ವಿಷಯಕ್ಕೆ ಹೋಗು

ಪ್ರಿಯಂವದ(ಪ್ರಿಯಾ) ನಟರಾಜನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಿಯಾ ನಟರಾಜನ್
ಪ್ರಿಯಾ ನಟರಾಜನ್‌ರವರ ಛಾಯಾಚಿತ್ರ, ಸಾಂಟಾ ಬಾರ್ಬರಾದಲಿ(KITP) ತೆಗೆದುಕೊಂಡದ್ದು
ಕಾರ್ಯಕ್ಷೇತ್ರಕಾಸ್ಮಾಲಜಿ, ಸೈದ್ಧಾಂತಿಕ ಖಭೌತ
ಸಂಸ್ಥೆಗಳುಯೇಲ್ ವಿಶ್ವವಿದ್ಯಾಲಯ (ಪ್ರೊಫೆಸರ್)
ಅಭ್ಯಸಿಸಿದ ವಿದ್ಯಾಪೀಠಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಟ್ರಿನಿಟಿ ಕಾಲೇಜು, ಇನ್ಸ್ಟಿಟ್ಯೂಟ್ ಆಫ್ ಖಗೋಳವಿಜ್ಞಾನ


ಪ್ರಿಯಂವದ(ಪ್ರಿಯಾ) ನಟರಾಜನ್ರವರು, ಯೇಲ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗಗಳಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಿಯಾ ರವರು, ವಿಶೇಷವಾಗಿ ಡಾರ್ಕ್ ಮ್ಯಾಟರ್ ಮ್ಯಾಪಿಂಗ್ ಹಾಗು, ಡಾರ್ಕ್ ಎನರ್ಜಿ ಮ್ಯಾಪಿಂಗ್ಗಿಗೆ ನೀಡೀದ ಕೊಡುಗೆಗೆ ಪ್ರಸಿದ್ಧರಾಗಿದ್ದಾರೆ, ಅಲ್ಲದೆ, ಪ್ರತ್ಯೇಕವಾಗಿ, ಗುರುತ್ವಕ್ಕೆ ಸಂಬಂಧಿಸಿದ ಮಸೂರನ ಬಗ್ಗೆ ಕೆಲಸ ಮಾಡಿದಕ್ಕಾಗೆ, ಮತ್ತು ಬೃಹತ್ ಕಪ್ಪು ಕುಳಿಗಳ ಸಭೆ ಮತ್ತು ಸಂಚಯ ಇತಿಹಾಸದ ಬಗ್ಗೆ ಮಾದರಿಗಳ ಮೇಲೆ ಕೆಲಸ ಮಾಡಿದ್ದಕ್ಕಾಗೆ, ಹೆಸರುವಾಸಿಯಾಗಿದ್ದಾರೆ. ಅವರ ಈ ಕೆಲಸಗಳು, ಅವರಿಗೆ ಮಹಳಷ್ಟು ಹೆಸರು ತಂದು ಕೊಟ್ಟಿದೆ.

ಆರಂಭಿಕ ಜೀವನ

[ಬದಲಾಯಿಸಿ]

ಪ್ರಿಯಂವದ ನಟರಾಜನ್ ರವರು, ಭಾರತದ, ತಮಿಳುನಾಡಿನ, ಕೊಯಿಮತ್ತೂರಿನಲ್ಲಿ ಜನಿಸಿದರು. ಪ್ರಿಯಾರವರ ತಂದೆ ತಾಯಿ ವಿದ್ಯಾವಂತರಾಗಿದ್ದರು. ಅವರ ಪೋಷಕರಿಗಿದ್ದ ಮೂರು ಮಕ್ಕಳಲ್ಲಿ. ಪ್ರಿಯಾರವರು ಒಬ್ಬರು. ಮೂಲತಹ ತಮಿಳು ನಾಡಿನವರಾದರು ಸಹ, ಪ್ರಿಯಾರವರು, ಭಾರತದ ಇಂದಿನ ರಾಜಧಾನಿಯಾದ, ದೆಹಲಿಯಲ್ಲೇ ಬೆಳೆದರು. ಪ್ರಿಯಾರವರು, ತಮ್ಮ ವಿದ್ಯಾಭ್ಯಾಸವನ್ನು, ಆರ್.ಕೆ.ಪುರಂನಲ್ಲಿ ಇರುವ, ದೆಹಲಿ ಪಬ್ಲಿಕ್ ಶಾಲಿಯಲ್ಲಿ ಮಾಡಿದರು. ತಮ್ಮ ಬಾಲ್ಯವನ್ನು, ದೆಹಲಿಯಲ್ಲಿಯೇ ಕಳೆದರು.

