ಪಿಸ್ತಾ
ಗೋಚರ

ಗೋಡಂಬಿ ಕುಟುಂಬದ ಒಂದು ಸದಸ್ಯವಾದ ಪಿಸ್ತಾ ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಿಂದ ಹುಟ್ಟಿಕೊಂಡ ಒಂದು ಸಣ್ಣ ಮರ. ಮರವು ಆಹಾರವಾಗಿ ವ್ಯಾಪಕವಾಗಿ ಸೇವಿಸಲಾಗುವ ಬೀಜಗಳನ್ನು ಉತ್ಪಾದಿಸುತ್ತದೆ. ತಿರುಳುಗಳನ್ನು ಹಲವುವೇಳೆ, ತಾಜಾ ಅಥವಾ ಹುರಿದು ಉಪ್ಪು ಸೇರಿಸಿ, ಇಡಿಯಾಗಿ ತಿನ್ನಲಾಗುತ್ತದೆ, ಮತ್ತು ಪಿಸ್ತಾ ಐಸ್ ಕ್ರೀಂ, ಕುಲ್ಫಿ, ಸ್ಪುಮೋನಿ, ಪಿಸ್ತಾ ಬಟರ್, ಪಿಸ್ತಾ ಪೇಸ್ಟ್ ಮುಂತಾದವುಗಳಲ್ಲಿ ಬಳಸಲಾಗುತ್ತದೆ.