage-to-shore-up-stockpiles-124040300724_1.html
  2. https://kannada.goodreturns.in/news/indias-first-commercial-crude-oil-strategic-storage-to-come-up-in-karnataka-padur-022385.html
  3. https://kn.wikipedia.org/s/2h0i
  4. https://www.tripadvisor.in/Attraction_Review-g737164-d4138637-Reviews-Anantha_Padmanabha_Temple-Udupi_Udupi_District_Karnataka.html
  5. https://www.google.com/maps/dir/13.7117117,74.649996/Padur+Shri+Ananthanatha+Swamy+Digambar+Jain+Temple,+Karnataka+574106/@13.4645499,74.423831,10z/data=!3m1!4b1!4m10!4m9!1m1!4e1!1m5!1m1!1s0x3bbcaf4760526253:0xea163fc4830ab402!2m2!1d74.7975654!2d13.2218995!3e0?entry=ttu
  6. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್‌. p. ೩೩೫-೩೩೬.