ಶಿಕ್ಷಣ

[ಬದಲಾಯಿಸಿ]

ಪ್ರಿಯಾರವರು, ತಮ್ಮ ಪದವಿಪೂರ್ವ ಶಿಕ್ಷಣವನ್ನು, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪಡೆದರು. ಅಲ್ಲದೆ, ಪ್ರಿಯಾರವರು, ೧೯೯೧ರಿಂದ ೧೯೯೩ರ ವರೆಗು, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನ, ತಂತ್ರಜ್ಞಾನ ಮತ್ತು ಸೊಸೈಟಿ ಕಾರ್ಯಕ್ರಮದಲ್ಲಿ, ಹಾಗು, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ, ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿಯಂತಹ ಕಾರ್ಯಕ್ರಮಗಳಲ್ಲಿ, ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಿಯಾರವರು, ತಮ್ಮ ಪದವಿಧರ ಶಿಕ್ಷಣವನ್ನು, ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋನೊಮಿ, ಇಂಗ್ಲಂಡ್ನ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯಲ್ಲಿ, ಸೈದ್ಧಾಂತಿಕ ಖಭೌತದ ಮೇಲೆ ಕೆಲಸಮಾಡಿ, ತಮ ಪದವಿಯನ್ನು ಪಡೆದರು. ಅಲ್ಲದೆ, ಅಲ್ಲಿಯೇ ಟ್ರಿನಿಟಿ ಕಾಲೇಜಿನ ಸಧಸ್ಯರಾಗಿದ್ದರು, ಹಾಗು, ೧೯೯೭ರಿಂದ ೨೦೦೩ರವರೆಗೆ ಅಯೋಜಿಸಿದ್ದ, 'ಎ ರೀಸರ್ಚ್ ಫೆಲೋಶಿಪ್'ಎಂಬ ಶೀರ್ಷಿಕೆಗೆ ಆಯ್ಕೆಯಾಗಿದ್ದರು. ಯೇಲೆಗೆ ಬರುವ ಮುನ್ನ, ಪ್ರಿಯಾರವರು, ಕೆನೆಡಾದ, ಟೊರೊಂಟೊದಲ್ಲಿ ಇರುವ, ಕೆನಡಿಯೆನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನಲ್ಲಿ, ಸಹ ಸಂದರ್ಶಕ ಪೋಸ್ಟ್‌ ಡಕ್ಟೋರಲ್ ಆಗಿ, ಕೆಲೆಸ ನಿರ್ವಹಿಸುತ್ತಿದ್ದರು.

ಸಂಶೋಧನಾ ಕ್ಷೇತ್ರಗಳು

[ಬದಲಾಯಿಸಿ]

ನಟರಾಜನ್ ಕೆಳಗಿನ ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸ ಮಾಡಿದ್ದಾರೆ:

