ವಿಷಯಕ್ಕೆ ಹೋಗು

ಪೇಠಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Petha
ಮೂಲ
ಪರ್ಯಾಯ ಹೆಸರು(ಗಳು)ಪೇಠಿ
ಮೂಲ ಸ್ಥಳಅಲ್ವರ್, ಭಾರತ
ಪ್ರಾಂತ್ಯ ಅಥವಾ ರಾಜ್ಯಉತ್ತರ ಭಾರತ
ವಿವರಗಳು
ಸೇವನಾ ಸಮಯಡಿಜ಼ರ್ಟ್
ಮುಖ್ಯ ಘಟಕಾಂಶ(ಗಳು)ಬೂದುಗುಂಬಳ ತರಕಾರಿ, ಸಕ್ಕರೆ
ಪ್ರಭೇದಗಳುಕೇಸರ್ ಪೇಠಾ, ಅಂಗೂರಿ ಪೇಠಾ, ಒಣ ಪೇಠಾ, ಲಾಲ್ ಪೇಠಾ, ಚಾಕಲೇಟ್ ಪೇಠಾ, ಸ್ಲೈಸ್ ಪೇಠಾ, ಪಾನ್ ಪೇಠಾ, ಗುಲಾಬ್ ಪೇಠಾ
ಪೋಷಕಾಂಶಗಳುಕೆ.ಜಿ.ಗೆ 600 ಕ್ಯಾಲೊರಿ

ಪೇಠಾ ಉತ್ತರ ಭಾರತದ ಒಂದು ಅರೆಪಾರದರ್ಶಕ, ಮೃದು ಸಿಹಿ ಮಿಠಾಯಿ. ಸಾಮಾನ್ಯವಾಗಿ ಆಯಾತಾಕಾರ ಅಥವಾ ಸುರುಳೆಯಾಕಾರದ್ದಾಗಿರುವ ಇದನ್ನು ಬೂದುಗುಂಬಳಕಾಯಿಯಿಂದ ತಯಾರಿಸಲಾಗುತ್ತದೆ.[]

ಹೆಚ್ಚುತ್ತಿರುವ ಬೇಡಿಕೆ ಮತ್ತು ನಾವೀನ್ಯದೊಂದಿಗೆ, ಮೂಲ ಖಾದ್ಯದ ಹೆಚ್ಚು ವೈವಿಧ್ಯಗಳು ಲಭ್ಯವಿವೆ. ಅನೇಕ ಸ್ವಾದಯುಕ್ತ ರೂಪಗಳು ಲಭ್ಯವಿವೆ, ಉದಾ. ಕೇಸರ್ ಪೇಠಾ, ಅಂಗೂರಿ ಪೇಠಾ ಇತ್ಯಾದಿ. ಘಟಕಾಂಶಗಳನ್ನು ಆಧರಿಸಿ ಕೆಲವು ಇತರ ರೂಪಗಳಿವೆ, ಒಂದು ಕೊಬ್ಬರಿ ಬೆರೆಸಿದ್ದು, ಮತ್ತೊಂದು ಕೆಲವು ಒಣಹಣ್ಣುಗಳು, ಬಾದಾಮಿ, ಗೋಡಂಬಿ ಇತ್ಯಾದಿ ಹಾಕಿದ್ದು. ಕೆಲವೊಮ್ಮೆ ಪೇಠಾಕ್ಕೆ ಪರಿಮಳ ನೀಡಲು ಕೇವಡಾ ಪರಿಮಳವನ್ನು ಬಳಸಲಾಗುತ್ತದೆ.[]

ಇತಿಹಾಸ

[ಬದಲಾಯಿಸಿ]

ಪೇಠಾ ಮುಘಲ್ ಸಾಮ್ರಾಟ ಶಾಹ್ ಜಹಾನ್‍ನ ಅಡಿಗೆಮನೆಗಳಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ.[]

ಆಗ್ರಾದಲ್ಲಿ ತಯಾರಾದ ಪೇಠಾಕ್ಕೆ ಜಿಐ ಪಟ್ಟಿ ದೊರಕಿದೆ. ಇದರಿಂದ ಅದರ ಮೂಲವು ದೃಢೀಕರಣಗೊಳ್ಳುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. T. R. Gopalakrishnan Vegetable Crops, p. 138, at Google Books
  2. Ammas cooking Archived 2013-05-26 ವೇಬ್ಯಾಕ್ ಮೆಷಿನ್ ನಲ್ಲಿ.
  3. Daftuar, Swati (9 June 2012). "Food Safari: in search of Agra Petha". ದಿ ಹಿಂದೂ. Retrieved Jun 30, 2015.
  4. Mishra, Ishita (31 August 2014). "Petha industry not harming Taj: Kalraj". ಟೈಮ್ಸ್ ಆಫ್ ಇಂಡಿಯ. Agra. Retrieved Jun 29, 2015.


"https://kn.wikipedia.org/w/index.php?title=ಪೇಠಾ&oldid=1081078" ಇಂದ ಪಡೆಯಲ್ಪಟ್ಟಿದೆ