ವಿಷಯಕ್ಕೆ ಹೋಗು

ಪೋಬಿತೊರಾ ವನ್ಯಜೀವಿ ಅಭಯಾರಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಭಯಾರಣ್ಯದಲ್ಲಿ ಘೇಂಡಾಮೃಗ

ಪೋಬಿತೊರಾ ವನ್ಯಜೀವಿ ಅಭಯಾರಣ್ಯವು ಭಾರತದ ಅಸ್ಸಾಂ ರಾಜ್ಯದ ಮೋರಿಗಾಂವ್ ಜಿಲ್ಲೆಯಲ್ಲಿ ಬ್ರಹ್ಮಪುತ್ರ ನದಿಯ ದಕ್ಷಿಣ ತಟದ ಮೇಲಿರುವ ಒಂದು ವನ್ಯಜೀವಿ ಅಭಯಾರಣ್ಯ. ಇದನ್ನು ೧೯೮೭ರಲ್ಲಿ ಘೋಷಿಸಲಾಯಿತು ಮತ್ತು 38.85 ಚದರ ಕಿ.ಮಿ.ನಷ್ಟು ಪ್ರದೇಶವನ್ನು ಆವರಿಸಿದೆ. ಇದು ಘೇಂಡಾಮೃಗಕ್ಕೆ ಹುಲ್ಲುಗಾವಲು ಮತ್ತು ತೇವಜಮೀನಿನ ಆವಾಸಸ್ಥಾನವನ್ನು ಒದಗಿಸುತ್ತದೆ.[][]

ಹುಲ್ಲುಗಾವಲುಗಳು ಘೇಂಡಾಮೃಗಗಳಿಗೆ ಆವಾಸಸ್ಥಾನ ಮತ್ತು ಆಹಾರ ಸಂಪನ್ಮೂಲವನ್ನು ಒದಗಿಸುತ್ತದೆ. ಇಲ್ಲಿ ಅಸ್ಸಾಂನ ಎರಡನೇ ಅತಿ ಹೆಚ್ಚಿನ ಸಂಖ್ಯೆಯ ಘೇಂಡಾಮೃಗಗಳಿವೆ.[] ಅಭಯಾರಣ್ಯದಲ್ಲಿರುವ ಇತರ ಸಸ್ತನಿಗಳೆಂದರೆ ಹೊನ್ನುಬಣ್ಣದ ಗುಳ್ಳೆನರಿ, ಕಾಡುಹಂದಿ ಮತ್ತು ಕಾಡು ಎಮ್ಮೆ. ಬೊಗಳುವ ಜಿಂಕೆ, ಚಿರತೆ ಮತ್ತು ರೀಸಸ್ ಮಕಾಕ್ ಮುಖ್ಯವಾಗಿ ಗುಡ್ಡಗಾಡು ಭಾಗಗಳಲ್ಲಿ ವಾಸಿಸುತ್ತವೆ.[] ಇಲ್ಲಿ ಸುಮಾರು ೨೦೦೦ ಕ್ಕಿಂತ ಹೆಚ್ಚು ವಲಸೆ ಬಂದ ಹಕ್ಕಿಗಳು ಮತ್ತು ವಿವಿಧ ಸರೀಸೃಪಗಳಿವೆ.

ಪ್ರವಾಸಿ ಆಕರ್ಷಣೆಗಳು

[ಬದಲಾಯಿಸಿ]

ಪೋಬೊತೊರಾದಲ್ಲಿ ನೋಡಬೇಕಾದ ಸ್ಥಳಗಳೆಂದರೆ ಹಡೂಕ್ ನೇತಾಡುವ ಸೇತುವೆ ಮತ್ತು ಗರಂಗಾ ಬೀಲ್ ಕೊಳ. ವ್ಯವಸ್ಥಾಪಕ ತಂಡವು ನಡೆಸಿಕೊಡುವ ಆನೆ ಸವಾರಿಗಳು ಮತ್ತು ಜೀಪ್ ಸಫ಼ಾರಿಗಳು ಮುಖ್ಯವಾದ ಚಟುವಟಿಕೆಗಳಾಗಿವೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Konwar, P.; Saikia, M. K. and Saikia, P. K. (2009). "Abundance of food plant species and food habits of Rhinoceros unicorns Linn. in Pobitora Wildlife Sanctuary, Assam, India". Journal of Threatened Taxa. 1 (9): 457–460. doi:10.11609/JoTT.o1640.457-60.{{cite journal}}: CS1 maint: multiple names: authors list (link)
  2. Choudhury, A. U. (1985). "Distribution of Indian one-horned rhinoceros". Tigerpaper. 12 (2): 25–30.
  3. Choudhury, A. (2005). "Threats to the greater one-horned rhino and its habitat, Pabitora Wildlife Sanctuary, Assam, India" (PDF). Pachyderm. 38: 82–88.


ಹೊರಗಿನ ಕೊಂಡಿಗಳು

[ಬದಲಾಯಿಸಿ]