  • ಗುರುತ್ವ ಮಸೂರನ- ಪ್ರಬಲ ಮತ್ತು ದುರ್ಬಲ ಲೆನ್ಸಿಂಗ್ ವಿಶ್ಲೇಷಣೆಯ ಕೌಶಲಗಳ ತುಲನೆ; ಸ್ಥಳೀಯ ದುರ್ಬಲ ಬರಿಯ ಪರಿಣಾಮಳ ಮೂಲಕ ಸಮೂಹಗಳಲ್ಲಿ ಇರುವ, ಗೆಲಕ್ಸಿಯ ವಿಕಾಸವನ್ನು, ಮಸೂರನ ಬಳಕೆಯಿಂದ ತನಿಕೆ ಮಾಡುವುದನ್ನು; ದೊಡ್ಡ ಪ್ರಮಾಣದ ರಚನೆಯಿಂದ ದುರ್ಬಲ ಮಸೂರನ; ಲೆನ್ಸಿಂಗ್ ಬಳಕೆಯಿಂದ ಡಾರ್ಕ್ ಮ್ಯಾಟರ್ ಹಾಲೋಸ್ ಆಕಾರಗಳ ತನಿಖೆ; ಮತ್ತು ಗೆಲಕ್ಸಿಗಳ ಆಕಾರಗಳಲ್ಲಿ ಸ್ವಾಭಾವಿಕ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು.[]
  • ಗೆಲಕ್ಸಿಗಳ ಸಮೂಹದ ತನಿಖೆಯನ್ನು- ಮಸೂರನ ಬಳಸಿ, ಸಂಯೋಗದೊಂದಿಗೆ ಎಕ್ಸರೆ ಮತ್ತು ಸನೈವ್-ಜ಼ೆಲ್‌ಡೊವಿಚ್ ಡೇಟಾ ಸಮೂಹದಲ್ಲಿರುವ ಗೆಲಕ್ಸಿಯ ಡೈನಾಮಿಕ್ಸ್ ಅಧ್ಯಯನ; ನಕ್ಷತ್ರ ಕಕ್ಷೆಗಳ ವೇಗದ ಅವಲಂಬನೆ; ಕ್ಲಸ್ಟರ್ ಬೆಳವಣಿಗೆ ಮತ್ತು ಫೇಸ್ ಸ್ಪೇಸ್‌ನ ವಿಕಾಸ ಮತ್ತು ವಿಶ್ರಾಂತಿ ಪ್ರಕ್ರಿಯೆಯ ಭೌತಶಾಸ್ತ್ರದ ನಿರೂಪಣೆ.
  • ಸಂಚಯ ಭೌತಶಾಸ್ತ್ರ- ಡಿಸ್ಕ್ಗಳ ಸ್ಪಿನ್ ಮತ್ತು ಕೇಂದ್ರ ಕಪ್ಪುಕುಳಿಗಳ ಜೋಡಣೆಯ ಸಮಸ್ಯೆಗಳು; ವಾರ್ಪಡ್ ಸಂಚಯ ಡಿಸ್ಕ್ಗಳ ವಿಕಾಸ; ಬ್ಲಾಂಡ್ಫೋರ್ಡ್-ಜ಼್ನಜೆಕ್ ಯಾಂತ್ರಿಕತೆ; ಮತ್ತು ಬೃಹತ್ ಕಪ್ಪು ಕುಳಿಗಳ ಸಂಚಯ ಇತಿಹಾಸ; ಈ ಎಲ್ಲದರ ಬಗ್ಗೆ ಬಹಳಷ್ಟು ಸಂಶೋಧಿಸಿದ್ದಾರೆ.
  • ಗೆಲಕ್ಸಿಗಳ ರಚನೆಯಲ್ಲಿ ತೊಂದರೆ ಮತ್ತು ಕ್ವಾಸಾರ್‌ಗಳನ್ನು ಉದ್ದೀಪನಗೊಳಿಸುವುದು- ಎತ್ತರದ ಕೆಂಪು ಸ್ಥಳಾಂತರದ ಗೆಲಕ್ಸಿಗಳ ನಡುವಿನ ಸಂಪರ್ಕ, ಸಕ್ರಿಯ ಗ್ಯಾಲಕ್ಸಿಯ ಬೀಜಕಣಗಳು ಮತ್ತು ಅವುಗಳ ಕೇಂದ್ರೀಯ ಕಪ್ಪು ಕುಳಿಗಳ ಬಗ್ಗೆ ಅವರ ಸಂಶೋಧನೆ; ಕಪ್ಪು ಕುಳಿ ದ್ರವ್ಯರಾಶಿಯ ಕಾರ್ಯರಚನೆಯ ಬಗಿನ ಸಂಶೋಧನೆ; ಕ್ವೇಸಾರ್‌ಗಳ ಪಾತ್ರದ ಬಗ್ಗೆ ನೀಡಿದ ಮಾಹಿತಿ ಮತ್ತು ಗೆಲಕ್ಸಿಗಳ ರಚನೆಯಲ್ಲಿರುವ ತಮ್ಮ ಹೊರಹರಿವು; ಕ್ವೇಸಾರ್‌ಗಳಿಂದಾದ ಸನೈವ್-ಜ಼ೆಲ್‌ಡೊವಿಚ್ ಚಲನಶಾಸ್ತ್ರದ ಪರಿಣಾಮದ ಬಗ್ಗಿನ ಅವರ ಮಾತು; ಗೆಲಕ್ಸಿಗಳ ರಚನೆಯಲ್ಲಿ ಭೌತಶಾಸ್ತ್ರದ ಪ್ರಕ್ರಿಯೆಗಳು; ಎಕ್ಸರೆ ಹಿನ್ನೆಲೆಗೆ ನಾಕ್ಷತ್ರದ ಕಡೆಯಿಂದ ಬಂದ ಕೊಡುಗೆ ಮತ್ತು ಕೆಂಪು ಸ್ಥಳಾಂತರದ ಸಹಾಯದಿಂದ ತಟಸ್ಥ ಅನಿಲದ ವಿಕಸನದ ಬಗ್ಗಿನ ಮಾಹಿತಿ. ಪ್ರಿಯಾರವರು ಈ ಮೇಲಿನ ಎಲ್ಲಾ ವಿಷಯದ ಬಗ್ಗೆ ಅವರು ಬಹಳಷ್ಟು ಮಾಹಿತಿ ನೀಡಿದ್ದಾರೆ[].
  • ಬೈನರಿ ಕಪ್ಪುಕುಳಿಗಳ ಬಗ್ಗಿನ ಮಾತು- ವಿಲೀನ ಮತ್ತು ಅನಿಲ ಭರಿತ ನಕ್ಷತ್ರಿಕ ಕೋರ್ಗಳ ಮೂಲಕವಾದ ಬೃಹತ್ ಕಪ್ಪು ಕುಳಿ ಬೈನರಿಗಳ ವಿಕಾಸ; ವಿದ್ಯುತ್ಕಾಂತೀಯ ಮತ್ತು ಗುರುತ್ವಕ್ಕೆ ಸಂಬಂಧಿಸಿದ ತರಂಗದ ಸಹಿಗಳು ಈ ವ್ಯವಸ್ಥೆಗಳಿಂದ ಸಂಗ್ರಹಿಸಿದರು; ಹೆಚ್ಚಿನ ಕೆಂಪು ಸ್ಥಳಾಂತರದಲ್ಲಿನ ಕಾಯಗಳ ತೊಡಕಿಗೆಯ ಬಗಿನ ಮಾತು.[]
  • ಗಾಮಾ ಕಿರಣಗಳ ಸ್ಫೋಟಗಳ ಬಗ್ಗಿನ ಮಹಿತಿ- ಜಾಗತಿಕವಾಗಿ ಗಾಮಾ ಕಿರಣದ ಸಿಡಿ ದರಗಳನ್ನು, ಸ್ಟಾರ್ ರಚನೆಯ ದರಕ್ಕೆ ಹೋಲಿಸಿದರೆ, ಎರಡು ಸಹ ಸರಾಸರಿಯಾಗಿವೆ. ಪ್ರಿಯಾರವರು, ಈ ಎರಡು ರಚನೆಯ ನಡುವಿನ ಸಂಬಂಧವನ್ನು ಈ ಕೆಲಸದಲ್ಲಿ ತೋರಿಸಿದ್ದಾರೆ, ರೂಪವಿಜ್ಞಾನ ಮತ್ತು ಆಪ್ಟಿಕಲ್‌ನಲ್ಲಿ ಇರುವ ಗಾಮಾ ಕಿರಣದ ಕಿಡಿಯ ಹೋಸ್ಟ್ ಗೆಲಕ್ಸಿಗಳ ಗುಣಗಳನ್ನು, ಮತ್ತು ಉಪ ಮಿಮೀ ತರಂಗದ ಬ್ಯಾಂಡ್‌ಳ ಬಗ್ಗೆ ಹಾಗು, ಎಸ್.ಎನ್- ಜಿ.ಆರ್.ಬಿ. ಸಂಪರ್ಕ, ಇವೆಲ್ಲದರ ಬಗ್ಗೆ, ಪ್ರಿಯಾರವರು ಅಪಾರವಗಿ ಕೆಲಸ ಮಾಡಿದ್ದಾರೆ.

