ಪ್ರೇಮ್ ಕುಮಾರ್ (ನಟ)
ಪ್ರೇಮ್ ಕುಮಾರ್ | |
---|---|
Born | ೧೮ ಏಪ್ರಿಲ್ ೧೯೭೬ |
Other names | ಲವ್ಲಿ ಸ್ಟಾರ್ |
Citizenship | ಭಾರತೀಯ |
Occupation | ನಟ |
Spouse | ಜ್ಯೋತಿ |
Children | ೨ |
ಪ್ರೇಮ್ ಕುಮಾರ್ (ಜನನ ೧೮ ಏಪ್ರಿಲ್ ೧೯೭೬) ಇವರು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟ ಮತ್ತು ನಿರ್ಮಾಪಕ. ಪ್ರಾಣ(೨೦೦೪) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.[೧] ನೆನಪಿರಲಿ (೨೦೦೫) ಚಿತ್ರದ ಮೂಲಕ ಅವರು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಅಂದಿನಿಂದ, ಪ್ರೇಮ್‌ಗೆ ರೊಮ್ಯಾಂಟಿಕ್ ಥೀಮ್‌ನ ಚಿತ್ರಗಳನ್ನು ಹೆಚ್ಚಾಗಿ ನೀಡಲಾಯಿತು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರು ಲವ್ಲಿ ಸ್ಟಾರ್ ಎಂಬ ಬಿರುದನ್ನು ಗಳಿಸಿದರು.[೨]
ಪ್ರೇಮ್ ಪ್ರಮುಖ ಚಲನಚಿತ್ರದಲ್ಲಿ ನಟಿಸಿದಾರೆ. ಜೊತೆ ಜೊತೆಯಲಿ (೨೦೦೬), ಪಲ್ಲಕ್ಕಿ (೨೦೦೭), ಗುಣವಂತ (೨೦೦೭), ಸವಿ ಸವಿ ನೆನಪು (೨೦೧೦) , ಚಾರ್ಮಿನಾರ್ (೨೦೧೩) ಇದು ಪ್ರೇಮ್ ಅವರ ಗಮನಾರ್ಹ ಚಿತ್ರಗಳು. ಚೌಕ (೨೦೧೭) ಮತ್ತು ಪ್ರೇಮಂ ಪೂಜ್ಯಂ (೨೦೨೧) ಇದು ನಟನಾಗಿ ಅವರ ೨೫ನೇ ಚಿತ್ರವಾಗಿದೆ.[೩]
ವೃತ್ತಿ
[ಬದಲಾಯಿಸಿ]ಪ್ರೇಮ್ ೨೦೦೪ರಲ್ಲಿ ಪ್ರಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು[೪] ೨೦೦೫ರಲ್ಲಿ ನೆನಪಿರಲಿ ಚಿತ್ರದ ಮೂಲಕ ಅವರು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.[೫] ೨೦೦೬ರಲ್ಲಿ, ಪ್ರೇಮ್ ನಟಿ ರಮ್ಯಾ ಜೊತೆ ಜೊತೆ ಜೊತೆಯಲಿ ಚಿತ್ರದಲ್ಲಿ ನಡಿಸಿದರು.[೬] ಅವರ ಪಲ್ಲಕ್ಕಿ ಚಲನಚಿತ್ರವು ೧೦೦ ದಿನಗಳ ಕಾಲ ಉತ್ತಮ ಪ್ರದರ್ಶನ ನೀಡಿತು.[೭] ೨೦೦೮ ರಲ್ಲಿ, ಹೊಂಗನಸು ಚಿತ್ರಕ್ಕಾಗಿ ಪ್ರೇಮ್ ಮತ್ತೊಮ್ಮೆ ರತ್ನಜನ ಜೊತೆ ಸೇರಿಕೊಂಡರು.[೮]
ತಮಿಳಿನ ಆಹಾ ಚಿತ್ರದ ರಿಮೇಕ್ ಆಗಿರುವ ಘೌತ್ತಂ ಚಿತ್ರದಲ್ಲಿ ಪ್ರೇಮ್ ೨೦೦೯ರಂದು ನಟಿಸಿದ್ದರು.[೯] ೨೦೧೦ರಲ್ಲಿ, ಅವರು ಜೊತೆಗಾರ ಚಿತ್ರಕ್ಕಾಗಿ ನಾಯಕಿ ರಮ್ಯಾ ಜೊತೆ ಸೇರಿಕೊಂಡರು.[೧೦] ಇವರು ಶಿವರಾಜಕುಮಾರ್ ಅವರ ಪ್ರವಾಸದ ಸಂಭ್ರಮದ ಚೆಲುವೆಯೇ ನಿನ್ನ ನೋಡಲು ಮತ್ತು ಅನಂತ್ ನಾಗ್ ಮತ್ತು ಸುಹಾಸಿನಿ ಅವರು ನಟಿಸಿರುವ ಎರಡನೆ ಮದುವೆ ಚಲನಚಿತ್ರದಲ್ಲಿ ಅತಿಥಿ ಪಾತ್ರವನ್ನು ವಹಿಸಿದರು.[೧೧]
