ವಿಷಯಕ್ಕೆ ಹೋಗು

ಪುಲಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಲಹ (ಸಂಸ್ಕೃತ: पुलह, ರೋಮನೈಸ್ಡ್: ಪುಲಹಾ) ಹಿಂದೂ ಪುರಾಣಗಳಲ್ಲಿ ಬರುವ ಒಂದು ಪಾತ್ರ.[] ಪುಲಹ ಅವರು ಸೃಷ್ಟಿಕರ್ತ ದೇವರಾದ ಬ್ರಹ್ಮನ ಮಗ. ಇವರು ಸಪ್ತರ್ಷಿಗಳಲ್ಲಿ (ಏಳು ಮಹಾನ್ ಋಷಿಗಳಲ್ಲಿ (ಮರೀಚಿ, ಅತ್ರಿ, ಅಂಗಿರಸ, ಕ್ರತು, ಪುಲಸ್ತ್ಯ ಮತ್ತು ವಸಿಷ್ಠರು.)) ಒಬ್ಬರು.[] ಇನ್ನೊಂದು ವರ್ಗೀಕರಣದಲ್ಲಿ ಪುಲಹ ಹತ್ತು ಪ್ರಜಾಪತಿಗಳಲ್ಲಿ ಒಬ್ಬರು. ಬ್ರಹ್ಮನಿಂದ ಸೃಷ್ಟಿಯಾದ ಸೃಷ್ಟಿಯ ಮೂಲಪುರುಷ. ಮಹಾಭಾರತದ ಪ್ರಕಾರ ಕಿಂಪುರುಷರ ಜನಾಂಗವು ಪುಲಹನ ಮಕ್ಕಳು.

ದಂತಕಥೆ

[ಬದಲಾಯಿಸಿ]

ಮೊದಲ ಮನ್ವಂತರದಲ್ಲಿ ಪುಲಹನು ದಕ್ಷನ ಮಗಳು ಕ್ಷಮಾಳನ್ನು ವಿವಾಹವಾದನು. ಅವರಿಗೆ ಕರ್ದಮ, ಕನಕಪೀಠ ಮತ್ತು ಉರ್ವರಿವತ್ ಎಂಬ ಮೂವರು ಪುತ್ರರು ಮತ್ತು ಪೀವರಿ ಎಂಬ ಮಗಳು ಇದ್ದರು. ಭಾಗವತ ಪುರಾಣದ ಪ್ರಕಾರ, ಪುಲಹ ಋಷಿ ಕೂಡ ಕರ್ದಮ ಮತ್ತು ದೇವಹೂತಿಯ ಮಗಳಾದ ಗತಿಯನ್ನು ವಿವಾಹವಾದರು. ಇಬ್ಬರಿಗೆ ಮೂವರು ಗಂಡು ಮಕ್ಕಳಿದ್ದರು - ಕರ್ಮಶ್ರೇಷ್ಠ, ವರೀಯಾಂಶು ಮತ್ತು ಸಹಿಷ್ಣು. ಪುಲಹನು ಬ್ರಹ್ಮನ ತಲೆಯಿಂದ ಹೊರಹೊಮ್ಮಿದ ಐದನೇ ಮಗ ಎಂದು ಹೇಳಲಾಗುತ್ತದೆ. ಬ್ರಹ್ಮದೇವರ ಮಾನಸ ಪುತ್ರ. ಬ್ರಹ್ಮನು ಸಪ್ತಋಷಿಗಳನ್ನು (ಏಳು ಋಷಿಗಳು) ಮತ್ತು ಹತ್ತು ಪ್ರಜಾಪತಿಗಳನ್ನು ಸೃಷ್ಟಿಸಿದರು (ಕೆಲವು ಕಡೆ ೨೧ ಎಂದು ಹೇಳಲಾಗುತ್ತದೆ). ಅವರಿಂದಲೇ ಎಲ್ಲಾ ಮಾನವರು ಜನಿಸಿದರು ಎಂದು ಹೇಳುತ್ತಾರೆ. ಪುಲಹನು ಸನಂದನ ಋಷಿಯಿಂದ ಜ್ಞಾನದ ಶಕ್ತಿಯನ್ನು ಕಲಿತರು ಮತ್ತು ಪ್ರತಿಯಾಗಿ ಎಲ್ಲಾ ಜ್ಞಾನವನ್ನು ಗೌತಮ ಋಷಿಗೆ ರವಾನಿಸಿದನು. ಅವರು ಅಲಕನಂದಾ ನದಿಯ ದಡದಲ್ಲಿ ಘೋರವಾದ ತಪಸ್ಸು ಮಾಡಿ ಇಂದ್ರನ ಆಸ್ಥಾನದಲ್ಲಿ ಇರುವ ವರವನ್ನು ಪಡೆದರು. ರಾಜ ಭರತನು ತನ್ನ ರಾಜ್ಯವನ್ನೆಲ್ಲ ತ್ಯಜಿಸಿ ಪುಲಹನ ಆಶ್ರಮದಲ್ಲಿ ಆಶ್ರಯ ಪಡೆದರು.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಪುಲಹ&oldid=1251316" ಇಂದ ಪಡೆಯಲ್ಪಟ್ಟಿದೆ