ಪ್ರಿಯಾರವರು, ಈ ಮೇಲಿನ ಎಲ್ಲಾ ಕ್ಷೇತ್ರದಲ್ಲಿ, ಬಹಳಷ್ಟು ಆಸಕ್ತಿಯಿಂದ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿ, ಆಸ್ಟ್ರೋಫಿಸಿಕ್ಸ್‌ನ ಕ್ಷೇತ್ರಕ್ಕೆ, ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.

ಗೌರವಗಳು ಮತ್ತು ಪ್ರಶಸ್ತಿಗಳು

[ಬದಲಾಯಿಸಿ]
  • ಪ್ರೀಯಂವದ ನಟರಾಜನ್‌ರವರಿಗೆ, ೨೦೦೮ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ರಾಡ್ಕ್ಲಿಫ್ ಇನ್ಸ್ಟಿಟ್ಯೂಟ್‌ನಿಂದ, ಎಮೆಲಿನ್ ಕೋನ್‌ಲಾಂಡ್‌ ಬಿಗೆಲೊ ಎಂಬ ಫೆಲೋಶಿಪ್ ಅನ್ನು ನೀಡಿ ಗೌರವಿಸಲಾಯಿತು.
  • ೨೦೦೯ರಲ್ಲಿ, ಪ್ರಿಯಾರವರಿಗೆ,[] ಅನ್ನು ನೀಡಿ ಗೌರವಿಸಲಾಯಿತು.
  • ೨೦೦೯ರಲ್ಲಿ, ಭಾರತದ ಅಬ್ರಾಡ್ ಫೌಂಡೇಶನ್‌ನ, "ಫೇಸ್ ಆಫ್ ದಿ ಫ್ಯೂಚರ್" ಎಂಬ ಪ್ರಶಸ್ತಿಯನ್ನು ಸ್ವೀಕರಿಸುವವರಲ್ಲಿ, ಪ್ರಿಯಾ ನಟರಾಜನ್‌ರವರು ಕೂಡ ಒಬ್ಬರಾಗಿದ್ದರು, ಮತ್ತು 'ಗ್ಲೂಬಲ್ ಆರ್ಗೊನೈಸೇಜ಼ನ್ ಫಾರ್ ದಿ ಪೀಪಲ್ ಆಫ್ ಇಂಡಿಯನ್ ಆರಿಜನ್(ಜಿ.ಒ.ಪಿ.ಇ.ಆ) ಎಂಬ ಸಂಸ್ಥೆಯಿಂದ, ಶೈಕ್ಷಣಿಕ ಸಾಧನೆಗಾಗಿ ಅವರು ನೀಡುವ ಪ್ರಶಸ್ತಿಯನ್ನು ಸ್ವೀಕರಿಸುವವರಲ್ಲಿ, ಇವರೂ ಸಹ ಒಬ್ಬರಾಗಿದ್ದರು.
  • ಪ್ರಿಯಾರವರು, ೨೦೦೯ರಲ್ಲಿ ರಾಯಲ್ ಆಸ್ಟ್ರೋನೋಮಿಕಲ್ ಸೊಸೈಟಿಯ ಜೊತೆಗಾರರಾಗಿ ಆಯ್ಕೆಯಾದರು.
  • ೨೦೧೦ರಲ್ಲಿ, ಅಮೇರಿಕನ್ ಫಿಸಿಕಲ್ ಸೊಸೈಟಿ, ಮತ್ತು ಪರಿಶೋಧಕರು ಕ್ಲಬ್‌ನ ಜೊತೆಗಾರರಾಗಿಯೂ, ಆಯ್ಕೆಯಾಗಿದ್ದರು.
  • ಪ್ರಿಯಾರವರಿಗೆ, ೨೦೧೦ರಲ್ಲಿ ಜೆ.ಐ.ಎಲ್.ಎ.(ಪ್ರಯೋಗಾಲಯ ಆಸ್ಟ್ರೋಫಿಸಿಕ್ಸ್ ಜಂಟಿ ಇನ್ಸ್ಟಿಟ್ಯೂಟ್)(ಜಾಂಟ್ ಇನ್‌ಸ್ಟಿಟ್ಯೂಟ್ ಫಾರ್ ಲೆಬೋರೆಟೊರಿ ಆಸ್ಟ್ರೋಫಿಸಿಕ್ಸ್) ಎಂಬ ಫೆಲೋಶಿಪ್‌ನನ್ನು ನೀಡಿ ಗೌರವಿಸಲಾಗಿತ್ತು.
  • ಪ್ರಿಯಾರವರಿಗೆ, ಜನವರಿ, ೨೦೧೧ರಲ್ಲಿ, ವಿಜ್ಞಾನದಲ್ಲಿ ಸಾಧನೆಗಾಗಿ, ಭಾರತದ, ನವದಹಲಿಯಲ್ಲಿ, ಭಾರತದ ಸಾಮ್ರಾಜ್ಯದ ಎನ್.ಆರ್.ಐ. ಪ್ರಶಸ್ತಿಯನ್ನು ನೀಡಿ ಗೌರವಿಸ್ಲಾಗಿತ್ತು.[]
  • ೨೦೧೧ರಿಂದ ೨೦೧೨ರ ವರೆಗೆ, ಬಾಲ್ಟಿಮೋರ್‌ನ 'ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್ಸ್ಟಿಟ್ಯೂಟ್'ನಲ್ಲಿ, ಪ್ರಿಯಾರವರು, ಕ್ಯಾರೋಲಿನ್ ಹರ್ಸ್ಚೆಲ್‌ನಲ್ಲಿ ಡಿಸ್ಟಿಂಗ್ವಿಶ್ಡ್ ಭೇಟಿ ಅಧಿಕಾರಿಯಾಗಿ ಕೆಲಸಮಾಡಿದರು.
  • ಯೇಲ್ ಮತ್ತು ಹಾರ್ವರ್ಡ್‌ನಲ್ಲಿರುವ ತನ್ನ ಪ್ರಸ್ತುತ ನೇಮಕಾತಿಗಳ ಜೊತೆಗೆ, ಪ್ರಿಯಾರವರು, ಸೋಫಿ ಮತ್ತು ಟಿಚೊ ಎಂಬ ಪ್ರಾಧ್ಯಾಪಕತ್ವವನ್ನು ಹೊಂದಿರುವುದರ ಜೊತೆಗೆ, ಡಾರ್ಕ್ ಕಾಸ್ಮಾಲಜಿ ಸೆಂಟರ್‌ನಲ್ಲಿ ಪ್ರಾಧ್ಯಾಪಕತ್ವವನ್ನು ಹೊಂದಿರುವರು, ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ, ನೈಲ್ಸ್ ಬಾಹ್ರ್ ಸಂಸ್ಥೆಯಲ್ಲಿಯೂ ಪ್ರಾಧ್ಯಾಪಕತ್ವವನ್ನು ಹೊಂದಿರುವುದರ ಜೊತೆಗೆ, ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಜೀವನದ ಗೌರವವಾನ್ವಿತ ಪ್ರಾಧ್ಯಾಪಕರಾಗಿ ಆಯ್ಕೆಯಾದರು.
  • ಪ್ರಿಯಾರವರು, ೨೦೧೧ರಿಂದ ೨೦೧೩ರ ವರೆಗೂ, ಯಾಲೆನ ಮಹಿಳಾ ಫ್ಯಾಕಲ್ಟಿ ವೇದಿಕೆಯ ಅಧ್ಯಾಕ್ಷರಾಗಿದ್ದರು.