೨೦೧೩ರಲ್ಲಿ, ಇವರು ನಿರ್ದೇಶಕಿ ರೂಪ ಅಯ್ಯರ್ ಅವರ ಚಂದ್ರ ಚಿತ್ರದಲ್ಲಿ ನಟಿಸಿದರು.[೧೨] ಚಾರ್ಮಿನಾರ್ ಚಿತ್ರದ ಮೂಲಕ ಇವರು ಎರಡನೇ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.[೧೩][೧೪] ಶತ್ರು ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರು.[೧೫] ೨೦೧೭ರಲ್ಲಿ, ದ್ವಾರಕೀಶ್ ಅವರ ೫೦ನೇ ನಿರ್ಮಾಣದ ಚೌಕಾ ಚಲನಚಿತ್ರದಲ್ಲಿ ಪ್ರೇಮ್ ಜೈಲು ಕೈದಿಗಳಲ್ಲಿ ಒಬ್ಬರಾಗಿ ನಟಿಸಿದರು.[೧೬]
ದೂರದರ್ಶನ
[ಬದಲಾಯಿಸಿ]ಚಲನಚಿತ್ರಗಳು
[ಬದಲಾಯಿಸಿ]ಪ್ರೇಮ್ ಕುಮಾರ್‌ರವರ ನಟಿಸಿರುವ ಚಲನಚಿತ್ರಗಳು
ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
---|---|---|---|
೨೦೦೪ | ಪ್ರಾಣ | ಜೀವ | |
೨೦೦೫ | ನೆನಪಿರಲಿ | ಕಿಶೋರ್ | ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ |
೨೦೦೬ | ಜೊತೆ ಜೊತೆಯಲಿ | ಪ್ರೇಮ್ | |
೨೦೦೭ | ಪಲ್ಲಕ್ಕಿ | ಲಕ್ಷ್ಮೀಕಾಂತ್ | ನಿರ್ಮಾಪಕ |
ಗುಣವಂತ | ಗುಣಶೇಖರ್ | ||
೨೦೦೮ | ಹೊಂಗನಸು | ಸಾಗರ್ | |
೨೦೦೮ | ಘೌತ್ತಮ | ಗೌತಮ್ | |
೨೦೧೦ | ಸವಿ ಸವಿ ನೆನಪು | ಪ್ರೇಮ್, ರಾಜ್ | ದ್ವಿಪಾತ್ರ |
ಜೊತೆಗಾರ | ವಿಶ್ವಾಸ | ||
ಚೆಲುವೆಯೇ ನಿನ್ನ ನೋಡಲು | ಪ್ರೇಮ್ | ಅತಿಥಿ ಪಾತ್ರ | |
೨೦೧೧ | ಎರಡನೆ ಮದುವೆ | ವಿವೇಕ | ಅತಿಥಿ ಪಾತ್ರ |
ಐ ಆಮ್ ಸಾರಿ ಮಾತೆ ಬನ್ನಿ ಪ್ರೀತ್ಸೋನಾ | ಶ್ಯಾಮ್ | ||
ಧನ್ ಧನಾ ಧನ್ | ಪ್ರೇಮ್ | ||
೨೦೧೩ | ಚಾರ್ಮಿನಾರ್ | ಮೋಹನ | ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ |
ಚಂದ್ರ | ಚಂದ್ರಹಾಸ | ದ್ವಿಭಾಷಾ ಚಲನಚಿತ್ರ (ಕನ್ನಡ, ತಮಿಳು) | |
ಶತ್ರು | ವಿಜಯ್ ಸೂರ್ಯ | ||
೨೦೧೩ | ಅತಿ ಅಪರೂಪ | ಭಾರತ | |
ಅಧ್ಯಕ್ಷ | ಅವನೇ | ಒಂದು ಹಾಡಿನಲ್ಲಿ ಅತಿಥಿ ಪಾತ್ರ | |
ಫೇರ್ & ಲವ್ಲಿ | ಮನೋಜ್ ("ಮನು") | ||
೨೦೧೩ | ಪುರುಷ | ವರುಣ | |
ರಿಂಗ್ ರೋಡ್ | ಅವನೇ | ಒಂದು ಹಾಡಿನಲ್ಲಿ ಅತಿಥಿ ಪಾತ್ರ | |
೨೦೧೬ | ಮಸ್ತ್ ಮೊಹಬ್ಬತ್ | ಶ್ರೀ | |
೨೦೧೭ | ಚೌಕಾ | ಹಕ್ಕಿ ಗೋಪಾಲ | |
೨೦೧೮ | ದಳಪತಿ | ರಾಮ್ | |
ಲೈಫ್ ಜೊತೆ ಒಂದ್ ಸೆಲ್ಫಿ | ನಕುಲ್ | ||
೨೦೧೯ | ಯಜಮಾನ | ಸ್ವತಃ | "ಶಿವ ನಂದಿ" ಹಾಡಿನಲ್ಲಿ ವಿಶೇಷ ಪಾತ್ರ |
೨೦೨೧ | ಪ್ರೇಮಂ ಪೂಜ್ಯಂ | ಶ್ರೀಹರಿ | |
೨೦೨೪ | ಅಪ್ಪಾ ಐ ಲವ್ ಯು | ರಾಹುಲ್ |
ರಿಯಾಲಿಟಿ ಶೋ
[ಬದಲಾಯಿಸಿ]ವರ್ಷ | ಹೆಸರು | ಪಾತ್ರ | ವಾಹಿನಿ | |
---|---|---|---|---|
೨೦೨೨ | ಜೋಡಿ ನಂ. (ಸೀಸನ್ ೧) | ತೀರ್ಪುಗಾರ | ಝೀ ಕನ್ನಡ | |
೨೦೨೩ | ವೀಕೆಂಡ್ ವಿಥ್ ರಮೇಶ್ (ಸೀಸನ್ ೫) | ಅತಿಥಿ | ಝೀ ಕನ್ನಡ | |
