ವಿಷಯಕ್ಕೆ ಹೋಗು

ಪಾರ್ಶ್ವವಾಯು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪಾರ್ಶ್ವವಾಯು ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಬವಿಸುವ ದೈಹಿಕ ತೊಂದರೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಅಂಗಾಂಗಗಳ ಸ್ವಾಧೀನ ತಪ್ಪುವಿಕೆ. ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು ಅಥವಾ ಪೂರ್ತಿ ಇಲ್ಲದ೦ತಾಗುವುದು. ಈ ಲಕ್ಷಣಗಳು ಮೆದುಳಿನ ಹಾನಿಯಾದ ಭಾಗ ಮತ್ತು ಪ್ರಮಾಣದ ಮೇಲೆ ಅವಲ೦ಬಿತವಾಗಿರುತ್ತವಾದ್ದರಿಂದ ಎಲ್ಲಾ ಪೀಡಿತರಲ್ಲಿ ಒಂದೇ ಬಗೆಯ ಲಕ್ಷಣಗಳು ಕಂಡು ಬರುವುದಿಲ್ಲ.

ಆನಿಯಂತ್ರಿತವಾದ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಗಳು ಪಾರ್ಶ್ವವಾಯು ಉಂಟಾಗಲು ಪ್ರಮುಖ ಕಾರಣ ಎನ್ನಲಾಗಿದೆ. ತಲೆಗೆ ಬಿದ್ದ ಪೆಟ್ಟಿನಿಂದಲೂ ಇದು ಬರುವ ಸಾಧ್ಯತೆ ಇದೆ.

ಮೆದುಳಿನ ಜೀವಕೋಶಗಳಿಗೆ 2 ರೀತಿಯಲ್ಲಿ ಹಾನಿಯುಂಟಾಗುವ ಸಂಭವವಿದೆ. ಒಂದು ಮೆದುಳಿಗೆ ರಕ್ತ ಪೂರೈಸುವ ನಾಳಗಳು ಕಟ್ಟಿಕೊಂಡು ರಕ್ತ ಸಂಚಾರ ಸ್ಥಗಿತಗೊಳ್ಳುವುದರಿಂದ ಮತ್ತೊಂದು ಮೆದುಳಿನ ರಕ್ತನಾಳಗಳು ಒಡೆದು ರಕ್ತ ಸೋರುವಿಕೆಯಾಗುವುದರಿಂದ. ಸಾಮಾನ್ಯವಾಗಿ ಮೆದುಳಿನ CT ಸ್ಕ್ಯಾನಿಂಗ ಮಾಡುವುದರಿಂದ ಅಲ್ಲಿ ಉಂಟಾಗಿರುವ ಹಾನಿಯ ರೀತಿ ಮತ್ತು ಪ್ರಮಾಣವನ್ನು ಕಂಡು ಹಿಡಿದು ಮುಂದಿನ ಉಪಚಾರವನ್ನು ನಿರ್ಧರಿಸಲಾಗುತ್ತದೆ.

ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ ಸಮಯದಿಂದ 4 ರಿಂದ 6 ಗಂಟೆಯ ಸಮಯದೊಳಗೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಸಂಪೂರ್ಣ ಗುಣಹೊಂದುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾರ್ಶ್ವವಾಯು ಪೀಡಿತರನ್ನು ಆದಷ್ಟು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸುವುದು ಬಹು ಮುಖ್ಯವಾದದ್ದು.

ಮೆದುಳಿನ ಜೀವಕೋಶಗಳಿಗುಂಟಾಗುವ ಹಾನಿ ಶಾಶ್ವತ ರೀತಿಯದ್ದಾಗಿರುವುದರಿಂದ ಸತ್ತ ಜೀವಕೋಶಗಳು ನಿರ್ವಹಿಸುತ್ತಿದ್ದ ಮೆದುಳಿನ ಕಾರ್ಯ ಕುಂಠಿತಗೊಳ್ಳುತ್ತದೆ ಅಥವಾ ಸ್ಥಗಿತ ಗೊಳ್ಳುತ್ತದೆ.