ಪ್ರಿಯಾರವರು, 'ನೋವಾ ಸೈನ್ಸ್‌ನೌ'ಎಂಬ ವೈಜ್ಞಾನಿಕ ಸಲಹಾ ಮಂಡಳಿಯಲ್ಲಿ ಭಾಗಿಯಾಗಿದ್ದಾರೆ. ಪ್ರಿಯಾ ಸಕ್ರಿಯವಾಗಿ ಸಾರ್ವಜನಿಕರಿಗೆ ಸಂಖ್ಯಾತ್ಮಕ ಮತ್ತು ವೈಜ್ಞಾನಿಕ ಸಾಕ್ಷರತೆ ಹೆಚ್ಚಿಸಲು ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಿಯಂವದ ನಟರಾಜನ್‌ರವರ ಈ ಎಲ್ಲಾ ಉತ್ತಮ ಕೆಲಸಗಳಿಂದ, ಹಾಗು ಆಸ್ಟ್ರೋಫಿಸಿಕ್ಸ್‌ಗೆ ಅವರು ನೀಡಿರುವ ಕೊಡುಗೆಯಿಂದ, ಅವರು ಭಹಳಷ್ಟು ಹೆಸರುವಾಸಿಯಾದರು. ಅಲ್ಲದೇ, ಭಾರತಿಯರಾಗೆ, ಭಾರತದ ಹೆಸರನ್ನು ದೇಶ ವಿದೇಶಕ್ಕೆ, ಸಾರಿದರು. ಎಲ್ಲಾ ಭಾರತೀಯರಿಗು, ಒಬ್ಬ ಆದರ್ಶ ವ್ಯಕ್ತಿಯಾದರು.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಮಸೂರನ ಬಗ್ಗಿನ ಮಾಹಿತಿ
  2. http://arxiv.org/abs/1111.5573
  3. ಕಪ್ಪುಪುಳಿಗಳ ಬಗ್ಗಿನ ಮಾಹಿತಿ
  4. ಗುಡೆನ್ಹೈಮ್ ಎಂಬ ಫೆಲೋಶಿಪ್‌ನನ್ನು ಪಡೆದ ಅಭ್ಯರ್ಥಿಗಳ ಹೆಸರುಗಲು
  5. "ಎನ್.ಆರ್.ಐ. ಪ್ರಶಸ್ತಿಯನ್ನು ಪಡೆದ ಅಭ್ಯರ್ಥಿಗಳು". Archived from the original on 2015-01-28. Retrieved 2015-01-28.