೨೦೨೩ | ಜೋಡಿ ನಂ.೧ (ಸೀಸನ್ ೨) | ತೀರ್ಪುಗಾರ | ಝೀ ಕನ್ನಡ |
ಉಲ್ಲೇಖಗಳು
[ಬದಲಾಯಿಸಿ]- ↑ "Many lessons learned". Bangalore Mirror.com. 6 September 2010.
- ↑ Suresh, Sunayana. "20 years, 25 films and so much to be grateful for, says Lovely Star Prem". The Times of India.
- ↑ "Prem's 25th film culminates in a journey called Premam Poojyam". Times of India. 9 November 2021.
- ↑ https://web.archive.org/web/20041225145537/http://sify.com/movies/kannada/review.php?id=13568850&ctid=5&cid=2427
- ↑ "Nenapirali: Fresh stuff". Rediff.com. 2 December 2005. Retrieved 30 September 2014.
- ↑ "Jothe Jotheyali is just silly". rediff.com. 2006-09-25. Retrieved 2012-11-20.
- ↑ "Movie review". Archived from the original on 2016-03-04. Retrieved 2024-05-18.
- ↑ "Review: Honganasu". www.rediff.com.
- ↑ "Gautham". Sify.com. 5 April 2009. Archived from the original on 29 ಆಗಸ್ಟ್ 2022. Retrieved 18 ಮೇ 2024.
- ↑ "Jothegaara". The New Indian Express. 22 September 2010.
- ↑ "Prem Kumar - GGpedia". Archived from the original on 13 December 2013. Retrieved 1 January 2013.
- ↑ "Roopa and Prem at loggerheads?". The Times of India. 27 June 2013. Archived from the original on 27 June 2013.
- ↑ "'Charminar' Review: This Kannada film has a huge emotional appeal- Kannada Reviews- South Cinema-IBNLive". IBN Live. 17 February 2013. Archived from the original on 17 February 2013.
- ↑ "Mahesh Babu Bags Best Actor At Filmfare Awards Southern Edition". NDTV.com.
- ↑ "Movie Review : Shatru". Sify. 3 September 2013. Archived from the original on 3 September 2013.
- ↑ "Chowka movie review: Packaged 'diluted' drama". deccanchronicle.com. Archived from the original on 2 February 2022. Retrieved 2 February 2022.